ಕಲಾನಿಧಿ ಮಾರನ್
ಕಲಾನಿಧಿ ಮಾರನ್ ಅವರು ಸನ್ ಗ್ರೂಪ್‌ನ ಅಧ್ಯಕ್ಷರು ಮತ್ತು ಸಂಸ್ಥಾಪಕರು. ಇವರು ಭಾರತೀಯ ಮಾಧ್ಯಮ ಮಾಲೀಕರಾಗಿದ್ದಾರೆ.[೧][೨][೩] ಅವರು ದೂರದರ್ಶನ ಚಾನೆಲ್‌ಗಳು, ಪತ್ರಿಕೆಗಳು, ವಾರಪತ್ರಿಕೆಗಳು, ಎಫ್. ಎಂ ರೇಡಿಯೋ ಕೇಂದ್ರಗಳು, ಡಿಟಿಎಚ್ ಸೇವೆಗಳು, ಕ್ರಿಕೆಟ್ ತಂಡ ( ಸನ್‌ರೈಸರ್ಸ್ ಹೈದರಾಬಾದ್ ) ಮತ್ತು ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ.[೪] ಅವರು ೨೦೧೦ ರಿಂದ ೨೦೧೫ ರವರೆಗೆ ಭಾರತೀಯ ವಿಮಾನಯಾನ ಸ್ಪೈಸ್ ಜೆಟ್‌ನಲ್ಲಿ ಪ್ರಮುಖ ಪಾಲನ್ನು ಹೊಂದಿದ್ದರು.[೫][೬][೭]
ಕಲಾನಿಧಿ ಮಾರನ್ | |
---|---|
Alma mater | ಲೊಯೋಲಾ ಕಾಲೇಜ್, ಚೆನ್ನೈ ಯೂನಿವರ್ಸಿಟಿ ಆಫ್ ಸ್ಕಾಂಟನ್ |
Occupation | ಮಾಧ್ಯಮ ಮಾಲೀಕ |
Known for | ಸನ್ ಗ್ರೂಪ್ ಸ್ಥಾಪಕ ಮತ್ತು ಅಧ್ಯಕ್ಷ |
Spouse | ಕಾವೇರಿ ಕಲಾನಿಧಿ |
Children | ೧ (ಕಾವ್ಯಾ ಮಾರನ್) |
Father | ಮುರಸೋಲಿ ಮಾರನ್ |
Relatives | ದಯಾನಿಧಿ ಮಾರನ್ (ಸಹೋದರ) |
ವೃತ್ತಿ
ಬದಲಾಯಿಸಿ೧೯೯೦ ರಲ್ಲಿ, ಮಾರನ್ ತಮಿಳಿನಲ್ಲಿ ಪೂಮಾಲೈ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ೧೪ ಏಪ್ರಿಲ್ ೧೯೯೩ ರಂದು ಅವರು ಸನ್ ಟಿವಿಯನ್ನು ಸ್ಥಾಪಿಸಿದರು.[೮][೯][೧೦] ಸನ್ ಟಿವಿಯು $೧೩೩ ಮಿಲಿಯನ್‌ಗೆ ೧೦% ಷೇರು ಬಂಡವಾಳ ಸಂಗ್ರಹಿಸಿದ್ದರಿಂದ, ೨೪ ಏಪ್ರಿಲ್ ೨೦೦೬ ರಂದು, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಬಿಲಿಯನೇರ್ ಪಟ್ಟಿಯಲ್ಲಿ ಸೇರಿಸಲಾಯಿತು. ಆ ಸಂಧರ್ಭದಲ್ಲಿ ಭೇಟಿ ನೀಡಿದ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರೊಂದಿಗೆ ದುಂಡುಮೇಜಿನ ಸಭೆಯಲ್ಲಿ ಮಾರನ್ ಅವರೂ ಒಬ್ಬ ಪ್ರತಿನಿಧಿಯಾಗಿದ್ದರು.[೧೧][೧೨]
೨೦೨೩ ರ ಹೊತ್ತಿಗೆ, ಅವರು ಯುಎಸ್$೩ ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ೭೭ ನೇ ಶ್ರೀಮಂತ ಭಾರತೀಯರಾಗಿದ್ದರು.[೧೩] ಇವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವ್ಯಾಪಾರ ಕಾರ್ಯನಿರ್ವಾಹಕರಾಗಿದ್ದಾರೆ. ಮಾರನ್ ಮತ್ತು ಅವರ ಪತ್ನಿ ಕಾವೇರಿ ಅವರು ಭಾರತೀಯ ಕಾರ್ಯನಿರ್ವಾಹಕ ವೇತನ ಪಟ್ಟಿಯಲ್ಲಿ ತಲಾ ರೂ.೬೨ ಕೋಟಿ (ಯುಎಸ್$೭.೮ ಮಿಲಿಯನ್) ಪ್ಯಾಕೇಜ್‌ನೊಂದಿಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ವ್ಯಾಪಾರ ಕಾರ್ಯನಿರ್ವಾಹಕರಾಗಿ ಸ್ಥಾನ ಪಡೆದಿದ್ದಾರೆ.[೧೪]
ಅವರು ಸಿಎನ್‌ಬಿಸಿ ಮತ್ತು ಅರ್ನ್ಸ್ಟ್ & ಯಂಗ್ ನಿಂದ ಯುವ ಉದ್ಯಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.[೧೫] ಫೋರ್ಬ್ಸ್ ನಿಯತಕಾಲಿಕವು ಅವರನ್ನು "ದಕ್ಷಿಣ ಭಾರತದ ದೂರದರ್ಶನ ರಾಜ" ಎಂದು ಹೆಸರಿಸಿದೆ.[೧೬]
ವೈಯಕ್ತಿಕ ಜೀವನ
ಬದಲಾಯಿಸಿಕಲಾನಿಧಿ ಮಾರನ್ ಅವರು ಭಾರತದ ಮಾಜಿ ಕೇಂದ್ರ ಸಚಿವ ಮುರಸೋಲಿ ಮಾರನ್ ಅವರ ಪುತ್ರ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಮೊಮ್ಮಗ. ಅವರ ಕಿರಿಯ ಸಹೋದರ ದಯಾನಿಧಿ ಮಾರನ್ ಕೂಡ ಮಾಜಿ ಸಚಿವರಾಗಿದ್ದರು.[೧೭] ಕಲಾನಿಧಿ ಮಾರನ್ ಕೊಡಗು ಮೂಲದ ಕಾವೇರಿಯವರನ್ನು ವಿವಾಹವಾದರು. ದಂಪತಿಗೆ ಕವಿಯಾ ಕಲಾನಿಧಿ ಮಾರನ್ ಎಂಬ ಮಗಳಿದ್ದಾಳೆ (ಜನನ ನವೆಂಬರ್ ೩, ೧೯೯೧). [೧೮] ಅವರು ಡಾನ್ ಬಾಸ್ಕೋ, ಎಗ್ಮೋರ್ , ಚೆನ್ನೈನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಅವರು ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು. ಅವರು ಸ್ಕ್ರ್ಯಾಂಟನ್ ವಿಶ್ವವಿದ್ಯಾಲಯದಿಂದ ತಮ್ಮ ಎಂಬಿಎ ಮಾಡಿದರು. ೨೦೨೩ ರ ಹೊತ್ತಿಗೆ, ಅವರ ನಿವ್ವಳ ಮೌಲ್ಯ ಯುಎಸ್$೩ ಬಿಲಿಯನ್ ಆಗಿದೆ.[೧೯]
ಉಲ್ಲೇಖಗಳು
ಬದಲಾಯಿಸಿ- ↑ "From cable TV to aviation biz, Maran's march continues". The Financial Express. 13 July 2010. Archived from the original on 9 September 2010. Retrieved 8 August 2010.
