ಸದಸ್ಯ:SumanaSV/ನನ್ನ ಪ್ರಯೋಗಪುಟ

ಟಿ.ಬಾಲಸರಸ್ವತಿ

ಬದಲಾಯಿಸಿ

ಟಿ.ಬಾಲಸರಸ್ವತಿ ಭಾರತೀಯ ನೃತ್ಯ ಕಲೆಯಲ್ಲಿ ಪ್ರಖ್ಯಾತ ಹೆಸರು. ಭರತನಾಟ್ಯ ಕಲೆಯನ್ನು ಭಾರತ ಮತ್ತು ವಿಶ್ವದ ವಿವಿದೆಡೆಗಳಲ್ಲಿ ಪ್ರಖ್ಯಾತಗೊಳಿಸುವಲ್ಲಿ ಬಾಲಸರಸ್ವತಿಯವರ ಕೊಡುಗೆ ಮಹತ್ವದ್ದು.

ಆರಂಭಿಕ ಜೀವನ ಹಾಗು ಇವರ ವ್ಯಕ್ತಿತ್ವ

ಬದಲಾಯಿಸಿ

ಇವರು ಭರತನಾಟ್ಯದಲ್ಲಿ ಪ್ರಖ್ಯಾತ ನೃತ್ಯಕಾರರು. ಇವರು ೧೩ ಮೇ ೧೯೧೮ ಇಸವಿಯಲ್ಲಿ, ತಂಜಾವೂರಿನಲ್ಲಿ ದೇವದಾಸಿ ಜನಾಂಗದಲ್ಲಿ ಜನಿಸಿದರು. ಇವರ ಕುಟುಂಬದವರೆಲ್ಲಾ ದೇವಾಲಯಗಳಲ್ಲಿ ಸಂಗೀತಕಾರರಾಗಿ ಮತ್ತು ನೃತ್ಯಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಚಿಕ್ಕಂದಿನಿಂದಲೇ ಕುಟುಂಬದ ಸಹಾಯದಿಂದ ಸಂಗೀತವನ್ನು ಕಲಿತರು.ತಾಯಿ, ಜಯಮಾಲ ಗಾಯಕರಾಗಿದ್ದು ಬಾಲಸರಸ್ವತಿ ತರಬೇತಿಗೆ ಉತ್ತೇಜನ ನೀಡಿದರು ಮತ್ತು ಸದಾ ಇವರೊಂದಿಗಿದ್ದು ಬೆಂಬಲ ನೀಡುತ್ತಿದ್ದರು . ಇವರು ೪ನೇ ವಯಸ್ಸಿನಲ್ಲಿ ನೃತ್ಯ ಕಲಿಯಲು ಆರಂಭಿಸಿದರು. ಇವರ ಮೊದಲನೆಯ ಗುರು ಕಂಢಪ್ಪಪಿಳೈ. ಇವರು ೭ನೇ ವಯಸ್ಸಿನಲ್ಲಿ ಕಾಂಚಿಪುರಂನಲ್ಲಿರುವ ದೇವಸ್ಥಾನದಲ್ಲಿ ರಂಗಪ್ರವೇಶ ಮಾಡಿದರು . ಇವರ ಕಿರಿಯ ಸಹೋದರರಿಬ್ಬರಾದ ಟಿ. ರಂಗನಾಥನ್ ಮತ್ತು ಟಿ.ವಿಶ್ವನಾಥನ್ ಸಂಗೀತಗಾರರು ಮತ್ತು ಶಿಕ್ಷಕರಾಗಿದ್ದರು . ಇವರ ಕಲೆ ಭಕ್ತಿ ಪ್ರಧಾನವಾಗಿತ್ತು.ಇವರ ಶೃಂಗಾರ ಅಭಿನಯ ಬಹಳ ವಿಶೇಷವಾಗಿತ್ತು . ಇವರು ತುಂಬಾ ಶಿಸ್ತಿನಿಂದ ಕಲೆಯನ್ನು ಅಭ್ಯಾಸ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಇವರಿಗೆ ಎಷ್ಟೇ ಕಷ್ಟ ಬಂದರು ತಮ್ಮ ಜೀವನವನ್ನು ನಾಟ್ಯಕ್ಕೆ ಮೀಸಲಾಗಿಟ್ಟಿದ್ದರಿಂದ ಜಗತ್ತಿನಾದ್ಯಂತ ಹೆಸರುವಾಸಿಯಾದರು .ಬಾಲಸರಸ್ವತಿಯವರು ವೇದಿಕೆ ಏರಿದ ಕ್ಷಣ ವಿದ್ಯುತ್ಸಂಚಲನವಾದಂತಾಗಿ ಪ್ರೇಕ್ಷಕರು ಮಂತ್ರಮುಗ್ಧರಾದಂತೆ ಇವರ ನೃತ್ಯವನ್ನು ನೋಡಿದರೆ ರೋಮಾಂಚನಗೊಳ್ಳುತ್ತಿದ್ದರು . ಅವರು ಪ್ರೇಕ್ಷಕರನ್ನು ಯಾವಾಗಲೂ ಗೌರವಿಸುತ್ತಿದ್ದರು. ಅವರು "ನಿಮ್ಮ ಕಾಯಕವನ್ನು ನೀವು ಮಾಡಿ, ಫಲಾಫಲಗಳ ಅಪೇಕ್ಷೆಯನ್ನು ಬಿಡಿ" ಎಂಬ ಲೋಕಜ್ಞಾನದ ನುಡಿಯನ್ನು ಆಡುತ್ತಿದ್ದರು. ಅವರಿಗೆ ಎಲ್ಲಾದಕ್ಕಿಂತ ತಮ್ಮ ಕಲೆಯ ಮೇಲೆ ಒಲವು ಹೆಚ್ಚಾಗಿತ್ತು. ಅವರು ನಿಜವಾದ ಸಾಧಕಿಯಾಗಿದ್ದರು. ಮೇ ೧೩ ಅವರು ಜನಿಸಿದ ದಿನವಾದ್ದರಿಂದ , ಆ ದಿನದಂದು ಭರತನಾಟ್ಯದ ಮೇಲೆ ಒಲವಿರುವವರೆಲ್ಲಾ ಅವರನ್ನು ನೆನಸುತ್ತಾರೆ.

ಬಿರುದು ಮತ್ತೆ ಪ್ರಶಸ್ತಿ

ಬದಲಾಯಿಸಿ

.ಇವರಿಗೆ "ಅಭಿನಯ ರಾಣಿ" ಎಂಬ ಬಿರುದು ದೊರೆತ್ತಿದೆ. ಮ್ಯೂಸಿಕ್ ಅಕಾಡೆಮಿ ಮದ್ರಾಸಿನಿಂದ 'ಸಂಗೀತ ಕಲಾನಿಧಿ'ಎಂಬ ಬಿರುದನ್ನು ಪಡೆದ ಏಕೈಕ ನೃತ್ಯ ಕಲಾವಿದೆ ಇವರು . ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ದೊರಕಿದೆ. ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯೂ ದೊರಕಿದೆ.

ವೃತಿಜೀವನ

ಬದಲಾಯಿಸಿ

ನೃತ್ಯಕ್ಕೆ ಅವರ ಕೊಡುಗೆ ಅಪಾರ . ದೇವದಾಸಿ ಜನಾಂಗಕ್ಕೆ ಮೀಸಲಾಗಿದ್ದ ನೃತ್ಯವನ್ನು ಎಲ್ಲಾ ಜನಾಂಗದವರು ಗೌರವದಿಂದ ಕಾಣುವಂತೆ ಮಾಡಿದರು ಮತ್ತು ಈ ಕಲೆಯನ್ನು ಅನೇಕ ದೇಶಗಳಿಗೆ ತಿಳಿಯಪಡಿಸಿದರು. ನಂತರ ಅವರದೇಆದ ಶಾಲೆಯನ್ನು ನಿರ್ಮಿಸಿ ಅಲ್ಲಿ ಓದಲು ಬಂದ ಮಕ್ಕಳಿಗೆ ನೃತ್ಯದ ಶಿಕ್ಷಣವನ್ನು ನೀಡಿದರು . ಇವರು ಬೇರೆ ಬೇರೆ ದೇಶಗಳಿಗೆಲ್ಲಾ ಹೋಗಿ, ಶಿಕ್ಷಣವನ್ನು ನೀಡಿದರು. ಹೀಗೆ ಇವರ ಇಡೀ ಕುಟುಂಬ ನಮ್ಮ ಆಧುನಿಕ ಕಲೆಯನ್ನು ಮುಂದೆ ತಂದಿತು . ಇವರು  ನಮ್ಮ ಭಾರತದ ಆಧುನಿಕ ಕಲೆಯನ್ನು ಇಡೀ ಜಗತ್ತಿಗೆ ಹರಡಲು ಕಾರಣರಾದ  ನೂರು ಪ್ರಮುಖರಲ್ಲಿ  ಒಬ್ಬರು ಎಂದು ಒಂದು ಪತ್ರಿಕೆಯಲ್ಲಿ ಬರೆಯಲಾಗಿದೆ . ಈಕೆಯನ್ನು ಎಲ್ಲಾ ನೃತ್ಯ ಕಲಾವಿದರು ಗೌರವಿಸುತ್ತಾರೆ ಮತ್ತು ನೆನೆಸುತ್ತಾರೆ. ಇವರು ತಮ್ಮ ಜೀವನವನ್ನು , ನೃತ್ಯಕ್ಕೋಸ್ಕರ ಮುಡಿಪಾಗಿಟ್ಟವರು . ಇವರು ಫೆಬ್ರವರಿ ೯, ೧೯೮೪ ರಂದು ಮರಣ ಹೊಂದಿದರು. ಇವರ ಮೊಮ್ಮಗ ಇವರ ಜೀವನದ ಮೇಲೆ ಒಂದು ಸಣ್ಣ ಕಥೆಯನ್ನು ಬರೆದಿದ್ದಾನೆ . ಇವರ ಜೀವನ ಚಿತ್ರವನ್ನು ನೋಡಿ ಬಹಳ ಕಲಾವಿದರು ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡಿದ್ದಾರೆ . ಇವರು ಮಾಡುವ ನೃತ್ಯದಲ್ಲಿ ನೃತ್ಯಕ್ಕಿಂತ ಅಭಿನಯವೇ ಹೆಚ್ಚು ಕಂಡುಬರುತ್ತದೆ . ಇದರಿಂದ ಇವರು ಮಾಡುತ್ತಿದ್ದ ನೃತ್ಯ ಪ್ರದರ್ಶನ ಪ್ರೇಕ್ಷಕರನ್ನು ಬಹಳ ಬೇಗ ಮುಟ್ಟುತ್ತಿತ್ತ್ತು . ಹೀಗಾಗಿ ಇವರ ಕಲೆಯನ್ನು ನೋಡಲು ಬಹಳ ಕಡೆಯಿಂದ ಜನರು ನೋಡಲು ಬರುತ್ತಿದ್ದರು. ಬಾಲಸರಸ್ವತಿಯರಂತೆ ಕಲೆಯನ್ನು ಎತ್ತಿ ಹಿಡಿದವರಲ್ಲಿ ರುಕ್ಮಿಣಿಮಿನಿದೇವಿ ಅರುಂದಾಲೆ ಕೂಡ ಒಬ್ಬರು . ಇವರಿಬ್ಬರೂ ಇಡೀ ಜಗತ್ತಿನಲ್ಲಿ ಹೆಸರುವಾಸಿಯಾಗಿದ್ದರು . ಅನೇಕ ಕಲಾವಿದರು ಇವರಿಬ್ಬರನ್ನು ಆರಾಧಿಸುತ್ತಾರೆ.


ಇ. ಎಚ್.ಕಾರ್ ( E H Carr)

ಬದಲಾಯಿಸಿ

ಬಾಲ್ಯ ಜೀವನ

ಬದಲಾಯಿಸಿ

ಇ ಎಚ್ ಕಾರ್ ಮಧ್ಯಮ ವಗ೯ದ ಕುಟುಂಬದಲ್ಲಿ ಹುಟ್ಟಿ ಲಂಡನ್ ನ ಮಚೆ೯ಂಟ್ ಟೈಲರ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಟ್ರಿನಿಟಿ ಕಾಲೇಜ್, ಕೇಂಬ್ರಿಜ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ,1916 ರಲ್ಲಿ ಪದವಿ ಶಿಕ್ಷಣವನ್ನು ಪಡೆದರು. ಕಾರ್ ಕುಟುಂಬ ಉತ್ತರ ಇಂಗ್ಲೆಂಡಿನ ಮೂಲದವರು. ಕಾರ್ ನ ಪೋಷಕರು ಫ್ರಾನ್ಸಿಸ್ ಪಾರಕರ್ ಮತ್ತು ಜೆಸ್ಸಿ (ನಿ ಹೆಲೆಟ್) ಕಾರ್. ಅವರು ಕನ್ಸವೇ೯ಟಿವ್ ಆಗಿದ್ದು ನಂತರ ಲಿಬರಲ್ ತತ್ವವನ್ನು ಅನುಮೋದಿಸಿದರು. ಕಾರ್ ತನ್ನ ಮಚೆ೯ಂಟ್ ಟೈಲರ್ ಶಾಲೆಯಲ್ಲಿ ತನ್ನ ಅನುಭವವನ್ನು ಈ ರೀತಿ ವಿವರಿಸಿದ್ದಾರೆ "ಶೇಕಡ 95 ನನ್ನ ಜೊತೆಯವರು ಆಥೋ೯ಡಕ್ಸ್ ಕನ್ಸವೇ೯ಟಿವ್ ಮನೆಯಿಂದ ಬಂದಿದ್ದು ಲಾಯ್ಡ್ ಜಾಜ್೯ನನ್ನು ದೆವ್ವದ ರೂಪ ಎಂದು ಭಾವಿಸುತ್ತಿದ್ದರು. ಲಿಬರಲ್ ಗಳಾದ ನಾವು ಅಲ್ಪಸಂಖ್ಯಾತರಾಗಿದ್ದೆವು ." ತನ್ನ ಪೋಷಕರಿಂದ ಕಾರ್ 'ಅಭಿವೃದ್ಧಿ' ವಿಚಾರಧಾರೆಯಿಂದ ಪ್ರೇರಿತರಾಗಿದ್ದರು . 1911ರಲ್ಲಿ ಟ್ರಿನಿಟಿ ಕಾಲೇಜ್, ಕೇಂಬ್ರಿಡ್ಜ್ನಂದ ಕಾರ್ ಕ್ರೇವಿನ್ ವಿದ್ಯಾಥಿ೯ವೇತನ ಪಡೆದರು ಅವರು 1961ರಲ್ಲಿ ಇತಿಹಾಸ ಎಂದರೇನು ಎಂಬ ಪುಸ್ತಕವನ್ನು ಬರೆದರು .

1936ರಲ್ಲಿ ಕಾರ್ ತನ್ನ ಕೆಲಸಕ್ಕೆ ರಾಜಿನಾಮೆ ಕೊಟ್ಟು ಬ್ರಿಟೀಷ್ ವಿದೇಶ ಕಛೇರಿ ಸೇರಿದರು. ಕಾರ್ ಗೆ ಅನಾರೋಗ್ಯದ  ನಿಮಿತ್ತ ಮಿಲಿಟರಿ ಸೇವೆಯಿಂದ ವಿನಾಯಿತಿ ಸಿಕ್ಕಿತು. ಅವರು ಮೊದಲು ಕಾಂಟ್ರಬ್ಯಾಂಡ್ನಲ್ಲಿ ಕೆಲಸಮಾಡಿ ನಂತರ 1917ರಲ್ಲಿ ಉತ್ತರ ವಿಭಾಗದಲ್ಲಿ ಸೇವೆ ಸಲ್ಲಿಸಿದರು . 1918ರಲ್ಲಿ ಬಂಧಿಗಳಾಗಿದ್ದ ಬ್ರಿಟೀಷ್ ನಾಯಕರನ್ನು ಬಿಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಬ್ಬ ನಾಯಕರಾಗಿ, ಕಾರ್,ಲಾರ್ಡ್ ಹಲೀಫರಿಂದ ಒಳ್ಳೆಯ ಜ್ಙಾನಿ ಮತ್ತು ಆಡಳಿತಗಾರರೆಂದು ಮೆಚ್ಚುಗೆ ಪಡೆದರು. ೯೦ ವಯಸ್ಸಿಗೆ , ಕಾರ್ ತಮ್ಮ ಕೊನೆಯ ಉಸಿರೆಳೆದರು. ಕಾರ್ ಅವರು ನವೆಂಬರ್ ೩, ೧೯೮೨ರಲ್ಲಿ ನಿಧನರಾದರು.

ಇತಿಹಾಸ ಎಂದರೇನು?

