ನಮಸ್ಕಾರನನ್ನ ಹೆಸರು ಚೈತ್ರಾ.

ನಾನು ೧೯೯೯ ಜೂನ್ ೫ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನಲ್ಲಿ ಶ್ರೀನಿವಾಸ್ ಹಾಗೂ ರತ್ನ ಎಂಬುವವರ ಮಗಳಾಗಿ ಜನಿಸಿದೆ. ನಾನು ಚಿಕ್ಕಂದಿನಿಂದಲೂ ತುಂಬಾ ತುಂಟಿ ಹಾಗೂ ತುಂಬಾ ಮಾತಾಡುವವಳಾಗಿದ್ದೇನೆ.ನನಗೆ ಮಕ್ಕಳೊಂದಿಗೆ ಬೆರೆಯುವುದು ಅವರನ್ನು ಆಟಆಡಿಸುವುದು ತುಂಬಾ ಖುಷಿ ಕೊಡುತ್ತದೆ.ನನಗೆ ಸಿಹಿ ಪದಾರ್ಥಗಳೆಂದರೆ ತುಂಬಾ ಇಷ್ಟ.ನಾನು ನನ್ನ ಬಿಡುವಿನ ಸಮಯದಲ್ಲಿ ಟಿವಿ ನೋಡುತ್ತೇನೆ,ಪುಸ್ತಕಗಳನ್ನೂ ಓದುತ್ತಿರುತ್ತೇನೆ.ನನಗೆ ಹಳ್ಳಿಯ ವಾತಾವರಣ ತುಂಬಾ ಇಷ್ಟ. ನನ್ನ ಹವ್ಯಾಸಗಳೆಂದರೆ ನೃತ್ಯ ಮಾಡುವುದು, ಹಾಡು ಹಾಡುವುದು ಹಾಗೂ ತೋಟಗಾರಿಕೆ ಮಾಡುವುದು. ನನ್ನ ತಮ್ಮನೊಂದಿಗೆ ಆಟವಾಡುವುದು, ಜಗಳವಾಡುವುದೆಂದರೆ ತುಂಬಾ ಇಷ್ಟ.

ವಿಧ್ಯಾಭ್ಯಾಸ

ಬದಲಾಯಿಸಿ
 

ನಾನು ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಎರಡನ್ನು ಕ್ರೈಸ್ಟ್ ಶಾಲೆಯಲ್ಲಿ ಮುಗಿಸಿದೆ. ಶಾಲಾ ಶಿಕ್ಷಣದ ನಂತರ ನನ್ನ ಮುಂದಿನ ಶಿಕ್ಷಣ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಂದುವರೆಯಿತು. ಈ ಕಾಲೇಜಿನ ವಾತಾವರಣ, ಇಲ್ಲಿ ನಡೆಸುವ ಚಟುವಟಿಕೆ ಎಲ್ಲವೂ ತುಂಬಾ ಇಷ್ಟವಾಯಿತು. ಈಗ ನಾನು ನನ್ನ ಬಿ.ಕಾಂ ಶಿಕ್ಷಣವನ್ನು ಸಹ ಕ್ರೈಸ್ಟ್ ಯೂನಿವರ್ಸಿಟಿ ಓದುತ್ತಿದ್ದೇನೆ. ನನ್ನ ಪೂರ್ತಿ ಶಿಕ್ಷಣವನ್ನು ಕ್ರೈಸ್ಟ್ ಶಿಕ್ಷಣಾ ಸಂಸ್ಥೆಯಲ್ಲೇ ಮುಗಿಸಬೇಕೆಂದು ನಿರ್ಧರಿಸಿದ್ದೇನೆ. ನನಗೆ ಬ್ಯಾಂಕ್ ಮ್ಯಾನೇಜರ್ ಆಗಬೇಕೆಂಬ ಆಸೆಯಿದೆ. ಇದೇ ನನ್ನ ಗುರಿಯಾಗಿದೆ. ಅದಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೆ.ನನ್ನ ಗುರಿ ಸಾಧಿಸಲು ನನ್ನ ಕಾಲೇಜು ಸಹ ಹಲಾವಾರು ರೀತಿಯಲ್ಲಿ ಸಹಾಯ ಮಾಡುತ್ತಿದೆ. ನಮ್ಮ ಕಾಲೇಜಿನಲ್ಲಿ ಕ್ರಿಸ್‍ಮಸ್ ಹಬ್ಬ ವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.ಭಾಷಾ ಉತ್ಸವ್ ಹೀಗೆ ಹಲಾವಾರು ಕನ್ನಡ ಕಾರ್ಯಕ್ರಮಗಳನ್ನು ಮಾಡುತ್ತಾರೆ.ಈ ಕಾರ್ಯಕ್ರಮಗಳೆಲ್ಲಾ ನಮಗೆ ಪಾಠ ಕಲಿಯುವುದರ ಜೊತೆಗೆ ಹಲವಾರು ಚಟುವಟಿಕೆಯಲ್ಲಿ ಭಾಗವಹಿಸಲು ಹಾಗೂ ನಮ್ಮ ನಾಡ ಸಂಸ್ಕ್ರತಿ ಬಗ್ಗೆ ತಿಳಿಯಲು ಒಳ್ಳೆ ಅವಕಾಶ ಮಾಡಿಕೊಡುತ್ತದೆ.

