ಷಡಕ್ಷರಪ್ಪ ಶೆಟ್ಟರ್

ಪ್ರೊ. ಷಡಕ್ಷರಪ್ಪ ಶೆಟ್ಟರ್ ಅವರು ಜನಿಸಿದ್ದು ೧೧, ಡಿಸೆಂಬರ್ ೧೯೩೫ ರಂದು ಬಳ್ಳಾರಿ ಜಿಲ್ಲೆ ಹಡಗಲಿ ತಾಲ್ಲೂಕಿನ ಹಂಪಸಾಗರದಲ್ಲಿ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ನಲ್ಲಿ ಉನ್ನತ ವ್ಯಾಸಂಗ ಪಡೆದ ಇವರು ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ಕಾವ್ಯ ಕುರಿತು ಸುಮಾರು ೩೦ಕ್ಕೂ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕುವಲ್ಲಿ ಇವರ ಸಂಶೋಧನೆಗಳ ಕೊಡುಗೆ ಬಹಳ ಇತ್ತು. . ಕೇಂಬ್ರಿಜ್, ಹಾರ್ವರ್ಡ್, ಹೈಡಲ್ ಬರ್ಗ್, ಅಥೆನ್ಸ್, ಲೈಡನ್, ಮಾಸ್ಕೋ ವಿಶ್ವವಿದ್ಯಾನಿಲಯಗಳಲ್ಲಿ ಕೆಲಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು ಹಲವಾರು ರಾಜ್ಯ ಹಾಗು ರಾಷ್ಟ್ರ ಪ್ರಶಸ್ತಿಗಳು ಇವರಿಗೆ ಸಂದಿದ್ದವು. ಇವರು ಭಾರತೀಯಇತಿಹಾಸ ಅನುಸಂಧಾನ ಪರಿಷತ್, ದಕ್ಷಿಣ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ ಹಾಗು ಕರ್ನಾಟಕ ಇತಿಹಾಸ ಅನುಸಂಧಾನ ಪರಿಷತ್ಗಳ ಸರ್ವಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಿದ್ದರು. ಅಲ್ಲದೇ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ವಿಶ್ವಸಂಸ್ಕೃತ ಸಮ್ಮೇಳನದ ವಿಭಾಗೀಯ ಅಧ್ಯಕ್ಷ ಸ್ಥಾನದ ಗೌರವವನ್ನೂ ಇವರು ಪಡೆದಿದ್ದರು. ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದರು.೨೮ ಫೆಬ್ರವರಿ ೨೦೨೦ರಂದು ಬೆಂಗಳೂರಿನಲ್ಲಿ ನಿಧನರಾದರು.

