ಪ್ರೀಮಿಯರ್ ಪದ್ಮಿನಿ (ಚಲನಚಿತ್ರ)
ಪ್ರೀಮಿಯರ್ ಪದ್ಮಿನಿ ರಮೇಶ್ ಇಂದಿರಾ ಬರೆದು ನಿರ್ದೇಶಿಸಿರುವ ೨೦೧೯ ರ ಭಾರತೀಯ ಕನ್ನಡ ಭಾಷೆಯ ಚಲನಚಿತ್ರ. ಈ ಚಿತ್ರವು ಕಿರುತೆರೆಯ ನಿರ್ಮಾಪಕಿ ಶ್ರುತಿ ನಾಯ್ಡುರವರು ನಿರ್ಮಿಸಿರುವ ಮೊದಲ ಚಲನಚಿತ್ರ, ಇದನ್ನು ಅವರು ತಮ್ಮ ಸ್ವಂತ ಬ್ಯಾನರ್ ಶ್ರುತಿ ನಾಯ್ಡು ಚಿತ್ರ ಅಡಿಯಲ್ಲಿ ನಿರ್ಮಿಸಿದ್ದಾರೆ.[೧] ಚಿತ್ರದಲ್ಲಿ ಜಗ್ಗೇಶ್, ಮಧೂ, ಸುಧಾರಾಣಿ, ಹಿತಾ ಚಂದ್ರಶೇಖರ್ ಮತ್ತು ವಿವೇಕ್ ಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. [೨] ಪೋಷಕ ಪಾತ್ರವರ್ಗದಲ್ಲಿ ಎಚ್‌ಜಿ ದತ್ತಾತ್ರೇಯ, ಭಾರ್ಗವಿ ನಾರಾಯಣ್ ಮತ್ತು ಪ್ರಮೋದ್ ಇದ್ದಾರೆ.
ಪ್ರೀಮಿಯರ್ ಪದ್ಮಿನಿ | |
---|---|
ನಿರ್ದೇಶನ | ರಮೇಶ್ ಇಂದಿರಾ |
ನಿರ್ಮಾಪಕ | ಶ್ರುತಿ ನಾಯ್ಡು |
ಚಿತ್ರಕಥೆ | ರಮೇಶ್ ಇಂದಿರಾ |
ಕಥೆ | ರಮೇಶ್ ಇಂದಿರಾ |
ಪಾತ್ರವರ್ಗ | ಜಗ್ಗೇಶ್ ಮಧು ಸುಧಾರಾಣಿ ವಿವೇಕ್ ಸಿಂಹ ಹಿತಾ ಚಂದ್ರಶೇಖರ್ |
ಸಂಗೀತ | ಅರ್ಜುನ್ ಜನ್ಯ |
ಛಾಯಾಗ್ರಹಣ | ಅದ್ವೈತ ಗುರುಮೂರ್ತಿ |
ಸಂಕಲನ | ರಾಜೇಂದ್ರ ಅರಸು |
ಸ್ಟುಡಿಯೋ | ಶ್ರುತಿ ನಾಯ್ಡು ಚಿತ್ರ |
ಬಿಡುಗಡೆಯಾಗಿದ್ದು |
|
ದೇಶ | ಭಾರತ |
ಭಾಷೆ | ಕನ್ನಡ |
ಚಿತ್ರದ ತಾಂತ್ರಿಕ ಸಿಬ್ಬಂದಿಗಳಲ್ಲಿ ಸಂಗೀತ ಸಂಯೋಜಕರಾಗಿ ಅರ್ಜುನ್ ಜನ್ಯಾ, ಛಾಯಾಗ್ರಾಹಕರಾಗಿ ಅದ್ವೈತ ಗುರುಮೂರ್ತಿ, ಸಂಕಲನಕಾರರಾಗಿ ರಾಜೇಂದ್ರ ಅರಸ್ ಕೆಲಸ ನಿರ್ವಹಿಸಿದ್ದಾರೆ.[೩]
ಈ ಚಿತ್ರವು ಮಾರ್ಚ್ ೨೦೧೮ ರ ಆರಂಭದಲ್ಲಿ ಪ್ರಾರಂಭವಾಯಿತು ಮತ್ತು ೨೬ ಏಪ್ರಿಲ್ ೨೦೧೯ ರಂದು ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. [೪] ಜೀ ಕನ್ನಡ ವಾಹಿನಿಯಲ್ಲಿ 2019 ರ ಸೆಪ್ಟೆಂಬರ್ 29 ರಂದು ಚಲನಚಿತ್ರ ಪ್ರಸಾರವಾಯಿತು.
