Manoj
    
                                                                                        ಕುಟುಂಬ                                                                                            ನನ್ನ ಹೆಸರು ಮನೋಜ್ ಕುಮಾರ್ ಎಂ.ನಾನು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಚಿನ್ನಪಲ್ಲಿ ಎಂಬ ಹೆಸರಿನ ಚಿಕ್ಕ ಗ್ರಾಮದಲ್ಲಿ  ೦೬/೦೭/೧೯೯೯ ರಂದು ಜನಿಸಿದೆ. ನನ್ನ ತಂದೆ-ತಾಯಿ ಶ್ರೀಯುತ ಮಂಜುನಾಥ್ ಮತ್ತು ಶ್ರೀಮತಿ ಲಲಿತಮ್ಮ ದಂಪತಿಗಳ ಮಗನಾಗಿ ಜನಿಸಿದೆನು.ನನ್ನಗೆ ಗೌತಮಿ ಎಂಬ ಹೆಸರಿನ ತಂಗಿ ಸಹ ಇದ್ದಳೆ.ವ್ಯವಸಾಯವೇ ನಮ್ಮ ತಂದೆ ಮತ್ತು ತಾಯಿಯ ಕೆಲಸವಾಗಿದೆ.   

ವಿದ್ಯಾಭ್ಯಾಸ

      ನಾನು ನನ್ನ ಬಾಲ್ಯದ ಶಿಕ್ಷಣವನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಬಳಿಯ ಸಿಲ್ಕ್ ಪಾರಂ ಎಂಬ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ ೦೧ ರಿಂದ ೦೫ ನೇ ತರಗತಿಯವರೆಗೆ ಓದಿದೆನು. ಆ ನಂತರ ನನ್ನ ಮುಂದಿನ ವಿದ್ಯಾಭ್ಯಾಸವನ್ನು   ನಮ್ಮ ಸ್ವತಃ ಊರದ ಆಂಧ್ರ ಪ್ರದೇಶದ  ಚಿನ್ನಪಲ್ಲಿಯಲ್ಲಿ  ಮುುಂದುವರಿಯಿತು.  ಚಿನ್ನಪಲ್ಲಿಯು ಕನಾ೯ಟಕಕ್ಕೆ ಹತೀರವಿದ್ದುದರಿಂದ ನಾವು ನಮ್ಮ ಓದನ್ನು ಸಹ ಕನಾ೯ಟಕದಲ್ಲಿ ಓದುತ್ತಿದೆವು. ನಂತರ ನನ್ನ ಮುಂದಿನ ಪ್ರಾಥಮಿಕ ಶಿಕ್ಷಣವನ್ನು  ಕೋಲಾರ ಜಿಲ್ಲೆಯ ರಾಯಲ್ಪಡ್ ಸಮೀಪದ ಆಶ್ರಯ ನೀಲ್ ಬಾಗ್ ಹೈಸ್ಕೂಲಿನಲ್ಲಿ ಎಂಬ ಕನ್ನಡ ಮಾದ್ಯಮ ಶಾಲೆಯಲ್ಲಿ ೦೫ನೇ ತರಗತಿಯಿಂದ ನನ್ನ ಹತ್ತನೆಯ ತರಗತಿಯವರೆಗೂ ನಮ್ಮ ಸ್ವತಃ ಮನೆಯಿಂದ ಶಾಲೆಗೆ ಹೋಗುತ್ತ ವ್ಯಾಸಂಗ ಮಾಡಿದೆನು.ನಮ್ಮ ತಾತ ಮತ್ತು ಅಜ್ಜಿಯವರು ನನ್ನನ್ನು ಚೆನ್ನಾಗಿ ನೋಡಿಕೊಂಡರು.                                                                     ಹವ್ಯಾಸಗಳು:-  ನನ್ನ ಹವ್ಯಾಸಗಳಂದರೆ ಓದುವುದು,ಟಿವಿ ನೋಡುವುದು,ಸೈಕಲ್ ಸವಾರಿ ಮಾಡುವುದೆಂದರೆ ನನಗೆ ತುಂಬಾ ಇಷ್ಟ.                                                                                                              

