ಸಾಂಸ್ಥಿಕ ರಚನೆ ಯು ಮುಖ್ಯವಾಗಿ ಒಂದು ಶ್ರೇಣಿಕೃತ ವ್ಯವಸ್ಥೆಯ ಪರಿಕಲ್ಪನೆಯಾಗಿದ್ದು, ಇದರಲ್ಲಿ ಅಧೀನ ಭಾಗಗಳು ಸಾಮಾನ್ಯ ಗುರಿಯೊಂದನ್ನು ಸಾಧಿಸಲು ಜತೆಗೂಡಿ ಕೆಲಸ ಮಾಡುತ್ತವೆ.

ಸಂಸ್ಥೆಗಳು ವಿವಿಧ ಪರಸ್ಪರ ಸಂಪರ್ಕದ ಗುಂಪಿನ ಭಾಗಗಳಾಗಿವೆ. ಸಂಸ್ಥೆಯೊಂದನ್ನು ಅದರ ಗುರಿಗಳು ಮತ್ತು ಪರಿಸ್ಥಿತಿಯನ್ನು ಅವಲಂಬಿಸಿ ವಿವಿಧ ವಿಧಾನಗಳು ಮತ್ತು ಶೈಲಿಗಳಲ್ಲಿ ರಚಿಸಬಹುದು.[clarification needed] ಸಂಸ್ಥೆಯ ರಚನೆಯು ಅದು ಕಾರ್ಯಮಾಡುವ ಮತ್ತು ನಿರ್ವಹಿಸುವ ವಿಧಗಳನ್ನು ನಿರ್ಧರಿಸುತ್ತದೆ.

ಸಾಂಸ್ಥಿಕ ವ್ಯವಸ್ಥೆಯು, ವಿವಿಧ ಕಾರ್ಯಚಟುವಟಿಕೆಗಳ ಮತ್ತು ಕಾರ್ಯವಿಧಾನಗಳ ಜವಾಬ್ದಾರಿಗಳನ್ನು ಶಾಖೆ, ಇಲಾಖೆ, ವರ್ಕ್‌ಗ್ರೂಪ್‌ (ಕೆಲಸ ನಿರ್ವಹಿಸುವ ತಂಡ) ಮತ್ತು ನೌಕರ ಎಂದು ವಿಂಗಡಿಸಿರಬಹುದಾದ ಬೇರೆಬೇರೆ ಭಾಗಗಳಿಗೆ ಹಂಚಲು ಅವಕಾಶ ಮಾಡಿಕೊಡುತ್ತದೆ. ಸಾಂಸ್ಥಿಕ ರಚನೆಯ ನೌಕರರನ್ನು ಸಾಮಾನ್ಯವಾಗಿ ಸಮಯ-ಸೀಮಿತ ಕೆಲಸದ ಒಪ್ಪಂದಗಳು ಅಥವಾ ಕೆಲಸದ ಆದೇಶಗಳಡಿಯಲ್ಲಿ ಅಥವಾ ಶಾಶ್ವತ ಉದ್ಯೋಗ ಕರಾರು ಅಥವಾ ಯೋಜನೆ ಆದೇಶಗಳಡಿಯಲ್ಲಿ ನೇಮಕ ಮಾಡಲಾಗುತ್ತದೆ.

ಕಾರ್ಯಕಾರಿ ಸಂಸ್ಥೆಗಳು ಮತ್ತು ಅನೌಪಚಾರಿಕ ಸಂಸ್ಥೆಗಳು

ಬದಲಾಯಿಸಿ

ಸಾಂಸ್ಥಿಕ ರಚನೆಯು ಕಾರ್ಯಾತ್ಮಕ ಕ್ರಿಯೆಯಲ್ಲಿ ಹೊರಹೊಮ್ಮುವ ವಾಸ್ತವಾಂಶಗಳಿಗೆ ಸರಿಹೊಂದದಿರಬಹುದು. ಅಂತಹ ವ್ಯತ್ಯಾಸವು ಅಭಿವೃದ್ಧಿ ಹೊಂದುವಾಗ ಸಾಧನೆಯನ್ನು ಕುಂಠಿತಗೊಳಿಸುತ್ತದೆ. ಉದಾ. ತಪ್ಪಾದ ಸಾಂಸ್ಥಿಕ ರಚನೆಯು ಸಹಕಾರಕ್ಕೆ ಅಡ್ಡಿಯಾಗಬಹುದು ಹಾಗೂ ಆ ಮೂಲಕ ಆದೇಶಗಳನ್ನು ಅಂತಿಮ ದಿನಾಂಕದೊಳಗೆ ಮತ್ತು ಸಂಪನ್ಮೂಲಗಳ ಮತ್ತು ಬಜೆಟ್‌ಗಳ ಮಿತಿಯೊಳಗೆ ಪೂರ್ಣಗೊಳಿಸಲು ಅಡಚಣೆಯನ್ನುಂಟುಮಾಡಬಹುದು. ಸಾಂಸ್ಥಿಕ ರಚನೆಗಳು ಪ್ರಕ್ರಿಯಾ ಅಗತ್ಯಗಳಿಗೆ ಹೊಂದಿಕೊಂಡು, ಪ್ರಯತ್ನ ಮತ್ತು ಇನ್‌ಪುಟ್(ಕಚ್ಚಾವಸ್ತುಗಳು ಅಥವಾ ಸೇವೆ ) ಹಾಗೂ ಔಟ್‌ಪುಟ್‌(ಉತ್ಪನ್ನ ಅಥವಾ ಇಳುವರಿ) ಅನುಪಾತವನ್ನು ಉತ್ತಮಗೊಳಿಸುವ ಗುರಿಯನ್ನು ಹೊಂದಿರಬಹುದು.

ಪರಿಣಾಮಕಾರಿ ಸಾಂಸ್ಥಿಕ ರಚನೆಯು ಸಂಸ್ಥೆಯಲ್ಲಿನ ವಿವಿಧ ಭಾಗಗಳ ನಡುವಿನ ಕೆಲಸ ನಿರ್ವಹಿಸುವ ಸಂಬಂಧಗಳನ್ನು ಸುಗಮಗೊಳಿಸಬಹುದು ಹಾಗೂ ಕೆಲಸದ ದಕ್ಷತೆಯನ್ನು ಸಾಂಸ್ಥಿಕ ಘಟಕಗಳೊಳಗೆ ಸುಧಾರಿಸಬಹುದು. ಸಂಸ್ಥೆಯು ಪ್ರಕ್ರಿಯೆಗಳ ಮೇಲ್ವಿಚಾರಣೆ ಸಾಧ್ಯವಾಗಿಸಲು ಸರಿಯಾದ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕು. ವಿವಿಧ ಆದೇಶಗಳ ಮಿಶ್ರಣವನ್ನು ನಿಭಾಯಿಸಲು ಆಜ್ಞೆ ನೀಡುವುದನ್ನು ಹಾಗೂ ಕೆಲಸ ನಿರ್ವಹಿಸುವಾಗ ಪರಿಸ್ಥಿತಿಗಳ ಬದಲಾವಣೆಗಳಿಗೆ ಸಂಸ್ಥೆ ಬೆಂಬಲಿಸಬೇಕು. ಹೆಚ್ಚು ನಮ್ಯತೆಗೆ ಅವಕಾಶ ನೀಡಲು ಮತ್ತು ಸೃಜನಶೀಲತೆಯನ್ನು ಬಳಸಲು ವೈಯಕ್ತಿಕ ಪರಿಣತಿಗಳನ್ನು ಪ್ರಯೋಗಿಸಲು ಸಂಸ್ಥೆ ಅವಕಾಶ ನೀಡಬೇಕು. ವ್ಯವಹಾರವು ವಿಸ್ತರಿಸಿದಂತೆ ಆಜ್ಞೆಗಳ ಸಂಖ್ಯೆಯು ಹೆಚ್ಚುತ್ತದೆ ಮತ್ತು ನಿಯಂತ್ರಣದ ವ್ಯಾಪ್ತಿಯೂ ವಿಸ್ತಾರಗೊಳ್ಳುತ್ತದೆ. ಸಂಸ್ಥೆಗೆ ಹೆಚ್ಚು ವಯಸ್ಸಾದಂತೆ ನಮತ್ಯೆಯು ಕಡಿಮೆಯಾಗುತ್ತದೆ ಮತ್ತು ಸೃಜನಶೀಲತೆಯು ಕುಸಿಯುತ್ತದೆ. ಆದ್ದರಿಂದ ಸಂಸ್ಥೆಯ ಚೇತರಿಕೆಗೆ ಸಾಂಸ್ಥಿಕ ರಚನೆಗಳನ್ನು ಕಾಲ ಕಾಲಕ್ಕೆ ಬಲಿಸಬೇಕಾಗುತ್ತದೆ. ಅಂತಹ ಬದಲಾವಣೆಯು ಆಂತರಿಕವಾಗಿ ತಡೆಗಟ್ಟಲ್ಪಟ್ಟರೆ,ಅಂತಿಮ ದಾರಿಯು ಸಂಸ್ಥೆಯನ್ನು ತಿರಸ್ಕರಿಸಿ, ಸಂಪೂರ್ಣ ಹೊಸ ವ್ಯವಸ್ಥೆಯಲ್ಲಿ ಪುನಾರಂಭಿಸಲು ತಯಾರಿ ನಡೆಸಬೇಕಾಗುತ್ತದೆ.

