ನಮಸ್ಕಾರ Sanjana Nadka,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವಾಗ

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ

Palagiri (ಚರ್ಚೆ) ೦೩:೪೧, ೧ ಜುಲೈ ೨೦೧೫ (UTC)

ಜೀವಿಗಳಲ್ಲಿ ವಿದ್ಯುತ್

ಬದಲಾಯಿಸಿ

ಕೆಲವು ಜೀವಿಗಳ ಉಪಾಪಚಯ ಕ್ರಿಯೆಗಳಲ್ಲಿ ಬೆಳಕು ಉಪ ಉತ್ಪನ್ನವಾಗಿರುವುದು. ಆದರೆ ವಿದ್ಯುತ್ ಎಲ್ಲಾ ಜೀವಿಗಳ ಸ್ನಾಯು ಮತ್ತು ನರಗಳ ಕಾರ್ಯಾಚರಣೆಯಲ್ಲಿ ವಿಶೇಶ ಪಾತ್ರ ವಹಿಸುತ್ತದೆ. ಜಗದೀಶ್ ಚಂದ್ರ ಬೋಸರು ಈ ಶತಮಾನದ ಆದಿಯಲ್ಲಿಯೇ ಸಸ್ಯಗಳಲ್ಲಿ ವಿದ್ಯುತ್ ಪ್ರಚೋದನೆಯಾಗುವುದನ್ನು ಪ್ರಾಯೋಗಿಕವಾಗಿ ತೋರಿಸಿ ಕೊಟ್ಟಿದ್ದರು.

೧೮೯೦ರಲ್ಲಿ ಡುಬಯ್ಸ್ ರೇಮಂಡ್ ಶಾಂತಿ ಸ್ಥಿತಿಯಲ್ಲಿರುವ ನರಕೋಶವು ಪೊರೆಯ ಹೊರಗೆ ಧನ ವಿದ್ಯುತ್ ಹಾಗೂ ಒಳಗೆ ಋಣವಿದ್ಯುತ್ ಹೊಂದಿರುವುದನ್ನು ವಿವರಿಸಿದ್ದರು. ಪ್ರಾಚೋದಿಸಿದಾಗ ಅಚೇತನ ಸ್ಥಿತಿಯಿಂದ ಚೇತನ ಸ್ಥಿತಿಗೆ ಬರುವ ನರವು ತಾತ್ಕಾಲಿಕವಾಗಿ ತನ್ನ ವಿದ್ಯುತ್ತನ್ನು ಬದಲಿಸಿಕೊಳ್ಳುವುದರ ಮೂಲಕ ಸುದ್ಧಿಯನ್ನು ನರಮಂಡಲದಲ್ಲಿ ಒಂದು ಭಾಗದಿಂದ ಮತ್ತೊಂದಕ್ಕೆ ತಲುಪಿಸುತ್ತದೆ.

ನರ ಮತ್ತು ಸ್ನಾಯು ಚಟುವಟಿಕೆಗಳಿಗೆ ಬಳಸಲಾಗುವ ಕೆಲವು ಮೀನುಗಳಲ್ಲಿ ಹೆಚ್ಚು ವಿದ್ಯುತ್ ವಿಸರ್ಜನೆಯಾಗುವುದು. ಇಂತಹ ವಿಶೇಷ ಬಗೆಯ ಮೀನು ಹೊರಸೂಸುವ ವಿದ್ಯುತ್ತಿನಿಂದ ನ್ಯೂಯಾರ್ಕ್ ನಗರದ ಜಲಜೀವಿ ಪ್ರದರ್ಶನವೊಂದರಲ್ಲಿ ದೀಪಗಳನ್ನು ಬೆಳಗಿಸುವ ತಂತ್ರ ಅಳವಡಿಸಲಾಗಿದೆ.

ವಿದ್ಯುತ್ತನ್ನು ಉತ್ಪಾದಿಸುವ ಅಂಗಗಳು ಸ್ನಾಯುಗಳ ವಿಶೇಷ ಮಾರ್ಪಾಟಿನಿಂದ ಉಂಟಾಗಿವೆ. ಈ ಅಂಗಗಳನ್ನು ಹೊಂದಿರುವ ಮೀನುಗಳು ಅವನ್ನು ಆಯುಧಗಳನ್ನಾಗಿ ಅಥವಾ ಜ್ಞಾನೇಂದ್ರಿಯವಾಗಿ ಬಳಸುತ್ತವೆ.

