ಶೃತಿ ಹರಿಹರನ್ (2 ಫೆಬ್ರವರಿ 1989), ಪ್ರಧಾನವಾಗಿ ಕನ್ನಡ ಸಿನೆಮಾಗಳಲ್ಲಿ ನಟಿಸುವ ಭಾರತೀಯ ನಟಿ. ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಇವರು ರಂಗಭೂಮಿಯಲ್ಲಿ ನಟಿಸಿ, ಚಿತ್ರಗಳಲ್ಲಿ ಹಿನ್ನೆಲೆ ನೃತ್ಯಗಾರ್ತಿಯಾಗಿ ಕೆಲಸ ಮಾಡಿದ ನಂತರ ಚಲನಚಿತ್ರಗಳಲ್ಲಿ ನಟಿಸುವ ವೃತ್ತಿಯನ್ನು ಆರಂಭಿಸಿದರು. ಇವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಎರಡು ಫಿಲಂ ಫೇರ್ ಅವಾರ್ಡ್ ಸೌತ್ ಪ್ರಶಸ್ತಿ, ಸೈಮಾ ಪ್ರಶಸ್ತಿ ಮತ್ತು ನಾತಿಚರಾಮಿ ಚಿತ್ರದ ಅಭಿನಯಕ್ಕಾಗಿ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ (ವಿಶೇಷ ಉಲ್ಲೇಖ) ಪಡೆದ ಶ್ರುತಿ, ಬೆಂಗಳೂರು ಟೈಮ್ಸ್ ಪತ್ರಿಕೆಯ 2018ರ ಅತ್ಯಂತ ಅಪೇಕ್ಷಣೀಯ ಮಹಿಳೆ ಆಯ್ಕೆಯಾಗಿದ್ದರು.

ಶೃತಿ ಹರಿಹರನ್
Sruthi Hariharan at Janapada Lokha.jpg
ಜನ್ಮನಾಮ
ಶೃತಿ ಹರಿಹರನ್

(1989-02-02) ೨ ಫೆಬ್ರವರಿ ೧೯೮೯ (age ೩೧)
ತಿರುವನಂತಪುರಂ, ಕೇರಳ, ಭಾರತ
ವೃತ್ತಿನಟಿ, ನಿರ್ಮಾಪಕಿ, ನೃತ್ಯಗಾರ್ತಿ

2012ರ ಮಲಯಾಳಂ ಭಾಷೆಯ ಸಿನಿಮಾ ಕಂಪನಿ ಇವರು ನಟಿಸಿದ ಮೊದಲ ಚಿತ್ರ. ಕನ್ನಡ ಚಿತ್ರರಂಗದಲ್ಲಿ ಇವರ ಮೊದಲ ಚಿತ್ರ ಲೂಸಿಯಾ. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಉರ್ವಿ, ನಾತಿಚರಾಮಿ, ಬ್ಯೂಟಿಫುಲ್ ಮನಸುಗಳು ಚಿತ್ರಗಳಲ್ಲಿನ ನಟನೆಗೆ ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಸಾರ್ವಜನಿಕ ಮನ್ನಣೆಯನ್ನು ಪಡೆದಿದ್ದಾರೆ. 2016ರಲ್ಲಿ ಶೃತಿ ಹರಿಹರನ್ ರವರು ತಮ್ಮ ನಿರ್ಮಾಣ ಸಂಸ್ಥೆ 'ಕಲಾತ್ಮಕ'ವನ್ನು ಸ್ಥಾಪಿಸಿದರು.

