Tejaswini T
ತೇಜಸ್ವಿನಿ ಟಿ | |
---|---|
Born | ೧೪/೦೩/೨೦೦೧ ವಿ ವಿ ಪುರಂ ,ಬೆಂಗಳೂರು |
Education | ಕ್ರೈಸ್ಟ್ ಯುನಿವರ್ಸಿಟಿ |
Parent(s) | ಭಾರತೀ , ತಾಯಪ್ಪ |
ಮುನ್ನುಡಿ
ನನ್ನ ಹೆಸರು ತೇಜಸ್ವಿನಿ.ನಾನು ಕ್ರೈಸ್ಟ್ ಯುನಿವರ್ಸಿಟಿ ವಿಧ್ಯಾರ್ಥಿ.ಅರುಣ ಮೇಡಮ್ ನಮ್ಮ ವರ್ಗ ಶಿಕ್ಷಕರು.ಶಿವಪ್ರಸಾದ್ ಮೇಸ್ಟ್ರು ನಮ್ಮ ಕನ್ನಡ ಶಿಕ್ಷಕರು. ಭವ್ಯ, ಪಲ್ಲವಿ, ರಮ್ಯಾ,ಅಗತ, ಕ್ಯಾರೊಲಿನ್,ಗೌರಿ ನನ್ನ ಗೆಳತಿಯರು ಹಾಗೂ ರಘು, ವಿನಯ್, ತರುಣ್, ಸುಮುಖ ನನ್ನ ಗೆಳೆಯರು. ಯಲ್ಲಾರೂಡನೆ ಹೊಂದಿಕೊಂಡು ಹೋಗುವುದು ನನ್ನ ಆಶಯ. ನನ್ನ ಸ್ನೇಹಿತರು ಹೃದಯಕ್ಕೆ ತುಂಬಾ ಹತ್ತಿರವಾದವರು. ಅವರೇ ನನ್ನ ಬದುಕನ್ನು ಸುಂದರಗೂಳಿಸಿದವರು.
ಕುಟುಂಬ
ನನ್ನ ತಂದೆ ತಾಯಿಯ ಹೆಸರು ತಾಯಪ್ಪ ಮತ್ತು ಭಾರತಿ. ನನ್ನ ತಂದೆ ಕೆ. ಆರ್. ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಅಮ್ಮ ಮನೆಯಲ್ಲಿ ನಮ್ಮನ್ನು ನೋಡಿಕೊಳ್ಳುತ್ತಿದ್ದರು. ನಾವು ಮೂರು ಜನ ಮಕ್ಕಳು , ಮೊದಲು ನನ್ನ ಅಣ್ಣ ಮಧು ಎಂದು ಈಗ ಒನಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಎರಡನೆಯದು ನನ್ನ ಅಕ್ಕ ಪ್ರಿಯಾಂಕ ಎಂದು ಮದುವೆಯಾಗಿ ಗಂಡನ ಮನೆಯಲ್ಲಿ ಇದ್ದಾರೆ, ಮೂರನೆಯವಳು ನಾನು, ಅಪ್ಪನ ಮುದ್ದು ಮಗಳು. ೨೦೧೩ರಲ್ಲಿ ಆರೋಗ್ಯ ಸಮಸ್ಯೆಯಾಗಿ ಅಪ್ಪ ತೀರಿಕೊಂಡರು. ಈಗ ನನ್ನ ಮನೆಯಲ್ಲಿ ನಾನು, ಅಮ್ಮ, ಅಣ್ಣ, ಅಜ್ಜಿ ಮಾತ್ರ .
