ಎಂ.ಆರ್.ಎಫ್ ನ ಸಂಕ್ಷಿಪ್ತ ರೂಪ ಸಾಮಾನ್ಯವಾಗಿ ತಿಳಿದಿರುವುದು ಮದ್ರಾಸ್ ರಬ್ಬರ್ ಫ್ಯಾಕ್ಟರಿ ಲಿಮಿಟೆಡ್ ಎಂದು. ಭಾರತದ ಬಹು ರಾಷ್ಟೀಯ ಮತ್ತು ಭಾರತದ ಟೈರುಗಳ ಅತಿ ದೊಡ್ಡ ಉತ್ಪಾದಕ ಮತ್ತು ವಿಶ್ವದ ಹದಿನಾಲ್ಕನೇಯ ದೊಡ್ಡ ಉತ್ಪಾದಕರು. ಇದು ಭಾರತದ ಚೆನ್ನೈನಲ್ಲಿದೆ. ಈ ಕಂಪೆನಿಯು ಟೈರುಗಳು, ಟ್ರೆಡ್ಸ್, ಟ್ಯೂಬುಗಳು, ಕನ್ವೇಯರ್ ಪಟ್ಟಿಗಳು, ಬಣ್ಣಗಳು ಮತ್ತು ರಬ್ಬರ್ ಆಟಾ ಸಾಮಾನನ್ನು ತಯಾರಿಸುತ್ತಾರೆ.

