ಕ್ಲೋರೋಫಾರಂ ಅಥವಾ ಟ್ರ್ಯೆಕ್ಲೋರೋ ಮಿಥೇನ್, ಇದು ಒಂದು ಇಂಗಾಲದ ಸಾವಯವ ಸಂಯುಕ್ತ ವಾಗಿದ್ದು ಇದರ ಅಣು ಸೂತ್ರ CHCl3 .ಇದು ಬಣ್ಣ ರಹಿತ ವಾಗಿದ್ದು,ಸಿಹಿಯಾದ ವಾಸನೆಯನ್ನು ಹೊಂದಿರುವ ಸಾಂದ್ರತೆಯ ದ್ರವ ವಾಗಿದೆ.

ಕ್ಲೋರೋಫಾರಂನ ರಾಸಾಯನಿಕ ರಚನೆ
ಕ್ಲೋರೋಫಾರಂ

ರಚನೆ:- ಕ್ಲೋರೋಫಾರಂ ನ ಒಂದು ಅಣುವಿನಲ್ಲಿ, ಒಂದು ಅಣುವಿಮಲ್ಲಿ- ಒಂದು ಇಂಗಾಲ, ಒಂದು ಜಲಜನಕ ಮತ್ತು ಮೂರು ಕ್ಲೋರಿನ್ ನ ಪರಮಾಣುಗಳಿವೆ.ಒಂದು ಮಿಥೇನಿನ (CH4) ಅಣುವಿನಲ್ಲಿನ ನಾಲ್ಕು ಜಲಜನಕಗಳಲ್ಲಿ,ಮೂರು ಜಲಜನಕಗಳ ಸ್ತಾನದಲ್ಲಿ ಮೂರು ಕ್ಲೋರಿನ್ ಪರಮಾಣುಗಳು ಜೋಡಿಸಲ್ಪಟ್ಟಿವೆ.ಆದ್ದರಿಂದ ಇದು ಟೆಟ್ರಾಹೈಡ್ರಲ್ ರಚನೆಯನ್ನು ಹೊಂದಿದೆ.

ದೊರೆಯುವಿಕೆ:- ಇದು ಹೆಚ್ಚಿನ ಪ್ರಮಾಣದಲ್ಲಿ ಸ್ವಾಭಾವಿಕವಾಗಿ ನಿಸರ್ಗದಲ್ಲಿ ಉತ್ಪತ್ತಿಯಾಗುವಂತಾದ್ದು ಮತ್ತು ಸಮುದ್ರ ಕಳೆಗಳಿಂದ ನೀರಿನಲ್ಲಿ ಹಾಗೂ ಶಿಲೀಂದ್ರಗಳಿಂದ ಮಣ‍್ಣಿನಲ್ಲಿ [೧] ಉತ್ಪತ್ತಿ ಮಾಡಬಹುದು.ಭೂಮಿಯಲ್ಲಿ ೬,೬೦,೦೦೦ ಟನ್ಗಳಷ್ಟು ಕ್ಲೋರೋಫಾರಂ ಉತ್ಪತ್ತಿಯಾಗಿದ್ದು, ಶೇಕಡ ೯೦ ರಷ್ಟು ಸ್ವಾಭಾವಿಕವಾಗಿ ಪರಿಸರದಲ್ಲಿ ಉತ್ಪತ್ತಿ ಆಗುತ್ತದೆ

ಉತ್ಪಾದನೆ:- ಕೈಗಾರಿಕೆಗಳಲ್ಲಿ ಕ್ಲೋರೋಫಾರಂ ಅನ್ನು ಕ್ಲೋರಿನ್ ಮತ್ತು ಕ್ಲೋರೋಮಿಥೇನ್ ಅಥವಾ ಮಿಥೇನಿನ ಮಿಶ್ರಣವನ್ನು ೪೦೦-೫೦೦ ಡಿಗ್ರಿ ಷೆಲ್ಸಿಯಸ್ ನಲ್ಲಿ ಕ್ಲೋರಿನೀಕರಣ ಮಾಡುವುದರಿಂದ ಹಾಲೋಜನೀಕರಣದಿಂದ) CHCl3 ಕ್ಲೋರೋಫಾರಂ ಅನ್ನು ಉತ್ಪತ್ತಿ ಮಾಡಬಹುದು.

