ಸದಸ್ಯ:Maadhavapriyaa/ನನ್ನ ಪ್ರಯೋಗಪುಟ

ಕರ್ನಾಟಕದ ಕಡಲ ತೀರವು ಗಣಪತಿ ದೇವಸ್ಥಾನಗಳಿಗೆ ಪ್ರಸಿದ್ಧವಾಗಿದೆ. ಗೋಕರ್ಣ, ಹಟ್ಟಿ ಅಂಗಡಿ, ಸೌತಡ್ಕ, ಶರವು ಹೀಗೆ ಪ್ರಸಿದ್ಧವಾಗಿರುವ ಗಣೇಶನ ದೇವಸ್ಥಾನಗಳಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವು ಕೂಡ ಸೇರಿದೆ.

ಪುರಾಣ ಕಥೆ

ಬದಲಾಯಿಸಿ

೧೫೦೦ ವರುಷಗಳಿಗೂ ಹೆಚ್ಚಿನ ಇತಿಹಾಸ ಇಡಗುಂಜಿ ದೇವಸ್ಥಾನದ್ದು. ಇಲ್ಲಿನ ಸ್ಥಳ ಪುರಾಣ ಹೇಳುವಂತೆ ಕಲಿಯುಗದ ಆರಂಭದಲ್ಲಿ ವಾಲಖೀಲ್ಯ ಮುನಿಗಳು ತಮ್ಮ ತಪಸ್ಸಿಗೆ ರಾಕ್ಷಸರಿಂದ ಉಂಟಾಗುತ್ತಿದ್ದ ತೊಂದರೆಗಳನ್ನು ನಿವಾರಿಸುವಂತೆ ನಾರದ ಮುನಿಗಳನ್ನು ಪ್ರಾರ್ಥಿಸುತ್ತಾರೆ. ಆಗ ನಾರದ ಮುನಿಗಳು ಪಾರ್ವತಿ ಮಾತೆಯ ಬಳಿ ಬಾಲಗಣಪತಿಯನ್ನು ಈ ಪ್ರದೇಶಕ್ಕೆ ಕಳುಹಿಸಿಕೊಡುವಂತೆ ಕೇಳಿಕೊಳ್ಳುತ್ತಾರೆ. ತಾಯಿಯ ಆಣತಿಯಂತೆ ಗಣೇಶ ಈ ಪ್ರದೇಶದಲ್ಲಿ ಬಂದು ನೆಲೆಗೊಳ್ಳುತ್ತಾಣೆ. ಬಳಿಕ ಗಣಪತಿಯ ಆಶೀರ್ವಾದದಿಂದ ವಾಲಖೀಲ್ಯ ಮುನಿಗಳು ತಪಸ್ಸಾನಾಚರಿಸಿ ಸಿದ್ಧಿಯನ್ನು ಪಡೆದುಕೊಳ್ಳುತ್ತಾರೆ. ಅಲ್ಲದೇ ಕಲಿಯುಗಾರಂಭಲ್ಲಿ ರಾಕ್ಷಸ ಸಂಹಾರಾರ್ಥವಾಗಿ ಭೇಟಿಯಿತ್ತಿದ್ದ ತ್ರಿಮೂರ್ತಿಗಳು ಈ ಪ್ರದೇಶದಲ್ಲಿ ಚಕ್ರತೀರ್ಥ ಹಾಗೂ ಬ್ರಹ್ಮತೀರ್ಥ ಎಂಬ ಹೊಂಡಗಳನ್ನೂ ಹಾಗೂ ನಾರದಮುನಿಗಳು ದೇವತೀರ್ಥ ಎಂಬ ಇನ್ನೊಂದು ಹೊಂಡವನ್ನೂ ನಿರ್ಮಿಸಿದ್ದರು ಎಂದೂ ಹೇಳುತ್ತದೆ ಇಲ್ಲಿನ ಸ್ಥಳಪುರಾಣ. []

