ಶ್ರೀ ಸೋಮನಾಥ ಜ್ಯೋತಿರ್ಲಿಂಗ ಅಥವಾ ಶ್ರೀಸೋಮೇಶ್ವರ ಜ್ಯೋತಿರ್ಲಿಂಗ ಪ್ರಭಾಸ ಜುನಾಗಡ ಜಿಲ್ಲೆ ಸೌರಾಷ್ಟ್ರ ಗುಜರಾತ್

ಸೋಮನಾಥ ಮಂದಿರ
Somnathtempledawn.JPG
ಹೆಸರು: ಸೋಮನಾಥ ಮಂದಿರ
ನಿರ್ಮಾತೃ: ಸರದಾರ್ ವಲ್ಲಭಾಯ್ ಪಟೇಲ್ (ಪ್ರಸ್ತುತ ನಿರ್ಮಾಣ)
ಕಟ್ಟಿದ ದಿನ/ವರ್ಷ: 1951 (ಪ್ರಸ್ತುತ ನಿರ್ಮಾಣ)
ಪ್ರಮುಖ ದೇವತೆ: ಸೋಮನಾಥ(ಶಿವ)
ವಾಸ್ತುಶಿಲ್ಪ: Mandir
Somnath temple, 1869
Arrow Pillar or ಬಾಣಸ್ತಂಬ

ಸ್ಥಳಸಂಪಾದಿಸಿ

 • ಗುಜರಾತ್ ರಾಜ್ಯದ ಸೌರಾಷ್ತ್ರ - ಜುನಾಗಡ ಜಿಲ್ಲೆಯ ಪ್ರಭಾಸ ಎಂಬಲ್ಲಿ ಶ್ರೀ ಸೋಮನಾಥ ಜ್ಯೊತಿರ್ಲಿಂಗ ದ ದೇವಾಲಯವಿದೆ. ಇದನ್ನು ಪ್ರಭಾಸ ಕ್ಷೇತ್ರವೆಂದೂ ಕರೆಯುತ್ತಾರೆ. ಈ ಸ್ಥಳಕ್ಕೆ ಸೋಮೇಶ್ವರ ಎಂದು ಹೆಸರು. ಈದೇವಾಲಯ ಬಹಳ ಪುರಾತನವಾದುದು ಮತ್ತು ಶತಮಾನಗಳ ಇತಿಹಾಸವುಳ್ಳದ್ದು . ಬಹಳ ಶ್ರೀಮಂತವಾದ ದೇವಾಲಯ. ವಿಶಾಲವಾದ ಆವರಣದಲ್ಲಿ ೫೬ ಕಂಬಗಳ ಮೇಲೆ ದೇವಾಲಯ ರಚನೆಯಾಗಿದೆ. ಇದು ಅದ್ಭುತ ವಾಸ್ತು ಶಿಲ್ಪ, ಉತ್ತಮ ಕೆತ್ತನೆಗಳ ಸಂಗಮವಾಗಿದೆ. ಇದು ಹೊಸದಾಗಿ ನಿರ್ಮಿಸಿದ ಅಥವಾ ಜೀರ್ಣೋದ್ಧಾರ ಮಾಡಿದ ದೇವಾಲಯ. ಹಿಂದಿನ ಪ್ರಾಚೀನ ದೇವಾಲಯದ ಕಂಬಗಳ ಮೇಲೆ ಮುತ್ತುರತ್ನಗಳನ್ನು ಕೂರಿಸಿದ್ದರೆಂದೂ ಇಡೀ ಮಂದಿರ ಬೆಳ್ಳಿ ಬಂಗಾರದಿಂದ ಶೋಭಿಸುತ್ತಿತೆಂದೂ , ಬಂಗಾರದ ಕಳಸವಿತ್ತೆಂದೂ ಹೇಳುತ್ತಾರೆ. ಈ ದೇವಾಲಯದ ಮೇಲೆ ಅನೇಕ ಬಾರಿ ಅನ್ಯ ಮತೀಯರ(ಇಸ್ಲಾಂ) ಧಾಳಿ ನೆಡೆದು ಆ ಐಶ್ವರ್ಯವನ್ನೆಲ್ಲಾ ಕೊಳ್ಳೆ ಹೊಡೆದಿದ್ದಾರೆಂದು ಇತಿಹಾಸ ಹೇಳುತ್ತದೆ.[೧].

