Arpitha hb
ಪರಿಚಯ
ಬದಲಾಯಿಸಿಅರ್ಪಿತ ಎಂಬುದು ನನ್ನ ಹೆಸರು . ನಾನು ಬೆಂಗಳೂರಿನಬೆಂಗಳೂರು[೧] ಜೆಪಿ ನಗರದಲ್ಲಿ ನೆಲೆಸಿದ್ದೇನೆ. ಪ್ರಸ್ತುತ ಕ್ರಿಸ್ತ ಕಾಲೇಜಿನಲ್ಲಿ ಬಿಎ ಓದುತ್ತಿದ್ದೇನೆ. ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ.
ಕುಟುಂಬ
ಬದಲಾಯಿಸಿನನ್ನ ತಂದೆ ಬಿಳಿಗಿರಿ. ಜರ್ಮನ್ ಕಂಪನಿಯೊಂದರ ಇಂಡಿಯಾ ಶಾಕೆಯ ಎಂ ಡಿಯಾಗಿದ್ದಾರೆ.ಅವರಿಂದ ತಾಳ್ಮೆ, ಕುಟುಂಬದ ಕಾಳಜಿಯ ಬಗ್ಗೆ ತಿಳಿದುಕೊಂಡಿದ್ದೇನೆ. ನನ್ನ ತಾಯಿ ಭಾರತಿ. ಆಲ್ ಇಂಡಿಯಾ ರೇಡಿಯೋಆಲ್ ಇಂಡಿಯಾ ರೇಡಿಯೋ (ಅಖಿಲ ಭಾರತ ಬಾನುಲಿ ಕೇಂದ್ರ)[೨]ದಲ್ಲಿ ವಾರ್ತಾವಾಚಕರು. ಅವರೇ ನನ್ನ ಕನ್ನಡ ಮೇಲಿನ ಪ್ರೀತಿಗೆ ಸ್ಪೂರ್ತಿ. ಸದಾ ಚುರುಕಾಗಿ,ಎಲ್ಲರೊಂದಿಗೆ ನಗುತ್ತಾ ಮಾತನಾಡಿಸುವುದನ್ನು ಕಲಿತ್ತಿದ್ದೇನೆ. . ತಂದೆ ಭದ್ರಾವತಿಭದ್ರಾವತಿ[೩]ಯಲ್ಲಿ ಹುಟ್ಟಿ ಬೆಳೆದದ್ದು ಹಾಗು ತಾಯಿ ಬೆಂಗಳೂರಿನವರು. ಅಮ್ಮನ ಕಡೆ ಅಜ್ಜಿ-ತಾತ ಹಾಸನಹಾಸನ[೪]ದವರು. ಅಪ್ಪನ ಕಡೆ ಅಜ್ಜಿ -ತಾತ ಭದ್ರಾವತಿಯವರು.
ವಿದ್ಯಾಭ್ಯಾಸ
ಬದಲಾಯಿಸಿನಾನು ಹತ್ತನೆಯ ತರಗತಿವರೆಗು ಓದಿದ್ದು ಬೆಂಗಳೂರಿನ ಜೆಪಿ ನಗರದ ಮೀರಾಂಬಿಕ ಶಾಲೆಯಲ್ಲಿ. ನನಗೆ ಬಹಳ ಇಷ್ಟವಿದ್ದ ಎರಡು ವಿಷಯಗಳೆಂದರೆ ಸಮಾಜಶಾಸ್ತ್ರ ಹಾಗು ಕನ್ನಡ. ಆದ್ದರಿಂದ ನಾನು ಪಿಯುವಿನಲ್ಲೂ ಇತಿಹಾಸ,ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಹಾಗು ಮನೋವಿಜ್ಞಾನವನ್ನು ಆಯ್ದುಕೊಂಡಿದ್ದೆ. ಶಾಲೆಯಲ್ಲಿ ಸದಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೆ. ಆಟೋಟಗಳು, ಓದು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ.ಎರಡು ವರ್ಷಗಳ ಕಾಲ ಸ್ಕೂಲ್ ಕಪ್ತೈನ್ ಸಹ ಆಗಿದ್ದೆ. ಇಂದಿಗೂ ಶಾಲೆಗೆ ಮರುಳಿದಾಗ ಈ ನೆನೆಪುಗಳು ಮಂದಹಾಸ ತರುತ್ತದೆ. ನನ್ನ ಕನ್ನಡ ಶಿಕ್ಷಕರಾಗಿದ್ದ ಸಾವಿತ್ರಿ ದೀದಿ ಹಾಗು ಅವರ ಶುದ್ದ ಕನ್ನಡ ಭಾಷೆ ಇಂದಿಗೂ ಮರೆಯಲು ಸಾದ್ಯವಿಲ್ಲ. ಕ್ಲಾಸಿನಲ್ಲಿ ತರಲೆ ಮಾಡುತ್ತಿದ್ದು ಹೆಚ್ಚು. ಆದರೂ ಬಹಳ ಸಕ್ರಿಯವಾಗಿ ಇರುತ್ತಿದ್ದರಿಂದ ಶಿಕ್ಷಕರಿಗೂ ಇಷ್ಟವಾಗುತ್ತಿದ್ದೆ. ನನ್ನ ಮತ್ತು ಅವರ ಒಡನಾಟ ಬಹಳ ಹತ್ತಿರದ್ದು. . ನಂತರ ನನ್ನ ಪಿಯು ಕ್ರಿಸ್ತ ಜೂನಿಯರ್ ಕಾಲೇಜಿನಲ್ಲಿ ಓದಿದ್ದು. ಇಲ್ಲಿ 'ಪ್ರೇರಣ'ಎಂಬ ಭಾಶಾ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅದರ ವಿದ್ಯಾರ್ಥಿ ನಾಯಕಳೂ ಆಗಿದ್ದೆ. ನನಗೆ ನಾಯಕತ್ವ, ತಾಳ್ಮೆ, ಸಮಯಪ್ರಜ್ನೆ ಹಾಗು ಜೀವನಕ್ಕೆ ಬೇಕಾದ ಇನ್ನಿತರ ಗುಣಗಳನ್ನು ಈ ರೀತಿಯ ಅವಕಾಶಗಳೇ ತಿಳಿಸಿಕೊಟ್ಟಿದ್ದು.
ಗುರಿ-ಹವ್ಯಾಸ
ಬದಲಾಯಿಸಿನಾನು ಶಿಕ್ಷಕವೃತ್ತಿ ಇಲ್ಲವೇ ಕನ್ನಡ ಪತ್ರಿಕೋದ್ಯಮದಲ್ಲಿ ಮುಂದುವರೆಯಲು ಬಯಸುತ್ತೇನೆ. ನನ್ನ ಹವ್ಯಾಸಗಳೆಂದರೆ ಪುಸ್ತಕ ಓದುವುದು ಹಾಗು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದು. ನಾಟಕಗಳಲ್ಲಿ ಅಭಿನಯಿಸುವುದು ನನ್ನ ಆಸಕ್ತಿ. ಜನರನ್ನು ಎದುರಿಸಲು ಹಾಗು ಅವರೊಂದಿಗೆ ಬೆರೆಯಲು ಧೈರ್ಯ, ಸ್ವಾವಲಂಬನೆ ಹಾಗು ಶಿಸ್ತನ್ನು ಕಲಿಸಿಕೊಟ್ಟಿದೆ. ನನ್ನ ಮಾದರಿ ವ್ಯಕ್ತಿಯಾಗಿ ಶ್ರೀ ವಿಶ್ವೇಶ್ವರಭಟ್ವಿಶ್ವೇಶ್ವರ ಭಟ್[೫]ಅವರು, ಹಾಗು ಬಿ.ಜಯಶ್ರೀಬಿ.ಜಯಶ್ರೀ [೬]ಅವರನ್ನು ಪರಿಗಣಿಸುತ್ತೇನೆ. ನಾನು ಓದುವುದು ಹೆಚ್ಚು ಕನ್ನಡ ಪುಸ್ತಕಗಳಾದುದರಿಂದ ವಸುಧೇಂದ್ರ ವಸುಧೇಂದ್ರ[೭]ಅವರ ಮೋಹನಸ್ವಾಮಿ ಹಾಗು ನೇಮಿಚಂದ್ರರನೇಮಿಚಂದ್ರ (ಲೇಖಕಿ)[೮] ಸಮಗ್ರ ಸಾಹಿತ್ಯದ ಪುಸ್ತಕಗಳು ಹಾಗು ಇನ್ನು ಕೆಲವು ಆಸಕ್ತಿ ಮೂಡಿಸಿದಂತಹ ಕತೆಗಳೂ ಇವೆ.
