ಲಿಪಿಡ್ ಗಳು

ಬದಲಾಯಿಸಿ

ಕೋಶರಚನೆ ಮತ್ತು ಕೆಲಸದಲ್ಲಿ ಮುಖ್ಯ ಪಾತ್ರವಹಿಸುವ ಲಿಪಿಡ್ ಗಳು ದೊಡ್ಡಗಾತ್ರ ಅಣುಗಳ ಇನ್ನೊಂದು ಗುಂಪು.ಇವು ಒದಗಿಸುವ ಶಕ್ತಿ ಪ್ರಬಲ. ಅಷ್ಟೇ ತೂಕದ ಪ್ರೋಟೀನ್ ಅಥವಾ ಕಾರ್ಬೋಹೈಡ್ರೇಟಿನಿಂದ ಲಭ್ಯ ಕೆಲೊರಿಗಳ ಎರಡರಷ್ಟು.ಬಹಳಷ್ಟು ಜೀವಿಗಳು ಲಿಪಿಡ್ ರೂಪದಲ್ಲಿ ಆಹಾರ ಸಂಗ್ರಹಿಸುತ್ತವೆ.ಲಿಪಿಡ್ ಜೀವಂತ ಊತಕಗಳಲ್ಲಿ ಅಡಕವಾಗಿರುವ ತೈಲ,ಕೊಬ್ಬುಮೇಣ ಮೊದಲಾದವು. ಹಲವು ಸಸ್ಯಗಳ ಬೀಜಗಳು ಲಿಪಿಡ್ ಗಳನ್ನು ತಮ್ಮ ಭ್ರೂಣಗಳಿಗಾಗಿ ಆಹಾರವಾಗಿ ದಾಸ್ತಾನಿಸುತ್ತವೆ.ಮೂಳೆ ಮಜ್ಜ, ಚರ್ಮದಡಿ ಅಂಗಾಂಶಗಳು ಮತ್ತು ದೇಹದ ಅಂಗಗಳ ಸುತ್ತ ಊತಕಗಳು ದಾಸ್ತಾನಿಸಿದ ಲಿಪಿಡ್ ಗಳನ್ನು ಹೊಂದಿರುತ್ತವೆ.ಲಿಪಿಡ್ ಗಳು ತೈಲ ಅಣುಗಳು.ನೀರು ಇಷ್ಟಪಡುವುದಿಲ್ಲ.ನೀರಿನಲ್ಲಿ ಕರಗುವುದಿಲ್ಲ.ತೈಲಯುತ ಅಥವಾ ಜಿಡ್ಡುಳ್ಲ ಸಾವಯವ ವಸ್ತುಗಳು ಅಧ್ರುವೀಯ ದ್ರಾವಕಗಳು ಬಳಸಿ (ಉದಾ:ಕ್ಲೋರೋಫಾರಂ,ಈಥರ್) ಕೋಶಗಳು ಮತ್ತು ಊತಕಗಳಿಂದ ತೆಗೆಯಬಹುದು.ಹೆಚ್ಚು ಧಾರಾಳವಾಗಿ ಕಂಡುಬರುವ ಲಿಪಿಡ್ ಗಳು ಬಹಳಷ್ಟು ಜೀವಿಗಳಿಗೆ ಪ್ರಮುಖ ಇಂಧನವಾಗಿರುವ ಮೇದಸ್ಸುಗಳು ಇವು ರಾಸಾಯನಿಕ ಶಕ್ತಿಯನ್ನು ಮುಖ್ಯವಾಗಿ ಸಂಗ್ರಹಿಸಿಟ್ಟುಕೊಂಡಿರುತ್ತವೆ.