 

ನಾನು ಶಾಲೆಯಲ್ಲಿರುವಾಗ ಎಲ್ಲಾ ಚಟುವಟಿಕೆಯಲ್ಲೂ ಆಸಕ್ತಿಯಿಂದ ಭಾಗವಹಿಸುತ್ತಿದೆ. ನೃತ್ಯ, ಹಾಡು, ಭಾಷಣ ಹೀಗೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದೇನೆ. ನಾನು ಹತ್ತನೇ ತರಗತಿಯಲ್ಲಿದ್ದಾಗ ವಿಜ್ಞಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಆ ಕಾರ್ಯಕ್ರಮಕ್ಕೆ ಎ.ಪಿ.ಜೆ.ಅಬ್ದುಲ್ ಕಲಾಂ ಬಂದಿದ್ದರು. ಅವರ ಕೈಯಿಂದ ನಾನು ಬಹುಮಾನ ಸ್ವೀಕರಿಸಿದೆ. ಅದು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ನನಗೆ ತುಂಬಾ ಸಂತೋಷ ಕೊಟ್ಟಂತಹ ಸಂದರ್ಭವಾಗಿತ್ತು. ನಾನು ಶಾಲೆಯಲ್ಲಿದಾಗ ಅತ್ಯುತ್ತಮ ವಿದ್ಯಾರ್ಥಿನಿ ಎಂಬ ಬಹುಮಾನವನ್ನು ಪಡೆದಿದ್ದೇ.ಇದು ನನ್ನ ಪೋಷಕರಿಗೆ ತುಂಬಾ ಸಂತೋಷವನ್ನು ತಂದುಕೊಟ್ಟಂತಹ ಸಂದರ್ಭವಾಗಿತ್ತು