ಮದ್ರಾಸ್ ರಬ್ಬರ್ ಫ್ಯಾಕ್ಟರಿ

ಕಂಪೆನಿಯ ಇತಿಹಾಸ

ಬದಲಾಯಿಸಿ

ಮದ್ರಾಸ್ ರಬ್ಬರ್ ಫ್ಯಾಕ್ಟರಿ ೧೯೪೬ ರಲ್ಲಿ, ಚೆನ್ನೈನ ತಿರುವೊಟಿಯೂರ್ನಲ್ಲಿ ಆಟಿಕೆ ಬಲೂನ್ ತಯಾರಿಕಾ ಘಟಕವಾಗಿ ಕೆ.ಎಮ್.ಮಾಮನ್ ಮಾಪ್ಪಿಲ್ಲೈ ಅವರು ಪ್ರಾರಂಭಿಸಿದರು. ೧೯೫೨ರಲ್ಲಿ ಈ ಕಂಪೆನಿಯು ರಬ್ಬರ್ ಚಕ್ರದ ತಯಾರಿಕೆಯಲ್ಲಿ ತೊಡಗಿತು. ಮದ್ರಾಸ್ ರಬ್ಬರ್ ಫ್ಯಾಕ್ಟರಿಯನ್ನು ೧೯೬೦ರಲ್ಲಿ ಖಾಸಗಿ ಕಂಪೆನಿಯಾಗಿ ಸೇರಿಸಲಾಯಿತು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ಓಹಿಯೋ ಮೂಲದ ಮ್ಯಾನ್ಸ್ಫೀಲ್ಡ್ ಟೈರ್ ಅಂಡ್ ರಬ್ಬರ್ ಕಂಪೆನಿಯೊಂದಿಗೆ ಟೈರ್ ತಯಾರಿಕೆಯಲ್ಲಿ ತೊಡಗಿತು. ೧೦೭೩ರಲ್ಲಿ, ಎಮ್.ಆರ್.ಎಫ್ ಮೊದಲ ಬಾರಿಗೆ ನೈಲಾನ್ ಟೈರ್ಗಳನ್ನು ತಯಾರಿಸಲು ಪ್ರಾರಂಭಿಸಿತು. ಕಂಪನಿಯು ೧೯೭೮ ರಲ್ಲಿ ಬಿ.ಎಫ್.ಗುಡ್ರಿಚ್ ಜೊತೆ ತಾಂತ್ರಿಕ ಸಹಾಯಾರ್ಥ ಸಹಯೋಗದೊಂದಿಗೆ ಪ್ರವೇಶಿಸಿತು. ಮ್ಯಾನ್ಸ್ಫೀಲ್ಡ್ ಟೈರ್ ಅಂಡ್ ರಬ್ಬರ್ ಕಂಪನಿಯು ೧೯೭೯ರಲ್ಲಿ ತನ್ನ ಪಾಲನ್ನು ಮಾರಿತು ಮತ್ತು ಕಂಪನಿಯ ಹೆಸರನ್ನು ಎಮ್.ಆರ್.ಎಫ್ ಲಿಮೆಟೆಡ್ಗೆ ವರ್ಷದಲ್ಲಿ ಬದಲಾಯಿಸಿತು. ಈ ಕಂಪನಿಯು ಮಾರ್ಟಂಗೋನಿ ಟಿ.ಆರ್.ಎಸ್. ಎಸ್.ಪಿ.ಎ, ಇಟಲಿಯೊಂದಿಗೆ ತಾಂತ್ರಿಕ ಸಹಭಾಗಿತ್ವ ಒಪ್ಪಂದವನ್ನು ಅಂತಿಮಗೊಳಿಸಿತು. ಎಮ್.ಆರ್.ಎಫ್ ಟೈರ್ ಭಾರತದ ಮೊದಲ ಆಧುನಿಕ ಸಣ್ಣ ಕಾರು ಆದ ಮಾರುತಿ ೮೦೦ಗೆ ಟೈರುಗಳನ್ನು ಸರಬರಾಜು ಮಾಡಿತು. ೧೯೮೯ರಲ್ಲಿ, ಕಂಪನಿಯು ವಿಶ್ವದ ಅತಿ ದೊಡ್ಡ ಆಟಿಕೆ ತಯಾರಕರಾದ ಹಸ್ಬ್ರೋ ಇಂಟರ್ನ್ಯಾಷನಲ್ ಯುನೈಟೆಡ್ ಸ್ಟೇಟ್ಸೊಂದಿಗೆ ಸಹಯೋಗ ಮಾಡಿ ಫನ್ಸ್ಕೂಲ್ ಇಂಡಿಯಾವನ್ನು ಪ್ರಾರಂಭಿಸಿತು. ಅಲ್ಲದೆ, ಅವರು ಪಾಲಿಯುರೆಥೇನ್ ಪೇಂಟ್ ಫಾರ್ಮುಲೇಶನ್ಸ್ ತಯಾರಿಸಲು ಆಸ್ಟ್ರೇಲಿಯಾದ ವ್ಯಾಪೊಕ್ಯೂರ್ ಜೊತೆ ಒಪ್ಪಂದ ಮಾಡಿಕೊಂಡರು ಮತ್ತು ಇಟಲಿಯ ಟೈರ್ ತಯಾರಿಕ ಪಿರೇಲಿಯೊಂದಿಗೆ ಕನ್ವೇಯರ್ ಮತ್ತು ಎಲಿವೇಟರ್ ಬೆಲ್ಟ್ ಉತ್ಪಾದನೆಯಲ್ಲಿ ತೊಡಗಿದರು. ೨೦೦೪-೨೦೦೫ ರಲ್ಲಿ ಕಂಪನಿಯ ಉತ್ಪನ್ನದ ಶ್ರೇಣಿಯು ಗೋಕಾರ್ಟ್ ಸಹಾಯದಿಂದ ಎರಡು ಮತ್ತು ಮೂರು ಚಕ್ರ ವಾಹನಗಳ ಟೈರುಗಳನ್ನು ವಿಸ್ತರಿಸಿತು.

