ಪಾಲುದಾರಿಕೆ ಸಂಸ್ಥೆಗಳು

ಬದಲಾಯಿಸಿ

ಏಕವ್ಯಕ್ತಿ ಮಾರಾಟ ಸಂಸ್ಥೆಗಳ,ಅಥವಾ ಒಬ್ಬನೇ ಮಾಲೀಕ ವ್ಯವಹಾರದ ದೋಷಗಳ ಕಾರಣವಾಗಿ ಹುಟ್ಟಿಕೊಂಡ ಪಾಲುದಾರಿಕೆ ಒಂದು ವ್ಯವಹಾರ ಸಂಸ್ಥೆಯ ರೂಪ.ಏಕವ್ಯಕ್ತಿ ಮಾರಾಟ ಸಂಸ್ಥೆಯ ಅತ್ಯಂತ ಪ್ರಧಾನ ದೋಷಗಳಾದ ಸೀಮಿತ ಬಂಡವಾಳ ಮತ್ತು ಸೀಮಿತ ನಿರ್ವಹಣಾ ಕೌಶಲ್ಯವನ್ನು,ಪಾಲುದಾರಿಕೆ ಸಂಸ್ಥೆಯ ರಚನೆಯ ಮೂಲಕ ಗೆಲ್ಲಲಾಯಿತು.ಪಾಲುದಾರಿಕೆಯಲ್ಲಿ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳು ಒಂದುಗೂಡುತ್ತಾರೆ.ಅವರಲ್ಲಿ ಕೆಲವರು ಬಂಡವಾಳ ಹೊಂದಿದ್ದರೆ ಮತ್ತೆ ಕೆಲವರು ಕೌಶಲ್ಯ ಅಥವಾ ಅನುಭವವನ್ನು ಹೊಂದಿರುತ್ತಾರೆ.ಅವರು ಒಂದು ಸಂಸ್ಥೆಯನ್ನು ರೂಪಿಸಿಕೊಂಡು ಯಾವುದೇ ನ್ಯಾಯವಾದ ವ್ಯವಹಾರವನ್ನು ನಡೆಸಿ,ಅದರ ಲಾಭವನ್ನು ಹಂಚಿಕೊಳ್ಳುತಾರೆ.ಅದರಿಂದ ಪಾಲುದಾರಿಕೆಯನ್ನು ರೂಪಿಸುವ ವ್ಯಕ್ತಿಗಳನ್ನು ವೈಯಕ್ತಿಕವಾಗಿ ಪಾಲುದಾರು ಎಂದು ಮತ್ತು ಸಾಮೂಹಿಕವಾಗಿ 'ಸಂಸ್ಥೆ' ಎಂದು ಕರೆಯಲಾಗುತ್ತದೆ. ಅವರ ವ್ಯವಹಾರ, ಸಂಸ್ಥೆಯ ಹೆಸರಿನ ಮೇಲೆ ನಡೆಯುತ್ತದೆ.

 ಪಾಲುದಾರಿಕೆ ಕೆಳಕಂಡವುಗಳ ಫಲವಾಗಿದೆ

೧.ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳದ ಅವಶ್ಯಕತೆ. ೨.ಹೆಚ್ಚಿನ ನಿರ್ವಹಣಾ ಕೌಶಲ್ಯದ ಅವಶ್ಯಕತೆ. ೩.ಅಗಾಧ ಪ್ರಮಾಣದ ಪರಿಣಿತಿಯ ಅವಶ್ಯಕತೆ. ೪.ನಷ್ಟದ ಅಪಾಯವನ್ನು ಚದುರಿಸುವ ಅವಶ್ಯಕತೆ.

 
Arab Partnership Project Fund - Kuwait (8005844399)
 == ಪಾಲುದಾರಿಕೆಯ ವ್ಯಾಖ್ಯೆ==

೧೯೩೨ರ ಭಾರತ ಪಾಲುದಾರಿಕೆ ಕಾಯಿದೆಯ ಸೆಕ್ಷನ್ ೪, ಪಾಲುದಾರಿಕೆಯನ್ನು ಹೀಗೆ ವ್ಯಾಖ್ಯಾನಿಸುತ್ತದೆ.ಎಲ್ಲರೂ ಕೈಗೊಂಡಿರುವ ಅಥವಾ ಅವರಲ್ಲಿ ಎಲ್ಲರ ಪರವಾಗಿ ಒಬ್ಬ ವ್ಯವಹರಿಸುತ್ತಿರುವ,ವ್ಯವಹಾರದ ಲಾಭಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡಿರುವ ವ್ಯಕ್ತಿಗಳ ನಡುವಿನ ಸಂಬಂಧ.

 
Flag of India
  ಪಾಲುದಾರಿಕೆಯ ಲಕ್ಷಣಗಳು,ಮೂಲತತ್ವಗಳು ಅಥವಾ ಗುಣಲಕ್ಷಣಗಳು

.

