ಶೈಲಜಾ ಉಡಚಣ

ಬರೀತಲಿದೆ ಯುಗಾದಿ ಸಮಗ್ರ ಕಾವ್ಯ ಇದರ ಸಾರಾಂಶ

ಶೈಲಜಾ ಉಡಚಣ ಕನ್ನಡದ ಕವಯತ್ರಿ ಹಾಗೂ ಲೇಖಕಿ.

ಹುಟ್ಟು/ಶಿಕ್ಷಣ/ಜೀವನ

ಬದಲಾಯಿಸಿ
  • ಜನನ: ೧೯೩೫, ಜುಲೈ ೨೬. ರಾಯಚೂರು ಜಿಲ್ಲೆಯ ಉಡಚಣ, ಜನ್ಮನಾಮ ಮಹಾಂತಮ್ಮ ಹಸಮ್ ಕಲ್. ಮದುವೆ ನಂತರ ಶೈಲಜಾ ಬಸವಣ್ಣಪ್ಪ ಉಡಚಣ. ಕಾವ್ಯನಾಮ ಶೈಲಜಾ ಉಡಚಣ
  • ೧೯೬೧ರಲ್ಲಿ ಬಸವಣ್ಣಪ್ಪ ಉಡಚಣರೊಂದಿಗೆ ಮದುವೆಯಾಗಿ ಗುಲಬರ್ಗಾದಲ್ಲಿ ನೆಲೆಸಿದರು.
  • ನಿಜಾಮ ಕಾಲದ ರಾಯಚೂರಿನ ಮಹಿಳಾ ಹೈಸ್ಕೂಲಿನಲ್ಲಿ ಓದು. ಏಳನೇ ತರಗತಿವರೆಗೆ ಕನ್ನಡ ಮಾಧ್ಯಮ ಹಾಗೂ ಮೆಟ್ರಿಕ್ಯುಲೇಶನ್ ವರೆಗ್ ಉರ್ದು ಮಾಧ್ಯಮ.
  • ಅನಂತರ ಇಂಟರ್ ಮೀಡಿಯೇಟ್, ಬಿ.ಎ, ಬಿ.ಎಡ್, ಎಂ.ಎ. ಪದವಿಗಳು ಖಾಸಗಿ ಅಧ್ಯಯನದ ಮೂಲಕ.

ವೃತ್ತಿಜೀವನ

ಬದಲಾಯಿಸಿ
  • ಹೈಸ್ಕೂಲ್ ಶಿಕ್ಷಕಿ
  • ೧೯೫೯ರಲ್ಲಿ ಗುಲಬರ್ಗಾ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ನೇಮಕ.
  • ಮೈಸೂರು ಮತ್ತು ಬೆಂಗಳೂರು ಮಹಾರಾಣಿ ಕಾಲೇಜುಗಳಲ್ಲಿ ಕಾರ್ಯನಿರ್ವಹಣೆ.
  • ೩೫ ವರ್ಷಗಳ ಸೇವೆಯ ನಂತರ ೧೯೯೧ರಲ್ಲಿ ನಿವೃತ್ತಿ.

ಕೃತಿಗಳು

ಬದಲಾಯಿಸಿ

ಕವನಸಂಕಲನ

ಬದಲಾಯಿಸಿ
  • ಒಂದು ಗಳಿಗೆ (೧೯೭೨)
  • ಕಾದು ನೋಡು (೧೯೭೯)
  • ಸ್ವಗತ (೧೯೮೧) []
  • ಕಪ್ಪುನೆಲ ಸೊಕಿದ ಸೂರ್ಯ (೧೯೮೭)
  • ತುಂತುರು ಹನಿಗಳು (೧೯೯೧)
  • ನನ್ನಂಥವರು (೧೯೯೫)

ವಚನಸಂಕಲನ

ಬದಲಾಯಿಸಿ
  • ಕೇಳುಮಗಾ (೧೯೭೭)

ಸಂಶೋಧನಾ ಗ್ರಂಥ

ಬದಲಾಯಿಸಿ

ವಚನಕಾರರ ದೃಷ್ಟಿಯಲ್ಲಿ ಸ್ತ್ರೀ (೧೯೭೭)

  • ವಚನಗಳಲ್ಲಿ ಸತಿಪತಿ ಭಾವ
  • ನನ್ನ ಲೇಖನಗಳು (೧೯೯೫)
  • ವಚನ ಸಾಹಿತ್ಯ ಮತ್ತು ಮಹಿಳೆ
  • ಮೂರು ಮಾತು ನೂರು ನೀತಿ
  • ನಾನು ಮತ್ತು ಸಾಹಿತ್ಯ
  • ಕಾಲ ನಮ್ಮ ಕೈಯಲ್ಲಿದೆ
  • ‘ನುಡಿನೆರಳು’ (ಅಮೃತಾ ಪ್ರೀತಮ್‌ ರವರ ಅನುವಾದಿತ ಕೃತಿ)

ಕೆಲವು ಕವಿತೆಗಳು ಹಿಂದಿ, ಮರಾಠಿ ಭಾಷೆಗಳಿಗೆ ಅನುವಾದಗೊಂಡಿವೆ.

ಪ್ರಶಸ್ತಿ, ಗೌರವಗಳು

ಬದಲಾಯಿಸಿ
  • ಕಲಬುರಗಿ ಜಿಲ್ಲೆಯ ಮೂರನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ []
  • ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಭಾವೈಕ್ಯ ಕವಿಗೋಷ್ಠಿಯ ಅಧ್ಯಕ್ಷತೆ. (೧೯೯೨)
  • ಮುಧೋಳದಲ್ಲಿ ನಡೆದ ಅಖಿಲಭಾರತ ೬೬ನೇ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ.(೧೯೯೫)
  • ಗುಲಬರ್ಗಾದ ಜಿಲ್ಲಾ ಮಟ್ಟದ ಸಹಕಾರ ಬ್ಯಾಂಕ್ ಸ್ಥಾಪನೆಗೆ ಹೋರಾಟಕ್ಕೆ ಇವರಿಗೆ ರಾಷ್ಟ್ರೀಯ ಮಟ್ಟದ ಪುರಸ್ಕಾರ ದೊರೆತಿದೆ.
  • ದೆಹಲಿಯ ರಾಷ್ಟ್ರೀಯ ಮಹಿಳಾ ಆಯೋಗ ಇವರಿಗೆ ೧೯೯೭ರ ಅತ್ತ್ಯುತ್ತಮ ಸೇವಾ ಪುರಸ್ಕಾರ ನೀಡಿ ಗೌರವಿಸಿದೆ.
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೧೯೯೫)
  • ಅನುಪಮ ಪ್ರಶಸ್ತಿ (೧೯೯೬)
  • ಕರ್ನಾಟಕ ಸರಕಾರದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ (೨೦೦೩)

ಉಲ್ಲೇಖಗಳು

ಬದಲಾಯಿಸಿ

ಹೊರಕೊಂಡಿಗಳು

ಬದಲಾಯಿಸಿ