ಗಣೇಶ ಮೂರ್ತಿಯ ವಿಶೇಷತೆ

ಬದಲಾಯಿಸಿ
  • ಇಲ್ಲಿ ಗಣೇಶನು ದ್ವಿಭುಜ ಭಂಗಿಯಲ್ಲಿ ಆಕರ್ಷಕ ಕಪ್ಪು ಶಿಲೆಯ ಮೂರ್ತಿಯಾಗಿ ಪೀಠವೊಂದರ ಮೇಲೆ ನಿಂತಿದ್ದಾನೆ.
  • ಇಲ್ಲಿನ ಗಣೇಶನ ಮೂರ್ತಿಯು ಎರಡು ದಂತಗಳನ್ನು ಹೊಂದಿದ್ದಾನೆ.
  • ಬಲಗೈನಲ್ಲಿ ಪದ್ಮವನ್ನೂ, ಎಡಗೈನಲ್ಲಿ ಮೋದಕ ತುಂಬಿದ ಪಾತ್ರೆಯನ್ನೂ ಹಿಡಿದಿದ್ದಾನೆ.
    • ಜೊತೆಗೆ ಸೊಂಡಿಲಿನಿಂದ ಮೋದಕವನ್ನು ಸವಿಯುತ್ತಿದ್ದಾನೆ ಬಾಲಗಣೇಶ.
  • ಈ ಮೂರ್ತಿಯ ಮತ್ತೆರಡು ವಿಶೇಷತೆಗಳೆಂದರೆ ಇಲ್ಲಿ ಗಣೇಶನ ಹೊಟ್ಟೆಗೆ ನಾಗರವನ್ನು ಸುತ್ತಿಲ್ಲ ಹಾಗೂ ಪಕ್ಕದಲ್ಲಿ ಎಂದಿನಂತೆ ಇರುವ ಮೂಷಿಕನೂ ಇಲ್ಲ.

ಸರಿಸುಮಾರು ಎರಡು ಸಾವಿರಕ್ಕೂ ಹೆಚ್ಚು ಇತಿಹಾಸ ಹೊಂದಿದೆ ಎನ್ನಲಾಗಿರುವ ಈ ಗಣೇಶನ ಮೂರ್ತಿಯನ್ನು ಮಹೋತಭಾರ ಶ್ರೀ ವಿನಾಯಕ ದೇವರು ಎಂದೂ ಕರೆಯಲಾಗುತ್ತದೆ.[]

ಎಲ್ಲಿದೆ?

ಬದಲಾಯಿಸಿ

ಉತ್ತರ ಕನ್ನಡ ಜಿಲ್ಲೆ''ಹೊನ್ನಾವರ'' ತಾಲ್ಲೂಕಿನಲ್ಲಿದೆ ಇಡಗುಂಜಿ ದೇವಸ್ಥಾನ.

ತಲುಪುವುದು ಹೇಗೆ?

ಬದಲಾಯಿಸಿ

ಇಡಗುಂಜಿಗೆ

  1. ರಸ್ತೆ ಮಾರ್ಗ
    1. ಭಟ್ಕಳ
    2. ಹೊನ್ನಾವರ
  2. ಹತ್ತಿರದ ರೈಲು ನಿಲ್ದಾಣ
    1. ಹೊನ್ನಾವರ (ಕೊಂಕಣ ರೈಲ್ವೆ) ಅಥವಾ ಮುರುಡೇಶ್ವರ (ಕೊಂಕಣ ರೈಲ್ವೆ)ಗಳು
  3. ಸಮೀಪದ ವಿಮಾನ ನಿಲ್ದಾಣ
    1. ಮಂಗಳೂರಿನ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಉಲ್ಲೇಖಗಳು

ಬದಲಾಯಿಸಿ
  1. http://www.aralikatte.com/2018/03/01/idagunji-maha-ganapathi-temple/
  2. "ಇಡಗುಂಜಿ ವಿನಾಯಕ ದೇವಸ್ಥಾನ ಒಂದು ಅದ್ಭುತ". Satwadhara News. Satwadhara News.