ಸಂಗೀತಾ ರಾಜೀವ್
ಸಂಗೀತಾ ರಾಜೀವ್ ಅವರು ಬಹುಭಾಷಾ ಹಿನ್ನೆಲೆ ಗಾಯಕಿ, ಸಂಯೋಜಕರು, ಪಾಪ್ ಐಕಾನ್ ಹಾಗೂ ೨೦೧೯ರಲ್ಲಿ ದಿ ಬೆಸ್ಟ್ ಇಂಟರ್ನ್ಯಾಷನಲ್ ಪಾಪ್ ಸಾಂಗ್ ಆಫ್ ದ ಇಯರ್ ಎಂಬ ಜಾಗತಿಕ ವಿಮಾ ಮ್ಯೂಸಿಕ್ ಅವಾರ್ಡ್ಸ್ ಪಡೆದ ವಿಜೇತರಾಗಿದ್ದಾರೆ. ಕನ್ನಡ ವಾಹಿನಿಯಾಗಿರುವ ಝಿ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ ೧೨,ಸರಿಗಮಪ ಸೀಸನ್ ೧೩,೧೪ ಮತ್ತು ೧೫ರ ರಿಯಾಲಿಟಿ ಶೋನಲ್ಲಿ ಸಂಗೀತಾ ರಾಜೀವ್ ಅವರು ತೀರ್ಪುಗಾರರಾಗಿದ್ದಾರೆ. ಪ್ರಸ್ತುತ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ ೧೬ರ ತೀರ್ಪುಗಾರರಾಗಿದ್ದಾರೆ.[೧]
ಸಂಗೀತಾ ರಾಜೀವ್ | |
---|---|
ಹಿನ್ನೆಲೆ ಮಾಹಿತಿ | |
ಜನನ | ೨೩ ಅಕ್ಟೋಬರ್ ಬೆಂಗಳೂರು, ಕರ್ನಾಟಕ, ಭಾರತ |
ಮೂಲಸ್ಥಳ | ಭಾರತ |
ಸಂಗೀತ ಶೈಲಿ | ಪಾಪ್, ಬಾಲಿವುಡ್, ಎಲೆಕ್ಟ್ರಾನಿಕ್ ನೃತ್ಯ ಸಂಗೀತ |
ವೃತ್ತಿ | ಗಾಯಕಿ, ಸಂಯೋಜಕಿ, ನಟಿ |
ಸಕ್ರಿಯ ವರ್ಷಗಳು | ೨೦೧೦ – ಪ್ರಸ್ತುತ |
ಅಧೀಕೃತ ಜಾಲತಾಣ | www |
ವೈಯಕ್ತಿಕ ಜೀವನ
ಬದಲಾಯಿಸಿಸಂಗೀತಾ ರಾಜೀವ್ ಅವರು ಬೆಂಗಳೂರಿನ ಸಿಲಿಕಾನ್ ವ್ಯಾಲಿಯಲ್ಲಿ ಜನಿಸಿದರು. ಇವರ ತಂದೆ ಎಸ್.ರಾಜೀವ್ ಅವರು ವೃತ್ತಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿದ್ದು ಅಧಿಕೃತ ವರ್ಗಾವಣೆಯ ಮೇಲೆ ಮುಂಬಯಿಗೆ ತೆರಳಬೇಕಾಯಿತು. ಅವರು ತಮ್ಮ ಕುಟುಂಬದೊಂದಿಗೆ ಮುಂಬಯಿಗೆ ತೆರಳಿದರು. ಆಗ ಸಂಗೀತಾ ಅವರಿಗೆ ಆರು ವರ್ಷವಾಗಿತ್ತು.ಅಲ್ಲಿ ಅವರು ತಮ್ಮ ಬಾಲ್ಯದ ಹೆಚ್ಚಿನ ಸಮಯವನ್ನು ಕಳೆದಿದ್ದರು. ಮುಂಬೈನಲ್ಲಿ ಭರತನಾಟ್ಯವನ್ನು ಅಲ್ಪಾ ಪಾಂಡೆ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ತಮ್ಮ ತಾಯಿ ಎಂ.ಕೆ.ಶಾರದಾಂಬ ಅವರಿಂದ ತರಬೇತಿ ಪಡೆದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಶ್ರೀ ಅನಂತ್ ಭಾಗವತ್ ಅವರಿಂದ ತರಬೇತಿ ಪಡೆದರು.[೨]