ಎಲೆಕ್ಟ್ರಿಕ್ ಬೆಕ್ಕು ಮೀನು ಇದು ಆಫ್ರಿಕಾದ ನದಿ ಮತ್ತು ಕೊಳಗಳಲ್ಲಿ ವಾಸಿಸುವ ಸಿಹಿನೀರು ಬೆಕ್ಕು ಮೀನು ಇವುಗಳಲ್ಲಿ ವಿದ್ಯುತ್ ಅಂಗವು ಮುಂಡ ಮತ್ತು ಬಾಲದಲ್ಲಿ ಚಲಿಸುತ್ತದೆ. ಇನ್ನೊಂದು ವಿದ್ಯುತ್ ಕಿರಣ ಮೀನು.

ಹೈನುಗಾರಿಕೆ

ಬದಲಾಯಿಸಿ

ಹಾಲು ಉತ್ಪಾದನೆಯಲ್ಲಿ ಹೈನುಗಾರಿಕೆಯ ಪಾತ್ರ ಮಹತ್ವದ್ದು. ಹೈನುಗಾರಿಕೆ ವರ್ಷವಿಡೀ ಆದಾಯ ನೀಡಬಲ್ಲ ಒಂದು ಲಾಭದಾಯಕ ಉದ್ಯಮ. ನಮ್ಮ ದೇಶದಲ್ಲಿ ವಿಪುಲವಾದ ಪಶು ಸಂಪತ್ತಿದೆ. ಇವುಗಳ ಸಂಖ್ಯೆ ಅಧಿಕವೇ ಹೊರತು ಉತ್ಪಾದನೆ ಕಡಿಮೆ. ಇತ್ತೀಚೆಗೆ ಕ್ರಮಬದ್ಧವದ ತಳಿ ಅಭಿವೃದ್ಧಿ, ಪೋಷಣೆಗಳಿಂದಾಗಿ ನಮ್ಮ ಹಾಲಿನ ಉತ್ಪಾದನೆ ಅಧಿಕವಾಗುತ್ತಾ ಇದೆ.

ಹೈನು ರಾಸುಗಳು ಅನುವಂಶೀಯ ಗುಣಗಳಿಗೆ ಅನುಗುಣವಾಗಿ ಹಾಲು ಉತ್ಪಾದಿಸುತ್ತವೆ. ಒಂದು ಕರಾವಿಗೆ ವರ್ಷಕ್ಕೆ ಎರಡು ಸಾವಿರ ಲೀಟರುಗಳಷ್ಟು ಉತ್ಪಾದನಾ ಸಾಮರ್ಥ್ಯ ಅವಕ್ಕಿರಬೇಕು. ವಿದೇಶಿ ತಳಿಗಳಾದ ಹೋಲ್ ಸ್ಟಿನ್ ಫ್ರಿಜಿಯನ್ ಮತ್ತು ಜರ್ಸಿತಳಿಗಳು ಮತ್ತು ಇವುಗಳಿಂದ ಪಡೆದ ಮಿಶ್ರತಳಿಗಳಿಗೆ ಈ ಸಾಮರ್ಥ್ಯ ಇದೆ. ಸ್ಥಳಿಯ ತಳಿಗಳು ಕರಾವಿಗೆ ಐದು ನೂರು ಲೀಟರ್ ಹಾಲು ಉತ್ಪಾದನೆ ಮಾಡಿದರೆ ಜರ್ಸಿ ಹಸು ಮತ್ತು ಮಿಶ್ರ ತಳಿಗಳು ೨೦೦೦-೪೦೦೦ ಲೀಟರ್ ಮತ್ತು ಹೋಲ್ ಸ್ಟೀನ್ ತಳಿ ೪೦೦೦ ಲೀಟರ್ ಮತ್ತು ಹೋಲ್ ಸ್ಟೀನ್ ತಳಿ ೪೦೦೦-೫೦೦೦ ಲೀಟರ್ ಹಾಲು ನೀಡುತ್ತದೆ. ದನದ ಹಾಲಿನಲ್ಲಿ ಕೊಬ್ಬಿನ ಅಂಶ ಶೇಕಡ ೩.೫ ಇರುತ್ತದೆ.

