ಇಬ್ಯಾಂಕ್ಸ್
                                                                                                                                 



ಜನನ- ಮಾರ್ಚ ೨೫ ೧೮೨೧, ಮರಣ- ಮೇ ೪ ೧೮೯೭, ಇಸಾಬೆಲ್ಲಾ ವರ್ಲಿ ಬ್ಯಾಂಕ್ಸ್ ಮರ್ಚ ೨೫ ೧೮೨೧ರಲ್ಲಿ ಮ್ಯಾಂಚೆಸ್ಟರ್ ಇಂಗ್ಲ್ಂಡ್ನಲ್ಲಿ ಜನಿಸಿದರು , ಇಸಾಬೆಲ್ಲಾ ಅವರನ್ನು ಶ್ರೀ.ಜಿ.ಲಿನ್ನಿಯಸ್ ಬ್ಯಾಂಕ್ಸ್ ಅಥವಾ ಇಸಾಬೆಲ್ಲಾ ವರ್ಲಿ ಎಂದು ಕರೆಯಲಾಗುತ್ತದೆ. ಅವರು ಇಂಗ್ಲೀಷ್ ಕಾವ್ಯ ಮತ್ತು ಕಾದಂಬರಿಗಳನ್ನು ಬರಯುತ್ತಾರೆ. ೧೮೭೬ ರಲ್ಲಿ ಪ್ರಕಟವಾದ ಮ್ಯಾಂಚೆಸ್ಟರ ಮ್ಯನ್ ಎಂಬ ಪುಸ್ತಕಗೆ ಇಗಲು ಅವರನ್ನು ನೆನೆಪಿಸಿಕೊಲುತ್ತಾರೆ.

ಆರಂಭಿಕ ವರ್ಷ್

ಬದಲಾಯಿಸಿ

ಮ್ಯಾಂಚೆಸ್ಟರ ಉತ್ತರ ಭಾಗ ಎಂದು ಕರೆಯಲಪಡುವ ೧೦ ಓಲ್ಡ್ಲಾಮ್ ಸ್ಟ್ರಿಟನಲ್ಲಿ ೨೫ ಮರ್ಚ್ ೧೮೨೧ರಲ್ಲಿ ತನ್ನ ತಂದೆಯ ಫಾರ್ಮಸಿಯಲ್ಲಿ ಇಸಾಬೆಲ್ಲಾ ಬ್ಯಾಂಕ್ಸ್ ,ನೀ ವರ್ಲಿ,ಅವರು ಹುಟ್ಟಿದರು.ಇಸಾಬೆಲ್ಲಾ ಅವರು ಮ್ಯಾಂಚೆಸ್ಟರ ಮತ್ತು ಅದರ ರಾಜಕೀಯ ಬೆಳವಣಿಗೆಯ ಇತಿಹಾಸದಲ್ಲಿ ಬಹಳ ಆಸಕ್ತಿಯನ್ನುಬೆಳೆಸಿಕೊಂಡರು.

ಮ್ಯಾಂಚೆಸ್ಟರ ನಗರ ತನ್ನದೇ ಆದ ಸಂಸದೀಯ ಪ್ರತಿನಿಧಿಗಳನ್ನು ಹೊಂದಿದ್ದ್ ಕಾಲಕ್ಕಿಂತ ಮುಂಚೆಯೇ ಅವರ ತಂದೆ,ಜೇಮ್ಸ ಮತ್ತು ಅವಳ ತಾಯಿ ಅಮೆಲಿಯಾ ಇಬ್ಬರೂ ರಾಜಕೀಯದಲ್ಲಿ ಸಕ್ರಿಯರಾಗಿದ್ದರು;ಆಕೆಯ ತಂದೆ ತನ್ನ ಜೀವಿತಾವಧಿಯಲ್ಲಿ ಪಟ್ಟಣ ಆಲ್ಡರ್ಮ್ಯಾನ್ ಮತ್ತು ಮ್ಯಾಜಿಸ್ಟ್ರೇಟ್ ಆಗಿ ಅನೇಕ ಅಧಿಕೃತ ನಾಗರಿಕ ಪಾತ್ರಗಳನ್ನು ಹೊಂದಿದ್ದರು.ಇಸಾಬೆಲ್ಲಾ ಅವರ ಇತರ ಅಸಕ್ತಿ ಬರವಣಿಗೆಯಗಿದೆ;ಮ್ಯಾಂಚೆಸ್ಟರ ಗಾರ್ಡಿಯನ್ ಇಸಬೆಲ್ಲಾರ ಕವಿತೆ , ಎ ಡೈಯಿಂಗ್ ಗರ್ಲ್ ಅನ್ನು ೧೮೩೭ರಲ್ಲಿ ತನ್ನ ತಾಯಿಗೆ ಪ್ರಕಟಿಸಿದಾಗ ಇಸಬೆಲ್ಲಾರ ಫ್ಲೇರ್ ಅನ್ನು ಮೊದಲ ಬಾರಿಗೆ ಗಮನಿಸಲಾಯಿತು.ಅವಳ ಮೊದಲ ಕವಿತೆಯ ಸಂಗ್ರಹವಾದ ಐವಿ ಲೀವ್ಸ್ ಅನ್ನು ೧೮೪೪ ರಲ್ಲಿ ಪ್ರಕಟಿಸಲಾಯಿತು.

