ಸದಸ್ಯ:Meghana Srinath/ನನ್ನ ಪ್ರಯೋಗಪುಟ
ರಣಧೀರ ಕಂಠೀರವ (ಚಲನಚಿತ್ರ) | |
---|---|
ರಣಧೀರ ಕಂಠೀರವ | |
ನಿರ್ದೇಶನ | ಎನ್.ಸಿ.ರಾಜನ್ |
ನಿರ್ಮಾಪಕ | ಜಿ.ವಿ.ಅಯ್ಯರ್, ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು |
ಪಾತ್ರವರ್ಗ | ರಾಜಕುಮಾರ್ಲೀಲಾವತಿಉದಯಕುಮಾರ್, ವೀರಭದ್ರಪ್ಪ, ಸಂಧ್ಯಾ, ನರಸಿಂಹರಾಜು, ಬಾಲಕೃಷ್ಣ, ಅಶ್ವಥ್, ಆರ್.ನಾಗೇಂದ್ರರಾವ್ |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಬಿ.ದೊರೈರಾಜ್ |
ಬಿಡುಗಡೆಯಾಗಿದ್ದು | ೧೯೬೦ |
ಚಿತ್ರ ನಿರ್ಮಾಣ ಸಂಸ್ಥೆ | ಕನ್ನಡ ಚಲನಚಿತ್ರ ಕಲಾವಿದರ ಸಂಘ |
ಇತರೆ ಮಾಹಿತಿ | ಕನ್ನಡದ ೧೦೦ನೇ ವಾಕ್ಚಿತ್ರವಾಗಿರುವ ಈ ಚಿತ್ರ ಕನ್ನಡದ ಮೊದಲ ಐತಿಹಾಸಿಕ ಚಿತ್ರ |
ಪೀಠಿಕೆ
ಬದಲಾಯಿಸಿ"ರಣಧೀರ ಕಂಠೀರವ" ಒಂದು ಐತಿಹಾಸಿಕ ನಾಟಕ. ಇದು ೧೦ನೇ ಫ಼ೆಭ್ರವರಿ, ೧೯೬೦ರಲ್ಲಿ ಬಿಡುಗಡೆಯಾದ ಜೀವನಚರಿತ್ರೆಯ ಚಿತ್ರ. ಇದು ಕನ್ನಡದ ೧೦೦ನೇ ವಾಕ್ಚಿತ್ರ. ೧೯೫೦ರ ಕಾಲದಲ್ಲಿ ಸಾಮಾನ್ಯವಾಗಿ ಬಿಡುಗಡೆಯಾಗುವ ಚಿತ್ರಗಳು ಬೇರೆ ಭಾಷೆಯಿಂದ ಮರುಮುದ್ರಿಸಲಾಗುತಿತ್ತು(ಡಬ್ಬಿಂಗ್)[೧]. ಕನ್ನಡದ ಮೂಲ ಚಿತ್ರಗಳು ಬೆರಳೆಣಿಕೆಯಷ್ಟು ಮಾತ್ರ ಸಿಗುತ್ತಿದ್ದವು. ಆಗ ಕೆಲವು ಕಲಾವಿದರು ಕನ್ನಡ ಭಾಷೆಯ ಚಿತ್ರಗಳನ್ನು ತಯಾರಿಸಬೇಕೆಂಬ ಸಂಕಲ್ಪ ತೊಟ್ಟು ನಿರ್ಮಿಸಿದ ಚಿತ್ರವೆ "ರಣಧೀರ ಕಂಠೀರವ". ಇದು ಬಹಳ ಜನಪ್ರಿಯವಾದ ಚಿತ್ರ. ಈ ಚಿತ್ರವನ್ನು ಎನ್.