ಕರ್ನಟಕ
 
ಬೆಂಗಳೂರು

ನನ್ನ ಹೆಸರು ಅಕ್ಷಯ್ ವಿಷ್ಣು ಕೀರ್ತಿ. ನಾನು ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ, ಬೆಂಗಳೂರು ನಗರದ ಗರುಡಾಚಾರಪಾಳ್ಯದ,ಅರುಣ್ ಮತ್ತು ಪ್ರಮೀಳಾ ದಂಪತಿಗಳ ಮೊದಲನೆ ಮಗನಾಗಿ,೨೦೦೦ನೆಯ ಇಸವಿಯ,ಜೂನ್ ತಿಂಗಳ, ೨೯ನೇ ತಾರೀಖಿನಂದು ಜನಿಸದೆ. ನನಗೆ ಒಬ್ಬನೇ ತಮ್ಮ, ಅವನ ಹೆಸರು ಗೌತಮ್ ದೃವ ಕೀರ್ತಿ. ಚಿಕ್ಕಂದಿನಿಂದಲೇ ಕುಟುಂಬದಲ್ಲಿ ನಾನು ವಿಶೇಷ ರೀತಿಯ ತುಂಟ ಹುಡುಗ.ಅಪ್ಪ ಅಮ್ಮ ತುಂಬಾ ಪ್ರೀತಿಯಿಂದ ಸಾಕಿದರು.ನಾನು ಊಟ ಮಾಡದೆ ಹಠ ಹಿಡಿದಾಗ ಅಮ್ಮ ಆಕಾಶ ತೋರಿಸಿ ಊಟ ಮಾಡಿಸುತ್ತಿದ್ದುದು ಇನ್ನೂ ಕಣ್ಣಿನ ಮುಂದೆಯೇ ಇದೆ.ಅಪ್ಪ ತನ್ನ ಹೆಗಲ ಮೇಲೆ ನನ್ನನ್ನು ಹೊತ್ತುಕೊಂಡು ಊರೆಲ್ಲಾ ತೋರಿಸಿದ ದೃಶ್ಯ ಇನ್ನೂ ನೆನಪಿದೆ.ತನ್ನ ಹಗಲ ಮೇಲಿನಿಂದ ಪ್ರಪಂಚವನ್ನು ಪರಿಚಯಿಸಿದರು, ಒಳ್ಳೆಯ ವಿಷಯಗಳ ಮೇಲೆ ಮಾತ್ರ ನನ್ನ ಗಮನ ಹೋಗದಂತೆ ನೋಡಿಕೊಂಡರು.ತಮ್ಮನ ಜೊತೆಯಲ್ಲಿ ಜಗಳ ಮಾಡುತ್ತಿದ್ದೆ,ಆಟಿಕೆಗಳಿಗಾಗಿ ಜಗಳವಾಡುತ್ತಿದ್ದೆವು

