ಸಬಾ ಅಂಜುಮ್ (ಜನನ ೧೨ ಜೂನ್ ೧೯೮೫)ಅವರು ಭಾರತೀಯ ಮಹಿಳಾ ಹಾಕಿ ತಂಡದ ಮಾಜಿ ಆಟಗಾರ್ತಿಯಾಗಿದ್ದಾರೆ. ೨೦೦೨ ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹಾಕಿ ಸ್ಪರ್ಧೆಯಲ್ಲಿ ಭಾಗವಹಿಸಿದವರಲ್ಲಿ ಇವರು ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದರು. ಇವರು ದುರ್ಗದ ಕೆಲಬಾಡಿ ಮೂಲದವರು. []

ಸಬಾ ಅಂಜುಮ್
Personal information
ಜನನ (1985-06-12) ೧೨ ಜೂನ್ ೧೯೮೫ (ವಯಸ್ಸು ೩೯)
ದುರ್ಗ, ಛತ್ತೀಸ್‍ಗಢ
Playing position Forward
ರಾಷ್ಟ್ರೀಯ ತಂಡ
2000–present India 200 (92)

ಕ್ರೀಡಾ ಇತಿಹಾಸ

ಬದಲಾಯಿಸಿ

ಅವರು ೨೦೦೦ ನೇ ಇಸವಿಯಲ್ಲಿ ಮೊದಲ ಬಾರಿ ಭಾರತಕ್ಕಾಗಿ ೧೮ ವರ್ಷದೊಳಗಿನವರ AHF ಕಪ್‌ನಲ್ಲಿ ಆಡಿದ್ದರು. ೨೦೦೧ ಮೇ ನಲ್ಲಿ ಜೂನಿಯರ್ ವಿಶ್ವಕಪ್, ಅಕ್ಟೋಬರ್ ೨೦೦೨ ರಲ್ಲಿ [ಏಷ್ಯನ್ ಕ್ರೀಡಾಕೂಟ|ಏಷ್ಯನ್ ಗೇಮ್ಸ್]] ,೨೦೦೪ರ ಫೆಬ್ರುವರಿಯಲ್ಲಿ ಏಷ್ಯಾ ಕಪ್ ದೆಹಲಿ, ಕಾಮನ್‌ವೆಲ್ತ್ ಗೇಮ್ಸ್ ೨೦೦೨ ಮತ್ತು ೨೦೦೬ ರಲ್ಲಿ ಮ್ಯಾಂಚೆಸ್ಟರ್, ಬ್ಯೂನಸ್ ಐರಿಸ್ ಮತ್ತು ಆಸ್ಟ್ರೇಲಿಯನ್ ಟೆಸ್ಟ್ ಸರಣಿ ಮತ್ತು ನ್ಯೂಜಿಲೆಂಡ್‌ ಪ್ರವಾಸದಂತಹ ಅನೇಕ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.


ಪ್ರಶಸ್ತಿಗಳು

ಬದಲಾಯಿಸಿ

ನವೆಂಬರ್ ೧ ರಂದು ಅವರಿಗೆ ಛತ್ತೀಸ್‌ಗಢದ ಉನ್ನತ ಗುಂಡಧೂರ್ ಕ್ರೀಡಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯಕ್ಕೆ ಗೌರವ ತಂದ ವ್ಯಕ್ತಿಗೆ ಈ ವಾರ್ಷಿಕ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ರೂ ೧ ಲಕ್ಷ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ. ಛತ್ತೀಸ್‌ಗಢ ಸರ್ಕಾರವು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಹುದ್ದೆಯಲ್ಲಿ ಪೋಲಿಸ್ ಇಲಾಖೆಯಲ್ಲಿ ಪೋಸ್ಟಿಂಗ್ ನೀಡಿ ಗೌರವಿಸಿದೆ. @ ಛತ್ತೀಸ್‌ಗಢ ದುರ್ಗ್ ೨೦೧೩ ರಲ್ಲಿ, ಅವರು ಭಾರತದ ರಾಷ್ಟ್ರಪತಿಗಳು ನೀಡುವ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. []

ಅವರು ೨೦೧೫ ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು [] .

ಉಲ್ಲೇಖಗಳು

ಬದಲಾಯಿಸಿ
  1. "From gali hockey player, Saba Anjum rises to highest triumph". Daily News and Analysis. 30 August 2013. Retrieved 30 August 2013.
  2. Anwer, Sharique (10 April 2015). "Padma Shri Saba Anjum Karim: Story of Grit, determination and much more". Twocircles.net. Retrieved 12 April 2015.
  3. "Padma Awards 2015". Press Information Bureau. Archived from the original on 28 January 2015. Retrieved 25 January 2015.


ಬಾಹ್ಯ ಕೊಂಡಿಗಳು

ಬದಲಾಯಿಸಿ