೧.ಒಪ್ಪಂದ: ಪಾಲುದಾರಿಕೆ,ಪಾಲುದಾರರ ನಡುವೆ ಉಂಟಾದ ಒಪ್ಪಂದ ಅಥವಾ ಕರಾರಿನ ಫಲಿತಾಂಶ. ಅದು ಹುಟ್ಟಿನಿಂದ, ಸ್ಥಾನಮಾನ ಅಥವಾ ಅನುವಂಶಿಕ ಅಥವಾ ಉತಾರಾಧಿಕಾರರಿಂದ ಉಂಟಾಗುವುದಿಲ್ಲ.

 
UK-Vietnam Strategic Partnership signing (4971605168)

೨.ಒಪ್ಪಂದದ ಲಕ್ಷಣ: ವ್ಯಕ್ತಿಗಳ ನಡುವಿನ ಒಪ್ಪಂದ ಅಥವಾ ಕರಾರು ಬಾಯಿ ಮಾತಿನ ಮೂಲಕವಾಗಿರಬಹುದು. ಆದರೆ ಸಾಮಾನ್ಯವಾಗಿ ಕರಾರು ಬರಹದಲ್ಲಿರುತ್ತದೆ.

 
UK-Vietnam Strategic Partnership (4971605178)

೩.ಕರಾರಿಗೆ ಒಳಪಡಲು ಕಾನೂನುಬದ್ಧ ಸಾಮರ್ಥ್ಯ: ಪಾಲುದಾರಿಕೆಯನ್ನು ರೂಪಿಸಿಕೊಳ್ಳಲು ವ್ಯಕ್ತಿಗಳು ಕರಾರಿಗೆ ಪ್ರವೇಶಿಸಲು ತಕ್ಕ ಶಕ್ತಿ ಅಥವಾ ಸಾಮರ್ಥ್ಯ ಹೊಂದಿರಬೇಕು.

೪.ಪಾಲುದಾರರ ಸಂಖ್ಯೆ: ಪಾಲುದಾರಿಕೆಯನ್ನು ರೂಪಿಸಲು ಕಡೇಪಕ್ಷ ಇಬ್ಬರು ವ್ಯಕ್ತಿಗಳು ಬೇಕಾಗುತ್ತದೆ.ಗರಿಷ್ಠ ಸಂಖ್ಯೆಯ ಪಾಲುದಾರರೆಂದರೆ,ಸಾಮಾನ್ಯ ಸ್ವರೂಪದ ವ್ಯವಹಾರವಾದರೆ ೨೦ಕ್ಕೆ ಮತ್ತು ಬ್ಯಾಂಕಿಂಗ್ ವ್ಯವಹಾರವಾದರೆ ೧೦ಕ್ಕೆ ಸೀಮಿತವಾಗಿರುತ್ತದೆ.

೫.ಲಾಭ ಹಂಚಿಕೊಳ್ಳುವಿಕೆ: ಲಾಭ ಮಾಡುವುದು ಮತ್ತು ಅದನ್ನು ತಮ್ಮ ತಮ್ಮಲ್ಲಿ ಹಂಚಿಕೊಳ್ಳುವುದು ಪಾಲುದಾರರ ನಡುವಿನ ಒಪ್ಪಂದವಾಗಿರುತ್ತದೆ.ಪಾಲುದಾರರು ಒಪ್ಪಂದದ ಪ್ರಮಾಣದಲ್ಲಿ ಲಾಭವನ್ನು ಹಂಚಿಕೊಳ್ಳುತ್ತಾರೆ.

೬.ನಿರ್ವಹಣೆ: ಪಾಲುದಾರಿಕೆ ವ್ಯವಹಾರ ಎಲ್ಲ ಪಾಲುದಾರದಿಂದ ಅಥವಾ ಎಲ್ಲರ ಪರವಾಗಿ ಒಬ್ಬ ಅಥವಾ ಹಲವರಿಂದ ನಡೆಯುತ್ತದೆ.

೭.ಅಪರಿಮಿತ ಹೊಣೆಗಾರಿಕೆ: ಪಾಲುದಾರರ ಹೊಣೆಗಾರಿಕೆ ಅಪರಿಮಿತವಾಗಿರುತ್ತದೆ.ಒಂದು ವೇಳೆ ಸಂಸ್ಥೆ ತನ್ನ ಸಾಲವನ್ನು ತೀರಿಸದಿದ್ದರೆ, ಪ್ರತೀ ಪಾಲುದಾರನೂ ಅದನ್ನು ತನ್ನ ವೈಯಕ್ತಿಕ ಸ್ವತ್ತಿನಿಂದ ಪಾವತಿ ಮಾಡಲು ಹೊಣೆಗಾರನಾಗಿರುತ್ತಾನೆ.

೮.ವರ್ಗಾವಣೆ ಮಾಡಲಾಗದ ಹಿತಾಸಕ್ತಿ: ಇತರ ಅನುಮತಿಯಿಲ್ಲದೆ ಒಬ್ಬ ಪಾಲುದಾರ,ಸಂಸ್ಥೆಯ ಬಗೆಗಿನ ತನ್ನ ಹಿತಾಸಕ್ತಿಯನ್ನು ಹೊರಗಿನವರಿಗೆ ವರ್ಗಾವಣೆ ಮಾಡುವಂತಿಲ್ಲ.