ಸ್ಥಳ ಪುರಾಣಸಂಪಾದಿಸಿ

 • ಬ್ರಹ್ಮ , ವಿಷ್ಣು, ಮಹೇಶ್ವರ ರಲ್ಲಿ ಹೆಚ್ಚಿನವರಾರೆಂಬ ಚರ್ಚೆಯಾದಾಗ ಶಿವನು ಮೂರು ಜ್ಯೋತಿಗಳ (ಬೆಳಕಿನ) ಕಂಬಗಳನ್ನು ಸೃಷ್ಠಿಸಿದನು (ಜ್ಯೋತಿರ್ಲಿಂಗ). ವಿಷ್ಣು ಮತ್ತು ಬ್ರಹ್ಮರಿಗೆ ಅದರ ಮೇಲಿನ ಮತ್ತು ಕೆಳಗಿನ ತುದಿಯನ್ನು ಕಂಡುಹಿಡಿಯಲು ತಿಳಿಸಿದನು. ವಿಷ್ಣುವು ಅದರ (ಮೇಲಿನ) ತುದಿಯನ್ನು ಕಾಣದೇ ಹಿಂತುರುಗಿ ಬಂದು ತನಗೆ ಆ ಲಿಂಗದ ತುದಿ ಸಿಗದಿರುವ ವಿಷಯ ತಿಳಿಸಿದನು. ಆದರೆ ಬ್ರಹ್ಮನು ತಾನು ನೋಡಿರುವದಾಗಿ ಹೇಳಿದನು. ಈಶ್ವರನು ಎರಡನೇ ಜ್ಯೋತಿ ಸ್ಥಂಬವಾಗಿದ್ದು ಬ್ರಹ್ಮನು ಸುಳ್ಳು ಹೇಳಿದನೆಂದು ತಿಳಿದು ಅವನಿಗೆ ಪೂಜೆಯಿಲ್ಲದಿರಲಿ ಎಂದು ಶಪಿಸಿದನು .ಅದರೆ ಸತ್ಯ ಹೇಳಿದ ವಿಷ್ಣು ವು ಪೂಜೆಗೆ ಅರ್ಹನೆಂದು ಹೇಳಿದನು ಆ ಜ್ಯೋತಿಯೇ ಈ ಜ್ಯೋತಿರ್ ಲಿಂಗವಾಗಿದೆ ಎಂದು ಪುರಾಣ ಹೇಳುತ್ತದೆ.
 • ದ್ವಾಪರ ಯುಗದಲ್ಲಿ ಶ್ರೀಕೃಷ್ಣನು ಮಧುರೆಯನ್ನು ಬಿಟ್ಟು ದ್ವಾರಕೆಗೆ ಬಂದು ನೆಲಸಿದನು. ದ್ವಾರಕೆ ಮುಳುಗಿದ ನಂತರ ಅದರ ಪಕ್ಕದ ಸ್ಥಳವೇ ಪ್ರಭಾಸ ಕ್ಷೇತ್ರವೆಂದು ಹೇಳುವರು

