ಸದಾರಮೆ (೧೯೫೬)

ಕನ್ನಡ ಚಲನಚಿತ್ರ

ಟೆಂಪ್ಲೇಟು:Testcases other

ಸದಾರಮೆ

ಸದಾರಮೆ - ರಾಜಾ ಚಂದ್ರಶೇಖರ್ ನಿರ್ದೇಶನದ ಮತ್ತು ಗುಬ್ಬಿ ವೀರಣ್ಣ ನಿರ್ಮಿಸಿದ ೧೯೩೫ ರ ಭಾರತೀಯ ಕನ್ನಡ ಭಾಷೆಯ ಪೌರಾಣಿಕ ಚಲನಚಿತ್ರ. ಇವರಿಬ್ಬರೂ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುತ್ತಾರೆ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ನಿರ್ಮಾಣಮಾಡಿದ ಮೂರನೇ ಧ್ವನಿ ಚಿತ್ರವಾಗಿತ್ತು. ಬಿಡುಗಡೆಯಾದ ನಂತರ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರವು ಭಾರಿ ಯಶಸ್ಸನ್ನು ಕಂಡಿತು. ಗುಬ್ಬಿ ವೀರಣ್ಣನವರು ಈ ಚಿತ್ರವನ್ನು ೧೯೫೬ ರಲ್ಲಿ ಮರುನಿರ್ಮಿಸಿದರು. ಈ ಚಲನಚಿತ್ರವು ಕೆ.ಸುಬ್ರಮಣ್ಯಂ ನಿರ್ಮಾಣದಲ್ಲಿ ನವೀನ ಸದರಮೆ ಎಂಬ ಹೆಸರಿನಲ್ಲಿ ತಮಿಳಿನಲ್ಲಿಯೂ ಬಿಡುಗಡೆಯಾಗಿದೆ. ಎಸ್.ಡಿ. ಸುಬ್ಬುಲಕ್ಷ್ಮಿ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದರು.

ಈ ಚಿತ್ರವು ಶಿರಿಶ್ ಅಥ್ವಾಲೆ ಅವರ ಮರಾಠಿ ನಾಟಕ "ಮಿತ್ರ" ವನ್ನು ಆಧರಿಸಿದ್ದಾಗಿದೆ. ಗುಬ್ಬಿ ವೀರಣ್ಣನವರು ಮೊದಲು ಈ ಕಥೆಯನ್ನು ನಾಟಕದಲ್ಲಿ ಅಳವಡಿಸಿಕೊಂಡಿದ್ದರು ಮತ್ತು ಅಂತಿಮವಾಗಿ ಅದನ್ನು ೧೯೩೫ ರಲ್ಲಿ ದೊಡ್ಡ ಪರದೆಗೆ ತಂದರು. ಅವರು ಶಕುಂತಲಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದರು. ಚಿತ್ರದ ಪಾತ್ರವರ್ಗದಲ್ಲಿ "ಪಕ್ಕಾ ಕಳ್ಳ" ಎಂಬ ಕಳ್ಳನ ಪಾತ್ರದಲ್ಲಿ ವೀರಣ್ಣ ಅವರೇ ನಟಿಸಿದ್ದಾರೆ ಮತ್ತು ಹಾಡುವ ನಟಿ ಕೆ. ಅಶ್ವತ್ಥಮ್ಮ ಈ ಚಿತ್ರದಲ್ಲಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡರು. ವೆಂಕಟರಾಮಯ್ಯ ಸಂಗೀತ ಸಂಯೋಜಿಸಿದ್ದಾರೆ.

ಕಥಾ ಸಾರಾಂಶ

ಬದಲಾಯಿಸಿ

ಈ ಚಿತ್ರವು ಸದರಮೆ ಎಂಬ ಧೈರ್ಯಶಾಲಿ ಮಹಿಳೆ, ಮತ್ತು ಅವಳ ಶೌರ್ಯಕ್ಕಾಗಿ ಅವಳನ್ನು ಮೆಚ್ಚುವ ಮತ್ತು ಅವಳನ್ನು ಪ್ರೀತಿಸುವ ರಾಜಕುಮಾರನ ಸುತ್ತ ಸುತ್ತುತ್ತದೆ. ಅವಳು ಪಕ್ಕಾ ಕಳ್ಳ ಎಂದು ಕರೆಯಲ್ಪಡುವ ಕಳ್ಳನಿಂದ ತಪ್ಪಿಸಿಕೊಳ್ಳಲು ಪುರುಷ ಉಡುಪನ್ನು ಧರಿಸುತ್ತಾಳೆ. ಅವಳನ್ನು ಗಂಡು ಎಂದು ಭಾವಿಸಿ, ಒಬ್ಬ ರಾಜಕುಮಾರಿ ಅವಳನ್ನು ಪ್ರೀತಿಸುತ್ತಾಳೆ ಮತ್ತು ಪಾತ್ರಗಳ ಬಗ್ಗೆ ಗೊಂದಲವು ಪ್ರಾರಂಭವಾಗುತ್ತದೆ. ರಾಜಕುಮಾರ ಸದಾರಮೆ ಮತ್ತು ರಾಜಕುಮಾರಿ ಇಬ್ಬರನ್ನೂ ಮದುವೆಯಾಗುವುದರೊಂದಿಗೆ ಚಲನಚಿತ್ರಗಳು ಕೊನೆಗೊಳ್ಳುತ್ತವೆ.

ಆಕರ ಕೊಂಡಿ

ಬದಲಾಯಿಸಿ

https://en.wikipedia.org/wiki/Sadarame



  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
ಟೆಂಪ್ಲೇಟು:ಕನ್ನಡ ಚಲನಚಿತ್ರಗಳು ಟೆಂಪ್ಲೇಟು:ಗುಬ್ಬಿ ವೀರಣ್ಣ