ಹವ್ಯಾಸಗಳು
ನಾನು ನೃತ್ಯದಲ್ಲಿ ಬಹಳ ಆಸಕ್ತಿ ತೋರಿಸುವೆ.ಲೆಕ್ಕಚಾರದ ವಿಷಯದಲ್ಲಿ ಬಹಳ ಚುರುಕು. ಸಮಯ ಇದ್ದಾಗ ಕಥೆಗಳನ್ನು ಓದುವುದು ನನ್ನ ಕೆಲಸ, ಅದರಲ್ಲಿ "ಲೈಫ್ ಈಸ್ ವಾಟ್ ಯು ಮೇಕ್ ಇಟ್ "- ಪ್ರೀತಿ ಶೆನಾಯ್ ರವರು ಬರೆದಿರುವ ಪುಸ್ತಕ ನನಗೆ ತುಂಬ ಇಷ್ಟವಾಯಿತು, ಈ ಪುಸ್ತಕವನ್ನು ಓದುತ್ತಿದ್ದಂತೆ ಬದುಕಿನ ಮೇಲೆ ಭರವಸೆ ಮೂಡಿಸುತ್ತದೆ, ಯಾವ ಕ್ಷಣದಲ್ಲಿಯೂ ಆ ಭರವಸೆಯನ್ನು ಬಿಟ್ಟು ಕೊಡಬಾರದು ಎಂದು ತಿಳಿಸುತ್ತದೆ . ನಾನು ಆಗಾಗ ಚಿತ್ರಗಳನ್ನು ಬಿಡಿಸುತ್ತೇನೇ. ಸ್ನೇಹಿತರಿಗೆ ಶುಭಾಶಯ ಪತ್ರಗಳನ್ನು ಕೈಯಾರ ಮಾಡಿಕೂಡುವೆ.
ಪ್ರಯಾಣ
ನಾನು ಮೊದಲಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದು ಬೆಂಗಳೂರಿನಿಂದ ಕೇರಳ ಜಿಲ್ಲೆಗೆ ನನ್ನ ಕುಟುಂಬದ ಸಮೇತ ಮುನ್ನಾರಿಗೆ ರಜೆಗಳನ್ನು ಕಳೆಯಲು ಹೋದಾಗ . ಅಲ್ಲಿ ನನ್ನ ಅಕ್ಕನ ಹುಟ್ಟು ಹಬ್ಬವನ್ನು ಆಚರಿಸಿದ್ದು ನನಗೆ ನೆನಪಿದೆ. ಅಲ್ಲಿ ತುಂಬಾ ಚಳಿ, ಆ ವಾತಾವರಣವನ್ನು ನೆನಪಿಸಿಕೊಂಡರೆ ನನಗೆ ಮಡಿಕೇರಿಯಲ್ಲಿ ಕಳೆದ ಕ್ಷಣಗಳು ನೆನಪಾಗುತ್ತದೆ, ಸುಮಾರು ೨೦-೨೫ ಜನ ಕುಟುಂಬದ ಸದಸ್ಯರ ಜೊತೆಗೆ ಹೋಗಿದೆ. ಅಲ್ಲಿ ಕುದುರೆ ಸವಾರಿ, ರಾತ್ರಿಯಲ್ಲಿ ಬೆಂಕಿ ಹಚ್ಚಿ ಅದರ ಸುತ್ತ ಆಟವಾಡುತ್ತಾ ಸಮಯ ಹೋಗಿದ್ದೆ ತಿಳಿಯಲಿಲ್ಲ. ಅಲ್ಲಿರುವ ಪ್ರಸಿದ್ಧಗೋಲ್ಡನ್ ದೇವಸ್ಥಾನಕ್ಕೂ ಭೇಟಿ ನೀಡಿದೆವು. ಈ ಜಾಗ ತುಂಬಾ ಪ್ರಶಾಂತವಾಗಿತ್ತು.
ಶಿಕ್ಷಣ
ಶಾಲೆಯ ಜೀವನ ಮೆಲುಕು ಹಾಕಿಕೊಂಡಾಗ ಅಚ್ಚಳಿಯದೇ ನೆನಪಿನಲ್ಲಿ ಉಳಿಯುವ ನಾವಾಡುತ್ತಿದ್ದ ಕುಟ್ಟಿದೊಣ್ಣೆ (ಗಿಲ್ಲಿದಾಂಡು), ಲಗೋರಿ, ಪಿಲಿಚಂಡಿ, ಜಾರಬಂಡಿ ಆಟ, ಉತ್ಸವಗಳು, ಮುಂತಾದ ನೆನಪುಗಳು ಇವೆ. ಜನ್ಮಾಷ್ಟಮಿ ಸಮಯದಲ್ಲಿ ಹುಲಿವೇಷದ ಜೊತೆ ತಂದೆಯ ಕಣ್ಣುತಪ್ಪಿಸಿ ಕೊರಳಿಗೆ ಸೇವಂತಿಗೆ ಹಾರ ಹಾಕಿಕೊಂಡು, ಬಾಯಿಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು 'ಸಂತೋಷಕೆ ಹಾಡೂ ಸಂತೋಷಕೆ'ಎಂದು ಕುಣಿಯುತ್ತಿದ್ದದ್ದೂ ಪ್ರತೀ ಜನ್ಮಾಷ್ಟಮಿಯ ಸಮಯದಲ್ಲಿ ನೆನಪಾಗುವ ಘಟನೆಗಳು.
