ಸಯಾಮಿ ಅವಳಿಗಳು ಅಥವಾ ಸಂಯೋಜಿತ ಅವಳಿಗಳು ಗರ್ಭದಿಂದಲೇ ಶರೀರವನ್ನು ಜೋಡಿಸಿಕೊಂಡು ಹುಟ್ಟುವ ತದ್ವತ್ತಾದ ಅವಳಿ ಜೀವಗಳು.

ಸಯಾಮಿ ಅವಳಿಗಳಾದ ಚಾಂಗ್ ಮತ್ತು ಯಾಂಗ್

ಸುಮಾರು ೫೦,೦೦೦ ದಿಂದ ೨,೦೦,೦೦೦ ದ ವರೆಗಿನ ಜನನ ಕ್ರಿಯೆಯಲ್ಲಿ ಒಂದು ಸಯಾಮಿ ಅವಳಿಗಳು ಜನಿಸುವ ಸಂಭವನೀಯತೆ ಇದೆಯೆಂದು ಅಂದಾಜಿಸಲಾಗುತ್ತದೆ.[] ಸಾಮಾನ್ಯವಾಗಿ ಹುಟ್ಟುವಾಗಲೇ ಈ ಅವಳಿಗಳ ದೇಹ ಒಂದಕ್ಕೊಂದು ಬೆಸೆದುಕೊಂಡಿರುತ್ತದೆ ಮತ್ತು ತದ್ರೂಪವಾಗಿರುತ್ತವೆ. ಏಷ್ಯಾ ಖಂಡ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಈ ಅವಳಿಗಳನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಸಯಾಮಿಗಳ ಪೈಕಿ ಮೃತ ಶಿಶುಗಳೇ ಹುಟ್ಟುವದು ಹೆಚ್ಚು. ಏಕೆಂದರೆ ಕೇವಲ ಪ್ರತಿಶತ ೨೫ ರಷ್ಟು ಮಾತ್ರ ಇಂಥ ಅವಳಿಗಳು ತಮ್ಮ ಜನನ ಸಮಯದಲ್ಲಿ ಬದುಕುಳಿಯುವ ಸಂಭವವಿದೆ. ವೈದ್ಯಕೀಯ ಜಗತ್ತಿನಲ್ಲಿ ಈ ರೀತಿಯ ಜನಿಸುವಿಕೆಗೆ ನಾನಾ ಕಾರಣಗಳಿವೆಯಾದರೂ ಫಲಶೃತಿಗೊಂಡ ಅಂಡಾಣುವಿನ ವಿಭಜನೆಯೇ ಮುಖ್ಯ ಕಾರಣವೆಂದು ಹೇಳಲಾಗುತ್ತದೆ. ಹೀಗಾಗಿ ಸಯಾಮಿ ಅವಳಿಗಳು ಒಂದೇ ಜಾತಿಯ (ಲಿಂಗ) ಶಿಶುಗಳು ಜನಿಸುವದನ್ನು ಕಾಣಬಹುದಾಗಿದೆ. ಆದರೆ ಹುಟ್ಟಿದ ನಂತರ ಬದುಕುಳಿಯುವ ಈ ಅವಳಿಗಳು ಜೀವನಪರ್ಯಂತ ಜೊತೆ ಜೊತೆಯಾಗಿಯೇ ಜೀವಿಸಬೇಕಾಗುತ್ತದೆಯಾದರೂ ಈಗೀಗ ಇಂಥ ಜೀವಿಗಳನ್ನು ಶಸ್ತ್ರಕ್ರಿಯೆ ಮೂಲಕ ಬೇರ್ಪಡಿಸಬಹುದಾಗಿದೆ.

ಸ್ವಾರಸ್ಯಕರ ಮಾಹಿತಿ

ಬದಲಾಯಿಸಿ

ಥೈಲ್ಯಾಂಡ್ಚಾಂಗ್ ಮತ್ತು ಯಾಂಗ್ ಸಹೋದರರು ಇದುವರೆಗಿನ ಸುಪ್ರಸಿದ್ದ ಸಯಾಮಿ ಅವಳಿಗಳಾಗಿದ್ದಾರೆ. ಇವರುಗಳು ಬದುಕಿದ್ದ ಸಮಯ(೧೮೧೧-೧೮೭೪)ದಲ್ಲಿ ಥೈಲ್ಯಾಂಡ್ನ್ನು ಸಿಯಾಮ್ ಎಂದು ಗುರುತಿಸಲಾಗುತ್ತಿದ್ದರಿಂದ ಈ ಅವಳಿಗಳನ್ನು ಸಿಯಾಮಿ ಅವಳಿ ಅಥವಾ ಸಯಾಮಿ ಅವಳಿಗಳೆಂದೇ ಕರೆಯುತ್ತಿದ್ದರು. ಸರ್ಕಸ್ ಕಂಪೆನಿಯೊಂದರಲ್ಲಿ ಪ್ರದರ್ಶನ ಜೀವಿಗಳಾಗಿ ಕೆಲಸಕ್ಕಿದ್ದ ಚಾಂಗ್ ಮತ್ತು ಯಾಂಗ್ ರನ್ನು ವೀಕ್ಷಿಸಲು ಜನಸ್ತೋಮ ದಾಂಗುಡಿಯಿಡುತ್ತಿತ್ತು. ಜನ್ಮತಃ ಅಂಗವೈಕಲ್ಯವನ್ನು ಮೀರಿ ನಿಂತ ಈ ಜೋಡಿಗಳ ಮನೋಸ್ಥೈರ್ಯ ಎಂಥವರಲ್ಲೂ ಆತ್ಮವಿಶ್ವಾಸವನ್ನು ತುಂಬಬಲ್ಲದು.

ಉಲ್ಲೇಖಗಳು

ಬದಲಾಯಿಸಿ

ಬಾಹ್ಯ ಸಂಪರ್ಕಗಳು

ಬದಲಾಯಿಸಿ