ಹಿಂದಿನ ಇತಿಹಾಸಸಂಪಾದಿಸಿ

 • ಕ್ರಿ.ಶ. ೬೪೯ ರಲ್ಲಿ ಯಾದವ ದೊರೆ ವಲ್ಲಬಿ ಯು ಮೊದಲಿಗೆ ಈ ದೇವಾಲಯದ ಜೀರ್ಣೋದ್ಡಾರ ಮಾಡಿರುವುದಾಗಿ ತಿಳಿಯುವುದು[೩]. ಸಿಂಧದ ಅರಬ್ ದೊರೆ ಅದನ್ನು ಭಗ್ನಗೊಳಿಸಿದಾಗ ಪುನಹ ಗುಜ೯ರರ ಪ್ರತಿಹಾರ ನಾಗಭಟ ೨ ಇವನು ಪುನಹ ೮೧೫ ರಲ್ಲಿ ಜೀರ್ಣೋದ್ಧಾರ ಮಾಡಿದನು[೩]. ಕ್ರಿ.ಶ. ೧೦೨೪ ರಲ್ಲಿ ಪುನಹ ಘಜನಿ ಮಹಮದನಿಂದ ಧಾಳಿಗೆ ಒಳಗಾಯಿತು. ಪರಮಾರ ದೊರೆ ಭೋಜನು ಅದನ್ನು ಪುನಹ ನಿರ್ಮಾಣ ಮಾಡಿದನು[೪]. ದೊರೆ ಕಮರ್ ಪಾಲನು ಅದನ್ನು ಮರದ ಬದಲಿಗೆ ಕಲ್ಲಿನಿಂದ ಕಟ್ಟಿಸಿದನು. ಮತ್ತೆ ೧೨೯೬ ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಯು ಧಾಳಿಮಾಡಿ ನಾಶಮಾಡಿದನು.[೫] . ಅದನ್ನು ಪುನಹ ಸೌರಾಷ್ತ್ರರ ದೊರೆ ಮಹೀಪಾಲನು ಪುನಹ ನಿರ್ಮಾಣ ಮಾಡಿದನು. ಹೀಗೆ ಪುನರ್ ನಿರ್ಮಾಣಗೊಂಡ ದೇವಾಲಯವನ್ನು ೧೩೭೫ ರಲ್ಲಿ,ಯವನದೊರೆಯಿಂದ ಮತ್ತು ೧೭೦೧ ರಲ್ಲಿ (ಔರಂಗಜೇಬ್‌ನಿಂದ) ಭಗ್ನಗೊಳಿಸಲಾಗಿತು.[೬] . ಅದನ್ನು ಪುನಹ ಪುಣೆಯ ಪೇಶ್ವೆ, ರಾಜಾ ಭೊಸ್ಲೆ , ಛತ್ರಪತಿ ಕೊಲ್ಲಾಪುರ , ಇಂದೂರು ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್, ಮೊದಲಾದವರು ಜೀರ್ಣೋದ್ಧಾರ ಮಾಡಿದರು. ಆದರೆ ಅದು ಜುನಾಗಡದ ನವಾಬರ ಕಾಲದಲ್ಲಿ ಮತ್ತೆ ಹೀನಾಯ ಸ್ಥಿತಿಗೆ ಬಂದಿತು.