ಬದಲಾಯಿಸಿ

ಇತಿಹಾಸ ಎಂದರೇನು ಎಂಬುದು ಇ. ಎಚ್.ಕಾರ್ ಬರೆದ ಇತಿಹಾಸ ಚರಿತ್ರೆ ಪುಸ್ತಕ. ಅದು ಮೊದಲು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ 1916ರಲ್ಲಿ ಮುದ್ರಿಸಲ್ಪಟ್ಟಿತ್ತು. ಅದು ಇತಿಹಾಸದ ನಿಜ ಸಂಗತಿಗಳು, ಇತಿಹಾಸಕಾರರ ಬಗ್ಗೆ, ವಿಜ್ಙಾನ, ನೀತಿ, ವ್ಯಕ್ತಿ ಮತ್ತು ಸಮಾಜವನ್ನು ಒಳಗೊಂಡಿದೆ. ಪುಸ್ತಕವು ಮೂಲತಃ 1961 ರಲ್ಲಿ ಕಾರ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ನೀಡಿದ ಜಿಎಂ ಟ್ರೆವೆಲಿಯನ್ ಉಪನ್ಯಾಸಗಳ ಒಂದು ಸರಣಿಯ ಭಾಗವಾಗಿದೆ . ಉಪನ್ಯಾಸಗಳು ಇತಿಹಾಸ ಸಿದ್ಧಾಂತದ  ವಿಸ್ತೃತ  ಪರಿಚಯ ಮತ್ತು  ಉದ್ದೇಶವಾಗಿದೆ . ಅವರು ತಮ್ಮ ಕೊನೆಯ  ಕಾಲದಲ್ಲಿ ಇತಿಹಾಸ ಎಂದರೇನು ಎಂಬ ತಮ್ಮ  ಪುಸ್ತಕವನ್ನು ಪುನರ್ ವಿಮರ್ಶೆ ಮಾಡಬೇಕೆಂದಿದ್ದರು.



ಕನ್ಫ್ಯೂಷಿಯಸ್

ಬದಲಾಯಿಸಿ

ಕನ್ಫ್ಯೂಷಿಯಸ್ ಚೀನಾ ದೇಶದ ಐತಿಹಾಸಿಕ ಬೋಧಕ. ಇವನ ಕಾಲ ಕ್ರಿ. ಪೂ. ೪೨೯  ರಿಂದ ೫೫೧.  ರಾಜಕಾರಣಿ ಮತ್ತು ತತ್ವಜ್ಞಾನಿ.ಕನ್ಫ್ಯೂಷಿಯಸ್ ಅವರ ತತ್ವಗಳು ವೈಯಕ್ತಿಕ ಹಾಗು ಸಾಮಾಜಿಕ ನೈತಿಕತೆ, ಸೂಕ್ತ ಸಾಮಾಜಿಕ ಸಂಬಂಧಗಳು, ಸಾಮಾಜಿಕ ನ್ಯಾಯ ಮತ್ತು ಪ್ರಾಮಾಣಿಕತೆಯ ಬಗ್ಗೆ ಸಾರುತ್ತವೆ. ಅವನ ಅನುಯಾಯಿಗಳು "ಹಂಡ್ರೆಡ್ ಸ್ಕೂಲ್ ಆಫ಼ ಥಾಟ್" ಯುಗದಲ್ಲಿ ಇತರೆ ತತ್ವಜ್ಞಾನಿ ಗಳೊಂದಿಗೆ, ಕಿನ್ ರಾಜವಂಶದ ಶಾಸನವಾದಿಗಳ ಪರ ವಾದ ಮಂಡಿಸುತ್ತಿದ್ದರು. ಕಿನ್ ರಾಜವಂಶದ ನಂತರ ಚು ರಾಜವಂಶವನ್ನು ಸೋಲಿಸಿ ಗದ್ದುಗೆ ಏರಿದ ಹ್ಯಾನ್ ರಾಜವಂಶ ಕನ್ಫ್ಯೂಷಿಯಸ್ ತತ್ವಗಳನ್ನು ಅಧಿಕೃತಗೊಳಿಸಿ, ಕನ್ಫ್ಯೂಷಿಯಸ್ ಸಿದ್ಧಾಂತ ಅಥವಾ ಕನ್ಫ್ಯೂಷಿಯನಿಸಮ್ ಎಂದು ಪ್ರಸಿದ್ಧಗೊಳಿಸಿದರು.

ಚೀನೀ ಭಾಷೆಯ ಹಲವು ಮೇರು ಕೃತಿಗಳನ್ನು ರಚಿಸಿರುವ ಹಾಗು ಸಂಪಾದಿಸಿರುವ ಹೆಗ್ಗಳಿಕೆ ಕನ್ಫ್ಯೂಷಿಯಸ್ ಅವರಿಗೆ ಸಲ್ಲುತ್ತದೆ. ಅವರ ಬೋಧನೆ ಗಳನ್ನು ಅವರ ಮರಣದ ನಂತರ ಅನಲೆಕ್ಟೆಸ್ ಎಂಬ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ.

ಕನ್ಫ್ಯೂಷಿಯಸ್ ತತ್ವಗಳು ಮೂಲತಃ ಚೀನೀ ಸಂಪ್ರದಾಯ ಹಾಗು ನಂಬಿಕೆಗಳಿಗೆ ಸೇರಿವೆ. ಅವರ ಬೋಧನೆಗಳು- ಕೌಟುಂಬಿಕ ನಿಷ್ಠೆ, ಪೂರ್ವಿಕರ ಆರಾಧನೆ, ಮಕ್ಕಳಿಂದ ಹಿರಿಯರಿಗೆ ಗೌರವ, ಸತಿಯರಿಗೆ ತಮ್ಮ ಪತಿಯ ಮೇಲೆ ಗೌರವಗಳನ್ನೂ ಕುರಿತ್ತದ್ದಾಗಿವೆ . ಒಂದು ಒಳ್ಳೆ ಸರ್ಕಾರಕ್ಕೆ ಕುಟುಂಬವೇ ಮೂಲ ಎಂಬ ಅಭಿಪ್ರಾಯ ಉಳ್ಳವರಾಗಿದ್ದರು. "ನಿನಗೆ ಬೇರೆಯವರು ಏನು ಮಾಡಬಾರದೆಂದು ಬಯಸುವೆಯೊ, ಅದನ್ನು ನೀನು ಬೇರೆಯವರಿಗೆ ಮಾಡಬೇಡ" ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ ಹಾಗು ಇದು ಅವರ ಸುವರ್ಣ ನಿಯಮವೂ ಹೌದು.

ಕನ್ಫ್ಯೂಷಿಯಸ್ ಅವರ ಕೌಟುಂಬಿಕ ಹಾಗು ವೈಯಕ್ತಿಕ ಹೆಸರು ಕೊಂಗ್ ಕಿಯು. ಇದಕ್ಕೆ ಪೂರಕವಾದ ಹೆಸರೆಂದರೆ ಕೊಂಗ್ ಫ಼ುಜ಼ಿ . ಚೀನೀ ಭಾಷೆಯಲ್ಲಿ ಕೊಂಗ್ ಫ಼ುಜ಼ಿ ಎಂದರೆ ಗ್ರಾಂಡ್ ಮಾಸ್ಟರ್. ಲ್ಯಾಟಿನ್ ಹೆಸರಾದ "ಕನ್ಫ್ಯೂಷಿಯಸ್"-"ಕೊಂಗ್ ಫ಼ುಜ಼ಿ" ಎಂಬ ಹೆಸರಿನಿಂದ ಹುಟ್ಟಿಕೊಂಡಿದೆ. ಈ ಹೆಸರನ್ನು ಮೊದಲನೆಯ ಬಾರಿಗೆ ಮ್ಯಟ್ಟಿಯೊ ರಿಕ್ಕಿ ಎಂಬ ಹದಿನಾರನೆಯ ಶತಮಾನದ ಕ್ರೈಸ್ತ ಪಾದ್ರಿ ಬಳಸಿದರು.

ಅನಲೆಕ್ಟೆಸ್ ಪುಸ್ತಕದಲ್ಲಿ, ಕನ್ಫ್ಯೂಷಿಯಸ್ ಅವರನ್ನು "ದಿ ಮಾಸ್ಟರ್" ಎಂದು ನಮೂದಿಸಲಾಗಿದೆ. ಕ್ರಿ.ಶ.೧ ರಲ್ಲಿ ಅವರಿಗೆ "ಲೌದ್ಲ್ಯ್ ಡೆಕ್ಲಾರಬಲ್ ಲಾರ್ಡ್ ನಿ" ಎಂದು ಮೊದಲನೆಯ ಮರಣೋತ್ತರ ಹೆಸರು ನೀಡಲಾಯಿತು. ೧೫೩೦ ರಲ್ಲಿ ಅವರನ್ನು "ಎಕ್ಸ್ಟೀಮ್ಲ್ಯ್ ಸೇಜ್ ಡಿಪಾರ್ಟೆಡ್ ಟೀಚರ್" ಎಂದು ಘೋಷಿಸಲಾಯಿತು. ಇದನ್ನು ಹೊರೆತು ಪಡಿಸಿ ಅವರನ್ನು ಮಹಾನ್ ಋಷಿ, ಮೊದಲನೆಯ ಗುರು ಹಾಗು ಮಾದರಿ ಗುರು ಎಂದೂ ಕರೆಯಲಾಗುತ್ತಿದೆ.

ಕೌಟುಂಬಿಕ ಹಿನ್ನಲೆ

ಬದಲಾಯಿಸಿ

" ಫ್ಯಾಮಿಲಿ ಟ್ರೀ ಆಫ್ ಕನ್ಫ್ಯೂಷಿಯಸ್ ಇನ್ ದ ಮೇನ್ ಲೈನ್ ಆಫ್ ಡೆಸೆಂಟ್" ಸಂಪ್ರದಾಯದ ಪ್ರಕಾರ, ಕನ್ಫ್ಯೂಷಿಯಸ್ ಅವರು ಮೂರು ತಲೆಮಾರು ಹಿಂದಿನವರು , ಲು ಸ್ಟೇಟ್ ಇಂದ ವಲಸೆ ಬಂದಿದ್ದರು. ಅವರು ಡ್ಯೂಕ್ಸ್ ಆಫ್ ಸಾಂಗ್ ಮೂಲಕ ಶಾಂಗ್ ರಾಜವಂಶಸ್ಥರಾಗಿದ್ದರು.

ಜೀವನಚರಿತ್ರೆ ಆರಂಭಿಕ ಜೀವನ

ಬದಲಾಯಿಸಿ

ಕನ್ಫ್ಯೂಷಿಯಸ್ ಅವರು ಸೆಪ್ಟೆಂಬರ್ ೨೮, ೫೫೧ ಕ್ರಿ.ಪೂ. ದಲ್ಲಿ ಜನಿಸಿರುವುದಾಗಿ ನಂಬಲಾಗಿದೆ. ಲು ರಾಜ್ಯದ ಜ಼ೊವು ( ಇಂದಿನ ಕುಫು, ಶಾಂಡೊಂಗ್ ಪ್ರಾಂತ್ಯ) ಅವರ ಜನ್ಮಸ್ಥಾನ. ಅವರ ತಂದೆಯ ಹೆಸರು ಕೊಂಗ್ ಹೆ, ಅವರನ್ನು ಶೂಲಿಯಾಂಗ್ ಹೆ ಎಂದೂ ಸಹ ಕರೆಯುತ್ತಿದ್ದರು. ಕೊಂಗ್ ಹೆ ಅವರು ಲು ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದರು. ಕನ್ಫ್ಯೂಷಿಯಸ್ ರ ಮೂರನೆಯ ವಯಸ್ಸಿನಲ್ಲಿ, ಅವರ ತಂದೆ ಕೊಂಗ್ ಹೆ ಮರಣ ಹೊಂದಿದರು. ನಂತರ ತಾಯಿ ಯಾನ್ ಜ಼ೆಂಗ್ ಜ಼ೈ ಮಗನನ್ನು ಬಡತನದಲ್ಲಿ ಬೆಳೆಸಬೇಕಾಯಿತು. ಅವರ ತಾಯಿ ನಲವತ್ತಕ್ಕು ಕಮ್ಮಿ ವಯಸ್ಸಿನಲ್ಲೆ ಮರಣ ಹೊಂದಿದರು. ಕನ್ಫ್ಯೂಷಿಯಸ್ ತಮ್ಮ ೧೯ ನೇ ವಯಸ್ಸಿನಲ್ಲಿ ಕಿಗುವಾನ್ ಎಂಬ ಉಪನಾಮ ಹೊಂದಿರುವ ಸ್ತ್ರೀಯನ್ನು ವರಿಸಿದರು . ವರ್ಷದ ಬಳಿಕ ಕೊಂಗ್ ಲಿ ಎನ್ನುವ ಮಗುವನ್ನು ಪಡೆದರು . ನಂತರ ಆ ಮಗು "ಬೊಯು" ಎಂದರೆ ಚೀನಿ ಭಾಷೆಯಲ್ಲಿ "ಅತ್ಯುತ್ತಮ ಮೀನು" ಎಂದು ಪ್ರಸಿದ್ಧಿ ಹೊಂದುತ್ತದೆ. ನಂತರ ಕನ್ಫ್ಯೂಷಿಯಸ್ ಮತ್ತು ಕಿಗುವಾನ್ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡುತ್ತಾರೆ, ಅದರಲ್ಲಿ ಒಂದು ಮಗು ಆರಂಭಿಕ ಜೀವನದಲ್ಲೆ ಮರಣಕ್ಕೆ ಗುರಿಯಾಗುತ್ತದೆ. ಕನ್ಫ್ಯೂಷಿಯಸ್ ಸಾಮಾನ್ಯರಿಗೆಂದೇ ಇದ್ದ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆದರು. ಆರು ಕಲೆಗಳಲ್ಲಿ ಪರಿಣತಿಯನ್ನು ಪಡೆದರು .

ಕನ್ಫ್ಯೂಷಿಯಸ್, ಶ್ರೀಮಂತ ಮತ್ತು ಸಾಮಾನ್ಯ ಜನರ ನಡುವಿನ ವರ್ಗವಾಗಿದ್ದ ಶೀ(Shi) ವರ್ಗದಲ್ಲಿ ಜನಿಸಿದ್ದರು. ಅವರ ಆರಂಭಿಕ ೨೦ ವರ್ಷಗಳಲ್ಲಿ ಹಲವಾರು ಸರ್ಕಾರಿ ಕೆಲಸಗಳನ್ನು ನಿರ್ವಹಿಸಿದ್ದರು. ತಮ್ಮ ತಾಯಿಯ ಅಂತ್ಯಕ್ರಿಯೆಯನ್ನು ನೆರವೇರಿಸಲು, ಲೆಕ್ಕಪುಸ್ತಕ ಬರೆದು ಹಾಗೂ ಕುರಿ, ಕುದುರೆಗಳ ಪಾಲನೆಯನ್ನು ಮಾಡಿ ಸೇವೆ ಸಲ್ಲಿಸಿದ್ದರು. ೨೩ ವಯಸ್ಸಿನ ಕನ್ಫ್ಯೂಷಿಯಸ್, ಅವರ ತಾಯಿಯ ಮರಣದ ಬಳಿಕ ಸಂಪ್ರದಾಯಕ್ಕೆ ಅನುಗುಣವಾಗಿ ಮೂರು ವರ್ಷ ಶೋಕಾಚರಣೆ ಯನ್ನು ಮಾಡಿದ್ದರು.

ರಾಜಕೀಯ ಬದುಕು

ಬದಲಾಯಿಸಿ

ಲು ರಾಜ್ಯವು ಆಡಳಿತ ಸಭೆಯಿಂದ ಆಳಲ್ಪಟ್ಟಿತ್ತು. ಇದರ ಅಡಿಯಲ್ಲಿ ವಿಸ್ಕೌಂಟ್ ಪಟ್ಟ ಹೊಂದಿದ್ದ ಮೂರು ಶ್ರೀಮಂತ ಕುಟುಂಬಗಳಿದ್ದವು. ಅವರು ಪಿತ್ರಾರ್ಜಿತವಾಗಿ ಲು ರಾಜ್ಯದ ಆಡಳಿತಶಾಹಿಗಳ ಪೀಠವನ್ನು ಅಲಂಕರಿಸುತ್ತಿದ್ದರು. ಜಿ ಕುಟುಂಬದ ಜನರು ಸಚಿವ ಸ್ಥಾನ ಹಾಗು ಪ್ರಧಾನ ಮಂತ್ರಿ ಸ್ಥಾನಗಳನ್ನು, ಮೆಂಗ್ ಕುಟುಂಬದ ಜನರು ವಿವಿಧ ಕಾರ್ಯಾಂಗಗಳ ಸಚಿವ ಸ್ಥಾನ ಮತ್ತು ಶು ಕುಟುಂಬದ ಜನರು ಯುದ್ಧ ಸಚಿವ ಸ್ಥಾನಗಳನ್ನು ಅಲಂಕರಿಸುತ್ತಿದ್ದರು. ೫೦೫ ಕ್ರಿ.ಪೂ.ದ ಚಳಿಗಾಲದಲ್ಲಿ ಜಿ ಕುಟುಂಬಕ್ಕೆ ಸೇರಿದ ಯಾಂಗ್ ಹುವ ಬಂಡಾಯ ಎದ್ದು, ಜಿ ಕುಟುಂಬದ ಸಂಪೂರ್ಣ ಆಡಳಿತವನ್ನು ವಶಪಡಿಸಿಕೊಳ್ಳುತ್ತಾನೆ. ಆದರೆ ೫೦೧ ಕ್ರಿ.ಪೂ.ದ ಬೇಸಿಗೆ ಕಾಲದೊಳಗೆ ಮೂರು ಆಡಳಿತಶಾಹಿ ಕುಟುಂಬಗಳು ಒಗ್ಗೂಡಿ ಯಾಂಗ್ ಹುವ ನನ್ನು ಯಶಸ್ವಿಯಾಗಿ ಲು ರಾಜ್ಯದಿಂದ ಹೊರ ಹಾಕುತ್ತಾರೆ. ಅಷ್ಟರಲ್ಲಿ ಕನ್ಫ್ಯೂಷಿಯಸ್ ತಮ್ಮ ಭೋಧನೆಗಳ ಮೂಲಕ ಗಣನೀಯ ಖ್ಯಾತಿಯನ್ನು ಪಡೆದಿದ್ದರು. ಈ ಮೂರು ಆಡಳಿತಶಾಹಿ ಕುಟುಂಬಗಳು ಕಾನೂನುಬದ್ಧ ಸರ್ಕಾರಕ್ಕೆ ನಿಷ್ಠೆಯಿಂದಿರಲು, ಸನ್ನಡತೆ ಮತ್ತು ಸದಾಚಾರವನ್ನು ಅರಿಯಲು ಕನ್ಫ್ಯೂಷಿಯಸ್ ರವರನ್ನು ಸಂಪರ್ಕಿಸಿದರು. ಆದ್ದರಿಂದ ಆ ವರ್ಷ (೫೦೧ ಕ್ರಿ.ಪೂ.) ಕನ್ಫ್ಯೂಷಿಯಸ್ ಅವರನ್ನು ಒಂದು ಪಟ್ಟಣದ ಗವರ್ನರ್ ಆಗಿ ನೇಮಿಸಲಾಯಿತು. ದಿನಗಳುರುಳಿದಂತೆ ಕನ್ಫ್ಯೂಷಿಯಸ್ ಅಪರಾಧ ಸಚಿವರಾಗಿ ಹೊರಹೊಮ್ಮಿದರು.

