ನಮಸ್ಕಾರ.ನನ್ನ ಹೆಸರು ತೇಜಸ್ ಕೆ.ಆರ್.

   ದಿನಾಂಕ ೨೪-೦೨-೨೦೦೦ ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ನೇತೇನಹಳ್ಳಿಯಲ್ಲಿ ಜನಿಸಿದೆ.

ಕುಟುಂಬಸ್ತರು(ಪೋಷಕರು)

ಬದಲಾಯಿಸಿ
 
  ನನ್ನ ತಾಯಿ ಶ್ರೀಮತಿ ಶೈಲಜ ಹಾಗು ತಂದೆ ರಾಜಣ್ಣ. ನನ್ನ ಅಣ್ಣನ ಹೆಸರು ದಿಕ್ಷಿತ್ ಕೆ.ಆರ್. ಈಗ ಅವನು ಮೆಕಾನಿಕಲ್ ಡಿಪ್ಲಮೋ ಮಾಡುತಿದ್ದಾನೆ. ನನ್ನ ತಂದೆಯವರ ಮಾಗಡಿ ತಾಲ್ಲೂಕಿನ ಕಲ್ಯಾ ಎಂಬ ಹಳ್ಳಿಗೆ ಸೇರಿದವರು. ನನ್ನ ಸ್ವಂತ ಊರು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕಲ್ಯಾ. ನನ್ನ ತಂದೆಯವರು ಮೂಲತಃ ರೈತರು.

ವಿದ್ಯಾಭ್ಯಾಸ

ಬದಲಾಯಿಸಿ
 
   ನಾನು ನನ್ನ ಪ್ರಾರ್ಥಮಿಕ ಹಾಗು ಪ್ರೌಡ ಶಾಲಾ ವಿದ್ಯಾಭ್ಯಾಸವನ್ನು ಒಂದೇ ಶಾಲೆಯಲ್ಲಿ ಮಾಡಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿ ಇರುವ ವಾಸವಿ ವಿದ್ಯಾನಿಕೇತನ್ ಎಂಬ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಗಿಸಿದೆ. ನಾನು ಎಸ್ ಎಸ್ ಎಲ್ ಸಿಯಲ್ಲಿ ಶೇ.೮೫.೪೪% ಗಳಿಸಿ ಉತ್ತಿರ್ಣನಾದೆ. ನಂತರ ನನಿಗೆ ಬ್ಯಾಂಕಿಂಗ್ ಸೆಕ್ಟರ್ನಲ್ಲಿ ಸೇವೆ ಮಾಡಬೇಕೆಂಬ ಆಸೆ ಮೂಡಿತು ಆದ್ದರಿಂದ ನಾನು ಅದೇ ತಾಲ್ಲೂಕಿನಲ್ಲಿರುವ ಬಿ.ಜಿ.ಎಸ್. ಪಿಯು ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ನನ್ನ ಪಿಯುಸಿ ಶಿಕ್ಷಣವನ್ನು ಪ್ರಾರಂಭಿಸಿದೆ. ಆ ಕಾಲೇಜಿನ ಪ್ರಾಂಶುಪಾಲರಾದ ಕೆ.ಉಮೇಶ್ ರವರು ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿದರು. ನಾನು ನನ್ನ ದ್ವಿತೀಯ ಪಿಯುಸಿಯನ್ನು ಮುಗಿಸಿದೆ. ಅದರಲ್ಲಿಯೂ ಕೂಡ ನಾನು ಶೇ.೯೪.೮೩% ಗಳಿಸಿ ಉತ್ತಿರ್ಣನಾದೆ. ಈ ಎರಡು ಬಹು ಮುಖ್ಯ ಹಂತದಲ್ಲೂ ಕೂಡ ಒಳ್ಳೆಯ ಅಂಕಗಳ್ಳನ್ನು ಗಳಿಸುವುದರ ಮೂಲಕ ಮುನ್ನುಗಿದೆ. ನಂತರ ನನ್ನ ಸ್ನೇಹಿತನ ಅಕ್ಕನ ಮಾರ್ಗದರ್ಶನದಿಂದ ನನ್ನ ಪದವಿ ಶಿಕ್ಷಣವನ್ನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಆರಂಭಿಸಿದೆ. ಪ್ರಸ್ತುತ ಈಗ ನಾನು ಬೆಂಗಳೂರಿನ ಹೊಸೂರ್ ರೊಡ್ ನಲ್ಲಿ ಇರುವ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ನಾನು ನನ್ನ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದೇನೆ.

ಜೀವನದ ಗುರಿ

ಬದಲಾಯಿಸಿ
   ನನಗೆ ಮೊದಲಿಂದಲೂ ಕೂಡ ಬ್ಯಾಂಕಿಂಗ್ ವೃತ್ತಿಯಲ್ಲಿ ತೊಡಗಿಸಿಕೊಳ್ಲಬೇಕು ಎಂದು ತುಂಬ ಆಸೆಯಿದೆ. ನನ್ನ ಪದವು ಶಿಕ್ಷಣ ಮುಗಿದ ನಂತರ ಅದರ ಕಡೆಯೂ ಸಹ ಗಮನ ಹರಿಸುತ್ತೇನೆ. 

ಆಸಕ್ತಿಯ ವಿಚಾರಗಳು

ಬದಲಾಯಿಸಿ
   ನನಗೆ ಸಂಗೀತ ಎಂದರೆ ತುಂಬ ಇಷ್ಟ. ನಾನು ಜಾಸ್ತಿ ಹಾಡುಗಳನ್ನು ಕೇಳುತ್ತೇನೆ. ಹಾಗು ನನಗೆ ಕ್ರೀಡೆಗಳಲ್ಲೂ ಬಹಳ ಆಸಕ್ತಿ. ನಾನು ನನ್ನ ಶಾಲಾ ದಿನಗಳಲ್ಲಿ ಅನೇಕ ಕ್ರೀಡೆಗಳನ್ನು ಆಡಿದ್ದೇನೆ. ನನಗೆ ಕ್ರಿಕೆಟ್ ಹಾಗು ಬ್ಯಾಸ್ಕೆಟ್ ಬಾಲ್ ಎಂದರೆ ತುಂಬ ಇಷ್ಟ. ಹಾಗು ಇಂಡೊರ್ ಗೇಮ್ಸ್ ಎಂದರೆ ತುಂಬ ಇಷ್ಟ. ನನಗೆ ವೀಡಿಯೊ ಗೇಮ್ಸ್ ಆಡುವುದರಲ್ಲಿಯೂ ಆಸಕ್ತಿಯಿದೆ.