ಮನೆಯ ಪರಿಸರ, ಜನನ, ವಿದ್ಯಾಭ್ಯಾಸ

ಬದಲಾಯಿಸಿ

ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ, ಹಂಪಸಾಗರದ ಸರೂರ ಎನ್ನುವ ದೊಡ್ಡಮನೆತನದಲ್ಲಿ ೧೧, ಡಿಸೆಂಬರ್,೧೯೩೫ ರಲ್ಲಿ ಜನಿಸಿದರು. ತಂದೆ ಅಂದಾನಪ್ಪ ಶೆಟ್ಟರು. ತಾಯಿ ತೋಟಮ್ಮನವರು. ತಾಯಿ ಬಹಳ ಸಂಪ್ರದಾಯಸ್ಥರು. ತಾತ ವೀರಭದ್ರಪ್ಪನವರು ಒಳ್ಳೆಯ ಶ್ರೀಮಂತರಾಗಿದ್ದರು. ಸಮಾಜದಲ್ಲಿ ಅನ್ಯಾಯದ ವಿರುದ್ಧ ಹೋರಾಟನಡೆಸಿದವರು. ಪಾಳೇಗಾರರ ಹಿನ್ನೆಲೆ; ಅವರು 'ಮುಂದರಿಸಿ ಭೀಮರಾಯರ' ಸಮಕಾಲೀನರು. ಅಜ್ಜಿ ಹುಬ್ಬಳ್ಳಿಯ ವ್ಯಾಪಾರಸ್ಥ ಮನೆತನದ ಹೆಣ್ಣುಮಗಳು. ಶೆಟ್ಟರ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾಭ್ಯಾಸ  ಹಂಪಸಾಗರ ಹಾಗೂ ಹೊಸಪೇಟೆಯಲ್ಲಿ ಜರುಗಿತು. ಕಾಲೇಜ್ ವಿದ್ಯಾಭ್ಯಾಸ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕುವೆಂಪು ಆಗ ಪ್ರಾಂಶುಪಾಲರಾಗಿದ್ದರು ಹೆಸರಾಂತ ಸಿ.ಡಿ ನರಸಿಂಹಯ್ಯ, ಆ.ರಾ.ಮಿತ್ರ, ಹಂಪ ನಾಗರಾಜಯ್ಯ, ಕಮಲಾ ಹಂಪನಾ, ರಾಜೀವ್ ತಾರಾನಾಥ್, ಕಡಿದಾಳ್ ಶಾಮಣ್ಣ, ಜಿ. ರಾಮಕೃಷ್ಣ ಮುಂತಾದವರ ಒಡನಾಟವಿತ್ತು. ಆನರ್ಸ್ ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ೪ ಚಿನ್ನದ ಪದಕಗಳ ವಿಜೇತರೆಂದು ಹೆಗ್ಗಳಿಕೆ ಗಳಿಸಿದ್ದರು. ಮುಂದೆ ಮಹಾರಾಣಿ ಅಮ್ಮಣ್ಣಿಯವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ೧೯೬೧ ರಲ್ಲಿ ಧಾರವಾಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಿ.ಸಿ.ಪಾವಟೆಯವರ ಕರೆಯ ಮೇರೆಗೆ ಇತಿಹಾಸ ವಿಭಾಗಕ್ಕೆ ಹೋಗಿ ಸೇರಿಕೊಂಡರು.

ಸಾಹಿತ್ಯಕೃಷಿ

ಬದಲಾಯಿಸಿ

ಆಗ ಅವರು ೧೮೮೫-೧೯೪೫ ರವರೆಗೆ ಪ್ರಕಟಿಸಲಾಗಿದ್ದ ಮೈಸೂರಿನ ಪ್ರಾಕ್ತನ ವರದಿಗಳನ್ನು ಸುಲಭವಾಗಿ ಹಾಗಿ ನೇರವಾಗಿ ವಿದ್ಯಾರ್ಥಿಗಳಿಗೆ ದೊರಕುವಂತೆ ತಮ್ಮದೇ ಆದ ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು ೩ ಸಂಪುಟಗಳಲ್ಲಿ ಹೊರತಂದರು ಹೊಯ್ಸಳ ಶಿಲ್ಪಗಳ ಬಗ್ಗೆ ಅಧ್ಯಯನ ಮಾಡಲು ಶ್ರವಣಬೆಳುಗೊಳಕ್ಕೆ ಹೋದಾಗ, ಚಿಕ್ಕಬೆಟ್ಟದಲ್ಲಿನ ಸಲ್ಲೇಖನ ವ್ರತದ ಆಚರಣೆ ಬಹಳ ಆಸಕ್ತಿ ಮೂಡಿಸಿತು.