ಕನ್ಫ್ಯೂಷಿಯಸ್ ಮೂರು ಆಡಳಿತಶಾಹಿ ಕುಟುಂಬಗಳಿಗೆ ಸೇರಿದ ಭದ್ರ ಕೋಟೆಗಳನ್ನು ಕೆಡವಿ, ಅಧಿಕಾರವನ್ನು ಸಂಪೂರ್ಣವಾಗಿ ಆಡಳಿತ ಸಭೆಗೆ ಹಿಂದಿರುಗಿಸಲು ಇಚ್ಛಿಸಿದರು. ಆದರೆ ಕನ್ಫ್ಯೂಷಿಯಸ್ ಸಂಪೂರ್ಣ ರಾಜತಂತ್ರದ ಮೇಲೆ ಅವಲಂಬಿಸಿದ್ದರು. ಅವರಿಗೆ ಯಾವುದೇ ಸೈನ್ಯದ ಸಹಕಾರವಿರಲಿಲ್ಲ.೫೦೦ ಕ್ರಿ.ಪೂ. ದಲ್ಲಿ ಹೋ ಪಟ್ಟಣದ ಗವರ್ನರ್ ಆಗಿದ್ದ ಹೋ ಫಾನ್ ಅವನ ಮೇಲಾಡಳಿತವಾಗಿದ್ದ ಶು ರಾಜವಂಶದ ವಿರುದ್ಧವಾಗಿ ಧಂಗೆ ಏಳುತ್ತಾನೆ. ಮೆಂಗ್ ಮತ್ತು ಶು ರಾಜವಂಶಗಳು ಹೋ ನನ್ನು ಮುತ್ತಿಗೆ ಹಾಕಿದರೂ ಯಶಸ್ವಿಯಾಗಲಿಲ್ಲ. ಆ ಸಂದರ್ಭ ದಲ್ಲಿ ಒಬ್ಬ ನಿಷ್ಠಾವಂತ ಸರ್ಕಾರಿ ಅಧಿಕಾರಿ ಜನರೊಂದಿಗೆ ಮಧ್ಯ ಪ್ರವೇಶಿಸಿ ಹೋ ಫಾನ್ ಕೀ ರಾಜ್ಯಕ್ಕೆ ಹೋಗುವಂತೆ ಮಾಡುತ್ತಾರೆ. ಈ ಸಂದರ್ಭವು ಕನ್ಫ್ಯೂಷಿಯಸ್ ಮತ್ತು ಅವರ ಅನುಯಾಯಿಗಳಿಗೆ ಲಾಭದಾಯಕವಾಗಿತ್ತು. ಆಗ ಅವರು ಆಡಳಿತಶಾಹಿ ಕುಟುಂಬಗಳಿಗೆ ತಮ್ಮ ಭದ್ರ ಕೋಟೆಗಳನ್ನು ಕೆಡವಿ, ಉದಾರ ಆಡಳಿತದೊಂದಿಗೆ ಜನರ ಹಿತಾಸಕ್ತಿಗೆ ಶ್ರಮಿಸಲು ಸಲಹೆ ನೀಡುತ್ತಾರೆ.

ಝುವ್ ಜ್ಹುಯೆನ್ ನ ಪ್ರಕಾರ ಮುಖ್ಯಮಂತ್ರಿ ಜಿ ಕಂಜಿಝಿ ಅವರ ಆಹ್ವಾನದ ಮೇರೆಗೆ ೬೮ನೇ ವಯಸ್ಸಿಗೆ ತನ್ನ ಹುಟ್ಟೂರಾದ ಲು ಗೆ ಹಿಂದಿರುಗಿದರು. ಹಿಂದಿರುಗಿದ ಸಮಯದಲ್ಲಿ, ಕನ್ಫ್ಯೂಷಿಯಸ್ ಕೆಲವೊಮ್ಮೆ ಆಡಳಿತ ಮತ್ತು ಅಪರಾಧ ವಿಷಯ ಕುರಿತು ಜಿ ಕಾಂಗ್ಜಿ ಸೇರಿದಂತೆ ಲು ದಲ್ಲಿನ ಹಲವಾರು ಸರ್ಕಾರಿ ಅಧಿಕಾರಿಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.ತಮ್ಮ ಮಗ ಮತ್ತು ಅವರ ನೆಚ್ಚಿನ ಶಿಷ್ಯರಿಬ್ಬರನ್ನೂ ಕಳೆದುಕೊಂಡಿದ್ದರಿಂದ ಅವರು 71 ಅಥವಾ 72 ನೇ ವಯಸ್ಸಿನಲ್ಲಿ ನೈಸರ್ಗಿಕ ಕಾರಣಗಳಿಂದ ನಿಧನರಾದರು. ಕನ್ಫ್ಯೂಷಿಯಸ್ ಅನ್ನು ಕಾಂಗ್ ಲಿನ್ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು, ಅದು ಶಾಂಡಾಂಗ್ ಪ್ರಾಂತ್ಯದ ಕ್ಯುಫುನ ಐತಿಹಾಸಿಕ ಭಾಗದಲ್ಲಿದೆ.ಇದು ಸಿಶುಯಿ ನದಿಯ ದಡದಲ್ಲಿ ಇದೆ ..ಕನ್ಫ್ಯೂಷಿಯಸ್ನ ನೆನಪಿಗಾಗಿ ಅಲ್ಲಿ ನಿರ್ಮಿಸಲಾದ ಮೂಲ ಸಮಾಧಿಯು ಕೊಡಲಿಯ ಆಕಾರವನ್ನು ಹೊಂದಿತ್ತು.


[] [] []


 
ಕಾರ್ಲ್ ಪೊಪ್ಪೆರ್

ಸರ್ ಕಾರ್ಲ್ ಪೊಪ್ಪರ್ ( Sir Karl Popper)

ಬದಲಾಯಿಸಿ

ಸರ್ ಕಾರ್ಲ್ ರೈಮಂಡ್ ಪಾಪ್ಪರ್ (28 ಜುಲೈ 1902 - 17 ಸೆಪ್ಟೆಂಬರ್ 1994) ಒಬ್ಬ ಆಸ್ಟ್ರಿಯನ್-ಬ್ರಿಟಿಷ್ ತತ್ವಜ್ಞಾನಿ, ಶೈಕ್ಷಣಿಕ ಮತ್ತು ಸಾಮಾಜಿಕ ವಿಮರ್ಶಕ. 20ನೇ ಶತಮಾನದ ವಿಜ್ಞಾನದ ಅತ್ಯಂತ ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು.

ಸರ್ ಕಾರ್ಲ್ ಪೊಪ್ಪರ್ ಆಸ್ಟ್ರಿಯನ್-ಬ್ರಿಟಿಷ್ ಮೂಲದ ತತ್ವಶಾಸ್ತ್ರಜ್ಞ ಮತ್ತು ಪ್ರೊಫೆಸರ್ ಆಗಿದ್ದರು. 20 ನೇ ಶತಮಾನವಿಜ್ಞಾನದ ಮಹೋನ್ನತ ತತ್ವಜ್ಞಾನಿಯೆಂದು ಪರಿಗಣಿಸಲಾಗಿದೆ. ಪಾಪ್ಪರ್ ಪ್ರಕಾರ, ಪ್ರಾಯೋಗಿಕ ವಿಜ್ಞಾನದಲ್ಲಿನ ಒಂದು ಸಿದ್ಧಾಂತವನ್ನು ಎಂದಿಗೂ ಸಾಬೀತುಪಡಿಸಲಾಗುವುದಿಲ್ಲ, ಆದರೆ ಅದನ್ನು ಸುಳ್ಳು ಮಾಡಬಹುದು, ಅಂದರೆ ಅದನ್ನು ನಿರ್ಣಾಯಕ ಪ್ರಯೋಗಗಳೊಂದಿಗೆ ಪರಿಶೀಲಿಸಬಹುದು ಪಾಪ್ಪರ್ ಅವರು ಪಾರಂಪರಿಕ ಜ್ಞಾನವನ್ನು ವಿರೋಧಿಸಿ, ಅದನ್ನು ವಿಮರ್ಶಾತ್ಮಕ ವೈಚಾರಿಕತೆಯೊಂದಿಗೆ ಬದಲಾಯಿಸಿದರು, ರಾಜಕೀಯ ಜಿಜ್ಞಾಸೆಯಲ್ಲಿ  ಉದಾರ ಪ್ರಜಾಪ್ರಭುತ್ವದ  ರಕ್ಷಣೆಗಾಗಿ ಮತ್ತು ಅದನ್ನು  ಸಾಧ್ಯವಾದಷ್ಟು  ಅಭಿವೃದ್ಧಿಪಡಿಸುವ ಸಲುವಾಗಿ  ಮುಕ್ತ ಸಮಾಜ ಮತ್ತು  ಸಾಮಾಜಿಕ ವಿಮರ್ಶಾ ತತ್ವಗಳನ್ನು ಪ್ರತಿಪಾದಿಸಿದರು.

ವೈಯಕ್ತಿಕ ಜೀವನ

ಬದಲಾಯಿಸಿ

ಕಾರ್ಲ್ ಪಾಪ್ಪರ್ ಮೇಲ್ಮಧ್ಯಮ ವರ್ಗದಲ್ಲಿ  1902 ರಲ್ಲಿ ಜನಿಸಿದರು.ಪಾಪ್ಪರ್ 16 ನೇ ವಯಸ್ಸಿನಲ್ಲಿ ಶಾಲೆಯನ್ನು ತೊರೆದು ವಿಯೆಟ್ನಾ  ವಿಶ್ವವಿದ್ಯಾಲಯದಲ್ಲಿ ಅತಿಥಿ ವಿದ್ಯಾರ್ಥಿಯಾಗಿ ಗಣಿತ, ಭೌತಶಾಸ್ತ್ರ, ತತ್ವಶಾಸ್ತ್ರ, ಮನೋವಿಜ್ಞಾನ ಮತ್ತು ಸಂಗೀತ ಮತ್ತು  ಇತಿಹಾಸದ ಉಪನ್ಯಾಸಗಳಿಗೆ ಹಾಜರಾಗುತ್ತಿದ್ದರು .೧೯೧೯ರಲ್ಲಿ  ಶಾಲಾ ವಿದ್ಯಾರ್ಥಿಗಳ ಸಂಘವನ್ನು ಸೇರಿದರು. ಅವರು  ಮಾರ್ಕ್ಸ್ ತತ್ತ್ವಕ್ಕೆ ಸಂಪೂರ್ಣವಾಗಿ   ಮನಸೋತು  ಆಸ್ಟ್ರಿಯಾ ಸೋಶಿಯಲ್ ಡೆಮಾಕ್ರಟಿಕ್ ವರ್ಕರ್ಸ್ ಪಾರ್ಟಿಯ ಸದಸ್ಯರಾದರು.೧೯೨೮ರಲ್ಲಿ , ಅವರು ಕಾರ್ಲ್ ಬುಹ್ಲೆರ್ ಮೇಲ್ವಿಚಾರಣಾ  ಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದರು.

ತತ್ವಶಾಸ್ತ್ರ

ಬದಲಾಯಿಸಿ

ತನ್ನ ಹದಿಹರೆಯದಲ್ಲಿ   ಕಾರ್ಲ್ ಪಾಪ್ಪರ್  ಸಮಾಜವಾದಿ ಅಸೋಸಿಯೇಷನ್ ಸೇರಿದರು, ಮತ್ತು 1919 ರಲ್ಲಿ ಕೆಲವು ತಿಂಗಳು ತಮ್ಮನ್ನು  ಕಮ್ಯುನಿಸ್ಟ್ ಎಂದು ಪರಿಗಣಿಸಿಕೊಂಡರು. ಇವರು ಅರ್ಥಶಾಸ್ತ್ರ, ವರ್ಗ ಯುದ್ಧ, ಮತ್ತು ಇತಿಹಾಸದ ಮಾರ್ಕ್ಸ್ವಾದಿ ಸಿದ್ಧಾಂತಕ್ಕೆ ತಮ್ಮನ್ನು ಒಡ್ಡಿಕೊಂಡರು.  ಈ ಸಮಯದಲ್ಲಿ, ಸಿದ್ಧಾಂತದ ಸೋಗಿನಿಂದ  ದೂರವಿರಲು,  ಕ್ರಾಂತಿಯ ಸಲುವಾಗಿ ರಕ್ತ ಹರಿಸುವುದು ಅಗತ್ಯವಾಗಿತ್ತು. ಪಾಪ್ಪರ್ ಸಹ ಮನಶಾಸ್ತ್ರ ಕ್ಷೇತ್ರದಲ್ಲಿ ಫ್ರಾಯ್ಡ್ ಮತ್ತು ಆಡ್ಲರ್ ಸಿದ್ಧಾಂತಗಳನ್ನು ಅವೈಜ್ಞಾನಿಕ ದಿಂದ ಕೂಡಿದ್ದು ಎಂದು ಅಭಿಪ್ರಾಯಪಟ್ಟರು.

ವಿವೇಚನಾಶೀಲರಾಗಿದ್ದ  ಪಾಪ್ಪರ್  ಪ್ರಯೋಗವಾದಿ ಅಥವಾ ವೈಜ್ಞಾನಿಕ ಸಿದ್ಧಾಂತಗಳ ಲೋಕಕ್ಕೆ ಮಾತ್ರ ಸೀಮಿತವಾಗಿ ಇರಲಿಲ್ಲ. ನೈತಿಕ ಮೌಲ್ಯ ಮತ್ತು  ಆಧ್ಯಾತ್ಮಿಕ ವಿಚಾರಗಳ ಬಗ್ಗೆ ತರ್ಕಬದ್ಧ ಚರ್ಚೆ ಸಾಧ್ಯ ಎಂದು  ಹೇಳುತ್ತಾರೆ. ಪಾಪ್ಪರ್ ಅವರ ವಿದ್ಯಾರ್ಥಿ ಡಬ್ಲ್ಯೂ.ಡಬ್ಲ್ಯೂ ಬಾರ್ಟ್ಲೆ III ಈ ವಿಚಾರದಲ್ಲಿ ಸಿದ್ಧಾಂತವನ್ನು ಪ್ರತಿಪಾದಿಸಲು ಪ್ರಯತ್ನಿಸಿದರು.

ರಾಜಕೀಯ ಸಿದ್ಧಾಂತ

ಬದಲಾಯಿಸಿ

ಪಾಪ್ಪರ್ ಅವರು ಬರೆದಿರುವ  ಮುಕ್ತ ಸಮಾಜಮತ್ತು ಅದರ ಶತ್ರುಗಳು ಮತ್ತು ಬಡತನ ಐತಿಹಾಸಿಕ ಸಿದ್ಧಾಂತ, ಪಾಪ್ಪರ್ ಚಾರಿತ್ರಿಕ ವಿಮರ್ಶೆ ಮತ್ತು "ಮುಕ್ತ" ರಕ್ಷಣಾ ಅಭಿವೃದ್ಧಿ. ಇವೆಲ್ಲವುಗಳು  ಚಾರಿತ್ರಿಕ ಮೈಲಿಗಲ್ಲುಗಳು. ಅವರು ತಮ್ಮ ಸಿದ್ಧಾಂತದಲ್ಲಿ ನಿರಂಕುಶ  ಮತ್ತು ಏಕಚಕ್ರಾಧಿಪತ್ಯ ಗಳು  ಹಲವು ರೂಪಗಳಲ್ಲಿ ಅಸ್ತಿತ್ವದಲ್ಲಿವೆ  ಎಂದು ವಾದಿಸಿದರು. ಮಾನವ ಜ್ಞಾನ ವಿಕಾಸದ  ನಂತರ ಇತಿಹಾಸದಲ್ಲಿ ಇದೊಂದು  ಸಾಂದರ್ಭಿಕ ಅಂಶವಾಯಿತು , ಮತ್ತು "ಯಾವುದೇ ಸಮಾಜ ವೈಜ್ಞಾನಿಕವಾಗಿ  ಆಲೋಚನೆ ಮಾಡುವುದು ಸಾಧ್ಯವಾದರೆ ಆ ರಾಜ್ಯ ಉಜ್ವಲ ಭವಿಷತ್ತಿನಿಂದ ಕೂಡಿರುತ್ತದೆ ಎಂದು ನುಡಿದರು.ತನ್ನ ಆರಂಭಿಕ ವರ್ಷಗಳಲ್ಲಿ ಪಾಪ್ಪರ್, ಮಾರ್ಕ್ಸ್ವಾದಕ್ಕೆ   ಪ್ರಭಾವಿತರಾಗಿದ್ದರು. ಕಮ್ಯುನಿಸ್ಟರು ಅಥವಾ ಸಮಾಜವಾದಿಗಳಲ್ಲಿ ಯಾವದನ್ನು ಆಯ್ಕೆಮಾಡಬೇಕೆಂದು ಯೋಚಿಸಿದರು. 1919 ರಲ್ಲಿ ಸಂಭವಿಸಿದ ಘಟನೆ ಅವರ  ಮೇಲೆ ಅಗಾಧವಾದ ಪ್ರಭಾವ ಬೀರಿತ್ತು ಒಂದು  ಗಲಭೆ ಸಂದರ್ಭದಲ್ಲಿ, ಕಮ್ಯುನಿಸ್ಟ್ ಪೊಲೀಸರು , ಪಾಪ್ಪರ್ ತಂದೆಯ ಸ್ನೇಹಿತರನ್ನು ಸೇರಿದಂತೆ ಅನೇಕ ನಿರಾಯುಧ ಜನರ ಮೇಲೆ ಗುಂಡು ಹಾರಿಸಿದರು.

