ಸದಸ್ಯ:Haris Abdul/ನನ್ನ ಪ್ರಯೋಗಪುಟ3

ಈದ್ ಮಿಲಾದ್ ಆಚರಣೆ

ಇತಿಹಾಸ

ಬದಲಾಯಿಸಿ

ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಂ ಜನನ ಕ್ರಿಸ್ತಶಕ 575, ಇಸ್ಲಾಮಿಕ್ ಹಿಜರಿ ಕ್ಯಾಲೆಂಡರಿನ ರಬೀವುಲ್ ಅವ್ವಲ್ ತಿಂಗಳ ಹನ್ನೆರಡನೇ ತಾರೀಕಿನಂದು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್ ಸೌದಿ ಅರೇಬಿಯಾದ ಮಕ್ಕಾ ನಗರದಲ್ಲಿ ಜನಿಸಿದರು. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲರ ತಂದೆ. ಅಬ್ದುಲ್ಲ ರಲಿಯಲ್ಲಾಹು ಅನ್ಹು ಮತ್ತು ತಾಯಿ ಆಮಿನ ಬೀವಿ ರಲಿಯಲ್ಲಾಹು ಅನ್ಹಾ. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲರ ತಾಯಿ ಪ್ರವಾದಿಯವರ ಗರ್ಭವತಿಯಾಗಿದ್ದಾಗಲೇ ತಂದೆ ಅಬ್ಬುಲ್ಲ ರಲಿಯಲ್ಲಾಹು ಅನ್ಹು ಮರಣ ಹೊಂದಿದರು. ಮಕ್ಕಾದ ಹಾಶಿಂ ವಂಶ ಮತ್ತು ಕುರೈಸಿ ಗೋತ್ರದಲ್ಲಿ ಪ್ರವಾದಿ ಮುಹಮ್ಮದರ ಜನನವಾಯಿತು. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್ ಇಸ್ಲಾಮಿನ ಪ್ರವಾದಿಗಳಲ್ಲಿ ಕೊನೆಯವರಾಗಿದ್ದಾರೆ. ಖುರ್‍ಆನ್ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಅವತೀರ್ನಗೊಳಿಸಿದ ಇಸ್ಲಾಮಿನ ಪ್ರಮುಖ ಗ್ರಂಥ.

ಹಿನ್ನಲೆ

ಬದಲಾಯಿಸಿ

ಈದ್ ಮಿಲಾದ್<Ref>https://www.timeanddate.com/holidays/india/milad-un-nabi<Ref//> ಇಸ್ಲಾಂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದು. ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ದಿನಾಚರಣೆಯನ್ನು ಪ್ರತೀವರ್ಷ ಈದ್ ಮಿಲಾದ್ ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ಮುಸಲ್ಮಾನರು ಆಚರಿಸುತ್ತಾರೆ. ಇಸ್ಲಾಂ ಧರ್ಮದಲ್ಲಿ ಈದ್ ಮಿಲಾದ್ ಆಚರಣೆಗೆ ಅತ್ಯಂತ ದೊಡ್ಡ ಪ್ರಾಮುಖ್ಯತೆಯಿದೆ. ಈದ್ ಮಿಲಾದ್ ಆಚರಣೆಯನ್ನು ಜಗತ್ತಿನ ವಿವಿಧ ಕಡೆಗಳಲ್ಲಿ ವಿವಿಧ ರೀತಿಯಾಗಿ ಆಚರಿಸಲಾಗುತ್ತದೆ. ಪ್ರವಾದಿ ಮುಹಮ್ಮದ್<Ref>https://en.wikipedia.org/wiki/Muhammad<Ref//> ಸಲ್ಲಲ್ಲಾಹು ಅಲೈಹಿವಸಲ್ಲಮ್ ಹುಟ್ಟಿದ ರಬೀವು ಅವ್ವಲ್ ತಿಂಗಳ ಆರಂಭದಿಂದ ತಿಂಗಳ ಕೊನೆಯವರೆಗೂ ಒಂದು ತಿಂಗಳ ಕಾಲ ವಿಶ್ವದಾದ್ಯಂತ ಈದ್ ಮೀಲಾದ್ ಆಚರಣೆಗಳು ನಡೆಯುತ್ತವೆ. ಭಾರತದಲ್ಲಿ ಈದ್ ಮೀಲಾದ್ ಆಚರಣೆಯನ್ನು ಎಲ್ಲಾ ಪಂಗಡದ ಮುಸಲ್ಮಾನರು ಆಚರಿಸುತ್ತಾರೆ. ಈದ್ ಮಿಲಾದ್ ದಿನದಂದು ವಿವಿಧ ಸಾಂಸ್ಕøತಿಕ, ಪ್ರತಿಭಾ ಕಾರ್ಯಕ್ರಮಗಳನ್ನು ನಡೆಸುವುದು. ಮೌಲೀದ್ ಪಾರಾಯಣ ಮಾಡುವುದು, ಅನ್ನಸಂತರ್ಪಣೆ ಮಾಡುವುದು, ಮೆರವಣಿಗೆ ಮಾಡುವುದು ಈದ್ ಮಿಲಾದ್ ಆಚರಣೆಯ ಒಂದು ಭಾಗವಾಗಿದೆ. ಈದ್ ಮೀಲಾದ್ ಆಚರಣೆಯ ರಬೀವುಲ್ ಅವ್ವಲ್ ತಿಂಗಳಲ್ಲಿ ಮುಸಲ್ಮಾನರ ಎಲ್ಲಾ ಧಾರ್ಮಿಕ ಕೇಂದ್ರಗಳು ಮತ್ತು ವಿದ್ಯಾ ಸಂಸ್ಥೆಗಳನ್ನು ಬಣ್ಣದ ದೀಪಗಳು, ಮತ್ತು ಕಾಗದಗಳಿಂದ ಅಲಂಕರಿಸಲಾಗುತ್ತದೆ.

