ಸದಸ್ಯ:Maaheshwari P/ನನ್ನ ಪ್ರಯೋಗಪುಟ

ಕಾಂತಮಂಗಲ ಸುಳ್ಯ ಸಮೀಪವರ್ತಿ ಅಜ್ಜಾವರ ಗ್ರಾಮದಲ್ಲಿರುವ ಸ್ಥಳವೇ ಕಾಂತಮಂಗಲವಾಗಿದೆ[೧]. ಇದು ಪಯಸ್ವಿನಿ ನದಿ ದಡದಲ್ಲಿದೆ. ಇದರ ಆಚೆ ದಡದಲ್ಲಿ ಇನ್ನೊಂದು 'ಬೀರಮಂಗಲ' ಎಂಬ ‌‍ಸ್ಥಳವಿದೆ. ಈ ಎರಡು ಸ್ಥಳನಾಮಗಳು ಒಂದರಿಂದ ಇನ್ನೊಂದು ನಿಷ್ಪನ್ನವಾಗಿದೆ. ಮುಖ್ಯವಾಗಿ ಚಾರಿತ್ರಿಕ ಅವಳಿ ಸೋದರರಿಂದ ನಿಷ್ಪನ್ನವಾಗಿದೆ. ಕಾಂತ ಮತ್ತು ಬೀರ ಎನ್ನುವ ಅವಳಿ ವೀರರು ಈ ಸ್ಥಳಗಳಲ್ಲಿ ನೆಲೆಯಾಗಿದ್ದ ಕಾರಣಕ್ಕಾಗಿ ಈ ಸ್ಥಳನಾಮಗಳು ಗುರುತಿಸಿಕೊಂಡಿವೆ. 'ಮಂಗಲ' ಎನ‍್ನುವ ಪದವು ಈ ವೀರರು ನಡೆದಾಡಿದ ಶುಭ ಲಕ್ಷಣದ ನೆಲೆ ಎನ್ನುವ ಅರ್ಥದಲ್ಲಿ ಸೇರ್ಪಡೆಯಾಗಿದೆ.

