ಭಾರ್ಗವಿ ನಾರಾಯಣ್

ಭಾರತೀಯ ನಟಿ (೧೯೩೮-೨೦೨೨)

ಭಾರ್ಗವಿ ನಾರಾಯಣ್, (೧೯೩೮ ಫೆಬ್ರವರಿ, ೪-೨೦೨೨, ಫೆಬ್ರವರಿ,೧೪) ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ಚಲನಚಿತ್ರದ ನಟಿ. [] ಮತ್ತು ಕರ್ನಾಟಕದ, ರಂಗಭೂಮಿಯ ಕಲಾವಿದೆ. ಭಾರ್ಗವಿ ನಾರಾಯಣ್ ಅವರ ಕೆಲವು ಪ್ರಸಿದ್ಧ ಚಿತ್ರಗಳು ನಟಿಸಿದ್ದಾರೆ.ಎರಡು ಕನಸು (೧೯೪೭), ಪಲ್ಲವಿ ಅನುಪಲ್ಲವಿ (೧೯೮೩) ಮತ್ತು ಬಾ ನಲ್ಲೆ ಮಧುಚಂದ್ರಕೆ (೧೯೯೩) ಹಾಗೂ ಮುಂತಾದವು.

ವೃತ್ತಿಜೀವನ

ಬದಲಾಯಿಸಿ

ಭಾರ್ಗವಿ ನಾರಾಯಣ್, ಅವರು ಇಪ್ಪತ್ತು ಎರಡು ಚಿತ್ರಗಳು ಹಗೂ ದೂರದರ್ಶನದ ಸರಣಿಯ ಮಂಥನಾ ಮತ್ತು ಮುಕ್ತಾ (ಟಿವಿ ಸರಣಿಗಳು) ಸೇರಿದಂತೆ ಕನ್ನಡದಲ್ಲಿ ಅನೇಕ ನಾಟಕಗಳನ್ನು ನಟಿಸಿದ್ದಾರೆ. ಅವರು ಎಐರ್ ನ ಮಹಿಳಾ ಕಾರ್ಯಕ್ರಮಗಳಿಗಾಗಿ ಮತ್ತು ಮಹಿಳಾ ಸಂಘದ ಮಕ್ಕಳಿಗಾಗಿ ಕರ್ನಾಟಕ ನಾಟಕಗಳನ್ನು ಬರೆದಿದ್ದಾರೆ ಮತ್ತು ನಿರ್ದೇಶಿಸಿದ್ದಾರೆ. ಅವರು ಕನ್ನಡ ನಾಟಕ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ.[] ,[]

ಕಲೆಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮುನ್ನ, ಭಾರ್ಗವಿ ಅವರು ಬೆಂಗಳೂರಿನ ಇಎಸ್ಐ ಕಾರ್ಪೊರೇಶನ್ ಅಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು. ಅವರು ಬೆಂಗಳೂರಿನ ಅಂಕಿತಾ ಪುಸ್ತಕ ಪ್ರಕಟಿಸಿದ 'ನಾ ಕ೦ಡ ನಮ್ಮವರ' ಎಂಬ ಕನ್ನಡದಲ್ಲಿ ಪುಸ್ತಕವನ್ನು ಬರೆದಿದ್ದಾರೆ.[]