ಯಶಸ್ವಿ ಅಂಶಗಳು

ಬದಲಾಯಿಸಿ

ಸಾಂಸ್ಥಿಕ ರಚನೆಗಳಿಗೆ ಸಾಮಾನ್ಯ ಯಶಸ್ವಿ ಮಾನದಂಡಗಳೆಂದರೆ:

  • ವಿಕೇಂದ್ರೀಕೃತ ವರದಿಮಾಡುವಿಕೆ
  • ವಿಸ್ತೃತ ಶ್ರೇಣಿ ವ್ಯವಸ್ಥೆ
  • ಹೆಚ್ಚು ಅಲ್ಪಾವಧಿಯ ವೇಗ
  • ಹೆಚ್ಚು ಪಾರದರ್ಶಕತೆ
  • ಕಡಿಮೆ ಉಳಿಕೆಯ ಅಂಶ
  • ಶಾಶ್ವತ ಮೇಲ್ವಿಚಾರಣೆ
  • ಶೀಘ್ರ ಪ್ರತಿಕ್ರಿಯೆ
  • ವಿಶ್ವಾಸಾರ್ಹತೆಯ ಹಂಚಿಕೆ
  • ಮ್ಯಾಟ್ರಿಕ್ಸ್ ಶ್ರೇಣಿ ವ್ಯವಸ್ಥೆ

ಇತಿಹಾಸ

ಬದಲಾಯಿಸಿ

ಸಾಂಸ್ಥಿಕ ರಚನೆಗಳು ಪುರಾತನ ಕಾಲದ ಬುಡಕಟ್ಟು ವ್ಯವಸ್ಥೆಗಳ ಬೇಟೆಗಾರರು ಮತ್ತು ಸಂಗ್ರಹಕಾರರಿಂದ ಹಿಡಿದು, ಅಗ್ರ ರಾಜಮನೆತನದ ಮತ್ತು ಪಾದ್ರಿವರ್ಗದವರ ಪ್ರಬಲ ರಚನೆಗಳು ಹಾಗೂ ಕೈಗಾರಿಕಾ ರಚನೆಗಳು ಮತ್ತು ಇಂದಿನ ಕೈಗಾರಿಕಾ-ನಂತರದ ರಚನೆಗಳವರೆಗೆ ಬೆಳೆದುಬಂದಿದೆ.

ಸಾಂಸ್ಥಿಕ ರಚನೆಯ ಪ್ರಕಾರಗಳು

ಬದಲಾಯಿಸಿ

ಅಧಿಕಾರಶಾಹಿಯ ಮುಂಚಿನ ರಚನೆಗಳು

ಬದಲಾಯಿಸಿ

ಅಧಿಕಾರಶಾಹಿಯ(ಉದ್ಯಮಶೀಲತಾ) ಹಿಂದಿನ ರಚನೆಗಳು ಪ್ರಮಾಣಾನುಸಾರ ಕಾರ್ಯಗಳ ಕೊರತೆಯನ್ನು ಹೊಂದಿರುತ್ತವೆ. ಈ ರಚನೆಯು ಸಣ್ಣ ಸಂಸ್ಥೆಗಳಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ ಮತ್ತು ಸರಳ ಕಾರ್ಯಗಳನ್ನು ಮಾಡಲು ಹೆಚ್ಚಾಗಿ ಬಳಸಲಾಗುತ್ತದೆ. ಈ ರಚನೆಯು ಸಂಪೂರ್ಣವಾಗಿ ಕೇಂದೀಕೃತವಾದುದಾಗಿದೆ. ನಿಪುಣ ನಾಯಕನು ಎಲ್ಲಾ ಪ್ರಮುಖ ನಿರ್ಧಾರಗಳನ್ನು ಮಾಡುತ್ತಾನೆ ಹಾಗೂ ಹೆಚ್ಚಿನ ಸಂವಹನಗಳು ಪರಸ್ಪರ ಮಾತುಕತೆಗಳಿಂದ ನಡೆಯುತ್ತದೆ. ಇದು ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ನಿಯಂತ್ರಿಸಲು ಸಂಸ್ಥಾಪಕರಿಗೆ ಅನುವು ಮಾಡಿಕೊಡುವುದರಿಂದ ವಿಶೇಷವಾಗಿ ಹೊಸ(ಉದ್ಯಮಶೀಲತಾ)ವ್ಯವಹಾರಕ್ಕೆ ಉಪಯುಕ್ತವಾಗಿರುತ್ತದೆ.

ಅವು ಸಾಮಾನ್ಯವಾಗಿ ಮ್ಯಾಕ್ಸ್ ವೆಬೆರ್‌ಅಧಿಕಾರದ ತ್ರಿಪಕ್ಷೀಯ ವರ್ಗೀಕರಣದ ಪ್ರಕಾರ, ಸಾಂಪ್ರದಾಯಿತ ಪ್ರಾಬಲ್ಯತೆ ಅಥವಾ ವರ್ಚಸ್ವಿ ಪ್ರಾಬಲ್ಯತೆಯನ್ನು ಆಧರಿಸಿರುತ್ತವೆ.

ಅಧಿಕಾರಶಾಹಿ ರಚನೆಗಳು

ಬದಲಾಯಿಸಿ

ಅಧಿಕಾರಶಾಹಿ ರಚನೆಗಳು ಕೆಲವು ಪ್ರಮಾಣಾನುಸಾರಗಳನ್ನು ಹೊಂದಿರುತ್ತವೆ. ಅವು ಅಧಿಕ ಸಂಕೀರ್ಣ ಅಥವಾ ದೊಡ್ಡ ಮಟ್ಟದ ಸಂಸ್ಥೆಗಳಿಗೆ ಹೆಚ್ಚು ಸೂಕ್ತವಾಗುತ್ತವೆ. ಅವು ಸಾಮಾನ್ಯವಾಗಿ ಉದ್ದ ರಚನೆಯನ್ನು ಹೊಂದಿರುತ್ತವೆ. ಅಧಿಕಾರಶಾಹಿ ರಚನೆಗಳ ಮತ್ತು ಅಧಿಕಾರಶಾಹಿಯಲ್ಲದ ರಚನೆಗಳ ನಡುವಿನ ಉದ್ವಿಗ್ನತೆಯು ಬರ್ನ್ಸ್ ಮತ್ತು ಸ್ಟಾಕರ್‌ರ[] ಯಾಂತ್ರಿಕ ಮತ್ತು ಸುಸಂಘಟಿತ ರಚನೆಗಳ ನಡುವಿನ ವ್ಯತ್ಯಾಸದಲ್ಲಿ ಧ್ವನಿತವಾಗಿದೆ. ಇದು ಅಧಿಕಾರಶಾಹಿ ರಚನೆಯ ಸಂಪೂರ್ಣ ವಿಷಯವಲ್ಲ. ಇದು ತುಂಬಾ ಸಂಕೀರ್ಣವಾಗಿದೆ ಹಾಗೂ ಶ್ರೇಣೀಕೃತ ವ್ಯವಸ್ಥೆಯ ರಚನೆಗಳ ಸಂಸ್ಥೆಗೆ, ಹೆಚ್ಚಾಗಿ ದೀರ್ಘ ಸಂಸ್ಥೆಗಳಿಗೆ, ಉಪಯುಕ್ತವಾಗಿದೆ.