ಹಾಲಿನ ಉತ್ಪಾದನೆಗೆ ಪ್ರಸಿದ್ಧವಾದ ಅತ್ಯುತ್ತಮ ಎಮ್ಮೆ ತಳಿಗಳೂ ನಮ್ಮ ದೇಶದಲ್ಲಿವೆ. ಮುರಾ, ಜಫ್ರಾಬಾದಿ, ಮೆಹಸಾನ, ಸುರ್ತಿ, ಫಂಡರಪುರ ಜಾತಿಗಳು ಇವುಗಳಲ್ಲಿ ಕೆಲವು. ಇವುಗಳ ಸರಾಸರಿ ಹಾಲಿನ ಉತ್ಪಾಅನೆ ೧೫೦೦-೨೦೦೦ ಲೀಟರುಗಳಷ್ಟು, ಎಮ್ಮೆಯ ಹಾಲಿನಲ್ಲಿ ಶೇಕಡ ೭ರಷ್ಟು ಕೊಬ್ಬಿನ ಅಂಶಗಳಿರುತ್ತದೆ.

ಹಾಲಿನ ಅಧಿಕ ಉತ್ಪಾದನೆಗೆ ಪಶುಗಳಿಗೆ ಉತ್ತಮ ಪೋಷಕ ಆಹಾರಗಳನ್ನು ಒದಗಿಸಬೇಕು ಸಿದ್ಧಪಡಿಸಿದ ಸಮಕೋಲಿನ ಮಿಶ್ರ ಹಿಂಡಿಯಲ್ಲಿ ಬೇಕಾದ ಎಲ್ಲಾ ಪೌಷ್ಟಿಕಾಂಶಗಳೂ ಇರುತ್ತದೆ. ರಾಸುಗಳಿಗೆ ದಿನಕ್ಕೆ ೧-೨ ಕಿ.ಗ್ರಾಂ ಹಿಂಡಿಯ ಅವಶ್ಯಕತೆ ಇದೆ. ಹಾಲು ಉತ್ಪಾದನೆಯ ಶೇ.೪೦-೫೦ರಷ್ಟು ಉತ್ಪಾದನಾ ತಿಂಡಿಯನ್ನು ಒದಗಿಸಬೇಕಾಗುತ್ತದೆ. ಕುದುರೆ ಮೆಂತ್ಯ, ಮೇವಿನ ಅಲಸಂಡೆ ಮುಸುಕಿನ ಜೋಳ, ಗಿನಿ, ನೇಪಿಯರ್ ಮೊದಲಾದ ಹುಲ್ಲುಗಳು ಉತ್ತಮ ಹಸಿರು ಮೇವುಗಳು. ರಾಸುಗಳಿಗೆ ದಿನನಿತ್ಯ ೧-೨ ಕಿ.ಗ್ರಾಂ ಹುಲ್ಲು ೫-೧೦ ಕಿ.ಗ್ರಾಂ ಹಸಿರು ಮೇವು ಅವಶ್ಯಕವಿದೆ. ಕಾಕಂಬಿನೆಕ್ಕು ಬಿಲ್ಲೆಯನ್ನು ಒದಗಿಸಿದರೆ ಅದರಲ್ಲಿರುವ ಸೂಕ್ಷ್ಮ ಪೋಷಕಾಂಶಗಳ ಕಾರಣ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ನರವಾನರಗಳು

ಬದಲಾಯಿಸಿ

ಮಾನವನಿಗೆ ಅತಿ ನಿಕಟವರ್ತಿಯಾದ ಈ ಜೀವಿಗಳು, ನೂರಾರು ಪ್ರಭೇದಗಳುಳ್ಲ ಪ್ರೈಮೇಟು ಗಣಕ್ಕೆ ಸೇರಿದೆ. ಮಾನವ ಮತ್ತು ವಾನರಗಳೆರಡರ ಗುಣ ಲಕ್ಷಣಗಳನ್ನು ಹೊಂದಿದೆ. ಈ ಗುಣವನ್ನು ಸೂಕ್ಶ್ಮವಾಗಿ ಮೂರು ಗುಂಪಾಗಿ ವಿಂಗಡಿಸಲಾಗಿದೆ. ಅವೆಂದರೆ ಪ್ರೊಸೊಮಿಯನ್, ವಾನರಗಳು ಮಾನವನು ಸೇರಿದಂತೆ ನರವಾನರಗಳ ಗುಂಪು.