ಪ್ರವಾಸ

               ಹತ್ತನೇಯ ತರಗತಿ ಪ್ರಾರಂಭದಲ್ಲಿ ನಾನು ಮತ್ತು ನನ್ನ ಗೆಳೆಯರು ಮೈಸೂರು ಪ್ರವಾಸವನ್ನು ಶಿಕ್ಷಕರೊಂದಿಗೆ ಹೋಗಿದೆವು.ಮೈಸೂರಿನ ಅರಮನೆಯ ಸೊಬಗನ್ನು ಕಂಡು ನಾವು ತುಂಬಾ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದೆವು.ನಂತರ ಮೈಸೂರಿನ ಪ್ರಸಿದ್ಧ ಸ್ಥಳಗಳಾದ ಶಿವನ ಸಮುದ್ರ,ಮೈಸೂರು ಜ್ಯ್ ನೋಡಿ ಸಂತೋಷಪಟ್ಟೆವು.ಕೊನೆಗೆ ನಾಡ ದೇವತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಮನೆಯ ಕಡೆ ನಾವು ಹಿಂದಿರುಗಿದೆವು.ಕೆಲವು ದಿನಗಳಲ್ಲಿಯೆ ಪರೀಕ್ಷೆಗಳು ಪ್ರಾರಂಭವಾಗಲರಂಬಿಸಿದವು ಅದ್ದರಿಂದ ಎಲ್ಲರೂ ನೀಲ್ ಬಾಗ್ ಶಾಲೆಯ ಹಾಸ್ಟೇಲ್ ನಲ್ಲಿ ೦೫ ತಿಂಗಳುಗಳ ಕಾಲ ಇದ್ದೆವು.ನಂತರ ಎಲ್ಲರೂ ಓದಿನಲ್ಲಿ ಆಸಕ್ತಿ ತೋರಿದರು ಅದ್ದರಿಂದ ಎಲ್ಲರೂ ಪಾಸದೇವು. ಅಲ್ಲದೆ ಈ ಶಾಲೆಯಲ್ಲಿನ ಶಿಕ್ಷಕರು ಬಹಳ ಚೆನ್ನಾಗಿ ಬೋಧನೆಯನ್ನು ಮಾಡುತ್ತಿದ್ದರು ಅದ್ದರಿಂದ ನಾನು ಸಹ "ಎಸ್,ಎಸ್,ಎಲ್,ಸಿ"ಯಲ್ಲಿ ೬೨೫ ಕ್ಕೆ ೫೨೨ ಅಂಕ ಪಡೆಯುವುದರ ಮೂಲಕ ಪಾಸದೆನು.ಈ ಶಾಲೆಯು ನನಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಗೆಳೆಯ ಗೆಳತಿಯರನ್ನು ನೀಡಿತು.ನಾನು ಯಾವಗಲು ಚೀರುರುಣಿಯಾಗಿರುತೇನೆ.                                                                     

ಕಾಲೇಜು ದಿನಗಳು:-

          ನಂತರ ಮುಂದಿನ ಪಿಯುಸಿ ವಿದ್ಯಾಭ್ಯಾಸವನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿಕ್ಷಣ ಟ್ರಸ್ಟಿನ " ಶ್ರೀ ಭೈರವೇಶ್ವರ ರೂರಲ್ ಕಾಂಪೋಸೈಟ್ ಪಿ,ಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಯನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಬಹಳ ಕಷ್ಟಪಟ್ಟು ಓದಿದೆನು.ನನಗೆ ಅಖಿಲೇಶ್,ದಿಲೀಪ್,ಕಾತೀ೯ಕ್,ಹರೀಶ್, ಲೋಕೇಶ್, ಅಶೋಕ್ ಎಂಬ ಒಳ್ಳೆಯ ಗೆಳೆಯರು ಸಹ ಇದ್ದಾರೆ. ನಂತರ ದ್ವೀತಿಯ ಪಿಯುಸಿಯಲ್ಲಿ ೬೦೦ ಕ್ಕೂ ೫೫೧ ಅಂಕಗಳನ್ನು ಗಳಿಸಿ ಪಾಸಗಿದ್ದೆನೆ.ನನ್ನ  ಗೆಳೆಯರು ಸಹ ಒಳ್ಳೆಯ ಅಂಕಗಳನ್ನು ಗಳಿಸಿ ಮುಂದಿನ ವಿದ್ಯಾಭ್ಯಾಸವನ್ನು ಮಾಡುತಿದ್ದರೆ.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ನೆಲೆಸಿದ್ದನೆ.

ಪ್ರಶಸ್ತಿಗಳು                                                                            

         ದ್ವಿತೀಯ ಪಿಯುಸಿಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದವರಿಗೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಪ್ರತಿಭ ಪುರಸ್ಕಾರವನ್ನು 
ಭಾರತದಲ್ಲಿ ಉತ್ತಮ ಗುಣಮಟ್ಟದ ಪದವಿ ಶಿಕ್ಷಣವನ್ನು ನೀಡುವ ಪ್ರಪ್ರಥಮ ವಿಶ್ವ ವಿದ್ಯಾನಿಲಯವಾಗಿದೆ.

ಶ್ರೀಶ್ರೀಶ್ರಿ ಭೈರವೈಕ್ಯ ಡಾ||ನಿರ್ಮಾಲನಂದ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಾನು ಸಹ ಪಡೆದು ಕೊಂಡಿರುತ್ತೆನೆ.ನಾನು ಹತ್ತನೆಯ ತರಗತಿಯಲ್ಲಿ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆನೆ. ದ್ವಿತೀಯ ಪಿಯುಸಿ ನಂತರ ನನ್ನ ತಂದೆಯ ಸಲಹೆಯ ಮೇರೆಗೆ ಮತ್ತೆ ಬೆಂಗಳೂರಿಗೆ ಹಿಂದಿರುಗಿ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನಾನು ನನ್ನ ಬಿಕಾಂ ಪದವಿಯನ್ನು ಮುಂದುವರಿಸುತಿದ್ದೆನೆ.