ನನ್ನ ಕುಟುಂಬವು ೪ ಜನರಿಂದ ಕೂಡಿರುವ ಚಿಕ್ಕದಾದ,ಸಂತೋಷದಿಂದ ಕೂಡಿರುವ ಕುಟುಂಬವಾಗಿದೆ.ನಾನು ನನ್ನ ತಂದೆ,ತಾಯಿ ಹಾಗೂ ನನ್ನ ಪುಟ್ಟ ತಮ್ಮ ನಾವೆಲ್ಲರೂ ಯೂವಾಗಲೂ ನಮ್ಮ ಸುಃಖ ದುಃಖಗಳನ್ನು ಹಂಚಿಕೊಳ್ಳುತ್ತಾ ಸಂತೋಷದಿಂದಿರುತ್ತೇವೆ. ಮನೆಯೇ ಮೊದಲ ಪಾಠಶಲೆ, ತಾಯಿಯೇ ಮೊದಲ ಗುರು ಎಂಬಂತೆ ನನಗೂ ನನ್ನ ತಾಯಿಯೇ ಮೊದಲ ಗುರು .ನಾನು ಏನೇ ಮೊಡಿದರು ಅವರ ಹಿಂದೆ ನನ್ನ ತಾಯಿಯ ಶ್ರಮ ಇದೇ ಇರುತ್ತದೆ. ನನ್ನ ಎಲ್ಲಾ ಕೆಲಸದಲ್ಲೂ ಮಾರ್ಗದರ್ಶನ ನೀಡುತ್ತಾರೆ. ನನಗೆ ನನ್ನ ತಾಯಿಯೇ ನನ್ನ ಮೊದಲ ಸ್ನೇಹಿತೆ. ನಾನು ಏನೇ ತಪ್ಪು ಮೊಡಿದರೂ ನನಗೆ ಆ ತಪ್ಪನ್ನು ಅರಿವು ಮೂಡಿಸುತ್ತಾ ನನ್ನ ಮನಸ್ಸಿಗೆ ನೋವಾಗದ ರೀತಿಯಲ್ಲಿ ನನಗೆ ಸಲಹೆ ನೀಡುತ್ತಾರೆ. ನನ್ನ ತಂದೆಯು ಸಹ ನಾನು ಏನೇ ಮಾಡಿದರೂ ಪ್ರೋತ್ಸಾಹಿಸುತ್ತಾರೆ. ಅವರು ಯಾವಾಗಲೂ ನನಗೆ ನನ್ನ ಕೆಲಸಗಳನ್ನು ಸ್ವತಂತ್ರವಾಗಿ ಯಾರ ಸಹಾಯವಿಲ್ಲದೆ ಮಾಡುತ್ತಾ ಉಂಟಾಗುವ ತೊಂದರೆಗಳನ್ನು ಎದುರಿಸಬೇಕೆನ್ನುತ್ತಿರುತ್ತಾರೆ. ಈ ಮೂಲಕ ನನಗೆ ಧೈರ್ಯ ತುಂಬುತ್ತಾರೆ.ನನ್ನ ತಮ್ಮ ತುಂಬಾ ತುಂಟ ನಾನು ಅವನೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ.ನಾನು ಅವನೊಂದಿಗೆ ಜಗಳವಾಡುತ್ತಾ ತಮಾಷೆ ಮಾಡುತ್ತಿದ್ದರೆ ನನ್ನ ಎಲ್ಲಾ ನೋವು ದುಃಖಗಳನ್ನು ನಾನ ಮರೆಯುತ್ತೇನೆ.ನಾನು ಯೊರೊಂದಿಗೂ ಬೇಗ ಬರೆಯುವುದಿಲ್ಲ ಬೆರೆಯಲು ಸಮಯ ತೆಗೆದುಕೊಳ್ಳುತ್ತೆನೆ. ನಾನು ತುಂಬಾ ಸೂಕ್ಷವಾದ ಹುಡುಗಿ ಯವುದೇ ವಿಷಯವನ್ನಾಗಲಿ ತುಂಬಾ ಯೋಚಿಸುತ್ತೇನೆ.

