ಸಲೀಂ ಅಲಿ ಪಕ್ಷಿಧಾಮ
ಸಲೀಂ ಅಲಿ ಪಕ್ಷಿಧಾಮವು ನದೀಮುಖದಲ್ಲಿ ಬೆಳೆಯುವ ಮ್ಯಾಂಗ್ರೋವ್ ಸಸ್ಯಗಳ ಆವಾಸಸ್ಥಾನವಾಗಿದೆ. ಇದನ್ನು ಪಕ್ಷಿಧಾಮ ಎಂದು ಘೋಷಿಸಲಾಗಿದೆ. ಇದು ಭಾರತದ ಗೋವಾದ ಮಾಂಡೋವಿ ನದಿಯ ಉದ್ದಕ್ಕೆ, ಚೋರೊ ದ್ವೀಪದ ಪಶ್ಚಿಮ ತುದಿಯಲ್ಲಿದೆ. ಈ ಅಭಯಾರಣ್ಯಕ್ಕೆ ಭಾರತದ ಪ್ರಖ್ಯಾತ ಪಕ್ಷಿಶಾಸ್ತ್ರಜ್ಞ ಸಲೀಂ ಅಲಿ ಅವರ ಹೆಸರನ್ನು ಇಡಲಾಗಿದೆ.
ಸಲೀಂ ಅಲಿ ಪಕ್ಷಿಧಾಮ | |
---|---|
ಡಾ. ಸಲೀಂ ಅಲಿ ಪಕ್ಷಿಧಾಮ | |
ಸ್ಥಳ | ಚೋರಾ, ಗೋವಾ, ಭಾರತ |
ಹತ್ತಿರದ ನಗರ | ಪಣಜಿ |
ನಿರ್ದೇಶಾಂಕಗಳು | 15°30′53″N 73°51′27″E / 15.5146°N 73.8575°E |
ಪ್ರದೇಶ | 178 ha (440 acres) |
ಸ್ಥಾಪನೆ | ೧೯೮೮ |
ಅಭಯಾರಣ್ಯ ಮತ್ತು ದ್ವೀಪವನ್ನು ರಿಬಾಂಡರ್ ಮತ್ತು ಚೋರೊ ನಡುವೆ ದೋಣಿಯ ಮೂಲಕ ಸಾಗಿ ಪ್ರವೇಶಿಸಬಹುದು. ಅಭಯಾರಣ್ಯವು, ರೈಜೋಫೊರಾ ಮಕ್ರೋನಾಟಾ, ಅವಿಸೆನಿಯಾ ಅಫಿಷಿನಾಲಿಸ್ ಮತ್ತು ಇತರ ಜಾತಿಗಳ ಮ್ಯಾಂಗ್ರೋವ್‌ಗಳನ್ನು ಹೊಂದಿದೆ.
ವಿವರಣೆ
ಬದಲಾಯಿಸಿಅಭಯಾರಣ್ಯದ ಗಾತ್ರ 178 ha (440 acres) . ಈ ಪ್ರದೇಶವು ಮ್ಯಾಂಗ್ರೋವ್ ಅರಣ್ಯದಿಂದ ಆವೃತವಾಗಿದೆ.
ಸಸ್ಯ ಮತ್ತು ಪ್ರಾಣಿ
ಬದಲಾಯಿಸಿಹಲವಾರು ಜಾತಿಯ ಪಕ್ಷಿಗಳನ್ನು ಇಲ್ಲಿ ಕಾಣಬಹುದು. ಅವುಗಳಲ್ಲಿ ಸಾಮಾನ್ಯವಾದವು, ಸ್ಟ್ರೈಟೆಡ್ ಹೆರಾನ್ ಮತ್ತು ವೆಸ್ಟರ್ನ್ ರೀಫ್ ಹೆರಾನ್ . ರೆಕಾರ್ಡ್ ಮಾಡಲಾದ ಇತರ ಜಾತಿಯ ಪಕ್ಷಿಗಳಲ್ಲಿ ಜ್ಯಾಕ್ ಸ್ನೈಪ್ ಮತ್ತು ಪೈಡ್ ಆವಸೆಟ್ (ಅಸ್ಥಿರ ಮರಳಿನ ದಂಡೆಗಳಲ್ಲಿ) ಸೇರಿವೆ. [೧] ಅಭಯಾರಣ್ಯವು ಮಡ್‌ಸ್ಕಿಪ್ಪರ್‌ಗಳು, ಫಿಡ್ಲರ್ ಏಡಿಗಳು ಮತ್ತು ಇತರ ಮ್ಯಾಂಗ್ರೋವ್ ಆವಾಸಸ್ಥಾನದ ಜೀವಿಗಳಿಗೆ ಆತಿಥ್ಯ ವಹಿಸುತ್ತದೆ. ಅಭಯಾರಣ್ಯದಲ್ಲಿ ಪಡೆದ ಮಾದರಿಗಳ ಆಧಾರದ ಮೇಲೆ ಕಠಿಣಚರ್ಮಿ ಟೆಲಿಯೊಟಾನೈಸ್ ಇಂಡಿಯಾನಿಸ್‌ನ ಜಾತಿಯ ಜೀವಿಯನ್ನೂ ಇಲ್ಲಿ ಕಾಣಬಹುದಾಗಿದೆ. [೨]
ಮಾಧ್ಯಮ
ಬದಲಾಯಿಸಿ-
ಅನ್-ಐಡಿಡ್ ಏಡಿ
-
ಪಿಂಗಾಣಿ ಫಿಡ್ಲರ್
-
ಮಡ್ಸ್ಕಿಪ್ಪರ್
-
ಅನ್-ಐಡಿಡ್ ಏಡಿ
-
ರೈಜೋಫೊರಾ ಮಕ್ರೋನಾಟಾ ಹಣ್ಣು
-
ರೈಜೋಫೊರಾ ಮಕ್ರೋನಾಟಾ ಎಲೆಗಳು
ಸಹ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Borges, S.D. & A.B.Shanbhag (2007). "Additions to the avifauna of Goa, India". Journal of the Bombay Natural History Society. 104 (1): 98–101.
- ↑ Larsen, Kim; Gobardhan Sahoo; Zakir Ali Ansari (2013). "Description of a new mangrove root dwelling species of Teleotanais (Crustacea: Peracarida: Tanaidacea) from India, with a key to Teleotanaidae" (PDF). Species Diversity. 18: 237–243.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಗೋವಾ ಸೆಂಟ್ರಲ್ Archived 2018-12-18 ವೇಬ್ಯಾಕ್ ಮೆಷಿನ್ ನಲ್ಲಿ.
- ಗೋವಾ ರಜೆ ಮಾರ್ಗದರ್ಶಿ
- ಗೋವಾ ಪ್ರವಾಸೋದ್ಯಮ Archived 2021-05-06 ವೇಬ್ಯಾಕ್ ಮೆಷಿನ್ ನಲ್ಲಿ.