ಅಧಿಕಾರಶಾಹಿ-ನಂತರ

ಬದಲಾಯಿಸಿ

'ಅಧಿಕಾರಶಾಹಿ-ನಂತರ' ಪದವನ್ನು ಸಾಂಸ್ಥಿಕ ಸಾಹಿತ್ಯದಲ್ಲಿ ಎರಡು ಅರ್ಥದಲ್ಲಿ ಬಳಸಲಾಗುತ್ತದೆ: ಒಂದು ಸಾಮಾನ್ಯ, ಮತ್ತೊಂದು ಹೆಚ್ಚು ವಿಶೇಷ[]. ಸಾಮಾನ್ಯ ಅರ್ಥದಲ್ಲಿ ಅಧಿಕಾರಶಾಹಿ-ನಂತರ ಪದವನ್ನು ಹೆಚ್ಚಾಗಿ, 1980ರ ದಶಕದಿಂದ ಬೆಳವಣಿಗೆಯಾದ ಚಿಂತನೆಗಳ ಶ್ರೇಣಿಯನ್ನು ವಿವರಿಸಲು ಬಳಸಲಾಗುತ್ತದೆ, ಅವು ವಿಶೇಷವಾಗಿ ವೆಬೆರ್‌ನ ಆದರ್ಶ ರೂಪದ ಅಧಿಕಾರಶಾಹಿಯೊಂದಿಗೆ ವೈಲಕ್ಷಣವನ್ನು ತೋರಿಸುತ್ತವೆ. ಇದು ಒಟ್ಟು ಗುಣಮಟ್ಟ ನಿರ್ವಹಣೆ, ಸಂಸ್ಕೃತಿ ನಿರ್ವಹಣೆ ಮತ್ತು ಮ್ಯಾಟ್ರಿಕ್ಸ್ ನಿರ್ವಹಣೆ ಮೊದಲಾದವನ್ನು ಒಳಗೊಳ್ಳಬಹುದು. ಆದಾಗ್ಯೂ, ಇವು ಯಾವುವೂ ಅಧಿಕಾರಶಾಹಿಯ ಮುಖ್ಯ ಸಿದ್ಧಾಂತಗಳನ್ನು ಕೈ ಬಿಟ್ಟಿಲ್ಲ. ಶ್ರೇಣಿ ವ್ಯವಸ್ಥೆಗಳು ಈಗಲೂ ಅಸ್ತಿತ್ವದಲ್ಲಿವೆ, ಅಧಿಕಾರವು ಈಗಲೂ ವೆಬೆರ್‌ನ ತರ್ಕಬದ್ಧ, ಕಾನೂನು ಸಮ್ಮತ ಪ್ರಕಾರವಾಗಿದೆ ಹಾಗೂ ಸಂಸ್ಥೆಯು ಈಗಲೂ ನಿಯಮಬದ್ಧವಾಗಿದೆ. ಹೆಕ್ಸ್‌ಚರ್ ಈ ದಿಕ್ಕಿನಲ್ಲಿ ವಾದಮಾಡುತ್ತಾ, ಅಧಿಕಾರಶಾಹಿಯಿಂದ ದೂರವಾದ ಮೂಲಭೂತ ಸ್ಥಳಾಂತರದ ಬದಲಿಗೆ ಅವುಗಳನ್ನು ಚೊಕ್ಕಟಗೊಂಡ ಅಧಿಕಾರಶಾಹಿಗಳೆಂದು ವಿವರಿಸುತ್ತಾನೆ.[] ಗಿಡಿಯಾನ್ ಕುಂದ ಅವನ 'ಟೆಕ್'ನಲ್ಲಿನ ಸಂಸ್ಕೃತಿ ನಿರ್ವಹಣೆಯ ಸಾಂಪ್ರದಾಯಿಕ ಅಧ್ಯಯನದಲ್ಲಿ ಹೀಗೆಂದು ವಾದಿಸಿದ್ದಾನೆ - 'ಅಧಿಕಾರಶಾಹಿಯ ನಿಯಂತ್ರಣದ ಸಾರವು ನಿಯಮ ಮತ್ತು ನಿಬಂಧನೆಗಳ ಕ್ರಮಬದ್ಧಗೊಳಿಸುವಿಕೆ, ಕ್ರೋಡೀಕರಣ ಮತ್ತು ಜಾರಿ - ಮೂಲಭೂತವಾಗಿ ಬದಲಾಗುವುದಿಲ್ಲ. ಇದು ಸಾಂಸ್ಥಿಕ ರಚನೆಯಿಂದ ಸಂಸ್ಥೆಯ ಸಂಸ್ಕೃತಿಗೆ ಗಮನವನ್ನು ಬದಲಿಸುತ್ತದೆ.'.

ತಾತ್ವಿಕ ಸಿದ್ಧಾಂತಿಗಳ ಮತ್ತೊಂದು ಸಣ್ಣ ಗುಂಪು ಅಧಿಕಾರಶಾಹಿ-ನಂತರದ ಸಂಸ್ಥೆಯ ಸಿದ್ದಾಂತವನ್ನು ಅಭಿವೃದ್ಧಿಪಡಿಸಿತು[] ಇದು ಮೂಲಭೂತವಾಗಿ ಅಧಿಕಾರಶಾಹಿಯಲ್ಲದ ಸಂಸ್ಥೆಯನ್ನು ವಿವರಿಸುವ ಪ್ರಯತ್ನದಲ್ಲಿ ವಿಸ್ತೃತ ಚರ್ಚೆಯನ್ನು ಒದಗಿಸಿದೆ. ಚಾರ್ಲ್ಸ್ ಹೆಕ್ಸ್‌ಚರ್ ಆದರ್ಶಪ್ರಾಯ ಅಧಿಕಾರಶಾಹಿ-ನಂತರದ ಸಂಸ್ಥೆಯನ್ನು ಅಭಿವೃದ್ಧಿಪಡಿಸಿದನು, ಅದರಲ್ಲಿ ನಿರ್ಧಾರಗಳು ಅಧಿಕಾರ ಮತ್ತು ಆದೇಶದ ಬದಲಿಗೆ ಮಾತುಕತೆ ಮತ್ತು ಒಮ್ಮತವನ್ನು ಆಧರಿಸಿರುತ್ತವೆ ಹಾಗೂ ಸಂಸ್ಥೆಯು ಶ್ರೇಣಿವ್ಯವಸ್ಥೆಯಾಗಿರದೆ ಒಂದು ಜಾಲವಾಗಿರುತ್ತದೆ ಎಲ್ಲೆಗಳ ಬಗ್ಗೆ ಮುಕ್ತವಾಗಿರುತ್ತದೆ(ಸಂಸ್ಕೃತಿ ವ್ಯವಸ್ಥಾಪನೆಗೆ ನೇರ ವೈರುದ್ಧ್ಯವನ್ನು ಹೊಂದಿದೆ); ನಿರ್ಧಾರಗಳ ಮೂಲಕ ನಿಯಮಗಳನ್ನು ರಚಿಸುವುದಕ್ಕಿಂತ ಹೆಚ್ಚಿನ ಮಟ್ಟದ ನಿರ್ಧಾರದ ಮೂಲಕ ನಿಯಮಗಳ ರಚನೆಗೆ ಮಹತ್ವ ನೀಡಲಾಗುತ್ತದೆ. ಒಮ್ಮತ ಮಾದರಿಯಿಂದ ಈ ರೀತಿಯ ಸಮಾನ ಹಂತದ ನಿರ್ಧಾರ ರೂಪಿಸುವಿಕೆಯು ಹೆಚ್ಚಾಗಿ ಗೃಹ ನಿರ್ಮಾಣ ಸಹಕಾರಿ ಸಂಸ್ಥೆಗಳಲ್ಲಿ, ಇತರ ಸಹಕಾರಿ ಸಂಸ್ಥೆಗಳಲ್ಲಿ ಮತ್ತು [[ಲಾಭೇತರ(/0} ಅಥವಾ ಸಮುದಾಯ ಸಂಸ್ಥೆ|ಲಾಭೇತರ(/0} ಅಥವಾ ಸಮುದಾಯ ಸಂಸ್ಥೆ]]ಯನ್ನು ನಡೆಸುವಾಗ ಬಳಸಲಾಗುತ್ತದೆ. ಇದನ್ನು ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಮತ್ತು ಸಾಮಾನ್ಯವಾಗಿ ಗುಂಪುಗಳಲ್ಲಿ ದಬ್ಬಾಳಿಕೆಯನ್ನು ಸಾಮಾನ್ಯವಾಗಿ ಅನುಭವಿಸುವವರಿಗೆ ಅಧಿಕಾರ ಕೊಡುವುದಕ್ಕೆನೆರವಾಗಲು ಬಳಸಲಾಗುತ್ತದೆ.

