Manasa Bollur
ನಮಸ್ಕಾರ Manasa Bollur,
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ಲೇಖನ ಸೇರಿಸುವಾಗ
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ
ಶಿಕ್ಷಣದ ಮಹತ್ವ
ಬದಲಾಯಿಸಿಜೀವನೆಂಬುದಕ್ಕೆ ಬದುಕು, ಬಾಳು ಎಂಬೆಲ್ಲಾ ಅರ್ಥಗಳಿವೆ. ವ್ಯಕ್ತಿಯೊಬ್ಬನ ಬದುಕು ಸುಸಂಸ್ಕಾರಗೊಳ್ಳುವುದಕ್ಕೆ ನಾನಾ ಕಾರಣಗಳಿವೆ. ಹುಟ್ಟಿನಿಂದ ಕೊನೆತನಕದ ನಿಜದ ಜೀವನದಲ್ಲಿ ಆತನೊಬ್ಬ ಸಾಮಾಜಿಕ ಜೀವಿಯಾಗಿ ಸಮಾಜದ ವಿವಿಧ ಕ್ಷೇತ್ರಗಳಾದ ಆರ್ಥಿಕ, ರಾಜಕೀಯ, ನೈತಿಕ, ಧಾರ್ಮಿಕ ಮೊದಲಾದ ರಂಗಗಳಲ್ಲಿ ವೈವಿಧ್ಯಮಯ ಬದುಕನ್ನು ನಡೆಸುತ್ತಾ ಇರುವುದು ಸತ್ಯ-ಸಹಜ ವಿಚಾರ.
ಉಂಡುಬಾಳಿ ಬದುಕುವುದು ಅವನ ಜೀವನಧರ್ಮ. ಆದರೆ ಇಷ್ಟಕ್ಕೆ ಅವನ ಉಸಿರು-ಬಸಿರು ಸೀಮಿತಗೊಳ್ಳುವುದೆಂದಾರೆ ಆತ ಪ್ರಾಣಿ ಸಮಾನ. ಭಾಷೆ ಈ ಪ್ರಾಣಿವರ್ಗ ಹಾಗೂ ಮಾನವ ವರ್ಗದ ನಡುವಿದ್ದ ಗೋಡೆ ಎಂಬುವುದು ವಾಸ್ತವಿಕವಾಗಿ ಸರ್ವ ಚಿಂತಕರೂ ಒಪ್ಪಿಕೊಳ್ಳಬೇಕಾದ ಅಂಶವಾದರೂ, ವ್ಯಕ್ತಿಯನ್ನು ಅವನ ಅನಿಸಿಕೆಗಳೆಲ್ಲವನ್ನು ಸುವ್ಯವಸ್ಥಿತವಾಗಿ ವ್ಯಕ್ತಪಡಿಸಲು ಶಿಕ್ಷಣವೆನ್ನುವುದು ಅತ್ಯವಶ್ಯಕ.
ಈ ಹಿನ್ನಲೆಯಲ್ಲಿ ವಿವೇಕಾನಂದರ ಮಾತು ಮನುಷ್ಯನನ್ನು ನರನಿಂದ ಮಾನವತ್ವದ ಕಡೆಗೆ ಕೊಂಡೊಯ್ಯುವುದೇ ಶಿಕ್ಷಣ ಇದು ಖಂಡಿತ ಸತ್ಯ. ಹೀಗಾಗಿಯೇ ಶಿಕ್ಷಣ ಮಾನವನ ಸರ್ವತೋಮುಖ ಬೆಳವಣಿಗೆಗೆ ಒಂದು ಅದ್ಬುತವಾದ ದೇಣಿಗೆಯಾಗಿದೆ.
ಶಿಕ್ಷಣವೆನ್ನುವುದು ಕೇವಲ ತರಗತಿಯ ನಾಲ್ಕು ಗೋಡೆಯ ಚೌಕಟ್ಟಿನ ಅಧಿಪತ್ಯ ಎಂದು ಭಾವಿಸಬೇಕಾಗಿಲ್ಲ ಅಥವಾ ಇದನ್ನು ಹೊರತುಪಡಿಸಿದ ಅಂಶವೆಂದು ತಿಳಿಯಲಾಗದು ತಿಳಿಯಬಾರದು. ಹೀಗಾಗಿ ಶಿಕ್ಷಣಕ್ಕೆ ತನ್ನದೇ ಆದ ವಸ್ತುನಿಷ್ಠ ವಿಚಾರಧಾರೆಗಳಿವೆ. ಶಿಕ್ಷಣ ಎಂಬ ಪದದಲ್ಲಿ ಶಿ ಎಂದರೆ ಶಿಕ್ಷಿತನನ್ನಾಗಿಸುವ ವಿದ್ಯೆಯಾದರೆ ಕ್ಷ ಎಂದರೆ ಕ್ಷಯವಾಗದ ಮಾನವ ಧರ್ಮ. ಣ ಎಂದರೆ ಅಣು, ರೇಣು, ತೃಣ ಕಾಷ್ಠಗಳಲ್ಲಿಯೂ ಸರ್ವವ್ಯಾಪ್ತಿಯಾದ ಜಗತ್ತಿನ ಸರ್ವ ವಿಚಾರಗಳನ್ನು ಅರುಹುವಂಥದ್ದು.