ಇಂದಿನ ನರವಾನರಗಳನ್ನು ನಾಲ್ಕು ಜಾತಿಯಾಗಿ ವಿಂಗಡಿಸಬಹುದು. ಅವು ಜಿಂಪಾಂಜಿ, ಗೋರಿಲ್ಲ, ಒರಾಂಗುಟಾನ್ ಮತ್ತು ಗಿಬ್ಬನ್ ಗಳು. ನರವಾನರಗಳು ದಕ್ಷಿಣಾರ್ಧ ಗೊಳಕ್ಕೆ ಸೀಮಿತ. ಏಷ್ಯಾ ಮತ್ತು ಆಫ್ರಿಕಾದ ಕೆಲವೇ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಇವುಗಳಿಗೆ ಬಾಲವಿಲ್ಲ. ನೀಳ ತೋಳುಗಳಿವೆ, ಕೈಯ ಯಾವುದಾದರೂ ಬೆರಳಿಗೆ ಎದುರು ಬದುರು ಮಾಡುವ ಹೆಬ್ಬೆಟ್ಟು ಮಾನವರಲ್ಲಿರುವಂತೆ ಇರುವುದು ಇವುಗಳ ವೈಶಿಷ್ಯ. ಎಲ್ಲವೂ ಸ್ವಾಭಾವಿಕವಾಗಿ ಸಸ್ಯಹಾರಿಗಳಾದರೂ ಜಿಂಪಾಂಜಿ ಕೆಲವೇಳೆ ಕೀಟ ಮತ್ತು ಇತರೇ ಜೀವಿಗಳನ್ನು ಭುಂಜಿಸುವುದು.

ಜಿಂಪಾಂಜಿ ಮಾನವನ ಅತಿ ಹತ್ತಿರ ಸಂಬಂಧ. ಸುಮಾರು ೧.೬ ಮೀ ಎತ್ತರ, ತೂಕ ೮೦ ಕಿ.ಗ್ರಾ, ಸಮಭಾಜಕ ವೃತ್ತದ ಮಧ್ಯ ಮತ್ತ್ತು ಪಶ್ಚಿಮ ಆಫ್ರಿಕಾ ಕಾಡುಗಳಲ್ಲಿ ವಾಸ, ಕಪ್ಪು ಬಣ್ಣ, ಮರ ಹತ್ತಬಲ್ಲುದಾದರೂ ನೆಲವಾಸಿ. ಸುಖ ಜೀವಿ, ಮಲಗುವಾಗ ಮರಗಳ ಮೇಲೆ ಸೊಪ್ಪು ಸದೆ ಕೂಡಿಸಿ ತಾತ್ಕಾಲಿಕ ಗೂಡು ಕಟ್ಟಿಕೊಳ್ಳುತ್ತದೆ.

ಮರಿಗಳು ತಾಯಿಯ ಬಳಿ ಮಲಗುತ್ತವೆ. ಮಾನವನಂತೆ ಉಪಕರಣಗಳನ್ನು ಬಳಸಬಲ್ಲ ನಿಸ್ಸೀಮ, ಹಾವ ಭಾವ, ಸಂಕೇತ ಶಬ್ದಗಳಿಂದ ಸಂಪರ್ಕ ಕಲ್ಪ್ಸಿಕೊಳ್ಳಬಲ್ಲದು. ಬೋಳು ತಲೆ, ಉದ್ದ ಕೂದಲು, ಎತ್ತರದ ಚಿಂಪಾಂಜಿಗಳಲ್ಲದೆ ಕುಜ್ಬ ಜಿಂಪಾಂಜಿಗಳೂ ಇವೆ.

ಗೋರಿಲ್ಲ - ಅತಿ ಹೆಚ್ಚು ಗಾತ್ರದ ನರವಾನರ ದೊಡ್ಡ ಕೋರೆ ಹಲ್ಲು ನೋಡಲು ಕ್ರೂರವಾಗಿ ಕಂಡರೂ ಮೃದು ಸ್ವಭಾವದ್ದು, ಸುಮಾರು ೨೦೦ ಕಿ.ಗ್ರಾಂ ತೂಕದ ದೃಢ ಕಾಯದ ಗಂಡುಗಳೂ, ಇದರ ಅರ್ಧದಷ್ಟು ತೂಕದ ಹೆಣ್ಣುಗಳೂ ಇವೆ. ದಿನವಿಡೀ ಗುಂಪು ಗುಂಪಾಗಿ ಅಲೆದಾಡುತ್ತ ಸಿಕ್ಕಿದ ಆಹಾರ ಸೇವನೆಯಿಂದ ಆರಾಮವಾಗಿರುವುದು ಅಪಾಯ ಕಂಡುಬಂದರೆ ಎದೆ ಬಡಿದುಕೊಳ್ಳುತ್ತಾ ಜೋರಾಗಿ ಘರ್ಜಿಸುವುದು. ೧೯ ನೇ ಶತಮಾನದವರೆಗೂ ಗೋರಿಲ್ಲಾವನ್ನು ನೋಡಿದರೆ ಇರಲಿಲ್ಲ.