ದೇವಾಲಯದ ಪುನರ್‌ನಿರ್ಮಾಣಸಂಪಾದಿಸಿ

 • ಹೀಗೆ ಶಿಥಿಲವಾಗಿದ್ದ ಬೃಹತ್ ಮಂದಿರವನ್ನು (೧೯೪೭) ಸ್ವಾತಂತ್ರಾ ನಂತರ ಉಪ ಪ್ರಧಾನಿಯಗಿದ್ದ ಸರ್ದಾರ್ ವಲ್ಲಭ ಭಾಯಿ ಪಟೇಲರು ಹಾಗೂ ಕೆ.ಎಮ್.ಮುನ್ಶಿಯವರು ಮತ್ತು ಕೆಲವು ಕಾಂಗ್ರೆಸ್ ನಾಯಕರು ಗಾಂಧೀಜಿಯವರ ಆಶೀರ್ವಾದ ಪಡೆದು ಅವರ ಸಲಹೆಯಂತೆ ಸಾರ್ವಜನಿಕರ ಸಹಾಯ ಮತ್ತು ಸಹಕಾರದಿಂದ ಪುನರ್‌ನಿರ್ಮಾಣ ಮಾಡಿದ್ದಾರೆ. ಅಕ್ಟೋಬರ ೧೯೫೦ ರಲ್ಲಿ ಶಿಥಿಲವಾದ ಹಳೆಯ ಕಟ್ಟಡವನ್ನು ತೆಗೆದು ಹತ್ತಿರದಲ್ಲಿದ್ದ ಪ್ರಾರ್ಥನಾ ಮಂದಿರವನ್ನು ತೆಗೆದು ಅದನ್ನು ಕೆಲವು ಮೈಲಿಗಳಾಚೆ ಪುನರ್ ನಿರ್ಮಿಸಲಾಯಿತು[೭]. ೧೯೫೧ ರ ಮೇ ತಿಂಗಳಲ್ಲಿ ರಾಷ್ತ್ರ ಪತಿಗಳಾದ ಶ್ರೀರಾಜೇಂದ್ರ ಪ್ರಸಾದರಿಂದ ದೇವಾಲಯದ ಶಂಕುಸ್ಥಾಪನೆಯನ್ನು (ಪ್ರತಿಷ್ಠಾಪನೆಯನ್ನು)ನೆರವೇರಿಸಿ ದೇವಾಲಯದ ಪುನರ್ ನಿಮಾಣದ ಕಾರ್ಯವನ್ನು ಪ್ರಾರಂಭಿಸಲಾಯಿತು. ಆ ಕಾರ್ಯ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಗಾಂಧೀಜಿ ಮತ್ತು ಸರ್ದಾರ್ ಪಟೇಲರು ನಿಧನ ಹೊಂದಿದ ಮೇಲೆ, ಕೇಂದ್ರದ ಆಹಾರ ಮಂತ್ರಿಯಾಗಿದ್ದ ಶ್ರೀ ಕೆ.ಎಮ್. ಮುನ್ಶಿಯವರ ನೇತ್ರತ್ವದಲ್ಲಿ ಪುನರ್ ನಿರ್ಮಾಣ ಕಾರ್ಯ ಮುಂದುವರೆಯಿತು (https://en.wikipedia.org/wiki/Somnath)