ಆರಂಭಿಕ ಜೀವನಸಂಪಾದಿಸಿ

ಶೃತಿ ಹರಿಹರನ್ ರವರು ಕೇರಳದ ತಿರುವನಂತಪುರದಲ್ಲಿ ತಮಿಳು ಅಯ್ಯರ್ ಕುಟುಂಬದಲ್ಲಿ ಜನಿಸಿದರು[೧] [೨] ಆದರೆ ಇವರು ಬೆಳೆದದ್ದು ಬೆಂಗಳೂರಿನಲ್ಲಿ. ಇವರ ಮಾತೃಭಾಷೆ ತಮಿಳು.  ಇವರು ಸಿಶು ಗೃಹ ಮಾಂಟೆಸರಿ ಮತ್ತು ಪ್ರೌಢಶಾಲೆಯಲ್ಲಿ ಓದಿದರು. ಪ್ರೌಢಶಾಲೆಯ ನಂತರ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಬಿಎಂ ಪದವಿ ಪಡೆದರು. ಶೃತಿರವರು ಭರತನಾಟ್ಯದಲ್ಲಿ ತರಬೇತಿ ಪಡೆದಿದ್ದಾರೆ. ತಮ್ಮ ಮಾತೃಭಾಷೆಯನ್ನು ಹೊರತುಪಡಿಸಿ ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳನ್ನು ಮಾತನಾಡಬಲ್ಲರು. [೩]

ಇವರು ಕ್ರೈಸ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಸಾಂಸ್ಕೃತಿಕ ತಂಡದ ಭಾಗವಾಗಿದ್ದರು. ಈ ಆಸಕ್ತಿಯು ಅವರನ್ನು ರಂಗಭೂಮಿಯಲ್ಲಿ ನಟಿಸುವಂತೆ ಮಾಡಿತು. ಇವರು ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾರವರ ನೃತ್ಯ ತಂಡವನ್ನು ಸೇರಿದರು ಮತ್ತು ಕನ್ನಡ ಚಿತ್ರರಂಗದಲ್ಲಿ ಸಹಾಯಕ ನೃತ್ಯ ಸಂಯೋಜಕಿ ಮತ್ತು ಹಿನ್ನೆಲೆ ನೃತ್ಯಗಾರ್ತಿಯಾಗಿ ಕೆಲಸ ಮಾಡಿದರು.[೪] ಮೂರು ವರ್ಷಗಳ ಕಾಲ ನೃತ್ಯಗಾರ್ತಿಯ ಕೆಲಸ ಮಾಡಿ ಹಲವು ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ.[೫]

ವೃತ್ತಿಜೀವನಸಂಪಾದಿಸಿ

ಶೃತಿರವರ ಚಲನಚಿತ್ರ ವೃತ್ತಿಜೀವನವು ಮಲಯಾಳಂ ಚಿತ್ರ ಸಿನೆಮಾ ಕಂಪನಿಯೊಂದಿಗೆ ಪ್ರಾರಂಭವಾಯಿತು. ಇವರು ಎರಡು ಚಿತ್ರಗಳಲ್ಲಿ ನಟಿಸಿದರು, ತೆಕ್ಕು ತೆಕ್ಕೊರು ದೇಶತು ಮತ್ತು ಕಾಲ್ ಮೀ @.[೬] ಫ್ರಾನ್ಸಿಸ್ ರವರ ಕಾಲ್ ಮಿ @ ಚಿತ್ರದಲ್ಲಿ ಐಟಿ ಹುಡುಗಿಯಾಗಿ ಮತ್ತು ನಂದುರವರ ತೆಕ್ಕು ತೆಕ್ಕೊರು ದೇಶತು ಚಿತ್ರದಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾರೆ.[೭] ಪವನ್ ಕುಮಾರ್ ರವರ ಕನ್ನಡ ಚಿತ್ರ ಲೂಸಿಯಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲು ಆಯ್ಕೆಯಾದರು. ಇದರಲ್ಲಿ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ - ಕೆಳಮಧ್ಯಮ ವರ್ಗದ ಹುಡುಗಿ ಮತ್ತು ಚಿತ್ರನಟಿ.[೮] [೯]ಲೂಸಿಯಾ ಚಿತ್ರವೂ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆಯಿತು ಮತ್ತು ಹಲವಾರು ಭಾಷೆಗಳಲ್ಲಿ ಮರು ನಿರ್ಮಾಣವಾಯಿತು. [೧೦] ಶೃತಿರವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಮತ್ತು ರೆಡಿಫ್ ಅವರ "ಮೋಸ್ಟ್ ಇಂಪ್ರೆಸಿವ್ ಕನ್ನಡ ಮೂವಿ ಡಿಬುಟ್ಸ್, 2013" ಪಟ್ಟಿಯಲ್ಲಿ ಕಾಣಿಸಿಕೊಂಡರು. [೧೧] ಅದೇ ವರ್ಷ ಇನ್ನೊಂದು ಕನ್ನಡ ಚಿತ್ರ ದ್ಯಾವ್ರೇದಲ್ಲಿ ಕಾಣಿಸಿಕೊಂಡರು. ನಿರ್ದೇಶಕ ಹರ್ಷರವರ ಶಿವರಾಜ್ಕುಮಾರ್ ಅಭಿನಯದ ಭಜರಂಗಿ ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು,  ಆದರೆ ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. [೧೨]

