ಪೀಠಿಕೆ ( Introduction )

ಬದಲಾಯಿಸಿ

ವ್ಯಕ್ತಿ ಸಮಾಜದ ಒಂದು ಪ್ರಮುಖ ಘಟಕ. ಆದರೆ ಅವನು ತನ್ನ ಎಲ್ಲಾ ಅಭಿಲಾಷೆಗಳನ್ನು ತನ್ನಷ್ಟಕ್ಕೆ ತಾನೇ ತೃಪ್ತಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಆದುದರಿಂದ ಅವನು ತನ್ನೊಡನೆ ಇರುವ ವ್ಯಕ್ತಿಗಳೊಂದಿಗೆ ಗುಂಪುಗಳಲ್ಲಿ ಸಂಘಟಿತನಾಗಿ ವೈಯಕ್ತಿಕವಾಗಿ ತನಗೆ ಸಾಧ್ಯವಾಗದ ಕಾರ್ಯಗಳನ್ನು ಸಾಧಿಸುತ್ತಾನೆ. ಉದಾಹರಣೆ: ಕುಟುಂಬ, ಶಾಲೆ, ವ್ಯವಹಾರ, ಸಂಸ್ಥೆ ಇತ್ಯಾದಿ. ವ್ಯಕ್ತಿಗಳು ಗುಂಪುಗಳಲ್ಲಿ ಸಂಘಟಿತರಾಗಿ ಸಾಮಾನ್ಯ ಗುರಿ ಸಾಧನೆಗೆ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ನಿರ್ವಹಣೆಯು ಅವಶ್ಯಕವಾಗುತ್ತದೆ. ನಿರ್ವಹಣೆಯು ಮಾನವ ಹಾಗೂ ಇತರೆ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಜನರನ್ನು ಉತ್ತೇಜಿಸುವ ಮೂಲಕ ಸಂಘಟನೆಯ ಉದ್ದೇಶಗಳನ್ನು ಸಾಧಿಸುವುದಾಗಿದೆ. ನಿರ್ವಹಣೆಯು ಎಲ್ಲಾ ಸಂಸ್ಥೆಗಳಿಗೂ ಅತ್ಯವಶ್ಯಕ. ಅವುಗಳು ದೊಡ್ದ ಅಥವಾ ಚಿಕ್ಕ ಲಾಭ ಸಂಪಾದಿಸುವ ಅಥವಾ ಸಂಪಾದಿಸದೇ ಇರುವ (NGO) ಹಾಗೂ ಉತ್ಪಾದನಾ ಮತ್ತು ಸೇವಾ ಚಟುವಟಿಕೆಯಲ್ಲಿ ತೊಡಗಿರುವ ಸಂಸ್ಥೆಗಳಾಗಿರಬಹುದು. ನಿರ್ವಹಣೆಯಲ್ಲಿ ಒಂದಾದ ನಂತರ ಮತ್ತೊಂದಂರಂತೆ ಪರಸ್ಪರ ಅವಲಂಬಿತ ನಿರ್ವಹಣಾ ಕಾರ್ಯಗಳಾಗಿರುತ್ತವೆ. ಈ ಎಲ್ಲಾ ಕಾರ್ಯಗಳನ್ನು ವ್ಯವಸ್ಥಾಪಕರು ನಿರ್ವಹಿಸುತ್ತಾರೆ. ಸಂಘಟನೆಯ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆಯಾದ ನಿರ್ವಹಣಾ ಕಾರ್ಯಗಳನ್ನು ವ್ಯವಸ್ಥಾಪಕರು ನಿರ್ವಹಿಸಬೇಕಾಗುತ್ತದೆ. ಕೈಗಾರಿಕಾ ಕ್ರಾಂತಿಯ ಪರಿಣಾಮದಿಂದ ಉಂಟಾದ ಉತ್ಪಾದನಾ ವಿಧಾನದ ಬದಲಾವಣೆ, ವ್ಯವಹಾರದ ಪ್ರಮಾಣದ ಹೆಚ್ಚಳ, ಸಾರಿಗೆ, ಸಂಪರ್ಕ ಹಾಗೂ ತಂತ್ರಜ್ಞಾನ, ಕ್ಷೇತ್ರದ ಬದಲಾವಣೆಗಳು ವಿಶೇಷವಾಗಿ ನಿರ್ವಹಣೆಯ ಪ್ರಾಮುಖ್ಯತೆಯನ್ನು ಹೆಚ್ಚಿಸಿರುತ್ತವೆ.

ನಿರ್ವಹಣೆಯ ಅರ್ಥ (Meaning of Management)

ಬದಲಾಯಿಸಿ

ನಿರ್ವಹಣೆ (Manage) ಎಂಬ ಕ್ರಿಯಾಪದವು ಇಟಲಿ ಭಾಷೆಯ 'Maneggiare (ಮ್ಯಾನೇಜರ್) ಎಂಬ ಪದದಿಂದ ಬಂದಿದೆ.'ಮ್ಯಾನೇಜರೇ' ಎಂದರೆ ಕೈಯಿಂದ ನಿರ್ವಹಿಸು, ವಿಶೇಷವಾಗಿ ಉಪಕರಣಗಳನ್ನು ನಿರ್ವಹಿಸುವುದು ಎಂದರ್ಥ. ಆಕ್ಸ್ಫರ್ಡ್ ನಿಘಂಟಿನ ಪ್ರಕಾರ ನಿರ್ವಹಣೆಯು ವ್ಯಕ್ತಿ ಮತ್ತು ಸಂಪನ್ಮೂಲಗಳೊಂದಿಗೆ ವ್ಯವಹರಿಸುವ ಹಾಗೂ ನಿಯಂತ್ರಿಸುವ ಪ್ರಕ್ರಿಯೆಯಾಗಿದೆ. ನಿರ್ವಹಣೆಯು ಸಂಸ್ಥೆಯ ನಿರ್ದಿಷ್ಟ ಉದ್ದೇಶಗಳನ್ನು ಸಾಧಿಸುವುದಕ್ಕೆ ಇತರ ವ್ಯಕ್ತಿಗಳಿಂದ ಅಥವಾ ಅವರ ಸಹಾಯದಿಂದ ಕಾರ್ಯ ಮಾಡಿಸಿಕೊಳ್ಳುವ ಕಲೆಯಾಗಿದೆ.

ನಿರ್ವಹಣೆಯ ವ್ಯಾಖ್ಯೆ (Definition of Management)

ಬದಲಾಯಿಸಿ

ಹೆರಾಲ್ಡ್ ಕೂಂಟ್ಜ್ ಮತ್ತು ಹೆಂಝ್ ವ್ಹೀರಿಚ್ ರವರ ಪ್ರಕಾರ "ನಿರ್ವಹಣೆಯು ನಿಗದಿಪಡಿಸಿದ ಗುರಿಗಳನ್ನು ದಕ್ಷತೆಯಿಂದ ಸಾಧಿಸಲು ವ್ಯಕ್ತಿಗಳನ್ನು ಗುಂಪುಗಳಲ್ಲಿ ಒಟ್ಟಾಗಿಸಿ ಕಾರ್ಯ ನಿರ್ವಹಿಸುವುದಕ್ಕೆ ಸೂಕ್ತ ಪರಿಸರವನ್ನು ರೂಪಿಸುವ ಪ್ರಕ್ರಿಯೆಯಾಗಿದೆ". ರಾಬರ್ಟ್ ಟ್ರೆವೆಲ್ಲಿ ಮತ್ತು ಎಂ. ಜೀನ್ ನ್ಯೂಪೋರ್ಟ್ ರವರ ಪ್ರಕಾರ "ನಿರ್ವಹಣೆಯು ಸಂಘಟನೆಯ ಚಟುವಟಿಕೆಗಳನ್ನು ಯೋಜಿಸಿ, ಸಂಘಟಿಸಿ, ಪ್ರೇರೇಪಿಸಿ ಮತ್ತು ನಿಯಂತ್ರಿಸುವ ಮೂಲಕ ಮಾನವ ಮತ್ತು ಇತರೆ ಸಂಪನ್ಮೂಲಗಳಲ್ಲಿ ಸಮನ್ವತೆಯಿಂದ ಸಂಘಟನೆಯ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಹಾಗೂ ದಕ್ಷತೆಯಿಂದ ಸಾಧಿಸುವ ಪ್ರಕ್ರಿಯೆಯಾಗಿದೆ".