ನನ್ನ ಸಹಪಾಠಿಗಳೊಂದಿಗೆ ಸ್ವಾತಂತ್ರ್ಯದಿನಾಚರಣೆ ಮತ್ತು ಗಣರಾಜ್ಯೋತ್ಸವ ಸಂದರ್ಭದಂದು ಸಾಲಿನಲ್ಲಿ ಬೋಲೋ ಭಾರತ್ ಮಾತಾಕೀ ಜೈ, ವಂದೇ ಮಾತರಂ, ಜೈ ಕರ್ನಾಟಕ ಮಾತೆ ಎಂದು ಧ್ವಜಾರೋಹಣಾ ಕಾರ್ಯಕ್ರಮ ನಡೆಯುತ್ತಿತ್ತು, ನಾವು ಸಾಗುತ್ತಿದ್ದ ನೆನಪುಗಳು ಪ್ರತೀ ವರ್ಷ ಈ ಎರಡು ರಾಷ್ಟ್ರೀಯ ಹಬ್ಬದ ದಿನದಂದು ನನ್ನ ಮುಂದೆ ಹಾದುಹೋಗುತ್ತದೆ.
ಸಾಲಾಗಿ ಸಾಗುತ್ತಿದ್ದ ಶಾಲಾ ಪೆರೇಡಿಗೆ ದಾರಿಯಲ್ಲಿ ಕೆಲವು ಸ್ವಯಂಸೇವಕರು ಮೈಸೂರು ಪಾಕ್, ಲಾಡು, ಬೆಲ್ಲನೀರು, ಚಾಕೋಲೇಟ್ ವಿತರಿಸುತ್ತಿದ್ದರು. ಅಲ್ಲಿ ನೂರಾರು ಸಂಖ್ಯೆಯಲ್ಲಿ ಸೇರುತ್ತಿದ್ದ ಅಷ್ಟೂ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸುವ ಪದ್ದತಿಯೂ ಅಂದು ಚಾಲ್ತಿಯಲ್ಲಿದ್ದವು. ಸಿಹಿತಿಂಡಿಗಾಗಿ ಎರಡೆರಡು ಬಾರಿ ಕ್ಯೂನಲ್ಲಿ ನಿಂತು ಬೈಯಿಸಿಕೊಳ್ಳುತ್ತಿದ್ದ ಘಟನೆ, ಕಾರ್ಯಕ್ರಮ ಮುಗಿದ ನಂತರ ಪಕ್ಕದಲ್ಲಿರುವ ಆಟದ ಮೈದಾನದಲ್ಲಿ ಜಾರಬಂಡಿ ಆಡುತ್ತಿದ್ದ ಘಟನೆಗಳೂ ನನ್ನ ಮರೆಲಾಗದ ಬಾಲ್ಯದ ನೆನಪುಗಳು.ನನ್ನ ಶಾಲೆಯ ಹೆಸರು ದಿ ಕೆನ್ಮೊರೆ ಸ್ಛೂಲ್. ನಾವು ಹೈಸ್ಕೂಲಿನಲ್ಲಿದ್ದಾಗ ಹುಡುಗಿಯರು ಮಾತ್ರ ಇದ್ದರು ಹುಡುಗರು ಏಳನೇ ತರಗತಿಯವರೆಗೆ ಮಾತ್ರ ಇದ್ದರು. ನಾನು ಮೊದಲನೆ ತರಗತಿಯಿಂದ ಹತ್ತನೇ ತರಗತಿಯವರೆಗೂ ಒಂದೇ ಸ್ಕೂಲಿನಲ್ಲಿ ಓದಿದ್ದು, ನನ್ನ ಬಾಲ್ಯದ ಗೆಳತಿಯರು ಮೆಹವೀಸ್, ಜವೇರಿಯ, ಮಾರಿಯಾ, ಕುಬ್ರ ,ಶಹದ ,ಕಾಜಲ್, ಸ್ನೇಹ, ತೇಜಸ್ವಿನಿ, ಸಹನಾ, ಲಕ್ಷ್ಮಿ, ಶಾಗಿತ್ಯ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಾನು ಶಾಲೆಗೆ ಮೊದಲ ಸ್ಥಾನವನ್ನು ಪಡೆದಿದೆ ,ಅದು ನನಗೆ ಹೆಮ್ಮೆಯ ವಿಷಯ. ನನ್ನ ಕುಟುಂಬದವರು ಅದರಿಂದ ಸಂತೋಷವಾಗಿದ್ದರು.