ಸಿ.ರಾಜನ್ ನಿರ್ದೇಶನ ಮಾಡಿದರು. ಇವರು ಮೊದಲು ಸಂಪಾದಕರಾಗಿದ್ದರು. ಈ ಚಿತ್ರವು ಕನ್ನಡ ಚಿತ್ರರಂಗ ಆರ್ಥೀಕ ನಿರ್ಭಂಧನೆಗಳಲ್ಲಿ ತೀವ್ರ ಬಿಕ್ಕುಟ್ಟಿನಲ್ಲಿ ಇರುವಾಗ ಬಿಡುಗಡೆಯಾಯಿತು[೨]. ಅದಕ್ಕೆ ಈ ಚಿತ್ರವನ್ನು "ಕನ್ನಡ ಚಲನಚಿತ್ರ ಕಲಾವಿದರ ಸಂಘ" ಎಂಬ ಸಹಕಾರ ವೇದಿಕೆಯನ್ನು ಕಟ್ಟಿದ ಡಾ.ರಾಜ್‌ಕುಮಾರ್, ಬಾಲಕೃಷ್ಣ, ನರಸಿಂಹ ರಾಜು ಮತ್ತು ಜಿ.ವಿ.ಅಯ್ಯರ್ ನಿರ್ಮಾಣ ಮಾಡಿದರು. ಇದರಿಂದ ಡಾ|| ರಾಜ್ ಕುಮಾರವರು ಮೊದಲನೆ ಬಾರಿ ಚಿತ್ರ ನಿರ್ಮಾಣ ಮಾಡಲು ನಿರ್ದರಿಸಿದರು. ಈ ಚಿತ್ರದ ಕಥೆ, ಚಿತ್ರಕಥೆ ಮತ್ತು ಬರಹಗಾರ ಗಣಪತಿ ವೆಂಕಟರಮಣ ಅಯ್ಯರ್(ಜಿ.ವಿ.ಅಯ್ಯರ್). ಇವರು ಕನ್ನಡ ಚಿತ್ರರಂಗದಲ್ಲಿ "ಕನ್ನಡ ಭೀಷ್ಮ" ಎಂದು ಹೆಸರುವಾಸಿಯಾಗಿದ್ದರು. ಇದು ಸುಮಾರು ೧೪೧ ನಿಮಿಷದ (ಎರಡುವರೆ ಗಂಟೆ) ಚಿತ್ರ. ಸಂಗೀತ ಜಿ.ಕೆ.ವೆಂಕಟೇಶ್ವರವರದು. ಇವರು ಕನ್ನಡ ಚಿತ್ರರಂಗದ ಪ್ರಮುಖ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಛಾಯಗ್ರಹಣ ಮಾಡಿದವರು ಬಿ.ದೊರೈರಾಜ್. thumb
ಕಲಕೌಶಲ್ಯ ಹಾಗು ಚಿತ್ರ ಬಿಡುಗಡೆಯ ವಿಷಯ
ಬದಲಾಯಿಸಿಡಾ|| ರಾಜ್ ಕುಮಾರವರ ತುಂಬಾ ಜನಪ್ರಿಯವಾದ ಚಿತ್ರದಲ್ಲಿ ಇದು ಒಂದು. ಡಾ|| ರಾಜ್ ಕುಮಾರವರು ಮೈಸೂರಿನ ಒಡೆಯರ್ ರಾಜ್ಯದ ಚಕ್ರವರ್ತಿಯಾದ ಕಂಠೀರವ ನರಸರಾಜ ಒಡೆಯರವರು ಪಾತ್ರದಲ್ಲಿ ಕಂಡುಬರುತ್ತಾರೆ. ಜನರು ಕಂಠೀರವ ನರಸರಾಜರವರನ್ನು ಪ್ರೀತಿಯಿಂದ 'ರಣಧೀರ ಕಂಠೀರವ' ಎಂದು