ಈ ದೃಷ್ಠಿಯಲ್ಲಿ ಶಿಕ್ಷಣದ ವ್ಯಾಪ್ತಿಗೆ ಸಿಲುಕದ ನಿಲುಕದ ಸುವಿಚಾರಗಳು ಯಾವುದಿಲ್ಲ? ಈ ರೀತಿಯಲ್ಲಿ ಜೀವನದ ಪ್ರತೀ ಕ್ಷಣಕ್ಷಣದಲ್ಲೂ ಶಿಕ್ಷಣದ ಅಗತ್ಯ ಇದ್ದೇ ಇದೆ. ವಿದ್ಯೆ ಇಲ್ಲದವನ ಮುಖವು ಹಾಳೂರ ಹದ್ದಿನಂತಹುದು ಎಂದು ಸರ್ವಜ್ಞ ಕವಿಯೂ ವಿದ್ಯೆಯ ಮಹತ್ವವನ್ನು ತಿಳಿಸಿದ್ದಾರೆ. ಒಟ್ಟಿನಲ್ಲಿ ಜೀವನವೆನ್ನುವುದನ್ನು ಉತ್ತಮಗೊಳಿಸಲು ಶಿಕ್ಷಣದ ಲೇಪನ ಅಗತ್ಯ. ಶಿಕ್ಷಣದ ಜೀವ ಜಲ ಸದ್ಮಾ ದೊರಕಬೇಕು. ಅದು ಜೀವನವನ್ನು ಸಾರ್ಥಕದೆಡೆಗೆ ಸಾಗಿಸಲು ಅನುಕೂಲಿಸುವುದು.
ಟಿಪ್ಪೂ ತವರಿನ ಸುಂದರ ಕೋಟೆ ದೇವನಹಳ್ಳಿಯ ಸುಭದ್ರ ಕೋಟೆ
ಬದಲಾಯಿಸಿರಾಜ್ಯದ ರಾಜಧಾನಿ ಬೆಂಗಳೂರಿಗೆ ಕೇವಲ ೩೫ ಕಿಲೋ ಮೀಟರ್ ದೂರದಲ್ಲಿರುವ ಊರು ದೇವನಹಳ್ಳಿ ಇತಿಹಾಸ ಪ್ರಸಿದ್ಧವಾದ ಸ್ಥಳ. ಆದರೂ ದೇವನಹಳ್ಳಿ ಜನಜನಿತವಾದದ್ದು ಕೇವಲ ಐದಾರು ವರ್ಷದಿಂದೀಚೆಗೆ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾನದ ಪ್ರಸ್ತಾಪ ಬಂದಾಗ ಮೈಸೂರು ರಸ್ತೆಯ ಕುಂಬಳಗೋಡು ಹಾಗೂ ದೇವನಹಳ್ಳಿಯ ಹೆಸರು ಕೇಳಿಬಂತು. ಕೊನೆಗೆ ಜಯಿಸಿದ್ದು ದೇವನಹಳ್ಳಿ.
ಇತಿಹಾಸ : ದೇವನಹಳ್ಳಿ ಒಂದು ಪುಟ್ಟ ಊರು. ಈ ಊರಿಗೆ ಖ್ಯಾತಿ ಬಂದಿದ್ದು ಮೈಸೂರು ಹುಲಿ ಟಿಪ್ಪೂ ಸುಲ್ತಾನರಿಮ್ದ. ೧೭೫೦ ರ ನವೆಂಬರ್ ೧೦ರಂದು ಟಿಪ್ಪು ಹುಟ್ಟಿದ್ದೇ ಈ ಪುಟ್ಟ ಊರಿನಲ್ಲಿ. ಚಿಕ್ಕದೊಂದು ಗುಡಿಸಲಿನಲ್ಲಿ ದೇವನಹಳ್ಳಿ ಅತ್ಯಂತ ಪುರಾತನವಾದ ಊರು. ೧೪ನೇ ಶತಮಾನದಲ್ಲೇ ಇಲ್ಲಿ ಊರಿತ್ತು ಎಂದು ಶಾಸನಗಳು ಸಾರುತ್ತವೆ. ಈ ಊರಿನ ಹಿಂದಿನ ಹೆಸರು ದೇವನದೊಡ್ಡಿ. ಇಲ್ಲಿ ೫೦೦ ವರ್ಷಗಳಷ್ಟು ಪುರಾತನವಾದ ಭದ್ರವಾದ ಹಾಗೂ ಆಮೆಯಾಕಾರದ ಸುಂದರ ಕೋಟೆ ಇದೆ. ಕಂಚಿಯಿಂದ ವಲಸೆ ಬಂದ ಆವತಿ ರಾಜವಂಶದ ಮಲ್ಲಬೈರೇಗೌಡ ೧೫೦೧ ರಲ್ಲಿ ಈ ಕೋಟೆ ಕಟ್ಟಿದ ಎನ್ನುತ್ತದೆ ಇತಿಹಾಸ.