ವಿದೇಶದಲ್ಲಿ ಅಧ್ಯಯನ

ಬದಲಾಯಿಸಿ

ಅದೇ ವೇಳೆಯಲ್ಲಿ ಇಂಗ್ಲೆಂಡ್ ದೇಶದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕರೆಯ ಮೇರೆಗೆ, ಇಂಗ್ಲೆಡ್ ಗೆ ಹೊರಟುಹೋದರು. ಹಾಗೆಯೇ ಅಧ್ಯಯನ ನಿರತರಾಗಿದ್ದ ಶೆಟ್ಟರ ಗಮನೆಕ್ಕೆ ಬಂದದ್ದು, ಅಲ್ಲಿನ ಗ್ರಂಥಾಲಯದಲ್ಲಿ ವಿಶ್ವದ ಮರಣ ಪ್ರಕ್ರಿಯೆಯ ಬಗ್ಗೆ ಭಾರತದ ಯಾವ ಗ್ರಂಥಗಳೂ ಇರಲಿಲ್ಲ. ಶೆಟ್ಟರ್ ತಮ್ಮ ಶ್ರವಣಬೆಳುಗೊಳದ ಅಧ್ಯಯನ, ಮತ್ತು ಸಾಹಿತ್ಯ ಪರಂಪರೆಯ ಓದಿನಿಂದ ಅಲ್ಲಿನ ವಿಶ್ವವಿದ್ಯಾನಿಲಯದಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದರು. ಆ ಪ್ರಬಂಧಗಳನ್ನು ಪ್ರಕಟಿಸಲು ಬೇಡಿಕಿ ಬಂದಾಗ್ಯೂ ಮಣಿಯದೆ ತಮ್ಮ ತಾಯ್ನಾಡಿಗೆ ವಾಪಸ್ಸಾದರು. 

ನಡೆದು ಬಂದ ದಾರಿ

ಬದಲಾಯಿಸಿ
  • ೧೯೬೦-೯೬: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬೋಧನೆ
  • ೧೯೭೮-೯೫:ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ
  • ೧೯೯೬-೯೯: ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ಸ್ಥಾನ
  • ೨೦೦೨-೧೦: ಬೆಂಗಳೂರಿನ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ ಡಾ. ಎಸ್. ರಾಧಾಕೃಷ್ಣನ್ ಪ್ರಾಧ್ಯಾಪಕತ್ವ ಹಾಗು ೨೦೧೦-೨೦೨೦ರವರೆವಿಗೆ ಇದೇ ಸಂಸ್ಥೆಯಲ್ಲಿ ಎಮೆರಿಟಸ್ ಪ್ರಾಧ್ಯಾಪಕ ಸ್ಥಾನ[]
  • ೨೦೦೫ ರಿಂದ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರ ದಕ್ಷಿಣ ಭಾರತ ಶಾಖೆಯ ಗೌರವ ನಿರ್ದೇಶಕತ್ವ[].

ಪ್ರಮುಖ ಕೃತಿಗಳು

ಬದಲಾಯಿಸಿ
  1. ಮೊದಲನೆಯ ಕೃತಿ, Inviting deathರಚಿಸುವಾಗ, ಕ್ರಿ.ಶ ೩ ರಿಂದ ೧೮ ನೆಯ ಶತಮಾನದ ಜೈನರು ಮರಣಿಸಿದ ವಾಸ್ತವ ಇತಿಹಾಸವನ್ನು ಶ್ರವಣಬೆಳುಗೊಳದಲ್ಲಿರುವ ಸಮಾಧಿ ಬೆಟ್ಟವನ್ನು ಕೇಂದ್ರ ವಾಗಿಸಿಕೊಂಡು ಶಾಸನಗಳನ್ನು ಪ್ರಧಾನ ಆಕಾರಗಳನ್ನಾಗಿಸಿಕೊಂಡರು. 
  2. ಎರಡನೆಯ ಗ್ರಂಥ, Perusing death ಇದು ಮರಣ ಸಿದ್ಧಾಂತದ ತಲಸ್ಪರ್ಶಿ ಶೋಧನೆ ಇದು ಅನೇಕ ಆಕರಗಳನ್ನು : ಸಾಹಿತ್ಯ, ಶಾಸ್ತ್ರಗ್ರಂಥ,ಶಾಸನ, ವಾಸ್ತುಶಿಲ್ಪ,.ಐತಿಹ್ಯ,ಸಮಕಾಲೀನ ಆಚರಣಾ ವಿಧಾನ-ಗಳನ್ನೂ ಆಧರಿಸಿ ಬರೆದದ್ದು. ಇದನ್ನು ಬರೆಯುವಾಗ ಕನ್ನಡ ಜೈನ ಸಾಹಿತ್ಯವನ್ನು ಸಮಗ್ರವಾಗಿ ಬಳಸಿಕೊಂಡರು.