ಕರೆಯುತ್ತಿದ್ದರು. ಅವರು ದೈಹಿಕವಾಗಿ ಸದೃಷ್ಟರಾಗಿದ್ದು ಮತ್ತು ಒಳ್ಳೆಯ ಕುಸ್ತಿಪಟುವಾಗಿದ್ದರು, 'ವಜ್ರ ಮುಷ್ಠಿ' ಎಂಬ ಒಂದು ಕುಸ್ತಿಯ ತಂತ್ರದಲ್ಲಿ ಚೆನ್ನಾಗಿ ಪಳಗಿದ್ದರು. ಅವರು ಸಂಗೀತಗಾರರಾಗಿದ್ದರು ಹಾಗು ಕಲೆ ಮತ್ತು ಸಾಹಿತ್ಯದಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಈ ಪಾತ್ರಕ್ಕೆ ಡಾ|| ರಾಜ್ ಕುಮಾರವರು ಪರಿಪೂರ್ಣವಾದ ಅರ್ಥ ನೀಡಿದ್ದಾರೆ. ಅವರ ಅಭಿನಯ ಸೊಗಸಾಗಿ ಮೂಡಿಬಂದಿದೆ. ಸಿನಿಮ ಶೂಟಿಂಗ್ ಮುಗಿದು ಬಿಡುಗಡೆ ಮಾಡಬೇಕು ಎಂಬ ಸಮಯದಲ್ಲಿ ಯಾವುದೇ ವಿತರಕರು ವಿತರಣೆಗೆ ಮುಂದೆ ಬರಲಿಲ್ಲ. ಇದರಿಂದ ಸಿನಿಮ ಬಿಡುಗಡೆಯಾಗಲು ತೊಂದರೆಯಾಯಿತು. ಕೆಲವು ದಿನಗಳ ನಂತರ 'ರಮೇಶ್ ಮೂವಿಸ್' ಈ ಚಿತ್ರವನ್ನು ವಿತರಣೆ ಮಾಡಿದರು. ಆ ಸಮಯದಲ್ಲಿ 'ಭಾರತ್' ಎಂಬ ಒಂದೇ ಒಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. ಅಲ್ಲಿ ಬಹಳ ಜನಪ್ರಿಯವನ್ನುಗಳಿಸಿ ಮತ್ತು ದೊಡ್ದ ಮೊತ್ತದ ಹಣ ಸಂಗ್ರಹವಾಹಿತು. ಈ ಚಿತ್ರವನ್ನು ನೋಡಲು ಜನರು ಒಂದು ಬಾರಿ ಅಲ್ಲದೆ ಎರಡು ಮೂರು ಬಾರಿ ನೋಡಲು ಇಚ್ಚಿಸಿದರು. ಈ ಚಿತ್ರವು ಐ.ಎಫ್.ಎಫ್.ಐ (ಇಂಟರ್ನ್ಯಾಶನಲ್ ಫಿಲ್ಮ್ ಫೇಸ್ಟಿವಲ್ ಆಫ್ ಇಂಡಿಯಾ)ನಲ್ಲಿ ೧೯೯೨ರಲ್ಲಿ ಪ್ರದರ್ಶಿಸಲಾಯಿತು. ಐ.ಎಫ್.ಎಫ್.ಐ ನಲ್ಲಿ ಪ್ರದರ್ಶಿಸುವುದು ಉತ್ತಮದಲ್ಲಿ ಉತ್ತಮ ಚಿತ್ರ. ಅದರಲ್ಲಿ ನಮ್ಮ ಕನ್ನಡ ಚಿತ್ರವು ಪ್ರದರ್ಶನವಾಗಿರುವ್ವುದು ನಮಗೆಲ್ಲ ಹೆಮ್ಮೆ ತರುವ ವಿಷಯ.