.೫ ವರ್ಷ ಪಾಯ ಬಂತು, ನನ್ನನ್ನು ಶಾಲೆಗೆ ಸೇರಿಸಲು ಅಪ್ಪ ಅಮ್ಮ ಯೋಚಿಸತೊಡಗಿದರು. ೧ನೇ ತರಗತಿಗೆ ರ್ಯಾನ್ ಶಾಲೆಗೆ ಸೇರಿಸಿದರು. ಮೊದಲ ದಿನ ಅಪ್ಪನನ್ನು ಬಿಟ್ಟು, ಶಾಲೆಯಲ್ಲಿ ಕುಳಿತುಕೊಳ್ಳಲು ಆಗಲಿಲ್ಲ,ಒಂದೇ ಸಮನೆ ಅಳುತ್ತಿದ್ದೆ.ನಂತರ ಶಾಲೆಯ ಬಗ್ಗೆ ಅಪಾರ ಗೌರವ ಉಂಟಾಯಿತು. ಅನೇಕ ಗೆಳೆಯರ ಪರಿಚಯವಾಯಿತು. ಅವರ ಜೊತೆಯಲ್ಲಿ ಆಟವಾಡುತ್ತ ಕಾಲ ಕಳೆಯುತ್ತಿದೆ.ಮೊದಲ ಅಕ್ಷರಗಳನ್ನು ಅನುಷ ಎಂಬ ಶಿಕ್ಷಕಿ ಕಳುಹಿಸಿದರು. ನನ್ನ ಕೈಹಿಡಿದಯ ಅನೇಕ ಬಾರಿ ಅಭ್ಯಾಸ ಮಾಡಿಸಿದರು.ಅವರ ಪ್ರೀತಿಯ ಮೃದು ಸ್ವಭಾವ ನಾನು ಬೇಗ ಕಲಿಯಲು ಸಹಕಾರಿಯಾಯಿತು. ಚಿಕ್ಕಂದಿನಿಂದಲೇ ಎಲ್ಲಾ ವಿಷಯಗಳಲ್ಲಿ ಮುಂದಿರುತ್ತಿದ್ದೆ.೧ನೇ ತರಗತಿ ಮುಗಿಸಿ ೨ನೇ ತರಗತಿಗೆ, ೨ನೇ ತರಗತಿ ಮುಗಿಸಿ ೩ನೇ ತರಗತಿಗೆ ಬಂದೆ. ಪ್ರತಿಯೊಂದು ತರಗತಿಯಲ್ಲೂ ಹೊಸ ಹೊಸ ಗೆಳೆಯರನ್ನು ಪಡೆಯುತ್ತಾ ಹೋದೆ.ಅವರ ಜೊತೆಗೆ ಆಟ ಆಡುವುದು,ತಮಾಷೆ ಮಾಡುವುದು, ತರಗತಿಯಲ್ಲಿ ಗಲಾಟೆ ಮಾಡುವುದು ನನ್ನ ದಿನನಿತ್ಯದ ಕೆಲಸಗಳು. ಅಮ್ಮ ಪ್ರತಿದಿನವೂ ನನಗಾಗಿ ರುಚಿ ರುಚಿಯಾದ ಅಡುಗೆ ಮಾಡಿಕೊಡುತ್ತಿದ್ದರು.ಶಾಲೆಯಲ್ಲಿ ಎಲ್ಲರೊಂದಿಗೆ ಹಂಚಿಕೊಂಡು ತಿನ್ನುತ್ತಿದ್ದೆ.ಅವರ ಡಬ್ಬಿಗಳಲ್ಲಿ ಇರುತ್ತಿದ್ದ ತಿಂಡಿಯನ್ನು ನಾನೂ ತೆಗೆದುಕೊಂಡು ತಿನ್ನುತ್ತಿದ್ದೆ.ಹೀಗೇ ೭ನೇ ತರಗತಿವರಗೆ ಬಂದೆ.ಅನೇಕ ಜ್ಞಾಪಕಗಳನ್ನು ಆ ಶಾಲೆ ನನಗೆ ಕೊಟ್ಟಿದೆ.