ಬರೆಯುವ ವೃತ್ತಿ ಜೀವನ

ಬದಲಾಯಿಸಿ

ಇಸಾಬೆಲ್ಲಾ ಅವರು ೧೮೪೬ರಲ್ಲಿ ಜಾರ್ಜ್ ಬ್ಯಾಂಕ್ಸ್ ಅನ್ನು ವಿವಾಹವಾದರು, ಕೆಲವೂಮೆ ತನ್ನ ಮೈಡೆನ್ ಇಸಬೆಲ್ಲಾ ವರ್ಲಿ ಎಂಬ ಹೆಸರಿನಲ್ಲಿ ಬರೆದಿದದರು ,ನಂತರದ ದಿನಗಳಲ್ಲಿ ಶ್ರೀಮತಿ ಜಿ.ಲಿನ್ನಾಯಸ್ ಬ್ಯಾಂಕ್ಸ್ ಎಂಬ ಹೆಸರಿನಲ್ಲಿ ಪ್ರಕಟಿಸಿದರು.ಆಕೆ ಎಂಟು ಮಕ್ಕಳನ್ನು ಹೊಂದಿದ್ದಳು(ಆದರೂ ಕೇವಲ ಮೂವರು ಪ್ರೌಢಾವಸ್ಥೆಯಲ್ಲಿ ಬದುಕುಳಿದರು).ಅವಳ ಪತಿ ಜಾರ್ಜ್ ಒಬ್ಬ್ ಪತ್ರಕರ್ತ ಮತ್ತು ಸಂಪಾದಕಾರಾಗಿದ್ದರು ಅವರು ಯು ಕೆ ದಾದ್ಯಂತ ಹಲವಾರು ಸ್ಥಳಗಳಲ್ಲಿ ಕೆಲಸ ಮಾಡಿದ್ದರು.೧೮೬೦ ರ ದಶಕದ ಆರಂಭದಲ್ಲಿ, ಇಸಾಬೆಲ್ಲಾ ಅವರ ಹಿರಿಯ ಮಗು (೧೪ ನೇ ವಯಸ್ಸಿನಲ್ಲಿ) ನಿಧನರಾದರು, ಮತ್ತು ಅವರ ನಷ್ಟದ ಅರ್ಥವು ಅವರ ಮೊದಲ ಕಾದಂಬರಿ, ಗಾಡ್ಸ ಪ್ರಾವಿಡೆನ್ಸ್ ಹೌಸ್ ಅನ್ನು ಬರೆಯಲು ಪ್ರೇರೇಪಿಸಿತ್ತು ಎಂದು ನಂಬಿದರು:೧೮೬೫ ರಲ್ಲಿ ಅವರು ಗ್ರಾಸ್ನಲ್ಲಿ ಡೈಸಿಗಳನ್ನು ಸಹ-ರಚಿಸಿದರು: ಅವರು ತನ್ನ ಗಂಡನೊಂದಿಗೆ ಸೆರಿ ಹಾಡುಗಳನ್ನು ಮತ್ತು ಪದ್ಯಗಳನ್ನು ಸಂಗ್ರಹಿಸಿದರು. ದಿ ಮೇಕಿಂಗ್ ಆಫ್ ವಿಲಿಯಂ ಎಡ್ವರ್ಡ್ಸ್ ಅಥವಾ ದಿ ಸ್ಟೋರಿ ಆಫ್ ದಿ ಬ್ರಿಡ್ಜ್ ಆಫ್ ಬ್ಯೂಟಿ ಕೂಡ ತಮ್ಮ ಗಂಡನೊಂದಿಗೆ ಸೆರಿ ಮಾಡಿದ ಪ್ರಯತ್ನವಾಗಿತ್ತು.

