ಸಾವಯವ ರಸಾಯನಶಾಸ್ತ್ರದಲ್ಲಿ, ಹೈಡ್ರೋಕಾರ್ಬನ್ ಒಂದು ಸಾವಯವ ಸಂಯುಕ್ತವಾಗಿದ್ದು ಪೂರ್ಣವಾಗಿ ಜಲಜನಕ ಮತ್ತು ಆಮ್ಲಜನಕಗಳಿಂದ ಉಂಟಾಗಿವೆ. ಹೈಡ್ರೋಕಾರ್ಬನಗಳಿಂದ ಒಂದು ಹೈಡ್ರೋಜೆನನ್ನು ತೆಗೆದಾಗ ಉಂಟಾಗುವ ಕಾರ್ಯಕಾರಿ ಗುಂಪು ಹೊಂದಿರುವ ಸಂಯುಕ್ತಗಳನ್ನು ಹೈಡ್ರೋಕಾರ್ಬೈಲ್ ಗಳೆಂದು ಕರೆಯುತ್ತಾರೆ.ಹೈಡ್ರೋಕಾರ್ಬನಗಳಲ್ಲಿ ಹಲವು ವಿಧಗಳಿವೆ, ವಾಸನೆಯುಕ್ತ ಅರೋಮ್ಯಾಟಿಕ್ ಹೈಡ್ರೋಕಾರ್ಬನಗಳು, ಅಲ್ಕೇನಗಳು, ಅಲ್ಕೀನಗಳು,ಅಲ್ಕೈನಗಳು ಹಾಗೂ ಸೈಕ್ಲೋಅಲ್ಕೇನಗಳಾಗಿವೆ.

ಐಸೋಬುಟನಾಲ್
ಮಿಥೇನ್

ಸಾಮಾನ್ಯವಾಗಿ ಭೂಮಿಯ ಮೇಲೆ ಕಂಡು ಬರುವ ಹೈಡ್ರೋಕಾರ್ಬನನ ಮೂಲ ಕಚ್ಚಾ ತೈಲವಾಗಿದೆ, ಅದು ಅನೇಕ ಸಾವಯವ ವಸ್ತುಗಳ ಕೊಳೆಯುವಿಕೆಯಿಂದ ಉಂಟಾಗುವುದಲ್ಲದೇ, ಜಲಜನಕ ಹಾಗೂ ಆಮ್ಲಜನಕಗಳು ಭಾರಿ ಪ್ರಮಾಣದಲ್ಲಿ ಕೆಟನೀಕರಣ ವಿಧಾನದಿಂದಾದ ಬಂಧಗಳಿಂದ ಅನೇಕ ಸರಪಣಿಗಳ ಸೇರುವಿಕೆಯಿಂದ ಉಂಟಾಗಿದೆ.

ಹೈಡ್ರೋಕಾರ್ಬನಗಳ ವಿಧಗಳುಸಂಪಾದಿಸಿ

IUPAC ರೀತಿಯ ಸಾವಯವ ಸಂಯುಕ್ತಗಳ ನಾಮಕರಣದ ಆಧಾರವಾಗಿ ಈ ಕೆಳಗಿನಂತೆ ಹೈಡ್ರೋಕಾರ್ಬಗಳನ್ನು ವಿಂಗಡಿಸಬಹುದಾಗಿದೆ.