ಉತ್ಪಾದನಾ ಸೌಲಭ್ಯಗಳು

ಬದಲಾಯಿಸಿ

ಕಂಪನಿಯು ಕೇರಳ, ಪುದುಚೆರಿ, ಅರಾಕೋಣಂ ಮತ್ತು ಕೊಚ್ಚಾಯಂನಲ್ಲಿರುವ ತಯಾರಿಕಾ ಸೌಲಭ್ಯಗಳನ್ನು ಹೊಂದಿದೆ, ತೆಲಂಗಾಣದಲ್ಲಿ ಇತ್ತೀಚಿಗೆ ಎರಡು ಸೌಲಭ್ಯಗಳನ್ನು ಹೊಂದಿದೆ. ಕಂಪನಿಯು ಗೋವಾದಲ್ಲಿನ ತನ್ನ ಸೌಲಭ್ಯಗಳಿಂದ ಆಟಿಕೆಗಳನ್ನು ತಯಾರಿಸುತ್ತಿದೆ. ತಮಿಳುನಾಡಿನ ಚೆನ್ನೈನಲ್ಲಿ ಬಣ್ಣಗಳನ್ನು ತಯಾರಿಸಲಾಗುತ್ತದೆ. ಕಂಪನಿಯು ಏಪ್ರಿಲ್ ೧,೧೯೬೧ ರಂದು ಸಾರ್ವಜನಿಕವಾಗಿ ಹೊರಹೊಮ್ಮಿತು ಮತ್ತು ೧೯೬೪ ರಲ್ಲಿ ರಫ್ತು ಮಾರುಕಟ್ಟೆಯನ್ನು ಅಭಿವೃದ್ದಿ ಪಡಿಸಲು ಲೆಬನಾನ್ನ ಬೈರುತ್ನಲ್ಲಿ ಕಚೇರಿ ಸ್ಥಾಪಿಸಲಾಯಿತು ಮತ್ತು ಅದರ ಪ್ರಸ್ತುತ ಲಾಂಛನ ಮಾಂಸಖಂಡ ಹಾಗೂ ೧೯೬೭ರಲ್ಲಿ ಯು.ಎಸ್.ಎಗೆ ಟೈರುಗಳನ್ನು ರಫ್ತು ಮಾಡುವ ಮೊದಲ ಭಾರತೀಯ ಕಂಪನಿಯಾಯಿತು.

ಸ್ಥಾಪಕ

ಬದಲಾಯಿಸಿ

ಕೆ.ಎಮ್.ಮಾಮನ್ ಮಾಪ್ಪಿಲೈ ಈ ಕಂಪನಿಯ ಸ್ಥಾಪಕ. ಇವರು ಕೆ.ಸಿ.ಮಮ್ಮೆನ್ ಮಾಪ್ಪಿಲೈ ಮತ್ತು ಕುಂಜುಂದಮ್ಮಗೆ ಹುಟ್ಟಿದ ಕಿರಿಯ ಮಗ. ಅವರು ಪ್ರತಿಷ್ಟಿತ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ ಪದವಿ ಪಡೆದರು. ಅವರು ೧೯೪೬ರಲ್ಲಿ ಮದ್ರಾಸ್ ಬಳಿಯ ಸಣ್ಣ ಶೆಡ್ನಿಂದ ಆಟಿಕೆ ಬಲೂನ್ ಉತ್ಪಾದನಾ ಘಟಕದೊಂದಿಗೆ ತನ್ನ ಕೈಗಾರಿಕಾ ಜೀವನವನ್ನು ಪ್ರಾರಂಭಿಸಿದರು.೧೯೫೨ರಲ್ಲಿ ಎಮ್.ಆರ್.ಎಫ್ ಲಿಮಿಟೆಡ್ ಟ್ರೆಡ್ ರಬ್ಬರ್ ತಯಾರಿಕೆಯಲ್ಲಿ ತೊಡಗಿತು.

ಅಂದಿನಿಂದ, ಕಂಪನಿಯು ೩೦ ಶತಕೋಟಿ ಡಾಲರ್ ಉದ್ಯಮವಾಗಲು ಬೆಳೆದಿದೆ. ೧೯೨೨ರಲ್ಲಿ ಕೆ.ಎಮ್.ಮಮ್ಮೆನ್ ಅವರಿಗೆ ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ, ಪದ್ಮಶ್ರೀ ಪುರಸ್ಕಾರವನ್ನು ನೀಡಲಾಯಿತು.

