ಶೌನಕ ಶಿಕ್ಷಕರಿಗೆ ಮತ್ತು ಅಥರ್ವವೇದದ ಒಂದು ಶಾಖೆಗೆ ಅನ್ವಯಿಸಲಾದ ಹೆಸರು. ಇದು ವಿಶೇಷವಾಗಿ ಋಗ್ವೇದ ಪ್ರಾತಿಶಾಖ್ಯ, ಬೃಹದ್ದೇವತಾ, ಚರಣ ವ್ಯೂಹ ಮತ್ತು ಋಗ್ವೇದದ ಆರು ಅನುಕ್ರಮಣಿಗಳ ಲೇಖಕನಾದ ಒಬ್ಬ ಪ್ರಖ್ಯಾತ ಸಂಸ್ಕೃತ ವ್ಯಾಕರಣಕಾರನ ಹೆಸರು. ಅವನು ಕಾತ್ಯಾಯನನ ಮತ್ತು ವಿಶೇಷವಾಗಿ ಅಶ್ವಲಾಯನನ ಗುರು ಎಂದು ಮತ್ತು ಋಗ್ವೇದದ ಶಾಕಲಾ ಹಾಗೂ ಬಾಷ್ಕಲಾ ಶಾಖೆಗಳನ್ನು ಒಂದುಗೂಡಿಸಿದ ಎಂದು ಹೇಳಲಾಗಿದೆ. ದಂತಕಥೆಯಲ್ಲಿ, ಅವನನ್ನು ಕೆಲವೊಮ್ಮೆ ಒಬ್ಬ ವೈದಿಕ ಋಷಿಯಾದ ಗೃತ್ಸಮದನೊಂದಿಗೆ ಗುರುತಿಸಲಾಗುತ್ತದೆ. ವಿಷ್ಣು ಪುರಾಣದ ಪ್ರಕಾರ, ಶೌನಕನು ಗೃತ್ಸಮದನ ಪುತ್ರ, ಮತ್ತು ಮಾನವ ಜೀವನದ ನಾಲ್ಕು ಘಟ್ಟಗಳ ಪದ್ಧತಿಯನ್ನು ಆವಿಷ್ಕರಿಸಿದ. ಸೂತ ಮಹಾಮುನಿಯು ಪೌರಾಣಿಕ ಕಥೆಗಳನ್ನು ಶೌನಕ ಮಹಾಮುನಿಯ ನೇತೃತ್ವದ ಋಷಿಗಳ ಗುಂಪಿಗೆ ನಿರೂಪಿಸಿದ.

ಋಗ್ವೇದ ಪ್ರಾತಿಶಾಖ್ಯವನ್ನು ಶೌನಕನಿಗೆ ಆರೋಪಿಸಲಾಗಿದೆ. ಋಗ್ವೇದ ಪ್ರಾತಿಶಾಖ್ಯದ ಉವಟನ ಭಾಷ್ಯದ ಭಾಷ್ಯಕಾರ ಚಂಪಾ ಪಟ್ಟಣದ ವಿಷ್ಣುಮಿತ್ರನ ಪ್ರಕಾರ, ಶೌನಕನು ಇದನ್ನು ನೈಮಿಷಾರಣ್ಯದಲ್ಲಿ ನಡೆದ ಸತ್ರ ಯಜ್ಞದಲ್ಲಿ (೧೨ ದಿನದ ಬೃಹತ್ ಪ್ರಮಾಣದ ಸಾಮೂಹಿಕ ಯಜ್ಞ) ಇತರರಿಗೆ ಕಲಿಸಿಕೊಟ್ಟನು.[][]

ಶೌನಕನು ಮಹಾಭಾರತ ಮಹಾಕಾವ್ಯದಲ್ಲಿ ಪ್ರಮುಖ ಪಾತ್ರ ಹೊಂದಿದ್ದನು. ಮಹಾಭಾರತ ಮಹಾಕಾವ್ಯವನ್ನು ಉಗ್ರಶ್ರವಸ್ ಹೆಸರಿನ ಕಥೆಗಾರನು ನೈಮಿಷಾರಣ್ಯದಲ್ಲಿ ನಡೆದ ಋಷಿಗಳ ಒಂದು ಸಮಾವೇಶದಲ್ಲಿ ಶೌನಕನಿಗೆ ನಿರೂಪಿಸಿದನು.

ಉಲ್ಲೇಖಗಳು

ಬದಲಾಯಿಸಿ
  1. (English)Mangaldeva Śāstri, The Rgveda-prātiśākhya with the commentary of Uvaṭa by Śaunaka.; Vaidika Svādhyāya Mandira, Varanasi Cantt.,1959 ,OCLC: 28723321
  2. (Hindi)Virendrakumar Verma, Rgveda-prātiśākhya of Śaunaka Along with Uvaṭabhāshya; Chaukhambha Sanskrit Pratishthan,38 U.A., Jawaharnagar, Bungalow Road, Delhi-110007, Reprint-1999; (also published by Saujanya Books,Delhi, and by Benaras Hindu University)


"https://kn.wikipedia.org/w/index.php?title=ಶೌನಕ&oldid=780959" ಇಂದ ಪಡೆಯಲ್ಪಟ್ಟಿದೆ