ಸರಸ್ವತಿದೇವಿ ಗೌಡರ್

ಸರಸ್ವತಿದೇವಿ ಗೌಡ ಬದಲಾಯಿಸಿ

ಸರಸ್ವತಿದೇವಿ ಗೌಡರ ಇವರು ೧೯೨೩ರಲ್ಲಿ ಬೆಳಗಾವಿ ಜಿಲ್ಲೆಯ ತಿಗಡಿ ಗ್ರಾಮ ಸಂಪಗಾವಿಯಲ್ಲಿ ೨೮-೨-೧೯೩೨ ರಲ್ಲಿ ಜನಿಸಿದರು. ಚಿಕ್ಕಂದಿನಿಂದಲೂ ಸಾಹಿತ್ಯಿಕ ಹಾಗು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಉತ್ತರ ಕರ್ನಾಟಕವನ್ನು ಪ್ರತಿನಿಧಿಸುವ ಲೇಖಕರಲ್ಲಿ ಇವರೂ ಸಹ ಒಬ್ಬರು. ಸ್ತ್ರೀಪರ ಕಾಳಜಿಯಿಂದ ಸಾಹಿತ್ಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡವರು. ಇವರ ತಂದೆ ಪದವೀಧರರಾಗಿದ್ದು, ಮುಂಬಯಿ ಪ್ರಾಂತ್ಯದ ಆಡಳಿತಗಾರರಾಗಿದ್ದರು. ಹಾಗಾಗಿ ಸರಸ್ವತಿಯವರು ಪ್ರಾಥಮಿಕ ಶಿಕ್ಷಣವನ್ನು ಬೆಳಗಾವಿಯ ಹೆಣ್ಣುಮಕ್ಕಳ ಶಾಲೆಯಲ್ಲಿ ಮುಗಿಸಿದರು. ಪ್ರೌಢ ಶಿಕ್ಷಣ ಆಗ ಲಭ್ಯವಿರದಿದ್ದ ಕಾರಣ ಮನೆಯಲ್ಲೇ ಕುಳಿತು ಪುಸ್ತಕಗಳನ್ನು ಓದುವುದರ ಮೂಲಕ ತಮ್ಮ ಜ್ಞಾನವನ್ನು ವರ್ಧಿಸಿಕೊಂಡರು. ಕನ್ನಡ ಜಾಣ ಪಈಕ್ಷೆಗೆ ಕುಳಿತು ಉತ್ತೀರ್ಣರಾದರಲ್ಲದೇ, ಹಿಂದಿ ರಾಷ್ಟ್ರಭಾಷಾ ವಿಶಾರದೆ ಕೂಡ ಆದರು. ಜೊತೆಗೆ ಆಂಗ್ಲ ಭಾಷೆಯನ್ನು ಕಲಿತರು. ೧೯೪೨ರಲ್ಲಿ ಇವರ ವಿವಾಹ ಸದಾಶಿವಪ್ಪ ಗೌಡರ ಜೊತೆ ನಡೆಯಿತು. ವಿವಾಹವಾದ ಒಂದೇ ವರ್ಷದಲ್ಲಿ ಅವರು ತಮ್ಮ ಮೊದಲ ಸಣ್ಣ ಕತೆ ಬರೆದು ಸಾಹಿತ್ಯ ಲೋಕ ಪ್ರವೇಶಿಸಿದರು. ಸಂಸಾರದ ಜವಾಬ್ದಾರಿಯೊಡನೆ ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿ ಕೊಂಡರು. ತಮ್ಮ ಕಲಿಯುವ ಹಂಬಲವನ್ನು ಎಂದೂ ಬಿಡದ ಇವರು ಅರವತ್ತರ ದಶಕದಲ್ಲಿ ಶಿವಾನುಭವ ಪರೀಕ್ಷೆಯನ್ನು ಪಡೆದು ಅದರಲ್ಲಿ ಮೊದಲ ಸ್ಥಾನ ಪಡೆದು ಬೆಳ್ಳಿ ಪದಕವನ್ನೂ ಪಡೆಯುತ್ತಾರೆ.

ಸರಸ್ವತಿದೇವಿ ಗೌಡರ ಕೃತಿಗಳು ಬದಲಾಯಿಸಿ

ಕಥಾ ಸಂಕಲನಗಳು ಬದಲಾಯಿಸಿ

  • ಅಲ್ಪವಿರಾಮ
  • ಪುಣ್ಯಸ್ಮೃತಿ
  • ಗೆಳತಿಗೆ ಓಲೆಗಳು
  • ಜೀವದ ಬಲೆ
  • ರಾಯರು ದಾರಿಗೆ ಬಂದರು