ಉತ್ಪನ್ನಗಳು

ಬದಲಾಯಿಸಿ

ಟೈರ್ - ಇದು ಪ್ರಯಾಣಿಕ ಕಾರುಗಳು, ದ್ವಿಚಕ್ರ ವಾಹನಗಳು, ಟ್ರಕ್ಕುಗಳು, ಬಸ್ಸುಗಳು, ಟ್ರಾಕ್ಟರುಗಳು, ಬೆಳಕಿನ ವಾಹನಗಳ ಮತ್ತು ಆಫ್ ರೋಡ್ ಟೈರುಗಳಿಗಾಗಿ ವಿವಿಧ ಟೈರುಗಳನ್ನು ತಯಾರಿಸುತ್ತಾರೆ.

ಕನ್ವೇಯರ್ ಬೆಲ್ಟಿಂಗ್ - ಇದು ಭಾರತದಲ್ಲಿನ ಅತ್ಯಂತ ಮುಂದುವರಿದ ರಾಜ್ಯದ ಕಲೆ ಸೌಲಭ್ಯಗಳಲ್ಲಿ ಒಂದಾದ ಕನ್ವೇಯರ್ ಬೆಲ್ಟಿಂಗ್ನ ಮಸಲ್ ಫ಼್ಲೆಕ್ಸ್ ಬ್ರ್ಯಾಂಡನ್ನು ಸುಧಾರಿತ ಮಟ್ಟದಲ್ಲಿ ತಯಾರಿಸುತ್ತಾರೆ. ಈ ಕಂಪನಿಯು ಇತ್ತೀಚಿನ ಉತ್ಪಾದನ ಕೌಶಲ್ಯಗಳನ್ನು ಅಳವಡಿಸಿಕೊಂಡಿದೆ.

ಪೆಟ್ ಟ್ರೆಡ್ಸ್ - ಇದು ಭಾರತದ ಅತ್ಯಂತ ಮುಂದುವರಿದ ನಿಖರವಾದ ವ್ಯವಸ್ಥೆಯಾಗಿದೆ. ಇಂದು ಎಮ್.ಆರ್.ಎಫ್ ಟೈರುಗಳು ಮತ್ತು ರಬ್ಬರ್ ಟೈರುಗಳಲ್ಲಿ ವ್ಯಾಪಕವಾದ ಜ್ಞಾನವನ್ನು ಹೊಂದಿರುವ ರಿಚರ್ಡವರು, ಈ ಕಲೆಯನ್ನು ಪೂರ್ಣಗೊಳಿಸಿದ್ದಾರೆ. []

ಪ್ರಶಸ್ತಿಗಳು

ಬದಲಾಯಿಸಿ

೨೦೧೪ರಲ್ಲಿ ಎಮ್.ಅರ್.ಎಫ್ ೧೧ನೇ ಬಾರಿಗೆ ದಾಖಲೆಯ ಜೆಡಿ ಪವರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ೨೦೦೯ರ ರಾಸಾಯನಿಕ ಮತ್ತು ಅಲೈಡ್ ಪ್ರಾಡಕ್ಟ್ಸ್ ಎಕ್ಸ್ಪೋರ್ಟ್ ಪ್ರಮೋಷನ್ ಕೌನ್ಸಿಲ್ನಿಂದ 'ಅತಿ ದೊಡ್ಡ ರಫ್ತು ಪ್ರಶಸ್ತಿಗಳು (ಆಟೋ ಟೈರ್ ಸೆಕ್ಟರ್)', 'ಟಾಪ್ ಎಕ್ಸ್ಪೋರ್ಟ್ ಅವಾರ್ಡ್'ಗೆ ಅಖಿಲ ಭಾರತ ರಬ್ಬರ್ ಇಂಡಸ್ಟ್ರೀಸ್ ಅಸೋಸಿಯೇಷನ್' ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಎಮ್.ಅರ್.ಎಫ್. ಕಂಪನಿ ಗೆದ್ದಿದೆ. ೨೦೧೪ ರಲ್ಲಿ, ಟ್ರಸ್ಟ್ ರಿಸರ್ಚ್ ಅಡ್ವೈಸರಿ ನಡೆಸಿದ ಅಧ್ಯಯನವೊಂದರ ಬ್ರಾಂಡ್ ಟ್ರಸ್ಟ್ ರಿಪೋರ್ಟ್ ಪ್ರಕಾರ ಎಮ್.ಅರ್.ಎಫ್. ಕಂಪನಿ ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರಾಂಡಗಳಲ್ಲಿ ೪೮ನೇ ಸ್ಥಾನ ಪಡೆದಿದೆ. []