ಮೇಲಿನ ವ್ಯಾಖ್ಯೆಗಳಿಂದ ಸ್ಪಷ್ಟವಾಗುವುದೇನೆಂದರೆ, ಸಂಸ್ಥೆಯ ಉದ್ದೇಶಗಳನ್ನು ಸಾಧಿಸಲು ಯೋಜಿಸುವ, ಧೋರಣೆಗಳನ್ನು ರೂಪಿಸುವ ಹಾಗೂ ಅಗತ್ಯವಾದ ಹಣಕಾಸು, ಸಾಮಾಗ್ರಿ, ಯಂತ್ರೋಪಕರಣ ಮುಂತಾದ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಎಲ್ಲಾ ಕಾರ್ಯಗಳನ್ನು ನಿರ್ವಹಣೆ ಒಳಗೊಂಡಿದೆ. ಇದರೊಂದಿಗೆ ನಿರ್ವಹಣೆಯು ಈ ಎಲ್ಲಾ ಸಂಪನ್ಮೂಲಗಳನ್ನು ಸಂಸ್ಥೆಯ ಉತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿ, ಅವುಗಳ ಬಳಕೆಯು ಸಾಮಾನ್ಯವಾಗಿ ಸಮಾಜಕ್ಕೆ ಮತ್ತು ವಿಶೇಷವಾಗಿ ಸಂಸ್ಥೆಯ ನೌಕರರುಗಳಿಗೆ ದೊರೆಯಬಹುದಾದ ಪ್ರಯೋಜನಗಳು ಲಭ್ಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುಲು ಮೇಲ್ವಿಚಾರಿಸುವ ಮತ್ತು ಪರಿಶೀಲಿಸುವ ಕಾರ್ಯಗಳನ್ನು ಸಹಾ ಒಳಗೊಂಡಿರುತ್ತದೆ.

ನಿರ್ವಹಣೆಯ ಲಕ್ಷಣಗಳು (features of management)

ಬದಲಾಯಿಸಿ
ನಿರ್ವಹಣೆಯು ಈ ಕೆಳಕಂಡ ಗುಣಲಕ್ಷಣಗಳನ್ನು ಹೊಂದಿದೆ.

1)'ನಿರ್ವಹಣೆಯು ಉದ್ದೇಶಗಳನ್ನು ಸಾಧಿಸುವ ಪ್ರಕ್ರಿಯೆಯಾಗಿದೆ (Management is goal oriented):ಪ್ರತಿಯೊಂದು ಸಂಘಟನೆಯನ್ನು ನಿರ್ದಿಷ್ಟ ಉದ್ದೇಶಗಳ ಸಾಧನೆಗಾಗಿ ಸ್ಥಾಪಿಸಲಾಗಿರುತ್ತದೆ. ಸಂಘಟನೆಯ ಸ್ವರೂಪದ ಆಧಾರದ ಮೇಲೆ, ವಿವಿಧ ಸಂಘಟನೆಗಳು ವಿವಿಧ ಉದ್ದೇಶಗಳನ್ನು ಹೊಂದಿರುತ್ತದೆ. ಈ ಉದ್ದೇಶಗಳು ಸರಳ ಮತ್ತು ಸ್ಪಷ್ಟವಾಗಿರಬೇಕು. ನಿರ್ವಹಣೆಯು ವಿವಿಧ ಜನರ ಪರಿಶ್ರಮವನ್ನು ಒಂದುಗೂಡಿಸುವ ಮೂಲಕ ಸಂಘಟನೆಯ ಉದ್ದೇಶಗಳನ್ನು ಸಾಧಿಸುವುದಾಗಿದೆ.

2)'ನಿರ್ವಹಣೆಯು ಸಾರ್ವತ್ರಿಕವಾಗಿದೆ (Management is all pervasive):ನಿರ್ವಹಣೆಯ ಚಟುವಟಿಕೆಗಳು ಕೇವಲ ವ್ಯವಹಾರ ಸಂಸ್ಥೆಗಳಿಗೆ ಮಾತ್ರವಲ್ಲದೆ ಸಾರ್ವತ್ರಿಕವಾಗಿ ಎಲ್ಲಾ ರೀತಿಯ ಸಂಘಟನೆಗಳಿಗೂ ಅನ್ವಯಿಸುತ್ತವೆ. ಈ ಸಂಘಟನೆಗಳು ಆರ್ಥಿಕ, ಸಾಮಾಜಿಕ, ದತ್ತಿ, ಧಾರ್ಮಿಕ ಅಥವಾ ರಾಜಕೀಯ ಸಂಘಟನೆಗಳಾಗಿರಬಹುದು. ಆದುದರಿಂದ ನಿರ್ವಹಣೆಯ ಅನ್ವಯಿಸುವಿಕೆಯನ್ನು ಎಲ್ಲಾ ಸಂಘಟನೆಗಳಲ್ಲಿ ಕಾಣಬಹುದು.

3)'ನಿರ್ವಹಣೆಯು ವಿವಿಧ ಆಯಾಮಗಳನ್ನು ಹೊಂದಿದೆ (Management is multi dimensional):ನಿರ್ವಹಣೆಯ ಪ್ರಕ್ರಿಯೆಯು ಸಂಕೀರ್ಣವಾಗಿದ್ದು, ಕೆಳಕಂಡ ಮೂರು ಆಯಾಮಗಳನ್ನು ಹೊಂದಿದೆ. a) ಕೆಲಸದ ನಿರ್ವಹಣೆ,b) ವ್ಯಕ್ತಿಗಳ ನಿರ್ವಹಣೆ c) ಕಾರ್ಯಚಟುವಟಿಕೆಗಳ ನಿರ್ವಹಣೆ.

  • ಕೆಲಸದ ನಿರ್ವಹಣೆ :ಪ್ರತಿಯೊಂದು ಸಂಘಟನೆಯನ್ನು ನಿರ್ದಿಷ್ಟ ಕೆಲಸಗಳನ್ನು ನಿರ್ವಹಿಸಲು ಸ್ಥಾಪಿಸಲಾಗಿರುತ್ತದೆ. ನಿರ್ವಹಣೆಯು ಈ ಕೆಲಸಗಳನ್ನು ಉದ್ದೇಶಗಳಾಗಿ ಪರಿವರ್ತಿಸಿ, ಅವುಗಳನ್ನು ಸಾಧಿಸಲು ಅವಕಾಶ ಕಲ್ಪಿಸುತ್ತದೆ. ನಿರ್ವಹಣೆಯು ಈ ಉದ್ದೇಶಗಳನ್ನು ಸಾಧಿಸುವ ಸಂದರ್ಭದಲ್ಲಿ ಎದುರಾಗಬಹುದಾದ ಅಡೆತಡೆಗಳನ್ನು ನಿವಾರಿಸಲು ತೀರ್ಮಾನವನ್ನು ಕೈಗೊಳ್ಳುವ, ಯೊಜನೆಗಳನ್ನು ತಯಾರಿಸುವ, ಅಂದಾಜು ಪತ್ರವನ್ನು ಸಿದ್ಧಪಡಿಸುವ, ಜವಾಬ್ದಾರಿಗಳನ್ನು ವಹಿಸುವ ಹಾಗೂ ಅಧಿಕಾರವನ್ನು ಪ್ರತ್ಯಾಯೋಜಿಸುವ ಕಾರ್ಯಗಳನ್ನು ಒಳಗೊಂಡಿದೆ.
  • ವ್ಯಕ್ತಿಗಳ ನಿರ್ವಹಣೆ :ನಿರ್ವಹಣೆಯು ವ್ಯಕ್ತಿಗಳಿಂದ ಮತ್ತು ವ್ಯಕ್ತಿಗಳ ಮೂಲಕ ನಿರ್ದಿಷ್ಟ ಕಾರ್ಯವನ್ನು ಸಾಧಿಸಿಕೊಳ್ಳುವುದಾಗಿದೆ. ಸಂಘಟನೆಯು ವಿವಿಧ ವ್ಯಕ್ತಿತ್ವ, ಅವಶ್ಯಕತೆ, ಕೆಲಸದ ವಿಧಾನ ಮತ್ತು ಹಿನ್ನಲೆಯನ್ನು ಹೊಂದಿರುವ ವ್ಯಕ್ತಿಗಳನ್ನು ಹೊಂದಿರುತ್ತದೆ.ಅವರೊಂದಿಗೆ ವ್ಯವಹರಿಸಿ ಮತ್ತು ಕಾರ್ಯವನ್ನು ನಿಯಂತ್ರಿಸುವುದು ವ್ಯವಸ್ಥಾಪಕನ ಮುಖ್ಯಕಾರ್ಯವಾಗಿರುತ್ತದೆ. ಆದುದರಿಂದ ವ್ಯವಸ್ಥಾಪಕನು ಅವರೆಲ್ಲರು ಒಟ್ಟಾಗಿ ಕೆಲಸಗಳನ್ನು ಸಂಘಟನೆಯ ದೃಷ್ಟಿಯಿಂದ ನಿರ್ವಹಿಸುವಂತೆ ಮಾಡುವುದಾಗಿದೆ. *ಕಾರ್ಯಚಟುವಟಿಕೆಗಳ ನಿರ್ವಹಣೆ: ಪ್ರತಿಯೊಂದು ಸಂಘಟನೆಯು ಸರಕು ಸೇವೆಗಳನ್ನು ಒದಗಿಸುವ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗುತ್ತದೆ.ನಿರ್ವಹಣೆಯು ಕಾರ್ಯಸಾಧಕ ಸಂಪನ್ಮೂಲಗಳನ್ನು (ವಸ್ತು ಮತ್ತು ತಂತ್ರಜ್ಞಾನ) ಪರಿವರ್ತಿಸಿ ಬಳಕೆದಾರರಿಗೆ ಸಿದ್ಧಪಡಿಸಿದ ಉತ್ಪನ್ನಗಳನ್ನು(ಸರಕು ಮತ್ತು ಸೇವೆ) ಒದಗಿಸುವುದು.

4)'ನಿರ್ವಹಣೆಯು ನಿರಂತರ ಪ್ರಕ್ರಿಯೆಯಾಗಿದೆ (Management is a continuous process): ನಿರ್ವಹಣೆಯು ಒಂದು ನಿರಂತರ ಪ್ರಕ್ರಿಯೆಯಾಗಿ ಯೋಜನೆಗಳನ್ನು ತಯಾರಿಸುವ, ಸಂಘಟಿಸುವ, ಸಿಬ್ಬಂದಿ ನೇಮಕಾತಿ ಮಾಡುವ ಹಾಗೂ ನಿಯಂತ್ರಣ ಮಾಡುವ ಕಾರ್ಯಗಳನ್ನು ಒಳಗೊಂಡಿದೆ.ಎಲ್ಲಾ ವ್ಯವಸ್ಥಾಪಕರು ಈ ಕಾರ್ಯಗಳನ್ನು ನಿರಂತರವಾಗಿ ನಿರ್ವಹಿಸಬೇಕಾಗುತ್ತದೆ. ಈ ನಿರ್ವಹಣಾ ಕಾರ್ಯಗಳು ಸಂಸ್ಥೆಯು ಅಸ್ತಿತ್ವದಲ್ಲಿರುವವರೆಗೂ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

5)'ನಿರ್ವಹಣೆಯು ಗುಂಪು ಚಟುವಟಿಕೆಯಾಗಿದೆ:ಪ್ರತಿಯೊಂದು ಸಂಘಟನೆಯು ವಿವಿಧ ಅಗತ್ಯಗಳನ್ನು ಹೊಂದಿದ ಹಲವಾರು ವ್ಯಕ್ತಿಗಳ ಗುಂಪಾಗಿದೆ.ಈ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ವಿವಿಧ ಉದ್ದೇಶಗಳಿಂದ ಸಂಘಟನೆಯನ್ನು ಪ್ರವೇಶಿಸುತ್ತಾನೆ. ಸಂಘಟನೆಯ ವ್ಯಕ್ತಿಯೂ ಇತರರೊಂದಿಗೆ ಸಂವಹನ ಮತ್ತು ಸಮನ್ವಯದಿಂದ ಸಂಘಟನೆಯ ಸಾಮಾನ್ಯ ಉದ್ದೇಶಗಳ ಸಾಧನೆಗೆ ಕೈಜೋಡಿಸುವುದಾಗಿದೆ. ಆದುದರಿಂದ ನಿರ್ವಹಣೆಯು ಒಂದು ಗುಂಪು ಚಟುವಟಿಕೆಯಾಗಿದೆ.

6)'ನಿರ್ವಹಣೆಯು ಚಲನಶೀಲ ಕಾರ್ಯವಾಗಿದೆ:ಪ್ರತಿಯೊಂದು ಸಂಘಟನೆಯು ಬದಲಾಗುತ್ತಿರುವ ಪರಿಸರದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಪರಿಸರ ಯಾವಾಗಲೂ ಬದಲಾಗುತ್ತಿರುವುದರಿಂದ ಅವಶ್ಯಕತೆಗಳಿಗೆ ಅನುಗುಣವಾಗಿ ನಿರ್ವಹಣೆಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು. ಆದುದರಿಂದ ನಿರ್ವಹಣೆಯು ಒಂದು ಚಲನಶೀಲ ಕಾರ್ಯವಾಗಿದೆ.

7)'ನಿರ್ವಹಣೆಯು ಅಗೋಚರ ಶಕ್ತಿಯಾಗಿದೆ: ನಿರ್ವಹಣೆಯು ಅದೃಶ್ಯವಾಗಿದ್ದು, ಅದರ ಇರುವಿಕೆಯನ್ನು ಸಂಘಟನೆಯ ಕಾರ್ಯದಲ್ಲಿ ಗಮನಿಸಬಹುದಾಗಿದೆ. ನಿರ್ವಹಣೆಯ ಪರಿಣಾಮಗಳನ್ನು ಉತ್ಪಾದನೆಯ ಗುರಿ ಸಾಧನೆ, ನೌಕರರ ಸಂತೃಪ್ತಿ ಮುಂತಾದವುಗಳಲ್ಲಿ ಕಾಣಬಹುದಾಗಿದೆ. ಆದುದರಿಂದ ನಿರ್ವಹಣೆಯು ಅಗೋಚರವಾಗಿದ್ದು ವ್ಯಕ್ತಿಗಳ ಒಟ್ಟು ಕಾರ್ಯದ ಮೇಲೆ ತನ್ನ ಪರಿಣಾಮವನ್ನು ಪ್ರತಿಫಲಿಸುತ್ತವೆ.

ನಿರ್ವಹಣೆಯ ಉದ್ದೇಶಗಳು

ಬದಲಾಯಿಸಿ

ಪ್ರತಿಯೊಂದು ಸಂಘಟನೆಯನ್ನು ನಿರ್ದಿಷ್ಟ ಉದ್ದೇಶಗಳ ಸಾಧನೆಗಾಗಿ ಸ್ಥಾಪಿಸಲಾಗುತ್ತದೆ.ವಿವಿಧ ಸಂಘಟನೆಗಳೂ ವಿವಿಧ ಉದ್ದೇಶಗಳನ್ನು ಹೊಂದಿರುತ್ತವೆ. ನಿರ್ವಹಣೆಯು ಆ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಹಾಗೂ ದಕ್ಷತೆಯಿಂದ ಸಾಧಿಸಬೇಕು. ಈ ಉದ್ದೇಶಗಳನ್ನು ಸಂಘಟನಾತ್ಮಕ ಉದ್ದೇಶಗಳು, ಸಾಮಾಜಿಕ ಉದ್ದೇಶಗಳು,ಹಾಗೂ ವೈಯಕ್ತಿಕ ಉದ್ದೇಶಗಳೆಂದು ವಿಂಗಡಿಸಬಹುದು.