ಗೌರವಗಳು ಮತ್ತು ಪ್ರಶಸ್ತಿಗಳು

ಬದಲಾಯಿಸಿ

ಪಾಪ್ಪರ್ ತನ್ನ ಕ್ಷೇತ್ರದಲ್ಲಿ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದರು

  • ಸೈನ್ಸ್ ಅಸೋಸಿಯೇಷನಿಂದ
  • ಬ್ರಿಟಿಷ್ ಅಕಾಡೆಮಿಯಿಂದ
  • ಕಿಂಗ್ಸ್ ಕಾಲೇಜ್ ಲಂಡನ್ನಿಂದ
  • ಕೇಂಬ್ರಿಡ್ಜ್ ಲಂಡನ್ ಸ್ಕೂಲ್ ವತಿಯಿಂದ
  • ಚಾರ್ಲ್ಸ್ ವಿಶ್ವವಿದ್ಯಾಲಯದಿಂದ


[] [] [] [] [] [] [೧೦] [೧೧] [೧೨]


 
Donald Trump

ಡೊನಾಲ್ಡ್ ಟ್ರಂಪ್

ಬದಲಾಯಿಸಿ

ಡೊನಾಲ್ಡ್ ಜಾನ್ ಟ್ರಂಪ್ ಅಮೆರಿಕದ ಪ್ರಭಾವಿ ಉದ್ಯಮಿಯಾಗಿದ್ದರು.ಲೇಖಕರಾಗಿದ್ದಲ್ಲದೆ ಮಾಧ್ಯಮ ಲೋಕದ ಖ್ಯಾತಿ ಪಡೆದಿದ್ದರು. ೨೦೧೬ರಲ್ಲಿ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿದ್ದರು.ಅವರು ಟ್ರಂಪ್ ಸಂಸ್ಥೆಯ ಅಧ್ಯಕ್ಷ ಮತ್ತು ಟ್ರಂಪ್ ಎಂಟರ್ಟೈನ್ಮೆಂಟ್ ರೆಸಾರ್ಟ್ಸ್ ನ ಸ್ಥಾಪಕರಾಗಿದ್ದರು.ಟ್ರಂಪ್ ವೃತ್ತಿಜೀವನದಲ್ಲಿ,  ತಮ್ಮ ಛಾಪು ಮೂಡಿಸುವುದರತ್ತ  ಅವರ ಪ್ರಯತ್ನಗಳು ಬಹಳ. ಜೀವನ ದಲ್ಲಿ ಅಳವಡಿಸಿಕೊಂಡಿದ್ದ ಅವರ ನೇರ-ನುಡಿಗಳು ಅವರನ್ನು ಬಹಳ ವರ್ಷಗಳ ಕಾಲ ಒಬ್ಬ ಖ್ಯಾತ ವ್ಯಕ್ತಿಯನ್ನಾಗಿ ಮಾಡಿತು. ಎನ್ಬಿಸಿ ರಿಯಾಲಿಟಿ ಶೋನಲ್ಲಿ ಅವರು ಕಂಡ ಜನಪ್ರಿಯತೆ ಅವರನ್ನು ಇನ್ನು ಉತ್ತುಂಗಕ್ಕೆ ಏರಿಸಿತು.

ಆರಂಭಿಕ ಜೀವನ

ಬದಲಾಯಿಸಿ

ಡೊನಾಲ್ಡ್ ಜಾನ್ ಟ್ರಂಪ್ ಸೀನಿಯರ್, ಜೂನ್ 14,1946 ರಂದು ನ್ಯೂಯೋರ್ಕ್ ನಗರದಲ್ಲಿ ಜನಿಸಿದರು. ಡೊನಾಲ್ಡ್ ಅವರ ತಾಯಿ ಮೇರಿ ಅನ್ನಿ ಅವರು (1912-2000 ನೀ ಮ್ಯಾಕ್ಲಿಯೋಡ್) ಒಬ್ಬ ಗೃಹಿಣಿ ಮತ್ತು ಲೋಕೋಪಕಾರಿಯಾಗಿದ್ದರು, ಮತ್ತು ಅವರ ತಂದೆ ಫ್ರೆಡ್ ಟ್ರಂಪ್ (1905-1999) ರವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಮೇರಿ ಅನ್ನಿ ಅವರ ನಾಲ್ಕನೆ ಮಗನಾಗಿದ್ದರು. 1983 ರಲ್ಲಿ,ಫ಼್ರೆಡ್ ಅವರು ಒಂದು ಸಂದರ್ಶನದಲ್ಲಿ "ಡೋನಾಲ್ದ್ ಸಣ್ಣ ವಯಸ್ಸಿನಲ್ಲಿ ಭಯಂಕರ ಒರಟನಾಗಿದ್ದ" ನೆಂದು ಹೇಳಿದರು. ಇದು ಅವನನ್ನು ನ್ಯೂಯಾರ್ಕ್ ಮಿಲಿಟರಿ ಅಕಾಡಮಿ (NYMA)ಗೆ ದಾಖಲಿಸಲು ಪ್ರೇರೇಪಿಸಿತು. ಟ್ರಂಪ್ ಎರಡು ವರ್ಷಗಳ ಕಾಲ ಫೋರ್ಧ್ಯಾಮ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ೧೯೬೮ರಲ್ಲಿ ಅರ್ಥಶಾಸ್ತ್ರ ವಿಜ್ಞಾನದಲ್ಲಿ ಪದವಿಯನ್ನು ಪಡೆದರು.

ವ್ಯಾಪಾರ ವೃತ್ತಿಜೀವನ

ಬದಲಾಯಿಸಿ

ಟ್ರಂಪ್ ತನ್ನ ವೃತ್ತಿಜೀವನವನ್ನು ಅವರ ತಂದೆಯ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಆರಂಭಿಸಿದರು (ಎಲಿಜಬೆತ್ ಟ್ರಂಪ್ ಮತ್ತು ಸನ್). 1971 ರಲ್ಲಿ ಟ್ರಂಪ್ ಮನ್ಹಾಟ್ಟನ್ ಗೆ ಸ್ಥಳಾಂತರಗೊಂಡು ದೊಡ್ಡದಾದ ಪ್ರಾಜೆಕ್ಟುಗಳಲ್ಲಿ ಭಾಗಿಯಾದರು,ಮತ್ತು ಸಾರ್ವಜನಿಕ ಮನ್ನಣೆ ಪಡೆಯಲು  ಆಕರ್ಷಕ ವಾಸ್ತುವಿನ್ಯಾಸದ ಕಡೆಗೆ ಗಮನಹರಿಸಿದರು. 1973 ರ ಆರಂಭದಲ್ಲಿ ಫೇರ್ ಹೌಸಿಂಗ್ ಆಕ್ಟ್ ಉಲ್ಲಂಘನೆ ಆರೋಪ ಮಾಡಿದಾಗ ಟ್ರಂಪ್ ಸಾರ್ವಜನಿಕರ ಗಮನಕ್ಕೆ ಬಂದರು.

1988 ರಲ್ಲಿ ಟ್ರಂಪ್ ಗ್ರಿಫ್ಫಿನ್ ಮತ್ತು ರೆಸಾರ್ಟ್ಸ್ ಇಂಟರ್ನ್ಯಾಷನಲ್ ಜೊತೆ ಒಂದು ವ್ಯವಹಾರದಲ್ಲಿ ತಾಜ್ಮಹಲ್ ಕ್ಯಾಸಿನೊ ವನ್ನು ಸ್ವಾಧೀನಪಡಿಸಿಕೊಂಡರು. ಇದು ಅವರ ವೃತ್ತಿ ಬದುಕಿನ  ಸಾಲಕ್ಕೆ  ಕಾರಣವಾಯಿತು. 1989 ರ ಹೊತ್ತಿಗೆ, ಟ್ರಂಪ್ ಸಾಲದ  ಮರುಪಾವತಿ ಮಾಡುವಲ್ಲಿ  ಅಸಮರ್ಥ ರಾದರು.+

೨೦೦೧ ರಲ್ಲಿ, ಡೊನಾಲ್ಡ್ ಟ್ರಂಪ್ ೭೨ ಅಂತಸ್ತಿನ ವಸತಿ ಗೋಪುರವಾದ ಟ್ರಂಪ್ ವಿಶ್ವ ಟವರನ್ನು ಪೂರ್ಣಗೊಳಿಸಿದರು.  ವಿಶ್ವಸಂಸ್ಥೆಯ ಪ್ರಧಾನ ಹುದ್ದೆ  ಅಲ್ಲದೆ, ಅವರು ಹಡ್ಸನ್ ನದಿಯ ಒಂದು ಬಹು ಕಟ್ಟಡ  ನಿರ್ಮಿಸಲು ಆರಂಭಿಸಿದರು.

ಮನರಂಜನೆ ಮಾಧ್ಯಮ

ಬದಲಾಯಿಸಿ

ಮಾಧ್ಯಮ ಲೋಕದಲ್ಲಿ, ಟ್ರಂಪ್ ಎರಡು ಬಾರಿ ಎಮ್ಮಿ ಪ್ರಶಸ್ತಿ ವಿಜೇತರಾದರು. ಟ್ರಾಂಪ್  ಹಲವಾರು ಚಿತ್ರಗಳಲ್ಲಿ ನಟಿಸಿದರು. ಅವುಗಳು- ಹೋಮ್ ಅಲೋನ್ ೨, ಲಾಸ್ಟ್ ನ್ಯೂಯಾರ್ಕ್ನ , ದಾದಿ, ಬೆಲ್ ದಿ ಫ್ರೆಶ್ ಪ್ರಿನ್ಸ್ , ಏರ್ ಡೇಸ್ ಆಫ್ ಅವರ್ ಲೈವ್ಸ್, ವಾಲ್ ಸ್ಟ್ರೀಟ್ ಮನಿ ಇತ್ಯಾದಿ.  ಒಂದು ಪಾತ್ರ (ಲಿಟಲ್ ರಾಸ್ಕಲ್ಸ್) ಅವರ  ಹಾಸ್ಯನಟನೆಯ ಚಿತ್ರ. ಫ್ಲಾಶ್ ವ್ಯಂಗ್ಯಚಿತ್ರ  ಮತ್ತು ಆನ್ಲೈನ್ ವ್ಯಂಗ್ಯಚಿತ್ರ ಕಲಾವಿದ ರಾಗಿದ್ದರು.

ರಾಜಕೀಯ

ಬದಲಾಯಿಸಿ

ಸೆಂಟರ್ ಫಾರ್ ರೆಸ್ಪಾನ್ಸಿವ್ ಪಾಲಿಟಿಕ್ಸ್  ೨೦೧೧ರ ವರದಿಯ ಪ್ರಕಾರ ಎರಡು ದಶಕಗಳಲ್ಲಿ ನಡೆದ ಅಮೇರಿಕಾದ ಚುನಾವಣೆಗಳಲ್ಲಿ ಡೊನಾಲ್ಡ್  ಟ್ರಂಪ್ ಅವರು ಪ್ರಜಾಪ್ರಭುತ್ವಕ್ಕೆ ನೀಡಿರುವ ಕೊಡುಗೆಗಳು ಅಪಾರ.  ೨೦೧೧ ರ ನಂತರ, ತನ್ನ ಕಾರ್ಯಾಚರಣೆಯ ಮೂಲಕ  ಡೆಮೊಕ್ರಾಟ್ ವಿರುದ್ಧ ರಿಪಬ್ಲಿಕನ್ ಗೆ   ಹೆಚ್ಚು ಅನುಕೂಲವಾಯಿತು.

ಟ್ರಂಪ್  ಅವರಿಗೆ ಅಮೇರಿಕಾದ ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್ ರೊನಾಲ್ಡ್ ರೇಗನ್ ಆರಂಭಿಕ ಬೆಂಬಲಿಗರಾಗಿದ್ದರು. ಜೊತೆಗೆ ಫೆಬ್ರವರಿ ೨೦೧೨ ರ ಅಧ್ಯಕ್ಷ ರಿಪಬ್ಲಿಕನ್ ಮಿಟ್ ರೊಮ್ನಿ ಅನುಮೋದನೆ ನೀಡಿದರು.

ಟ್ರಂಪ್  ಅತ್ಯಾಚಾರ, ಸಂಭೋಗ, ಅಥವಾ ಆರೋಗ್ಯ ಪ್ರಕರಣಗಳಲ್ಲಿ ಗರ್ಭಪಾತ ನಿಷೇಧಿಸುವದರ ಬಗ್ಗೆ ಅನೇಕ ಸುಧಾರಣೆಗಳನ್ನು ತಂದರು.

ವೈಯಕ್ತಿಕ ಜೀವನ

ಬದಲಾಯಿಸಿ

1977 ರಲ್ಲಿ, ಟ್ರಂಪ್ ಜೆಕ್ ಮಾಡೆಲ್ ಇವಾನಾ ಝೆಲ್ನಿಕೋವಾ ಅವರನ್ನು ವಿವಾಹವಾದರು. ಅವರಿಗೆ ಮೂವರು ಮಕ್ಕಳಿದ್ದಾರೆ:  ಡೊನಾಲ್ಡ್ ಜೂನಿಯರ್ (ಜನನ 1977), ಇವಾಂಕಾ (ಜನನ 1981), ಮತ್ತು ಎರಿಕ್ (ಜನನ 1984). 1988 ರಲ್ಲಿ ಇವಾನಾ ಯುನೈಟೆಡ್ ಸ್ಟೇಟ್ಸ್ ಪ್ರಜೆಯಾದ  ನಟಿ ಮಾರ್ಲಾ ಮ್ಯಾಪಲ್ಸ್ ಜೊತೆಗಿನ ಟ್ರಂಪ್ ಸಂಬಂಧದ ನಂತರ ದಂಪತಿಗಳು 1992 ರಲ್ಲಿ ವಿಚ್ಛೇದನ ಪಡೆದರು. ಅವರು ಮತ್ತು ಮ್ಯಾಪಲ್ಸ್‌ಗೆ ಒಬ್ಬ ಮಗಳು, ಟಿಫಾನಿ (ಜನನ 1993). ಅವರು ಮ್ಯಾಪಲ್ಸ್‌ ರನ್ನು 1993 ರಲ್ಲಿ ವಿವಾಹವಾದರು, 1997 ರಲ್ಲಿ ಬೇರ್ಪಟ್ಟರು ಮತ್ತು 1999 ರಲ್ಲಿ ವಿಚ್ಛೇದನ ಪಡೆದರು. ಟಿಫಾನಿಯನ್ನು ಕ್ಯಾಲಿಫೋರ್ನಿಯಾದಲ್ಲಿ ಮಾರ್ಲಾ ಬೆಳೆಸಿದಳು.[20] 2005 ರಲ್ಲಿ, ಟ್ರಂಪ್ ಸ್ಲೊವೇನಿಯನ್ ಮಾಡೆಲ್ ಮೆಲಾನಿಯಾ ಕ್ನಾಸ್ ಅವರನ್ನು ವಿವಾಹವಾದರು. ಅವರಿಗೆ ಒಬ್ಬ ಮಗನಿದ್ದಾನೆ, ಬ್ಯಾರನ್ (ಜನನ 2006). ಮೆಲಾನಿಯಾ 2006ರಲ್ಲಿ U.S. ಪೌರತ್ವವನ್ನು ಪಡೆದರು.

ಕೊಡುಗೆಗಳು

ಬದಲಾಯಿಸಿ

ನ್ಯೂಯಾರ್ಕ್ ರಾಜ್ಯ  ತನಿಖಾ ವರದಿಯ ಪ್ರಕಾರ, ಟ್ರಂಪ್  ೧೮ ವಿಭಿನ್ನ ಅಂಗಸಂಸ್ಥೆಗಳನ್ನು ಹೊಂದಿದ್ದರು. ಅವುಗಳಿಗೆ  ದೇಣಿಗೆ, ಬದಲಿಗೆ ತನ್ನ ಹೆಸರನ್ನು ಪ್ರಧಾನವಾಗಿ ನೀಡುವ ಮೂಲಕ ೧೯೮೦ ರಲ್ಲಿ ವೈಯಕ್ತಿಕ ಮತ್ತು ಸಾಂಸ್ಥಿಕ ಪ್ರಚಾರ ಗಿಟ್ಟಿಸಿಕೊಂಡರು.  

