ಕೆಜಗದೀಶ್೧೫
ನಾನು ಕೆ.ಜಗದೀಶ ಸಿ. ಟಿ. ಇ ಮೈಸೂರಿನಲ್ಲಿ ಉಪನ್ಯಾ ಸಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಾನು ಬಿ..ಇಡಿ ವಿದ್ಯಾ ರ್ಥಿಗಳಿಗೆ ವಿಜ್ಞಾನ ವಿಷಯ ಭೋದಿಸುತ್ತಿದ್ದೇನೆ. ನಾನು ಕೆ.ಪಿ.ಎಸ್.ಸಿ ಮೂಲಕ ೧೯೯೪ ರಲ್ಲಿ ನೇರ ನೇಮಕಾತಿ ಹೊಂದಿರುತ್ತೇನೆ.ಇಲ್ಲಿಯವರೆಗೆ ಓಟ್ಟು ೨೧ ವರ್ಷ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿರುತ್ತೇನೆ. ನನಗೆ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳು ಬಂದಿರುತ್ತದೆ.ನನ್ನ ಹವ್ಯಾಸಗಳೆಂದರೆ,ಪಕ್ಡಿವೀಕ್ಡಣೆ,ಫೊಟೋಗ್ರಫಿ,ವಿಜ್ಞಾನ ಪುಸ್ತಕಗಳ ಸಂಗ್ರಹ, ಇನ್ನೂ ಮುಂತಾದವುಗಳು.
ನನಗೆ ಕಂಪ್ಯೂಟರ್ ತರಬೇತಿ ಪಡೆಯಲು ತುಂಬಾ ಆಸಕ್ತಿ ಇದೆ.ಆದ್ದರಿಂದ ನನಗೆ ಈ ತರಬೇತಿಗೆ ನಿಯೋಜಿಸಲಾಗಿದೆ.ವೈಜ್ಞಾನಿಕ ವಿಷಯಗಳನ್ನು ಸಂಗ್ರಹಿಸಿ
ನನ್ನ ಸ್ವಂತ ಲೇಖನಗಳನ್ನು ಕನ್ನಡ ವಿಕಿಪಿಡಿಯಾ ಕ್ಕೆ ಸೇರಿಸುವುದು ನನ್ನ ಜವಾಬ್ದಾರಿಯಾಗಿದೆ.ಇದು ನನಗೆ ಸವಾಲಾಗಿದೆ.೩ ದಿನಗಳಲ್ಲಿ ನಾನು ಉತ್ತಮ ತರಬೇತಿಯನ್ನು ಪಡೆದು ವೈಯಕ್ತಿಕವಾಗಿ ಬೆಳವಣಿಗೆ ಹೊಂದುತ್ತೇನೆ ಎಂಬ ಆತ್ಮವಿಶ ಸ ಮೂಡಿದೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ೧೦೩ನೇ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ನಾನು ಭಾಗವಹಿಸಿದ್ದು ಸಾಕಷ್ಟು ಉತ್ತಮ ಮಾಹಿತಿಗಳನ್ನು ಸಂಗ್ರಹಿಸಿರುತ್ತೇನೆ.ಇವುಗಳು ಬಹಳ ಉಪಯುಕ್ತವಾಗಿದ್ದು ತರಗತಿ ಭೋಧನೆಗೆ ಸಹಕಾರಿಯಾಗಿದೆ.ಇದೊಂದು ರಾಷ್ಟ್ರೀಯ ಮಟ್ಟದ ಸಮ್ಮೆಳನವಾಗಿದ್ದು ಅಂತರ ರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಭಾಗವಹಿಸಿದ್ದರು.ಒಟ್ಟು ೫ ಪ್ರಮುಖ ವಿಷಯಗಳಲ್ಲಿ ಅನೇಕ ಉಪ ವಿಷಯಗಳ ಮೇಲೆ ಅಧಿವೇಶನಗಳು ನಡೆದವು.ಈ ಸಮ್ಮೇಳನಕ್ಕೆ ದೇಶದ ವಿವಿಧ ಮೂಲೆಗಳಿಂದ ೧೫ ಸಾವಿರಕ್ಕೂ ಹೆ ಚ್ಚು ಮಂದಿ ಶಿಬಿರಾರ್ಥಿಗಳು ಭಾಗವಹಿಸಿ ಸಮ್ಮೆಳನವನ್ನು ಯಶಸ್ವಿಗೊಳಿಸಿದರು.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಒಳಪಡುವ ಎಲ್ಲಾ ಆಂಗ ಸಂಸ್ಥೆಗಳೂ "ಪ್ರೈಡ್ ಆಫ ಇಂಡಿಯಾ ಎಕ್ಸಫೋ"ವಸ್ತುಪ್ರದರ್ಶನ ದಲ್ಲಿ ನೂರಾರು ಮಳಿಗೆ ಗಳನ್ನು ತೆರೆದು ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿಗಳನ್ನೊಳಗೊಂಡ ಬ್ರೋಚರ್ಗಳನ್ನು ನೀಡಿದರು.
ನಾನು ಭಾರತೀಯ ವಿಜ್ಞಾನ ಕಾಂಗ್ರೆಸ್ ಗೆ ಆಜೀವ ಸದಸ್ಯನಾಗಿರುತ್ತೇನೆ.ನನ್ನ ಆಜೀವ ಸದಸ್ಯ ಸಂಖೈ ೧೦೦೪೩ ಆಗಿದೆ.ಮುಂದಿನ ಅಧಿವೇಶನವು ಚೆನ್ನೈನಲ್ಲಿ ದಿನಾಂಕ ೦೩-೦೧-೨೦೧೭ ರಂದು ನಡೆಯಲಿದೆ.
ಕನ್ನಡ ವಿಕಿಪಿಡಿಯಾ ಗೆ ಸೇರಿಸುವುದು ನನ್ನ ಜವಾಬ್ದಾರಿಯಾಗಿದೆ.