ಲಿಪಿಡ್‍ಗಳ ರಚನೆ

ಬದಲಾಯಿಸಿ

ಲಿಪಿಡ್ ಗಳ ಇನ್ನೊಂದು ವರ್ಗ ಕೋಶಪೊರೆಗಳ ಮುಖ್ಯ ಭಾಗಗಳಾಗಿರುವ ಧ್ರುವೀಯ ಲಿಪಿಡ್ ಗಳು ಒಳಗೊಂಡಿರುವುದಾಗಿದೆ. ಹಲವು ವರ್ಗಗಳ ಲಿಪಿಡ್ ಗಳಿವೆ.ಪ್ರತಿಯೊಂದೂ ನಿರ್ದಿಷ್ಟ ಜೀವಶಾಸ್ತ್ರೀಯ ಕೆಲಸ ಹೊಂದಿದೆ.ಮೇದಾಮ್ಲಗಳು ನಿರ್ಮಾಣ ವಸ್ತುಗಳು.ನಾಲ್ಕರಿಂದ ಇಪ್ಪತ್ನಾಲ್ಕು ಇಂಗಾಲ ಅಣುಗಳಿರುವ ದೀರ್ಘ ಸರಪಳಿ ಸಾವಯವ ಆಮ್ಲಗಳು ಈ ಮೇದಾಮ್ಲಗಳು.ಅವು ಬಹುತೇಕ ಎಲ್ಲ ಸರಿ ಸಂಖ್ಯೆಯ ಇಂಗಾಲ ಅಣುಗಳುಳ್ಳವು.ಲಿಪಿಡ್ ಗಳಿಗೆ ನೀರಿನಲ್ಲಿ ಕರಗದ ಗುಣ ಹಾಗೂ ತೈಲ ಸ್ವರೂಪ ಕೊಡುತ್ತವೆ.೧೬ ಮತ್ತು ೧೮ ಇಂಗಾಲದ ಅಣುಗಳೊಂದಿಗೆ ಇರುವಂಥವು ಹೆಚ್ಚು ಲಭ್ಯ.ಲಿಪಿಡ್ ಗಳಲ್ಲಿ ಎರಡು ವರ್ಗಗಳಿವೆ.ಈ ವರ್ಗಗಳು ಅವುಗಳ ರಚನೆಗನುಗುಣವಾಗಿರುತ್ತವೆ.