ವೈಯಕ್ತಿಕ ಜೀವನ

ಬದಲಾಯಿಸಿ

ಭಾರ್ಗವಿ ೪ ಫೆಬ್ರವರಿ ೧೯೩೮ ರಂದು ಮತ್ತು ನಾಮಗಿರಿಯಮ್ಮ ಮತ್ತು ಎಂ.ರಾಮಸ್ವಾಮಿಯವರಿಗೆ ಜನಿಸಿದರು. ಬೆಲ್ಲಾವಾಡಿ ನಂಜುಂಡಯ್ಯ ನಾರಾಯಣ,ಇವರು ಕನ್ನಡ ಚಲನಚಿತ್ರದ ನಟ ಮತ್ತು ಸೌಂದರ್ಯ ವರ್ಧಕ ಕಲಾವಿದರಾಗಿದ್ದ, ಮೇಕಪ್ ನಾಣಿಯವರನ್ನು ಮದುವೆಯಾದರು. [] ಅವರಿಗೆ ನಾಲ್ಕು ಮಕ್ಕಳಿದ್ದಾರೆ; ಸುಜಾತಾ, ಪ್ರಕಾಶ್, ಪ್ರದೀಪ್ ಮತ್ತು ಸುಧಾ.[]. ಭಾರ್ಗವಿ ನಾರಾಯಣರ ಆತ್ಮಚರಿತ್ರೆ 'ನಾನು, ಭಾರ್ಗವಿ' [] ೨೦೧೨ ರಲ್ಲಿ ಬಿಡುಗಡೆಯಾಯಿತು, ಪ್ರಕಾಶಕ ಅಂಕಿತಾ ಪುಸ್ತಕ, ಬೆಂಗಳೂರು. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಂಘ, ಶಿವಮೊಗ್ಗ []ಮತ್ತು "ಶ್ರೀಮತಿ ಗಂಗಮ್ಮ ಸೊಮಾಪ್ಪ ಬೊಮ್ಮೈ ಪ್ರತಿಷ್ಠಾನ", ಧಾರವಾಡ, ಕರ್ನಾಟಕದಿಂದ ತನ್ನ ಪುಸ್ತಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಪ್ರಶಸ್ತಿಗಳು

ಬದಲಾಯಿಸಿ
  • ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು - ಅತ್ಯುತ್ತಮ ಪೋಷಕ ನಟಿ (೧೯೭೪-೭೫)
  • ಕರ್ನಾಟಕ ರಾಜ್ಯನಾಟಕ ಅಕಾಡೆಮಿ ಪ್ರಶಸ್ತಿಗಳು (೧೯೯೮)
  • ಮಂಗಳೂರು ಪ್ರತಿಷ್ಠಿತ ಸಂದೇಶ ಪ್ರಶಸ್ತಿ
  • ಆಳ್ವಾಸ್ ನಡಿಸಿರಿ ಪ್ರಶಸ್ತಿ(೨೦೦೫)
  • ಕರ್ನಾಟಕ ರಾಜ್ಯ ನಾಟಕ ಸ್ಪರ್ಧೆ - ಅತ್ಯುತ್ತಮ ನಟಿ (ಎರಡು ಬಾರಿ)
  • ಕರ್ನಾಟಕ ರಾಜ್ಯ ಮಕ್ಕಳ ನಾಟಕ ಸ್ಪರ್ಧೆ (೧೯೭೪-೭೫) - ರಾಜ್ಯ ಮಟ್ಟದ ಪ್ರಶಸ್ತಿ

ಚಲನಚಿತ್ರಗಳು

ಬದಲಾಯಿಸಿ
  • ಪ್ರೊಫೆಸರ್ ಹುಚ್ಚೂರಾಯ
  • ಪಲ್ಲವಿ ೧೯೭೬
  • ಮುಯ್ಯಿ ೧೯೭೯
  • ಅ೦ತಿಮ ಘಟ್ಟ ೧೯೮೭
  • ಜ೦ಬೂ ಸವಾರಿ ೧೯೯೩
  • ಕಾದ ಬೆಳದಿ೦ಗಳು ೨೦೦೩
  • ಇದೊಳ್ಳೆ ರಾಮಾಯಣ ೨೦೧೬

ಭಾರ್ಗವಿ ನಾರಾಯಣ್,(೮೪) ವಯೋಸಹಜ ಖಾಯಿಲೆಯಿಂದ ನಿಧನರಾದರು. []

ಉಲ್ಲೇಖಗಳು

ಬದಲಾಯಿಸಿ