೯.ಜಂಟಿ ಮಾಲೀಕತ್ವ: ಪ್ರತಿ ಪಾಲುದಾರನೂ ಸಂಸ್ಥೆಯ ಸ್ವತ್ತಿನ ಜಂಟಿ ಮಾಲೀಕನಾಗಿರುತ್ತಾನೆ.ಆದ್ದರಿಂದ,ಕಾನೂನಿನ ದೃಷ್ಟಿಯಲ್ಲಿ ಸಂಸ್ಥೆ ಮತ್ತು ಪಾಲುದಾರ,ಇಬ್ಬರನ್ನೂ ಒಂದೇ ಎಂದು ಪರಿಗಣಿಸಲಾಗುತ್ತದೆ.ಪಾಲುದಾರಿಕೆಗೆ,ಅದನ್ನು ರೂಪಿಸಿದ ಪಾಲುದಾರರನ್ನು ಬಿಟ್ಟು ಪ್ರತ್ಯೀಕ ಅಸ್ತಿತ್ವವಿಲ್ಲ.

೧೦.ಒಕ್ಕೂಟ ಭಾವನೆ: ಪಾಲುದಾರಿಕೆಯ ಸತ್ವ ಸಹಕಾರ ಭಾವನೆಯನ್ನು ಆಧರಿಸುತ್ತದೆ.ಅದರಿಂದ ಪಾಲುದಾರರಲ್ಲಿ ಪರಸ್ಪರ ನಂಬಿಕೆ ಮತ್ತು ಪರಸ್ಪರ ನಿಯಂತ್ರಣ ಬೇಕಾಗುತ್ತದೆ.

  ಪಾಲುದಾರಿಕೆ ಸಂಸ್ಥೆಯ ವಿಧಗಳು

ಪಾಲುದಾರರ ಹೊಣೆಗಾರಿಕೆಯ ಆಧಾರದ ಮೇಲೆ ಪಾಲುದಾರಿಕೆಯನ್ನು ಎರಡು ವರ್ಗಗಳಾಗಿ ವಿಭಾಗಿಸಬಹುದು. ಅ.ಸಾಮಾನ್ಯ ಪಾಲುದಾರಿಕೆ ಅಥವಾ ಅಪರಿಮಿತ ಪಾಲುದಾರಿಕೆ. ಆ.ಸೀಮಿತ ಪಾಲುದಾರಿಕೆ.

ಅ).ಸಾಮಾನ್ಯ ಪಾಲುದಾರಿಕೆ: ಎಲ್ಲಾ ಪಾಲುದಾರರ ಹೊಣೆಗಾರಿಕೆಗಳು ಅಪರಿಮಿತವಾಗಿರುವ ಪಾಲುದಾರಿಕೆಯನ್ನು ಸಾಮಾನ್ಯ ಪಾಲುದಾರಿಕೆ ಎಂದು ಕರೆಯಲಾಗುತ್ತದೆ. ಈ ಬಗೆಯ ಪಾಲುದಾರಿಕೆಯನ್ನು ಸಂಸ್ಥೆಯ ಅವಧಿಯ ಆಧಾರದ ಮೇಲೆ ಎರಡು ವಿಧಗಳಾಗಿ ವಿಭಾಗಿಸಬಹುದು.

i). ನಿರ್ಧಿಷ್ಟ ಪಾಲುಗಾರಿಕೆ: ಒಂದು ನಿರ್ಧಿಷ್ಟ ಅವಧಿಗಾಗಿ ಅಥವಾ ಒಂದು ನಿರ್ಧಿಷ್ಟ ವ್ಯವಹಾರಕ್ಕಾಗಿ ರೂಪುಗೊಂಡ ಪಾಲುಗಾರಿಕೆಯನ್ನು ನಿರ್ಧಿಷ್ಟ ಪಾಲುಗಾರಿಕೆ ಎಂದು ಕರೆಯಲಾಗುತ್ತದೆ.

ii). ಇಷ್ಟಪ್ರಕಾರದ ಪಾಲುಗಾರಿಕೆ: ಅನಿಶ್ಚಿತ ಕಾಲದವರೆಗೆ ರೂಪಿತವಾದ ಪಾಲುದಾರಿಕೆಯನ್ನು 'ಇಷ್ಟಪ್ರಕಾರದ ಪಾಲುಗಾರಿಕೆ' ಎಂದು ಕರೆಯಲಾಗುತ್ತದೆ.ಯಾವುದೇ ಪಾಲುದಾರ ಇತರ ಪಾಲುದಾರರಿಗೆ ೧೪ ದಿನಗಳ ಮುನ್ಸೂಚನೆ ನೀಡಿ ತನಗೆ ಇಷ್ಟ ಬಂದಂತೆ ಪಾಲುದಾರಿಕೆಯನ್ನು ಮುಕ್ತಾಯಗೊಳಿಸಬಹುದು.

