ಸದಸ್ಯ:Mayuri2719/ನನ್ನ ಪ್ರಯೋಗಪುಟ

ಜೇನ್ ಆಂಗರ್

ಬದಲಾಯಿಸಿ

ಜೇನ್‍ ಆಂಗರ್ ಅವರು ೧೬ನೇ ಶತಮಾನದ ಪ್ರಮುಖ ಲೇಖಕಿ ಆಗಿದ್ದರು. ಅವರು ಆಂಗ್ಲ ಭಾಷೆಯಲ್ಲಿ ಸ್ತ್ರೀವಾದಿ ಚಿಂತನೆಗಳ ಬಗ್ಗೆ ಒಂದು ದೀರ್ಘವಾದ ಗ್ರಂಥವನ್ನು ರಚಿಸಿದ ಪ್ರಥಮ ಮಹಿಳೆಯಾಗಿದ್ದರು. ಅವರು ರಚಿಸಿದ 'ಜೇನ್ ಆಂಗರ್ ಹರ್ ಪ್ರೊಟೆಕ್ಷನ್ ಫಾರ್ ವುಮೆನ್'(ಜೇನ್ ಆಂಗರ್ - ಮಹಿಳೆಯರಿಗಾಗಿ ಅವಳ ರಕ್ಷಣೆ) ಎಂಬ ಪುಸ್ತಕ ೧೫೮೯ ರಲ್ಲಿ ಪ್ರಕಟಗೊಂಡಿತು. ಅವರು ರಚಿಸಿದ ಗ್ರಂಥದ ಒಂದೇ ಮೂಲ ಪತ್ರ ಇಂದಿನವರೆಗೆ ಉಳಿದು ಬಂದಿದೆ. ೧೬ನೇ ಶತಮಾನದ ಕೊನೆಯಲ್ಲಿ ಧಾರ್ಮಿಕತೆಗೆ ಸಂಬಂಧವಿಲ್ಲದ ಸಾಹಿತ್ಯವನ್ನು ಮಹಿಳೆಯರು ರಚಿಸುತ್ತಿರುವುದು ತೀರ ಅಪರೂಪವಾಗಿತ್ತು. ಹಾಗೆಯೇ ಸಮಾಜದಲ್ಲಿ ಪುರುಷ ಅಧಿಕಾರದ ವಿರುದ್ಧ ಹೋರಾಟ ನಡೆಸಿದ ಮಹಿಳೆಯರು ಹೆಚ್ಚಿನ ಸಂಖ್ಯೆಗಳಲ್ಲಿ ಇರಲಿಲ್ಲ. ಆ ಕಾಲದಲ್ಲಿ ಸ್ತ್ರೀವಾದಗಳನ್ನೂ ಪುರುಷರೇ ಹೆಚ್ಚಾಗಿ ರಚಿಸುತ್ತಿದ್ದರು.

 
'ಜೇನ್ ಆಂಗರ್ ಹರ್ ಪ್ರೊಟೆಕ್ಷನ್ ಫಾರ್ ವುಮೆನ್' ಪುಸ್ತಕದ ಮುಖಪುಟ

ಜೇನ್ ಆಂಗರ್ ಅವರ ಖಾಸಗಿ ಜೀವನದ ಬಗ್ಗೆ ಇತಿಹಾಸಕಾರರಿಗೆ ಏನೂ ತಿಳಿದಿಲ್ಲ. ಅವರು ತಮ್ಮ ಸ್ತ್ರೀವಾದವನ್ನು ರಚಿಸಿದ ಕಾಲದಲ್ಲಿ ಜೇನ್ ಆಂಗರ್ ಎಂಬ ಹೆಸರಿದ್ದ ಅನೇಕ ಮಹಿಳೆಯರು ಇಂಗ್ಲೆಂಡಿನಲ್ಲಿ ವಾಸಿಸುತ್ತಿದ್ದರೆಂದು ಇತಿಹಾಸಕಾರರು ಕಂಡು ಹಿಡಿದರೂ, ಅವರಲ್ಲಿ ಯಾರೂ ಈ ಸ್ತ್ರೀವಾದವನ್ನು ರಚಿಸಿದವರಲ್ಲ ಎಂದು ಗುರುತಿಸಲಾಗಿದೆ. ಆ ಸಮಯದಲ್ಲಿ ಹೆಚ್ಚು ಮಹಿಳಾ ಸಾಹಿತಿಕರರು ಇಲ್ಲದ್ದಿದ್ದರಿಂದ ಜೇನ್ ಆಂಗರ್ ಅವರು ಪುರುಷರೆಂದು, ಅವರ ಹೆಸರು ಗುಪ್ತನಾಮ ಎಂಬುದು ಕೆಲವರ ನಂಬಿಕೆ. ಅವರ ಜನನ, ಕುಟುಂಬ ಮತ್ತು ಮರಣಗಳ ಬಗ್ಗೆ ಏನೂ ಮಾಹಿತಿ ಸಿಗದೆ ಇರುವುದು ಕೂಡ ಈ ನಂಬಿಕೆಗೆ ಕಾರಣವಾಗಿದೆ.