ವಿದ್ಯಾಭ್ಯಾಸ
ಬದಲಾಯಿಸಿಸಂಗೀತಾ ಅವರು ತಮ್ಮ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಮಾಡಿದರು. ನಂತರ ಇವರು ಬೆಂಗಳೂರಿನ ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ ಪದವೀಧರರಾದರು. ಅಲ್ಲಿನ ಉನ್ನತ ದೈತ್ಯರೊಂದಿಗೆ ಇವರು ಕೆಲಸ ಮಾಡಿದ್ದಾರೆ. ಮುಂದೆ ಯುಕೆ ಮೂಲದ ಮತ್ತೊಂದು ಕಂಪನಿಯೊಂದಿಗೆ ಕೆಲಸ ಮಾಡಲು ಇಂಗ್ಲೆಂಡಿಗೆ ತೆರಳಿದರು. ನಂತರ ತಮ್ಮ ಸಂಗೀತವನ್ನು ಮುಂದುವರೆಸಲು ಭಾರತಕ್ಕೆ ಹಿಂದಿರುಗಿದರು.[೧]
ವೃತ್ತಿ ಜೀವನ
ಬದಲಾಯಿಸಿಸಂಗೀತಾ ಅವರು ತಮ್ಮ ವೃತ್ತಿ ಜೀವನವನ್ನು ಕನ್ನಡ ಚಿತ್ರಗಳಿಂದ ಪ್ರಾರಂಭಿಸಿದರು. ಇವರನ್ನು ಕನ್ನಡ ಉದ್ಯಮಕ್ಕೆ ಸಂಗೀತ ಸಂಯೋಜಕರಾಗಿರುವ ಧರ್ಮ ವಿಶ್ ಅವರು ಪರಿಚಯಿಸಿದರು. ನಂತರ ಆನೆ ಪಟಾಕಿ ಚಿತ್ರದ '೮ನೇ ತರಗತಿ' ಎಂಬ ಹಾಡಿನ ಧ್ವನಿ ಮೂಡಿಸಿದರು. ಇದಕ್ಕಾಗಿ ಅವರು ಅದೇ ವರ್ಷ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಪಡೆದರು. ನಂತರ ಅವರನ್ನು ಟಾಲಿವುಡ್ ಉದ್ಯಮಕ್ಕೆ ಕ್ಷಣಂ ಚಲನಚಿತ್ರದ ಸಂಗೀತ ಸಂಯೋಜಕರಾಗಿರುವ ಶ್ರೀಚರಣ್ ಪಕಲ ಮತ್ತು ನಿರ್ದೇಶಕಿ ಶ್ರೀರಂಜಿನಿಯವರ ಮೂಲಕ ಪೌರಾಣಿಕ ನಟ ಹಾಗೂ ನಿರ್ಮಾಪಕ ಆಗಿರುವ ಅಕ್ಕಿನೇನಿ ನಾಗರ್ಜುನ ಅವರ ಅನ್ನಪೂರ್ಣ ಸ್ಟೂಡಿಯೋಸ್ನಲ್ಲಿ ಪರಿಚಯಿಸಿದರು. ಇವರು ತೆಲುಗು ಚಲನಚಿತ್ರದಲ್ಲಿ ತಮ್ಮ ವೃತ್ತಿಜೀವನವನ್ನು ರಂಗುಲರತ್ನಂ ಎಂಬ ಚಿತ್ರದಿಂದ ಪ್ರಾರಂಭಿಸಿದರು. ಬಾಲಿವುಡ್ ಚಲನಚಿತ್ರ ಸಿಂಪ್ಲಿ ಏಕ್ ಲವ್ ಸ್ಟೋರಿಯಲ್ಲೂ ಹಾಡಿದ್ದಾರೆ.[೩]
ಸನ್ಮಾನಗಳು
