ನನ್ನ ಪರಿಚಯ ಬದಲಾಯಿಸಿ

ಚಿತ್ರ:IMG-20180204-WA0023(1).jpg
ಜೆನಿಫರ್ ಪ್ರಿನ್ಸಿ . ಎಸ್
 
ಮಾರ್ಟಳ್ಳಿ ಗ್ರಾಮ

ನನ್ನ ಹೆಸರು ಜೆನಿಫರ್ ಪ್ರಿನ್ಸಿ.ಎಸ್. ನಾನು ಕ್ರೈಸ್ಟ್ ಯುನಿವೆರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.ನಮ್ಮ ಊರು ಮಾರ್ಟಳ್ಳಿ ಎನ್ನುವ ಪುಟ್ಟ ಗ್ರಾಮ.ಕರ್ನಟಕದ ಗಡಿ ಭಾಗದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹನೂರು ವಲಯಕ್ಕೇ ಸೇರಿದ ಮಾರ್ಟಳ್ಳಿ ಎಂಬ ಕಿರಿಯ ಗ್ರಾಮದಲ್ಲಿ ನಾನು ಜನಿಸಿದೆ.ಈ ನನ್ನ ಗ್ರಾಮದ ಸುತ್ತ ಮುತ್ತಲು ಸುಂದರವಾದ ಬೆಟ್ಟ, ಗುಡ್ಡ, ಕಾಡು ಮತ್ತು ಅರಣ್ಯ ಪ್ರದೇಶಗಳಿಂದ ಆವರಿಸಿ ಕೊಂಡಿರುವುದರಿಂದ ನನ್ನ ಗ್ರಾಮವು ಸದ ತಂಪಾಗಿರುತ್ತದೆ.

ತಂದೆ ಮತ್ತು ತಾಯಿಯ ಪರಿಚಯ ಬದಲಾಯಿಸಿ

ನನ್ನ ತಂದೆಯ ಹೆಸರು ಸಗಾಯರಾಜ್.ಎಸ್ ತಾಯಿಯ ಹೆಸರು ವೈಲೆಟ್ ಚಂದ್ರ. ಇವರಿಬ್ಬರು ನನ್ನ ತಂದೆ, ತಾಯಿಯಲ್ಲದೆ ಪೋಷಕರೂ ಆಗಿದ್ದಾರೆ.ನನ್ನ ತಂದೆಯೆ ನನಗೆ ಮಾರ್ಗದರ್ಶಿ ಯಾಕೆಂದರೆ ಅವರು ಪಡುವ ಎಲ್ಲಾ ಕಷ್ಟಗಳನ್ನೂಕೂಡ ನಾನು ನನ್ನ ಕಣ್ಣಿಂದ ನೋಡಿದ್ದೇನೆ ಆದಲ್ಲದೆ ಅವರ ಮೊದಲ ತಿಂಗಳಿನ ಸಂಬಲ ೭೦೦ ರೂ ಆಗಿತ್ತು ಅದರೆ ಈಗ ಅವರು ೩೦೦೦೦ ರೂ ಸಂಬಲ ಪಡೆಯು ಸ್ತಾನಕ್ಕೆ ಬಂದ್ದಿದ್ದಾರೆ.ಆದ್ದರಿಂದ ಅವರನ್ನು ನಾನು ನನ್ನ ಮಾರ್ಗದರ್ಶಿಯಾಗಿ ಇಟ್ಟಿದ್ದೇನೆ.ನನಗೊಂದು ಅಣ್ಣ ಇದ್ದಾನೆ ಅವನ ಹೆಸರು ಮಾರ್ಟಿನ್ ಅಂತ ಅವನಂದರೆ ನನಗೆ ತುಂಬ ಇಷ್ಟ.