ಅವರ ಹಲವಾರು ಸಾಹಿತ್ಯ ಕೃತಿಗಳಲ್ಲಿ ದಿ ವಾಚ್ ಮೇಕರ್ಸ್ ಡಾಟರ್ ಅಂಡ್ ಅದರ್ ಟೇಲ್ಸ್, ಫೋರ್ಬಿಡನ್ ಟು ಮೇರಿ (ಎರಡು ಸಂಪುಟಗಳು), ಮೋರ್ ಕ್ಯುನಾನೆಟ್ ಕಾರೊನೆಟ್ಸ್ (೧೮೮೧), ಕ್ಯಾಲೆಬ್ ಬೂತ್ಸ್ ಕ್ಲರ್ಕ್: ಎ ಲಂಕಾಷೈರ್ ಸ್ಟೋರಿ (೧೮೭೮), ಗ್ಲೋರಿ: ಎ ವಿಲ್ಟ್ಶೈರ್ ಸ್ಟೋರಿ, ಸಿಬಿಲ್ಲಾ ಮತ್ತು ಇತರ ಕಥೆಗಳು (೧೮೮೫ ), ಮಿಸ್ ಪ್ರಿಂಗಲ್ಸ್ ಫರ್ಲ್ಸ್, ಮತ್ತು ಬಾಂಡ್ ಸ್ಲೇವ್ಸ್ - ಹೋರಾಟದ ಕಥೆ (೧೮೯೩) ಮತ್ತು ಲುಡ್ಟೈಟ್ಸ್ ಬಗ್ಗೆ ಉತ್ತರ ಇಂಗ್ಲೆಂಡ್ನಲ್ಲಿ ಒಂದು ಸಾಮಾಜಿಕ ಕಾದಂಬರಿ.ಈ ಕೆಲವು ಕೃತಿಗಳು, ೨೦ ನೇ ಶತಮಾನದಲ್ಲಿ ಅನೇಕ ಬಾರಿ ಪುನಃ ಕಾಣಿಸಿಕೊಂಡವು, ಮತ್ತು ಕೆಲವು ಪ್ರಿಂಟ್-ಆನ್ ಡಿಮೆಂಡ್ ಆವೃತ್ತಿಗಳು ಎಂದು ಇಂದು ಮಾರಾಟಕ್ಕೆ ಪ್ರಕಟಿಸಲಾಗಿದೆ.