2014ರಲ್ಲಿ, ಜೇಕಬ್ ವರ್ಗೀಸ್ ರವರ ಸವಾರಿ 2 ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಜೋಡಿಯಾಗಿ ಕಾಣಿಸಿಕೊಂಡರು. ಶೃತಿರವರ ಮುಂದಿನ ಪಾತ್ರ ಅವರ ಮೊದಲ ತಮಿಳು ಚಿತ್ರ ಲಕ್ಷ್ಮಿ ರಾಮಕೃಷ್ಣನ್ ನಿರ್ದೇಶನದ ನೆರುಂಗಿ ವಾ ಮುತ್ತಮಿಡತೆ. [೧೩] [೧೪] ನಂತರ ಇವರು ಎ.ಪಿ.ಅರ್ಜುನ್ ರವರ ರಾಟೆ ಚಿತ್ರದಲ್ಲಿ ನಟಿಸಿದರು, ಇದಕ್ಕೆ ಲೂಸಿಯಾ ಬಿಡುಗಡೆಗೆ ಮುನ್ನವೇ ನಟಿಸಲು ಸಹಿ ಹಾಕಿದ್ದರು.[೯] ಈ ಚಿತ್ರದಲ್ಲಿ ಅವರ ಪಾತ್ರ ಸಾಂಪ್ರದಾಯಿಕ ಹಳ್ಳಿ ಹುಡುಗಿಯ ಪಾತ್ರವಾಗಿತ್ತು. [೬]

ಮುಂದೆ ಅವರು ಏಕಕಾಲಕ್ಕೆ ರಜತ್ ಮಾಯಿ ನಿರ್ದೇಶನದ ಕನ್ನಡ ಚಿತ್ರ ಸಿಪಾಯಿ ಮತ್ತು [೧೫] ತಮಿಳಿನ ಕಲಾತ್ಮಕ ಚಿತ್ರ ನಿಲಾದಲ್ಲಿ ನಟಿಸಿದರು. ಇದರ ಜೊತೆಗೆ ಇವರು ಮತ್ತೊಂದು ಕನ್ನಡ ಚಿತ್ರ ಹೇಮಂತ್ ರಾವ್ ರವರ ಗೋಧಿ ಬಣ್ಣ ಸಾಧಾರಣ ಮೈಕಟ್ಟು[೧೬] ಮತ್ತು ಬಾಲಾಜಿ ಶಕ್ತಿವೇಲ್ ನಿರ್ದೇಶನದ ರಾ ರಾ ರಾಜಶೇಖರ್ ಚಿತ್ರವನ್ನು ಒಪ್ಪಿಕೊಂಡರು.[೧೭]