ಆ).ಸೀಮಿತ ಪಾಲುದಾರಿಕೆ: ಒಬ್ಬ ಅಥವಾ ಹೆಚ್ಚಿನ ಸಾಮಾನ್ಯ ಪಾಲುದಾರ (ಅಂದರೆ,ಅಪರಿಮಿತ ಹೊಣೆಗಾರಿಕೆಯ ಪಾಲುದಾರರು) ಜೊತೆಗೆ, ಒಬ್ಬ ಅಥವಾ ಹೆಚ್ಚಿನ ಸೀಮಿತ ಪಾಲುದಾರರನ್ನು (ಅಂದರೆ, ಸೀಮಿತ ಹೊಣೆಗಾರಿಕೆಯುಳ್ಳ ಪಾಲುದಾರರು) ಹೊಂದಿರುವ ಪಾಲುಗಾರಿಕೆಯನ್ನು ಸೀಮಿತ ಪಾಲುದಾರಿಕೆಯೆಂದು ಕರೆಯಲಾಗುತ್ತದೆ. ಇಲ್ಲಿ ಸೀಮಿತ ಪಾಲುದಾರರನ್ನು 'ವಿಶೇಷ ಪಾಲುದಾರರೆಂದು' ಕರೆಯಲಾಗುತ್ತದೆ. ಅವರ ಹೊಣೆಗಾರಿಕೆ, ಅವರು ತೊಡಗಿಸಿದ ಬಂಡವಾಳದಷ್ಟರಮಟ್ಟಿಗೆ ಸೀಮಿತವಾಗಿರುತ್ತದೆ.

 
Open Government Partnership Summit (10596621743)
  ==ಪಾಲುದಾರರ ವಿಧಗಳು==

ಒಂದು ಪಾಲುದಾರಿಕೆ ಸಂಸ್ಥೆಯಲ್ಲಿ ಹಲವು ವಿವಿಧ ಪಾಲುದಾರರಿರುತ್ತಾರೆ.ಅವರು ಕೆಳಕಂಡಂತಿದ್ದಾರೆ.

೧.ಕ್ರಿಯಾಶೀಲ ಅಥವಾ ಸಕ್ರಿಯ ಪಾಲುದಾರರು: ಇವರು ಬಂಡವಾಳವನ್ನು ತೊಡಗಿಸುವುದಲ್ಲದೆ ವ್ಯವಹಾರದ ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವರು.

೨.ತಟಸ್ಥ ಪಾಲುದಾರರು: ಇವರು ಬಂಡವಾಳವನ್ನು ತೊಡಗಿಸುತ್ತಾರೆ,ಆದರೆ ವ್ಯವಹಾರದ ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದಿಲ್ಲ.ಸಕ್ರಿಯ ಪಾಲುದಾರರಂತೆಯೇ ಇವರ ಹೊಣೆಗಾರಿಕೆಯಿರುತ್ತದೆ.ಇವರನ್ನು 'ಸುಪ್ತ' ಪಾಲುದಾರರು ಎಂದೂ ಕರೆಯಲಾಗುತ್ತದೆ.

೩.ನಾಮಪತ್ರ ಪಾಲುದಾರರು: ಇವರು ಬಂಡವಾಳವನ್ನು ತೊಡಗಿಸುವುದಿಲ್ಲ,ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದೂ ಇಲ್ಲ.ಆದರೆ ಇವರು ಸಂಸ್ಥೆಗೆ ತಮ್ಮ ಪ್ರಸಿದ್ಧವಾದ ಹೆಸರನ್ನು ಎರವಲು ಕೊಡುತ್ತಾರೆ.ಇವರು ಯಾವುದೇ ಲಾಭಕ್ಕೆ ಹಕ್ಕುದಾರರಲ್ಲ,ಆದರೆ ಸಾಲಗಳಿಗೆ ಹೊಣೆಯಾಗುತ್ತಾರೆ.

೪.ರಹಸ್ಯ ಪಾಲುದಾರರು: ಈ ಪಾಲುದಾರರು ಸಕ್ರಿಯ ಪಾಲುದಾರರು ಮತ್ತು ತಟಸ್ಥ ಪಾಲುದಾರರ ನಡುವೆ ನಿಲ್ಲುತ್ತಾರೆ.ಇವರು ವ್ಯವಹಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.ಆದರೆ ಹೊರಗಿನವರು ತಾವು ಪಾಲುದಾರರೆಂಬುದನ್ನು ತಿಳಿಯಲು ಇಷ್ಟ ಪಡುವುದಿಲ್ಲ.ಅವರು ಎಲ್ಲಾ ಸಾಲಗಳಿಗೂ ಹೊಣೆಗಾರರಾಗಿರುತ್ತಾರೆ.

