ಶ್ಯಾಮಾ ಶಾಸ್ತ್ರಿ
ಶ್ಯಾಮಾ ಶಾಸ್ತ್ರಿ (ಜನನ-ಏಪ್ರಿಲ್ ೨೬, ಮರಣ-೧೭೬೨ -೧೮೨೭) ಕರ್ನಾಟಕ ಸಂಗೀತ ಕ್ಷೇತ್ರದ ಖ್ಯಾತ ವಾಗ್ಗೇಯಕಾರರಲ್ಲಿ ಒಬ್ಬರು. ಇವರನ್ನು ಕರ್ನಾಟಕ ಸಂಗೀತದ ತ್ರಿಮೂರ್ತಿ(ಇನ್ನಿಬ್ಬರು- ಮುತ್ತುಸ್ವಾಮಿ ದೀಕ್ಷಿತರು ಮತ್ತು ತ್ಯಾಗರಾಜರು)ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.
ಶ್ಯಾಮಾ ಶಾಸ್ತ್ರಿಗಳು ಹುಟ್ಟಿದ್ದು ತೆಲುಗು ಮೂಲದ ಬ್ರಾಹ್ಮಣ ಕುಟುಂಬದಲ್ಲಿ. ಶಾಸ್ತ್ರಿಗಳ ಹಿರಿಯರು ಆಂಧ್ರಪ್ರದೇಶದ ಕುಂಭಮ್‌ನಿಂದ ತಮಿಳುನಾಡಿಗೆ ವಲಸೆ ಬಂದವರೆಂದು ಹೇಳಲಾಗುತ್ತದೆ.[೧] ಹಾಗಾಗಿ ಇವರ ಮನೆಭಾಷೆ ತೆಲುಗು. ತಂದೆ ವಿಶ್ವನಾಥ ಅಯ್ಯರ್ ಇವರು ಹುಟ್ಟಿದ್ದು ತಮಿಳುನಾಡಿನ ತಿರುವಾರೂರಿನಲ್ಲಿ. ಇವರ ಪೂರ್ವಜರು ಅರ್ಚಕ ವೃತ್ತಿಯವರಾಗಿದ್ದರು. ಬಾಲಕ ವೆಂಕಟಕೃಷ್ಣನಿಗೆ ಬಹಳ ಸುಮಧುರವಾದ ಧ್ವನಿಯಿದ್ದುದರಿಂದ, ರೂಢಿಯ ಸಂಸ್ಕೃತದ ಜೊತೆ ಸ್ವಲ್ಪ ಸಂಗೀತದ ಬಾಲಪಾಠಗಳೂ ಆದವು. ಸುಮಾರು ಬಾಲಕ ವೆಂಕಟಕೃಷ್ಣನಿಗೆ ಹದಿನೆಂಟು ವರ್ಷವಾದ ನಂತರ ವೆಂಕಟಕೃಷ್ಣನ ಕುಟುಂಬ ತಂಜಾವೂರಿಗೆ ತೆರಳಿದರು. ಅಲ್ಲಿ ಒಮ್ಮೆ ಆಂಧ್ರಪ್ರದೇಶದಿಂದ ತೀರ್ಥಯಾತ್ರೆಗಾಗಿ ಬಂದು ಚಾತುರ್ಮಾಸಕ್ಕಾಗಿ ನೆಲೆನಿಂತ, ಬ್ರಾಹ್ಮಣ ಸನ್ಯಾಸಿಯಾಗಿದ್ದ ಸಂಗೀತಸ್ವಾಮಿ ಎಂಬವರು, ಈ ಬಾಲಕನ ಕಂಠಸಿರಿಗೆ ಮಾರುಹೋಗಿ ಕೆಲವೇ ಸಮಯದಲ್ಲಿ ಈತನನ್ನು ಉತ್ತಮ ಸಂಗೀತಗಾರನನ್ನಾಗಿ ಮಾಡಿದರು.
ಕಾಂಚೀಪುರದ ಕಾಮಾಕ್ಷಿಯ ಭಕ್ತರಾದ ಶ್ಯಾಮಾಶಾಸ್ತ್ರಿಯವರ ಬಹುಪಾಲು ಕೃತಿಗಳು ಕಾಮಾಕ್ಷಿಯನ್ನು ಕುರಿತವು. ತಂಜಾವೂರಿನ ಬಂಗಾರು ಕಾಮಾಕ್ಷಿ ದೇವಾಲಯದಲ್ಲಿ ಅರ್ಚಕರಾಗಿದ್ದ ಆದಿ ಅಪ್ಪಯ್ಯ, ಶ್ಯಾಮಾಶಾಸ್ತ್ರಿಗಳ ಇನ್ನೊಬ್ಬ ಗುರುಗಳು. ಶಾಸ್ತ್ರಿಗಳು ಒಟ್ಟು ೩೦೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರೆಂದು ಹೇಳಲಾಗುತ್ತದೆ ಆದರೂ ಈಗ ಲಭ್ಯವಿರುವುದು ಸುಮಾರು ೬೦-೭೦ರಷ್ಟು ಕೃತಿಗಳು ಮಾತ್ರ. ಇವರ ಕೃತಿಗಳು ಹೆಚ್ಚಾಗಿ ತೆಲುಗು, ಮತ್ತು ಸ್ವಲ್ಪ ಮಟ್ಟಿಗೆ ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿವೆ. ಮದುರೈಯ ಮೀನಾಕ್ಷಿಯನ್ನು ಕುರಿತು ರಚಿಸಿದ 'ನವರತ್ನಮಾಲಿಕೆ' ಶ್ಯಾಮಾ ಶಾಸ್ತ್ರಿಗಳ ಪ್ರಸಿದ್ಧ ಕೃತಿಗಳಲ್ಲಿ ಒಂದು.
ಇವರ ಕೃತಿಗಳು ಶಾಮಕೃಷ್ಣ ಎಂಬ ಅಂಕಿತ ಹೊಂದಿವೆ.
ಉಲ್ಲೇಖಗಳು
ಬದಲಾಯಿಸಿ- ↑ Rajagopalan, N. (1994). A Garland: A Biographical Dictionary of Carnatic Composers and Musicians (in ಇಂಗ್ಲಿಷ್). Bharatiya Vidya Bhavan. p. 264.