ವೃತ್ತಿಜೀವನ

ಬದಲಾಯಿಸಿ

ಅವರು ತಮ್ಮ ರಚನೆಯ ಮೂಲಕ ಆಂಗ್ಲ ಸಾಹಿತ್ಯಕ್ಕೆ ಒಂದು ವಿಶಿಷ್ಟ ಧ್ವನಿಯನ್ನು ನೀಡಿದರು. ಅವರು ಮಹಿಳಾ ಶೋಷಣೆಗೆ ಐತಿಹಾಸಿಕ ಆಧಾರವನ್ನು ನೀಡಲು ಅವರು ತಮ್ಮ ಪುಸ್ತಕದಲ್ಲಿ ಗ್ರೀಕ್ ಪೌರಾಣಿಕ ಕಥೆಗಳ ಪಾತ್ರರಾದ ಸರ್ದನಾಪಲಸ್ ಮತ್ತು ಹರ್ಕ್ಯುಲಸ್ ಅವರ ಉದಾಹರಣೆಗಳನ್ನು ಕೊಟ್ಟರು. ಪುರುಷರ ಸ್ವಾರ್ಥವನ್ನು ನಿರೂಪಿಸಲೂ ಕೂಡ ಅವರು ಈ ಉದಾಹರಣೆಗಳನ್ನು ಬಳಸಿದರು. [] ಅವರು ಪೌರಾಣಿಕ ಹಾಗೂ ಐತಿಹಾಸಿಕ ಗ್ರಂಥಗಳಿಂದ ಕೊಟ್ಟ ಉದಾಹರಣೆಗಳು ಮತ್ತು ಅವರ ವಾಕ್ಚಾತುರ್ಯ, ಅವರ ಶಿಕ್ಷಣಕ್ಕೆ ಮತ್ತು ಜ್ಞಾನಕ್ಕೆ ಸಾಕ್ಷಿ ಆಗಿವೆ.

ಸಾಹಿತ್ಯ ರಚನೆ

ಬದಲಾಯಿಸಿ

ಜೇನ್ ಆಂಗರ್ ಅವರು ತಮ್ಮ ಪುಸ್ತಕವನ್ನು ಥಾಮಸ್ ಆರ್ವಿನ್ ಅವರು ೧೫೮೮ ರಲ್ಲಿ ಬರೆದ 'ಬುಕ್ ಹಿಸ್ ಸರ್ಫೀಟ್ ಇನ್ ಲವ್, ವಿತ್ ಅ ಫೇರ್‍ವೆಲ್ ಟು ದ ಫಾಲೀಸ್‍ ಆಫ್ ಹಿಸ್ ಓನ್ ಫ್ಯಾನ್‍ಟಸೀ (Boke His Surfeit in Love, with a farwel to the folies of his own phantasie) 'ಗೆ ಉತ್ತರವಾಗಿ ರಚಿಸಿದರು ಎಂದು ಅನೇಕ ಜನರು ನಂಬುತ್ತಾರೆ. ಮಹಿಳೆಯರು ಕಾಮಪ್ರಚೋದಕ ಎಂಬುದನ್ನು ಪುರುಷರು ನಂಬಲು, ಪುರುಷರ ಕೊಳುಕಾದ ಕಾಮವೇ ಕಾರಣ ಎಂದು ಜೇನ್ ಆಂಗರ್ ಅವರು ವಾದಿಸುತ್ತಾ, ಥಾಮಸ್ ಆರ್ವಿನ್‍ ಅವರು ಸ್ತ್ರೀಯರ ನೈತಿಕತೆಯ ಮೇಲೆ ಹಾಕಿದ ಆರೋಪಗಳಿಗೆ ಜವಾಬು ನೀಡಿದರು.ಪುರುಷರಿಗೆ ಸ್ತ್ರೀಯರ ವರ್ತನೆಯ ಬಗೆಗಿದ್ದ ನಿರ್ಲಕ್ಷಣೆಯೇ ಅಪಾರ್ಥಗಳಿಗೆ ದಾರಿ ನೀಡುತ್ತದೆ ಎಂದು ಅವರು ತಮ್ಮ ರಚನೆಯ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರು.

