ನಮಸ್ಕಾರ ದಿವ್ಯಶ್ರೀ,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವಾಗ

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ

Palagiri (ಚರ್ಚೆ) ೦೩:೧೬, ೧೨ ಆಗಸ್ಟ್ ೨೦೧೫ (UTC)

ಲಂಡನ್ನಿನಲ್ಲಿ ಸಿಂಹಗರ್ಜನೆ ಬದಲಾಯಿಸಿ

೧೯೪೦ ಮಾರ್ಚ್ ೧೩ ಲಂಡನ್ ಪಟ್ಟಣದಲ್ಲಿ ಕ್ಯಾಕ್ಸ್ ಟನ್ ಹಾಲ್ ನಲ್ಲಿ ಒಮ್ದು ಸಮಾರಂಭ. ಅಲ್ಲಿ ಇದ್ದಕ್ಕಿದ್ದಂತೆ ಗುಂಡು ಹಾರಿತು. ಗಣ್ಯ ಆಂಗ್ಲನೊಬ್ಬ ಕೆಳಗುರುಳಿ ಸತ್ತ. ಸತ್ತವನು ಆಂಗ್ಲರಿಗೆ ಹೆಮ್ಮೆಯ ವ್ಯಕ್ತಿ. ದೊಡ್ಡ ಸಾಧನೆ ಮಾಡಿದವನು ಎಂದು ಅವನಿಗೆ ಹೆಸರಿತ್ತು. ಅವನ ಹೆಸರು ಸರ್ ಮೈಕೇಲ್ ಓಡ್ವೆಯರ್.

ಏನು ಅವನು ಮಾಡಿದ ಮಹತ್ಸಾಧನೆ? ಇಪ್ಪತ್ತು ವರ್ಷಗಳಿಗೆ ಮುಂಚೆ ಅವನು ಭಾರತದಲ್ಲಿದ್ದ. ಪಂಜಾಬ್ಪಂ ಪ್ರಾಂತದ ಗವರ್ನರ್ಜಾ ಆಗಿದ್ದ ಬಹಳ ದರ್ಪದ ಅಧಿಕಾರಿ . ದಮನ ದಬ್ಬಾಳಿಕೆಗಳಿಂದ ಭಾರತೀಯರನ್ನು ಬಗ್ಗು ಬಡಿಯಬಹುದು ಎಂದು ನಂಬಿದ್ದ. ೧೯೧೯ರಲ್ಲಿ ಅಮೃತಸರದಜಲಿಯನ್ ವಾಲಾ ಬಾಗ್ ನಲ್ಲಿ ಒಂದು ಸಂಜೆ ಬೃಹತ್ ಸಭೆ ಸೇರಿತ್ತು. ಸುಮಾರು ೧೦-೧೫ ಸಾವಿರ ಜನ ದೇಶಭಕ್ತ ಭಾರತೀಯರು ಅಲ್ಲಿದ್ದರು. ಅವರಿಗೆ ಬುದ್ಧಿ ಕಲಿಸಬೇಕೆಂದು ಗವರ್ನರ್ ಮತ್ತು ಅವನ ಅಧಿಕಾರಿಗಳು ನಿಶ್ಚಯಿಸಿದರು. ಮೈದಾನದ ಸುತ್ತಲೂ ಗೋಡೆಯಿತ್ತು. ಒಳಗೆ ಹೋಗಿ ಬರಲು ಒಂದೇ ಬಾಗಿಲು ಆ ಬಾಲಿಗ ಬಳಿಗೆ ಇಂಗ್ಲೀಷ್ ಸರಕಾರದ ಸೈನ್ಯ ಬಂತು. ಜೊತೆಗೆ ಮೆಷಿನ್ ಗನ್ ಗಳೂ ಇದ್ದವು. ಮುನ್ಸೂಚನೆ ಕೊಡದೆ ಸಭಿಕರ ಮೇಲೆ ಒಂದೇ ಸಮನೆ ಗುಂಡಿನ ಸುರಿಮಳೆಯಾಯಿತು. ಗವರ್ನರನ ಒಪ್ಪಿಗ್ಯಿಂದ ಜನರನ್ನು ಕೊಲ್ಲುವ ಉದ್ದೇಶದಿಂದಲೇ ಆ ಧಾಳಿ ನಡೆಯಿತು.

ನಿರಪರಾಧಿಗಳ ಚೀತ್ಕಾರ ಮುಗಿಲು ಮುಟ್ಟಿತು. ಐನ್ನೂರಕ್ಕೂ ಹೆಚ್ಚು ಜನ ಸತ್ತರು. ಸಾವಿರಾರು ಜನ ಗಾಯಗೊಂಡರು. ಭಾರತೀಯರು ತಮ್ಮ ದೇಶದಲ್ಲೇ ತಮ್ಮ ಊರಿನಲ್ಲೇ ಬಲಿಪಶುಗಳಂತೆ ನರಳಿ ಒದ್ದಡುತ್ತಾ ಪ್ರಾಣಬಿಟ್ಟರು. ಅನಾಥರಾದ ಹೆಂಗಸರು, ಮಕ್ಕಳಿಗೆ ಲೆಕ್ಕವೇ ಇಲ್ಲ. ಹಿರಿಯರು ಸಭೆಯಿಂದ ಮನೆಗೆ ಬರುವರೆಂದು ಕಾದು ಕುಳಿತವರಿಗೆ ನಿರಾಶೆ ಕಾದಿತ್ತು. ರಕ್ತ ನೀರಿನಂತೆ ಹರಿಯಿತು. ಅದೇ ಸಮಯದಲ್ಲಿ ಗವರ್ನರ್ ಓಡ್ವೆಯರ್ ಮತ್ತು ಅವನ ಅಧಿಕಾರಿಗಳು ಅಟ್ಟಹಾಸದಿಂದ ನಗುತ್ತಿದ್ದರು. ಇದೇ ಅವನು ಮಾಡಿದ ದೊಡ್ಡ ಸಾಹಸ. ಕೆಲವು ವರ್ಷಗಳ ನಂತರ ಓಡ್ವೆಯರ್ ಲಂಡನ್ನಿಗೆ ವಾಪಾಸಾದ. ಇಂಗ್ಲೀಷರು ಅವನನ್ನು ಹೊಗಳಿದರು. ಸನ್ಮಾನ ಮಾಡಿ ನಿಧಿ ಅರ್ಪಿಸಿದರು. ಓಡ್ವೆಯರ್ ತನ್ನ ಸಾಹಸಗಳನ್ನು ವಿವರಿಸಿದ. ಹೆಮ್ಮೆಯಿಂದ ಬೀಗಿದ.