ಪ್ರಶಸ್ತಿಗಳು ಮತ್ತು ಗೌರವಗಳು

ಬದಲಾಯಿಸಿ
  • ಫೇಮ್ ಗೇಮಿಂಗ್ ಹಾಲ್ (೧೯೯೫ )
  • ಫೇಮ್ ಎನ್ವೈ ರೈಡ್ (೨೦೧೦ )
  • ಉದ್ಯಮ ಗೌರವ ಡಾಕ್ಟರ್ (ಗೌರವ. ಡಿಬಿ), ೨೦೧೨, ಲಿಬರ್ಟಿ ವಿಶ್ವವಿದ್ಯಾಲಯ
  • WWE ಕೀರ್ತಿಭವನದಲ್ಲಿ (೨೦೧೩ )
  • ಹಾಲಿವುಡ್ ವಾಕ್ ಆಫ್ ಫೇಮ್ ಸ್ಟಾರ್.

[೧೩] [೧೪]


 
ಎರೊನಲ್ದ್ ದ್ವರ್ಕಿನ್

ರೊನಾಲ್ಡ್ ಡ್ವಾರ್ಕಿನ್

ಬದಲಾಯಿಸಿ

ರೊನಾಲ್ಡ್ ಮೈಲ್ಸ್ ಡ್ವಾರ್ಕಿನ್    ಒಬ್ಬ ಅಮೇರಿಕನ್ ತತ್ವಜ್ಞಾನಿ, ನ್ಯಾಯಶಾಸ್ತ್ರಜ್ಞ ಮತ್ತು ಯುನೈಟೆಡ್ ಸ್ಟೇಟ್ಸ್ ಸಾಂವಿಧಾನಿಕ ಕಾನೂನಿನ ವಿದ್ವಾಂಸ. ಅವರ ಮರಣದ ಸಮಯದಲ್ಲಿ, ಅವರು ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಮತ್ತು ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು ಮತ್ತು ಯೂನಿವರ್ಸಿಟಿ ಕಾಲೇಜ್ ಲಂಡನ್ನಲ್ಲಿ ನ್ಯಾಯಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಡ್ವಾರ್ಕಿನ್  ಯೇಲ್ ಲಾ ಸ್ಕೂಲ್ ಮತ್ತು ಆಕ್ಸ್ ಫರ್ಡ್  ವಿಶ್ವವಿದ್ಯಾಲಯದಲ್ಲಿಯೂ ನ್ಯಾಯಶಾಸ್ತ್ರದ  ಪ್ರಾಧ್ಯಾಪಕರಾಗಿದ್ದರು, ತತ್ವಜ್ಞಾನಿ H.L.A ಹಾರ್ಟರ್ ರ  ಉತ್ತರಾಧಿಕಾರಿಯಾಗಿದ್ದರು. ಕಾನೂನು ,ತತ್ವಶಾಸ್ತ್ರ ಮತ್ತು ರಾಜಕೀಯ ತತ್ತ್ವಶಾಸ್ತ್ರ ಗಳಲ್ಲಿ ಪ್ರತಿಭಾಶಾಲಿಯಾಗಿದ್ದು ಅನೇಕ  ಕೊಡುಗೆ ಗಳನ್ನೂ ನೀಡಿದ್ದ ಡ್ವಾರ್ಕಿನ್ ರು  ವಿಶ್ವದಾದ್ಯಂತ ಖ್ಯಾತಿ ಪಡೆದರು. ಜರ್ನಲ್ ಆಫ್ ಲೀಗಲ್ ಸ್ಟಡೀಸ್ನಲ್ಲಿನ ಸಮೀಕ್ಷೆಯ ಪ್ರಕಾರ, ಅವರ  ಪಾಂಡಿತ್ಯಪೂರ್ಣ ಕೆಲಸಕ್ಕಾಗಿ 2007 ರ ಹೋಲ್ಬರ್ಗ್ ಇಂಟರ್ನ್ಯಾಷನಲ್ ಮೆಮೋರಿಯಲ್ ಪ್ರಶಸ್ತಿಯನ್ನು ಮಾನವಿಕಶಾಸ್ತ್ರದಲ್ಲಿ ಪಡೆದರು. ಡ್ವಾರ್ಕಿನ್  ಇಪ್ಪತ್ತನೇ ಶತಮಾನದ ಅಮೆರಿಕದ ಕಾನೂನು ವಿದ್ವಾಂಸರುಗಳಲ್ಲಿಇವರ ಹೆಸರು ಅತಿ ಹೆಚ್ಚು ಉಲ್ಲೇ ಖವಾಗಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಡ್ವಾರ್ಕಿನ್  ಅವರ ಮರಣದ ನಂತರ, ಹಾರ್ವರ್ಡ್ ಕಾನೂನು ವಿದ್ವಾಂಸರಾದ ಕ್ಯಾಸ್ ಸನ್ ಸ್ಟೈನ್ ಅವರು ಡ್ವೊರ್ಕಿನ್ ಬಗ್ಗೆ ಹೀಗೆ ಹೇಳಿದ್ದಾರೆ. "ಕಳೆದ 100 ವರ್ಷಗಳ ಅತ್ಯಂತ ಪ್ರಮುಖ ಕಾನೂನು ತತ್ವಜ್ಞಾನಿಗಳಲ್ಲಿ ಒಬ್ಬರು".

ಆರಂಭಿಕ ಜೀವನ ಮತ್ತು ಶಿಕ್ಷಣ

ಬದಲಾಯಿಸಿ

ರೊನಾಲ್ಡ್ ಡ್ವಾರ್ಕಿನ್  ಅವರು 1931 ರಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿನ ರೋಡ್ ಐರ್ಲೆಂಡ್ನಲ್ಲಿ ಪ್ರಾವಿಡೆನ್ಸನಲ್ಲಿ ಮಡೆಲಿನ್ (ತಲಾಮೊ) ಮತ್ತು ಡೇವಿಡ್  ಡ್ವಾರ್ಕಿನ್  ಅವರ ಮಗನಾಗಿ ಜನಿಸಿದರು. ಅವರ ಕುಟುಂಬ ಯಹೂದಿ. ಅವರು 1953 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎ.ಬಿ. ಜೆ. ಡಿ ಪದವಿ ಮತ್ತು ಮ್ಯಾಗ್ಡೆಲಿನ್ ಕಾಲೇಜು ಆಕ್ಸ್ಫರ್ಡ್ ನಿಂದ ಬಿ ಎ ಪದವಿಯನ್ನು ಪಡೆದುಕೊಂಡರು. ಇವರ ಆಸಕ್ತಿಯ ಕ್ಷೇತ್ರಗಳು ನ್ಯಾಯಶಾಸ್ತ್ರ ಮತ್ತು ರಾಜಕೀಯಶಾಸ್ತ್ರಗಳಾಗಿದ್ದವು.   ಸರ್ ರೂಪರ್ಟ್ ಕ್ರಾಸ್ ಮತ್ತು ಜೆಹೆಚ್ ಸಿ ಮೋರಿಸ್ ಅವರ ವಿದ್ಯಾರ್ಥಿಯಾಗಿದ್ದರು. ಆಕ್ಸ್ಫರ್ಡ್ ನಲ್ಲಿ ಅವರ ಅಂತಿಮ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ, ಪರೀಕ್ಷಕರು ಅವರ ಸ್ಕ್ರಿಪ್ಟ್ ನಿಂದ ಪ್ರಭಾವಿತರಾದರು, ಅದನ್ನು ಓದಲು ನ್ಯಾಯಶಾಸ್ತ್ರದ ಪ್ರಾಧ್ಯಾಪಕರನ್ನು (ಆಗ H.L.A. ಹಾರ್ಟ್) ಕರೆಯಲಾಯಿತು. ಅವರಿಗೆ ಬಿ.ಎ. ಪದವಿಯನ್ನು  ನೀಡಲಾಯಿತು. ಡ್ವಾರ್ಕಿನ್ ನಂತರ  ಹಾರ್ವರ್ಡ್ ಕಾನೂನು ಶಾಲೆಯಲ್ಲಿ ವ್ಯಾಸಂಗ ಮಾಡಿದರು, 1957 ರಲ್ಲಿ ಜೂರಿಸ್ ಡಾಕ್ಟರ್, ಮ್ಯಾಗ್ನಾ ಕಮ್ ಲಾಡ್ ಪದವಿ ಪಡೆದರು. ನಂತರ ಅವರು ಎರಡನೇ ಸರ್ಕ್ಯೂಟ್ ಗಾಗಿ ಯುನೈಟೆಡ್ ಸ್ಟೇಟ್ಸ್ ಕೋರ್ಟ್ ಆಫ್ ಅಪೀಲ್ಸ್ ನ ನ್ಯಾಯಾಧೀಶ ಲರ್ನ್ಡ್ ಹ್ಯಾಂಡ್ ಗಾಗಿ ಗುಮಾಸ್ತರಾಗಿದ್ದರು. ನ್ಯಾಯಾಧೀಶ ಹ್ಯಾಂಡ್ ನಂತರ ಡ್ವಾರ್ಕಿನ್  ಅವರನ್ನು "ಎಲ್ಲಾ ಕಾನೂನು ಗುಮಾಸ್ತರನ್ನು ಸೋಲಿಸುವ ಕಾನೂನು ಗುಮಾಸ್ತ" ಎಂದು ಕರೆದರು, ಮತ್ತು ಡ್ವಾರ್ಕಿನ್ ಅವರು  ನ್ಯಾಯಾಧೀಶ ಹ್ಯಾಂಡ್ ಅವರನ್ನು ತನ್ನ ಮೇಲೆ ಅಗಾಧವಾಗಿ  ಪ್ರಭಾವ ಬೀರಿದ  ಮಾರ್ಗದರ್ಶಕ ಎಂದು ನೆನಪಿಸಿಕೊಳ್ಳುತ್ತಾರೆ.

ನ್ಯಾಯಶಾಸ್ತ್ರ ಮತ್ತು ತತ್ವಶಾಸ್ತ್ರ

ಬದಲಾಯಿಸಿ

ಡ್ವಾರ್ಕಿನ್ ಪೊಸಿಟಿವಿಸಂನ  ಪ್ರಮುಖ ವಿಮರ್ಶಕರಾಗಿದರು.ಅವರು ಕಾನೂನಿನ ಅಸ್ತಿತ್ವದ ಬಗೆಗಿರುವ ಸಾಮಾನ್ಯ ಸಿದ್ದಾಂತವನ್ನು ವಿರೋಧಿಸುತ್ತಿದ್ದರು . ಡ್ವಾರ್ಕಿನ್ ಪ್ರಕಾರ ನಿರ್ದಿಷ್ಟ ಕಾನೂನಿನ ವ್ಯವಸ್ಥೆಯ ಸ್ಥಳೀಯ ಸಿದ್ದಾಂತಗಳು ,ಆ ಪ್ರದೇಶದ ನೈತಿಕ ಗುಣಗಳನ್ನು ಸೂಚಿಸುವುದಿಲ್ಲ ಎಂದಾಗಿತ್ತು. ಡ್ವಾರ್ಕಿನ್  ಅವರ ಪ್ರಕಾರ ಕಾನೂನಿನ ಸಿಧ್ಧಾಂತವು ಒಂದು ಮೊಕದ್ದಮೆಯನ್ನು ಹೇಗೆ ನಿರ್ಧರಿಸಲಾಗುವುದೋ ಹಾಗೆಯೇ  ರಾಜಕೀಯ ಸಂಘಟನೆಗಳು ಆ ಮೊಕದ್ದಮೆಯನ್ನು ನಿರ್ಧರಿಸುವಲ್ಲಿ ಯಾವ ರೀತಿಯ ಪಾತ್ರವನ್ನು ವಹಿಸುತ್ತವೋ ಅದು  ಪ್ರಜೆಗಳ ಮೇಲೆ ಸರ್ಕಾರಕ್ಕಿರುವ ಅಧಿಕಾರವನ್ನು ಬಿಂಬಿಸುವ ಅಂಶಗಳ ಮೇಲೆ ಆಧಾರಿತವಾಗಿರುತ್ತವೆ .

ಡ್ವಾರ್ಕಿನ್ ಅವರು ಹಾರ್ಟ ಅವರು ಬರೆದಿರುವ ಲೀಗಲ್ ಪಾಸಿಟಿವಿಸಮ್ ಕೃತಿಯನ್ನು ವಿಮರ್ಶೆ ಮಾಡಿದ್ದರಿಂದ ಖ್ಯಾತಿಗಳಿಸಿದರು. ಈ ವಿಮರ್ಶೆಯನ್ನು ಸಂಪೂರ್ಣವಾಗಿ ತಮ್ಮ ಕೃತಿಯಾದ ಲಾ ಎಂಪೈರ್ನಲ್ಲಿ ನೋಡಬಹುದು .ಈ ಕೃತಿಯು ಹಲವಾರು ಒಳನೋಟಗಳನ್ನು ಹೊಂದಿದೆ. .ಅವರ ಪ್ರಕಾರ ಕಾನೂನು ಎಂದರೆ ಸಮಾಜವು ಕಾನೂನಿನ ವ್ಯವಸ್ಥೆಯಲ್ಲಿ ಅಡಿಯಲ್ಲಿ ಅನುಸರಿಸುವ ನಿಯಮ, ಇದು ರಾಜಕೀಯ ಇತಿಹಾಸದ ಸಕಾರಾತ್ಮಕ ತರ್ಕದಿಂದ ಕೂಡಿರುತ್ತದೆ. ಅವರ ಪ್ರಕಾರ ಜನರ ನೈತಿಕ ನಿಯಮಗಳು ಬಹುಪಾಲು ತಪ್ಪಾಗಿರುತ್ತವೆ.ಕೆಲವೊಮ್ಮೆ ಕೆಲವು ಅಪರಾಧಗಳು ನೈತಿಕವಾಗಿ ಅಪರಾಧಗಳಾಗಿರುವುದಿಲ್ಲ. ಇದಕ್ಕಾಗಿ ನ್ಯಾಯಾಲಯವು ತನ್ನ ಹಿಂದಿನ ಮೊಕದ್ದಮೆಗಳ ಇತಿಹಾಸದ ಮೇರೆಗೆ ತೀರ್ಪು ನೀಡಬಹುದು.ಈ ನಿಯಮದ ಅನುಸಾರ ಕಾನೂನು ಅವರವರ ದೃಷ್ಟಿಕೋನಗಳನ್ನು ಅವಲಂಬಿಸಿರುತ್ತದೆ . ಮಾನವನ  ಸಂವಿಧಾನಿತ ಹಕ್ಕುಗಳು ಯಾವಾಗಲು ಚರ್ಚೆಯ ವಿಷಯವಾಗಿರುವ ಕಾರಣ ಪ್ರತಿಯೊಬ್ಬ ಮನುಷ್ಯನಿಗೂ ಬೇರೆ ಬೇರೆ ರೀತಿಯ ದೃಷ್ಟಿಕೋನಗಳಿರುತ್ತವೆ ಅದರಂತೆ ನ್ಯಾಯಾಧೀಶರು ಕೂಲಂಕುಷವಾಗಿ  ಯೋಚಿಸಿ  ತೀರ್ಪು ನೀಡಬೇಕೆಂದು ಡ್ವಾರ್ಕಿನ್ ಅಭಿಪ್ರಾಯ ಪಟ್ಟಿದ್ದರು. ಡ್ವಾರ್ಕಿನ್ ಅವರ ಕಾನೂನು ತತ್ವಗಳ ಮಾದರಿಗೂ  ಹೆಚ್ ಹೇಲಾ  ಹಾರ್ಟ್ ಅವರ ರೂಲ್ ಆಫ್ ರೆಕಗ್ನಿಷನ್ ಗೂ ಪರಸ್ಪರ  ಸಂಬಂಧವಿದೆ. ಆದರೆ ಡ್ವಾರ್ಕಿನ್ ಹಾರ್ಟ್ ಅವರು ಹೇಳಿರುವ ಪ್ರಕಾರ ಯಾವುದೇ ಕಾನೂನಿನ ವ್ಯವಸ್ಥೆಯಲ್ಲಿ ಬಲಶಾಲಿಯ ಆಳ್ವಿಕೆ ಹೆಚ್ಚಾಗಿರುತ್ತದೆ. ಡ್ವಾರ್ಕಿನ್ ಪ್ರಕಾರ ಯಾವುದೇ ಸಾಮಾಜಿಕ ವ್ಯವಸ್ಥೆಯಲ್ಲಿ ಜನರಿಗೆ ಶೋಷಣೆಯ ವಿರುಧ್ಧ ಧ್ವನಿ ಎತ್ತಲು  ಅವಕಾಶ ಹಾಗೂ ಹಕ್ಕುಗಳಿರುತ್ತವೆ  ಅದು ಕೆಲವೊಮ್ಮೆ  ಕ್ರಾಂತಿಗೂ ಕೂಡ ಕಾರಣವಾಗಬಹುದಾಗಿದೆ .ಡ್ವಾರ್ಕಿನ್ ಅವರು ಪ್ರತ್ಯೇಕತೆಯನ್ನು  ಬಿಟ್ಟು  ಕಾನೂನು ಹಾಗೂ ನೈತಿಕತೆಯನ್ನು ಸಮಾನ ದೃಷ್ಟಿಯಿಂದ  ನೋಡಲು ಬಯಸುತ್ತಾರೆ. ಏಕೆಂದರೆ ಸಕಾರಾತ್ಮಕ ದೃಷ್ಡಿಕೋನವು ಪ್ರತಿ ವಿಷಯವನ್ನು ನಿರ್ಧರಿಸುವಾಗ ನೈತಿಕ ಹೊಣೆಗಾರಿಕೆಯನ್ನು ಒಳಗೊಂಡಿರುತ್ತದೆ.[ಬದಲಾಯಿಸಿ]