ತಾರಾಗಣ
ಬದಲಾಯಿಸಿಡಾ|| ರಾಜ್ ಕುಮಾರ್- ರಣಧೀರ ಕಂಠೀರವ
ಉದಯ್ ಕುಮಾರ್- ಸಂಗೀತ ಗುರುಗಳು
ಬಾಲಕೃಷ್ಣ-ಹಾಸ್ಯನಟ
ಲೀಲಾವತಿ- ನರ್ತಕಿ
ನರಸಿಂಹರಾಜು-ಹಾಸ್ಯನಟ
ಸಂಧ್ಯ- ಪಟ್ಟದ ರಾಣಿ
ರಮಾದೇವಿ-ರಾಜಮಾತೆ
ಅರ್. ನಾಗೆಂದ್ರ ರಾವ್- ದಳವಾಯಿ ವಿಕ್ರಮರಾಯ
ಕಾಂತರಾವ್- ಇಮ್ಮಡಿ ರಾಜ ಒಡೆಯರ್
ಸಾರಾಂಶ
ಬದಲಾಯಿಸಿಈ ಚಿತ್ರವು ಮೈಸೂರು ರಾಜ್ಯವನ್ನು ಆಳುತ್ತಿದ್ದ ಒಡೆಯರ್ ಎಂಬ ರಾಜಮನೆತನದಲ್ಲಿ ಒಬ್ಬರಾದ ರಣಧೀರ ಕಂಠೀರವ ಎಂಬ ರಾಜನ ಬಗ್ಗೆ ನಿರ್ಮಿಸಲಾದ ಚಲನಚಿತ್ರ. ಈ ಚಿತ್ರದಲ್ಲಿ ಇಮ್ಮಡಿ ರಾಜ ಒಡೆಯರ್ (ಕಾಂತರಾವ್, ತೆಲುಗು ಭಾಷೆಯ ನಟ) ರಾಜ್ಯವನ್ನು ಆಳುತ್ತಿರುತ್ತಾರೆ. ಆದರೆ ಅವರು ವೈಭೋಗದ ಜೀವನದಲ್ಲಿ ಮೈಮರೆತು ರಾಜ್ಯದ ಜವಬ್ದಾರಿಯನ್ನು ದಳವಾಯಿ ವಿಕ್ರಮರಾಯರಿಗೆ ಒಪ್ಪಿಸುತ್ತಾರೆ. ಅವರು ಅದನ್ನು ತಮ್ಮ ಸ್ವಾರ್ಥ ಸಾಧನೆಗೋಸ್ಕರ ಅಧಿಕಾರವನ್ನು ದುರುಪುಯೋಗ ಪಡಿಸಿಕೊಂಡು ಸರ್ವಾಧಿಕಾರಿಯಂತೆ ಮೆರೆಯುತ್ತಿರುತ್ತಾರೆ. ಇದೆಲ್ಲವನ್ನು ಕಂಡು ರಾಜಮಾತೆ (ನಟಿ: ರಮಾದೇವಿ) ಮತ್ತು ರಣಧೀರ ಕಂಠೀರವ (ನಟ: ರಾಜ್ ಕುಮಾರ್) ಬಂದು ರಾಜನಿಗೆ ಬುದ್ದಿವಾದ ಹೇಳುತ್ತಾರೆ. ಇದರಿಂದ ರಾಜನಿಗೆ ತನ್ನ ತಪ್ಪು ಅರಿವಾಗಿ ರಾಜ್ಯದ ಜವಬ್ದಾರಿಯನ್ನು ನಿರ್ವಹಿಸಲು ತೀರ್ಮಾನಿಸುತ್ತಾನೆ. ಆದರೆ ಇದನ್ನು ಸಹಿಸದ ದಳವಾಯಿ ರಾಜನಿಗೆ ವಿಷ ಕೊಟ್ಟು ಕೊಲ್ಲುತ್ತಾನೆ[೩]. ನಂತರ ಕಂಠೀರವನು ಸಿಂಹಾಸನವನ್ನೇರಿ ರಾಜ್ಯದ ಜವಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಇದನ್ನೂ ಸಹ ಸಹಿಸದ ದಳವಾಯಿಯು ರಾಜನನ್ನು ಕೊಲ್ಲಲು ಸಂಚು ಮಾಡುತ್ತಾನೆ. ಆದರೆ ತಾನು ನೇಮಿಸಿದ ಹಂತಕರಿಂದಲೆ ದಳವಾಯಿ ಹತ್ಯೆಗೊಳಗಾಗುತ್ತಾನೆ. ಅರಮನೆಯಲ್ಲಿರುವ ಬೇರೆ ಶತ್ರುಗಳು ರಾಜನನ್ನು ಕೊಲ್ಲಲು ಸಂಚು ಮಾಡುತ್ತಿರುತ್ತಾರೆ.