ಕಾವ್ಯಗಳು ಬದಲಾಯಿಸಿ

  • ಅಕ್ಕಮಹಾದೇವಿ(೧೯೬೯)
  • ಅಭೀಷ್ಟ ಚಿಂತನ(೧೯೬೫)
  • ಉದಯವಾಯಿತು ಇಂದು ಕರ್ನಾಟಕ ರಾಜ್ಯ(೧೯೭೨)
  • ಉಳಿವೆಗೆ ಬನ್ನಿ (೯೬೮)
  • ಏಳು ಸುಪುತ್ರ ಎದ್ದೇಳು (೧೯೬೩)
  • ಒಸಗೆ ನುಡಿ(೧೯೬೨)
  • ಕರುನಾಡ ಸತ್ಪುತ್ರ(೧೯೭೩)
  • ಕಾಯ್ದು ಕರುಣಿಸಲಿ ಕರುಣಾಳು ದೇವರು(೧೯೭೩)
  • ಚಂದ್ರಬಿಂಬ(೧೯೬೯)
  • ಜಗದಣ್ಣ ಬಸವಣ್ಣ (೧೯೬೬)
  • ತಾಯೆ ನಿನಗೆ ಶರಣು(೧೯೬೯)
  • ಬನ್ನಿರಿ ಹದುಳವಿರಲಿ(೧೯೬೭)
  • ಬನ್ನಿರಮ್ಮ, ಬನ್ನಿ ತಾಯಿ(೧೯೫೯)
  • ಮರೆತಿಲ್ಲ ತಾಯಿ(೧೯೬೯)
  • ವಿಷನುಂಗಿ ಬದುಕಬೇಕು(೧೯೭೧)
  • ಶರಣು ತಾಯಿ ಭಾರತಿ(೧೯೭೨)
  • ಶರಣು ಗಂಗಾಂಬೆ(೧೯೬೧)
  • ಶ್ರದ್ಧಾಂಜಲಿ(೧೯೬೫)
  • ಸ್ವಾಗತ ಪದ()
  • ಸಿರಿಮುಡಿಗೆ(೧೯೬೯)
  • ಹರಿಸು ನೀನು ಕರುಣಾಳು(೧೯೬೫)

ನಾಟಕಗಳು ಬದಲಾಯಿಸಿ

  • ಆಯ್ದಕ್ಕಿ ಲಕ್ಕಮ್ಮ
  • ಕನ್ನಡ ನಾಡಿನ ಮಹಿಳಾ ಪರಂಪರೆ
  • ಕಲ್ಯಾಣದ ಒಂದು ರೂಪಕ*
  • ಕೂಡಲ ಸಂಗಮ
  • ಧರ್ಮಸಂಕಟ
  • ನೀಲಾಂಬಿಕೆ
  • ಮೋಳಿಗೆಯ ಮಾರಯ್ಯ
  • ಉಡುಗೊರೆ
  • ಕಳೆದ ಗಡಿಯಾರ
  • ಕಲ್ಯಾಣದ ಕೊನೆಗಾಲ
  • ಕೆಳದಿಯ ಚನ್ನಮ್ಮಾಜಿ
  • ನಾಲಗೆಯ ಬೆಲೆ
  • ಮಲ್ಲಸರ್ಜ

ಜೀವನ ಚರಿತ್ರೆಗಳು ಬದಲಾಯಿಸಿ

  • ಭಾರತದ ವೀರಮಹಿಳೆಯರು
  • ಭಾರತದ ಜೈನ ವೀರ ಮಹಿಳೆಯರು
  • ಶಿವಶರಣೆಯರ ಚರಿತ್ರೆಗಳ ಸಂಗ್ರಹ

ಇತರೆ ಬದಲಾಯಿಸಿ

  • ಹಿಂದೂ ಕಾಯಿದೆ ಮತ್ತು ಸ್ತ್ರೀಧನ
  • ಮಹಿಳಾ ಜೀವನದ ಸಮಸ್ಯೆಗಳು ಮತ್ತು ಪರಿಹಾರ

ಗೌರವ ಪುರಸ್ಕಾರಗಳು ಬದಲಾಯಿಸಿ

  • ಅಖಿಲ ಭಾರತ ಅಕ್ಕನ ಬಳಗದ ಸಂಸ್ಥಾಪಕಿ ಮತ್ತು ಕಾರ್ಯದರ್ಶಿ
  • ಧಾರವಾಡ ಜಿಲ್ಲೆಯ ಮಹಿಳಾ ಮಂಡಲದ ಉಪಾಧ್ಯಕ್ಷೆ
  • ರಿಮ್ಯಾಂಡ್ ಹೋಮ್ ನ ಸಲಹೆಗಾರರು
  • ಕೆ.ಇ.ಬೋರ್ಡ್ ನ ಪ್ರೌಢಶಾಲಾ ಬೋರ್ಡ್ ನ ಸದಸ್ಯರು
  • ೧೯೪೪ರಲ್ಲಿ ಧಾರವಾಡ ಜಿಲ್ಲಾ ಮಹಿಳಾ ಪರಿಷತ್ತಿನ ಅಧ್ಯಕ್ಷತೆ,
  • ೧೯೫೫ರಲ್ಲಿ ಅಖಿಲ ಭಾರತ ಶಿವಾನುಭವ ಸಮ್ಮೇಳನದ ಮಹಿಳಾ ಗೋಷ್ಟಿಯ ಅಧ್ಯಕ್ಷತೆ,
  • ಮಹಿಳಾ ಜೀವನದ ಸಮಸ್ಯೆಗಳು ಮತ್ತು ಪರಿಹಾರ ಕೃತಿಗೆ ರಾಜ್ಯ ಸರಕಾರದ ಬಹುಮಾನ ಇವರಿಗೆ ಸಂದ ಗೌರವವಾಗಿದೆ.