ನಾನು ನನ್ನ ಸ್ನೇಹಿತರೊಂದಿಗೆ ಕಾಲೇಜಿನಲ್ಲಿ ತುಂಬಾ ಸಂತೋಷದಿಂದ ನಲಿಯುತ್ತಾ ,ತುಂಟತನ ಮತ್ತು ತಮಾಷೆ ಮೊಡುತಿರುತ್ತೇನೆ. ನಮಗೆಲ್ಲರಿಗೊ ಫ಼ೋಟೋ ತೆಗೆದುಕೊಳ್ಳುವುದೆಂದರೆ ತುಂಬಾ ಇಷ್ಟ ನಮ್ಮ ಬಿಡುವಿನ ಸಮಯದಲೆಲ್ಲಾ ಕಾಲೇಜನ್ನು ಸುತ್ತಾಡುತ್ತಾ ಫ಼ೋಟೋ ತೆಗೆದುಕೊಳ್ಳುತ್ತೇವೆ. ನಾನು ಕಾಲೇಜಿನಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುವಾಗಲೆಲ್ಲಾ ಸಂತೋಷದಿಂದ ಮರೆಯಲಾಗದ ಒಂದೊಂದು ನೆನಪುಗಳನ್ನು ಮಾಡೀಕೊಳ್ಳುತೇವೆ. ನನ್ನ ಸ್ನೇಹಿತರು ನನ್ನ ಎಲ್ಲಾ ಸುಃಖ ಹಾಗೂ ದುಃಖ ಎರಡೂ ಸಂದರ್ಭದಲ್ಲೂ ನನ್ನ ಜೊತೆಗಿರುತ್ತಾರೆ.ನಾನು ಒಳ್ಳೆಯ ಸ್ನೇಹಿತರನ್ನು ಸಂಪಾದಿಸಿದ್ದೇನೆಂಬ ತೃಪ್ತಿ ನನ್ನಲ್ಲಿದೆ

 

ಪ್ರವಾಸ ಹೋಗುವುದೆಂದರೆ ತುಂಬಾ ಇಷ್ಟ ನಾನು ೧೦ನೇ ತರಗತಿಯಲ್ಲಿದ್ದಾಗ ನಮ್ಮ ಶಾಲೆಯಲ್ಲಿರುವಾಗ ಕೇರಳ ಹಾಗೊ ಕನ್ಯಾಕುಮಾರಿಗೆ ೫ ದಿನಗಳ ಪ್ರವಾಸ ಕೈಗೊಂಡಿದ್ದರು ನಾನು ಹೋಗಿದ್ದೇ ಅಲ್ಲಿ ನಾವು ಹಲವಾರು ಸಮುದ್ರಗಳನ್ನು, ಹಾಗೂ ದೇವಸ್ಥಾನಗಳಿಗೆ ಹೋಗಿದ್ದೆವು ಈ ಪ್ರವಾಸವು ನನಗೆ ತುಂಬಾ ಸಂತೋಷವನ್ನು ತಂದು ಕೊಟ್ಟಿತ್ತು ನಾನು ನನ್ನ ಸ್ನೇಹಿತರೊಂದಿಗೆ ಹಲವಾರು ಆಟಗಳನ್ನು ಆಡುತ್ತಾ ಸಂತೋಷದಿಂದ ನನ್ನ ಪ್ರವಾಸದ ದಿನಗಳನ್ನು ಕಳೆದೆ. ನಾನು ನನ್ನ ಬಿ.ಕಾಮ್ ಮೊದಲ ಸೆಮಿಸ್ಟರನಲ್ಲಿ ಹಳ್ಳಿ ವೀಕ್ಷಣೆಗೆಂದು ೨ ದಿನ ಕರೆದುಕೊಂದುಹೋಗಿದ್ದರು . ಇದರಿಂದ ನನಗೆ ಹಳ್ಳಿಯ ವಾತಾವರಣ, ಅವರ ಅಭಿರುಚಿ ಹಾಗೂ ಅವರು ಬೆಳೆಯುವ ಬೆಳೆಗಳ ಬಗ್ಗೆ ತಿಳಿಯಲು ಸಹಾಯವಾಯಿತು. ನಾನು ಈ ಪ್ರವಾಸವು ನನಗೆ ಒಳ್ಳೆಯ ಸ್ನೇಹಿತರನ್ನು ಮಾಡಿಕೊಳ್ಳಲು ನೆರವಾಯಿತು. ಈ ರೀತಿ ಪ್ರವಾಸ ಕೈಗೊಳ್ಳುವುದೆಂದರೆ ತುಂಬಾ ಇಷ್ಟ.