ಒಮ್ಮೆ ಕಂಠೀರವನು ತಿರುಚಿನ್ನಾಪಳ್ಳಿಗೆ ಮಾರುವೇಷದಲ್ಲಿ ಹೋಗಿ ಅಲ್ಲಿ ವೀರಮಲ್ಲ ಎಂಬ ಜಟ್ಟಿಯನ್ನು ಮಲ್ಲಯುದ್ದದಲ್ಲಿ ಸಾಯಿಸುತ್ತಾನೆ. ಇದಾದ ನಂತರ ಜಟ್ಟಿಯ ಸಹೋದರನಿಗೆ ಕಂಠೀರವನ ಮೇಲೆ ದ್ವೇಷ ಮೂಡಿ ಅವನು ತನ್ನ ಸ್ನೇಹಿತರೊಂದಿಗೆ ಮೈಸೊರು ರಾಜ್ಯಕ್ಕೆ ಬಂದು ಕಂಠೀರವನ ಶತ್ರುಗಳ ಜೊತೆ ಕೈ ಜೋಡಿಸುತ್ತಾನೆ. thumb|ಶತ್ರುಗಳೊಡನೆ ಹೊರಾಡುತ್ತಿರುವ ಕಂಠೀರವ ಈಗೆ ಒಂದು ದಿನ ಮಹಾರಾಜರು ಮಾರುವೇಷದಲ್ಲಿ ದೇಶ ಸಂಚಾರ ಮಾಡುತ್ತಿರುವಾಗ ಒಂದು ನರ್ತಕಿಯ(ನಟಿ:ಲೀಲಾವತಿ)ಪರಿಚಯವಾಗಿ ಅದು ಪ್ರೇಮವಾಗಿ ಮಾರ್ಪಾಡಾಗುತ್ತದೆ. ಆದರೆ ಆ ನರ್ತಕಿಗೆ ಸಂಗೀತವನ್ನು ಕಲಿಸುವ ಗುರುಗಳು (ನಟ: ಉದಯ್ ಕುಮಾರ್) ಅವಳಿಗೆ ಯಾರೊಡನೆ ಮಾತನಾಡಲು ಮತ್ತು ಎಲ್ಲಿಯು ನೃತ್ಯ ಮಾಡಬಾರದೆಂದು ನಿರ್ಬಂದನೆಗಳನ್ನು ಹಾಕ್ಕಿದ್ದರು ಅದನ್ನು ನಿರ್ಲಕ್ಷಿಸಿ ಕಂಠೀರವನನ್ನು ಪ್ರೀತಿಸಿದ ಕಾರಣ ಗುರುಗಳು ಅದೇ ಕೊರಗಿನಲ್ಲಿ ತಮ್ಮ ಪ್ರಾಣವನ್ನು ಬಿಡುತ್ತಾರೆ. ಇದೇ ಸಮಯದಲ್ಲಿ ಕಂಠೀರವನನ್ನು ಕೊಲ್ಲಲು ಸಂಚು ಬಲವಾಗುತ್ತದೆ. ಈ ಸಂಚಿನಲ್ಲಿ ನರ್ತಕಿಯು ಶಾಮೀಲಾಗಿದ್ದಾಳೆಂದು ರಾಜನ ಕಿವಿಗೆ ಬೀಳುತ್ತದೆ. ಇದನ್ನು ಪರಿಕ್ಷಿಸಲು ರಾಜನು ಅಂತಃಪುರಕ್ಕೆ ತೆರಳುತ್ತಾನೆ. ಆಗ ಹೊಂಚು ಹಾಕುತ್ತಿದ್ದ ಶತ್ರುಗಳು ರಾಜನ ಮೇಲೆ ಆಕ್ರಮಣ ಮಾಡುತ್ತಾರೆ. ರಾಜನು ಮಹಾ ಪರಕ್ರಮಿಯಾಗಿದುದ್ದರಿಂದ ಶತ್ರುಗಳನ್ನು ಸಾಯಿಸುತ್ತಾನೆ. ತನ್ನ ಮೇಲೆ ಅಪವಾದ ಬಂದ ಕಾರಣ ಬೇಸರಗೊಂಡು ನರ್ತಕಿಯು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ನಂತರ ರಾಜನಿಗೆ ನರ್ತಕಿಯ ಕೈವಾಡವಿಲ್ಲವೆಂದು ತಿಳಿದ ಮೇಲೆ ಪಶ್ಚತಾಪ ಪಡುತ್ತಾನೆ.
ಇಂಪಾದ ಗೀತೆಗಳು
ಬದಲಾಯಿಸಿಈ ಚಿತ್ರದಲ್ಲಿ ಕೇಳಿಬರುವ ಹಾಡುಗಳು ಬಹಳ ಸೊಗಸಾಗಿವೆ ಹಾಗು ಏಳು ಹಾಡುಗಳು ಇದ್ದು, ಈ ಎಲ್ಲಾ ಗೀತೆಗಳನ್ನು ಬರೆದವರು ಜಿ.ವಿ.ಅಯ್ಯರವರು. 'ರಾಧ ಮಾದವ' ಎಂಬ ಹಾಡನ್ನು ಹಾಡಿದವರು ಪಿ.ಬಿ. ಶ್ರೀನಿವಾಸ್ ಮತ್ತು ಎ.ಪಿ.ಕೋಮಲ್, 'ಕರುನಾಡ ವೈರಮುಡಿ ಕಂಠೀರವ' ಎಂಬ ಹಾಡನ್ನು ರಾಧ ಜಯಲಕ್ಷ್ಮಿಯವರು ಮತ್ತು ರಾಜಲಕ್ಷ್ಮಿಯವರು ಹಾಡಿದ್ದಾರೆ, 'ಕಬ್ಬಿನ ಬಿಲ್ಲನು' ಹಾಡನ್ನು ಸುಲಮಂಗಳಂ ರಾಜಲಕ್ಷ್ಮಿಯವರು ಹಾಡಿದ್ದಾರೆ, 'ಸಂಗೀತ ದೇವತೆಯೆ' ಎಂಬ ಹಾಡು ಪಿ.ಬಿ.ಶ್ರೀನಿವಾಸರವರು ಹಾಡಿದ್ದಾರೆ, 'ಏನಿದು ರೋಷ' ಎಂಬ ಹಾಡನ್ನು ಕೂಡ ಪಿ.ಬಿ.ಶ್ರೀನಿವಾಸರವರು ಹಾಡಿದ್ದಾರೆ, 'ಎನ್ನ ಮೊಗವ' ಹಾಡನ್ನು ರಾಧ ಜಯಲಕ್ಷ್ಮಿಯವರು ಹಾಡಿದ್ದಾರೆ ಮತ್ತು 'ಸಂಚಾರಿ ಮನಸೋತೆ' ಹಾಡನ್ನು ಪಿ.ಬಿ.ಶ್ರೀನಿವಾಸರವರು ಹಾಡಿದ್ದಾರೆ. ಎಲ್ಲರು ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದರಿಂದ ಈ ಚಿತ್ರವು ಯಶಸ್ಸನ್ನುಗಳಿಸಿತು.