ಶಿಕ್ಷಣ ಬದಲಾಯಿಸಿ

ಸಂತ ಮೇರಿಸ್ ಇಂಗ್ಲೀಷ್ ಮಾಧ್ಯಮದಲ್ಲಿ ನಾನು ನನ್ನ ಪ್ರಾಥಮಿಕ ಅಧ್ಯಯನವನ್ನು ಮಾಡಿದೆ.ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುವಾಗ ನಾನು "ಆಲ್ ರೌಂಡರ್" ಪ್ರಶಸ್ತಿ ಪಡೆದುಕೊಂಡೆ.ನನ್ನ ಶಾಲೆಯಲ್ಲಿ ನಾನು ಹಠಮಾರಿ ಹುಡುಗಿಯಾಗಿದ್ದೆ.ನನಗೆ ಪುಸ್ತಕಗಳನ್ನು ಓದುವುದೆಂದರೆ ತುಂದ ಇಷ್ಟ.ಅದರಲ್ಲೂಕೂಡ ರೋಮಿಯೋ ಜೂಲಿಯಟ್ರವರ ಕವಿತೆಗಳನ್ನು ಓದುವುದು ತುಂಬ ಇಷ್ಟ. ಇದರ ಮೇಲೆ ಆಸಕ್ತಿ ಬರುವುದಕ್ಕೆ ಕಾರಣ ನನ್ನ ಪ್ರಾಧಮಿಕ ಶಾಲೆಯ ಕನ್ನಡ ಶಿಕ್ಷಕರಾದ ಮಹದೇವ್ ಸರ್.ಇವರು ಪಾಠ ಮಾಡಿದರೆ ಎಷ್ಟು ವರ್ಷವಾದರು ಮರೆಯಲು ಸಾದ್ಯವಾಗುವುದಿಲ್ಲ.ಅವರು ರಾಮಾಯಣ ಮಹಾಭಾರತದ ಬಗ್ಗೆ ಕಲಿಸುತ್ತಿದ್ದರು. ಆದ್ದರಿಂದ ನಾನು ಅದನ್ನು ಓದುವುದಲ್ಲಿ ಆಸಕ್ತಿ ಹೊಂದಿದ್ದೆ.ಮೈಸೂರುನಲ್ಲಿರುವ ಸಂತ ಫಿಲೋಮೆನಾಸ್ ಪಿ ಯು ಕಾಲೇಜಿನಲ್ಲಿ ನನ್ನ ಹನ್ನೆರಡನೆಯ ಪ್ರಮಾಣವನ್ನು ಪೂರ್ಣಗೊಳಿಸಿದ್ದೇನೆ.ನನ್ನ ಮಹತ್ವಾಕಾಂಕ್ಷೆ ನನ್ನ ಅಪ್ಪಂದಿರ ಇಚ್ಛೆಯನ್ನು ಪೂರೈಸಬೇಕು.ಶಿಕ್ಷಕರಾಗುದು ನನ್ನ ತಂದೆಯ ಇಚ್ಛೆಯಾಗಿತ್ತು ಆದರೆ ಅವರಿಂದ ಆಗಲಿಲ್ಲ ಆದ್ದರಿಂದ ಅದನ್ನು ನಾನು ಪೂರ್ಣಗೊಳಿಸುತ್ತೇನೆ.