1)ಸಂಘಟನಾತ್ಮಕ ಉದ್ದೇಶಗಳು:ಪ್ರತಿಯೊಂದು ಸಂಘಟನೆಯ ಮುಖ್ಯ ಧ್ಯೇಯವು ಆರ್ಥಿಕ ಉದ್ದೇಶಗಳನ್ನು ಈಡೇರಿಸುವುದಾಗಿದೆ.ಇದು ಮಾನವ ಸಂಪನ್ಮೂಲ ಮತ್ತು ಭೌತಿಕ ಸಂಪನ್ಮೂಲಗಳನ್ನು ಉಪಯೋಗಿಸುವುದರ ಮೂಲಕ ಅಧಿಕ ಪ್ರಮಾಣದ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿರುತ್ತದೆ. ನಿರ್ವಹಣೆಯು ಸಂಘಟನೆಯ ಶೇರುದಾರ, ಸಿಬ್ಬಂದಿ, ವರ್ಗ, ಬಳಕೆದಾರ ಹಾಗೂ ಸರ್ಕಾರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಉದ್ದೇಶಗಳನ್ನು ಸಾಧಿಸುವುದಾಗಿರುತ್ತದೆ. ಆರ್ಥಿಕ ಉದ್ದೇಶಗಳು ಈ ಕೆಳಗಿನಂತಿವೆ: a)ಅಸ್ತಿತ್ವ: ಪ್ರತಿಯೊಂದು ಸಂಘಟನೆಯು ಮಾರುಕಟ್ಟೆಯಲ್ಲಿ ಬಹುಕಾಲ ಅಸ್ತಿತ್ವದಲ್ಲಿರಬೇಕೆಂಬ ಮೂಲ ಉದ್ದೇಶವನ್ನು ಹೊಂದಿರುತ್ತದೆ. ನಿರ್ವಹಣೆಯು ಸಂಘಟನೆಯ ವೆಚ್ಚಗಳಿಗಿಂತ ಹೆಚ್ಚಿನ ಆದಾಯವನ್ನು ಗಳಿಸುವುದರ ಮೂಲಕ ತನ್ನ ಅಸ್ತಿತ್ವವನ್ನು ಮಾರುಕಟ್ಟೆಯಲ್ಲಿ ಉಳಿಸಿಕೊಳ್ಳಲು ಶ್ರಮಿಸುತ್ತದೆ. b)ಲಾಭ: ವ್ಯವಹಾರ ಸಂಘಟನೆಯ ಉದ್ದೇಶ ಕೇವಲ ಅಸ್ತಿತ್ವದಲ್ಲಿರುವುದಲ್ಲ. ಸಂಘಟನೆಯ ವೆಚ್ಚಗಳನ್ನು ಭರಿಸಿಕೊಂಡು ಅಧಿಕ ಲಾಭ ಸಂಪಾದಿಸುವ ಮೂಲಕ ಯಶಸ್ವಿಯಾಗಿ ನಿರಂತರ ಅಸ್ತಿತ್ವ ಹೊಂದಲು ಸಾಧ್ಯವಾಗುತ್ತದೆ. ಆದುದರಿಂದ ನಿರ್ವಹಣೆಯು ಸಂಘಟನೆಯ ವೆಚ್ಚ ಮತ್ತು ನಷ್ಟಭಯವನ್ನು ಎದುರಿಸಲು ಸಾಧ್ಯವಾಗುವ ಪ್ರಮಾಣದ ಲಾಭವನ್ನು ಸಂಪಾದಿಸುವುದನ್ನು ಖಚಿತಪಡಿಸಿಕೊಳ್ಳಬೇಕು. c)ಬೆಳವಣಿಗೆ: ಸಂಘಟನೆಯು ದೀರ್ಘ ಕಾಲ ಅಸ್ತಿತ್ವದಲ್ಲಿರಲು ಅದರ ಬೆಳವಣಿಗೆ ಮತ್ತು ಅಭಿವೃದ್ದಿಗೆ ಪೂರಕವಾದ ಎಲ್ಲಾ ಸದಾವಕಾಶಗಳನ್ನು ನಿರ್ವಹಣೆಯು ಸೂಕ್ಷ್ಮವಾಗಿ ಅವಲೋಕಿಸಿ ಉಪಯೋಗಿಸಿಕೊಳ್ಳಬೇಕು. ಸಂಘಟನೆಯ ಬೆಳವಣಿಗೆಯನ್ನು ಹೆಚ್ಚಳ, ವಿವಿಧ ಬಗೆಯ ವಸ್ತುಗಳ ಉತ್ಪಾದನೆ ಹಾಗೂ ಸಿಬ್ಬಂದಿಯ ಸಂಖ್ಯೆಯಲ್ಲಿ ಹೆಚ್ಚಳ ಮುಂತಾದವುಗಳಲ್ಲಿ ಕಾಣಬಹುದಾಗಿದೆ.

2)ಸಾಮಾಜಿಕ ಉದ್ದೇಶಗಳು:ಪ್ರತಿಯೊಂದು ಸಂಘಟನೆಯು ಸಮಾಜದ ಒಂದು ಭಾಗವಾಗಿರುವುದರಿಂದ, ಅವುಗಳು ಸಮಾಜಕ್ಕೆ ಹಲವು ರೀತಿಯಲ್ಲಿ ಹೊಣೆಯಾಗಿರುತ್ತವೆ. ಆ ಸಂಘಟನೆಗಳು ವ್ಯಾಪಾರ ಅಥವಾ ವ್ಯಾಪಾರೇತರ ಸಂಸ್ಥೆಯಾಗಿರಬಹುದು. ಕೆಳಕಂಡವು ಸಾಮಾಜಿಕ ಹೊಣೆಯಾಗಿರುತ್ತವೆ. a) ಪರಿಸರ ಸ್ನೇಹಿ ಉತ್ಪಾದನಾ ವಿಧಾನಗಳನ್ನು ಅನುಸರಿಸಬೇಕಾಗುವುದು. b)ಉದ್ಯೋಗವಕಾಶಗಳನ್ನು ಸೃಷ್ಟಿಸುವುದು. c)ಸಮಾಜಕ್ಕೆ ಅಗತ್ಯವಾದ ಶಾಲಾ-ಕಾಲೇಜುಗಳನ್ನು ಸ್ಥಾಪಿಸುವುದು ಹಾಗೂ ಸಿಬ್ಬಂದಿವರ್ಗದವರ ಮಕ್ಕಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವುದು. d)ಸಮಾಜದ ಘನ ಉದ್ದೇಶಗಳಿಗೆ ಹಣಕಾಸು ನೆರವು ನೀಡುವುದು. e)ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಸಮಾಜಸೇವಾ ಕಾರ್ಯಗಳಲ್ಲಿ ಭಾಗವಹಿಸುವುದು.

3)ವೈಯಕ್ತಿಕ ಉದ್ದೇಶಗಳು: ವೈಯಕ್ತಿಕ ಉದ್ದೇಶಗಳು ಸಂಘಟನೆಯ ಸಿಬ್ಬಂದಿವರ್ಗದವರಿಗೆ ಸಂಬಂದಿಸಿರುತ್ತವೆ. ಸಂಘಟನೆಯಲ್ಲಿರುವ ವ್ಯಕ್ತಿಗಳು ವಿವಿಧ ವ್ಯಕ್ತಿತ್ವ, ಹಿನ್ನೆಲೆ ಮತ್ತು ಅನುಭವವನ್ನು ಹೊಂದಿ ಸಂಘಟನೆಯ ಭಾಗವಾಗಿ ಕಾರ್ಯ ನಿರ್ವಹಿಸುತ್ತಾರೆ. ಸಿಬ್ಬಂದಿ ವರ್ಗದವರ ವಿವಿಧ ಅಗತ್ಯತೆಗಳನ್ನು ತೃಪ್ತಿಪಡಿಸುವುದರ ಮೂಲಕ, ಅವರ ಸಂಪೂರ್ಣ ಸಹಕಾರ ಪಡೆದು ಸಂಸ್ಥೆಯ ಉದ್ದೇಶಗಳನ್ನು ಸಾಧಿಸುವುದಾಗಿದೆ. ಅವುಗಳಾವುವೆಂದರೆ a)ಹಣಕಾಸಿನ ಅಗತ್ಯತೆಗಳು, ಸಂಬಳ ಉತ್ತೇಜನ ಹಾಗೂ ಇತರೆ ಪ್ರಯೋಜನಗಳು. b)ಸಾಮಾಜಿಕ ಅಗತ್ಯತೆಗಳು, ಸಂಘಟನೆಯಲ್ಲಿ ಮಾನ್ಯತೆ. c)ಉನ್ನತ ಹಂತದ ಅವಶ್ಯಕತೆಗಳು, ವೈಯಕ್ತಿಕ ಬೆಳವಣಿಗೆಗಳು ಮತ್ತು ಅಭಿವೃದ್ದಿ.