ಈಗಲೂ ಇತರ ತಾತ್ವಿಕ ಸಿದ್ಧಾಂತಿಗಳು ಸಂಕೀರ್ಣ ಸಿದ್ಧಾಂತ ಮತ್ತು ಸಂಸ್ಥೆಗಳಲ್ಲಿ ಆಸಕ್ತಿಯ ಪುನರ್ಜಾಗೃತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಅವರು ಸಾಂಸ್ಥಿಕ ಮಾರ್ಪಾಡುಗಳನ್ನು ಮಾಡಲು ಸರಳ ರಚನೆಗಳನ್ನು ಹೇಗೆ ಬಳಸಬಹುದೆಂಬ ಬಗ್ಗೆ ಗಮನ ಕೇಂದ್ರೀಕರಿಸಿದ್ದಾರೆ. ಉದಾಹರಣೆಗೆ,ಮೈನರ್ ಮತ್ತು ಇತರರು (2000), ಉತ್ಪನ್ನದ ಅಭಿವೃದ್ಧಿಯಲ್ಲಿ ಸುಧಾರಿತ ಫಲಿತಾಂಶಗಳನ್ನು ಉಂಟುಮಾಡಲು ಸರಳ ರಚನೆಗಳನ್ನು ಹೇಗೆ ಬಳಸಬಹುದೆಂಬುದನ್ನು ಅಧ್ಯಯನ ಮಾಡಿದರು. ಅವರ ಅಧ್ಯಯನವು ಸರಳ ರಚನೆಗಳು ಮತ್ತು ಸುಧಾರಿತ ಕಲಿಕೆ ಮಧ್ಯೆ ಸಂಬಂಧವನ್ನು ರೂಪಿಸುತ್ತದೆ. ಜಾನ್ ರಿವ್ಕಿನ್[] ಮತ್ತು ನೆಲ್ಸನ್ ರೆಪೆನ್ನಿಂಗ್[] ನಂತಹ ಇತರ ಪಂಡಿತರು, ರಚನೆ ಮತ್ತು ಕಾರ್ಯವಿಧಾನವು ಕ್ರಿಯಾತ್ಮಕ ಪರಿಸರಗಳಲ್ಲಿ ಹೇಗೆ ಸಂಬಂಧ ಹೊಂದಿವೆ ಎಂಬ ಹಳೆಯ ಆಸಕ್ತಿಗೆ ಜೀವತುಂಬಿದರು.

ಕಾರ್ಯಕಾರಿ ರಚನೆ

ಬದಲಾಯಿಸಿ

ಸಂಸ್ಥೆಯೊಂದರ ಕಾರ್ಯಕಾರಿ ವಿಭಾಗಗಳ ನೌಕರರು ಸೀಮಿತ ಕಾರ್ಯಗಳನ್ನು ನಿರ್ವಹಿಸಬೇಕಾಗಿರುತ್ತದೆ. ಉದಾಹರಣೆಗಾಗಿ, ಎಂಜಿನಿಯರಿಂಗ್ ವಿಭಾಗವು ಸಾಫ್ಟ್‌ವೇರ್ ಎಂಜಿನಿಯರ್‌ ಸಿಬ್ಬಂದಿಗಳನ್ನು ಮಾತ್ರ ಹೊಂದಿರಬೇಕಾಗಿರುತ್ತದೆ. ಇದು ಆ ಗುಂಪಿನಲ್ಲಿ ನಿರ್ವಹಣೆ ದಕ್ಷತೆಗಳಿಗೆ ದಾರಿ ಕಲ್ಪಿಸುತ್ತದೆ. ಆದರೆ ಇದು ಸಂಸ್ಥೆಯಲ್ಲಿನ ಕಾರ್ಯಕಾರಿ ಗುಂಪುಗಳ ಮಧ್ಯೆ ಸಂವಹನದ ಕೊರತೆಯನ್ನೂ ಉಂಟುಮಾಡಬಹುದು, ಆ ಮೂಲಕ ಸಂಸ್ಥೆಯನ್ನು ಕುಗ್ಗಿಸಬಹುದು ಮತ್ತು ಅನಮ್ಯಗೊಳಿಸಬಹುದು.

ಸಮಗ್ರವಾಗಿ, ಕಾರ್ಯಕಾರಿ ಸಂಸ್ಥೆಯು ಅತಿ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಪ್ರಮಾಣೀಕೃತ ಸರಕುಗಳ ಮತ್ತು ಸೇವೆಗಳ ಉತ್ಪಾದಕವಾಗಲು ಹೆಚ್ಚು ಸೂಕ್ತವೆನಿಸುತ್ತದೆ. ಕಾರ್ಯಗಳ ಸಮನ್ವಯತೆ ಮತ್ತು ತಜ್ಞತೆಯು ಕಾರ್ಯಕಾರಿ ರಚನೆಯಲ್ಲಿ ಕೇಂದ್ರೀಕೃತವಾಗಿರುತ್ತದೆ. ಅದು ಸೀಮಿತ ಪ್ರಮಾಣದ ಉತ್ಪನ್ನಗಳನ್ನು ಅಥವಾ ಸೇವೆಗಳನ್ನು ದಕ್ಷತೆಯಿಂದ ಮತ್ತು ನಿರೀಕ್ಷಿಸಿದಂತೆ ತಯಾರಿಸುತ್ತವೆ. ಇದಲ್ಲದೇ, ಕಾರ್ಯಕಾರಿ ಸಂಸ್ಥೆಗಳು ಲಂಬವಾಗಿ ಚಟುವಟಿಕೆಗಳನ್ನು ಸಂಘಟಿಸಿ ದಕ್ಷತೆಗಳನ್ನು ಇನ್ನಷ್ಟು ಸಾಧಿಸುತ್ತವೆ. ಹೀಗಾಗಿ ಉತ್ಪನ್ನಗಳು ವೇಗವಾಗಿ ಮತ್ತು ಕಡಿಮೆ ವೆಚ್ಚಕ್ಕೆ ಮಾರಾಟವಾಗುತ್ತವೆ ಮತ್ತು ವಿತರಣೆಯಾಗುತ್ತವೆ. ಉದಾಹರಣೆಗೆ, ಸಣ್ಣ ಉದ್ಯಮವು ಉತ್ಪಾದನೆಗೆ ಬೇಕಾದ ಬಿಡಿಭಾಗಗಳನ್ನು ಹೊರಗಿನ ಸಂಸ್ಥೆಯಿಂದ ಸಂಗ್ರಹಿಸುವ ಬದಲಿಗೆ ಸ್ವತಃ ಅವುಗಳ ತಯಾರಿಕೆ ಆರಂಭಿಸಬಹುದು.ಇದರಿಂದ ಸಂಸ್ಥೆಗೆ ಮಾತ್ರವಲ್ಲದೆ ನೌಕರರ ನಂಬಿಕೆಗೂ ಪ್ರಯೋಜನಕಾರಿಯಾಗಿರುತ್ತದೆ.

ವಿಭಾಗೀಯ ರಚನೆ

ಬದಲಾಯಿಸಿ

"ಉತ್ಪನ್ನ ರಚನೆ" ಎಂದೂ ಕರೆಯಲ್ಪಡುವ ವಿಭಾಗೀಯ ರಚನೆಯು ಪ್ರತಿ ಸಾಂಸ್ಥಿಕ ಕಾರ್ಯವನ್ನು ವಿಭಾಗಗಳಾಗಿ ಪ್ರತ್ಯೇಕಿಸುತ್ತದೆ. ವಿಭಾಗೀಯ ರಚನೆಯಲ್ಲಿನ ಪ್ರತಿಯೊಂದು ವಿಭಾಗವು ಎಲ್ಲಾ ಅವಶ್ಯಕ ಸಂಪನ್ಮೂಲಗಳನ್ನು ಮತ್ತು ಕಾರ್ಯಗಳನ್ನು ಹೊಂದಿರುತ್ತದೆ. ವಿಭಾಗಗಳನ್ನು ವಿವಿಧ ದೃಷ್ಟಿಕೋನದಿಂದ ವರ್ಗೀಕರಿಸಬಹುದು. ವರ್ಗೀಕರಣವನ್ನು ಭೌಗೋಳಿಕ ಆಧಾರದಲ್ಲಿ (US ವಿಭಾಗ ಮತ್ತು EU ವಿಭಾಗ) ಅಥವಾ ಉತ್ಪನ್ನ/ಸೇವೆಯ ಆಧಾರದಲ್ಲಿ (ಬೇರೆ ಬೇರೆ ಗ್ರಾಹಕರಿಗೆ ಬೇರೆ ಬೇರೆ ಉತ್ಪನ್ನಗಳು: ಗ್ರಹೋಪಯೋಗಿ ಅಥವಾ ಕಂಪೆನಿಗಳು) ಮಾಡಬಹುದು. ಮತ್ತೊಂದು ಉದಾಹರಣೆಯೆಂದರೆ, ಮೋಟಾರುಗಾಡಿ ಕಂಪೆನಿಯೊಂದು ವಿಭಾಗೀಯ ರಚನೆಯೊಂದಿಗೆ SUVಗಳಿಗೆ ಒಂದು ವಿಭಾಗವನ್ನು, ಮಧ್ಯಮ ಗಾತ್ರದ(ಸಬ್‌ಕಾಂಪ್ಯಾಕ್ಟ್) ಕಾರುಗಳಿಗೆ ಮತ್ತೊಂದು ವಿಭಾಗವನ್ನು ಹಾಗೂ ಮುಚ್ಚುಕಾರುಗಳಿಗಾಗಿ(ಸೆಡಾನ್) ಇನ್ನೊಂದು ವಿಭಾಗವನ್ನು ಹೊಂದಿರಬಹುದು. ಪ್ರತಿಯೊಂದು ವಿಭಾಗವು ಅದರ ಸ್ವಂತ ಮಾರಾಟ, ಎಂಜಿನಿಯರಿಂಗ್ ಮತ್ತು ಮಾರುಕಟ್ಟೆಯ ಇಲಾಖೆಗಳನ್ನು ಹೊಂದಿರಬಹುದು.