ಪಾತ್ರವರ್ಗ
ಬದಲಾಯಿಸಿ- ವಿನಾಯಕ್ ಪಾತ್ರದಲ್ಲಿ ಜಗ್ಗೇಶ್
- ಶೃತಿ ಪಾತ್ರದಲ್ಲಿ ಮಧೂ
- ವಿವೇಕ್ ಸಿಂಹ
- ಸ್ಪಂದನ ಪಾತ್ರದಲ್ಲಿಸುಧಾರಾಣಿ
- ಹಿತಾ ಚಂದ್ರಶೇಖರ್
- ಚಾಲಕ ನಂಜುಂಡಿಯಾಗಿ ಪ್ರಮೋದ್
- ಎಚ್.ಜಿ ದತ್ತಾತ್ರೇಯ
- ರಮೇಶ್ ಇಂಡಿಯಾರ
- ಭಾರ್ಗವಿ ನಾರಾಯಣ್
ಧ್ವನಿಪಥ
ಬದಲಾಯಿಸಿಅರ್ಜುನ್ ಜನ್ಯಾ ಚಿತ್ರಕ್ಕಾಗಿ ಧ್ವನಿಪಥ ಮತ್ತು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. [೫] ಈ ಆಲ್ಬಂ ನಾಲ್ಕು ಹಾಡುಗಳನ್ನು ಒಳಗೊಂಡಿದೆ.
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರ(ರು) | ಸಮಯ |
1. | "ಪ್ರೀಮಿಯರ್ ಪದ್ಮಿನಿ" | ಯೋಗರಾಜ್ ಭಟ್t | ವಿಜಯ್ ಪ್ರಕಾಶ್ | ೦೩:೪೦ |
2. | "ನಾ ಹುಡುಕೋ ನಾಳೆ" | ವಿ. ನಾಗೇಂದ್ರ ಪ್ರಸಾದ್ | ನಿಹಾಲ್ ಟೌರೊ | ೦೩:೪೨ |
3. | "ಪಯಣವ" | ಸಾಯಿ ಸರ್ವೇಶ್ | ಸಂಜಿತ್ ಹೆಗ್ಡೆ | ೦೩:೧೭ |
4. | "ಯಾರು ಇಲ್ಲದ ಮನೆ" | ಕವಿರಾಜ್ | ವ್ಯಾಸರಾಜ್ | ೦೩:೩೨ |
ಉಲ್ಲೇಖಗಳು
ಬದಲಾಯಿಸಿ- ↑ "Premier Padmini' Launched". Chitraloka. 15 March 2018. Archived from the original on 26 ಏಪ್ರಿಲ್ 2019. Retrieved 26 ಅಕ್ಟೋಬರ್ 2019.
- ↑ "Jaggesh and Madhoobala come together for "Premeir Padmini"". Purely Cinema. 16 April 2018. Archived from the original on 26 ಏಪ್ರಿಲ್ 2019. Retrieved 26 ಅಕ್ಟೋಬರ್ 2019.
- ↑ "Filmmakers roll out open-top Premier Padmini to audience". Cinema Express. 17 April 2019.
- ↑ "Jaggesh-starrer Premier Padmini releases today". 26 April 2019.
- ↑ "Premier Padmini got Arjun Janya to break his routine". 18 February 2019.