ನಿರ್ವಹಣೆಯ ಪ್ರಾಮುಖ್ಯತೆ

ಬದಲಾಯಿಸಿ

ನಿರ್ವಹಣೆಯು ಸಾರ್ವತ್ರಿಕ ಕಾರ್ಯಚಟುವಟಿಕೆಯಾಗಿ ಸಂಘಟನೆಯ ಅವಿಭಾಜ್ಯ ಅಂಗವಾಗಿದೆ.ನಿರ್ವಹಣೆಯು ಕೆಳಗಿನ ಕಾರಣಗಳಿಂದ ಎಲ್ಲಾ ರೀತಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. 1)ನಿರ್ವಹಣೆಯು ಗುಂಪುಗಳ ಉದ್ದೇಶಗಳನ್ನು ಸಾಧಿಸಲು ಸಹಾಯಕವಾಗುತ್ತದೆ: ನಿರ್ವಹಣೆಯು ಗುಂಪುಗಳ ಉದ್ದೇಶಗಳನ್ನು ಸಾಧಿಸಲು ಸಹಾಯಕವಾಗುತ್ತದೆ. ನಿರ್ವಹಣೆಯು ವೈಯಕ್ತಿಕ ಪರಿಶ್ರಮವನ್ನು ಒಗ್ಗೂಡಿಸುವುದರ ಮೂಲಕ ಸಂಘಟನೆಯ ಉದ್ದೇಶಗಳನ್ನು ಸಾಧಿಸಲು ಸಹಾಯ ಮಾಡುತ್ತವೆ.

2)ನಿರ್ವಹಣೆಯು ದಕ್ಷತೆಯನ್ನು ಹೆಚ್ಚಿಸುತ್ತದೆ: ಪ್ರತಿಯೊಬ್ಬ ವ್ಯವಸ್ಥಾಪಕನೂ ಸಂಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಕಡಿಮೆ ವೆಚ್ಚದಲ್ಲಿ, ಪ್ರಮಾಣದಲ್ಲಿ ಉತ್ಪಾದಿಸುವ ಗುರಿಯನ್ನು ಹೊಂದಿರುತ್ತಾನೆ. ಇದನ್ನು ಉತ್ತಮ ಯೋಜನೆಗಳನ್ನು ರೂಪಿಸುವ, ಸಂಘಟಿಸುವ, ಸಿಬ್ಬಂದಿ ನೇಮಕಾತಿ ಮಾಡುವ, ನಿರ್ದೇಶಿಸುವ ಹಾಗೂ ನಿಯಂತ್ರಿಸುವ ಮೂಲಕ ಸಾಧಿಸಬಹುದಾಗಿದೆ.

3)ನಿರ್ವಹಣೆಯು ಚಲನಶೀಲ ಸಂಘಟನೆಯನ್ನು ಸೃಷ್ಟಿಸುತ್ತದೆ: ಪ್ರತಿಯೊಂದು ಸಂಘಟನೆಯು ನಿರಂತರವಾಗಿ ಬದಲಾಗುತ್ತಿರುವ ಪರಿಸರದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸಾಮಾನ್ಯವಾಗಿ ಸಂಘಟನೆಯಲ್ಲಿರುವ ವ್ಯಕ್ತಿಗಳು ಬದಲಾವಣೆಯನ್ನು ವಿರೋಧಿಸುತ್ತಾರೆ. ಒಂದು ಪರಿಣಾಮಕಾರಿ ನಿರ್ವಹಣೆಯು ಸ್ಪರ್ಧಾತ್ಮಕ ಕಾರ್ಯ ನಿರ್ವಹಿಸುವ ದೃಷ್ಟಿಯಿಂದ ಸಿಬ್ಬಂದಿವರ್ಗವನ್ನು ಬದಲಾವಣೆಗೆ ಹೊಂದಿಕೊಳ್ಳುವಂತೆ ಮಾಡುತ್ತದೆ.ಆ ಮೂಲಕ ಸಂಘಟನೆಯ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬಹುದು. ಈ ಕಾರ್ಯಗಳು ಸಂಘಟನೆಯ ನಿರ್ವಹಣೆಗೆ ಚಲನಶೀಲತೆಯನ್ನು ಒದಗಿಸುತ್ತದೆ.

4)ನಿರ್ವಹಣೆಯು ವೈಯಕ್ತಿಕ ಉದ್ದೇಶಗಳನ್ನು ಸಾಧಿಸಲು ಸಹಾಯ ಮಾಡುತ್ತವೆ:ನಿರ್ವಹಣೆಯು ಸಂಘಟನೆಯಲ್ಲಿರುವ ವ್ಯಕ್ತಿಗಳನ್ನು ಉತ್ತೇಜಿಸುವ ಮೂಲಕ ವೈಯಕ್ತಿಕ ಗುರಿಗಳನ್ನು ಸಾಧಿಸಲು ಸಹಾಯ ಮಾಡಬೇಕು. ನಿರ್ವಹಣೆಯು ಸಿಬ್ಬಂದಿವರ್ಗದಲ್ಲಿ ಸಹಕಾರ, ಬದ್ದತೆ, ತಂಡಸ್ಫೂರ್ತಿಯನ್ನು ಹೆಚ್ಚಿಸುತ್ತದೆ.

5)ನಿರ್ವಹಣೆಯು ಸಮಾಜದ ಅಭಿವೃದ್ದಿಗೆ ಸಹಕಾರಿಯಾಗಿದೆ: ಸಂಘಟನೆಯ ಅಭಿವೃದ್ದಿಗೆ ಸಮಾಜದ ವಿವಿಧ ವರ್ಗಗಳು ಕಾರಣವಾಗಿರುವುದರಿಂದ ನಿರ್ವಹಣೆಯು ಅವರ ಹಿತಾಸಕ್ತಿಗಳನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊಂದಿದೆ. ಒಂದು ಪರಿಣಾಮಕಾರಿ ನಿರ್ವಹಣೆಯು ಕಾರ್ಮಿಕರ ,ಹೂಡಿಕೆದಾರರ , ಗ್ರಾಹಕರ, ಸಾರ್ವಜನಿಕರ ಬಗ್ಗೆ ಇರುವ ಬದ್ದತೆಯನ್ನು ಒಪ್ಪಿಕೊಳ್ಳುವುದರ ಮೂಲಕ ಸಮಾಜದ ಬೆಳವಣಿಗೆ ಮತ್ತು ಅಭಿವೃದ್ದಿಗೆ ಸಹಕರಿಸುತ್ತದೆ. ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ಪೊರೈಸುವ, ಉದ್ಯೋಗವಕಾಶಗಳನ್ನು ಸೃಷ್ಟಿಸುವ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವುದರ ಮೂಲಕ ಸಮಾಜದ ಯೋಗಕ್ಷೇಮವನ್ನು ರಕ್ಷಿಸುತ್ತಾ, ಬೆಳವಣಿಗೆ ಮತ್ತು ಅಭಿವೃದ್ದಿಯ ಮಾರ್ಗವನ್ನು ನಿರ್ವಹಣೆಯು ಅನುಸರಿಸುತ್ತದೆ.

