ಸನ್ ಟಿವಿ ನೆಟ್‌ವರ್ಕ್

ಸನ್ ಟಿವಿ ನೆಟ್ವರ್ಕ್ ಲಿಮಿಟೆಡ್ ಭಾರತೀಯ ಮಾಧ್ಯಮ ಸಂಘಟನೆ ಕಂಪನಿಯಾಗಿದ್ದು, ಪ್ರಧಾನ ಕಛೇರಿಯು ಭಾರತದ ತಮಿಳುನಾಡಿನ ಚೆನ್ನೈನಲ್ಲಿದೆ. ಇದು ಒಂದು ಸನ್ ಗ್ರೂಪ್‌ನ ಭಾಗವಾಗಿದೆ ಇದು ಏಷ್ಯಾದ ಅತಿದೊಡ್ಡ ಟಿವಿ ನೆಟ್ವರ್ಕ್ಗಳಲ್ಲಿ ಒಂದಾಗಿದೆ..ಕಲಾನಿಧಿ ಮಾರನ್ ಈ ಸಂಸ್ಠೆಯನ್ನು 14 ಏಪ್ರಿಲ್ 1993ರಂದು ಸ್ಥಾಪಿಸಿದರು. ಇದು ಭಾರತದ ಅನೇಕ ಭಾಷೆಗಳಲ್ಲಿ ವಿವಿಧ ದೂರದರ್ಶನ ಚಾನೆಲ್ಗಳನ್ನು ಮತ್ತು ಬಹು ಭಾಷೆಗಳಲ್ಲಿ ರೇಡಿಯೋ ಕೇಂದ್ರಗಳನ್ನು ಹೊಂದಿದೆ.


ಸನ್ ಟಿವಿ ನೆಟ್‌ವರ್ಕ್
ಸಂಸ್ಥೆಯ ಪ್ರಕಾರಪಬ್ಲಿಕ್
ಸ್ಥಾಪನೆ14 ಏಪ್ರಿಲ್ 1993; 11502 ದಿನ ಗಳ ಹಿಂದೆ (1993-೦೪-14)
ಸಂಸ್ಥಾಪಕ(ರು)ಕಲಾನಿಧಿ ಮಾರನ್
ಮುಖ್ಯ ಕಾರ್ಯಾಲಯಚೆನ್ನೈ, ಭಾರತ
ಪ್ರಮುಖ ವ್ಯಕ್ತಿ(ಗಳು)ಕಲಾನಿಧಿ ಮಾರನ್ (ಅಧ್ಯಕ್ಷ)
ಉತ್ಪನ್ನ
ಆದಾಯIncrease ೩,೭೭೨ ಕೋಟಿ (ಯುಎಸ್$೮೩೭.೩೮ ದಶಲಕ್ಷ) (FY23)[]
ಆದಾಯ(ಕರ/ತೆರಿಗೆಗೆ ಮುನ್ನ)Increase ೨,೩೯೨ ಕೋಟಿ (ಯುಎಸ್$೫೩೧.೦೨ ದಶಲಕ್ಷ) (FY23)[]
ನಿವ್ವಳ ಆದಾಯIncrease ೧,೭೦೭ ಕೋಟಿ (ಯುಎಸ್$೩೭೮.೯೫ ದಶಲಕ್ಷ) (FY23)[]
ಒಟ್ಟು ಆಸ್ತಿIncrease ೭,೭೭೭.೬೮ ಕೋಟಿ (ಯುಎಸ್$೧.೭೩ ಶತಕೋಟಿ) (2019)[]
ಉದ್ಯೋಗಿಗಳು1,451 (2023)[]
ಪೋಷಕ ಸಂಸ್ಥೆಸನ್ ಗ್ರೂಪ್
ಜಾಲತಾಣwww.suntv.in
www.sunnetwork.in


ಒಡೆತನದ ವಾಹಿನಿಗಳು

ಬದಲಾಯಿಸಿ

ಸನ್ ಟಿವಿ 7 ವಿವಿಧ ಭಾಷೆಗಳಲ್ಲಿ 37 ದೂರದರ್ಶನ ವಾಹಿನಿಗಳನ್ನು ಹೊಂದಿದೆ. ಸನ್ ಟಿವಿ ನೆಟ್‌ವರ್ಕ್ ದಕ್ಷಿಣ-ಭಾರತ ಆಧಾರಿತ ನೆಟ್‌ವರ್ಕ್ ಆಗಿರುವುದರಿಂದ ಈ 37 ರಲ್ಲಿ 34 ದಕ್ಷಿಣ ಭಾರತೀಯ ಭಾಷೆಗಳಲ್ಲಿ ಅಂದರೆ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿವೆ . ಮರಾಠಿ, ಬಂಗಾಳಿ ಮತ್ತು ಹಿಂದಿ ಭಾಷೆಗಳಲ್ಲಿ GEC ಚಾನೆಲ್‌ಗಳನ್ನು ಪ್ರಾರಂಭಿಸುವ ಮೂಲಕ ಇದು ಇತರ ಪ್ರದೇಶಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.