conception ಲಿಬರ್ಟಿ  ಡ್ವಾರ್ಕಿನ್  ಅವರ ಅತ್ಯಂತ ಆಸಕ್ತಿದಾಯಕ ಕ್ಷೇತ್ರ. ಅವರು  ವಿವಾದಾತ್ಮಕ ಪ್ರಬಂಧಗಳಲ್ಲಿ ಹೀಗೆ ಅಭಿಪ್ರಾಯಪಡುತ್ತಾರೆ. ಕಾನೂನು  ಎನ್ನುವುದು ನಾವು ವ್ಯಾಖ್ಯಾನಿಸಿದಂತೆ  ಅಭಿಪ್ರಾಯವನ್ನು ಮಂಡಿಸುತ್ತದೆ. ಪ್ರತಿಯೊಬ್ಬರೂ ಒಂದೇ ಉತ್ತರವನ್ನು ಹೊಂದಿರುತ್ತಾರೆ ("ಸರಿ" ಎಂಬುದಕ್ಕೆ ಒಮ್ಮತ) ಉತ್ತರವು ಪ್ರತಿಯೊಬ್ಬ ವ್ಯಕ್ತಿಗೂ ಒಂದೇ ರೀತಿಯಲ್ಲಿ ಸಮರ್ಥಿಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ; ಬದಲಿಗೆ ಪ್ರತಿಯೊಬ್ಬ ವ್ಯಕ್ತಿಯು ಕಾನೂನು ಪ್ರಶ್ನೆಗೆ ಸರಿಯಾಗಿ ತನ್ನನ್ನು ಅನ್ವಯಿಸಿಕೊಂಡರೆ ಅವನಿಗೆ ಅಗತ್ಯವಾದ ಉತ್ತರವಿರುತ್ತದೆ ಎಂದರ್ಥ. ಆದರ್ಶ ನ್ಯಾಯಾಧೀಶರು ಮತ್ತು ಹೆಚ್ಚಿನ ಬುದ್ಧಿವಂತರು ಮತ್ತು ಕಾನೂನಿನ ಮೂಲಜ್ಞಾನವನ್ನು ಸಂಪೂರ್ಣವಾಗಿ ಹೊಂದಿ ರುತ್ತಾರೆ . ಕಾನೂನನ್ನು ಸಮಗ್ರ ಹಾಗು ಉತ್ತಮವಾಗಿ ಹೊಂದಿಸಿ, ಸಮರ್ಥವಾದ ಸಿದ್ಧಾಂತವನ್ನು ನಿರ್ಮಿಸುವ ಅಗತ್ಯವಿದೆ. ಹರ್ಕ್ಯುಲಸ್ ಪರಿಪೂರ್ಣ ತೀರ್ಪುಗಾರ, ಆದರೆ ಅವರು ಯಾವಾಗಲೂ ಸರಿಯಾದ ಉತ್ತರವನ್ನು ತಲುಪುತ್ತಾರೆ ಹರ್ಕ್ಯುಲಸ್ (ಈ ಹೆಸರು ಶಾಸ್ತ್ರೀಯ ಪೌರಾಣಿಕ ನಾಯಕನಿಂದ ಬಂದಿದೆ)ಎಂದರ್ಥವಲ್ಲ.[ಬದಲಾಯಿಸಿ]

ಡ್ವಾರ್ಕಿನ್ ಅವರು ವಿಮರ್ಶಕರೂ ಆಗಿರುವುದರಿಂದ ಪಾಸಿಟಿವಿಸ್ಟ್ ಅರ್ಥದಲ್ಲಿ ಕಾನೂನಿನ ಮೂಲಗಳು ಅಂತರ ಮತ್ತು ಅಸಂಗತೆಗಳಿಂದ ತುಂಬಿವೆ, ಆದರೆ ಇತರ ಕಾನೂನು ಮಾನದಂಡಗಳು ತತ್ವಗಳನ್ನು ಒಳಗೊಂಡಂತೆ , ಕಠಿಣ ಪ್ರಕರಣವನ್ನು ಪರಿಹರಿಸಲು ಸಾಕಾಗುವುದಿಲ್ಲ ಎಂದು ವಾದಿಸುತ್ತಾರೆ. ಅವುಗಳಲ್ಲಿ ಕೆಲವು ಅಸಮರ್ಥವಾಗಿವೆ. ಈ ಯಾವುದೇ ಸಂದರ್ಭಗಳಲ್ಲಿ, ಹರ್ಕ್ಯುಲಸ್ ಕೂಡ ಸಂದಿಗ್ಧ ಸ್ಥಿತಿಯಲ್ಲಿರುತ್ತಾರೆ.[ಬದಲಾಯಿಸಿ]

ಪ್ರಶಸ್ತಿಗಳು[ಬದಲಾಯಿಸಿ]

ಸೆಪ್ಟೆಂಬರ್ ೨೦೦೭ರಲ್ಲಿ ಡ್ವಾರ್ಕಿನ್ ಅವರಿಗೆ ಹಾಲ್ ಬರ್ಗ್ ಅಂತರಾಷ್ಡ್ರೀಯ ಸ್ಮಾರಕ ಪ್ರಶಸ್ತಿ ಲಭಿಸಿ ತು. ಹಾಗೂ ಈ ಸಂಸ್ಥೆಯ ಶೈಕ್ಷಣಿಕ ಸಮಿತಿಯು 'ಡ್ವಾರ್ಕಿನ್ ಅವರು ಉದಾರ ಸಮಾನತಾವಾದಿ ಸಿಧ್ಧಾಂತವನ್ನು ವಿಸ್ತರಿಸಿ ಘೋಷಣೆಯನ್ನು ಹೊರಡಿಸಿತು. ಅವರು ಒಂದು ಹೊಸ ಆಯಾಮವನ್ನು ಕಾನೂನು ಸಿದ್ದಾಂತ ಕ್ಷೇತ್ರದಲ್ಲಿ ಹುಟ್ಟುಹಾಕಿದ್ದಾರೆ ಎಂದು ಉಲ್ಲೇಖಿಸಿತು. ಅವರ ಸಿದ್ದಾಂತವು ನೈತಿಕ ಮೌಲ್ಯಗಳಿಗೆ  ಸಮಾನವಾದ ಪ್ರಾಶಸ್ತ್ಯವನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟರು. ಇವರಿಗೆ ನ್ಯೂಯಾರ್ಕ್ ವಿಶ್ವವಿದ್ಯಾಲಯವು ೨೦೦೬ನೇ ಸಾಲಿನ ಅಮೇರಿಕ ಕಾನೂನಿನ ಅರ್ಪಣೆಯನ್ನು ನೀಡಿ ಗೌರವಿಸಿದೆ. 2006 ರಲ್ಲಿ, ಮೆಕ್ಸಿಕೋದ ರಾಷ್ಟ್ರೀಯ ಸ್ವಾಯತ್ತ ವಿಶ್ವವಿದ್ಯಾನಿಲಯದ ಕಾನೂನು ಸಂಶೋಧನಾ ಸಂಸ್ಥೆಯು "ಡಾ. ಹೆಕ್ಟರ್ ಫಿಕ್ಸ್-ಝಮುಡಿಯೊ" ಎಂಬ ಕಾನೂನು ಸಂಶೋಧನೆಯ ಅಂತರರಾಷ್ಟ್ರೀಯ ಪ್ರಶಸ್ತಿಯೊಂದಿಗೆ ಡ್ವಾರ್ಕಿನ್  ಅವರನ್ನು ಗೌರವಿಸಿತು.

 

ಅಲೆಕ್ಸಾಂಡರ್ ಹ್ಯಾಮಿಲ್ಟನ್

ಬದಲಾಯಿಸಿ
 
ಹಮಿಲ್ಟನ್

ಅಲೆಕ್ಸಾಂಡರ್ ಹ್ಯಾಮಿಲ್ಟನ್ (ಜನವರಿ 11, 1755 ಅಥವಾ 1757 - ಜುಲೈ 12, 1804) ಒಬ್ಬ ಅಮೇರಿಕನ್ ಕ್ರಾಂತಿಕಾರಿ, ರಾಜಕಾರಣಿ ಮತ್ತು ಯುನೈಟೆಡ್ ಸ್ಟೇಟ್ಸ್ನ ಸ್ಥಾಪಕ ಪಿತಾಮಹ. ಹ್ಯಾಮಿಲ್ಟನ್ US ಸಂವಿಧಾನದ ಪ್ರಭಾವಿ ವ್ಯಾಖ್ಯಾನಕಾರ ಮತ್ತು ಪ್ರವರ್ತಕ, ಫೆಡರಲಿಸ್ಟ್ ಪಕ್ಷದ ಸಂಸ್ಥಾಪಕ, ಹಾಗೆಯೇ ರಾಷ್ಟ್ರದ ಹಣಕಾಸು ವ್ಯವಸ್ಥೆ, ಯುನೈಟೆಡ್ ಸ್ಟೇಟ್ಸ್ ಕೋಸ್ಟ್ ಗಾರ್ಡ್ ಮತ್ತು ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಯ ಸಂಸ್ಥಾಪಕ. ಖಜಾನೆಯ ಮೊದಲ ಕಾರ್ಯದರ್ಶಿಯಾಗಿ, ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಆಡಳಿತದ ಆರ್ಥಿಕ ನೀತಿಗಳ ಮುಖ್ಯ ಲೇಖಕ ಹ್ಯಾಮಿಲ್ಟನ್. ರಾಜ್ಯಗಳ ಅಮೇರಿಕನ್ ರೆವಲ್ಯೂಷನರಿ ವಾರ್ ಸಾಲಗಳ ಫೆಡರಲ್ ಸರ್ಕಾರದ ಧನಸಹಾಯದಲ್ಲಿ ಅವರು ನಾಯಕತ್ವವನ್ನು ವಹಿಸಿಕೊಂಡರು, ಜೊತೆಗೆ ರಾಷ್ಟ್ರದ ಮೊದಲ ಎರಡು ವಸ್ತುತಃ ಕೇಂದ್ರ ಬ್ಯಾಂಕುಗಳನ್ನು (ಅಂದರೆ ಬ್ಯಾಂಕ್ ಆಫ್ ನಾರ್ತ್ ಅಮೇರಿಕಾ ಮತ್ತು ಯುನೈಟೆಡ್ ಸ್ಟೇಟ್ಸ್ನ ಮೊದಲ ಬ್ಯಾಂಕ್) ಸ್ಥಾಪಿಸಿದರು. ಸುಂಕಗಳು, ಮತ್ತು ಬ್ರಿಟನ್ನೊಂದಿಗೆ ಸೌಹಾರ್ದ ವ್ಯಾಪಾರ ಸಂಬಂಧಗಳ ಪುನರಾರಂಭ. ಅವರ ದೃಷ್ಟಿಯಲ್ಲಿ ಪ್ರಬಲವಾದ ಕಾರ್ಯನಿರ್ವಾಹಕ ಶಾಖೆಯ ನೇತೃತ್ವದ ಬಲವಾದ ಕೇಂದ್ರ ಸರ್ಕಾರ, ಬಲವಾದ ವಾಣಿಜ್ಯ ಆರ್ಥಿಕತೆ, ಉತ್ಪಾದನೆಗೆ ಬೆಂಬಲ ಮತ್ತು ಬಲವಾದ ರಾಷ್ಟ್ರೀಯ ರಕ್ಷಣೆ.

ಹ್ಯಾಮಿಲ್ಟನ್ ನೆವಿಸ್ನ ಚಾರ್ಲ್ಸ್ಟೌನ್ನಲ್ಲಿ ವಿವಾಹದಿಂದ ಜನಿಸಿದರು. ಅವರು ಬಾಲ್ಯದಲ್ಲಿ ಅನಾಥರಾಗಿದ್ದರು ಮತ್ತು ಶ್ರೀಮಂತ ವ್ಯಾಪಾರಿಯಿಂದ ತೆಗೆದುಕೊಂಡರು.ಅವರು ತನ್ನ ಹದಿಹರೆಯವನ್ನು ತಲುಪಿದಾಗ, ಸ್ಥಳೀಯ ಪೋಷಕರು ಅವರ ಶಿಕ್ಷಣವನ್ನು ಮುಂದುವರಿಸಲು ನ್ಯೂಯಾರ್ಕ್ಗೆ ಕಳುಹಿಸಿದರು. ವಿದ್ಯಾರ್ಥಿಯಾಗಿದ್ದಾಗ, ಕಾಂಟಿನೆಂಟಲ್ ಕಾಂಗ್ರೆಸ್ ಅನ್ನು ಬೆಂಬಲಿಸುವ ಅವರ ಅಭಿಪ್ರಾಯದ ತುಣುಕುಗಳನ್ನು ನಾಮ್ ಡಿ ಪ್ಲಮ್ ಅಡಿಯಲ್ಲಿ ಪ್ರಕಟಿಸಲಾಯಿತು ಮತ್ತು ಅವರು ಈ ವಿಷಯದ ಬಗ್ಗೆ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದರು. ಅಮೇರಿಕನ್ ಕ್ರಾಂತಿಕಾರಿ ಯುದ್ಧ ಪ್ರಾರಂಭವಾದಾಗ ಅವರು ಮಿಲಿಷಿಯಾದಲ್ಲಿ ಆರಂಭಿಕ ಪಾತ್ರವನ್ನು ವಹಿಸಿಕೊಂಡರು. ಹೊಸ ಕಾಂಟಿನೆಂಟಲ್ ಆರ್ಮಿಯಲ್ಲಿ ಫಿರಂಗಿ ಅಧಿಕಾರಿಯಾಗಿ ಅವರು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಅಭಿಯಾನದಲ್ಲಿ ಕ್ರಮವನ್ನು ಕಂಡರು. 1777 ರಲ್ಲಿ, ಅವರು ಕಮಾಂಡರ್ ಇನ್ ಚೀಫ್ ಜನರಲ್ ಜಾರ್ಜ್ ವಾಷಿಂಗ್ಟನ್ಗೆ ಹಿರಿಯ ಸಹಾಯಕರಾದರು, ಆದರೆ ಯಾರ್ಕ್ಟೌನ್ ಮುತ್ತಿಗೆಯಲ್ಲಿ ವಿಜಯವನ್ನು ಭದ್ರಪಡಿಸುವ ಪ್ರಮುಖ ಕ್ರಮಕ್ಕಾಗಿ ಸಮಯಕ್ಕೆ ಫೀಲ್ಡ್ ಕಮಾಂಡ್ಗೆ ಮರಳಿದರು, ಇದು ಯುದ್ಧವನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಿತು.


ಆರಂಭಿಕ ಬಾಲ್ಯ

ಬದಲಾಯಿಸಿ

ಅಲೆಕ್ಸಾಂಡರ್ ಹ್ಯಾಮಿಲ್ಟನ್ ಹುಟ್ಟಿ ತನ್ನ ಬಾಲ್ಯದ ಭಾಗವನ್ನು ಲೀವಾರ್ಡ್ ದ್ವೀಪಗಳ (ಆಗ ಬ್ರಿಟಿಷ್ ವೆಸ್ಟ್ ಇಂಡೀಸ್ನ ಭಾಗ) ನೆವಿಸ್ ದ್ವೀಪದ ರಾಜಧಾನಿಯಾದ ಚಾರ್ಲ್ಸ್ಟೌನ್ನಲ್ಲಿ ಕಳೆದರು. ಹ್ಯಾಮಿಲ್ಟನ್ ಮತ್ತು ಅವರ ಹಿರಿಯ ಸಹೋದರ ಜೇಮ್ಸ್ ಜೂನಿಯರ್ (1753-1786). ಅವರು ರಾಚೆಲ್ ಫೌಸೆಟ್ಗೆ ವಿವಾಹದಿಂದ ಜನಿಸಿದರು, ಅರ್ಧ-ಬ್ರಿಟಿಷ್ ಮತ್ತು ಅರ್ಧ-ಫ್ರೆಂಚ್ ಹ್ಯೂಗೆನೋಟ್ ಮೂಲದ ವಿವಾಹಿತ ಮಹಿಳೆ,[10] ಮತ್ತು ಜೇಮ್ಸ್ ಎ. ಹ್ಯಾಮಿಲ್ಟನ್, ಒಬ್ಬ ಸ್ಕಾಟ್ಸ್ಮನ್, ಇವರು ಅಲೆಕ್ಸಾಂಡರ್ ಹ್ಯಾಮಿಲ್ಟನ್ರ ನಾಲ್ಕನೇ ಮಗ, ಐರ್ಷೈರ್ನಲ್ಲಿ ಗ್ರ್ಯಾಂಜ್ನ ಲಾರ್ಡ್. ಹ್ಯಾಮಿಲ್ಟನ್ನ ತಾಯಿ ಮಿಶ್ರ ಜನಾಂಗದವಳು ಎಂದು ನಿರಂತರ ಊಹಾಪೋಹಗಳಿದ್ದರೂ, ಅದನ್ನು ಪರಿಶೀಲಿಸಬಹುದಾದ ಪುರಾವೆಗಳಿಂದ ರುಜುವಾತುಪಡಿಸಲಾಗಿಲ್ಲ. ತೆರಿಗೆ ಪಟ್ಟಿಗಳಲ್ಲಿ ರಾಚೆಲ್ ಫೌಸೆಟ್ ಬಿಳಿ ಎಂದು ಪಟ್ಟಿಮಾಡಲಾಗಿದೆ.

