ಸದಸ್ಯ:Sachidananda Hullahalli/ಜ್ಯೋತಿ ಪ್ರಕಾಶ್ ನಿರಾಲಾ

 


ಜ್ಯೋತಿ ಪ್ರಕಾಶ್ ನಿರಾಲಾ

ಜನನ(೧೯೮೬-೧೧-೧೫)೧೫ ನವೆಂಬರ್ ೧೯೮೬[೧]
ರೋಹ್ತಾಸ್ ಜಿಲ್ಲೆ, ಬಿಹಾರ
ಮರಣNovember 18, 2017(2017-11-18) (aged 31)
ಬಂಡೀಪೂರೇ ಜಿಲ್ಲೆ, ಜಮ್ಮು ಮತ್ತು ಕಾಶ್ಮೀರ
ವ್ಯಾಪ್ತಿಪ್ರದೇಶ ಭಾರತ
ಶಾಖೆ Indian Air Force
ಸೇವಾವಧಿ2005–2017
ಶ್ರೇಣಿ(ದರ್ಜೆ) Corporal
ಸೇವಾ ಸಂಖ್ಯೆ918203
ಘಟಕ Rashtriya Rifles (deputed)
Garud Commando Force
ಪ್ರಶಸ್ತಿ(ಗಳು) Ashok Chakra

ಕಾರ್ಪೋರಲ್ ಜ್ಯೋತಿ ಪ್ರಕಾಶ್ ನಿರಾಲಾ, ಅಶೋಕ ಚಕ್ರ (ಪ್ರಶಸ್ತಿ) (೧೫ ನವೆಂಬರ್ ೧೯೮೬ - ೧೮ ನವೆಂಬರ್ ೨೦೧೭) ಅವರು ಗರುಡ ಕಮಾಂಡೋ ಫೋರ್ಸ್‌ನ ಸದಸ್ಯರಾಗಿದ್ದರು. ಅವರಿಗೆ ಮರಣೋತ್ತರವಾಗಿ ಜನವರಿ ೨೦೧೮ ರಲ್ಲಿ ಭಾರತದ ಅತ್ಯುನ್ನತ ಶಾಂತಿಕಾಲದ ಮಿಲಿಟರಿ ಪ್ರಶಸ್ತಿಯಾದ ಅಶೋಕ ಚಕ್ರವನ್ನು ನೀಡಲಾಯಿತು. ಭೂಸೇನೆ ದಾಳಿಯ ಯುದ್ಧಕ್ಕಾಗಿ ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ವಾಯುಸೈನಿಕ ಹಾಗು ಸುಹಾಸ್ ಬಿಸ್ವಾಸ್ ಮತ್ತು ರಾಕೇಶ್ ಶರ್ಮಾ ನಂತರ ಈ ಪ್ರಶಸ್ತಿ ಪಡೆದ ಮೂರನೇ ವ್ಯಕ್ತಿ.

ಹಿನ್ನೆಲೆ ಬದಲಾಯಿಸಿ

ನಿರಾಲಾ ಅವರು ಬಿಹಾರದ ರೋಹ್ತಾಸ್ ಜಿಲ್ಲೆಯ ಬದ್ಲಾಡಿ ಗ್ರಾಮದ ನಿವಾಸಿಯಾಗಿದ್ದರು. [೨] ಅವರು ನವೆಂಬರ್ ೧೫, ೧೯೮೬ ರಂದು ಯಾದವ್ ಕುಟುಂಬದಲ್ಲಿ ತೇಜ್ ನಾರಾಯಣ ಸಿಂಗ್ ಯಾದವ್ ಮತ್ತು ಮಾಲ್ತಿ ದೇವಿಗೆ ಪುತ್ರರಾಗಿ ಜನಿಸಿದರು. [೩] [೪]

ಜ್ಯೋತಿ ಪ್ರಕಾಶ್ ನಿರಾಲಾ ಅವರು ಸುಷ್ಮಾನಂದ ಯಾದವ ಅವರನ್ನು ೨೦೧೦ ರಲ್ಲಿ ವಿವಾಹವಾದರು ಮತ್ತು ಅವರಿಗೆ ಜಿಜ್ಞಾಸ ಕುಮಾರಿ ಎಂಬ ಮಗಳಿದ್ದಾಳೆ. [೫] [೬]