ಪುರುಷರ ಸ್ವಭಾವ ಮತ್ತು ನಡವಳಿಕೆಯನ್ನು ಅವರು ನೇರವಾಗಿ ಟೀಕಿಸಿದ್ದರು. ಪುರುಷರು ಮಹಿಳೆಯರನ್ನು ಕೇವಲ ಕಾಮದ ಉದ್ದೇಶದಿಂದಲೇ ನೋಡುವರು [] ಎಂದು, ಅವರ ಆಸೆಯನ್ನು ನೆರವೇರಿಸಿಕೊಂಡ ನಂತರ ಮಹಿಳೆಯರನ್ನು ತೊರೆದು ಹೋಗುತ್ತಾರೆ ಎಂದು ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಪುರುಷರು ಸ್ವಾರ್ಥದಿಂದ ನಡೆದುಕೊಂಡರೂ, ಮಹಿಳೆಯರು ಜೀವನದ ಎಲ್ಲಾ ಅಗತ್ಯಗಳನ್ನು ಪೂರೈಸಿ, ಸಮಾಜದ ಬೆಂಬಲವಾಗಿ ನಿಲ್ಲುತ್ತಾರೆ ಎಂದು ಜೇನ್ ಆಂಗರ್ ಅವರು ತಮ್ಮ ಗ್ರಂಥದಲ್ಲಿ ವಿವರಿಸಿದ್ದರು. ಮಹಿಳೆಯರು ಕಷ್ಟಪಟ್ಟು ಮಾಡಿದ ಕೆಲಸದ ಫಲಗಳನ್ನು ಪುರುಷರು ಅನುಭವಿಸಿ, ಅಜಾಗರೂಕವಾಗಿ ವ್ಯರ್ಥ ಮಾಡುತ್ತಾರೆ ಎಂಬುದು ಅವರ ನಂಬಿಕೆಯಾಗಿತ್ತು. ಜೇನ್ ಆಂಗರ್ ಅವರು ತಮ್ಮ ರಚನೆಯ ಮೂಲಕ ಪಿತೃಪ್ರಭುತ್ವ ಪದ್ಧತಿಯನ್ನು ವಿರೋಧಿಸಿದರು. ಸ್ತ್ರೀಯರು ಕೇವಲ ಕಾಮಾಸಕ್ತಿಯುಳ್ಳವರೆಂದು, ಅವರು ಅವಿಶ್ವಾಸನೀಯರು ಎಂಬ ನಂಬಿಕೆಯನ್ನು ತಿರಸ್ಕರಿಸಿದರು.

ಸಾಹಿತ್ಯ ಪ್ರಭಾವ

ಬದಲಾಯಿಸಿ

ಜೇನ್ ಆಂಗರ್ ಅವರ ರಚನೆ ಇತರ ಮಹಿಳೆಯರಿಗೆ ಮಾದರಿ ಆಯಿತು. ಮಹಿಳೆಯರೂ ಸಹ ಸಾಹಿತ್ಯದ ಕ್ಷೇತ್ರವನ್ನು ಪ್ರವೇಶಿಸಿ, ಮಹಿಳಾ ಶೋಷಣೆಯ ವಿರುದ್ಧ ಚರ್ಚೆಯನ್ನು ಆರಂಭಿಸಲು ಜೇನ್ ಆಂಗರ್ ಅವರ ಕೃತಿ ದಾರಿ ನೀಡಿತು.ಸಹಿತ್ಯದ ಕ್ಷೇತ್ರವನ್ನು ಪ್ರವೇಶಿಸಲು ಸ್ತ್ರೀಯರಿಗೆ ಅರ್ಹತೆ ಮತ್ತು ಸಾಮರ್ಥ್ಯ ಇಲ್ಲ ಎಂದು ಪುರುಷ ಲೇಖಕರು ಊಹಿಸುತ್ತಿದ್ದರು. ಈ ಕಾರಣದಿಂದಾಗಿಯೇ ಪುರುಷರು ಮಹಿಳೆಯರ ಸ್ವಭಾವ ಮತ್ತು ನಡವಳಿಕೆಯನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ನಡೆದುಕೊಳ್ಲುತ್ತಿದ್ದರೆಂದು ಅವರು ತಮ್ಮ ರಚನೆಯಲ್ಲಿ ಅನೇಕ ಸಲ ತೋರಿಸಿದ್ದಾರೆ.