ಮ್ಯಾಟ್ರಿಕ್ಸ್ ರಚನೆ

ಬದಲಾಯಿಸಿ

ಮ್ಯಾಟ್ರಿಕ್ಸ್ ರಚನೆಯು ನೌಕರರನ್ನು ಕಾರ್ಯ ಮತ್ತು ಉತ್ಪನ್ನಗಳೆರಡರಿಂದಲೂ ಗುಂಪುಗೂಡಿಸುತ್ತದೆ. ಈ ರಚನೆಯು ಎರಡೂ ಪ್ರತ್ಯೇಕ ರಚನೆಗಳಲ್ಲಿ ಉತ್ತಮವಾದುದನ್ನು ಒಂದುಗೂಡಿಸಬಹುದು. ಮಾಟ್ರಿಕ್ಸ್ ಸಂಸ್ಥೆಯು ಕೆಲಸವನ್ನು ಸಾಧಿಸಲು ಸಾಮಾನ್ಯವಾಗಿ ನೌಕರರ ತಂಡಗಳನ್ನು ಬಳಸಿಕೊಳ್ಳುತ್ತದೆ. ಕಾರ್ಯಕಾರಿ ಮತ್ತು ವಿಕೇಂದ್ರಿತ ಸ್ವರೂಪಗಳ ಶಕ್ತಿಗಳ ಅನುಕೂಲ ಪಡೆಯಲು ಮತ್ತು ದೌರ್ಬಲ್ಯಗಳನ್ನು ಸರಿದೂಗಿಸುವುದಕ್ಕಾಗಿ ಈ ಕೆಲಸ ಮಾಡುತ್ತದೆ. ಉದಾರಣೆಯೆಂದರೆ "ಉತ್ಪನ್ನ a" ಮತ್ತು "ಉತ್ಪನ್ನ b" ಎಂಬ ಎರಡು ಉತ್ಪನ್ನಗಳನ್ನು ತಯಾರಿಸುವ ಒಂದು ಕಂಪೆನಿ. ಮ್ಯಾಟ್ರಿಕ್ಸ್ ರಚನೆಯನ್ನು ಬಳಸಿಕೊಂಡು ಈ ಕಂಪೆನಿಯು ಕಾರ್ಯಗಳನ್ನು ಈ ರೀತಿಯಾಗಿ ಆಯೋಜಿಸಬಹುದು: "ಉತ್ಪನ್ನ a" ಮಾರಾಟ ಇಲಾಖೆ, "ಉತ್ಪನ್ನ a" ಗ್ರಾಹಕ ಸೇವಾ ಇಲಾಖೆ, "ಉತ್ಪನ್ನ a" ಲೆಕ್ಕಮಾಡುವಿಕೆ, "ಉತ್ಪನ್ನ b" ಮಾರಾಟ ಇಲಾಖೆ, "ಉತ್ಪನ್ನ b" ಗ್ರಾಹಕ ಸೇವಾ ಇಲಾಖೆ, "ಉತ್ಪನ್ನ b" ಲೆಕ್ಕಮಾಡುವ ಇಲಾಖೆ. ಮ್ಯಾಟ್ರಿಕ್ಸ್ ರಚನೆಯು ಸಾಂಸ್ಥಿಕ ರಚನೆಗಳಲ್ಲೇ ಅತ್ಯಂತ ಸರಳವಾದುದಾಗಿದೆ ಹಾಗೂ ಸರಳ ಕ್ರಮಬದ್ಧ ಅನುಕರಣೀಯ ವ್ಯವಸ್ಥೆ ಮತ್ತು ಸ್ವಭಾವದಲ್ಲಿ ಕ್ರಮಬದ್ಧತೆ ಪ್ರದರ್ಶನ.

  • ದುರ್ಬಲ/ಕಾರ್ಯಕಾರಿ ಮ್ಯಾಟ್ರಿಕ್ಸ್: ಯೋಜನಾ-ನಿರ್ವಾಹಕನು ಸೀಮಿತ ಅಧಿಕಾರದೊಂದಿಗೆ ಯೋಜನೆಯ ವಿವಿಧ ಕಾರ್ಯಕಾರಿ ತಜ್ಞತೆ ಅಂಶಗಳ ಮೇಲ್ವಿಚಾರಣೆ ನಿರ್ವಹಿಸಲು ನಿಯೋಜಿತನಾಗಿರುತ್ತಾನೆ. ಕಾರ್ಯಕಾರಿ ನಿರ್ವಾಹಕರು ಸಂಪನ್ಮೂಲಗಳ ಮತ್ತು ಯೋಜನೆಯ ಪ್ರದೇಶಗಳ ಮೇಲೆ ನಿಯಂತ್ರಣವನ್ನು ನಿರ್ವಹಿಸುತ್ತಾರೆ.
  • ಸಮತೋಲಿತ/ಕಾರ್ಯಕಾರಿ ಮ್ಯಾಟ್ರಿಕ್ಸ್: ಯೋಜನಾ-ನಿರ್ವಾಹಕನನ್ನು ಯೋಜನೆಯ ಮೇಲ್ವಿಚಾರಣೆ ನಡೆಸಲು ನೇಮಿಸಲಾಗುತ್ತದೆ. ಅಧಿಕಾರವನ್ನು ಯೋಜನಾ-ನಿರ್ವಾಹಕ ಮತ್ತು ಕಾರ್ಯಕಾರಿ ನಿರ್ವಾಹಕರ ಮಧ್ಯೆ ಸಮಾನವಾಗಿ ಹಂಚಲಾಗುತ್ತದೆ. ಇದು ಕಾರ್ಯಕಾರಿ ಮತ್ತು ಯೋಜನೆಯ ಸಂಸ್ಥೆಗಳ ಅತ್ಯುತ್ತಮ ಅಂಶಗಳನ್ನು ಒದಗಿಸುತ್ತದೆ. ಆದರೆ ಅಧಿಕಾರ ಹಂಚಿಕೆಯು ಸೂಕ್ಷ್ಮ ಕ್ರಿಯೆಯಾದುದರಿಂದ ಇದು ನಿರ್ವಹಿಸಲು ತುಂಬಾ ಕಷ್ಟಕರವಾದ ವ್ಯವಸ್ಥೆಯಾಗಿದೆ.
  • ಪ್ರಬಲ/ಯೋಜನೆ ಮ್ಯಾಟ್ರಿಕ್ಸ್: ಯೋಜನಾ-ನಿರ್ವಾಹಕನು ಪ್ರಾಥಮಿಕವಾಗಿ ಯೋಜನೆಗೆ ಜವಾಬ್ದಾರನಾಗಿರುತ್ತಾನೆ. ಕಾರ್ಯಕಾರಿ ನಿರ್ವಾಹಕರು ತಾಂತ್ರಿಕ ಪರಿಣಿತರನ್ನು ಒದಗಿಸುತ್ತಾರೆ ಮತ್ತು ಅವಶ್ಯಕ ಸಂಪನ್ಮೂಲಗಳನ್ನು ನೀಡುತ್ತಾರೆ.

ಈ ಮ್ಯಾಟ್ರಿಕ್ಸ್‌ಗಳಲ್ಲಿ, ಯಾವುದೇ ಉತ್ತಮ ವ್ಯವಸ್ಥೆಗಳಿಲ್ಲ; ಕಾರ್ಯಾಚರಣೆಯ ಯಶಸ್ಸು ಯಾವಾಗಲೂ ಸಂಸ್ಥೆಯ ಉದ್ದೇಶ ಮತ್ತು ನಿರ್ವಹಣೆಯನ್ನು ಅವಲಂಬಿಸಿರುತ್ತದೆ.

ಸಾಂಸ್ಥಿಕ ವೃತ್ತ: ಸಮತಲಕ್ಕೆ ಹಿಂದಿರುಗುವಿಕೆ

ಬದಲಾಯಿಸಿ

ಸಮತಲ ರಚನೆಯು ಉದ್ಯಮಗಳ ಆರಂಭದ ಹಂತದಲ್ಲಿ, /ಯೂನಿವರ್ಸಿಟಿ ಸ್ಪಿನ್‌ಆಫ್‌ಗಳು ಅಥವಾ ಸಣ್ಣ ಕಂಪೆನಿಗಳಲ್ಲಿ ಸಾಮಾನ್ಯವಾಗಿರುತ್ತದೆ. ಕಂಪೆನಿಯು ಬೆಳೆದಂತೆ, ಇದು ಹೆಚ್ಚು ಸಂಕೀರ್ಣ ಮತ್ತು ಶ್ರೇಣಿ ವ್ಯವಸ್ಥೆಯಾಗುತ್ತದೆ. ಇದು ಅಧಿಕ ಹಂತಗಳು ಮತ್ತು ಇಲಾಖೆಗಳೊಂದಿಗೆ ವ್ಯಾಪಕ ರಚನೆಗೆ ಕಾರಣವಾಗುತ್ತದೆ.