- ↑ "Sun, Zee remain top on profitability charts". Rediff.com. 31 December 2004. Archived from the original on 15 November 2010. Retrieved 8 August 2010.
- ↑ Srikar Muthyala (29 September 2015). "The List of Great Entrepreneurs of India in 2015". MyBTechLife. Archived from the original on 14 January 2016.
- ↑ Mishra, Aditya (2021-04-06). "IPL Team Owners. List Of All IPL 2021 Team Owners". Voice of Indian Sports - KreedOn (in ಬ್ರಿಟಿಷ್ ಇಂಗ್ಲಿಷ್). Archived from the original on 29 May 2021. Retrieved 2021-06-29.
- ↑ "Strategic investor crucial for global foray". The Times of India. 6 April 2010. Archived from the original on 3 June 2016. Retrieved 13 September 2010.
- ↑ "New deal to take SpiceJet higher". Business Standard. 15 June 2010. Archived from the original on 7 June 2011. Retrieved 8 August 2010.
- ↑ "Kalanidhi Maran buys 37.7 p.c. stake in SpiceJet". The Hindu. Chennai, India. 13 June 2010. Archived from the original on 24 August 2010. Retrieved 8 August 2010.
- ↑ Karmali, Naazneen (30 November 2009). "Strong Signal". Forbes. Archived from the original on 29 August 2011. Retrieved 8 August 2010.
- ↑ "Rediff India Abroad, April 28, 2006 – Kalanithi Maran: A 'Sunshine' story, by Sanjiv Shankaran and S. Bridget Leena in New Delhi". Rediff.com. Archived from the original on 21 May 2011. Retrieved 24 January 2012.
- ↑ Bharatan, Shilpa (27 March 2006). "Variety.com, Monday, April 24, 2006, 6:36pm PT – Sun TV shines on Exchange". Variety. Archived from the original on 17 July 2009. Retrieved 24 January 2012.
- ↑ "Kalanithi Maran emerges a billionaire after maiden IPO" (PDF). Archived (PDF) from the original on 9 November 2014. Retrieved 9 November 2014.
- ↑ "Media Personalities – Kalanidhi Maran". Chennai Best. Archived from the original on 12 February 2012. Retrieved 24 January 2012.
- ↑ "#17 Kalanithi Maran". Forbes. 29 September 2010. Archived from the original on 24 January 2018. Retrieved 2 September 2017.
- ↑ "Newsmaker: Kalanithi Maran". Business Standard. Archived from the original on 13 December 2010. Retrieved 8 August 2010.
- ↑ "Welcome To Sun Network". Sunnetwork.org. Archived from the original on 1 September 2010. Retrieved 8 August 2010.
- ↑ "#20 Kalanithi Mar". Forbes. 18 November 2009. Archived from the original on 8 August 2010. Retrieved 8 August 2010.
- ↑ "MEDIA MARAN". Tehelka. 9 June 2007. Archived from the original on 19 December 2013. Retrieved 22 July 2013.
- ↑ "The story of Marans: Sun King and his brother". Business Standard. 30 August 2014. Archived from the original on 28 January 2018. Retrieved 28 January 2018.
- ↑ "Kalanithi Maran". Forbes. 30 August 2014. Retrieved 28 January 2018.