ಸಂಧ್ಯಾವಂದನೆ

ಧಾರ್ಮಿಕ ಕ್ರಿಯೆಗಳು

ಸಂಧ್ಯಾವಂದನೆ ಹಿಂದೂ ಧರ್ಮದ ಎಲ್ಲ ದ್ವಿಜರು ಮಾಡಬೇಕಾದ ಒಂದು ಕಡ್ಡಾಯದ ಧಾರ್ಮಿಕ ಕ್ರಿಯಾವಿಧಿ. ವಿಶೇಷವಾಗಿ ಪವಿತ್ರ ದಾರದ ಸಮಾರಂಭವಾದ ಉಪನಯನವನ್ನು ವಿಧಿವತ್ತಾಗಿ ಮಾಡಿಸಿಕೊಂಡ ಮತ್ತು ಅದರ ನೆರವೇರಿಕೆಯಲ್ಲಿ ಗುರುವಿನಿಂದ ಆದೇಶ ಪಡೆದ ಬ್ರಾಹ್ಮಣರು ಮಾಡಬೇಕು. ಸಂಧ್ಯಾವಂದನೆ ವೇದಗಳ ಉದ್ಧರಣಗಳನ್ನು ಒಳಗೊಳ್ಳುತ್ತದೆ ಮತ್ತು ದಿನಕ್ಕೆ ಮೂರು ಬಾರಿ ಮಾಡಬೇಕಾಗುತ್ತದೆ ಬೆಳಿಗ್ಗೆ (ಪ್ರಾತಃಸಂಧ್ಯಾ), ಮಧ್ಯಾಹ್ನ (ಮಾಧ್ಯಾಹ್ನಿಕ) ಮತ್ತು ಸಂಜೆ (ಸಾಯಂಸಂಧ್ಯಾ). ಸಂಧ್ಯಾವಂದನೆ ಎಂದರೆ ಅಕ್ಷರಶಃ ಸಂಧ್ಯಾಗೆ ವಂದನೆ ಎಂದರ್ಥ.ಸಾಂಪ್ರದಾಯಿಕವಾಗಿ "ದಿನದ ಪರಿವರ್ತನೆ ಕ್ಷಣಗಳನ್ನು" ಅಥವಾ ಸಂಧಿಕಾಲಕ್ಕೆ ವಂದನೆಗಳನ್ನು ಸಲ್ಲಿಸುವುದು ಎನ್ನಲಾಗುತ್ತದೆ. ಸಂಧ್ಯಾವಂದನೆಯನ್ನು ಮಾಡುವಾಗ ಅನುಸರಿಸಬೇಕಾದ ಕ್ರಮಗಳು ೧.ಅಚಮನ ೨.ಪ್ರಾಣಾಯಾಮ ೩.ಮಾರ್ಜನ ೪.ಮಂತ್ರ ಪ್ರೋಕ್ಷಾನಂ' ೫.ಅಘಮರಶಾಸನ ೬.ಗಾಯತ್ರಿ ಜಪ ೭.ಉಪಸ್ತನಂ ೮.ಅಭಿವಾದನ

ನೋಡಿ ಬದಲಾಯಿಸಿ

ಸಂಧ್ಯಾವಂದನೆ ಮಂತ್ರ - (ಹವ್ಯಕ)ಟಿಪ್ಪಣಿ, ಅರ್ಥ , ಸೂಚನೆ ಗಳೊಂದಿಗೆ.-ಸಂಕ್ಷಿಪ್ತ ರೂಪ
ಸಂಧ್ಯಾವಂದನ ಪೂರ್ಣಪಾಠ ಟಿಪ್ಪಣಿ, ಅರ್ಥ , ಸೂಚನೆ ಗಳೊಂದಿಗೆ.
ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿ - ಸಂಧ್ಯಾವಂದನೆ ಬೋಧಾಯನ ಸ್ಮಾರ್ಥ ಹವ್ಯಕ ಪದ್ಧತಿ .
ದೇವತಾರ್ಚನ ವಿಧಿ
ಸಂಕ್ಷಿಪ್ತ ಪೂಜಾಕ್ರಮ
ಗಾಯತ್ರೀ ಪುಟ೨