ವಿಧಗಳು

ಬದಲಾಯಿಸಿ

ಸರಳ ಲಿಪಿಡ್ ಗಳು

ಬದಲಾಯಿಸಿ

ಇವು ಕೇವಲ ಇಂಗಾಲ,ಹೈಡ್ರೋಕಾರ್ಬನ್ ಮತ್ತು ಆಕ್ಸಿಜನ್ ಒಳಗೊಂಡಿರುತ್ತವೆ.ಬದಲಾಗಬಲ್ಲ ಹಲವು ಇಂಗಾಲ ಅಣುಗಳನ್ನು ಹೊಂದಿರುವ ಕೆಲವು ಸಾವಯವ ಆಮ್ಲಗಳೊಂದಿಗೆ ಸಂಯೋಜನೆ ಹೊಂದಿದ ಆಲ್ಕೋಹಾಲ್ ನ್ನು ಉಳ್ಲವು.ಟ್ರೈಗ್ಲಿಸರೈಡ್ ಗಳು(ಮೇದಸ್ಸು) ಅತ್ಯಂತ ಸಾಮಾನ್ಯ ವಿಧದ ಸರಳ ಲಿಪಿಡ್ ಇವು ಗ್ಲಿಸರಾಲ್ಎನ್ನಲಾಗುವ ಆಲ್ಕೋಹಾಲಿನ ಒಂದು ಅಣುವನ್ನು ಮತ್ತು ಮೇದಾಮ್ಲದ ಮೂರು ಅಣುಗಳನ್ನು ಹೊಂದಿರುತ್ತವೆ.ಮೇದಸ್ಸುಗಳು ಬೆಣ್ಣೆ,ಹಂದಿಕೊಬ್ಬು,ದನದ ಮಾಂಸ,ತಿಮಿಂಗಲದ ಕೊಬ್ಬು,ಹರಳೆಣ್ಣೆ,ಕೊಬ್ಬರಿ ಎಣ್ಣೆ ಮತ್ತು ಆಲಿವ್ ಎಣ್ಣೆ.ಮೇಣಗಳು ಇನ್ನೊಂದ ಗುಂಪು.ಗ್ಲಿಸರಾಲ್ ಅಣುವಿಗಿಂತ ದೊಡ್ಡದಾದ ಆಲ್ಕೋಹಾಲ್ ಅಣುವನ್ನು ಹೊಂದಿರುತ್ತದೆ.ಟ್ರೈಗ್ಲಿಸರೈಡ್ ಗಳು ಸಸ್ಯ ಮತ್ತು ಪ್ರಾಣಿ ಕೋಶಗಳಲ್ಲಿನ ದಾಸ್ತಾನು ಕೊಬ್ಬಿನ ಮುಖ್ಯ ಘಟಕಗಳು.ಆದರೆ ಪೊರೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದಿಲ್ಲ.ಎರಡು ಅಥವಾ ಹೆಚ್ಚು ವಿವಿಧ ಮೇದಾಮ್ಲಗಳನ್ನು ಹೊಂದಿರುವ ಟ್ರೈಗ್ಲಿಸರಾಲ್ ಗಳನ್ನು ಮಿಶ್ರ ಟ್ರಯಾಸಿಲ್ ಗ್ಲಿಸರಾಲ್ ಗಳೆನ್ನುವರು.ಬಹುತೇಕ ಪ್ರಾಣಿ ಮತ್ತು ಸಸ್ಯಕೋಶಗಳಲ್ಲಿ ಟ್ರಯಾಸಿಲ್ ಗ್ಲಿಸರಾಲ್ ಗಳು ತೈಲತೊಟ್ಟುಗಳಂತೆ ಇರುತ್ತವೆ.