ಕನ್ನಡ ಭಾಷಾನುವಾದ

ಬದಲಾಯಿಸಿ

ಇವೆರಡು ಕೃತಿಗಳು ಕನ್ನಡ ಭಾಷೆಯಲ್ಲಿ, "ಸಾವನ್ನು ಅರಸಿ" ಮತ್ತು "ಸಾವನ್ನು ಸ್ವಾಗತಿಸಿ" ಎಂದು ಅನುವಾದಗೊಂಡಿವೆ.ಇದಕ್ಕೂ ಮೊದಲು,ಅಮೆರಿಕದ ಶಿಕಾಗೋ ವಿಶ್ವವಿದ್ಯಾಲಯಕ್ಕೆ "Hoysala temples", ಎಂಬ ಹೆಸರಿನಲ್ಲಿ ಮಂಡಿಸಿದ ಪ್ರಬಂಧ, ೨ ಸಂಪುಟಗಳು ಪ್ರಕಟಗೊಂಡಿವೆ. 

ಪ್ರಕಟಿತ ಕನ್ನಡ ಕೃತಿಗಳು

ಬದಲಾಯಿಸಿ
  • ಶ್ರವಣಬೆಳಗೊಳ (೧೯೮೧)ರೂವಾರಿ.(ಇದು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲೂ ಪ್ರಕಟಿತ)
  • ಸಾವಿಗೆ ಆಹ್ವಾನ (೨೦೦೪,೨೦೧೪) ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
  • ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ (ಆರಂಭ ಕಾಲದ ದ್ರಾವಿಡ ಭಾಷಾ ಚಿಂತನೆ)(೨೦೦೭)ಪ್ರ: ಅಭಿನವ ಬೆಂಗಳೂರು.ಈ ಕೃತಿ ತಮಿಳಿಗೂ ಅನುವಾದಗೊಂಡಿದೆ. ಪ್ರ ಅಭಿನವ ಬೆಂಗಳೂರು
  • ಸೋಮನಾಥಪುರ (೨೦೦೮)ಪ್ರ: ಅಭಿನವ ಬೆಂಗಳೂರು.
  • ಬಾದಾಮಿ ಚಾಲುಕ್ಯರ ಶಾಸನ ಸಾಹಿತ್ಯ (೨೦೧೨)ಪ್ರ: ಅಭಿನವ ಬೆಂಗಳೂರು.[]
  • ಸಾವನ್ನರಸಿ (೨೦೧೪)ಪ್ರ: ಅಭಿನವ ಬೆಂಗಳೂರು.
  • ಸಾವನ್ನು ಸ್ವಾಗತಿಸಿ (೨೦೧೪)ಪ್ರ: ಅಭಿನವ ಬೆಂಗಳೂರು.
  • ಹಳಗನ್ನಡ-ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ (೨೦೧೪)ಪ್ರ: ಅಭಿನವ ಬೆಂಗಳೂರು.
  • ಹಳಗನ್ನಡ ಭಾಷೆ, ಭಾಷಾ ಬೆಳವಣಿಗೆ ಮತ್ತು ಭಾಷಾ ಬಾಂಧವ್ಯ(೨೦೧೬) ಪ್ರ: ಅಭಿನವ ಬೆಂಗಳೂರು.
  • ಪ್ರಾಕೃತ ಜಗದ್ವಲಯ (ಪ್ರಾಕೃತ, ಕನ್ನಡ ಮತ್ತು ಸಂಸ್ಖೃತ ಭಾಷೆಗಳ ಅನುಸಂಧಾನ), ಪ್ರ: ಅಭಿನವ ಬೆಂಗಳೂರು. ೨೦೧೮
  • ರೂವಾರಿ(ಕನ್ನಡ ನಾಡಿನ ವಾಸ್ತು ಮತ್ತು ಶಿಲ್ಪಿಗಳ ಚರಿತ್ರೆ) ೨೦೧೮, ಪ್ರ: ಅಭಿನವ ಬೆಂಗಳೂರು
  • ಸ್ಥಪತಿ(ಭಾರತದ ಕಲೆಗಾರರು/ಶಿಲ್ಪಿಗಳು, ಶಿಲ್ಪಕಲಾ ಇತಿಹಾಸ) ಪ್ರ: ಅಭಿನವ ಬೆಂಗಳೂರು ೨೦೨೦