ಪ್ರೌಢ ಶಾಲೆ

ಬದಲಾಯಿಸಿ
 
ಕಾನಿಪಾಕಂ
 
ಕೊಡಗು

೭ನೇ ತರಗತಿ ಮುಗಿಸಿದ ನಂತರ, ೮ನೇ ತರಗತಿಗೆ ಕೊಡಗು ಜಿಲ್ಲೆಯ ಕರುಮ್ ಭಾಯ್ಸ್ ಅಕಾಡೆಮಿ ಫಾರ್ ಲರ್ನಿಂಗ್ ಅಂಡ್ ಸ್ಪೋರ್ಟ್ಸ್ ಶಾಲೆಗೆ ಸೇರಿಕೊಂಡೆ.ಆ ಹಚ್ಚ ಹಸಿರ ಗಡ್ಡಗಳ ಮಧ್ಯೆ ವಿದ್ಯೆ ಕಲಿಯುವುದು ತುಂಬಾ ಚೆನ್ನಾಗಿತ್ತು.ಅಲ್ಲಿನ ವಾತಾವರಣಕ್ಕೆ ನನ್ನನ್ನು ಸರಿದೂಗಿಸಿಕೊಂಡೆ.ಹೊಸ ಗೆಳೆಯರನ್ನು ಪರಿಚಯ ಮಾಡಿಕೊಂಡೆ.ಅವರ ಬಗ್ಗೆ ತಿಳಿದುಕೊಂಡೆ, ನನ್ನ ಬಗ್ಗೆ ಅವರಿಗೆ ತಿಳಿಸಿದೆ.ಅಮ್ಮನನ್ನು ಬಿಟ್ಟು ಹಾಸ್ಟೆಲ್ ಜೀವನಕ್ಕೆ ಹೊಂದಿಕೊಳ್ಳಲು ಬಹಳ ಸಮಯ ಹಿಡಿಯಿತು.ಅಲ್ಲಿನ ಶಿಕ್ಷಕರ ತರಬೇತಿ ಪಡೆದು ಉತ್ತಮ ವ್ಯಾಸಂಗ ಮಾಡಿದೆ.ಆ ಚಳಿಯ ವಾತಾವರಣದಲ್ಲೇ ಹತ್ತನೇ ತರಗತಿಗೆ ಕಾಲಿಟ್ಟೆ.೧೦ನೇ ತರಗತಿಯಲ್ಲಿ ಚೆನ್ನಾಗಿ ಓದಿ, ೮೭% ಅಂಕಗಳನ್ನು ಗಳಿಸಿದೆ.ಆ ಅದ್ಭುತವಾದ ಜಾಗ ಬಿಟ್ಟು ಮನೆಗೆ ಬರುವ ಮನಸಾಗಲೇ ಇಲ್ಲ. ಆ ಬೆಟ್ಟ ಗುಡ್ಡಗಳ ಸಾಲು ಇಂದಿಗೂ ನನ್ನ ಕಣ್ಣಿನ ಮುಂದೆಯೇ ಹರಿದಾಡುತ್ತಿವೆ.ಅಲ್ಲಿಂದ ವಾಪಸ್ ಮನೆಗೆ ಬಂದೆ,ಅಮ್ಮನಿಗೆ ಎಲ್ಲಿಲ್ಲದ ಸಂತೋಷ, ತಮ್ಮ ನನ್ನನ್ನು ಕಂಡು ಓಡಿ ಬಂದು ಅಪ್ಪುಗೆ ಮಾಡಿದ.ರಜಾ ದಿನಗಳಲ್ಲಿ ತಿರುಪತಿ, ಕಾನಿಪಾಕಂ,ಶ್ರೀ ಕಾಲಹಸ್ತಿ, ಮುಂಬೈ, ಮುಂತಾದ ದೇವಾಲಯಗಳಿಗೆ ಹೋಗಿದ್ದೆವು.