 1. ಸಂತೃಪ್ತ ಹೈಡ್ರೋಕಾರ್ಬಗಳು(ಅಲ್ಕೇನಗಳು) ಅತೀ ಸರಳವಾದ ಹೈಡ್ರೋಕಾರ್ಬನಗಳಾಗಿವೆ.ಈ ಸಂಯುಕ್ತಗಳು ಏಕ ಬಂಧದಿಂದಾಗಿದ್ದು ಜಲಜನಕಗಳಿಂದ ಪೂರ್ಣವಾಗಿ ಸಂತೃಪ್ತಗೊಂಡಿರುತ್ತವೆ.ಸಂತೃಪ್ತ ಹೈಡ್ರೋಕಾರ್ಬಗಳ ಸಾಮಾನ್ಯ ಸೂತ್ರ Cn H2n+2. ಸಂತೃಪ್ತ ಹೈಡ್ರೋಕಾರ್ಬನಗಳು ಪೆಟ್ರೋಲಿಯಂ ಇಂಧನಗಳ ಮೂಲಗಳಾಗಿವೆ ಮತ್ತು ಅವು ಸಾಮಾನ್ಯವಾಗಿ ನೇರ ಅಥವಾ ಕವಲೊಡೆದ ಸರಪಣಿ ಜಾತಿಯದ್ದಾಗಿವೆ.ಪರ್ಯಾಯ ರಾಸಾಯನಿಕ ಪ್ರತಿಕ್ರಿಯೆಗಳೆ ಅವುಗಳ ಲಕ್ಷಣವಾಗಿದೆ.
 2. ಅಸಂತೃಪ್ತ ಹೈಡ್ರೋಕಾರ್ಬನಗಳು,ಇಂಗಾಲ-ಇಂಗಾಲಗಳ ನಡುವೆ ದ್ವೀ ಅಥವಾ ತ್ರಿಬಂಧಗಳಿಂದಾದ ಸಂಯುಕ್ತಗಳಾಗಿವೆ. ದ್ವೀಬಂಧಗಳಿಂದಾದ ಸಂಯುಕ್ತಗಳಿಗೆ ಅಲ್ಕೀನಗಳೆನ್ನುವರು, ಅವುಗಳ ಸಾಮಾನ್ಯ ಸೂತ್ರ CnH2n. ತ್ರಿಬಂಧಗಳಿಂದಾದ ಸಂಯುಕ್ತಗಳಿಗೆ ಅಲ್ಕೈನಗಳೆನ್ನುವರು, ಅವುಗಳ ಸಾಮಾನ್ಯ ಸೂತ್ರ CnH2n-2.
 3. ಸೈಕ್ಲೋಅಲ್ಕೇನಗಳು ಒಂದು ಅಥವಾ ಒಂದಕ್ಕಿಂತ ಹೆಚ್ಚು ಇಂಗಾಲದ ಉಂಗುರಗಳಿಂದ ಉಂಟಾಗಿದ್ದು ಪ್ರತಿಯೊಂದು ಇಂಗಾಲದ ಪರಮಾಣುಗಳಿಗೆ ಜಲಜನಕಗಳು ಕೂಡಿಕೊಂಡಿರುತ್ತವೆ.
 4. ಅರೋಮ್ಯಾಟಿಕ್ (ವಾಸನೆಯುಳ್ಳ) ಹೈಡ್ರೋಕಾರ್ಬನಗಳನ್ನು ಅರೀನಗಳೆಂದು ಕರೆಯಲಾಗುತ್ತಿದ್ದು, ಅವು ಕನಿಷ್ಠ ಒಂದಾದರೂ ಅರೋಮ್ಯಾಟಿಕ್ ಉಂಗುರವನ್ನು ಹೊಂದಿರುತ್ತದೆ.

ಹೈಡ್ರೋಕಾರ್ಬನಗಳು- ಅನಿಲಗಳಾಗಿರಬಹುದು (ಉದಾ: ಮಿಥೇನ್ & ಪ್ರೋಪೇನ್), ದ್ರವಗಳಾಗಿರಬಹುದು(ಉದಾ:ಹೆಗ್ಸೇನ್ & ಬೆಂಜೀನ್),ಮೇಣಗಳು ಅಥವಾ ಕರಗುವ ಘನಗಳಾಗಿರಬಹುದು(ಉದಾ: ಪ್ಯಾರಾಫಿನ್ ಮೇಣ & ನ್ಯಾಪ್ತಲೀನ್(ಡಾಂಬರ್ ಗುಳಿಗೆಗಳು)), ಪಾಲಿಮರ್ ಗಳಾಗಿರಬಹುದು (ಉದಾ:ಪಾಲಿಎಥಿಲಿನ್,ಪಾಲಿಪ್ರೊಪಿಲಿನ್ & ಪಾಲಿಸ್ಟೀರಿನ್)