ಪ್ರಕಟಿತ ಇಂಗ್ಲೀಷ್ ಕೃತಿಗಳು

ಬದಲಾಯಿಸಿ
  • Hoysala Sculpture in the National Museum, Copenhagen (1975)
  • Sravanabelagola-An illustrated study, Dharwad (1981) Ruvari,Dharwad
  • Inviting Death, Historical Experiment on Sepulchar Hill, Dharwad (1986)
  • Inviting Death:I Idian Attitude Towards the Ritual Death (Leiden: E. J.Brill, 1989)
  • Pursuing Death: Philosophy and Practice of Voluntary Termination of Life, Dharwad(1990)
  • Hampi-A Medieval Metropolis, Bangalore (1990)
  • Hoysala temples, Vol I, II, Bangalore (1991)
  • Footprints of Artisans in History, Mysore (2003)
  • Somanathapura, Bangalore(2008) Ruvari Abhinava imprit Bengaluru
  • Akssarameru's Kaliyuga Vipartan, Bangalore (2011) Ruvari Abhinava imprint, Bengaluru
  • Early Buddhist Artisanes and their Architectural Vocabulary(2020), Manipal University Press, Karnataka

ಸಂಪಾದಿತ ಕೃತಿಗಳು

ಬದಲಾಯಿಸಿ
  • Archaeological Survey of Mysore: Annual Reports, Vol II-IV, Dharwad (1976-77)
  • Memorial Stones: A Study of the origin, significance and variety, Dharwad-Heidelberg (1982)
  • Indian Archaeology in Retrospect, Vol I-IV, New Delhi (2002)
  • Construction of Indian Railways, Vol I-III, New Delhi (1999)
  • Jalianwala Bagh massacre, New Delhi (2000)
  • Pangs of Partition, Vol I-II, New Delhi (2002)

ಪ್ರಶಸ್ತಿಗಳು

ಬದಲಾಯಿಸಿ

ಪ್ರೊ.ಷಡಕ್ಷರ ಶೆಟ್ಟರ್ ಪಂಪ ಪ್ರಶಸ್ತಿಯನ್ನು ಪ್ರದಾನಮಾಡಲಾಯಿತು. []

  • ದಿನಾಂಕ ೨೭-೦೨-೨೦೨೦ ರಂದು ಆಸ್ಪತ್ರೆಯಲ್ಲಿ ಮರಣ ಹೊಂದಿದರು. ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿ ಹೋಗಿದ್ದಾರೆ. [], []

ಉಲ್ಲೇಖ

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2015-04-20. Retrieved 2014-03-04.
  2. "ಆರ್ಕೈವ್ ನಕಲು". Archived from the original on 2014-03-27. Retrieved 2014-03-04.
  3. RIP. Shadakshari setter: Do you know how Prof. Shadakshari setter the most famous historian, switched from history to Archelogy-Rashmi patil, edexlive, 28, Feb, 2020
  4. ಅವಧಿ ಪತ್ರಿಕೆಯಲ್ಲಿ ಪ್ರಕಟಿತ.avadhimag.com
  5. .https://www.prajavani.net/stories/stateregional/sha-shettar-hospitalized-708409.html
  6. Prof. S. Setter


ಬಾಹ್ಯ ಕೊಂಡಿಗಳು

ಬದಲಾಯಿಸಿ