ಮೌಲೀದ್ ಪಾರಾಯಣ

ಬದಲಾಯಿಸಿ

ಮೌಲೀದ್<Ref>https://en.wikipedia.org/wiki/Mawlid<Ref//> ಪಾರಾಯಣ ಇಸ್ಲಾಮಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದು. ಮೌಲೀದ್ ಅಂದರೆ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲರ ಪ್ರಕೀರ್ತನೆಯಾಗಿದೆ. ಮೌಲೀದನ್ನು ಸಂಪೂರ್ಣವಾಗಿ ಪಠಿಸಲು ಸುಮಾರು ಒಂದು ಗಂಟೆಗಳಷ್ಟು ಸಮಯ ಬೇಕಾಗುತ್ತದೆ. ಮೌಲೀದ್ ಸಂಪೂರ್ಣವಾಗಿ ಅರೆಬಿಕ್ ಭಾಷೆಯಲ್ಲಿದೆ. ಮೌಲೀದ್ ಪಾರಾಯಣ ಕೇವಲ ಪಠಣವಲ್ಲ. ಮೌಲೀದನ್ನು ಪಾರಾಯಣ ಮಾಡಿದರೆ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇಸ್ಲಾಮಿನಲ್ಲಿದೆ. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್ ಜನಿಸಿದ ರಬೀವುಲ್ ಅವ್ವಲ್ ತಿಂಗಳ ಆರಂಭದಿಂದ ಕೊನೆವರೆಗೆ ಮೌಲೀದ್ ಪಾರಾಯಣವನ್ನು ಹೆಚ್ಚಾಗಿ ಮಾಡಲಾಗುತ್ತದೆ. ರಬೀವುಲ್ ಅವ್ವಲ್ ತಿಂಗಳು ಅಲ್ಲದ ಇತರ ಸಮಯದಲ್ಲೂ ಮೌಲೀದನ್ನು ಪಾರಾಯಣ ಮಾಡಬಹುದು. ರಬೀವುಲ್ ಅವ್ವಲ್ ತಿಂಗಳಲ್ಲಿ ಪ್ರವಾದಿ ಜನ್ಮ ತಿಂಗಳಾದ್ದರಿಂದ ಮುಸಲ್ಮಾನರ ಧಾರ್ಮಿಕ ಕೇಂದ್ರಗಳಾದ ಮಸೀದಿ, ಮದ್ರಸಗಳಲ್ಲಿ ಮತ್ತು ಹೆಚ್ಚಿನ ಮನೆಗಳಲ್ಲಿ ಮೌಲೀದ್ ಪಾರಾಯಣ ಮಾಡಲಾಗುತ್ತದೆ. ಮೌಲೀದ್ ಪಾರಾಯಣಯವನ್ನು ಅತ್ಯಂತ ವಿಜ್ರಂಭನೆಯಿಂದ ಮತ್ತು ಅತ್ಯಂತ ಸರಳವಾಗಿಯೂ ಮಾಡಬಹುದು. ಹೆಚ್ಚಿನ ಕಡೆಗಳಲ್ಲಿ ಮೌಲೀದ್ ಪಾರಾಯಣವನ್ನು ಅತ್ಯಂತ ವಿಜ್ರಂಭಣೆಯಿಂದ ಊರಿನ ಜನರೆಲ್ಲರೂ ಒಟ್ಟಾಗಿ ಮಾಡುತ್ತಾರೆ.