ಸೈನಿಕ ಜೀವನ ಬದಲಾಯಿಸಿ

ನಿರಾಲಾ ಅವರು ೨೦೦೫ರಲ್ಲಿ ಭಾರತೀಯ ವಾಯುಪಡೆಯ ಗರುಡ ಕಮಾಂಡೋ ಫೋರ್ಸ್‌ಗೆ ಸೇರಿದರು. ಅವರನ್ನು ೧೩ನೇ ರಾಷ್ಟ್ರೀಯ ರೈಫಲ್ಸ್‌ಗೆ ನಿಯೋಜಿಸಲಾಯಿತು ಮತ್ತು ಆಪರೇಷನ್ ರಕ್ಷಕ್ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಲಾಯಿತು. [೭] [೮] [೯]

ಅಶೋಕ ಚಕ್ರ ಬದಲಾಯಿಸಿ

 
ಜ್ಯೋತಿ ಪ್ರಕಾಶ್ ನಿರಾಲಾ ಅವರ ವಿಧವೆ ಮತ್ತು ತಾಯಿ 26 ಜನವರಿ 2018 ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಅಶೋಕ ಚಕ್ರವನ್ನು ಸ್ವೀಕರಿಸುತ್ತಾರೆ.

ತಾಂತ್ರಿಕ ಗುಪ್ತಚರ ದಿಂದ ಬಂದ ವರದಿಯ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಚಂದರ್ಗರ್ ಗ್ರಾಮದಲ್ಲಿ ಗರುಡ ತುಕಡಿ ಮತ್ತು 13 ರಾಷ್ಟ್ರೀಯ ರೈಫಲ್ಸ್ ಜಂಟಿಯಾಗಿ ಕಾರ್ಯಾಚರಣೆ ಪ್ರಾರಂಭಿಸಿದವು. ಉಗ್ರರು ಅಡಗಿರುವ ಶಂಕಿತ ಮನೆಯನ್ನು ಅವರ ತುಕಡಿ ರಹಸ್ಯವಾಗಿ ಸಮೀಪಿಸಿ, ಅವರನ್ನು ಸುತ್ತುವರಿಯಲಾಯಿತು. ಹಗುರವಾದ ಮೆಷಿನ್ ಗನ್‌ನೊಂದಿಗೆ ಶಸ್ತ್ರಸಜ್ಜಿತವಾದ ನಿರಾಲಾ, ಅಡಗುತಾಣದ ಸಮೀಪದಲ್ಲಿ ಕಾದು ಕುಳಿತರು ಹಾಗು ಉಗ್ರರು ತಪ್ಪಿಸಿಕೊಳ್ಳುವ ಎಲ್ಲಾ ಮಾರ್ಗಗಳನ್ನು ಕಡಿತಗೊಳಿಸಿದರು. [೮] [೧೦] [೧೧]

ಅಡಗಿಕೊಂಡ ೬ ಉಗ್ರರು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಗುಂಡುಗಳನ್ನು ಹಾರಿಸುತ್ತಾ ಗ್ರೆನೇಡ್‌ಗಳನ್ನು ಎಸೆದರು. ನಿರಾಲಾ ಸಹ ಪ್ರತಿದಾಳಿ ನಡೆಸಿ 'ಎ' ವರ್ಗದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದರು ಮತ್ತು ಇನ್ನಿಬ್ಬರನ್ನು ಗಾಯಗೊಳಿಸಿದರು. ಧಾಳಿಯಲ್ಲಿ ಇವರಿಗೂ ಗುಂಡು ತಾಕಿತು, ತೀವ್ರವಾಗಿ ಗಾಯಗೊಂಡಿದ್ದರೂ ಸಹ ಲೆಕ್ಕಿಸದೆ ಸತತವಾಗಿ ಗುಂಡು ಹಾರಿಸುತ್ತಲೆ ಇದ್ದರು. ಎಲ್ಲಾ ಆರು ಉಗ್ರರು ಹತರಾದ ಎನ್‌ಕೌಂಟರ್‌ನಲ್ಲಿ ಮಾರಣಾಂತಿಕ ಗಾಯಗಳಿಂದ ಜರ್ಜರಿತರಗಿದ್ದ ನಿರಾಲಾ ಮರಣಹೊಂದಿದರು. [೮] [೧೦] [೧೧]