ಪದವಿ ಪೂರ್ವ ಕಾಲೇಜು

ಬದಲಾಯಿಸಿ
 
ನಂದಿಬೆಟ್ಟ

ಪ್ರಥಮ ಮತ್ತು ದ್ವಿತೀಯ ಪಿಯುಸಿ ಗಾಗಿ ಕ್ರೈಸ್ಟ್ ‌ಜೂನಿಯರ್ ಕಾಲೇಜಿಗೆ ಸೇರಿಕೊಂಡೆ.ಈ ವಾಹನಗಳ ನಾಡಲ್ಲಿ ಹೊಂದಿಕೊಳ್ಳಲು ಆಗಲೇ ಇಲ್ಲ. ಕಾಲೇಜು ಶುರುವಾಯಿತು, ಎಲ್ಲ ಹೊಸ ಮುಖಗಳ ಮಧ್ಯೆ ಸ್ವಲ್ಪ ಭಯವಾಯಿತು.ಅದು ನಂತರ ನನ್ನ ಶಕ್ತಿಯಾಯಿತು. ಅಕ್ಷಯ್ ಎಂಬ ಹೆಸರಿನ ಗೆಳೆಯನ ಪರಿಚಯವಾಯಿತು. ಅವನ ಜೊತೆ ಕಾಲೇಜಿನ ಮೂಲೆಮೂಲೆಯನ್ನು ಸುತ್ತಾಡಿದೆ.ತರಗತಿಯ ನಾಯಕನೂ ಆದೆ.ಎಲ್ಲಾ ಅಧ್ಯಾಪಕರ ಮೆಚ್ಚಿನ ವಿದ್ಯಾರ್ಥಿ ಆದೆ.ರಜೆಗಳಲ್ಲಿ ಗಗನಚುಕ್ಕಿ,ಭರಚುಕ್ಕಿ, ಶಿವನಸಮುದ್ರಕ್ಕೆ ಪ್ರವಾಸ ಹೋಗಿದ್ದೆವು. ಪ್ರಥಮ ಪಿಯುಸಿ ಮುಗಿಸಿ ದ್ವಿತೀಯ ಪಿಯುಸಿಗೆ ಬಂದೆ.ಜುಲೈ ತಿಂಗಳಲ್ಲಿ ನಂದಿ ಬೆಟ್ಟಕ್ಕೆ ಎಲ್ಲಾ ಸ್ನೇಹಿತರು ಹೋಗಿದ್ದೆವು, ಆ ಮಂಜಿನಿಂದ ಆವೃತವಾದ ಬೆಟ್ಟವನ್ನು ಹತ್ತುವುದು ಸುಂದರವಾಗಿತ್ತು.ಕಾಲೇಜಿನಲ್ಲಿ ಚಿತ್ರನಟ ಉಪೇಂದ್ರ ಅವರನ್ನು ಭೇಟಿ ಮಾಡಿದ್ದೆ.ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಡಿಯೂರಪ್ಪರನ್ನೂ ಭೇಟಿ ಮಾಡಿದ್ದೆ.ವಿಂಗ್ಸ್ ಆಫ್ ಫೈರ್ ಎಂಬ ಪುಸ್ತಕವನ್ನು ಓದಿದೆ. ಶ್ರೀರಾಮಾಯಣ ದರ್ಶನಂ ಎಂಬ ಪುಸ್ತಕವನ್ನು ಓದಿದೆ.ಪರೀಕ್ಷೆಗಳು ಬಂದೇ ಬಿಟ್ಟವು.ಓದಿ ಚೆನ್ನಾಗಿ ಬರೆದೆ.ಎಲ್ಲಾ ಗೆಳೆಯರನ್ನು ಬಿಟ್ಟು ಹೋಗುವುದು ತುಂಬಾ ಕಷ್ಟಕರವಾಗಿತ್ತು.ಫಲಿತಾಂಶ ಬಂತು,೮೯% ಅಂಕಗಳನ್ನು ಗಳಿಸಿದೆ.ಎಲ್ಲರೂ ತುಂಬಾ ಖುಷಿಯಾದರು,ಅಪ್ಪ ಆನಂದದಿಂದ ಪುಲಕಿಸಿದರು

ಡಿಗ್ರಿ ಕಾಲೇಜು

ಬದಲಾಯಿಸಿ

.ಡಿಗ್ರಿ ಮಾಡಲು ಕ್ರೈಸ್ಟ್ ಯೂನಿವರ್ಸಿಟಿ ಸೇರಿದೆ. ಕಾಲೆಜಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ, ಹೊಗೆನಕಲ್ ಗೆ ಹೋಗಿದ್ದೆವು. ನಾನೇ ಕ್ಲಾಸ್ ರೆಪ್ ಆದೆ.ಎಲ್ಲರನ್ನು ಪರಿಚಯಮಾಡಿಕೊಂಡೆ.ಇಲ್ಲಿ ಅಶೋಕ ಎಂಬ ಗೆಳೆಯ ದೊರಕಿದ.ಅದ್ಭುತ ವ್ಯಕ್ತಿತ್ವ ಅವನದು.ಎಲ್ಲರ ನೆಚ್ಚಿನ ಗೆಳೆಯ. ವಿಶಾಲ್,ತಿಲಕ್,ಯದು ಎಂಬ ಹೊಸ ಜೀವ ಗೆಳೆಯರ ಪರಿಚಯವಾಯಿತು. ಜೀವನದಲ್ಲಿ ಯಶಸ್ವಿಯಾಗಬೇಕೆಂದು ಆಸೆಯಿಂದ ಕಾಯುತ್ತಾ ಇದ್ದೇನೆ.