೫.ಲಾಭದಲ್ಲಿ ಮಾತ್ರ ಪಾಲುದಾರರು: ಇವರು ವ್ಯವಹಾರದ ನಿರ್ವಹಣೆಯಲ್ಲಿ ಪಾಲುಗೊಳ್ಳದೆ ಲಾಭದ ಒಂದು ಭಾಗವನ್ನು ಪಡೆದುಕೊಳ್ಳುತ್ತಾರೆ.ಇವರು ನಷ್ಟಕ್ಕೆ ಹೊಣೆಗಾರರಲ್ಲದಿದ್ದರೂ,ಸಂಸ್ಥೆಯ ಸಾಲಗಳಿಗೆ ಹೊಣೆಗಾರರಾಗುತ್ತಾರೆ.

೬.ವಶೀಕರಿಸುವ ಪಾಲುದಾರ: ಅವನು ಒಂದು ಸಂಸ್ಥೆಯ ಪಾಲುದಾರನೆಂದು ಸಾರ್ವಜನಿಕರೇ ಮೋಸ ಹೋಗುತ್ತಾರೆ.ತನ್ನನ್ನು ಒಬ್ಬ ಪಾಲುದಾರನೆಂದು ತಿಳಿದ ನಂತರವೂ ಅವನು ಅದನ್ನು ಒಪ್ಪಿಕೊಳ್ಳುವುದೂ ಇಲ್ಲ,ನಿರಾಕರಿಸುವುದೂ ಇಲ್ಲ.ಅವನು ಬಂಡವಾಳವನ್ನು ಹೂಡುವುದಿಲ್ಲ.ಲಾಭದ ಪಾಲನ್ನು ಪಡೆಯುವುದಿಲ್ಲ.ಆದರೆ ಅವನು ಪಾಲುದಾರನೆಂದು ಭಾವಿಸಿ ಸಾಲ ಕೊಡುವ ಮೂರನೇ ವ್ಯಕ್ತಿಗಳಿಗೆ ಅವನೇ ಹೊಣೆಯಾಗುತ್ತಾನೆ.

೭.ನವೀನ ಪಾಲುದಾರ: ಪಾಲುದಾರಿಕೆಗೆ ಹೊಸದಾಗಿ ಸೇರ್ಪಡೆಯಾಗುವ ಪಾಲುದಾರರು.

೮.ಹೊರಹೋಗುವ ಅಥವಾ ನಿವೃತ್ತಿಯಾಗುವ ಪಾಲುದಾರ: ಇತರರು ವ್ಯವಹಾರವನ್ನು ಮುಂದುವರೆಸಲು ಬಿಟ್ಟು,ತಾನು ಒಂದು ಒಪ್ಪಂದದಿಂದ ನಿವೃತ್ತಿ ಬಯಸುವ ಪಾಲುದಾರ.ಅವನು ನಿವೃತ್ತಿಗೆ ಮೊದಲು ಖರ್ಚು ಮಾಡಿದ ಎಲ್ಲಾ ಸಾಲಗಳಿಗೂ ಜವಾಬ್ದಾರಿಯಾಗುತ್ತಾನೆ.

೯.ಸೀಮಿತ ಪಾಲುದಾರ: ಸೀಮಿತ ಹೊಣೆಗಾರಿಯುಳ್ಳವನು ಸೀಮಿತ ಪಾಲುದಾರ.

೧೦.ಅಪ್ರಾಪ್ತ ಪಾಲುದಾರ: ವಾಸ್ತವವಾಗಿ ಒಬ್ಬ ಅಪ್ರಾಪ್ತ ಪಾಲುದಾರಿಕೆಯಲ್ಲಿ ಭಾಗವಹಿಸಲು ಸಮರ್ಥನಲ್ಲ.ಆದರೆ ಸಂಸ್ಥೆಯ ಉಪಯುಕ್ತತೆಯ ದೃಷ್ಟಿಯಿಂದ ಮಾತ್ರ,ಇತರ ಎಲ್ಲಾ ಪಾಲುದಾರರ ಸಮ್ಮತಿಯ ಮೇಲೆ ಅವನನ್ನು ಸೇರಿಸಿಕೊಳ್ಳಬಹುದು.ಅವನ ಹೊಣೆಗಾರಿಕೆ ಸಂಸ್ಥೆಯಲ್ಲಿರುವ ಲಾಭದ ಪಾಲು ಮತ್ತು ಆಸ್ತಿಗಳಿಗೆ ಸೀಮಿತವಾಗಿರುತ್ತದೆ.

  ==ಪಾಲುದಾರರ ಹಕ್ಕುಗಳು,ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳು==

ಅ).ಪಾಲುದಾರರ ಹಕ್ಕುಗಳು

೧.ಪ್ರತೀ ಪಾಲುದಾರನು ಸಂಸ್ಥೆಯ ಸ್ವತ್ತಿನ ಜಂಟಿ ಮಾಲೀಕನಾಗಿರುತ್ತಾನೆ.

೨.ಪ್ರತೀ ಪಾಲುದಾರನಿಗೂ ವ್ಯವಹಾರದ ನಿರ್ವಹಣೆಯಲ್ಲಿ ಪಾಲ್ಗೊಳ್ಳುವ ಹಕ್ಕಿರುತ್ತದೆ.