ಸಾಮಾನ್ಯ ಲಕ್ಷಣಗಳುಸಂಪಾದಿಸಿ

ಹೈಡ್ರೋಕಾರ್ಬನಗಳ ರಚನಾಸೂತ್ರದಲ್ಲಿರುವ ವ್ಯತ್ಯಾಸಗಳಿಂದಾಗಿ ನೇರ ಅಥವಾ ಕವಲೊಡೆದ ಸಂಯುಕ್ತಗಳಾಗಿ ಅಲ್ಕೇನ್, ಅಲ್ಕೀನ್ ಮತ್ತು ಅಲ್ಕೈನ್ ಗಳೆಂಬ ರಚನೆಗಳನ್ನು ಪಡೆದುಕೊಂಡಿವೆ. ಜಲಜನಕಗಳ ಪ್ರಮಾಣದಲ್ಲಿರುವ ಕೊರತೆಯಿಂದಾಗಿ ಸ್ವಯಂ ಪ್ರೇರಿತವಾಗಿ ದ್ವೀ ಅಥವಾ ತ್ರಿಬಂಧಗಳಾಗಿರಬಹುದು ಹಾಗೂ ಕೆಟನೀಕರಣದಿಂದಾಗಿ ಇಂಗಾಲದ ಪರಮಾಣುಗಳು ಜಲಜನಕಗಳಿಂದ ಪೂರ್ಣವಾಗಿ ಸಂತೃಪ್ತಗೊಳ್ಳುವುದನ್ನು ತಡೆಯುತ್ತದೆ.

ಬಳಕೆಸಂಪಾದಿಸಿ

 
ಭಾರತೀಯ ಕಚ್ಚಾತೈಲ ಸಂಸ್ಕರಣಾ ಘಟಕ
 • ಪ್ರಸ್ತುತ ನಾಗರೀಕತೆಯ ಪ್ರಾಥಮಿಕ ಶಕ್ತಿಯ ಮೂಲವೇ ಹೈಡ್ರೋಕಾರ್ಬನಗಳಾಗಿವೆ.ಪ್ರಧಾನವಾಗಿ ಹೈಡ್ರೋಕಾರ್ಬಗಳನ್ನು ಇಂಧನ ಮೂಲಗಳಾಗಿ ಬಳಸಲಾಗುತ್ತಿದೆ. ಹೈಡ್ರೋಕಾರ್ಬನಗಳ ಘನ ರೂಪವೇ ಅಸ್ಪಾಲ್ಟ (ಬಿಟುಮೆನ್)
 • ಭಾಷ್ಪಶೀಲ ಹೈಡ್ರೋಕಾರ್ಬನಗಳ ಮಿಶ್ರಣಗಳನ್ನು ಹೆಚ್ಚಾಗಿ ವಾಯುದ್ರವ ತುಂತುರುಗಳಲ್ಲಿನ ನೋದನಕಾರಿಗಳಾಗಿ ಕ್ಲೋರೋಪ್ಲೂರೋಕಾರ್ಬನಗಳಾಗಿ ಬಳಸಲಾಗುತ್ತದೆ.
 • ಬ್ಯೂಟೇನ್ ಅನಿಲವನ್ನು ಹೆಚ್ಚಿನ ಒತ್ತಡಕ್ಕೊಳಪಡಿಸಿ ಸುರಕ್ಷಿತವಾದ ರೀತಿಯಲ್ಲಿ ಪಾಕೆಟ್ ಲೈಟರ್ ಗಳಲ್ಲಿ ಬಳಸಲಾಗುತ್ತಿದೆ.ಪೆಂಟೇನ್ ಕೊಠಡಿಯ ಉಷ್ಣತೆಯಲ್ಲಿ ದ್ರವ ಸ್ಥಿತಿಯಲ್ಲಿದ್ದು ಔದ್ಯೋಗಿಕ ಕ್ಷೇತ್ರದಲ್ಲಿ ಮೇಣಗಳನ್ನು ಕರಗಿಸುವ ದ್ರಾವಕವಾಗಿ ಬಳಸಲಾಗುತ್ತಿದೆ. ಹೆಗ್ಸೇನ್ ಅನಿಲವು ವಾಸನೆ ರಹಿತ ಹಾಗೂ ಅಧ್ರುವೀಕೃತ ಲಕ್ಷಣ ಹೊಂದಿದ್ದು ವಿಮಾನಗಳಲ್ಲಿ ಬಳಸುವ ಗ್ಯಾಸೋಲಿನ್ ನಲ್ಲಿ ಬಳಸಲಾಗುತ್ತಿದೆ.ಪ್ರಗತಿಯುತವಾಗಿ ಇಂಗಾಲದ ಕಣಗಳನ್ನು ಸೇರಿಸುವಿಕೆಯಿಂದ ಉಂಟಾಗುವ ಉಂಗುರ ರಹಿತ ಹೈಡ್ರೋಕಾರ್ಬನಗಳು ಹೆಚ್ಚಿನ ಸ್ನಿಗ್ಧತೆಯನ್ನು ಹೊಂದಿದ್ದು ನಯಗೊಳಿಸುವ ಸಾಧನವಾಗಿ ಬಳಸಲಾಗುತ್ತಿದೆ.