ಬದಲಾಯಿಸಿಸಂಗೀತಾ ಅವರನ್ನು ಇತ್ತೀಚಿಗೆ ಲಂಡನ್ನಿನ ಥೇಮ್ಸ್ ನದಿಯ ದಡದಲ್ಲಿರುವ ಬಸವೇಶ್ವರ ಪ್ರತಿಮೆಯಲ್ಲಿ ಲಂಡನ್ ಬರೋ ಆಫ್ ಲ್ಯಾಂಬೆತ್ನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಅವರು ಸನ್ಮಾನಿಸಿದರು. ಭಾರತದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಲಂಡನ್ನಿನಲ್ಲಿರುವ ಬಸವೇಶ್ವರ ಬಸವ ಪ್ರತಿಮೆಯನ್ನು ಅನಾವರಣಗೊಳಿಸಿದಾಗ ಬಿಡುಗಡೆ ಮಾಡಿದ ಸ್ಮರಣಾರ್ಥವನ್ನು ಅವರಿಗೆ ಗೌರವಿಸಲಾಯಿತು.[೪]
ಪ್ರದರ್ಶನಗಳು
ಬದಲಾಯಿಸಿಭಾರತ ಹಾಗೂ ವಿಶ್ವದಾದ್ಯಂತ ೧೦೦೦ಕ್ಕೂ ಹೆಚ್ಚು ಲೈವ್ ಸಂಗೀತ ಕಚೇರಿಗಳ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಸೊಗಸಾದ ವೇದಿಕೆಯ ಉಪಸ್ಥಿತಿ ಮತ್ತು ಉತ್ಸಾಹಭರಿತ ಗುಂಪಿನ ಪರಸ್ಪರ ಕ್ರಿಯೆಗೆ ಹೆಸರುವಾಸಿಯಾಗಿದ್ದಾರೆ. ಫೆಮಿನಾ(ಭಾರತ) ಹೇಳುತ್ತಾರೆ:"ಸಂಗೀತಾ ರಾಜೀವ್ ಅವರನ್ನು ವೇದಿಕೆಗೆ ಕರೆದೊಯ್ಯುವಾಗ ಪ್ರದರ್ಶನ ನಿಜವಾಗಿಯೂ ಪ್ರಾರಂಭವಾಗುತ್ತದೆ. ಆಕೆಯ ರಂಗದ ಉಪಸ್ಥಿತಿಯು ಪ್ರೇಕ್ಷಕರನ್ನು ತನ್ನ ಪ್ರತಿಯೊಂದು ರಾಗಕ್ಕೂ ಅಕ್ಷರಶಃ ನೃತ್ಯ ಮಾಡಿಸುತ್ತದೆ. ರಾಕ್ ಇಟ್ ಲೈಕ್ ಎ ಲೇಡಿ".ಸ್ಟಾರ್ ಸ್ಪೋರ್ಟ್ಸ್, ಕರ್ನಾಟಕ ಸ್ಟೇಟ್ ಕ್ರಿಕೆಟ್ ಎಸೋಸಿಯೇಷನ್, ಪ್ರೊ ಕಬಡ್ಡಿ ಲೀಗ್, ಮೈಸೂರು ದಸರಾ, ಮಡಿಕೇರಿ ದಸರಾ, ಬೀದರ್ ಉತ್ಸವ್, ಕದ್ರಿ ಕ್ರಿಕೆಟರ್ಸ್, ಬೆಂಗಳೂರು ಗಣೇಶ ಉತ್ಸವ, ಪೆಡಿಕಾನ್ ಇಂಡಿಯಾ, ಡೆರ್ಮಕಾನ್ ಇಂಡಿಯಾ, ಸ್ಯಾಮ್ಸಂಗ್ ಆರ್ ಆಂಡ್ ಡಿ ಇನಸ್ಟಿಟ್ಯೂಟ್ ಇಂಡಿಯಾ,ಬೆಂಗಳೂರು, ಒರಾಕಲ್ ಕಾರ್ಪೊರೇಷನ್, ಬಾಷ್, ಟೊಯೋಟಾ, ಟಿವಿಎಸ್ ಮೋಟಾರ್ ಕಂಪನಿ, ಬೆಂಗಳೂರು ಅರಮನೆ, ಥಾಮ್ಸನ್ ರಾಯಿಟರ್ಸ್, ಮ್ಯಾನ್ಕೈಂಡ್ ಫಾರ್ಮಾ, ಕಾಗ್ನಿಜಂಟ್ ಕನ್ನಡ ಅಂತರಾಷ್ಟ್ರೀಯ ಸಂಗೀತ ಪ್ರಶಸ್ತಿಗಳು, ಅಂತರಾಷ್ಟ್ರೀಯ ಆಹಾರ ಉತ್ಸವ, ರೋಟರಿ ಕ್ಲಬ್ಗಳು, ಕಾಲೇಜು ಕಾರ್ಯಕ್ರಮಗಳು, ದೂರದರ್ಶನ, ರೇಡಿಯೋ ಮತ್ತು ಮಾಧ್ಯಮಗಳಲ್ಲಿ ಪ್ರದರ್ಶನಗಳನ್ನು ನೀಡಿದ್ದಾರೆ. ಟೊಯೋಟಾ ಯಾರಿಸ್ ಕಾರಿನ ಮೆಗಾ ಲಾಂಚ್ಗಾಗಿ ಇವರು ಬಾಲಿವುಡ್ ಹಿನ್ನೆಲೆ ಗಾಯಕ ಶಾನ್ (ಗಾಯಕ) ಅವರೊಂದಿಗೆ ಪ್ರದರ್ಶನ ನೀಡಿದರು.[೫]
ಟಾಪ್ ಹಿಟ್ಸ್
ಬದಲಾಯಿಸಿವರ್ಷ | ಶೀರ್ಷಿಕೆ | ಚಲನಚಿತ್ರ / ಆಲ್ಬಮ್ | ಸಂಯೋಜಕರು | ಭಾಷೆ | ಮೂಲ |
---|---|---|---|---|---|
೨೦೧೩ | "ಎಂಟನೇ ತರಗತಿ" | ಆನೆ ಪಟಾಕಿ | ಧರ್ಮ ವಿಷ್ | ಕನ್ನಡ | [೬] |
೨೦೧೩ | "ತಿನ್ಬೇಡಕಮ್ಮಿ" | ಲೂಸಿಯ (೨೦೧೩ ಚಲನಚಿತ್ರ) | ಪೂರ್ಣಚಂದ್ರ ತೇಜಸ್ವಿ (ಸಂಯೋಜಕರು) | ಕನ್ನಡ | [೭] |
೨೦೧೪ | "ಹೊಲೆ ಹೊಲೆ" | ಸಿಂಪ್ಲಿ ಏಕ್ ಲವ್ ಸ್ಟೋರಿ | ಕಾರ್ತಿಕ್ ವಿಜಯ್ | ಹಿಂದಿ | [೮] |
೨೦೧೫ | "ಅಲಿ ಬಾಬ" | ರೆಬೆಲ್ | ಜಾಸ್ಸಿ ಗಿಫ್ಟ್ | ಕನ್ನಡ | [೯] |
೨೦೧೫ | "ನಮ್ಮ ಈ ಆಟ" | ಆಧ್ಯ | ಜೀವನ್ ರೆಡ್ಡಿ | ಕನ್ನಡ | |
೨೦೧೬ | "ಬಿಜಿಲಿ ಕೃಷ್ಣ" | ಐ ಡ್ಯಾಷ್ ಯು | ಆದಿಲ್ ನದಫ್ | ಕನ್ನಡ | |
೨೦೧೬ | "ಹೀರೊ ಸೈಕಲ್ನಲ್ಲಿ ನಾನು" | ಭುಜಂಗ | ಪೂರ್ಣಚಂದ್ರ ತೇಜಸ್ವಿ (ಸಂಯೋಜಕರು) | ಕನ್ನಡ | [೧೦] |
೨೦೧೬ | "ಖುಷಿ" | "ಲೂಟಿ" | ಧರ್ಮ ವಿಷ್ | ತುಳು | [೧೧] |
2017 | "ಧೂಳ್ ಎಬ್ಬುಸ್ರೊ" | ರಾಜ್ ವಿಷ್ಣು | ಅರ್ಜುನ್ ಜನ್ಯ | ಕನ್ನಡ | [೧೨] |
೨೦೧೮ | "ಬರ್ತ್ ಡೇ" | ರಂಗುಲ ರತ್ನಮ್ | ಶ್ರೀಚರಣ್ ಪಕಲ | ತೆಲುಗು | [೧೩] |
೨೦೧೮ | "ನಮ್ದೆ ಲೈಫು" | ಎಡಕಲ್ಲು ಗುಡ್ಡದ ಮೇಲೆ | ಆಶಿಕ್ ಅರುಣ್ | ಕನ್ನಡ | [೧೪] |
೨೦೧೯ | "ರಮ್ ರಮ್ ರರಮ್ (ಸೈಕೆಡಲಿಕ್ ಸಾಂಗ್)" | ಮಟಾಶ್ | ಎಸ್.ಡಿ.ಅರವಿಂದ | ಕನ್ನಡ | [೧೫] |