ಇತಿಹಾಸ ಬದಲಾಯಿಸಿ

ಅಲ್ಲದೆ ಕಾಂತಮಂಗಲ ಬೀರಮಂಗಲಗಳಲ್ಲಿನ ಪದಗಳ ಉತ್ತರ ಪದ 'ಮಂಗಳ' ಎನ್ನುವ ಪದಕ್ಕೆ ಬೇರೆ ಅರ್ಥಗಳನ್ನು ನೀಡಬಹುದು. 'ಮಂಗಲ' ಎಂದರೆ ದುರ್ಗ ರಕ್ಷಣೆಗಾಗಿ ಇರುವ ಸೈನ್ಯಕ್ಕೆ ಬೇಕಾದ ಸೌಕರ್ಯಗಳುಳ್ಳ ಸ್ಥಳವೆಂಬ ಅರ್ಥವನ್ನು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇದನ್ನು ದಂಡಿನವರು ಇರುವ ಕೋಟೆ-ಸ್ಥಳವೆಂದು ಅರ್ಥೈಸಬಹುದು[೨]. ಕಾಂತಮಂಗಲದಲ್ಲಿ ಕೋಟೆಯೊಂದಿದ್ದು ಬಹುಶಃ ಈ ಕೋಟೆ ಸೋದರ ಕಾಂತ ಮತ್ತು ಬೀರ ಎನ್ನುವ ವೀರರಿಂದ ರಕ್ಷಿಸಲ್ಪಟ್ಟ ಕಾರಣಕ್ಕಾಗಿ ಈ ಸ್ಥಳನಾಮಗಳು ಬಂದಿವೆ. ಅಲ್ಲದೆ ಇಲ್ಲೇ ಸುಬ್ರಹ್ಮಣ್ಯ ದೇವಸ್ಥಾನವು ಪಾಳು ಬಿದ್ದ ಸ್ಥಿತಿಯಲ್ಲಿತ್ತು. ಪುರಾಣ ಮೂಲ ಸುಬ್ರಹ್ಮಣ್ಯ ದೇವಸೇನಾನಿ, ಈ ಹಿನ್ನೆಲೆಯಲ್ಲಿ ಕೋಟೆಗಳಲ್ಲಿ ಅವನಿಗೆ ವಿಶೇಷ ಸ್ಥಾನ. ಕಾಂತಮಂಗಲ ಸ್ಥಳನಾಮದೊಂದಿಗೆ ಈ ಕುಮಾರ ಸಾನಿಧ್ಯ ಸಂಬಂಧ ಹೊಂದಿರುವುದು. ಚಾರಿತ್ರಿಕ ದೃಷ್ಟಿಯಿಂದ ಮಹತ್ವಪೂರ್ಣವಾಗಿದೆ. ಇಂದುಚೆನ್ನಕೇಶವ ದೇವಾಲಯವಾಯುವ್ಯ ಭಾಗದಲ್ಲಿರುವ ಮುಖ್ಯ ಪ್ರಾಣ(ಹನುಮ) ಇದೇ ಕೋಟೆಯಯಲ್ಲಿ ಅನಾಥ ಸ್ಥಿತಿಯಲ್ಲಿತ್ತು. ಕೋಟೆಗೂ ಹನುಮನಿಗೂ ಸಂಬಂಧವಿದೆ. ಒಂದು ಕಲ್ಲಿನಲ್ಲಿ ಒರಟಾಗಿ ಕೆತ್ತಲಾಗಿದ್ದ ಹನುಮ, ಈ ಕಾಂತಮಂಗಲದ ಕೋಟೆಯಿಂದ ಬಂದು ಈಗ ಸುಳ್ಯ ಚೆನ್ನಕೇಶವ ದೇವಾಲಯದಲ್ಲಿ ವಾಸ್ತು ಸ್ವರೂಪದ ಕಂಚಿನ ಪ್ರತಿಮೆಯಾಗಿ ನೆಲೆಯಾಗಿದ್ದಾನೆ. ಅಲ್ಲದೆ ನೀರಿನಿಂದ ಕೂಡಿದ ಪರಿಸರವನ್ನು 'ಮಂಗಳ'ವೆಂದು ಕರೆಯಲಾಗುತ್ತಿತ್ತು. ಈ ದೃಷ್ಟಿಯಿಂದಲೂ ಕಾಂತಮಂಗಲ ಮುಖ್ಯವಾಗಿದೆ.

ಭಾಷೆಗಳು ಬದಲಾಯಿಸಿ

  1. ತುಳು
  2. ಕನ್ನಡ
  3. ಕೊಂಕಣಿ
  4. ಮಲೆಯಾಳ

ಕೃಷಿ ಬದಲಾಯಿಸಿ

  1. ಅಡಿಕೆ
  2. ಬಾಳೆ
  3. ಕರಿಮೆಣಸು
  4. ರಬ್ಬರ
  5. ಗೇರುಬೀಜ
  6. ಭತ್ತ
  7. ಶುಂಠಿ.
  8. ಮರಗೆಣಸು

ಸಂಸ್ಥೆಗಳು ಬದಲಾಯಿಸಿ

ಸರಕಾರಿ ಪ್ರಾಥಮಿಕ ಶಾಲೆ[೩]

ಇತರ ಕೊಂಡಿ ಬದಲಾಯಿಸಿ

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖ ಬದಲಾಯಿಸಿ

  1. http://www.onefivenine.com/india/villages/Dakshin-Kannad/Sulya/Kanthamangala
  2. ಪೂವಪ್ಪ ಗೌಡ ಕಣಿಯೂರು (೨೦೧೬). ಸ್ಥಳ ನಾಮಗಳು ಮತ್ತು ಐತಿಹ್ಯಗಳು. ಸುಳ್ಯ: ಕನ್ನಡ ಸಂಘ ನೆಹರು ಮೇಮೋರಿಯಲ್ ಕಾಲೇಜು ಸುಳ್ಯ. pp. ೮-೯.
  3. https://schools.org.in/dakshina-kannada/29240500403/dkzp-govt.-higher-primary-school-kanthamangala.html