ಹ್ಯಾಮಿಲ್ಟನ್ನ ಜನನವು 1755 ಅಥವಾ 1757 ರಲ್ಲಿ ಎಂದು ಖಚಿತವಾಗಿಲ್ಲ. ಉತ್ತರ ಅಮೆರಿಕಾಕ್ಕೆ ಹ್ಯಾಮಿಲ್ಟನ್ ಆಗಮನದ ನಂತರ ಹೆಚ್ಚಿನ ಐತಿಹಾಸಿಕ ಪುರಾವೆಗಳು, ಹ್ಯಾಮಿಲ್ಟನ್ ಅವರ ಸ್ವಂತ ಬರಹಗಳನ್ನು ಒಳಗೊಂಡಂತೆ ಅವರು 1757 ರಲ್ಲಿ ಜನಿಸಿದರು ಎಂಬ ಕಲ್ಪನೆಯನ್ನು ಬೆಂಬಲಿಸುತ್ತದೆ.ಹ್ಯಾಮಿಲ್ಟನ್ ಅವರು ಹದಿಮೂರು ವಸಾಹತುಗಳಿಗೆ ಮೊದಲ ಬಾರಿಗೆ ಆಗಮಿಸಿದಾಗ ಅವರ ಜನ್ಮ ವರ್ಷವನ್ನು 1757 ಎಂದು ಪಟ್ಟಿ ಮಾಡಿದರು ಮತ್ತು ಜನವರಿ 11 ರಂದು ಅವರ ಜನ್ಮದಿನವನ್ನು ಆಚರಿಸಿದರು. ನಂತರದ ಜೀವನದಲ್ಲಿ, ಅವರು ತಮ್ಮ ವಯಸ್ಸನ್ನು ಸುತ್ತಿನ ಅಂಕಿಗಳಲ್ಲಿ ಮಾತ್ರ ನೀಡಲು ಒಲವು ತೋರಿದರು. 1930 ರವರೆಗೂ ಇತಿಹಾಸಕಾರರು 1757 ಅನ್ನು ಅವರ ಜನ್ಮ ವರ್ಷವೆಂದು ಒಪ್ಪಿಕೊಂಡರು, ಕೆರಿಬಿಯನ್ನಲ್ಲಿ ಅವರ ಆರಂಭಿಕ ಜೀವನದ ಹೆಚ್ಚುವರಿ ದಾಖಲೆಗಳನ್ನು ಆರಂಭದಲ್ಲಿ ಡ್ಯಾನಿಶ್ನಲ್ಲಿ ಪ್ರಕಟಿಸಲಾಯಿತು. ಹ್ಯಾಮಿಲ್ಟನ್ನ ತಾಯಿಯ ಮರಣದ ನಂತರ 1768 ರಲ್ಲಿ ಸೇಂಟ್ ಕ್ರೊಯಿಕ್ಸ್ನಿಂದ ರಚಿಸಲಾದ ಪ್ರೊಬೇಟ್ ಪೇಪರ್, ಅವನಿಗೆ 13 ವರ್ಷ ವಯಸ್ಸಾಗಿದೆ ಎಂದು ಪಟ್ಟಿಮಾಡಿದೆ, ಇದು 1930 ರ ದಶಕದಿಂದ ಕೆಲವು ಇತಿಹಾಸಕಾರರು 1755 ರ ಜನ್ಮ ವರ್ಷವನ್ನು ಬೆಂಬಲಿಸಲು ಕಾರಣವಾಯಿತು.

ಶಿಕ್ಷಣ

ಬದಲಾಯಿಸಿ

ಚರ್ಚ್ ಆಫ್ ಇಂಗ್ಲೆಂಡ್ ಅಲೆಕ್ಸಾಂಡರ್ ಮತ್ತು ಜೇಮ್ಸ್ ಹ್ಯಾಮಿಲ್ಟನ್ ಜೂನಿಯರ್ ಅವರಿಗೆ ಸದಸ್ಯತ್ವವನ್ನು ಮತ್ತು ಚರ್ಚ್ ಶಾಲೆಯಲ್ಲಿ ಶಿಕ್ಷಣ ನಿರಾಕರಿಸಿತರು ಏಕೆಂದರೆ ಅವರ ಪೋಷಕರು ಕಾನೂನುಬದ್ಧವಾಗಿ ಮದುವೆಯಾಗಿರಲಿಲ್ಲ. ಅವರ ತಾಯಿ ವಾಸಿಸುತ್ತಿದ್ದಾಗ ಅವರು "ವೈಯಕ್ತಿಕ ಬೋಧನೆ" ಮತ್ತು ಯಹೂದಿ ಮುಖ್ಯೋಪಾಧ್ಯಾಯಿನಿಯ ನೇತೃತ್ವದಲ್ಲಿ ಖಾಸಗಿ ಶಾಲೆಯಲ್ಲಿ ತರಗತಿಗಳನ್ನು ಪಡೆದರು. ಅಲೆಕ್ಸಾಂಡರ್ ತನ್ನ ಶಿಕ್ಷಣವನ್ನು 34 ಪುಸ್ತಕಗಳ ಕುಟುಂಬ ಗ್ರಂಥಾಲಯದೊಂದಿಗೆ ಪೂರಕಗೊಳಿಸಿದನು.

ಅಕ್ಟೋಬರ್ 1772 ರಲ್ಲಿ ಹ್ಯಾಮಿಲ್ಟನ್ ಬೋಸ್ಟನ್ಗೆ ಹಡಗಿನ ಮೂಲಕ ಆಗಮಿಸಿದರು ಮತ್ತು ಅಲ್ಲಿಂದ ನ್ಯೂಯಾರ್ಕ್ ನಗರಕ್ಕೆ ತೆರಳಿದರು. ಅವರು ಐರಿಶ್-ಸಂಜಾತ ಹರ್ಕ್ಯುಲಸ್ ಮುಲ್ಲಿಗನ್ ಅವರೊಂದಿಗೆ ವಸತಿ ತೆಗೆದುಕೊಂಡರು, ಅವರು ಹ್ಯಾಮಿಲ್ಟನ್ನ ಫಲಾನುಭವಿಗಳಿಗೆ ತಿಳಿದಿರುವ ವ್ಯಾಪಾರಿಯ ಸಹೋದರರಾಗಿ, ಅವರ ಶಿಕ್ಷಣ ಮತ್ತು ಬೆಂಬಲಕ್ಕಾಗಿ ಪಾವತಿಸಲು ಸರಕುಗಳನ್ನು ಮಾರಾಟ ಮಾಡಲು ಹ್ಯಾಮಿಲ್ಟನ್ಗೆ ಸಹಾಯ ಮಾಡಿದರು. ನಂತರ 1772 ರಲ್ಲಿ, ಕಾಲೇಜು ಕೆಲಸದ ತಯಾರಿಯಲ್ಲಿ, ಹ್ಯಾಮಿಲ್ಟನ್ ನ್ಯೂಜೆರ್ಸಿಯ ಎಲಿಜಬೆತ್ಟೌನ್ನಲ್ಲಿ ಫ್ರಾನ್ಸಿಸ್ ಬಾರ್ಬರ್ ನಡೆಸುತ್ತಿದ್ದ ಪ್ರಿಪರೇಟರಿ ಶಾಲೆಯಾದ ಎಲಿಜಬೆತ್ಟೌನ್ ಅಕಾಡೆಮಿಯಲ್ಲಿ ತನ್ನ ಶಿಕ್ಷಣದಲ್ಲಿನ ಅಂತರವನ್ನು ತುಂಬಲು ಪ್ರಾರಂಭಿಸಿದನು. ಅಲ್ಲಿ ಅವರು ವಿಲಿಯಂ ಲಿವಿಂಗ್ಸ್ಟನ್ ಅವರ ಪ್ರಭಾವಕ್ಕೆ ಒಳಗಾದರು, ಅವರು ಸ್ಥಳೀಯ ಪ್ರಮುಖ ಬೌದ್ಧಿಕ ಮತ್ತು ಕ್ರಾಂತಿಕಾರಿ, ಅವರೊಂದಿಗೆ ಅವರು ಸ್ವಲ್ಪ ಕಾಲ ವಾಸಿಸುತ್ತಿದ್ದರು.

ಹ್ಯಾಮಿಲ್ಟನ್ 1773 ರ ಶರತ್ಕಾಲದಲ್ಲಿ ನ್ಯೂಯಾರ್ಕ್ ನಗರದ ಮುಲ್ಲಿಗನ್ನ ಅಲ್ಮಾ ಮೇಟರ್ ಕಿಂಗ್ಸ್ ಕಾಲೇಜಿಗೆ (ಈಗ ಕೊಲಂಬಿಯಾ ವಿಶ್ವವಿದ್ಯಾಲಯ) "ಖಾಸಗಿ ವಿದ್ಯಾರ್ಥಿಯಾಗಿ" ಪ್ರವೇಶಿಸಿದನು, ಮೇ 1774 ರಲ್ಲಿ ಅಧಿಕೃತವಾಗಿ ಮೆಟ್ರಿಕ್ಯುಲೇಟ್ ಮಾಡುವವರೆಗೂ ಮುಲ್ಲಿಗನ್ನೊಂದಿಗೆ ಬೋರ್ಡಿಂಗ್ ಮಾಡಿದನು.ಜುಲೈ 6, 1774 ರಂದು ಕಿಂಗ್ಸ್ ಕಾಲೇಜಿನಲ್ಲಿ ಲಿಬರ್ಟಿ ಪೋಲ್ನಲ್ಲಿ ಹ್ಯಾಮಿಲ್ಟನ್ನ ಮೊದಲ ಸಾರ್ವಜನಿಕ ಪ್ರದರ್ಶನ ಎಂದು ಮನ್ನಣೆ ಪಡೆದ ಬ್ರಿಟಿಷರ ವಿರುದ್ಧದ ದೇಶಪ್ರೇಮಿಗಳ ಪ್ರಕರಣವನ್ನು ಸಂಕ್ಷಿಪ್ತವಾಗಿ ವಿವರಿಸುವಲ್ಲಿ ಹ್ಯಾಮಿಲ್ಟನ್ನ ಸ್ಪಷ್ಟತೆಯ ಬಗ್ಗೆ ಅವನ ಕಾಲೇಜಿನ ರೂಮ್ಮೇಟ್ ಮತ್ತು ಆಜೀವ ಸ್ನೇಹಿತ ರಾಬರ್ಟ್ ಟ್ರೂಪ್ ಪ್ರಜ್ವಲಿಸುವಂತೆ ಮಾತನಾಡಿದರು. ಹ್ಯಾಮಿಲ್ಟನ್, ಟ್ರೂಪ್ ಮತ್ತು ಇತರ ನಾಲ್ಕು ಪದವಿಪೂರ್ವ ವಿದ್ಯಾರ್ಥಿಗಳು ಫಿಲೋಲೆಕ್ಸಿಯನ್ ಸೊಸೈಟಿಯ ಪೂರ್ವಗಾಮಿ ಎಂದು ಪರಿಗಣಿಸಲಾದ ಹೆಸರಿಸದ ಸಾಹಿತ್ಯ ಸಮಾಜವನ್ನು ರಚಿಸಿದರು

ನಗರದ ಬ್ರಿಟಿಷರ ಆಕ್ರಮಣದ ಸಮಯದಲ್ಲಿ ಕಾಲೇಜು ಬಾಗಿಲು ಮುಚ್ಚಿದಾಗ ಹ್ಯಾಮಿಲ್ಟನ್ ಪದವಿ ಪಡೆಯುವ ಮೊದಲು ತನ್ನ ಅಧ್ಯಯನವನ್ನು ನಿಲ್ಲಿಸಬೇಕಾಯಿತು. ತನ್ನ ಮಿಲಿಟರಿ ಸೇವೆಯನ್ನು ಪೂರ್ಣಗೊಳಿಸುವುದರೊಂದಿಗೆ, ಕೆಲವು ತಿಂಗಳುಗಳ ಸ್ವಯಂ-ಅಧ್ಯಯನದ ನಂತರ, ಜುಲೈ 1782 ರ ಹೊತ್ತಿಗೆ ಹ್ಯಾಮಿಲ್ಟನ್ ಬಾರ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಅಕ್ಟೋಬರ್ 1782 ರಲ್ಲಿ ನ್ಯೂಯಾರ್ಕ್ ರಾಜ್ಯದ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣಗಳನ್ನು ವಾದಿಸಲು ಪರವಾನಗಿ ಪಡೆದರು. 1788 ರಲ್ಲಿ ಮರುಸ್ಥಾಪಿಸಲಾದ ಕೊಲಂಬಿಯಾ ಕಾಲೇಜಿನಿಂದ ಹ್ಯಾಮಿಲ್ಟನ್ಗೆ ಮಾಸ್ಟರ್ ಆಫ್ ಆರ್ಟ್ಸ್ ಪದವಿಯನ್ನು ನೀಡಲಾಯಿತು, ಕಾಲೇಜನ್ನು ಪುನಃ ತೆರೆಯುವಲ್ಲಿ ಮತ್ತು ಅದನ್ನು ದೃಢವಾದ ಆರ್ಥಿಕ ನೆಲೆಯಲ್ಲಿ ಇರಿಸುವ ಕೆಲಸಕ್ಕಾಗಿ. ಹ್ಯಾಮಿಲ್ಟನ್ 1791 ರಲ್ಲಿ ಅಮೇರಿಕನ್ ಫಿಲಾಸಫಿಕಲ್ ಸೊಸೈಟಿಯ ಸದಸ್ಯರಾಗಿ ಆಯ್ಕೆಯಾದರು.


ವೈಯಕ್ತಿಕ ಜೀವನ

ಬದಲಾಯಿಸಿ

ಹ್ಯಾಮಿಲ್ಟನ್ ಡಿಸೆಂಬರ್ 1779 - ಮಾರ್ಚ್ 1780 ರ ಚಳಿಗಾಲದಲ್ಲಿ ನ್ಯೂಜೆರ್ಸಿಯ ಮಾರಿಸ್ಟೌನ್ನಲ್ಲಿ ನೆಲೆಸಿರುವಾಗ, ಅವರು ಜನರಲ್ ಫಿಲಿಪ್ ಸ್ಕೈಲರ್ ಮತ್ತು ಕ್ಯಾಥರೀನ್ ವ್ಯಾನ್ ರೆನ್ಸೆಲೇರ್ ಅವರ ಮಗಳಾದ ಎಲಿಜಬೆತ್ ಸ್ಕೈಲರ್ ಅವರನ್ನು ಭೇಟಿಯಾದರು. ಅವರು ಡಿಸೆಂಬರ್ 14, 1780 ರಂದು ನ್ಯೂಯಾರ್ಕ್ನ ಆಲ್ಬನಿಯಲ್ಲಿರುವ ಶುಯ್ಲರ್ ಮ್ಯಾನ್ಷನ್ನಲ್ಲಿ ವಿವಾಹವಾದರು.ಎಲಿಜಬೆತ್ ಮತ್ತು ಅಲೆಕ್ಸಾಂಡರ್ ಹ್ಯಾಮಿಲ್ಟನ್ ಎಂಟು ಮಕ್ಕಳನ್ನು ಹೊಂದಿದ್ದರು,ಅವರಲ್ಲಿ ಇಬ್ಬರು ಗಂಡುಮಕ್ಕಳಿಗೆ ಫಿಲಿಪ್ ಎಂದು ಹೆಸರಿಸಿದ್ದರಿಂದ ಆಗಾಗ್ಗೆ ಗೊಂದಲವಿತ್ತು .

1804 ರಲ್ಲಿ ಹ್ಯಾಮಿಲ್ಟನ್ ಅವರ ಮರಣದ ನಂತರ, ಎಲಿಜಬೆತ್ ಅವರ ಪರಂಪರೆಯನ್ನು ಸಂರಕ್ಷಿಸಲು ಪ್ರಯತ್ನಿಸಿದರು. ಅವಳು ತನ್ನ ಮಗ ಜಾನ್ ಚರ್ಚ್ ಹ್ಯಾಮಿಲ್ಟನ್ನ ಸಹಾಯದಿಂದ ಅಲೆಕ್ಸಾಂಡರ್ನ ಎಲ್ಲಾ ಪತ್ರಗಳು, ಕಾಗದಗಳು ಮತ್ತು ಬರಹಗಳನ್ನು ಮರು-ಸಂಘಟಿಸಿದಳು, ಮತ್ತು ಅವನ ಜೀವನ ಚರಿತ್ರೆಯನ್ನು ಪ್ರಕಟಿಸುವಲ್ಲಿ ಅನೇಕ ಹಿನ್ನಡೆಗಳನ್ನು ಅನುಭವಿಸಿದಳು. ಅಲೆಕ್ಸಾಂಡರ್ನ ನೆನಪಿಗಾಗಿ ಅವಳು ಎಷ್ಟು ಸಮರ್ಪಿತಳಾಗಿದ್ದಳು ಎಂದರೆ, ಅವರ ಪ್ರಣಯದ ಆರಂಭಿಕ ದಿನಗಳಲ್ಲಿ ಅಲೆಕ್ಸಾಂಡರ್ ಅವಳಿಗಾಗಿ ಬರೆದ ಸಾನೆಟ್ನ ತುಂಡುಗಳನ್ನು ಹೊಂದಿರುವ ಸಣ್ಣ ಪೊಟ್ಟಣವನ್ನು ಅವಳ ಕುತ್ತಿಗೆಗೆ ಧರಿಸಿದ್ದಳು.