ನನ್ನ ಆಲೋಚನೆ ಬದಲಾಯಿಸಿ

ನಾನು ಕನ್ನಡ ಮಾತನಾಡಲು ಇಷ್ಟಪಡುತ್ತೇನೆ ಆದರೆ ಕರ್ನಾಟಕದಲ್ಲಿ ಹಲವರು ಜನರು ಕನ್ನಡವನ್ನು ಮಾತನಾಡಲು ತಿಳಿದಿಲ್ಲ ಒಂದು ವೇಲೆ ಗೊತ್ತಿದ್ದರುಕೂಡ ಮಾತನಾಡಲು ನಾಚಿಕೆ ಪಡುತ್ತಾರೆ. ಆದರೆ ಯಾವನೋ ಹೇಳಿಕೊಟ್ಟ ಪರದೇಶಿಯ ಭಾಷೆಯಾದ ಇಂಗ್ಲಿಷನ್ನು ಬಳಸುತ್ತಾರೆ.ಅವರೆಲ್ಲರನ್ನು ನೋಡುವಾಗ ನಾನು ಒಂದೇ ಒಂದು ಹೇಳುವುದಕ್ಕೆ ಬಯಸುತ್ತೇನೆ"ಅವರೆಲ್ಲರು ತನ್ನ ತಾಯಿಯ ಹೆಸರನ್ನು ಹೇಳಲು ನಾಚಿಕೆ ಪಡೋತರ ಆಗುತ್ತೆ".

ನನ್ನ ವಯಕ್ತಿಕ ಬದಲಾಯಿಸಿ

ಇನ್ನು ನನ್ನ ಬಗ್ಗೆ ಹೇಳಬೇಕಾದರೆ ನಾನು ಒಂದು ಹುಡುಗನನ್ನು ಪ್ರೀತಿಸಿದೆ ಅವನಿಗಾಗಿ ನನ್ನ ಗೆಳತಿಯರನ್ನೂಕೂಡ ಬಿಟ್ಟುಹೋದೆ ಅವರು ಹೇಳಿದ್ರು ಪ್ರೀತಿಸಬೇಡಯೆಂದು.ನಾನು ಅವರು ಹೇಳುವುದನ್ನು ಕೇಳದೆ ಪ್ರೀತಿಸಿದೆ.ನಾನು ಅವನನ್ನು ತುಂಬ ಇಷ್ಟಪಟ್ಟೆ ಆದರೆ ಅವನಿಗೆ ನಾನು ನಾಲ್ಕರಲ್ಲಿ ಒಂದಾದೆ ಅಂದರೆ ಅವನು ನನಗೆ ಮುಂಚೇನೆ ೬ ಹುಡುಗಿಯರನ್ನು ಏಮಾರಿಸಿದ್ದಾನೆ, ಇದನ್ನು ತಿಳಿದು ಮನಸ್ಸು ತುಂಬ ನೋವಾಯಿತು. ೨ ವಾರಗಳು ನಾನು ಖಿನ್ನತೆಗೆ ಒಳಗಾಗಿದ್ದೆ.ಕೊನೆಗೆ ನಾನು ಈಗ ಒಂದು ತೀರ್ಮಾನಕ್ಕೆ ಬಂದಿದ್ದೇನೆ ಮತ್ತು ಇನ್ನೊಂಬರನ್ನು ಪ್ರೀತಿಸುವುದಿಲ್ಲ.ನಂತರ ನನ್ನ ತಂದೆ ಬಗ್ಗೆ ಯೋಚಿಸಿದೆ,ನಂತರ ನಾನು ಮೊದಲು ಸಾಧಿಸಲು ನಿರ್ಧರಿಸಿದ್ದೇನೆ ಮತ್ತು ಈಗ ನಾನು ಚೆನ್ನಾಗಿ ಅಧ್ಯಯನ ಮಾಡಲು ಪ್ರಾರಂಭಿಸಿದ್ದೇನೆ.ಇದರಿಂದ ನಾನು ಒಂದು ಪಾಠ ಕಲಿತಿದ್ದೇನೆ, ಮತ್ತು ನನ್ನ ಜೀವನದಲ್ಲಿ ನನ್ನ ಅತ್ಯುತ್ತಮ ಪ್ರಯತ್ನವನ್ನು ನಾನು ಬಿಡುವುದಿಲ್ಲಾ......

 
ಸ್ವಾಮಿ ವಿವೇಕಾನಂದ
  ''"ಏಳಿ ಏದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ"
                                     .....ಸ್ವಾಮಿ ವಿವೇಕಾನಂದ