ಹೆಚ್ಚಾಗಿ ಇದು ಹಿಂದೆ ಅಧಿಕ ಚಾಲ್ತಿಯಲ್ಲಿದ್ದ ರಚನೆಅಧಿಕಾರಶಾಹಿಯಾಗಿ ಬದಲಾಗುತ್ತದೆ. ಇದು ಈಗಲೂ ಮಾಜಿ ಸೋವಿಯತ್ ಪ್ರಜಾಪ್ರಭುತ್ವಗಳಲ್ಲಿ ಮತ್ತು ಚೀನಾದಲ್ಲಿ ಹಾಗೂ ಪ್ರಪಂಚದಾದ್ಯಂತದ ಹೆಚ್ಚಿನ ಸರಕಾರಿ ಸಂಸ್ಥೆಗಳಲ್ಲಿ ಪ್ರಸ್ತುತವಾಗಿದೆ. ವಿಶಿಷ್ಟ ಅಧಿಕಾರಶಾಹಿಯನ್ನು ಸೂಚಿಸಲು ಶೆಲ್ ಗ್ರೂಪ್ಅನ್ನು ಬಳಸಲಾಗುತ್ತದೆ : ಅತೀ-ಭಾರಿ ಗಾತ್ರ ಮತ್ತು ಶ್ರೇಣಿ ವ್ಯವಸ್ಥೆ. ಇದು ವಿವಿಧ ಪ್ರದೇಶಗಳಲ್ಲಿರುವ ಅನೇಕ ಹಂತದ ಆಜ್ಞೆಗಳನ್ನು ಮತ್ತು ನಕಲಿ ಸೇವಾ ಕಂಪೆನಿಗಳನ್ನು ಒಳಗೊಂಡಿತ್ತು. ಇವೆಲ್ಲವೂ ಶೆಲ್ ಮಾರುಕಟ್ಟೆ-ಬದಲಾವಣೆಗಳಿಗೆ ಅಳುಕುವಂತೆ ಮಾಡಿದವು[] ಹಾಗೂ ಮತ್ತಷ್ಟು ಬೆಳೆದು ಅಭಿವೃದ್ಧಿ ಹೊಂದುವುದಕ್ಕೆ ಅಸಮರ್ಥವಾಗಲು ಕಾರಣವಾದವು. ಈ ರಚನೆಯ ವೈಫಲ್ಯವು ಕಂಪೆನಿಯು ಮ್ಯಾಟ್ರಿಕ್ಸ್‌ ಆಗಿ ಪುನಾರಚನೆಯಾಗಲು ಪ್ರಮುಖ ಕಾರಣವಾಯಿತು.

ಸ್ಟಾರ್‌ಬಕ್ಸ್ ಎಂಬುದು ಅವುಗಳ ಕೇಂದ್ರೀಕೃತ ಕಾರ್ಯವಿಧಾನವನ್ನು ಬೆಂಬಲಿಸುವ ಮ್ಯಾಟ್ರಿಕ್ಸ್ ರಚನೆಯನ್ನು ಯಶಸ್ವಿಯಾಗಿ ಅಭಿವೃದ್ಧಿಗೊಳಿಸಿದ ಹಲವಾರು ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದೆ. ನೌಕರರು ಇಬ್ಬರು ಮುಖ್ಯಸ್ಥರಿಗೆ ವರದಿ ಮಾಡಿಕೊಳ್ಳುವುದರೊಂದಿಗೆ,ಇದರ ವಿನ್ಯಾಸವು ಕಾರ್ಯಕಾರಿ ಮತ್ತು ಉತ್ಪನ್ನ ಆಧಾರಿತ ವಿಭಾಗಗಳನ್ನು ಒಳಗೊಳ್ಳುತ್ತದೆ[]. ತಂಡ ಮನೋಭಾವ ಸೃಷ್ಟಿಸಲು ಕಂಪೆನಿಯು ನೌಕರರಿಗೆ ಅವರ ಸ್ವಂತ ನಿರ್ಧಾರಗಳನ್ನು ಮಾಡುವಂತೆ ಅಧಿಕಾರ ವಹಿಸಿಕೊಡುತ್ತದೆ ಹಾಗೂ ಹಾರ್ಡ್ ಸ್ಕಿಲ್ ಮತ್ತು ಸಾಫ್ಟ್ ಸ್ಕಿಲ್‌ಗಳೆರಡನ್ನೂ ಅಭಿವೃದ್ಧಿಗೊಳಿಸಲು ತರಬೇತಿ ನೀಡುತ್ತದೆ. ಇದರಿಂದಾಗಿ ಸ್ಟಾರ್‌ಬಕ್ಸ್ ಕಂಪೆನಿಯನ್ನು ಗ್ರಾಹಕ-ಸೇವೆಯಲ್ಲಿ ಅತ್ಯುತ್ತಮವಾದ ಕಂಪೆನಿಯಾಗಿಸುತ್ತದೆ.

ಕೆಲವು ಪರಿಣಿತರು ಪ್ರೋಕ್ಟರ್ ಆಂಡ್ ಗ್ಯಾಂಬಲ್, ಟೊಯೋಟ ಮತ್ತು ಯೂನಿಲೆವರ್‌ನಂತಹ ಜಾಗತಿಕ ಕಂಪೆನಿಗಳಲ್ಲಿ ಸಾಮಾನ್ಯವಾಗಿರುವ ಬಹು-ರಾಷ್ಟ್ರೀಯ ವಿನ್ಯಾಸವನ್ನೂ[] ಸೂಚಿಸುತ್ತಾರೆ. ಈ ರಚನೆಯು ಉತ್ಪನ್ನಗಳು, ಕಾರ್ಯಗಳು ಮತ್ತು ಭೌಗೋಳಿಕ ಪ್ರದೇಶಗಳ ನಡುವೆ ಹೊಂದಾಣಿಕೆಯನ್ನು ನಿರ್ವಹಿಸುವುದರಿಂದ, ಇದನ್ನು ಮ್ಯಾಟ್ರಿಕ್ಸ್‌ನ ಸಂಕೀರ್ಣ ರೂಪವೆಂದು ಪರಿಗಣಿಸಲಾಗುತ್ತದೆ.

ಸಾಮಾನ್ಯವಾಗಿ ಕಳೆದ ದಶಕದಲ್ಲಿ, ಜಾಗತೀಕರಣ, ಪೈಪೋಟಿ ಮತ್ತು ಹೆಚ್ಚು ಬೇಡಿಕೆಯ ಗ್ರಾಹಕರ ಮೂಲಕ ಅನೇಕ ಕಂಪೆನಿಗಳ ರಚನೆಯು ಸಮತಲದ, ಕಡಿಮೆ ಶ್ರೇಣಿ ವ್ಯವಸ್ಥೆಯ, ಹೆಚ್ಚು ಅಸ್ಥಿರ ಮತ್ತು ಹೆಚ್ಚು ವಾಸ್ತವಪ್ರಾಯ ಆಗಿರುವುದು ಸ್ಪಷ್ಟವಾಗಿದೆ.[]