೩.ಸಂಸ್ಥೆಯ ಲಾಭದಲ್ಲಿ ಪಾಲು ಪಡೆಯುವ ಹಕ್ಕು ಪ್ರತಿ ಪಾಲುದಾರನಿಗೂ ಇರುತ್ತದೆ.

೪.ಸಂಸ್ಥೆಯ ಲೆಕ್ಕದ ಪುಸ್ತಕಗಳು ಮತ್ತು ಎಲ್ಲಾ ದಾಖಲೆಗಳನ್ನು ಪರೀಕ್ಷಿಸುವ ಹಕ್ಕು ಪ್ರತಿ ಪಾಲುದಾರನಿಗೂ ಇರುತ್ತದೆ.

೫.ಪ್ರತೀ ಪಾಲುದಾರನಿಗೂ,ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲೂ ತನ್ನ ಅಭಿಪ್ರಾಯವನ್ನು ವ್ಯಕ್ತಗೊಳಿಸುವ ಹಕ್ಕಿರುತ್ತದೆ.ಬಹುಮತದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಂಡಾಗ,ಅವನು ಬಹುಮತದ ನಿರ್ಧಾರವನ್ನು ಮಾನ್ಯ ಮಾಡಬೇಕಾಗುತ್ತದೆ.

೬.ಪ್ರತೀ ಪಾಲುದಾರನಿಗೂ,ವ್ಯವಹಾರದ ಸಾಮಾನ್ಯ ಚಾಲನೆಯಲ್ಲಿ ತಾನು ಖರ್ಚು ಮಾಡಿದ ಯಾವುದೇ ಮೊತ್ತವನ್ನು ಮತ್ತೆ ಪಡೆದುಕೊಳ್ಳುವ ಹಕ್ಕಿರುತ್ತದೆ.

೭.ಪ್ರತೀ ಪಾಲುದಾರನೂ ತನ್ನ ಪಾಲಿನ ಬಂಡವಾಳಕ್ಕಿಂತ ಹೆಚ್ಚಾಗಿ ತೊಡಗಿಸಿದ ಯಾವುದೇ ಹಣದ ಮೊತ್ತಕ್ಕೆ ವರ್ಷಕ್ಕೆ ಶೇಕಡ ಆರರಂತೆ ಬಡ್ಡಿ ಪಡೆಯುವ ಹಕ್ಕು ಹೊಂದಿರುತ್ತಾನೆ.

೮.ಪ್ರತೀ ಪಾಲುದಾರನಿಗೂ,ಸಂಸ್ಥೆಯ ಹಿತಾಸಕ್ತಿಯನ್ನು ರಕ್ಷಿಸಲು ಅಗತ್ಯವಾದ ಎಲ್ಲಾ ಕೆಲಸಗಳನ್ನು ಮಾಡುವ ಹಕ್ಕಿರುತ್ತದೆ.

೯.ಪ್ರತೀ ಪಾಲುದಾರನಿಗೂ ಯಾವುದೇ ನಷ್ಟಗಳಿಂದ ಸಂಸ್ಥೆಯನ್ನು ಸಂರಕ್ಷಿಸುವ ಹಕ್ಕಿರುತ್ತದೆ.

೧೦.ಪ್ರತೀ ಪಾಲುದಾರನಿಗೂ ಪಾಲುದಾರಿಕೆಯಲ್ಲಿ ಮುಂದುವರಿಯುವ ಹಕ್ಕಿರುತ್ತದೆ.ಅಂದರೆ ನಿಯಮಾವಳಿಗಳು ಸೂಚಿಸುವವರೆಗೂ ಅದನ್ನು ಹೊರ ಹಾಕುವಂತಿಲ್ಲ.

೧೧.ಪ್ರತೀ ಪಾಲುದಾರನಿಗೂ,ಇತರ ಪಾಲುದಾರರ ಸಮ್ಮತಿಯ ಮೇಲೆ ಸಂಸ್ಥೆಯಿಂದ ನಿವೃತ್ತನಾಗುವ ಹಕ್ಕಿದೆ.

೧೨.ಪ್ರತೀ ಪಾಲುದಾರನಿಗೂ, ತನ್ನ ಅನುಮತಿಯಿಲ್ಲದೆ ಹೊಸ ಪಾಲುದಾರನನ್ನು ಸೇರಿಸಿಕೊಳ್ಳುವುದನ್ನು ತಡೆಯುವ ಹಕ್ಕಿದೆ.

೧೩.ಪ್ರತೀ ಪಾಲುದಾರನಿಗೂ,ಸಂಸ್ಥೆಯ ಸ್ವತ್ತನ್ನು ಸಂಸ್ಥೆಯ ಸಾಮಾನ್ಯ ಉಪಯೋಗಕ್ಕಾಗಿ ಮಾತ್ರವೇ ಬಳಸುವ ಹಕ್ಕಿದೆ.