ಪ್ರತಿಭಾ ಕಾರ್ಯಕ್ರಮಗಳು

ಬದಲಾಯಿಸಿ

ಪ್ರತಿಭಾ ಕಾರ್ಯಕ್ರಮಗಳ ಆಯೋಜನೆ ಈದ್ ಮೀಲಾದ್ ಆಚರಣೆಯ ಪ್ರಮುಖ ಭಾಗವಾಗಿದೆ. ಆಯ ಊರಿನ ಮದ್ರಸಾದ ಮಕ್ಕಳಿಗೆ ಪ್ರಮುಖವಾಗಿ ಪ್ರತಿಭಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಹಾಡು, ಭಾಷಣ, ಕ್ವಿಝ್, ಸಂಭಾಷಣೆ, ಕಥೆ ಹೇಳುವುದು ಹೀಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುತ್ತದೆ. ಪ್ರತಿಭಾ ಕಾರ್ಯಕ್ರಮಗಳ ಆಯೋಜನೆಗಾಗಿ ಒಂದು ತಿಂಗಳ ಮುಂಚೆಯೇ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತದೆ. ಮದ್ರಸಾಗಳಲ್ಲದೆ ಇತರ ಕಡೆಗಳಲ್ಲೂ ಸಂಘ ಸಂಸ್ಥೆಗಳು ಪ್ರತಿಭಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತವೆ.

ಮೀಲಾದ್ ಮೆರವಣಿಗೆ: (ಜಾಥ)

ಬದಲಾಯಿಸಿ

ಈದ್ ಮೀಲಾದ್ ಆಚರಣೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಮೆರವಣಿಗೆಯೂ ಒಂದು. ರಬೀವುಲ್ ಅವ್ವಲ್ ತಿಂಗಳ ಹನ್ನೆರಡನೆಯ ದಿನ ಅಂದರೆ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್ ಜನಿಸಿದ ದಿನದಂದು ಜಗತ್ತಿನ ಎಲ್ಲಾ ಕಡೆಗಳಲ್ಲೂ ಆಯ ಪ್ರದೇಶದ ಸಮಯಕ್ಕೆ ಹೊಂದಿಕೊಂಡು ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ಪ್ರವಾದಿಯ ಮುಹಮ್ಮದರ ಜನ್ಮ ದಿನದ ಖುಷಿಗಾಗಿ ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ಇಸ್ಲಾಂ<Ref>https://en.wikipedia.org/wiki/Islam<//> ಧರ್ಮದಲ್ಲಿ ಮೆರವಣಿಗೆ ಮಾಡಿ ಆಚರಿಸುವ ಪ್ರಮುಖ ಹಬ್ಬವಾಗಿದೆ ಈದ್ ಮಿಲಾದ್. ಮೆರವಣಿಗೆಯಲ್ಲಿ ವಿವಿಧ ಇಸ್ಲಾಮಿಕ್ ಕಲಾ ತಂಡಗಳು ಭಾಗವಹಿಸುತ್ತವೆ. ವಾಹನ ಮೆರವಣಿಗೆ, ಕಾಲ್ನಡಿಗೆ ಜಾಥ ಇವುಗಳಲ್ಲಿ ಪ್ರಮುಖವಾದವು. ಈದ್ ಮೀಲಾದ್ ಮೆರವಣಿಗೆಯ ದಾರಿಯುದ್ದಕ್ಕೂ ಸಿಹಿ ತಿಂಡಿಗಳನ್ನು ವಿತರಿಸಿವುದು ಮೆರವಣಿಗೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಈದ್ ಮಿಲಾದ್ ಮೆರವಣಿಗೆಯಲ್ಲಿ ಕೇವಲ ಮುಸಲ್ಮಾನರಲ್ಲದೆ ಇತರ ಧರ್ಮೀಯರು ಪಾಲ್ಗೊಳ್ಳೊತ್ತಾರೆ.