ನನ್ನ ಪಿಯುಸಿಯನ್ನು ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮಾಡಿದೆ. ಪ್ರಜ್ವಲ, ಸಂಗೀತ ,ಲಿಕಿತ ,ಹೇಮಂತ್ ,ರಾಕೇಶ್, ಕೇಶವ, ಪವನ್ ನನ್ನ ಸ್ನೇಹಿತರಾಗಿದ್ದರು.ಇಲ್ಲಿ ನಾನು ಅವರು ನೀಡುವ ಚಟುವಟಿಕೆಗಳಲ್ಲಿ ಅಷ್ಟು ಗಮನ ಹರಿಸಲಿಲ್ಲ,ಅದು ಸರಿಯಾದ ನಿರ್ಧಾರವಲ್ಲ ಎಂದು ನನಗೆ ಈಗ ಅನಿಸುತ್ತಿದೆ. ಅದರಿಂದಾಗಿ ನನಗೆ ಬೇಜಾರು ಇದೆ.ನನ್ನ ಮುಂದಿನ ವಿದ್ಯಾಭ್ಯಾಸವನ್ನು ಕ್ರೈಸ್ಟ್ ಕಾಲೇಜಿನಲ್ಲಿ ಮುಂದುವರಿಸುತ್ತಿದ್ದೇನೆ. ಈಗ ನಾನು ಬ್ಯಾಚುಲರ್ ಆಫ್ ಕಾಮರ್ಸ್ನಲ್ಲಿ ಮೊದಲನೇ ವರ್ಷ ಓದುತ್ತಿದ್ದೇನೆ. ನನ್ನ ಆಸಕ್ತಿಗಳನ್ನು ತಿಳಿದುಕೊಳ್ಳಲು ಈ ಕಾಲೇಜ್ ನನಗೆ ತುಂಬಾ ಸಹಕಾರಿಯಾಗಿದೆ. ಈಗ ನಾನು ಕಳಕಳಿಯಿಂದ ಎಲ್ಲಾ ಚಟುವಟಿಕೆಗಳಲ್ಲಿ ಹೃದಯಪೂರ್ವಕವಾಗಿ ಪಾಲ್ಗೊಳ್ಳುತ್ತಿದ್ದೇನೆ.ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ನಾನು ಪುಸ್ತಕಗಳಿಗೆ ಮಾತ್ರ ಗಮನ ನೀಡದೆ ಕಾಲೇಜಿನಲ್ಲಿ ನಡೆಯುವ ಬೇರೆ ಬೇರೆ ವಿಷಯಗಳಿಗೂ ಗಮನ ನೀಡುತ್ತಾ ನನ್ನಲ್ಲಿರುವ ಪ್ರತಿಭೆಗಳನ್ನು ಹೊರ ತರುತ್ತಿದ್ದೇನೆ. ಒಟ್ಟಾರೆ ನಾನು ಮಾಡುವ ಕೆಲಸಗಳಿಂದ ನನಗೆ ತೃಪ್ತಿ ಹಾಗೂ ಸಂತೋಷವಿದೆ.
ಧನ್ಯವಾದಗಳು