ಧರ್ಮ

ಹ್ಯಾಮಿಲ್ಟನ್ ಅವರ ಧಾರ್ಮಿಕ

ವೆಸ್ಟ್ ಇಂಡೀಸ್ನಲ್ಲಿ ಯುವಕನಾಗಿದ್ದಾಗ, ಹ್ಯಾಮಿಲ್ಟನ್ "ನ್ಯೂ ಲೈಟ್" ಇವಾಂಜೆಲಿಕಲ್ ಪ್ರಕಾರದ ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕ ಪ್ರೆಸ್ಬಿಟೇರಿಯನ್ ಆಗಿದ್ದರು ("ಓಲ್ಡ್ ಲೈಟ್" ಸಂಪ್ರದಾಯಕ್ಕೆ ವಿರುದ್ಧವಾಗಿ); ನ್ಯೂ ಸ್ಕೂಲ್ನ ಮಧ್ಯಮವರ್ಗದ ಜಾನ್ ವಿದರ್ಸ್ಪೂನರ ವಿದ್ಯಾರ್ಥಿಯಿಂದ ಅಲ್ಲಿ ಅವರಿಗೆ ಕಲಿಸಲಾಯಿತು. ಅವರು ಎರಡು ಅಥವಾ ಮೂರು ಕೀರ್ತನೆಗಳನ್ನು ಬರೆದರು, ಅದನ್ನು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು.[234] ರಾಬರ್ಟ್ ಟ್ರೂಪ್, ಅವರ ಕಾಲೇಜು ಸಹವಾಸಿ, ಹ್ಯಾಮಿಲ್ಟನ್ "ರಾತ್ರಿ ಮತ್ತು ಬೆಳಿಗ್ಗೆ ಮೊಣಕಾಲುಗಳ ಮೇಲೆ ಪ್ರಾರ್ಥಿಸುವ ಅಭ್ಯಾಸವನ್ನು ಹೊಂದಿದ್ದರು" ಎಂದು ಗಮನಿಸಿದರು.

ಕ್ರಾಂತಿಕಾರಿ ಯುದ್ಧ

ಬದಲಾಯಿಸಿ

ಆರಂಭಿಕ ಮಿಲಿಟರಿ ವೃತ್ತಿಜೀವನ

1775 ರಲ್ಲಿ, ಲೆಕ್ಸಿಂಗ್ಟನ್ ಮತ್ತು ಕಾನ್ಕಾರ್ಡ್ನಲ್ಲಿ ಬ್ರಿಟಿಷರೊಂದಿಗೆ ಅಮೆರಿಕಾದ ಪಡೆಗಳ ಮೊದಲ ನಿಶ್ಚಿತಾರ್ಥದ ನಂತರ, ಹ್ಯಾಮಿಲ್ಟನ್ ಮತ್ತು ಇತರ ಕಿಂಗ್ಸ್ ಕಾಲೇಜು ವಿದ್ಯಾರ್ಥಿಗಳು ಕಾರ್ಸಿಕನ್ಸ್ ಎಂಬ ನ್ಯೂಯಾರ್ಕ್ ಸ್ವಯಂಸೇವಕ ಮಿಲಿಷಿಯಾ ಕಂಪನಿಯನ್ನು ಸೇರಿಕೊಂಡರು,ನಂತರ ಅದನ್ನು ಹಾರ್ಟ್ಸ್ ಆಫ್ ಓಕ್ ಎಂದು ಮರುನಾಮಕರಣ ಮಾಡಲಾಯಿತು ಅಥವಾ ಸುಧಾರಿಸಲಾಯಿತು.

ಅವರು ಹತ್ತಿರದ ಸೇಂಟ್ ಪಾಲ್ಸ್ ಚಾಪೆಲ್ನ ಸ್ಮಶಾನದಲ್ಲಿ ತರಗತಿಗಳಿಗೆ ಮುಂಚಿತವಾಗಿ ಕಂಪನಿಯೊಂದಿಗೆ ಡ್ರಿಲ್ ಮಾಡಿದರು. ಹ್ಯಾಮಿಲ್ಟನ್ ಮಿಲಿಟರಿ ಇತಿಹಾಸ ಮತ್ತು ತಂತ್ರಗಳನ್ನು ಸ್ವಂತವಾಗಿ ಅಧ್ಯಯನ ಮಾಡಿದರು ಮತ್ತು ಶೀಘ್ರದಲ್ಲೇ ಬಡ್ತಿಗೆ ಶಿಫಾರಸು ಮಾಡಿದರು. HMS ಏಷ್ಯಾದ ಬೆಂಕಿಯ ಅಡಿಯಲ್ಲಿ, ಅವರು ಹರ್ಕ್ಯುಲಸ್ ಮುಲ್ಲಿಗನ್ ಮತ್ತು ಸನ್ಸ್ ಆಫ್ ಲಿಬರ್ಟಿ ಅವರ ಬೆಂಬಲದೊಂದಿಗೆ ಹಾರ್ಟ್ಸ್ ಆಫ್ ಓಕ್ ಅನ್ನು ಬ್ಯಾಟರಿಯಲ್ಲಿ ಬ್ರಿಟಿಷ್ ಫಿರಂಗಿಗಳ ಯಶಸ್ವಿ ದಾಳಿಯಲ್ಲಿ ಮುನ್ನಡೆಸಿದರು, ಅದರ ವಶಪಡಿಸಿಕೊಂಡ ನಂತರ ಘಟಕವು ಫಿರಂಗಿ ಕಂಪನಿಯಾಗಿ ಮಾರ್ಪಟ್ಟಿತು.

ಹ್ಯಾಮಿಲ್ಟನ್ ಜನವರಿ 3, 1777 ರಂದು ಪ್ರಿನ್ಸ್ಟನ್ ಕದನದಲ್ಲಿ ಭಾಗವಹಿಸಿದರು. ಆರಂಭಿಕ ಹಿನ್ನಡೆಯ ನಂತರ, ವಾಷಿಂಗ್ಟನ್ ಅಮೆರಿಕನ್ ಪಡೆಗಳನ್ನು ಒಟ್ಟುಗೂಡಿಸಿತು ಮತ್ತು ಬ್ರಿಟಿಷ್ ಪಡೆಗಳ ವಿರುದ್ಧ ಯಶಸ್ವಿ ಆರೋಪದಲ್ಲಿ ಅವರನ್ನು ಮುನ್ನಡೆಸಿತು. ಸಂಕ್ಷಿಪ್ತ ನಿಲುವು ಮಾಡಿದ ನಂತರ, ಬ್ರಿಟಿಷರು ಹಿಂದೆ ಸರಿದರು, ಕೆಲವರು ಪ್ರಿನ್ಸ್ಟನ್ ತೊರೆದರು, ಮತ್ತು ಇತರರು ನಸ್ಸೌ ಹಾಲ್ನಲ್ಲಿ ಆಶ್ರಯ ಪಡೆದರು. ಹ್ಯಾಮಿಲ್ಟನ್ ಮೂರು ಫಿರಂಗಿಗಳನ್ನು ತಂದರು ಮತ್ತು ಕಟ್ಟಡದ ಮೇಲೆ ಬೆಂಕಿ ಹಚ್ಚಿದರು. ನಂತರ ಕೆಲವು ಅಮೆರಿಕನ್ನರು ಮುಂಭಾಗದ ಬಾಗಿಲನ್ನು ಧಾವಿಸಿ ಅದನ್ನು ಮುರಿದರು. ಬ್ರಿಟಿಷರು ತರುವಾಯ ಒಂದು ಕಿಟಕಿಯ ಹೊರಗೆ ಬಿಳಿ ಧ್ವಜವನ್ನು ಹಾಕಿದರು; 194 ಬ್ರಿಟಿಷ್ ಸೈನಿಕರು ಕಟ್ಟಡದಿಂದ ಹೊರನಡೆದರು ಮತ್ತು ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗೆ ಹಾಕಿದರು, ಹೀಗೆ ಯುದ್ಧವನ್ನು ಅಮೇರಿಕನ್ ವಿಜಯದಲ್ಲಿ ಕೊನೆಗೊಳಿಸಿದರು.

ಜಾರ್ಜ್ ವಾಷಿಂಗ್ಟನ್ ಸಿಬ್ಬಂದಿ

ವಿಲಿಯಂ ಅಲೆಕ್ಸಾಂಡರ್, ಲಾರ್ಡ್ ಸ್ಟಿರ್ಲಿಂಗ್ ಮತ್ತು ಇನ್ನೊಬ್ಬ ಜನರಲ್, ಬಹುಶಃ ನಥಾನೆಲ್ ಗ್ರೀನ್ ಅಥವಾ ಅಲೆಕ್ಸಾಂಡರ್ ಮೆಕ್ಡೌಗಲ್ಗೆ ಸಹಾಯಕರಾಗಲು ಹ್ಯಾಮಿಲ್ಟನ್ರನ್ನು ಆಹ್ವಾನಿಸಲಾಯಿತು. ಅವರು ಈ ಆಮಂತ್ರಣಗಳನ್ನು ನಿರಾಕರಿಸಿದರು, ಜೀವನದಲ್ಲಿ ತನ್ನ ನಿಲ್ದಾಣವನ್ನು ಸುಧಾರಿಸಲು ಉತ್ತಮ ಅವಕಾಶವನ್ನು ಯುದ್ಧಭೂಮಿಯಲ್ಲಿ ವೈಭವವೆಂದು ನಂಬಿದ್ದರು. ಹ್ಯಾಮಿಲ್ಟನ್ ಅಂತಿಮವಾಗಿ ಅವರು ನಿರಾಕರಿಸಲು ಸಾಧ್ಯವಿಲ್ಲ ಎಂದು ಭಾವಿಸಿದ ಆಹ್ವಾನವನ್ನು ಸ್ವೀಕರಿಸಿದರು: ಲೆಫ್ಟಿನೆಂಟ್ ಕರ್ನಲ್ ಹುದ್ದೆಯೊಂದಿಗೆ ವಾಷಿಂಗ್ಟನ್ನ ಸಹಾಯಕರಾಗಿ ಸೇವೆ ಸಲ್ಲಿಸಲು.ವಾಷಿಂಗ್ಟನ್ ನಂಬಿರುವ ಪ್ರಕಾರ, "ಸಹಾಯಕರು ಡಿ ಕ್ಯಾಂಪ್ ಅವರು ಸಂಪೂರ್ಣ ವಿಶ್ವಾಸವನ್ನು ಇಡಬೇಕಾದ ವ್ಯಕ್ತಿಗಳು ಮತ್ತು ಇದು ಕರ್ತವ್ಯಗಳನ್ನು ಯುಕ್ತತೆ ಮತ್ತು ರವಾನೆಯೊಂದಿಗೆ ಕಾರ್ಯಗತಗೊಳಿಸಲು ಸಾಮರ್ಥ್ಯವಿರುವ ಪುರುಷರು ಅಗತ್ಯವಿದೆ.

ಹ್ಯಾಮಿಲ್ಟನ್ ವಾಷಿಂಗ್ಟನ್ನ ಮುಖ್ಯ ಸಿಬ್ಬಂದಿ ಸಹಾಯಕರಾಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅವರು ಕಾಂಗ್ರೆಸ್, ರಾಜ್ಯ ಗವರ್ನರ್ಗಳು ಮತ್ತು ಕಾಂಟಿನೆಂಟಲ್ ಆರ್ಮಿಯ ಅತ್ಯಂತ ಶಕ್ತಿಶಾಲಿ ಜನರಲ್ಗಳಿಗೆ ಪತ್ರಗಳನ್ನು ನಿರ್ವಹಿಸಿದರು; ಅವರು ವಾಷಿಂಗ್ಟನ್ನ ಹಲವು ಆದೇಶಗಳನ್ನು ಮತ್ತು ಪತ್ರಗಳನ್ನು ನಂತರದ ನಿರ್ದೇಶನದಲ್ಲಿ ರಚಿಸಿದರು; ಅವರು ಅಂತಿಮವಾಗಿ ಹ್ಯಾಮಿಲ್ಟನ್ ಅವರ ಸ್ವಂತ ಸಹಿಯ ಮೇಲೆ ವಾಷಿಂಗ್ಟನ್ನಿಂದ ಆದೇಶಗಳನ್ನು ಹೊರಡಿಸಿದರು. ಹ್ಯಾಮಿಲ್ಟನ್ ಅವರು ಗುಪ್ತಚರ, ರಾಜತಾಂತ್ರಿಕತೆ ಮತ್ತು ವಾಷಿಂಗ್ಟನ್ನ ರಾಯಭಾರಿಯಾಗಿ ಹಿರಿಯ ಸೇನಾ ಅಧಿಕಾರಿಗಳೊಂದಿಗೆ ಮಾತುಕತೆ ಸೇರಿದಂತೆ ವಿವಿಧ ರೀತಿಯ ಉನ್ನತ ಮಟ್ಟದ ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಕ್ಷೇತ್ರ ಆಜ್ಞೆ

ವಾಷಿಂಗ್ಟನ್ನ ಸಿಬ್ಬಂದಿಯಲ್ಲಿದ್ದಾಗ, ಹ್ಯಾಮಿಲ್ಟನ್ ದೀರ್ಘಕಾಲ ಆಜ್ಞೆಯನ್ನು ಮತ್ತು ಸಕ್ರಿಯ ಯುದ್ಧಕ್ಕೆ ಮರಳಲು ಪ್ರಯತ್ನಿಸಿದರು. ಯುದ್ಧವು ಅಂತ್ಯಕ್ಕೆ ಹತ್ತಿರವಾಗುತ್ತಿದ್ದಂತೆ, ಮಿಲಿಟರಿ ವೈಭವದ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಅವರು ತಿಳಿದಿದ್ದರು. ಫೆಬ್ರವರಿ 15, 1781 ರಂದು, ಹ್ಯಾಮಿಲ್ಟನ್ ಸಣ್ಣ ತಪ್ಪು ತಿಳುವಳಿಕೆಯ ನಂತರ ವಾಷಿಂಗ್ಟನ್ ನಿಂದ ವಾಗ್ದಂಡನೆಗೆ ಒಳಗಾದರು. ವಾಷಿಂಗ್ಟನ್ ಶೀಘ್ರವಾಗಿ ತಮ್ಮ ಸಂಬಂಧವನ್ನು ಸರಿಪಡಿಸಲು ಪ್ರಯತ್ನಿಸಿದರೂ, ಹ್ಯಾಮಿಲ್ಟನ್ ತನ್ನ ಸಿಬ್ಬಂದಿಯನ್ನು ತೊರೆಯಲು ಒತ್ತಾಯಿಸಿದರು. ಅವರು ಅಧಿಕೃತವಾಗಿ ಮಾರ್ಚ್ನಲ್ಲಿ ತೊರೆದರು ಮತ್ತು ವಾಷಿಂಗ್ಟನ್ನ ಪ್ರಧಾನ ಕಛೇರಿಯ ಸಮೀಪದಲ್ಲಿ ಅವರ ಹೊಸ ಪತ್ನಿ ಎಲಿಜಬೆತ್ ಸ್ಕೈಲರ್ ಅವರೊಂದಿಗೆ ನೆಲೆಸಿದರು. ಅವರು ವಾಷಿಂಗ್ಟನ್ ಮತ್ತು ಇತರರನ್ನು ಕ್ಷೇತ್ರ ಆಜ್ಞೆಗಾಗಿ ಪದೇ ಪದೇ ಕೇಳುವುದನ್ನು ಮುಂದುವರೆಸಿದರು. ಉನ್ನತ ಶ್ರೇಣಿಯ ಪುರುಷರನ್ನು ನೇಮಿಸುವ ಅಗತ್ಯವನ್ನು ಉಲ್ಲೇಖಿಸಿ ವಾಷಿಂಗ್ಟನ್ ನಿರಾಶೆಯನ್ನು ಮುಂದುವರೆಸಿತು. ಇದು ಜುಲೈ 1781 ರ ಆರಂಭದವರೆಗೂ ಮುಂದುವರೆಯಿತು, ಹ್ಯಾಮಿಲ್ಟನ್ ತನ್ನ ಆಯೋಗದೊಂದಿಗೆ ವಾಷಿಂಗ್ಟನ್ಗೆ ಪತ್ರವನ್ನು ಸಲ್ಲಿಸಿದಾಗ, "ಆದ್ದರಿಂದ ಅವರು ಬಯಸಿದ ಆಜ್ಞೆಯನ್ನು ಪಡೆಯದಿದ್ದರೆ ರಾಜೀನಾಮೆ ನೀಡುವುದಾಗಿ ಮೌನವಾಗಿ ಬೆದರಿಕೆ ಹಾಕಿದರು."

[೧೫]

  1. "ಅನಲೆಕ್ಟೆಸ್"
  2. [೧]
  3. [೨]
  4. https://en.wikipedia.org/wiki/Karl_Popper
  5. http://www.friesian.com/popper.htm
  6. [೩]
  7. ರಾಜಕೀಯ ಸಿದ್ಧಾಂತ
  8. ಏಕಚಕ್ರಾಧಿಪತ್ಯ
  9. ಅಸೋಸಿಯೇಷನ್
  10. ಮನಶಾಸ್ತ್ರ
  11. ನೈತಿಕ ಮೌಲ್ಯ
  12. ಕೇಂಬ್ರಿಡ್ಜ್ ಲಂಡನ್
  13. https://en.wikipedia.org/wiki/Donald_Trump
  14. http://www.trump.com/biography/
  15. [೪]