20ನೇ ಶತಮಾನದಲ್ಲಿ ಅಭಿವೃದ್ಧಿಗೊಂಡ ಹೊಸ ಸಾಂಸ್ಥಿಕ ರಚನೆಗಳಲ್ಲಿ ಒಂದೆಂದರೆ ತಂಡ . ಸಣ್ಣ ವ್ಯಾಪಾರಗಳಲ್ಲಿ, ತಂಡದ ರಚನೆಯು ಸಂಪೂರ್ಣ ಸಂಸ್ಥೆಯನ್ನು ರೂಪಿಸಬಹುದು[]. ತಂಡಗಳು ಸಮಾನ ಹಂತ ಮತ್ತು ಲಂಬ ಎರಡೂ ರಚನೆಯಾಗಿರಬಹುದು.[೧೦] ಸಂಸ್ಥೆಯು ಹೊಸ ಆಯಾಮಗಳನ್ನು ಸಾಧಿಸಲು ವೈಯಕ್ತಿಕ ಸಾಮರ್ಥ್ಯಗಳನ್ನು ಕ್ರೋಢೀಕರಿಸುವ ಜನರ ತಂಡವಾಗಿದ್ದರೆ, ಸಾಂಸ್ಥಿಕ ರಚನೆಯ ಗುಣಮಟ್ಟವು ಸಮಷ್ಟಿಯಲ್ಲಿ ತಂಡಗಳ ಸಾಮರ್ಥ್ಯಗಳ ಸುತ್ತ ಸುತ್ತುತ್ತದೆ.[೧೧] ಉದಾಹರಣೆಗಾಗಿ, ಕೇಂದ್ರೀಕೃತ ಕಾರ್ಯವಿಧಾನವನ್ನು ಅಭಿವೃದ್ಧಿಗೊಳಿಸುತ್ತಿರುವ USನ ಅತಿದೊಡ್ಡ ನೈಸರ್ಗಿಕ-ಆಹಾರ ಕಿರಾಣಿ-ವ್ಯಾಪಾರಿ ಹೋಲ್ ಫುಡ್ಸ್ ಮಾರ್ಕೆಟ್ ಅಂಗಡಿಗಳ ಪ್ರತಿಯೊಂದು ಅಂಗಡಿಯು ಸುಮಾರು 10 ಸ್ವ-ನಿರ್ವಹಣಾ ತಂಡಗಳಿಂದ ರೂಪಿತವಾದ ಸ್ವಾಯತ್ತಲಾಭದ-ಕೇಂದ್ರವಾಗಿದೆ. ಪ್ರತಿ ಅಂಗಡಿಯ ಮತ್ತು ಪ್ರತಿ ಕ್ಷೇತ್ರದ ತಂಡದ-ಮುಖಂಡರೂ ಸಹ ಒಂದು ತಂಡವಾಗಿರುತ್ತಾರೆ. ದೊಡ್ಡ ಅಧಿಕಾರಶಾಹಿ ಸಂಸ್ಥೆಗಳು ತಂಡಗಳ ನಮ್ಯತೆಯಿಂದ ಪ್ರಯೋಜನವನ್ನು ಪಡೆಯಬಹುದು. ಕ್ಸೆರಾಕ್ಸ್, ಮೊಟೊರೋಲ ಮತ್ತು ಡೈಮ್ಲರ್‌ಕ್ರೈಸ್ಲರ್ ಮೊದಲಾದವು ಕಾರ್ಯಗಳನ್ನು ನಿರ್ವಹಿಸಲು ತಂಡಗಳನ್ನು ಸಕ್ರಿಯವಾಗಿ ಬಳಸುವ ಕಂಪೆನಿಗಳಾಗಿವೆ.

ಜಾಲ(ನೆಟ್ವರ್ಕ್)

ಬದಲಾಯಿಸಿ

ಮತ್ತೊಂದು ಆಧುನಿಕ ರಚನೆಯೆಂದರೆ ಜಾಲ. ಉದ್ಯಮ ದೈತ್ಯರ ಅಪಾಯವು ಪೂರ್ವಭಾವಿ ನಿಯಂತ್ರಣ ತೆಗೆದುಕೊಳ್ಳಲು ತೀರಾ ಕ್ರಮಗೆಟ್ಟಿದ್ದರೆ(ಉದಾಹರಣೆಗೆ)ದಕ್ಷತೆಯಿಂದ ಕ್ರಿಯೆ ಮತ್ತು ಪ್ರತಿಕ್ರಿಯೆ [೧೨], ಹೊಸ ಜಾಲದ ಸಂಸ್ಥೆಗಳು ಉತ್ತಮವಾಗಿ ಅಥವಾ ಹೆಚ್ಚು ಅಗ್ಗದಲ್ಲಿ ಮಾಡಬಹುದಾದ ಯಾವುದೇ ವ್ಯವಹಾರ ಕಾರ್ಯದ ಗುತ್ತಿಗೆ ಪಡೆಯುತ್ತವೆ. ಜಾಲದ ರಚನೆಗಳ ವ್ಯವಸ್ಥಾಪಕರು ಅವರ ಹೆಚ್ಚಿನ ಸಮಯವನ್ನು ಸಾಮಾನ್ಯವಾಗಿ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿಕೊಂಡು ಹೊರಗಿನ ಸಂಬಂಧಗಳ ಸುಸಂಘಟನೆಗೆ ಮತ್ತು ನಿಯಂತ್ರಣಕ್ಕೆ ಕಳೆಯುತ್ತಾರೆ. H&M ಅದರ ಬಟ್ಟೆಯನ್ನು 700 ಪೂರೈಕೆದಾರರ ಜಾಲಕ್ಕೆ ಹೊರಗುತ್ತಿಗೆ ನೀಡುತ್ತದೆ. ಅವುಗಳಲ್ಲಿ ಮೂರನೇ ಎರಡಕ್ಕಿಂತಲೂ ಹೆಚ್ಚಿನವು ಕಡಿಮೆ-ದರದ ಏಷ್ಯಾದ ರಾಷ್ಟ್ರಗಳಲ್ಲಿ ನೆಲೆಗೊಂಡಿವೆ. ಯಾವುದೇ ಸಂಸ್ಥೆಗಳನ್ನು ಸ್ವಂತವಾಗಿ ಹೊಂದಿಲ್ಲದ H&M, ಅದರ ಕಡಿಮೆ-ಖರ್ಚಿನ ಕಾರ್ಯತಂತ್ರಕ್ಕೆ ಹೊಂದಿಕೊಂಡು, ದರಗಳನ್ನು ಕಡಿಮೆ ಮಾಡುವುದರಲ್ಲಿ ಅನೇಕ ಇತರ ಚಿಲ್ಲರೆ-ವ್ಯಾಪಾರಿಗಳಿಗಿಂತ ಹೆಚ್ಚು ನಮ್ಯತೆ ತೋರುತ್ತದೆ[೧೩]. ಸಂಕೀರ್ಣ ಜಾಲ ಸಿದ್ಧಾಂತದಲ್ಲಿ ಇತ್ತೀಚಿನ ಸುಧಾರಣೆಗಳು ಪ್ರಸ್ತಾಪಿಸಿರುವ ಸಂಭಾವ್ಯ ವ್ಯವಸ್ಥಾಪನೆ ಅವಕಾಶಗಳನ್ನು ಪ್ರದರ್ಶಿಸಲಾಗಿದೆ[೧೪]. ಇದು ಉತ್ಪನ್ನದ ವಿನ್ಯಾಸ ಮತ್ತು ಅಭಿವೃದ್ಧಿಯ ಅನ್ವಯಗಳನ್ನು[೧೫] ಹಾಗೂ ಮಾರುಕಟ್ಟೆ ಮತ್ತು ಉದ್ಯಮಗಳಲ್ಲಿನ ಹೊಸ ಮಾರ್ಪಾಟುಗಳ ಸಮಸ್ಯೆಗಳನ್ನು ಒಳಗೊಂಡಿವೆ.[೧೬]

ವಾಸ್ತವಪ್ರಾಯ

ಬದಲಾಯಿಸಿ

ಸೀಮೆಯಿಲ್ಲದ ಸಂಸ್ಥೆಯ ವಿಶೇಷ ರೂಪವೆಂದರೆ ವಾಸ್ತವಪ್ರಾಯ . ಇದು ಇಂಟರ್ನೆಟ್ಅನ್ನು ಬಳಸಿಕೊಂಡು ಹೊರಗಿನ ಸಂಬಂಧಗಳ ಜಾಲದಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಸ್ಥೆಯ ಆಂತರಿಕ ರಚನೆಯು ಸಣ್ಣದಾಗಿದ್ದರೂ, ಅದು ಅದರ ನೆಲೆಯಲ್ಲಿ ಮಾರುಕಟ್ಟೆ ಮುಖಂಡನಾಗಿ ಜಾಗತಿಕವಾಗಿ ಕೆಲಸ ಮಾಡಬಹುದು. ಆಂಡರ್ಸನ್‌ನ ಪ್ರಕಾರ, ವೆಬ್‌ನ ಅಪರಿಮಿತ ಜಾಗದಿಂದಾಗಿ ಸ್ಥಾಪಿತವಾದ ಸರಕುಗಳನ್ನು ತಲುಪಿಸುವ ದರವು ಏಕಾಏಕಿಯಾಗಿ ಕಡಿಮೆಯಾಗುತ್ತಿದೆ. ಯಾರೂ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡದಿದ್ದರೂ, ಒಟ್ಟಾರೆಯಾಗಿ ಗಮನಾರ್ಹ ಲಾಭವನ್ನು ನೀಡುವ ಅನೇಕ ಸ್ಥಾಪಿತವಾದ-ಉತ್ಪನ್ನಗಳಿವೆ ಹಾಗೂ ಅದರಿಂದ ಹೆಚ್ಚು ಹೊಸತನ ತರುವ Amazon.com ಅಧಿಕ ಯಶಸ್ವಿಯಾಗಿದೆ[೧೭].