೧೪.ಹೊರ ಹೋಗುವ ಪಾಲುದಾರನಿಗೆ ಲಾಭವನ್ನು ಹಂಚಿಕೊಳ್ಳುವ ಹಕ್ಕಿದೆ ಅಥವಾ ಸಂಸ್ಥೆಯ ಆಸ್ತಿಯಲ್ಲಿನ ತನ್ನ ಪಾಲನ್ನು ಪಡೆಯುವವರೆಗೆ ಶೇಕಡ ಆರರಂತೆ ಬಡ್ಡಿ ಪಡೆಯುವ ಹಕ್ಕಿದೆ.

ಆ).ಪಾಲುದಾರರ ಕರ್ತವ್ಯಗಳು

೧.ಪ್ರತಿ ಪಾಲುದಾರನೂ ವ್ಯವಹಾರದ ನಡೆವಳಿಕೆಯಲ್ಲಿನ ತನ್ನ ಕರ್ತವ್ಯಗಳಲ್ಲಿ ಭಾಗವಹಿಸಬೇಕು.

೨..ಪ್ರತಿ ಪಾಲುದಾರನೂ ಸಂಸ್ಥೆಯ ವ್ಯವಹಾರವನ್ನು ಎಲ್ಲರ ಅನುಕೂಲಕ್ಕಾಗಿ ಕೈಗೊಳ್ಳಬೇಕು.

೩..ಪ್ರತಿ ಪಾಲುದಾರನೂ ,ಇತರ ಪಾಲುದಾರರೊಂದಿಗೆ ನಂಬಿಕೆಯಿಂದ ಮತ್ತು ನ್ಯಾಯಯುತವಾಗಿ ನಡೆದುಕೊಳ್ಳಬೇಕು.

೪..ಪ್ರತಿ ಪಾಲುದಾರನೂ ಒಪ್ಪಂದದಂತೆ ಸಂಸ್ಥೆಯ ನಷ್ಟಗಳನ್ನು ಹಂಚಿಕೊಳ್ಳಬೇಕು.

೫.ಯಾವುದೇ ಪಾಲುದಾರ ಸಂಸ್ಥೆಯ ವೆಚ್ಚದಲ್ಲಿ ತನಗೆ ಲಾಭ ಮಾಡಿಕೊಳ್ಳಬಾರದು.

೬..ಪ್ರತಿ ಪಾಲುದಾರನೂ,ನಿರ್ವಹಣೆಯಲ್ಲಿನ ತನ್ನ ವಂಚನೆಯಿಂದ ಅಥವಾ ಉದ್ದೇಶ ಪೂರ್ವಕವಾದ ಉದಾಸೀನತೆಯಿಂದ ಸಂಸ್ಥೆಗೆ ಉಂಟುಮಾಡಿದ ನಷ್ಟವನ್ನು ತುಂಬಿಕೊಡಬೇಕು.

೭.ಸಂಸ್ಥೆಯ ಸ್ವತ್ತನ್ನು ಮತ್ತು ಹೆಸರನ್ನು ಬಳಸಿ ಪಾಲುದಾರ ಗಳಿಸಿದ ಯಾವುದೇ ಲಾಭವನ್ನು ಸಂಸ್ಥೆಗೆ ಕೊಡಬೇಕು.

೮.ಪಾಲುದಾರ ತನ್ನ ಅಧಿಕಾರ ವ್ಯಾಪ್ತಿಯೊಳಗೇ ವರ್ತಿಸಬೇಕು.

೯.ಪ್ರತಿ ಪಾಲುದಾರನೂ ತನ್ನ ಸಾಮರ್ಥ್ಯವಿದ್ದಷ್ಟು ನಷ್ಟವಾಗದಂತೆ ಸಂಸ್ಥೆಯನ್ನು ಸಂರಕ್ಷಿಸಬೇಕು.

ಇ).ಪಾಲುದಾರರ ಹೊಣೆಗಾರಿಕೆಗಳು.

೧.ಪ್ರತಿ ಪಾಲುದಾರನೂ ,ಬಿಡಿಯಾಗಿ ಮತ್ತು ಒಟ್ಟಾಗಿ ಸಂಸ್ಥೆಯ ಸಾಲಗಳ ಬಗ್ಗೆ ಮಿತಿಯಿಲ್ಲದಷ್ಟು ಹೊಣೆಗಾರನಾಗಿರುತ್ತಾನೆ.ಒಂದು ವೇಳೆ ಸಂಸ್ಥೆಯ ಆಸ್ತಿಗಳು ಸಾಕಷ್ಟಿಲ್ಲದಿದ್ದರೆ,ಸಾಲಕೊಟ್ಟವರು ಯಾವುದೇ ಒಬ್ಬ ಅಥವಾ ಎಲ್ಲ ಪಾಲುದಾರರಿಂದ ಸಾಲಗಳನ್ನು ವಸೂಲು ಮಾಡಬಹುದು.

೨.ಹೊಸ ಪಾಲುದಾರ,ಅವನು ಪಾಲುದಾರಿಕೆಗೆ ಸೇರಿದ ನಂತರ ಸಂಸ್ಥೆ ಖರ್ಚು ಮಾಡಿದ ಸಾಲಗಳಿಗೆ ಮಾತ್ರ ಹೊಣೆಯಾಗುತ್ತಾನೆ.