ಮ್ಯಂಚೆಸ್ಟರ್ ಮ್ಯನ್

ಬದಲಾಯಿಸಿ

ಅವರ ಪುಸ್ತಕ, ದಿ ಮ್ಯಾಂಚೆಸ್ಟರ್ ಮ್ಯಾನ್, ೧೮೭೬ ರಲ್ಲಿ ಮೂರು ಸಂಪುಟಗಳಲ್ಲಿ ಪ್ರಕಟವಾಗುವುದಕ್ಕಿಂತ ಮುಂಚೆಯೆ ಕ್ಯಾಸೆಲ್ಸ್ ಮ್ಯಾಗಝೀನ್ನಲ್ಲಿ ಮೊದಲು ಸಿರಿಯಲ್ಯಸ್ಡ್ ಆಯಿತು, ಇದು ಅವರ ಅತ್ಯಂತ ಶಾಶ್ವತವಾದ ಸಾಧನೆಯಾಯಿತು.ಇದು ಪೀಟರ್ಲೂ ಮಸಾಕ್ರೆದಂತಹಾ ಹಲವಾರು ನೈಜ ಐತಿಹಾಸಿಕ ಘಟನೆಗಳನ್ನು ಚಿತ್ರಿಸುತ್ತದೆ. ಇದು ಪ್ರಮುಖ ಸಾಮಾಜಿಕ ಮತ್ತು ಐತಿಹಾಸಿಕ ಕಾದಂಬರಿ ಎಂದು ಪರಿಗಣಿಸಲ್ಪಟ್ಟಿದೆ, ಈ ಕಥೆ ಹತ್ತೊಂಬತ್ತನೆಯ ಶತಮಾನದಲ್ಲಿ ಮ್ಯಾಂಚೆಸ್ಟರ್ನ ನಿವಾಸಿಯಾದ ಜಬೆಜ್ ಕ್ಲೆಗ್ ಅವರ ಜೀವನವನ್ನು ಮತ್ತು ಕೈಗಾರಿಕಾ ನಗರದಲ್ಲಿ ಅವರ ಸಮೃದ್ದಿಯ ಏಳಿಗೆಗೆ ಕಾರಣವನ್ನು ನಿಡಲಾಗಿದೆ.ಅವನ ವೈಯಕ್ತಿಕ ಅದೃಷ್ಟ, ಇರ್ಕ್ ನದಿಯಿಂದ ತನ್ನ ಕೊಟ್ಟಿಗೆ ಬಳಿ ಟ್ರಜಿಕ್ ಸ್ನ್ಯಾಚ್ನಿಂದ, ಅವನ ಕಥೆ ಪ್ರಣಯ ಮತ್ತು ಭಾವಾತಿರೇಕವನ್ನು ರಚಿಸುತ್ತದೆ , ಅವನ ಜೀವನ ಅಪ್ರೆಂಟಿಸ್ನಿಂದ ಮಾಸ್ಟರ್ ಮತ್ತು ಬಡತನದಿಂದ ಸಂಪತ್ತು, ನಗರದ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಪ್ರತಿಬಿಂಬಿಸುತ್ತದೆ.ಪೀಟರ್ಲೂ ಮಸಕ್ರೆ ಅಥವಾ ೧೮೧೯ ರ ಮ್ಯಾಂಚೆಸ್ಟರ್ ಮಸಕ್ರೆ ಮತ್ತು ಕಾರ್ನ್-ಲಾ ರಿಯಟ್ಸಗಳು ಸ್ಪಷ್ಟವಾದ ಖಾತೆಗಳೊಂದಿಗೆ, ರಾಜಕೀಯ-ಐತಿಹಾಸಿಕ ಸೆಟ್ಟಿಂಗ್ಗಳಲ್ಲಿ ಇದನ್ನು ಸಾಧಿಸಲಾಗಿದೆ,(೧೮೩೮ ರಲ್ಲಿ ಮ್ಯಾಂಚೆಸ್ಟರ್ನಲ್ಲಿ ಆನ್ ಟಿ-ಕಾರ್ನ್ ಲಾ ಲೀಗ್ ಸ್ಥಾಪನೆಯಾಯಿತು).೧೮೯೬ ರಲ್ಲಿ, ಇಸಬೆಲ್ಲಾ ಮರಣದ ಮೊದಲ ವರ್ಷ, ದಿ ಮ್ಯಾಂಚೆಸ್ಟರ್ ಮ್ಯಾನ್ ನ ಚೆನ್ನಾಗಿ-ವಿವರಿಸಿದ ಆವೃತ್ತಿಯನ್ನು ನಲವತ್ತಾರು ಪ್ಲೇಟ್ಸ್ ಮತ್ತು ಮೂರು ಮ್ಯಪ್ಸಗಳೊಂದಿಗೆ ಪ್ರಕಟಿಸಲಾಯಿತು.

ಈ ಪುಸ್ತಕವು ಇನ್ನೂ ವಿಶ್ವದಾದ್ಯಂತ (೧೯೯೧ ರಲ್ಲಿ ಮರುಪ್ರಸಾರದ ನಂತರ ಮತ್ತು ೧೯೯೮ರಲ್ಲಿ ) ಓದಲಾಗಿದೆ, ಮತ್ತು ಅದರ ನಾಯಕರು, ಜಾಬೇಜ್ ಕ್ಲೆಗ್ ಮತ್ತು ಜೋಶುವಾ ಬ್ರೂಕ್ಸ್ ಅವರನ್ನು , ಸ್ಥಳೀಯವಾಗಿ ಮ್ಯಾಂಚೆಸ್ಟರ್ ಪ್ಬಲಿಕ್ ಹೌಸ್ ಹೆಸರಿನಲ್ಲಿ ಸ್ಮರಿಸಲಾಗಿದೆ.ಕಾದಂಬರಿಯಿಂದ ಉದ್ಧರಣ ('ಮ್ಯುಟಬಿಲಿಟಿ ಈಸ್ ದಿ ಎಪಿಟಾಫ್ ಆಫ್ ವರ್ಲ್ಡ್ಸ್ / ಚೇಂಜ್ ಅಲೊನ್ ಚೇಂಜ್ಲೆಸ್ / ಪೀಪಲ್ ಡ್ರಾಪ್ ಔಟ್ ಆಫ್ ದಿ ಹಿಸ್ಟರಿ ಆಫ್ ಅ ಲೈಪ್ ಆಫ್ ದ ಲ್ಯಾಂಡ್ ಅವರ ಕೆಲಸ ಅಥವಾ ಅವರ ಪ್ರಭಾವ ಉಳಿದಿದೆ') , ಟೋನಿ ವಿಲ್ಸನ್ ಟಾಂಬ್ಸ್ಟೋನ್ ಮೇಲೆ ಎಪಿಟಾಫ ಅನ್ನು ರೂಪಿಸುತ್ತದೆ ,ಇವರು ಮ್ಯಾಂಚೆಸ್ಟರ್ನಲ್ಲಿನ ಫ್ಯಾಕ್ಟರಿ ರೆಕಾರ್ಡ್ಸ್ ಸ್ಥಾಪಕರಲ್ಲಿ ಒಬ್ಬರು.