ಇವರು ಸಲ್ಲಿಸಿದ ಅತ್ಯುತ್ತಮ ಸೇವೆ ಮತ್ತು ಉಗ್ರಗಾಮಿಗಳ ವಿರುದ್ಧ ಹೋರಾಡಿದ ಶೌರ್ಯವನ್ನು ಮನಗಂಡು ೨೦೧೮ ರ ಜನವರಿ ೨೬ ರಂದು ಅವರಿಗೆ ಅಶೋಕ ಚಕ್ರವನ್ನು ನೀಡಲಾಯಿತು. [೮] ಲಷ್ಕರ್-ಎ-ತೈಬಾ ದಾ ನಾಯಕತ್ವವನ್ನು ತೊಡೆದುಹಾಕಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕಾರ್ಯಾಚರಣೆಯ ವೇಳೆ ಹತರಾದ ಉಗ್ರರಲ್ಲಿ ಒಬ್ಬರು 2008 ರ ಮುಂಬೈ ದಾಳಿಯ ಪ್ರಮುಖ ಯೋಜಕ ಲಷ್ಕರ್-ಎ-ತೈಬಾ ಕಮಾಂಡರ್ ಝಕಿ-ಉರ್-ರೆಹಮಾನ್ ಲಖ್ವಿ ಅವರ ಸೋದರಳಿಯ. [೧೨] [೧೩]

ಉಲ್ಲೇಖಗಳು ಬದಲಾಯಿಸಿ

  1. "Martyred Garud commando to be cremated at Chandigarh". DailyPost.in (in ಅಮೆರಿಕನ್ ಇಂಗ್ಲಿಷ್). 2017-11-19. Archived from the original on 2018-01-27. Retrieved 2018-01-27.
  2. "Army pays floral tributes to Corporal Jyoti Prakash in J-K". India Today (in ಅಮೆರಿಕನ್ ಇಂಗ್ಲಿಷ್). 2017-11-19. Retrieved 2018-01-27.
  3. "Corporal Jyoti Prakash Nirala AC | Honourpoint" (in ಅಮೆರಿಕನ್ ಇಂಗ್ಲಿಷ್). 18 November 2017. Retrieved 2021-09-11.
  4. "बहन पर जान छिड़कते थे शहीद कमांडो निराला, साथी जवानों ने शादी में निभाई भाई की रस्म". Amar Ujala (in ಹಿಂದಿ). Retrieved 2021-09-11.
  5. "मरणोपरांत मिलेगा वायु सेना के कमांडो ज्योति प्रसाद को अशोक चक्र". Navbharat Times (in ಹಿಂದಿ). Retrieved 2021-09-11.
  6. "3 commandos of city IAF station killed in 38 days - Times of India". The Times of India. Retrieved 2018-01-27.
  7. "Army pays floral tributes to Corporal Jyoti Prakash in J-K".
  8. ೮.೦ ೮.೧ ೮.೨ ೮.೩ "Press Information Bureau". www.pib.nic.in (in ಇಂಗ್ಲಿಷ್). Retrieved 2018-01-27."Press Information Bureau".
  9. "Sole Ashok Chakra goes to Jyoti Prakash Nirala, IAF Garud commando". Deccan Herald. 25 January 2018. Retrieved 2018-01-27.
  10. ೧೦.೦ ೧೦.೧ "IAF commando Jyoti Prakash Nirala awarded Ashok Chakra for role in Kashmir encounter that killed six terrorists. - Firstpost". www.firstpost.com. January 25, 2018. Retrieved January 25, 2018."IAF commando Jyoti Prakash Nirala awarded Ashok Chakra for role in Kashmir encounter that killed six terrorists. - Firstpost".
  11. ೧೧.೦ ೧೧.೧ "Martyred Corporal Jyoti Prakash Nirala joins elite IAF club tomorrow - Times of India". indiatimes.com. January 25, 2018. Retrieved January 25, 2018."Martyred Corporal Jyoti Prakash Nirala joins elite IAF club tomorrow - Times of India".
  12. "Inspiring story of Jyoti Prakash Nirala – first Garud Commando to get Ashok Chakra posthumously". financialexpress.com. January 25, 2018. Retrieved January 25, 2018.
  13. Team, Editorial (2018-01-27). "Interesting Facts about Jyoti Prakash Nirala, Ashok Chakra awardee". SSBToSuccess (in ಅಮೆರಿಕನ್ ಇಂಗ್ಲಿಷ್). Retrieved 2018-01-27.