೧೪ನೇ ಶತಮಾನದ ಆದಿಯಲ್ಲಿ ತಮಿಳುನಾಡಿನ ಕಾಂಚೀಪುರ ಸಮೀಪದ ಅತ್ತೂರಿನ ಪಾಳೆಯಗಾರರ ಉಪಟಳ ತಾಳಲಾರದೆ ಊರು ಬಿಟ್ಟು ಬಂದ ರಣಭೈರೇಗೌಡ ಹಾಗೂ ಆತನ ಆರು ಸಹೋದರರು ಸಮೃದ್ಧವಾಗಿ ನೀರಿದ್ದ ದೇವನಹಳ್ಳಿ ಸಮೀಪದ ಆವತಿ ಎಂಬ ಗ್ರಾಮದಲ್ಲಿ ನೆಲೆಸಿದರು. ಊರಿನಲ್ಲಿ ಉತ್ತಮ ಕೆಲಸ ಮಾಡಿ ಯಜಮಾನಿಕೆ ಮಾಡಿದರು. ೧೭೪೯ರಲ್ಲಿ ದಳವಾಯಿ ನಂಜರಾಜಯ್ಯ ಇದನ್ನು ವಶಪಡಿಸಿಕೊಂಡ. ಆಗ ಇದು ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಹೈದರಾಲಿಯ ಶೌರ್ಯ ಪ್ರತಾಪಗಳು ಬೆಳಕಿಗೆ ಬಂದಿದ್ದೇ ಈ ಯುದ್ಧದಲ್ಲಿ.
ಕೋಟೆ : ಕಲ್ಲು, ಇಟ್ಟಿಗೆ ಗಾರೆಯಿಂದ ನಿರ್ಮಿಸಿರುವ ಈ ಕೋಟೆಯಲ್ಲಿ ೧೩ ವೃತ್ತಾಕಾರದ ಕೊತ್ತಲಗಳಿವೆ. ಎರಡು ಚೌಕಾಕಾರದ ಬತೇರಿಗಳಿವೆ. ಪ್ರತಿ ಹೊರಭಿತ್ತಿಯ ಒಳಗಡೆ ಚಿಕ್ಕ ಚಿಕ್ಕ ರಂದ್ರಗಳಿವೆ. ರಂಧ್ರಗಳು ಇಂಗ್ಲೀಷ್ ವಿ ಆಕಾರದಲ್ಲಿದ್ದು ದೂರದರ್ಶಕದಂತೆ ಕೆಲಸ ಮಾಡುತ್ತದೆ. ಈ ಕಿಂಡಿಗಳಲ್ಲಿ ನೋಡಿದರೆ ಕೋಟೆಯ ಹೊರಗಿನ ಚಿತ್ರನ ಸಂಪೂರ್ಣ ಕಾಣುತ್ತದೆ. ಶತ್ರುಗಳಿಂದ ರಕ್ಷನೆ ಪಡೆಯಲು ಇದು ಅದ್ಭುತವಾದ ಕಾರ್ಯವಾಗಿದೆ.
ಕೋಟೆಯ ಪೂರ್ವದ ಬಾಗಿಲು ಬಿದ್ದು ಹೋಗಿದೆಯಾದರೂ ಪಶ್ಚಿಮದ ಬಾಗಿಲು ಸುಭದ್ರವಾಗಿದೆ. ಶತ್ರುಗಳ ದಾಳಿಯಿಂದ ರಕ್ಷಿಸಲು ಬೇಕಾದ ಸಕಲ ವ್ಯವಸ್ಥೆಯನ್ನೂ ಈ ಕೋಟೆಯಲ್ಲಿ ಮಾಡಲಾಗಿದೆ.