ವಿಷಗೊಳ್ಳುವಿಕೆಸಂಪಾದಿಸಿ

ಪೆಟ್ರೋಲ್ ಅಥವಾ ಬೆಂಜೀನಗಳ ಆಕಸ್ಮಿಕವಾಗಿ ಉಸಿರಾಡುವಿಕೆಯಿಂದ ಅಥವಾ ಜೀವಕೋಶಿಯವಿಷವಾಗುವಿಕೆಯಂತಹ ವಸ್ತುಗಳನ್ನು ಸೇವಿಸಿದಾಗ ಹೈಡ್ರೋಕಾರ್ಬನಗಳಿಂದ ವಿಷಗೊಳ್ಳುವಿಕೆ ಉಂಟಾಗುತ್ತದೆ.ಅಭಿದಮನಿಗಳಲ್ಲಿ ಅಥವಾ ಮೇಲ್ಚರ್ಮದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ತೆಗೆದುಕೊಳ್ಳುವ ಪೆಟ್ರೋಲಿಯಂ ಲಸಿಕೆ ಹಾಗೂ ನಿಂದನಾ ರೂಪದ ಅತಿರೇಕ ಪ್ರಮಾಣದಲ್ಲಿ ದೇಹವನ್ನು ಘಾಸಿಗೊಳಿಸಬಹುದಾದ ಉದಾಹರಣೆಗೆ-ಅಂಗಾಂಶ ನೆಕ್ರಾಸಿಸ್, ಬಾವು ರಚನೆ, ಉಸಿರಾಟ ವ್ಯವಸ್ಥೆಯ ನಿಲ್ಲುವಿಕೆ ಮತ್ತು ಮೂತ್ರಪಿಂಡಗಳ,ಮೆದುಳು ಹಾಗೂ ನರಮಂಡಲ ಭಾಗಶಃ ಹಾಳಾಗುವಿಕೆ ಉಂಟಾಗುತ್ತದೆ.

ಉಲ್ಲೇಖಗಳುಸಂಪಾದಿಸಿ

 1. IUPAC Goldbook oldbook.iupac.org/H02891.html
 2. Clayden, J., Greeves, N., et al. (2001) Organic Chemistry Oxfordhttps://en.wikipedia.org/wiki/Special:BookSources/0495118370
 3. Mason OU, Nakagawa T, Rosner M, Van Nostrand JD, Zhou J, Maruyama A, Fisk MR, Giovannoni SJ. (2010).https://www.ncbi.nlm.nih.gov/pmc/articles/PMC2974637/
 4. M.M. Yakimov, K.N. Timmis & P.N. Golyshin (2007). "Obligate oil-degrading marine bacteria". Curr. Opin. Biotech. 18 (3): 257–266. http://linkinghub.elsevier.com/retrieve/pii/S0958166907000559