೩.ಸತ್ತು ಹೋದ ಪಾಲುದಾರನ ಕಾನೂನುಬದ್ಧ ಉತ್ತರಾಧಿಕಾರಿಗಳು,ಅವನ ಸಾವಿಗೆ ಮೊದಲು ಸಂಸ್ಥೆ ಖರ್ಚು ಮಾಡಿದ ಸಾಲಗಳಿಗೆ ಮಾತ್ರ ಹೊಣೆಯಾಗುತ್ತಾರೆ.

೪.ಅಪ್ರಾಪ್ತ ಪಾಲುದಾರ ವೈಯಕ್ತಿಕವಾಗಿ ಸಂಸ್ಥೆಯ ಸಾಲಗಳಿಗೆ ಹೊಣೆಯಲ್ಲ.ಲಾಭದಲ್ಲಿನ ಅವನ ಪಾಲು ಮತ್ತು ಪಾಲುದಾರಿಕೆಯ ಆಸ್ತಿಗಳು ಮಾತ್ರ ಸಂಸ್ಥೆಯ ಸಾಲಗಳಿಗೆ ಹೊಣೆಯಾಗುತ್ತವೆ.

೫.ಪ್ರತಿ ಪಾಲುದಾರನೂ,ಉದಾಸೀನತೆಯಿಂದ ಅಥವಾ ಇತರ ಪಾಲುದಾರರು ನಷ್ಟ ಅನುಭವಿಸುವಂತೆ ಮಾಡಿದ್ದರೆ,ಅದನ್ನು ಸರಿಪಡಿಸುವ ಹೊಣೆ ಹೊಂದಿರುತ್ತಾನೆ.

ಪಾಲುದಾರಿಕೆ ಸಂಸ್ಥೆಯ

ಬದಲಾಯಿಸಿ
i).==ಅನುಕೂಲಗಳು==

೧.ಸುಲಭ ರಚನೆ. ೨.ಉತ್ತಮ ಬಂಡವಾಳ. ೩.ಹೆಚ್ಚಿನ ಪರಿಣತಿ. ೪.ವ್ಯವಹಾರದ ರಹಸ್ಯ. ೫.ವಿಶ್ವಾಸಾರ್ಹತೆ. ೬.ನಮ್ರತೆ. ೭.ನಷ್ಟದ ಹಂಚಿಕೆ. ೮.ಒಳ್ಳೆಯ ನಿರ್ಧಾರ. ೯.ಶ್ರಮ ಮತ್ತು ಪ್ರತಿಫಲ. ೧೦.ಪಾಲುದಾರರ ಹಿತಾಸಕ್ತಿಗಳ ಸಂರಕ್ಷಣೆ. ೧೧.ಸರಳ ವಿಸರ್ಜನೆ.

ii).==ಅನಾನುಕೂಲಗಳು==

೧.ಸಹಕಾರದ ಅಭಾವ. ೨.ಸೀಮಿತ ಬಂಡವಾಳ. ೩.ಸಾರ್ವಜನಿಕರ ನಂಬಿಕೆಯ ಅಭಾವ. ೪.ಅಪರಿಮಿತ ಹೊಣೆಗಾರಿಕೆ. ೫.ಹಿತಾಸಕ್ತಿಯನ್ನು ವರ್ಗಾವಣೆ ಮಾಡಲಾಗದು. ೬.ವಿಶ್ವಾಸದ ಅಭಾವ. ೭.ಸ್ಥಿರತೆಯ ಅಭಾವ. ೮.ವ್ಯವಸ್ಥೆಯ ಸೀಮಿತ ಸಂಪನ್ಮೂಲಗಳು.

ಈ ಮೇಲ್ಕಂಡವುಗಳು ಪಾಲುದಾರಿಕೆ ಸಂಸ್ಥೆಯ ಕೆಲವು ಅನುಕೂಲ ಮತ್ತು ಅನಾನುಕೂಲಗಳು...ಪಾಲುದಾರಿಕೆ ಸಂಸ್ಥೆಗಳ ಕೆಲವು ದೋಷಗಳಿಂದ ಹುಟ್ಟಿಕೊಂಡ ಮತ್ತೊಂದು ವ್ಯವಹಾರದ ರೂಪವೇ 'ಕೂಡು ಬಂಡವಾಳ ಸಂಸ್ಥೆಗಳು'.

(ಉಲ್ಲೇಖಗಳು /)

ಬದಲಾಯಿಸಿ

<reference /> http://www.charteredclub.com/partnership-firm/ ವ್ಯವಹಾರ ಅಧ್ಯಯನ-ಟಿ.ವಿ.ರಾಜು. http://admis.hp.nic.in/himpol/Citizen/LawLib/C142.htm http://www.quickbooks.in/r/legal/registration-procedure-for-partnership-firms-in-india/


 ಇದು ಮೂಲತ: ಪಾವನ ಅವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ತಯಾರಿಸಿದ ಲೇಖನವಾಗಿದೆ