ನಿರ್ವಹಣೆಯು ಕಲೆ, ವಿಜ್ಞಾನ ಹಾಗೂ ವೃತ್ತಿಯಾಗಿ

ಬದಲಾಯಿಸಿ

ನಿರ್ವಹಣೆಯು ನಾಗರೀಕತೆಯಷ್ಟೇ ಪುರಾತನವಾದದು. ಇದು ಕಾಲಕ್ರಮೇಣ ಚಲನಾತ್ಮಕ ವಿಷಯವಾಗಿ ಬೆಳೆದು ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಂಡಿದೆ. ನಿರ್ವಹಣೆಯು ಕಲೆಯಾಗಿ:ನಿರ್ವಹಣೆಯು ಒಂದು ಕಲೆಯಾಗಿದ್ದು ಸಾಮಾನ್ಯ ಸೈದ್ಧಾಂತಿಕ ತತ್ವಗಳನ್ನು ವೈಯಕ್ತಿಕವಾಗಿ ಆಚರಿಸುವ ಮೂಲಕ ಸಾಧ್ಯವಾದ ಉತ್ತಮ ಫಲಿತಾಂಶ ಸಾಧಿಸುವುದಾಗಿದೆ. ಕಲೆಯು ಕೆಳಕಂಡ ಲಕ್ಷಣಗಳನ್ನು ಹೊಂದಿರುತ್ತದೆ. 1)ಪ್ರಾಯೋಗಿಕ ಜ್ಞಾನ: ಪ್ರತಿಯೊಂದು ಕಲೆಗೂ ಪ್ರಾಯೋಗಿಕ ಜ್ಞಾನ ಅವಶ್ಯಕ. ಅದು ಸಿದ್ಧಾಂತಗಳನ್ನು ಕಲಿಯುವುದರಿಂದ ಸಾಧ್ಯವಾಗುವುದಿಲ್ಲ. ಸೈದ್ಧಾಂತಿಕ ತತ್ವಗಳನ್ನು ಪ್ರಾಯೋಗಿಕವಾಗಿ ಆಚರಣೆಗೆ ತರುವುದು ಅತ್ಯವಶ್ಯಕ. ವ್ಯವಸ್ಥಾಪಕನು ಅನೇಕ ಸೈದ್ಧಾಂತಿಕ ತತ್ವಗಳನ್ನು ವಾಸ್ತವಿಕವಾಗಿ ಆಚರಿಸುವ ಜ್ಞಾನ ಕಾರ್ಯ ನಿರ್ವಹಿಸಬೇಕು.

2)ವೈಯುಕ್ತಿಕ ಕೌಶಲ್ಯ:ಎಲ್ಲಾ ಕಲಾವಿದರಿಗೂ ಸೈಧ್ಹಾಂತಿಕ ಜ್ಞಾನ ಒಂದೇ ರೀತಿಯಾಗಿದ್ದರೂ ಸಹಾ ಪ್ರತಿಯೊಬ್ಬರೂ ತಮ್ಮದೇ ಆದ ಶೈಲಿಯಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತಾರೆ. ಆದುದರಿಂದ ಯಶಸ್ಸಿನ ಪ್ರಮಾಣ ಮತ್ತು ಗುಣಮಟ್ಟ ಕೆಲಸ ಕಾರ್ಯಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ವ್ಯತ್ಯಾಸವಾಗುತ್ತದೆ.\

3)ವೈಯುಕ್ತಿಕವಾಗಿ ಅನ್ವಯಿಸುವುದು:ಪ್ರತಿಯೊಬ್ಬ ವ್ಯವಸ್ಥಾಪಕನು ತಾನು ಹೊಂದಿರುವ ಜ್ಞಾನ,ಅನುಭವ,ಮತ್ತು ವ್ಯಕ್ತಿತ್ವಗಳ ಆಧಾರದ ಮೇಲೆ ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತಾನೆ.

4)ಸೃಜನಶೀಲತೆ:ಪ್ರತಿಯೊಬ್ಬ ಕಲಾವಿದನಿಗೆ ಇರುವ ಸೃಜನಶೀಲ ಗುಣವನ್ನು ವ್ಯವಸ್ಥಾಪಕನು ಹೊಂದಿರಕಬೇಕು.ಇದು ಅವನ ಬುದ್ದಿವಂತಿಕೆ ಮತ್ತು ಕಲ್ಪನೆಯ ಸಮ್ಮಿಲನವಾಗಿದೆ.ಅವನು ಈಗಾಗಲೇ ಅಸ್ತಿತ್ವದಲ್ಲಿರುವ ಹೊಸ ಉತ್ಪನ್ನಗಳಗನ್ನು ಉತ್ಪಾದಿಸುವ ಗುರಿ ಹೊಂದಿರಬೇಕು.ಆದುದರಿಂದ ನಿರ್ವಹಣೆಯು ಇತರೆ ಕಲೆಗಳಂತೆ ಸೃಜನಶೀಲತೆಯನ್ನು ಹೊಂದಿದೆ.

5)ಅಭ್ಯಾಸದ ಮೂಲಕ ಪರಿಪೂರ್ಣತೆ:ನಿರಂತರ ಅಭ್ಯಾಸವು ವ್ಯಕ್ತಿತ್ವನ್ನು ಪರಿಪೂರ್ಣಗೊಳಿಸುತ್ತದೆ.ಪ್ರತಿಯೊಬ್ಬ ಕಲಾವಿದನು ಅಭ್ಯಾಸದಿಂದ ಪರಿಪೂರ್ಣತೆಯನ್ನು ಹೂಂದುತ್ತಾನೆ.ಅದೇ ರೀತಿ ಒಬ್ಬ ನಿರ್ವಾಹಕ ಪ್ರಾರಂಭದಲ್ಲಿ ತಪ್ಪು ಒಪ್ಪುಗಳ ಮೂಲಕ ಕಲಿಯುತ್ತಾನೆ.ಕ್ರಮೇಣ ಅವನು ನಿರ್ವಹಣೆಯ ತತ್ವಗಳನ್ನು ತನ್ನ ಕೆಲಸದ್ದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಪರಿಪೂರ್ಣತೆಯನ್ನು ಹೊಂದುತ್ತಾನೆ.

6)ಗುರಿ ಪ್ರಧಾನ:ಪ್ರತಿಯೊಂದು ಕಲೆಯೂ ಗುರಿಸಾಧನೆಯ ಉದ್ದೇಷವನ್ನು ಹೊಂದಿರುತ್ತದೆ.ಅದೇ ರೀತಿಯ ನಿರ್ವಹಣೆಯು ಪೂರ್ವನಿರ್ಧಾರಿತ ಗುರಿಗಳನ್ನು ಸಾಧಿಸಲು ನಿರ್ದೇಶನ ನೀಡುತ್ತದೆ.

ಆದುದರಿಂದ ನಿರ್ವಹಣೆಯು ಒಂದು ಕಲೆಯಾಗಿದೆ.

ನಿರ್ವಹಣೆಯು ವಿಜ್ಞಾನವಾಗಿ

ಬದಲಾಯಿಸಿ

ವಿಜ್ಞಾನವು ಕ್ರಮಬದ್ದವಾದ ಜ್ಞಾನದೊಂದಿಗೆ ಒಂದು ನಿರ್ದಿಷ್ಠ ವಿಷಯವನ್ನು ಅಭ್ಯಾಸಿಸುವುದಾಗಿರುತ್ತದೆ. ವಿಜ್ಞಾನದಲ್ಲಿ ಒಂದು ಸಿದ್ದಾಂತವನ್ನು ವಿಶ್ಲೇಷಿಸುವಾಗ ಎಲ್ಲಾ ಸಾಮಾನ್ಯ ಮಾಹಿತಿಗಳನ್ನು ವಿವರಿಸುತ್ತದೆ. ವಿಜ್ಞಾನವು ಕಾರಣ ಮತ್ತು ಪರಿಣಾಮಗಳ ಸಂಬಂಧವನ್ನು ಕಲ್ಪಿಸಿ ಅವುಗಳ ಸಂಬಂಧವನ್ನು ನಿರ್ಧರಿಸುವ ತತ್ವಗಳನ್ನು ತಿಳಿಸುತ್ತದೆ. ಈ ತತ್ವಗಳನ್ನು ವೈಜ್ಞಾನಿಕ ವಿಧಾನದಲ್ಲಿ ಅವಲೋಕಿಸಿ ಮತ್ತು ಪರೀಕ್ಷೆಯ ಮೂಲಕ ಪರಿಶೀಲಿಸಿ ಅಭಿವೃದ್ಧಿಪಡಿಸಲಾಗುತ್ತದೆ.

ವಿಜ್ಞಾನದ ಮೂಲ ಲಕ್ಷಣಗಳು ಕೆಳಗಿನಂತಿವೆ.