ಅಪೇಕ್ಷೆಗಳು
ಬದಲಾಯಿಸಿಇನ್ನೊಂದು ವಿಚಾರವೆಂದರೆ ಇಲ್ಲಿಯವರೆಗೂ ಹೋಗಿ ಬಂದಿರುವ ಪ್ರವಾಸಿ ತಾಣಗಳಲ್ಲಿ ನಯಾಗರ ಜಲಪಾತನಯಾಗರ ಜಲಪಾತ[೯] ನನಗೆ ಅಚ್ಚುಮೆಚ್ಚು. ಅಲ್ಲಿನ ಪ್ರಕ್ರಿತಿಯ ಸೊಬಗು ಹಾಗು ಕೊರೆಯುವ ಚಳಿಯ ವಾತಾವರಣ ಇಂದಿಗೂ ನನಲ್ಲಿ ರೋಮಾಂಚನ ಉಂಟುಮಾಡುತ್ತದೆ. ಇನ್ನು ಬೆಂಗಳೂರಿನ ಗಾಂಧಿ ಬಜ಼ಾರ್ ನಲ್ಲಿ ವಿದ್ಯಾರ್ಥಿ ಭವನದ ಮಸಾಲೆ ದೋಸೆಮಸಾಲೆ ದೋಸೆ[೧೦] ಅಚ್ಚುಮೆಚ್ಚು. ಬ್ಯಾಡ್ಮಿಂಟನ್ಬ್ಯಾಡ್ಮಿಂಟನ್ [೧೧]ನೋಡಲು ಹಾಗು ಆಡಲು ಇಷ್ಟ.
ಉಲ್ಲೇಖ
ಬದಲಾಯಿಸಿhttps://en.wikipedia.org/wiki/Bangalore[೧]
http://allindiaradio.gov.in/Default.aspx[೨]
https://en.wikipedia.org/wiki/Bhadravati,_Karnataka[೩]
https://en.wikipedia.org/wiki/B._Jayashree[೬]
https://en.wikipedia.org/wiki/Vasudhendra[೭]
https://en.wikipedia.org/wiki/Nemichandra[೮]
https://en.wikipedia.org/wiki/Niagara_Falls[೯]
https://en.wikipedia.org/wiki/Masala_dosa[೧೦]
https://en.wikipedia.org/wiki/Badminton[೧೧]
- ↑ ೧.೦ ೧.೧ https://en.wikipedia.org/wiki/Bangalore
- ↑ ೨.೦ ೨.೧ http://allindiaradio.gov.in/Default.aspx
- ↑ ೩.೦ ೩.೧ https://en.wikipedia.org/wiki/Bhadravati,_Karnataka
- ↑ ೪.೦ ೪.೧ ಹಾಸನ ಜಿಲ್ಲೆ
- ↑ ೫.೦ ೫.೧ ವಿಶ್ವೇಶ್ವರ ಭಟ್
- ↑ ೬.೦ ೬.೧ https://en.wikipedia.org/wiki/B._Jayashree
- ↑ ೭.೦ ೭.೧ https://en.wikipedia.org/wiki/Vasudhendra
- ↑ ೮.೦ ೮.೧ https://en.wikipedia.org/wiki/Nemichandra
- ↑ ೯.೦ ೯.೧ https://en.wikipedia.org/wiki/Niagara_Falls
- ↑ ೧೦.೦ ೧೦.೧ https://en.wikipedia.org/wiki/Masala_dosa
- ↑ ೧೧.೦ ೧೧.೧ https://en.wikipedia.org/wiki/Badminton