ವಿಮರ್ಶಕರ ಅಭಿಪ್ರಾಯಗಳು

ಬದಲಾಯಿಸಿ

ಜನರ ಗಮನವನ್ನು ತನ್ನತ್ತ ಸೆಳೆಯಲು ಮಾತ್ರ ಜೇನ್ ಆಂಗರ್ ಅವರು ಈ ಪುಸ್ತಕವನ್ನು ರಚಿಸಿರಬಹುದು ಎಂಬುದು ಬ್ರಯನ್. ಎಮ್. ಸ್ಟೇಬಲ್ ಫೋರ್ಡ್ ಎಂಬ ಲೇಖಕರ ಅಭಿಪ್ರಾಯ.ಜೇನ್ ಆಂಗರ್ ಅವರ ರಚನೆ ಜಾನ್ ಲಿಲ್ಲಿ ಅವರು ಬರೆದ ಪುಸ್ತಕಕ್ಕೆ ಉತ್ತರ ಎಂಬುದು ಲೇಖಕಿಯರಾದ ಆಡ್ರೆ ಕಹಿನ್ ಅವರ ನಂಬಿಕೆ. []

ಐತಿಹಾಸಿಕ ಹಿನ್ನೆಲೆ

ಬದಲಾಯಿಸಿ

ಜೇನ್ ಆಂಗರ್ ಅವರಂತೆಯೇ ಅನೇಕ ಸ್ತ್ರೀಯರು ತಮ್ಮ ರಚನೆಗಳ ಮೂಲಕ ತಮ್ಮ ಆತ್ಮಗೌರವವನ್ನು ಸಂರಕ್ಷಿಸಲು, ಸಮಾಜದಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಸ್ಥಾಪಿಸಲು ಪ್ರಯತ್ನಿಸಿದರು. ಆವರ ಕಾಲದಲ್ಲಿ ಹುಡುಗಿಯರಿಗೆ ವಿದ್ಯಾಭ್ಯಾಸ ನೀಡುವ ಸಂಸ್ಥೆಗಳು ಇರಲಿಲ್ಲ. ಆದರೂ ಅನೇಕ ಮಹಿಳೆಯರು ಬೇರೆ ಬೇರೆ ವಿಧಗಳಲ್ಲಿ ಬರಹ ಮತ್ತು ಓದುಗಾರಿಕೆಯ ಕೌಶಲ್ಯಗಳನ್ನು ಕಲಿತರು. ನೊಟ್ರೆ ಡೇಮ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದ ಲಾರಾ ನಾಪ್ಪರ್ಸ್ ಅವರು, ಆ ಕಾಲದ ಮಹಿಳೆಯರು ಮನೆಯಲ್ಲಿಯೇ ವಿದ್ಯಭ್ಯಾಸವನ್ನು ಮಾಡುತ್ತಿದ್ದರೆಂದು ತಮ್ಮ ಸಂಶೋಧನೆಯ ಮೂಲಕ ತಿಳಿಸಿದ್ದಾರೆ. ಹೆಚ್ಚಾಗಿ ಮಹಿಳೆಯರು ಮನೆಯಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದುದರಿಂದ ಅವರು ಪಾಕಶಾಸ್ತ್ರ, ಕೆತ್ತನೆ ಹಾಗು ಹೊಲಿಯುವಿಕೆಗಳ ಬಗ್ಗೆ ರಚಿಸಲು ಅನುಕೂಲವಾಯಿತು. ಆ ವೇಳೆಯಲ್ಲಿ ಪುಸ್ತಕಗಳ ಬೆಲೆ ಅಧಿಕವಾಗಿದ್ದ ಕಾರಣ ಮಹಿಳೆಯರು ಪುಸ್ತಕಗಳನ್ನು ಕೈಬರಹದಲ್ಲಿ ಅನುಕರಣೆ ಮಾಡುತ್ತಿದ್ದರು. ಸ್ತ್ರೀಯರ ಸಮಸ್ಯೆಗಳನ್ನು ಗುರುತಿಸುವುದು ಮತ್ತು ಅವುಗಳಿಗೆ ಪರಿಹಾರಗಳನ್ನು ಕಂಡುಹಿಡಿದು ಅವುಗಳನ್ನು ನಿವಾರಿಸುವುದು ಮಹಿಳೆಯರ ರಚನೆಗಳ ಪ್ರಧಾನ ಉದ್ದೇಶವಾಗಿತ್ತು. ರಾಜಕಾರಣ, ಧರ್ಮ, ವರ್ಗೀಕರಣ ಮತ್ತು ಇತರ ವ್ಯವಹ್ಹರಗಳ ಬಗ್ಗೆಯೂ ಮಹಿಳೆಯರು ಗ್ರಂಥಗಳನ್ನು ರಚಿಸುತ್ತಿದ್ದರು.

  1. https://sites.google.com/site/16thcenturybritishliterature/home/student-entries/jane-anger
  2. http://merrigold.livejournal.com/86572.html
  3. http://britlit1.pbworks.com/w/page/11449651/Jane%20Anger