ಬಹು ಮೊತ್ತದ ಟ್ರಯಾಸಿಲ್ ಗ್ಲಿಸರಾಲ್ ಗಳು ಕೊಬ್ಬು ಕೋಶಗಳಲ್ಲಿ ಅಡಕವಾಗಿರುತ್ತವೆ.ಸ್ಥೂಲಕಾಯವಿರುವ ಜನರಲ್ಲಿ ದೇಹದ ಕೊಬ್ಬು ಕೋಶಗಳಲ್ಲಿ ಎಷ್ಟೋ ಕೆ,ಜಿ,ಗಳಷ್ಟು ಟ್ರಯಾಸಿಲ್ ಗಳು ಶೇಖರವಾಗಿರುತ್ತವೆ.ನಮ್ಮಶರೀರ ಗ್ಲೈಕೋಜನ್ ರೂಪದಲ್ಲಿ ಒಂದು ದಿನದ ಶಕ್ತಿ ಸರಬರಾಜಿಗಿಂತ ಕಡಿಮೆ ದಾಸ್ತಾನು ಮಾಡಬಲ್ಲದು.ಟ್ರಯಾಸಿಲ್ಗ್ ಗ್ಲಿಸರಾಲ್ಗಳೋ ಕಾರ್ಬೋಹೈಡ್ರೇಟ್ ಗಳಾಗಿ ಗ್ರಾಮಿಗೆ ಗ್ರಾಮ್ ನಷ್ಟು ಎರಡರಷ್ಟು ಹೆಚ್ಚು ಶಕ್ತಿಯನ್ನು ನೀಟುತ್ತವೆ.ಕೆಲವು ಪ್ರಾಣಿಗಳಲ್ಲಿ ಟ್ರಯಾಸಿಲ್ ಗಳು ಚರ್ಮದಡಿ ಶೇಖರಗೊಂಡು ಎರಡು ಉದ್ದೇಶಗಳನ್ನು ಪೂರೈಸುತ್ತವೆ.ಮೇಣಗಳು ಸರಳ ವರ್ಗದ ಲಿಪಿಡ್ ಗಳೇ,ಕಶೇರುಕಗಳಲ್ಲಿವಿಸಿ ಮೇಣಗಳು ಚರ್ಮ ಗ್ರಂಥಿಗಳಿಂದ ಸ್ರವಿಸಿ ಚರ್ಮಕ್ಕೆ ಒಂದು ವಿಘರ್ಷಣ ಶಕ್ತಿ ಮತ್ತುಜಲಾಭೇದ್ಯ ಶಕ್ತಿಯ ರಕ್ಷಣಾ ಲೇಪದಂತಿರುತ್ತವೆ.ಕೂದಲು,ಉಣ್ಣೆ ಮತ್ತುತುಪ್ಪಳ ಇವೂ ಕೂಡ ಮೇಣಸ್ರವಗಳಿಂದ ಲೇಪಿತ.ಹಕ್ಕಿಗಳು,ಕೆಲವು ಮೇಣಗಳಾನ್ನು ಸ್ರವಿಸುತ್ತವೆ.ಅವುಗಳ ಪುಕ್ಕ ಜಲವಿಕರ್ಷಕಗಳಾಗುತ್ತದೆ.ಹಲವು ಸಸ್ಯಗಳ ಎಲೆಗಳು ಮೇಣಗಳ ರಕ್ಷಣಾ ಲೇಪದೊಂದಿಗಿರುತ್ತವೆ.ಸಾಗರಗಳಲ್ಲಿನ ಆಹಾರ ಸರಪಳಿಗಳಲ್ಲಿ ಮೇಣಗಳು ಮುಖ್ಯ ಆಹಾರ ಹಾಗೂ ಲಿಪಿಡ್ ಗಳ ಉಘ್ರಾಣ.