ಇವನ್ನೂ ಗಮನಿಸಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. ಬರ್ನ್ಸ್, T. ಮತ್ತು G. ಸ್ಟಾಕರ್. (1961) ದ ಮ್ಯಾನೇಜ್ಮೆಂಟ್ ಆಫ್ ಇನೋವೇಶನ್. ಲಂಡನ್: ಟ್ಯಾವಿಸ್ಟಾಕ್.
  2. ಗ್ರೆ C., ಗ್ಯಾರ್ಸ್ಟನ್ C., 2001, ಟ್ರಸ್ಟ್, ಕಂಟ್ರೋಲ್ ಆಂಡ್ ಪೋಸ್ಟ್-ಬ್ಯೂರೊಕ್ರೆಸಿ, ಸೇಜ್ ಪಬ್ಲಿಷಿಂಗ್)
  3. ೩.೦ ೩.೧ ಹೆಕ್ಸ್‌ಚರ್ C. (ಸಂಪಾದಕ), ಡಾನೆಲ್ಲನ್ A. (ಸಂಪಾದಕ), 1994, ದ ಪೋಸ್ಟ್-ಬ್ಯೂರೋಟಿಕ್ ಆರ್ಗನೈಸೇಶನ್: ನ್ಯೂ ಪರ್ಸ್ಪೆಕ್ಟಿವ್ಸ್ ಆನ್ ಆರ್ಗನೈಸೇಶನಲ್ ಚೇಂಜ್, ಸೇಜ್ ಪಬ್ಲಿಕೇಶನ್ಸ್
  4. ನಿಕೋಲಜ್ ಸಿಗ್ಲೆಕೊ ಆಂಡ್ ಜಾನ್ W. ರಿವ್ಕಿನ್, ಅಕ್ಟೋಬರ್ 2003, ಸ್ಪೀಡ್, ಸರ್ಚ್ ಆಂಡ್ ದ ಫೈಲ್ಯೂರ್ ಆಫ್ ಸಿಂಪಲ್ ಕಾಂಟಿಂಜೆನ್ಸಿ, ಸಂ. 04-019
  5. ರಿಪೆನ್ನಿಂಗ್, N. (2002). ಎ ಸಿಮ್ಯುಲೇಶನ್-ಬೇಸ್ಡ್ ಎಪ್ರೂಚ್ ಟು ಅಂಡರ್‌ಸ್ಟ್ಯಾಂಡಿಂಗ್ ದ ಡೈನಮಿಕ್ಸ್ ಆಫ್ ಇನೋವೇಶನ್ ಇಂಪ್ಲಿಮೆಂಟೇಶನ್. ಆರ್ಗನೈಸೇಶನ್ ಸೈನ್ಸ್, 13, 2: 109-127.
  6. ಗ್ರ್ಯಾಂಟ್, R.M. (2008). ಹಿಸ್ಟರಿ ಆಫ್ ದ ರಾಯಲ್ ಡಚ್/ಶೆಲ್ ಗ್ರೂಪ್. ಇಲ್ಲಿ ಲಭ್ಯವಿದೆ: https://web.archive.org/web/20110124102500/http://www.blackwellpublishing.com/grant/docs/07Shell.pdf (20/10/08 ರಲ್ಲಿ ಸಂಕಲನಗೊಂಡಿದೆ)
  7. (Starbucks.com (2008). ಸ್ಟಾರ್‌ಬಕ್ಸ್ ಕಾಫೀ ಇಂಟರ್‌ನ್ಯಾಷನಲ್. ಇಲ್ಲಿ ಲಭ್ಯವಿದೆ: http://www.starbucks.com/aboutus/international.asp Archived 2016-07-04 ವೇಬ್ಯಾಕ್ ಮೆಷಿನ್ ನಲ್ಲಿ. (20/10/08ರಲ್ಲಿ ಸಂಕಲನಗೊಂಡಿದೆ))
  8. ೮.೦ ೮.೧ ರಾಬಿನ್ಸ್, S.F., ಜಡ್ಜ್, T.A. (2007). ಆರ್ಗನೈಸೇಶನಲ್ ಬಿಹೇವಿಯರ್, 12ನೇ ಆವೃತ್ತಿ. ಪಿಯರ್ಸನ್ ಎಜುಕೇಶನ್ ಇಂಕ್., ಪುಟ 551-557.
  9. ಗ್ರ್ಯೂಟನ್, L. (2004). ದ ಡೆಮೋಕ್ರಟಿಕ್ ಎಂಟರ್‌ಪ್ರೈಸ್, ಫೈನಾನ್ಶಿಯಲ್ ಟೈಮ್ಸ್ ಪ್ರಿಂಟೈಸ್ ಹಾಲ್, ಪುಟ xii-xiv.
  10. ಥರೇಜ P(2008), "ಟೋಟಲ್ ಕ್ವಾಲಿಟಿ ಆರ್ಗನೈಸೇಶನ್ ಥ್ರೂ ಪೀಪಲ್ (ಪಾರ್ಟ್ 16), ಈಚ್ ಒನ್ ಈಸ್ ಕೇಪೇಬಲ್",FOUNDRY, ಸಂಪುಟ XX, ಸಂ 4, ಜುಲೈ/ಆಗಸ್ಟ್ 2008
  11. (ಥರೇಜ P(2007). ಎ ಟೋಟಲ್ ಕ್ವಾಲಿಟಿ ಆರ್ಗನೈಸೇಶನ್ ಥ್ರೂ ಪೀಪಲ್ ಈಚ್ ಒನ್ ಈಸ್ ಕೇಪೇಬಲ್. ಇಲ್ಲಿ ಲಭ್ಯವಿದೆ: http://www.foundry-planet.com
  12. ಗಮ್ಮೆಸ್ಸನ್, E. (2002). ಟೋಟಲ್ ಮಾರ್ಕೆಟಿಂಗ್ ಕಂಟ್ರೋಲ್. ಬಟ್ಟರ್‌ವರ್ತ್-ಹೈನ್‌ಮ್ಯಾನ್, ಪುಟ 266.
  13. ಕ್ಯಾಪೆಲ್, K. H&M ಡೆಫೀಸ್ ರಿಟೈಲ್ ಗ್ಲೂಮ್. ಇಲ್ಲಿ ಲಭ್ಯವಿದೆ: http://www.businessweek.com/globalbiz/content/sep2008/gb2008093_150758.htm (20/10/08ರಲ್ಲಿ ಸಂಕಲನಗೊಂಡಿದೆ).
  14. ಅಮರಲ್, L.A.N. ಮತ್ತು B. ಉಜ್ಜಿ. (2007) ಕಾಂಪ್ಲೆಕ್ಸ್ ಸಿಸ್ಟಮ್ಸ್—ಎ ನ್ಯೂ ಪ್ಯಾರಡಿಮ್ ಫಾರ್ ದ ಇಂಟೆಗ್ರೇಟಿವ್ ಸ್ಟಡಿ ಆಫ್ ಮ್ಯಾನೇಜ್ಮೆಂಟ್, ಫಿಸಿಕಲ್ ಆಂಡ್ ಟೆಕ್ನಲಾಜಿಕಲ್ ಸಿಸ್ಟಮ್ಸ್. ಮ್ಯಾನೇಜ್ಮೆಂಟ್ ಸೈನ್ಸ್, 53, 7: 1033–1035.
  15. ಬ್ರ್ಯಾಹ, D. ಮತ್ತು Y. ಬಾರ್-ಯಾಮ್. (2007) ದ ಸ್ಟಟಿಸ್ಟಿಕಲ್ ಮೆಕ್ಯಾನಿಕ್ಸ್ ಆಫ್ ಕಾಂಪ್ಲೆಕ್ಸ್ ಪ್ರೋಡಕ್ಟ್ ಡೆವಲಪ್ಮೆಂಟ್: ಎಂಪಿರಿಕಲ್ ಆಂಡ್ ಅನಾಲಿಟಿಕಲ್ ರಿಸಲ್ಟ್ಸ್. ಮ್ಯಾನೇಜ್ಮೆಂಟ್ ಸೈನ್ಸ್, 53, 7: 1127–1145.
  16. ಕೋಗಟ್, B., P. ಉರ್ಸೊ ಮತ್ತು G. ವಾಕರ್. (2007) ಎಮರ್ಜೆಂಟ್ ಪ್ರೋಪರ್ಟೀಸ್ ಆಫ್ ಎ ನ್ಯೂ ಫೈನಾನ್ಶಿಯಲ್ ಮಾರ್ಕೆಟ್: ಅಮೆರಿಕನ್ ವೆಂಚರ್ ಕ್ಯಾಪಿಟಲ್ ಸಿಂಡಿಕೇಶನ್, 1960–2005. ಮ್ಯಾನೇಜ್ಮೆಂಟ್ ಸೈನ್ಸ್, 53, 7: 1181-1198.
  17. ಆಂಡರ್ಸನ್, C. (2007). ದ ಲಾಂಗ್ ಟೈಲ್. ರ್ಯಾಂಡಮ್ ಹೌಸ್ ಬ್ಯುಸಿನೆಸ್ ಬುಕ್ಸ್, ಪುಟಗಳು 23, 53.