ದೇವಾಲಯಸಂಪಾದಿಸಿ

 • ದೇವಾಲಯವು ಚಾಲುಕ್ಯ ಶೈಲಿಯಲ್ಲಿ ಕಟ್ಟಲ್ಪಟ್ಟಿದೆ.. ಸೋಮನಾಥಪುರ ಶಿಲ್ಪಿಗಳ ಪ್ರತಿಭೆಯನ್ನು ತೋರಿಸುತ್ತದೆ. ದೇವಾಲಯದ ಶಿಖರ ೧೫೦ ಅಡಿ ಎತ್ತರವಿದೆ. ಅದಕ್ಕೆ ೨೭ ಅಡಿ ಎತ್ತರದ ಧ್ವಜ ಸ್ತಂಭವನ್ನು ಹಾಕಲಾಗಿದೆ. ಭಾರತದ ಪಶ್ಚಿಮ ದಿಕ್ಕಿನ ಅತ್ಯಂತ ಕೊನೆಯ ಭೂಮಿಯ ಅಂಚಿನ ಬಿಂದುವು ಇರುವ ರೇಖಾಂಶ ವನ್ನು (ದಕ್ಷಿಣ ಧೃವದಿಂದ ಉತ್ತರ ಧೃವಕ್ಕೆ ಎಳೆದಿರುವ ಊಹಾ ರೇಖೆ) ಗುರುತಿಸಿ ಅದಕ್ಕೆ ಸರಿಯಾಗಿ -ಆ ರೇಖೆಯನ್ನು ತೋರಿಸುವ ಬಾಣ ಸ್ತಂಭವನ್ನು ಸ್ಥಾಪಿಸಲಾಗಿದೆ ಆ ಬಾಣವು ಆ ರೇಖೆಯ ಮೇಲಿದ್ದು ಉತ್ತರ ದಿಕ್ಕನ್ನು ತೋರಿಸುತ್ತದೆ.
 • ಮಂದಿರದ ಮೇಲ್ಚಾವಣಿಯಂತೂ ನಯನ ಮನೋಹರವಗಿದೆ. ಶಿಲ್ಪ ಕಲೆಯ ಉತ್ತಮ ಉದಾಹರಣೆಯಾಗಿದೆ. ಮಂದಿರದ ಗರ್ಭಗುಡಿಯಲ್ಲಿರುವ ಶ್ರೀ ಸೋಮನಾಥ ಜ್ಯೋತಿರ್ಲಿಂಗ ಬಹಳ ದೊಡ್ಡದಾಗಿ ಭವ್ಯವಾಗಿದೆ. ಸುಮಾರು ೭-೮ ಅಡಿಎತ್ತರವಿದೆ. ಪೂಜಾ ಸಾಮಗ್ರಿಗಳನ್ನು ಕೊಟ್ಟರೆ ಅರ್ಚಕರೇ ಪೂಜೆಮಾಡಿ ಕೊಡುತ್ತಾರೆ ಇಲ್ಲಿ ನೋಡಬೇಕಾದ ಸ್ಥಳಗಳು ತುಂಬ ಇರುವುದರಿಂದ ಬಹಳ ಸಮಯ ಬೇಕಾಗುವುದು. ಶಿವರಾತ್ರಿಯಲ್ಲಿ ಇಲ್ಲಿ ಜಾತ್ರೆ ನಡೆಯುವುದು. ಸೂರ್ಯಗ್ರಹಣ ಮತ್ತು ಅಮವಾಸ್ಯೆಯಂದು ವಿಶೇಷ ಪೂಜೆ ನಡೆಯುವುದು ಲಕ್ಷಾಂತರ ಜನ ಸೇರುವರು.
 • ಈ ಶ್ರೀ ಸೋಮನಾಥ ಜ್ಯೋತಿರ್ಲಿಂಗ ದರ್ಶನದಿಂದ ಸಕಲ ಇಷ್ಠಾರ್ಥಗಳೂ ಸಿದ್ಧಿಸುವುದೆಂದು ಭಕ್ತರ ದೃಢವಾದ ನಂಬಿಕೆ.

ಆಧಾರ :ಸಂಪಾದಿಸಿ

 1. https://en.wikipedia.org/wiki/Somnath
 2. ದ್ವಾದಶ ಜ್ಯೋತಿರ್ಲಿಂಗಗಳು ಕೈ ಹೊತ್ತಿಗೆ- ಪ್ರವಾಸ ಲೇಖನ ಗ್ರಂಥ_ ಬರೆದವರು ಶ್ರೀಮತಿ ಚೂಡಾಮಣಿ ರಾಮಚಂದ್ರ ಸಾಗರ ಶಿವಮೊಗ್ಗ ಜಿಲ್ಲೆ

ನೋಡಿ:ಸಂಪಾದಿಸಿ

• •

ಚಿತ್ರಮಾಲೆಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

 1. It was also built by Ramila the king of mylapore. Ramila was a lala Romila Thapar, Somanatha: Narratives of a History.
 2. http://www.indorecity.net/excursions/omkareshwar-temple.html
 3. ೩.೦ ೩.೧ "Leaves from the past".
 4. http://www.hinduwisdom.info/Islamic_Onslaught5.htm
 5. http://www.aurangzeb.info/2008/06/exhibit-no_9931.html
 6. http://www.aurangzeb.info/2008/06/exhibit-no_9931.html
 7. Hindustan Times, 15 Nov, 1947

ಹೊರಗಿನ ಕೊಂಡಿಗಳುಸಂಪಾದಿಸಿ