CH4+Cl2 →CH3Cl+HCl
CH3Cl+Cl2→CH2Cl+HCl
CH2Cl+Cl2 → CHCl3+HCl

ಕ್ಲೋರೋಫಾರಂನ ಮುಂದುವರಿದ ಕ್ಲೋರಿನೀಕರಣದಿಂದ ಕಾರ್ಬನ್ ಟೆಟ್ರಾಕ್ಲೋರೈಡ್ ಆಗುತ್ತದೆ. (CCl4)

CHCl3+Cl2 →CCl4 + HCl

ಕ್ಲೋರಿನೀಕರಣದಿಂದ ಉಂಟಾದ ಕ್ಲೋರೋಫಾರಂ ಮತ್ತು ಇತರ ಮಿಶ್ರಣದ ಘಟಕಗಳನ್ನು ಅಂಶೀಯ ಭಟ್ಟಿ ಇಳುಸುವಿಕೆಯಿಂದ ಬೇರ್ಪಡಿಸಬಹುದು.

ಉಪಯೋಗಗಳು:-

  • ಟೆಫ್ಲಾನಿನ ತಯಾರಿಕೆಯಲ್ಲಿ (ಪಾಲಿಟೆಟ್ರಾಫ್ಲೋರೋಇತೈಲೀನ್) ಉಪಯೋಗಿಸುತ್ತಾರೆ.
  • ಕೊಬ್ಬು, ಎಣ್ಣೆ, ರಬ್ಬರ್, ಆಲ್ಕಲಾಯ್ಡ್‌ಗಳು ಮೇಣ ಮುಂತಾವುಗಳನ್ನು ಕರಗಿಸಲು ದ್ರಾವಕವಾಗಿ ಉಪಯೋಗಿಸುತ್ತಾರೆ.
  • ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅರಿವಳಿಕೆಯಾಗಿ ಉಪಯೋಗಿಸುತ್ತಾರೆ.

ಕ್ಲೋರೋಫಾರಂ ಅನ್ನು ಸೂಕ್ತವಾಗಿ ಬಳಸದೇ ಇದ್ದಾಗ ಉಂಟಾಗಬಹುದಾದ ತೊಂದರೆಗಳು.[೨]

  • ನುಂಗುವುದರಿಂದ ವಿಷವಾಗಿ ಪರಿಣಮಿಸುತ್ತದೆ.
  • ಚರ್ಮದ ತುರಿಕೆ ಅಥವಾ ಅಲರ್ಜಿ ಉಂಟಾಗುತ್ತದೆ.
  • ಕಣ‍್ಣಿನ ಉರಿಯೂತ ಅಥವಾ ಅಲರ್ಜಿ
  • ಕ್ಯಾನ್ಸರ್ ಬರುವ ಸಾದ್ಯತೆ.
  • ಗರ್ಭದಲ್ಲಿರುವ ಹುಟ್ಟುವ ಮಗುವಿಗೆ ತೊಂದರೆ.
  • ಅತಿಯಾದ ಸೇವನೆಯಿಂದ ಅಂಗಾಂಗಗಳಿಗೆ ಊನತೆ.

ಬಳಸುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು.

  • ಕ್ಲೋರೋಫಾರಂ ಉಪಯೋಗಿಸುವ ಮನ್ನ ಕೊಟ್ಟಂತಹ ಸೂಚನೆಗಳನ್ನು ಓದಿಕೊಳ‍್ಳಬೇಕು.
  • ಸೂಚನೆಗಳನ್ನು ಓದಿಕೊಂಡ ನಂತರ ಸೂಕ್ತವಾಗಿ ಬಳಸ ಬೇಕು.
  • ಧೂಳು, ಹೊಗೆ, ಅನಿಲ, ಆವಿ, ಮಂಜು ಮುಂತಾದವುಗಳನ್ನು ಉಸಿರಾಡುವುದನ್ನು ನಿಯಂತ್ರಿಸಬೇಕು
  • ಉಪಯೋಗಿಸಿದ ನಂತರ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
  • ಉಪಯೋಗಿಸುವಾಗ ತಿನ್ನುವುದು ಮತ್ತು ಕುಡಿಯುವುದು ಮಾಡಬಾರದು.
  • ಉಪಯೋಗಿಸುವಾಗ ಹೊರಗಿನ ಗಾಳಿ ಸಾಕಷ್ಟು ಇರುವಹಾಗೆ ನೋಡಿಕೊಳ್ಳಬೇಕು.

ಉಲ್ಲೇಖ ಬದಲಾಯಿಸಿ

  1. Cappelletti, M. (2012). "Microbial degradation of chloroform". Applied Microbiology and Biotechnology. 96 (6): 1936. doi:10.1007/s00253-012-4494-1.
  2. https://pubchem.ncbi.nlm.nih.gov/compound/chloroform#section=Clinical-Laboratory-Methods