ಸಂಗಮಾನಂದ ಸ್ವಾಮೀಜಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಶ್ರೀ 'ಸಂಗಮಾನಂದ ಸ್ವಾಮೀಜಿ (೧9.. - ), ಸರ್ವ ಧರ್ಮ ಸಮನ್ವಯ ಪೀಠ ಸೇವಾ ಟ್ರಸ್ಟ್ ಧಾರವಾಡ . ಪಂಚಮಸಾಲಿ, ಬಸವ ಧರ್ಮ .
ಶ್ರೀ 'ಸಂಗಮಾನಂದ ಸ್ವಾಮೀಜಿ' | |
---|---|
ಜನನ | ತುಮ್ಮಿನಕಟ್ಟಿ.ರಾಣೇಬೆನ್ನೂರು ತಾಲ್ಲೂಕು. ಹಾವೇರಿ ಜಿಲ್ಲೆ,ಕರ್ನಾಟಕ, |
ಜನ್ಮ ನಾಮ | ಸಲೀಂ ಶೇಖ್ ತುಮ್ಮಿನಕಟ್ಟಿ |
ಗುರು | ಗುರು ಬಸವಣ್ಣ |
ತತ್ವಶಾಸ್ತ್ರ | ಲಿಂಗಾಯತ ಧರ್ಮ,ಬಸವ ತತ್ವ |
ಯೋಗಿ |
ಜೀವನ
ಬದಲಾಯಿಸಿಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ತುಮ್ಮಿನಕಟ್ಟಿ ಗ್ರಾಮದ ಸುಸಂಸ್ಕೃತ ಮುಸಲ್ಮಾನ ಕುಟುಂಬದಲ್ಲಿ ಜನಿಸಿದ ಸಂಗಮಾನಂದರ ಮೊದಲ ಹೆಸರು ಸಲೀಂ ಶೇಖ್. ಇವರ ತಂದೆ ಶಿಕ್ಷಕರು ಮತ್ತು ಕೃಷಿಕರು . ಚಿಕ್ಕಂದಿನಲ್ಲಿಯೇ ಅಧ್ಯಾತ್ಮದ ಕಡೆ ಒಲವು ಹೊಂದಿದ್ದ ಸಲೀಂ ಶೇಖ್ ಬಸವಣ್ಣನವರ ಸಮಾನತೆ ಹಾಗೂ ಕಾಯಕ ತತ್ವಕ್ಕೆ ಆಕರ್ಷಿತಗೊಂಡು ಬಸವಧರ್ಮ ಸ್ವೀಕರಿಸಿದ್ದಾರೆ.
ಹಿಮಾಚಲಪ್ರದೇಶದಲ್ಲಿರುವ ಇಂಡಿಯನ್ ಸ್ಪಿರಿಚ್ಯುವಲ್ ಸೆಂಟರ್ ನಲ್ಲಿ ಎರಡು ವರ್ಷಗಳ ಕಾಲ ಸರ್ವ ಧರ್ಮಗಳ ಕುರಿತು ಅಧ್ಯಯನ ನಡೆಸಿರುವ ಸಂಗಮಾನಂದ ಸ್ವಾಮಿ ಕಾಶಿ, ಹರಿದ್ವಾರ ಮತ್ತಿತರ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ
ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರಿಂದ ಲಿಂಗದೀಕ್ಷೆ ಸ್ವೀಕರಿಸಿದ್ದರು. ಧಾರವಾಡದ ಸರ್ವ ಧರ್ಮ ಸಮನ್ವಯ ಪೀಠ ಸೇವಾ ಟ್ರಸ್ಟ್ ನ ಪೀಠಾಧ್ಯಕ್ಷರಾಗಿದ್ದಾರೆ..
ಶಿಕ್ಷಣ
ಬದಲಾಯಿಸಿಅವರು ಮೂಲತಹ ಮುಸಲ್ಮಾನ್ ಕುಟುಂಬದಿಂದ ಬಂದಿದ್ದರೂ ಅವರಲ್ಲಿ ಬೇರೂರಿರುವ ಬಸವ ಧರ್ಮದ ಪ್ರಚಾರ ದಲ್ಲಿ ತೊಡಗಿದ್ದಾರೆ.. ತಮ್ಮ ಹುಟ್ಟೂರಾದ ತುಮ್ಮಿನಕಟ್ಟೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಶ್ರೀ ಸಂಗನಬಸವೇಶ್ವರ ಪ್ರೌಢ ಶಾಲೆ ಪ್ರೌಢ ಶಿಕ್ಷಣವನ್ನು ಮತ್ತು ಶ್ರೀ ಸಂಗನಬಸವೇಶ್ವರ ಪದವೀ ಪೂರ್ವ ಮಹಾವಿದ್ಯಾಲಯದಲ್ಲಿ ಪದವೀ ಪೂರ್ವ ಶಿಕ್ಷಣವನ್ನು ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡದಲ್ಲಿ ಎಂ.ಎ. ಪದವಿದರರಾಗಿದ್ದಾರೆ...
ಸರ್ವ ಧರ್ಮಗಳ ಉದ್ಧಾರ ಮತ್ತು ಸಮನ್ವಯತೆಗಾಗಿ ಪ್ರಚಾರ ಕೈಗೊಂಡಿದ್ದಾರೆ...