ಸಾಹಿತ್ಯಕ್ಕೆ ಇಸಾಬೆಲ್ಲಾ ಬ್ಯಾಂಕ್ಸ್ ನೀಡಿದ ಕೊಡುಗೆಯನ್ನು ಆಂಟನಿ ಟ್ರೊಲೊಪ್ ಬಹಳವಾಗಿ ಮೆಚ್ಚಿಕೊಂಡಿದ್ದಾರೆ,ಮತ್ತು ಆಕೆಯ "ಸಾಹಿತ್ಯದ ಜೀವನದಲ್ಲಿನ ಪುರಸ್ಕಾರವು [ಅವರ] ಡೆಸರ್ಟ್ಸ್ ಕಡಿಮೆಯಾಗಿದೆ" ಎಂದು ಗಮನಿಸಿದಂತೆ ವರದಿಯಾಗಿತ್ತು.ಇದಾದ ಕೆಲವೇ ದಿನಗಳಲ್ಲಿ,ಚಾರಿಟಿ ಟ್ರೊಲೋಪ್ ಅವರು ರಾಯಲ್ ಲಿಟರರಿ ಫಂಡ್ ಜೊತೆ ಸೆರಿ ಇಸಾಬೆಲ್ಲಾ ಅವರಿಗೆ £ ೩೫೫ ರೊಂದಿಗೆ ಒದಗಿಸಿತು.

ರಾಜಕೀಯ ಆಸಕ್ತಿಗಳು

ಬದಲಾಯಿಸಿ

ಮಹಿಳಾ ಹಕ್ಕುಗಳಿಗಾಗಿ ಅಭಿಯಾನದಲ್ಲಿ ಇಸಾಬೆಲ್ಲಾ ಬ್ಯಾಂಕ್ಸ್ ತೊಡಗಿಸಿಕೊಂಡಿದ್ದರು,ಅವರು ೧೮೪೨ ರಿಂದ ಆನ್ ಟಿ ಕಾರ್ನ್ ಲಾ ಲೀಗ್ನ ಲೇಡೀಸ್ ಸಮಿತಿಯ ಸದಸ್ಯರಾಗಿದ್ದರು.

ಮರಣ ಮತ್ತು ಸ್ಮಾರಕ

ಬದಲಾಯಿಸಿ

ಇಸಬೆಲ್ಲಾ ಬ್ಯಾಂಕ ಅವರು ಮೇ ೪ ೧೮೯೭ ರಂದು ಲಂಡನ್ನಲ್ಲಿ ತಮ್ಮ ಮನೆಯಲ್ಲಿ ನಿಧನರಾದರು.೧೮೮೧ ರಲ್ಲಿ ನಿಧನರಾದ ಅವಳ ಗಂಡ ಜೊತೆಯಲ್ಲಿ ಲಂಡನ್ನ ಹತ್ತಿರ ಸ್ಟೋಕ್ ನ್ಯೂವಿಂಗ್ಟನ್, ಅಬ್ನಿ ಪಾರ್ಕ್ ಸ್ಮಶಾನದಲ್ಲಿ ಲಿಟಲ್ ಎಲ್ಮ್ ವಲ್ಕ್ನಲ್ಲಿ ಇಸಬೆಲ್ಲಾ ಅವರನ್ನು ಸಮಾಧಿ ಮಾಡಲಾಯಿತು.೨೦೧೫ ರಲ್ಲಿ, ಮ್ಯಾಂಚೆಸ್ಟರ್ನ ಫಸ್ಟ್ ಸ್ಟ್ರೀಟ್ ಡೆವಲಪ್ಮೆಂಟ್ನಗಾಗಿ ಅವರನ್ನು ಗೌರವಿಸಲಾಯಿತು.

ಉಲೇಖಗಳು'

ಬದಲಾಯಿಸಿ


[] [] []

  1. https://www.goodreads.com/book/show/3240765-the-manchester-man
  2. https://rylandscollections.wordpress.com/tag/isabella-banks/
  3. https://en.wikipedia.org/wiki/The_Manchester_Man_(novel)