ಎಮ್.ಅರ್.ಎಫ್ ಪೇಸ್ ಫೌಂಡೇಶನ್

ಬದಲಾಯಿಸಿ

ಎಮ್.ಅರ್.ಎಫ್ ಪೇಸ್ ಫೌಂಡೇಶನ್ ವೇಗದ ಬೌಲರ್ಗಳಿಗೆ ತರಬೇತಿ ನೀಡುವ ತರಬೇತಿ ಕೇಂದ್ರವಾಗಿದೆ. ಇದನ್ನು ಎಮ್.ಅರ್.ಎಫ್ ನಿರ್ದಿಷ್ಟವಾಗಿ ವೇಗದ ಬೌಲರ್ಗಳಿಗೆ ಈ ಫೌಂಡೇಶನ್ನನ್ನು ಸ್ಥಾಪಿಸಿತು. ಚೆನ್ನೈನಲ್ಲಿ ಮಾಜಿ ಆಸ್ಟ್ರೇಲಿಯನ್ ಪೇಸ್ನ ಮುಂಚಾಣಿ ಆಟಗಾರ ಟೆನ್ನಿಸ್ ಲಿಲ್ಲಿಯವರ ಸಹಾಯದಿಂದ ತರಬೇತಿಯನ್ನಿ ನೀಡುತ್ತಿದ್ದಾರೆ. ಈ ಪ್ರೋಗ್ರಾಂ ಮೂಲಕ, ಯುವ ಮಹತ್ವಾಕಾಂಕ್ಷಿ ವೇಗದ ಬೌಲರ್ಗಳಿಗೆ ವಿಷೇಶ ಸೌಲಭ್ಯದಲ್ಲಿ ತರಬೇತಿ ನೀಡಲಾಗುತ್ತದೆ. ಎಮ್.ಅರ್.ಎಫ್ ಆಟದ ಹಲವು ಕ್ರಿಕೆಟಿಗರಿಗೆ ಬ್ಯಾಟ್ ಪ್ರಯೋಜಕರಾಗಿದ್ದಾರೆ. ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ಮತ್ತು ಸ್ಟೀವ್ ವಾ, ಇವರಿಗೆ ಎಮ್.ಅರ್.ಎಫ್ ಉತ್ಪನ್ನಗಳನ್ನು ಅನುಮೋದಿಸಿದ್ದಾರೆ. ಆರಂಭಿಕ ದಿನಗಳಲ್ಲಿ ಸಚಿನ್ ತೆಂಡೂಲ್ಕರ್ ಅವರು ಎಮ್ಆರ್ಎಫ್ ಪೇಸ್ ಫೌಂಡೇಷನ್ನಲ್ಲಿ ವೇಗದ ಬೌಲರ್ ಆಗಲು ತರಬೇತಿ ಪಡೆದಿದ್ದರು. ಎಮ್.ಅರ್.ಎಫ್ ಭಾರತೀಯ ಬ್ಯಾಟ್ಸ್ಮೆನ್ಗಳಾದ ರೋಹಿತ್ ಶರ್ಮಾ, ಗೌತಮ್ ಗಂಭೀರ್ ಮತ್ತು ಸಂಜು ಸ್ಯಾಮ್ಸನ್ ಅವರಿಗೆ ಪ್ರಾಯೋಜಿಸಿದೆ. []

  1. https://dir.indiamart.com/impcat/mrf-tyre.html
  2. https://www.mrftyres.com/
  3. http://www.moneycontrol.com/india/stockpricequote/tyres/mrf/MRF