ಅನ್ನಸಂತರ್ಪಣೆ

ಬದಲಾಯಿಸಿ

ಊರಿನ ಪರವೂರಿನ ಜನರಿಗೆ ಅನ್ನ ಸಂತರ್ಪಣೆ ಮಾಡುವುದು ಈದ್ ಮೀಲಾದ್ ಆಚರಣೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು. ಪ್ರವಾದಿಯವರ ಜನ್ಮ ದಿನದ ಹೆಸರಿನಲ್ಲಿ ಅನ್ನಸಂತರ್ಪಣೆ ಮಾಡಿದರೆ ಪುಣ್ಯ ಬರುತ್ತದೆ ಎಂಬ ನಂಬಿಕೆ ಮುಸಲ್ಮಾನರಲ್ಲಿದೆ. ಈದ್ ಮೀಲಾದ್ ದಿನದ ಅಂಗವಾಗಿ ಧಾರ್ಮಿಕ ಕೇಂದ್ರಗಳು ಮತ್ತು ಮನೆಗಳಲ್ಲಿ ಅನ್ನಸಂತರ್ಪನೆ ಮಾಡಲಾಗುತ್ತದೆ. ಶ್ರೀಮಂತ ವ್ಯಕ್ತಿಗಳು ತಮ್ಮ ತಮ್ಮ ಮನೆಗಳಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ.

ಬುರ್ದಾ ಮಜ್ಲಿಸ್

ಬದಲಾಯಿಸಿ

ಬುರ್ದಾ ಎಂದರೆ ಪ್ರವಾದಿ ಪ್ರೇಮ ಕಾವ್ಯ. ಇಸ್ಲಾಮಿನ ಪಂಡಿತ ಮತ್ತು ಪ್ರವಾದಿ ಪ್ರೇಮಿ ಇಮಾಂ ಬೂಸೂರಿ ಬುರ್ದಾವನ್ನು ರಚಿಸಿದರು. ಬುರ್ದಾ ಮಜ್ಲಿಸ್ ಸುಮಾರು ಎರಡು ಮೂರು ಗಂಟೆಗಳ ಕಾಲ ಸತತವಾಗಿ ಪ್ರವಾದಿ ಪ್ರಕೀರ್ತನೆ ಹಾಡುವ ಕಾರ್ಯಕ್ರಮವಾಗಿದೆ. ಈದ್ ಮಿಲಾದ್ ಆಚರಣೆಯ ರಬೀವುಲ್ ಅವ್ವಲ್ ತಿಂಗಳಲ್ಲಿ ಬುರ್ದಾ ಮಜ್ಲಿಸ್‍ಗಳನ್ನು ಆಯೋಜನೆ ಮಾಡಲಾಗುತ್ತೆ. ಬುರ್ದಾ ಹಾಡಲೆಂದೇ ಪ್ರತ್ಯೇಖ ಹಾಡುಗಾರ ತಂಡಗಳು ಕಾರ್ಯನಿರತವಾಗಿರುತ್ತವೆ. ಆಯೋಜಕರು ಸೂಕ್ತ ಸಂಭಾವಣೆಯನ್ನು ನೀಡಿ ಇವರಿಂದ ಬುರ್ದಾ ಹಾಡಿಸುತ್ತಾರೆ. ಬುರ್ದಾ ಕಾರ್ಯಕ್ರಮವನ್ನು ಸರಳವಾಗಿಯೂ ಮತ್ತು ವಿಜ್ರಂಭಣೆಯಾಗಿಯೂ ಆಚರಣೆ ಮಾಡಬಹುದು. ಜಗತ್ತಿನ ವಿವಿಧ ಕಡೆಗಳಲ್ಲಿ ಬ್ರಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮಗಳು ನಡೆಯುತ್ತವೆ. ಬುರ್ದಾ ರಬೀವುಲ್ ಅವ್ವಲ್ ತಿಂಗಳು ಮಾತ್ರವಲ್ಲದೆ ಇತರ ಸಂದರ್ಭಗಳಲ್ಲೂ ಹಾಡಬಹುದು. ಬುರ್ದಾ ಹಾಡಿದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇಸ್ಲಾಮಿನಲ್ಲಿದೆ.

ಉಲ್ಲೇಖಗಳು

ಬದಲಾಯಿಸಿ