1)ಸಾರ್ವತ್ರಿಕವಾಗಿ ಒಪ್ಪಿದ ತತ್ವಗಳು: ವಿಜ್ಞಾನದ ತತ್ವಗಳು ಒಂದು ನಿರ್ದಿಷ್ಟ ವಿಷಯವನ್ನು ವಿಶ್ಲೇಷಿಸುವಾಗ ನೈಜ ಸತ್ಯವನ್ನು ಸೂಚಿಸುತ್ತದೆ. ಈ ತತ್ವಗಳನ್ನು ಎಲ್ಲ ಸಂಧರ್ಭಗಳಲ್ಲಿ, ಎಲ್ಲಾ ಸಮಯದಲ್ಲಿ, ಮತ್ತು ಎಲ್ಲಾ ಸ್ಥಳಗಳಲ್ಲೂ ಪಾಲಿಸಬಹುದು. ಅದೇ ರೀತಿ ನಿರ್ವಹಣೆಯ ತತ್ವಗಳನ್ನು ಸಾರ್ವತ್ರಿಕವಾಗಿ ಎಲ್ಲಾ ಸಂದರ್ಭಗಳಲ್ಲೂ ಅನ್ವಯಿಸಬಹುದು. 2) ಪ್ರಾಯೋಗಿಕತೆಯನ್ನು ಆಧರಿಸದ ತತ್ವಗಳು: ವೈಜ್ಞಾನಿಕ ತತ್ವಗಳು ಯುಕ್ತ ಸಂದರ್ಭದಲ್ಲಿ ಅವಲೋಕಿಸಿ ಪ್ರಾಯೋಗಿಕತೆಯಿಂದ ರಚಿಸಲ್ಪಟ್ಟಿದೆ. ನಿರ್ವಹಣಾ ತತ್ವಗಳು ಹಲವಾರು ನಿರ್ವಾಹಕರುಗಳ ಪ್ರಯೋಗ ಮತ್ತು ಪ್ರಾಯೋಗಿಕ ಅನುಭವದ ಆಧಾರದ ಮೇಲೆ ರಚಿಸಲ್ಪಟ್ಟಿದೆ. 3) ಕಾರಣ ಮತ್ತು ಪರಿಣಾಮಗಳ ಸಂಬಂಧ: ವಿಜ್ಞಾನದ ತತ್ವಗಳು ಅನೇಕ ಸಂಗತಿಗಳು ಹೊಂದಿದ ಕಾರಣ ಮತ್ತು ಪರಿಣಾಮದ ಸಂಬಂಧವನ್ನು ತಿಳಿಸುತ್ತದೆ. ನಿರ್ವಹಣೆಯೂ ಸಹಾ ಕಾರಣ ಮತ್ತು ಪರಿಣಾಮಗಳ ಸಂಬಂಧವನ್ನು ಆಧರಿಸಿ ವಿವಿಧ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಂಘಟನೆಯ ಕಾರ್ಯ ಚಟುವಟಿಕೆಗಳನ್ನು ನಿಭಾಯಿಸುತ್ತದೆ.

ನಿರ್ವಹಣೆಯು ವ್ಯವಸ್ಥಿತವಾದ ಜ್ಞಾನವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಇದು ಮೂಲ ವಿಜ್ಞಾನ ವಿಷಯಗಳಾದ ಜೀವಶಾಸ್ತ್ರ, ಭೌತಶಾಸ್ತ್ರ, ಮತ್ತು ರಸಾಯನಶಾಸ್ತ್ರ ಇತ್ಯಾದಿಗಳಂತಲ್ಲ. ಏಕೆಂದರೆ ನಿರ್ವಹಣಾ ವಿಜ್ಞಾನ ಮಾನವರೊಂದಿಗೆ ವ್ಯವಹರಿಸುವುದಾಗಿರುತ್ತದೆ. ಮಾನವನ ವರ್ತನೆಗಳಲ್ಲಾಗುವ ಬದಲಾವಣೆಗಳನ್ನು ಯೋಚಿಸುವುದು ಕಷ್ಟಸಾಧ್ಯ. ಆದುದರಿಂದ ನಿರ್ವಹಣೆಯು ಒಂದು ಸಾಮಾಜಿಕ ವಿಜ್ಞಾನವಾಗಿದೆ.

ನಿರ್ವಹಣೆಯು ವಿಜ್ಞಾನ ಮತ್ತು ಕಲೆಯು ಆಗಿ

ಬದಲಾಯಿಸಿ

ನಿರ್ವಹಣೆಯು ವಿಜ್ಞಾನ ಮತ್ತು ಕಲೆಯ ಲಕ್ಷಣಗಳನ್ನು ಹೊಂದಿದೆ.ನಿರ್ವಹಣೆಯನ್ನು ಆಚರಿಸುವುದು ಒಂದು ಕಲೆಯಾಗಿದೆ.ವ್ಯವಸ್ಥಾಪಕರು ಕಾರ್ಯ ನಿರ್ವಹಿಸುವ ಸಂಧರ್ಭದಲ್ಲಿ ತತ್ವಗಳನ್ನಾಧರಿಸಿ ಕಾರ್ಯನಿರ್ವಹಿಸುವುದರಿಂದ ನಿರ್ವಹಣೆಯು ವಿಜ್ಞಾನವಾಗಿದೆ.ಇಂತಹ ತತ್ವಗಳು ನಿರ್ವಹಣೆಯನ್ನು ವಿಜ್ಞಾನವಾಗಿ ಪರಿಗಣಿಸಿದೆ.ಆದುದರಿಂದ ನಿರ್ವಹಣೆಯು ಕಲೆ ಮತ್ತು ವಿಜ್ಞಾನವಾಗಿ ಪರಸ್ಪರ ಭಿನ್ನವಾಗಿರದೆ ಒಂದಕ್ಕೊಂದು ಪೂರಕವಾಗಿದೆ. ವಿಜ್ಞಾನವು ವಿಷಯವನ್ನು ಅರ್ಥ ಮಾಡಿಕೊಳ್ಳುವುದನ್ನು ತಿಳಿಸುತ್ತದೆ. ಹಾಗೂ ಕಲೆಯು ಕಾರ್ಯ ನಿರ್ವಹಿಸುವುದನ್ನು ತಿಳಿಸುತ್ತದೆ.ವಿಜ್ಞಾನವಿಲ್ಲದ ಕಲೆಯು ಗುರಿರಹಿತ ಕಲೆಯಾಗುತ್ತದೆ.ಹಾಗೆಯೇ ಕಲೆಯಿಲ್ಲದ ವಿಜ್ಞಾನ ಜ್ಞಾನದ ಅಪವ್ಯಯಕ್ಕೆ ಕಾರಣವಾಗುತ್ತದೆ.ಕಲೆ ವಿವರಣಾತ್ಮಕವಾದರೆ ವಿಜ್ಞಾನ ನಿರೂಪಿಸುವುದಾಗಿದೆ.ನಿರ್ವಾಹಕರು ತಮ್ಮ ವೈಯುಕ್ತಿಕ ಜ್ಞಾನವನ್ನು ಸಂಧರ್ಭಾನುಸಾರ ಬಳಸುವ ಕೌಶಲ್ಯ ಹೊಂದಿದವರಾಗಿರುವುದರಿಂದ ನಿರ್ವಹಣೆಯು ಕಲೆ ಮತ್ತು ವಿಜ್ಞಾನವೂ ಆಗಿದೆ.ಉದಾಹರಣೆಗೆ ಒಬ್ಬ ಉತ್ತಮ ಲೆಕ್ಕಿಗ ಲೆಕ್ಕಶಾಸ್ತ್ರದ ಎಲ್ಲ ತತ್ವಗಳನ್ನು ತಿಳಿದುಕೊಂದಿದ್ದರೂ ಅವುಗಳನ್ನು ಲೆಕ್ಕದ ಪಟ್ಟಿ ತಯಾರಿಸುವಾಗ ಬಳಸುವ ಕೌಶಲ್ಯ ಹೊಂದದೇ ಇದ್ದರೇ ಅವನು ಉತ್ತಮ ಲೆಕ್ಕಿಗನಾಗಲೂ ಸಾಧ್ಯವಿಲ್ಲ.