೨೦೧೯ | "ಹಾರ್ಟಲ್ಲಿ" | ಚಾಣಕ್ಷ | ಅಭಿಮಾನ್ ರಾಯ್ | ಕನ್ನಡ | [೧೬] |
೨೦೧೯ | "ಪಯಣವ" | ಪ್ರೀಮಿಯರ್ ಪದ್ಮಿನಿ (ಚಲನಚಿತ್ರ) | ಅರ್ಜುನ್ ಜನ್ಯ | ಕನ್ನಡ | [೧೭] |
೨೦೧೯ | "ತಾಶ" | ಕುಷ್ಕ (ಚಲನಚಿತ್ರ) | ಅಭಿಲಾಷ್ ಗುಪ್ತಾ | ಕನ್ನಡ | [೧೮] |
ಆಲ್ಬಮ್ಗಳು
ಬದಲಾಯಿಸಿವರ್ಷ | ಆಲ್ಬಮ್ ಹೆಸರು | ಸಂಯೋಜಕರು | ಭಾಷೆ |
---|---|---|---|
2013 | "ಸರ್ವಸ" [೧೯] | ಸಂಗೀತಾ ರಾಜೀವ್ | ಕನ್ನಡ |
2016 | "ಚಾನ್ ಸೇ ಉಡಿ" [೨೦] | ಸಂಗೀತಾ ರಾಜೀವ್ | ಹಿಂದಿ |
2017 | "ಕರೆ" [೨೧] | ಸಂಗೀತಾ ರಾಜೀವ್ | ಕನ್ನಡ |
2018 | "ತೂ ಹಿ" [೨೨] | ಸಂಗೀತಾ ರಾಜೀವ್ | ಹಿಂದಿ |
2018 | "ಈ ಸಲ ಕಪ್ ನಮ್ದೆ (ಆರ್ ಸಿ ಬಿ ಆಂತೆಮ್)" [೨೩] | ಸಂಗೀತಾ ರಾಜೀವ್ | ಕನ್ನಡ |
2018 | "ಝಿಂದಗಿ" [೨೪] | ಸಂಗೀತಾ ರಾಜೀವ್ | ಹಿಂದಿ |
2018 | "ನನ್ ಈ ಲೈಫ್" [೨೫] | ಸಂಗೀತಾ ರಾಜೀವ್ | ಕನ್ನಡ |
2019 | "ಹೈ ಸಲಾಮ್" [೨೬] | ಸಂಗೀತಾ ರಾಜೀವ್ | ಹಿಂದಿ |
ಪ್ರಶಸ್ತಿಗಳು
ಬದಲಾಯಿಸಿವರ್ಷ | ಪ್ರಶಸ್ತಿ | ಶೀರ್ಷಿಕೆ |
---|---|---|
೨೦೧೯ | ವಿಮಾ ಮ್ಯೂಸಿಕ್ ಅವಾರ್ಡ್ಸ್, ಏಷ್ಯಾ | ಬೆಸ್ಟ್ ಪಾಪ್ ಸಾಂಗ್ (ವಿನ್ನರ್) |
೨೦೧೯ | ವಿಮಾ ಮ್ಯೂಸಿಕ್ ಅವಾರ್ಡ್ಸ್, ಏಷ್ಯಾ | ಬೆಸ್ಟ್ ಇಂಡಿಯನ್ ಸಾಂಗ್ (ನಾಮಿನಿ) |
೨೦೧೮ | ಕನ್ನಡ ಇಂಟರ್ನ್ಯಾಷನಲ್ ಮ್ಯೂಸಿಕ್ ಅವಾರ್ಡ್ಸ್ | ಬೆಸ್ಟ್ ಪ್ಲೇಬ್ಯಾಕ್ ಸಿಂಗರ್ (ನಾಮಿನಿ) |
೨೦೧೮ | ಕನ್ನಡ ಇಂಟರ್ನ್ಯಾಷನಲ್ ಮ್ಯೂಸಿಕ್ ಅವಾರ್ಡ್ಸ್ | ಬೆಸ್ಟ್ ಮ್ಯೂಸಿಕ್ ವೀಡಿಯೊ (ನಾಮಿನಿ) |
೨೦೧೪ | ಕನ್ನಡ ಇಂಟರ್ನ್ಯಾಷನಲ್ ಮ್ಯೂಸಿಕ್ ಅವಾರ್ಡ್ಸ್ | ಬೆಸ್ಟ್ ಪ್ಲೇಬ್ಯಾಕ್ ಸಿಂಗರ್ (ವಿನ್ನರ್) |