ಜಟಿಲ ಲಿಪಿಡ್ ಗಳು (ಸಂಕೀರ್ಣ)

ಬದಲಾಯಿಸಿ

ಇವು ಇಂಗಾಲ ಅಣುಗಳ ನಾಲ್ಕು ವರ್ತುಲಗಳಿಂದ ಮಾಡಿದ ರಂಜಕ, ಸ್ಟಿರಾಯ್ಡ ಉಳ್ಳ ಫಾಸ್ಫೋ ಲಿಪಿಡ್ ಗಳನ್ನೊಳಗೊಂಡಿವೆ.ಜತೆಗೆ ಒಂದು ಅಥವಾ ಹೆಚ್ಚು ಶರ್ಕರ ಅಣುಗಳೊಂದಿಗಿನ ಲಿಪಿಡ್ಗ ಳಿರುವ ಸಸ್ಯ ಗಳಂಥ ಇತರ ಸಂಯುಕ್ತಗಳೂ ಹೊಂದಿರುತ್ತವೆ.ಇತರ ಜಟಿಲ ಲಿಪಿಡ್ ಗಳು(ಸಂಕೀರ್ಣ) ಜೀವಸತ್ವದಡಿ,ಎ,ಇ,ಮತ್ತು ಕೆ ಹಾಗೂ ಟೆರ್ಪೀನ್ ಗಳು ಮತ್ತು ಕೆರೊಟಿನ್ ನಂತಹ ಹಳದಿ ವರ್ಣದ್ರವ್ಯಗಳಂತಹ ಮೇದಸ್ಸು ಕರಗುವ ವಿಟಮಿನ್ ಗಳನ್ನೊಳಗೊಳ್ಳುತ್ತವೆ.ಫಾಸ್ಫೋಲಿಪಿಡ್ ಗಳು ಎಲ್ಲಾ ಬ್ಯಾಕ್ಟೀರಿಯಾ ಮತ್ತು ಸಸ್ಯ ಹಾಗೂ ಪ್ರಾಣಿಗಳ ಎಲ್ಲ ಕೋಶಗಳಲ್ಲಿ ಕಂಡುಬರುತ್ತವೆ.ಅವು ಮೊಟ್ಟೆಗಳು,ವೀರ್ಯ,ಭ್ರೂಣಗಳು ಮತ್ತು ಮೆದುಳು ಕೋಶಗಳಲ್ಲಿ ಹೆಚ್ಚು.ಫಾಸ್ಫೋಲಿಪಿಡ್ ಅಣು ಗ್ಲಿಸರಾಲಿನ ಒಂದು ಅಣು,ಒಂದು ಫಾಸ್ಫೇಟ್ ಅಯಾನು ಮತ್ತು ಮೇದಾಮ್ಲದ ಎರಡು ಅಣುಗಳು ಹೊಂದಿರುತ್ತವೆ.ಬಹುತೇಕ ಫಾಸ್ಫೋಲಿಪಿಡ್ ಗಳು ವಿಟಮಿನ್ ಬಿ-ಕಾಂಪ್ಲೆಕ್ಸನಲ್ಲಿ ಕಂಡುಬರುವ ಒಂದು ವಸ್ತು ಐನೊಸಿಟಾಲ್ ಹಂದಿರುತ್ತವೆ.ಪೊರೆಗಳಲ್ಲಿ ಕಂಡುಬರುವ ಪ್ರಮುಖ ಫಾಸ್ಫೋಲಿಪಿಡ್ ಗಳು ಫಾಸ್ಫೋಗ್ಲಿಸರೈಡ್ ಗಳು.ಪೊರೆಲಿಪಿಡ್ ಗಳ ಎರಡನೇ ಅತ್ಯಂತ ದೊಡ್ಡ ವರ್ಗ ಸ್ಫಿಂಗೋಲಿಪಿಡ್ ಗಳು.ಇವು ಗ್ಲಿಸರಾಲ್ ಹೊಂದಿರುವುದಿಲ್ಲ.ಇವು ದೀರ್ಘ ಸರಪಳಿ ಅಮೈನೊ ಆಲ್ಕೋಹಾಲ್,ಸ್ಫಿಂಗೊಸಿನ್ ನ ಒಂದು ಅಣು ಇಲ್ಲವೇ ಅದರ ಉತ್ಪನ್ನಗಳಲ್ಲೊಂದು ಹಾಗೂ ಒಂದು ಆಲ್ಕೋಹಾಲ್ ನಿಂದಾಗಿರುತ್ತವೆ.ಈ ಸ್ಫಿಂಗೋಸಿನ್ ವಿವಿಧ ಸ್ಫಿಂಗೋಲಿಪಿಡ್ ಗಳಲ್ಲಿ ಕಂಡುಬರುವ ಹಲವು ದೀರ್ಘಸರಪಳಿ ಅಮೈನೊ ಆಲ್ಕೋಹಾಲ್ ಗಳ ಮಾತ್ರ ಸಂಯುಕ್ತ ವಸ್ತು. ಕೋಶಗಳೂ ಕೂಡ ಮೇದಾಮ್ಲಗಳಿರದ ಲಿಪಿಡ್ ಗಳನ್ನು ಹೊಂದಿರುತ್ತವೆ.ಯಯಹೀಗಾಗಿ ಅವು ಸಾಬೂನುಗಳು ರೂಪಿಸುವುದಿಲ್ಲ.ಅಂತಹ ಲಿಪಿಡ್ ಗಳು ಎರಡು ಮುಖ್ಯ ವರ್ಗಗಳಲ್ಲಿವೆ.

  1. ಸ್ಟಿರಾಯ್ಡಗಳು
  2. ಟೆರ್ಪೀನ್ ಗಳು

ಇವೆರದೂ ಸಂಕೀರ್ಣ ಲಿಪಿಡ್ ಗುಂಪಿನವೇ.

ಉಲ್ಲೇಖ

ಬದಲಾಯಿಸಿ
Topik, Steven. The World That Trade Created. Routledge. Retrieved January 27, 2016.