  ಒಟ್ಟಾರೆ ಹೇಳುವುದಾದರೆ ನಿರ್ವಹಣೆಯೂ ವಿಜ್ಞಾನವೂ ಮತ್ತೂ ಕಲೆಯೂ ಆಗಿದೆ.ಒಟ್ಟಾರೆ ಹೇಳುವುದಾದರೆ ನಿರ್ವಹಣೆಯು ಜ್ಞಾನವೂ ಮತ್ತು ಕಲೆಯೂ ಆಗಿದೆ.

ನಿರ್ವಹಣೆಯು ವೃತ್ತಿಯಾಗಿ

ಬದಲಾಯಿಸಿ

ಕಾಲಕ್ರಮೇಣ ವ್ಯವಹಾರ ಸಂಘಟನೆಯಲ್ಲಿನ ಪ್ರಗತಿ,ಒಡೆತನ,ಮತ್ತು ಆಡಳಿತ ನಿರ್ವಹಣೆಗಳಲ್ಲಿನ ಪ್ರತ್ಯೇಕತೆ,ಬೆಳೆಯುತ್ತಿರುವ ಸ್ಪರ್ಧೆ ಇತ್ಯಾದಿ ಅಂಶಗಳು ಅರ್ಹತೆ ಹೊಂದಿರುವ ವೃತ್ತಿನಿರತ ನಿರ್ವಾಹಕರುಗಳಿಗೆ ಬೇಡಿಕೆಯನ್ನು ಹೆಚ್ಚಿಸಿವೆ.ನಿರ್ವಾಹಕರುಗಳ ಕೆಲಸವು ಒಂದು ಅಸಾಧಾರಣವಾದ ಕಾರ್ಯವಾಗಿದೆ.ಈ ಬೆಳವಣಿಗೆಗಳು ಇಂದು ಎಲ್ಲಾ ಕಾರ್ಯಗಳನ್ನು ವೃತ್ತಿಪರತೆಯಿಂದ ಕಾರ್ಯ ನಿರ್ವಹಿಸುವ ಹಂತಕ್ಕೆ ತಲುಪಿಸಿದೆ. ವಿಶಿಷ್ಠವಾದ ಜ್ಞಾನ ಮತ್ತು ಆಳವಾದ ಶೈಕ್ಷಣಿಕ ತಯಾರಿಕೆಯನ್ನು ಅಪೇಕ್ಷಿಸುವ ಉದ್ಯೋಗವನ್ನು ಒಂದು ವೃತ್ತಿ ಎಂದು ವ್ಯಾಖ್ಯಾನಿಸಬಹುದು.ಈ ವೃತ್ತಿಗೆ ಸಂಬಂಧಿಸಿದ ವ್ಯಕ್ತಿಗಳ ಕಾರ್ಯಚಟುವಟಿಕೆಗಳನ್ನು ಅವರನ್ನು ಪ್ರತಿನಿಧಿಸುವ ಪ್ರಾತಿನಿಧಿಕ ಮಂಡಳಿ ಅಥವಾ ಸಂಸ್ಥೆಯ ಮೂಲಕ ನಿಯಂತ್ರಿಸಲಾಗುತ್ತದೆ.

ವೃತ್ತಿಯ ಗುಣಲಕ್ಷಣಗಳು ಕೆಳಗಿನಂತಿವೆ

ಬದಲಾಯಿಸಿ

1)ವಿಶಿಷ್ಠ ಜ್ಞಾನ:ವೃತ್ತಿಯು ಒಂದು ವಿಶಿಷ್ಠವಾದ ಮತ್ತು ಕ್ರಮಬದ್ದವಾದ ಜ್ಞಾನವನ್ನು ಹೊಂದಿರುತ್ತದೆ.ಇದು ವೃತ್ತಿನಿರತರನ್ನು ಅಭಿವೃದ್ದಿ ಪಡಿಸಲು ಸಹಾಯಕವಾಗುತ್ತದೆ.ಪ್ರತಿಯೊಬ್ಬ ವೃತ್ತಿನಿರತನು ತನ್ನ ಕ್ಷೇತ್ರದಲ್ಲಿ ಆ ವೃತ್ತಿಗೆ ಸಂಬಂಧಿಸದ ತತ್ವ ಮತ್ತು ತಂತ್ರಗಳನ್ನು ಶ್ರದ್ದಾಪೂರ್ವಕ ಪರಿಶ್ರಮದ ಮೂಲಕ ಪಡೆದು ಪರಿಣಿತಿಯನ್ನು ಹೊಂದುತ್ತಾನೆ.ಹಾಗೆಯೇ ವ್ಯವಸ್ಥಾಪಕನು ನಿರ್ವಹಣಾ ನಿಯಮಗಳನ್ನು ಸಮರ್ಪಣಾಭಾವ ಮತ್ತು ತನ್ನನ್ನು ತೊಡಗಿಕೊಳ್ಳುವ ಮೂಲಕ ಪರಿಣತಿಯನ್ನು ಪಡೆದುಕೊಳ್ಳುತ್ತಾನೆ. 2)ಔಪಚಾರಿಕ ಶಿಕ್ಷಣ ಮತ್ತು ತರಬೇತಿ:ಅನೇಕ ವಿದ್ಯಾಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ವೃತ್ತಿಗೆ ಸಂಬಂದಿಸಿದ ಶಿಕ್ಷಣ ಹಾಗೂ ತರಬೇತಿಯನ್ನು ನೀಡುವ ಕಾರ್ಯವನ್ನು ನಿರ್ವಹಿಸುತ್ತದೆ.ಯೋಗ್ಯ ಅರ್ಹತೆ ಅಥವಾ ನಿಗದಿತ ಪದವಿ ಪದೆದುಕೊಳ್ಳದೆ ಯಾರೊಬ್ಬರು ವೃತ್ತಿಯನ್ನು ಮಾಡಲಾರರು. ಆದ್ದರಿಂದ ಅನೇಕ ವಿದ್ಯಾಸಂಸ್ಥೆಗಳ ಮೂಲಕ ನಿರ್ವಹಣೆಯ ಶಿಕ್ಷಣ ನೀಡಲಾಗುತ್ತದೆ.ಆದರೆ ವ್ಯವಸ್ಥಾಪಕರಿಗೆ ಯಾವುದೇ ಕನಿಷ್ಠ ವಿದ್ಯಾರ್ಹತೆಯನ್ನಾಗಲೀ ಅಥವಾ ಶೈಕ್ಷಣಿಕ ವಿಷಯಗಳನ್ನಾಗಲೀ ಕಾನೂನುರೀತ್ಯ ನಿಗದಿಪಡಿಸಿಲ್ಲ.ಉದಾಹರಣೆಗೆ ಎಂಬಿಎ,ಅಪೇಕ್ಷಣೀಯ ಅದರೆ ಅನಿವಾರ್ಯವಲ್ಲ. 3)ಸಾಮಾಜಿಕ ಹೊಣೆಗಾರಿಕೆ:ವೃತ್ತಿಯು ಜೀವನ ನಿರ್ವಹಣೆಯ ಮೂಲವಾಗಿದೆ.ಆದರೆ ವೃತ್ತಿನಿರತರು ಸಮಾಜಕ್ಕೆ ತಮ್ಮದೇ ಆದ ಸೇವೆಯನ್ನು ನೀಡಲು ಉತ್ಸುಕರಾಗಿದ್ದಾರೆ.ನಿರ್ವಾಹಕನ ಕಾರ್ಯಗಳು ಸಾಮಾಜಿಕ ನೈತಿಕತೆ ಮತ್ತು ಕಟ್ಟುಪಾಡುಗಳ ಪ್ರಭಾವಕ್ಕೆ ಒಳಪಟ್ಟಿವೆ.ಆದ್ದರಿಂದ ನಿರ್ವಾಹಕನ ಕಾರ್ಯಗಳು ಕೇವಲ ಮಾಲೀಕರುಗಳಿಗೆ ಮಾತ್ರವಲ್ಲದೆ,ಸಮಾಜಕ್ಕೂ ಸಹ ಜವಾಬ್ದಾರಿಯಾಗಿರುತ್ತದೆ. ಕಾರಣ ವ್ಯವಸ್ಥಾಪಕನು ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸರಕುಗಳನ್ನು ನ್ಯಾಯಬೆಲೆಯಲ್ಲಿ ಸಮಾಜಕ್ಕೆ ಒದಗಿಸಬೇಕಾಗುತ್ತದೆ.