ಚಲನಚಿತ್ರ ನಿರ್ಮಾಣ

ಬದಲಾಯಿಸಿ

ಸನ್ ಪಿಕ್ಚರ್ಸ್ 2000 ರಲ್ಲಿ ಸ್ಥಾಪಿಸಲಾದ ಚಲನಚಿತ್ರ ನಿರ್ಮಾಣ ಮತ್ತು ವಿತರಣಾ ಕಂಪನಿಯಾಗಿದೆ. ಇದು ಸನ್ ಟಿವಿ ನೆಟ್‌ವರ್ಕ್‌ನ ಒಂದು ಭಾಗವಾಗಿದೆ. ಇದು ದೂರದರ್ಶನ ಚಲನಚಿತ್ರ ಸಿರಗುಗಲ್ ಮತ್ತು ರಜನಿಕಾಂತ್ ಅಭಿನಯದ ಎಂಥಿರನ್ ಅನ್ನು ನಿರ್ಮಿಸಿದೆ. ಇದು ಕಾದಲಿಲ್ ವಿಝುಂತೇನ್‌ನಿಂದ ಪ್ರಾರಂಭಿಸಿ ಇಲ್ಲಿಯವರೆಗೂ 20 ಕ್ಕೂ ಹೆಚ್ಚು ತಮಿಳು ಚಲನಚಿತ್ರಗಳನ್ನು ವಿತರಿಸಿದೆ. ಈಗ ಅನೇಕ ದೊಡ್ಡ ಬಜೆಟ್ ಚಲನಚಿತ್ರಗಳನ್ನು ನಿರ್ಮಿಸುತ್ತಿದೆ [][] .

ದೂರದರ್ಶನ ನಿರ್ಮಾಣ ಸಂಸ್ಥೆ

ಬದಲಾಯಿಸಿ

ಸನ್ ಪಿಕ್ಚರ್ಸ್ ದೂರದರ್ಶನ ನಿರ್ಮಾಣ ಕಂಪನಿಯಾಗಿದ್ದು, ಸನ್ ಟಿವಿ ಡೈರೆಕ್ಟ್ ಟಿವಿ ಪ್ರೀಮಿಯರ್‌ಗಾಗಿ ಸಣ್ಣ ಬಜೆಟ್ ಚಲನಚಿತ್ರಗಳನ್ನು ನಿರ್ಮಿಸುತ್ತದೆ. ಟಿವಿಯಲ್ಲಿ ಚಲನಚಿತ್ರ ಬಿಡುಗಡೆಯಾದ ನಂತರ ಅದು ಸನ್ ಎನ್‌ಎಕ್ಸ್‌ಟಿ ಒಟಿಟಿ (Sun NXT OTT) ಅಪ್ಲಿಕೇಶನ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಸನ್ ಎನ್‌ಎಕ್ಸ್‌ಟಿ ಒಟಿಟಿ (Sun NXT OTT) ಪ್ಲಾಟ್‌ಫಾರ್ಮ್‌ಗಾಗಿ ಮುಂಬರುವ ವೆಬ್‌ಸರಣಿಗಳನ್ನು ಸಹ-ನಿರ್ಮಾಣ ಮಾಡುತ್ತದೆ, ಮತ್ತು ಈ ವಿಭಾಗವು ತಮ್ಮ ಚಾನೆಲ್‌ಗಳಲ್ಲಿ ಪ್ರಸಾರವಾಗಲಿರುವ ದೈನಂದಿನ ಧಾರಾವಾಹಿಗಳನ್ನು ಸಹ-ನಿರ್ಮಾಣ ಮಾಡುತ್ತದೆ [] .

ಓವರ್-ದಿ-ಟಾಪ್

ಬದಲಾಯಿಸಿ

ಸನ್ ಎನ್‌ಎಕ್ಸ್‌ಟಿ ಜಾಗತಿಕ ಆನ್‌ಲೈನ್ ಆಡಿಯೋ/ವೀಡಿಯೋ ಸ್ಟ್ರೀಮಿಂಗ್ ಓಟಿಟಿ (ಓವರ್-ದಿ-ಟಾಪ್) ಪ್ಲಾಟ್‌ಫಾರ್ಮ್ ಆಗಿದ್ದು, ಸನ್ ಟಿವಿ ನೆಟ್‌ವರ್ಕ್ ಒಡೆತನದಲ್ಲಿದೆ ಮತ್ತು ನಿರ್ವಹಿಸುತ್ತದೆ. 4000 ಕ್ಕೂ ಹೆಚ್ಚು ಚಲನಚಿತ್ರ ಶೀರ್ಷಿಕೆಗಳು ಮತ್ತು 450 ಕ್ಕೂ ಹೆಚ್ಚು ಟಿವಿ ಕಾರ್ಯಕ್ರಮಗಳನ್ನು ಹೊಂದಿದೆ. ಸನ್ ಟಿವಿ ನೆಟ್‌ವರ್ಕ್ ಸಾಮಾನ್ಯವಾಗಿ ತನ್ನ ಟಿವಿ ಚಾನೆಲ್‌ಗಳಲ್ಲಿ Archived 2024-02-29 ವೇಬ್ಯಾಕ್ ಮೆಷಿನ್ ನಲ್ಲಿ.[] ಪ್ರಸಾರವಾಗುವ ಚಲನಚಿತ್ರಗಳ ಡಿಜಿಟಲ್ ಹಕ್ಕುಗಳನ್ನು ಹೊಂದಿದೆ.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ "Sun TV Q4 net profit down 7% to ₹380 crore". The Hindu Businessline (in ಇಂಗ್ಲಿಷ್). 20 May 2023. Retrieved 17 July 2023.
  2. ೨.೦ ೨.೧ "Sun TV Network Profit & Loss". Sun TV Network. 30 October 2017. Retrieved 23 February 2019.
  3. "Sun TV bails out Endhiran". Behindwoods.com. Retrieved 28 November 2015.
  4. ೪.೦ ೪.೧ Narasimhan, T. E. (2020-11-13). "Sun TV to invest around Rs 600 cr in movies and content for OTT platform". Business Standard India. Retrieved 2020-12-07.
  5. "Don't miss out on the ultimate entertainment experience - switch to Sun Network today. | www.sunnetwork.in". www.sunnetwork.in. Retrieved 2023-10-29.

ಬಾಹ್ಯಕೊಂಡಿಗಳು

ಬದಲಾಯಿಸಿ