೨೦೧೨ | ರೇಡಿಯೊ ಸಿಟಿ (ಇಂಡಿಯನ್ ರೇಡಿಯೊ ಸ್ಟೇಷನ್) ಸೂಪರ್ ಸಿಂಗರ್ | ರನ್ನರ್ ಅಪ್ |
೨೦೦೮ | ಸ್ಟಾರ್ ಇಂಡಿಯಾ ಏಷಿಯಾನೆಟ್ ಸುವರ್ಣ | ಕಾನ್ಫಿಡೆಂಟ್ ಸ್ಟಾರ್ ಸಿಂಗರ್ |
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ https://www.youthkiawaaz.com/2016/06/career-dancer-injury-singer/
- ↑ http://www.newindianexpress.com/cities/bengaluru/2013/oct/22/Lets-get-rocking-in-Kannada-528858.html
- ↑ "ಆರ್ಕೈವ್ ನಕಲು". Archived from the original on 2019-07-20. Retrieved 2019-07-20.
- ↑ https://www.thehindu.com/entertainment/music/sangeetha-rajeev-indian-independent-music-won-vima-award/article26634139.ece
- ↑ "ಆರ್ಕೈವ್ ನಕಲು". Archived from the original on 2019-02-12. Retrieved 2019-07-20.
- ↑ * Dance number by Sangeetha
- ↑ * Buy Sangeetha's song Thinbedakami on iTunes
- ↑ * [೧]
- ↑ * https://www.youtube.com/watch?v=N90i3U3YHnM
- ↑ * Purchase Sangeetha's Hero Cycle on iTunes
- ↑ * First Kannada movie to have Tulu Songs sung by Sangeetha Rajeev
- ↑ * [೨]
- ↑ * [೩]
- ↑ * [೪]
- ↑ * [೫]
- ↑ * [೬]
- ↑ * [೭]
- ↑ * [೮]
- ↑ *Buy Sarvasva songs on iTunes
- ↑ *Sangeetha's much awaited song "Chan Se Udi" on iTunes
- ↑ *[೯]
- ↑ *[೧೦]
- ↑ *[೧೧]
- ↑ *[೧೨]
- ↑ *[೧೩]
- ↑ *[೧೪]