ಗೋಧಿ ಬಣ್ಣ ಸಾಧಾರಣ ಮೈಕಟ್ಟು ವಿಮರ್ಶಾತ್ಮಕವಾಗಿ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಗಳಿಸಿತು. ಇವರು ಮಾಡಿದ ಡಾ||ಸಹನಾ ಪಾತ್ರ ಮನೆ ಮಾತಾಯಿತು. ನಂತರ ಮನೋಮೂರ್ತಿಯವರು ನಿರ್ಮಿಸಿದ ಮಾದ ಮತ್ತು ಮಾನಸಿ ಚಿತ್ರದಲ್ಲಿ ಕಾಣಿಸಿಕೊಂಡರು. ಪ್ರದೀಪ್ ವರ್ಮಾರವರ ಉರ್ವಿ, ನಂತರ ಬ್ಯೂಟಿಫುಲ್ ಮನಸುಗಳು ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಯಶಸ್ಸು ಪಡೆದರು. ವೈವಿಧ್ಯಮಯ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಇವರು ಕಮರ್ಷಿಯಲ್ ಮತ್ತು ಕಾರ್ಯಕ್ಷಮತೆ ಆಧಾರಿತ ಪಾತ್ರಗಳ ನಡುವೆ ಸಮತೋಲನವನ್ನು ಸಾಧಿಸಿದರು. ಇವರು ಮುಂದೆ ಕನ್ನಡದ ಬಹು-ತಾರಾಗಣದ ಹ್ಯಾಪಿ ನ್ಯೂ ಇಯರ್ ನಲ್ಲಿ ಕಾಣಿಸಿಕೊಂಡರು, ಇದರಲ್ಲಿ ಇವರು ಸೋರಿಯಾಸಿಸ್ ನಿಂದ ಬಳಲುತ್ತಿರುವ ಹಾಸಿಗೆ ಹಿಡಿದ ರೋಗಿಯ ಪಾತ್ರವನ್ನು ನಿರ್ವಹಿಸಿದರು. ದ್ವಿಭಾಷಾ ಚಿತ್ರವಾದ ವಿಸ್ಮಯ (ಕನ್ನಡ),  ತಮಿಳಿನಲ್ಲಿ ನಿಬುಣನ್ ನಲ್ಲಿ ಕಾಣಿಸಿಕೊಂಡ ನಂತರ ದರ್ಶನ್ ರವರೊಂದಿಗೆ ಯಶಸ್ವಿ ಚಿತ್ರ ತಾರಕ್ ನಲ್ಲಿ ಕಾಣಿಸಿಕೊಂಡರು.

ವೈಯಕ್ತಿಕ ಜೀವನಸಂಪಾದಿಸಿ

ಅವರ ಸಂಗಾತಿ ರಾಮ್ ಕುಮಾರ್ ಅವರು ಸಮರ ಕಲಾವಿದ ಮತ್ತು ತರಬೇತುದಾರರಾಗಿದ್ದಾರೆ. ಅವರಿಗೆ ೨೦೧೯ ರಲ್ಲಿ ಜಾನಕಿ ಎಂಬ ಮಗಳು ಜನಿಸಿದಳು.

ನಟಿಸಿರುವ ಚಿತ್ರಗಳುಸಂಪಾದಿಸಿ

ಕೀ
  ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ಸಂ ವರ್ಷ ಚಿತ್ರ ಪಾತ್ರ ನಿರ್ದೇಶಕ ಭಾಷೆ Notes
1 2012 ಸಿನಿಮಾ ಕಂಪನಿ ಪಾರ್ವತಿ ಮಾಮಾಸ್ ಮಲಯಾಳಂ ಮೊದಲ ಚಿತ್ರ
2 2013 ತೆಕ್ಕು ತೆಕ್ಕೊರು ದೇಶತು ನಂದು
3 ಲೂಸಿಯಾ ಶ್ವೇತ ಪವನ್ ಕುಮಾರ್ ಕನ್ನಡ
4 ದ್ಯಾವ್ರೇ  ಗಡ್ಡ ವಿಜಿ
5 2014 ಸವಾರಿ 2 ಜೇಕಬ್ ವರ್ಗೀಸ್
6 ನೆರುಂಗಿ ವಾ ಮುತ್ತಮಿಡತೆ ಮಹಾ ಲಕ್ಷ್ಮಿ ರಾಮಕೃಷ್ಣನ್ ತಮಿಳು
7 2015 ರಾಟೆ ರಾಣಿ ಎ.ಪಿ. ಅರ್ಜುನ್ ಕನ್ನಡ
- ಪ್ಲಸ್ Herself ಗಡ್ಡ ವಿಜಿ "ಸಂಡೇ ಬಂತು" ಹಾಡಿನಲ್ಲಿ ವಿಶೇಷ ಪಾತ್ರ
- ಎಬಿಸಿ ಶೃತಿ ಮದನ್ ರಾಮ ವೆಂಕಟೇಶ್ ಹಿಂದಿ ಕಿರುಚಿತ್ರ
8 2016 ಜೈ ಮಾರುತಿ 800 ಗೀತಾ ಹರ್ಷ ಕನ್ನಡ
9 ಗೋಧಿ ಬಣ್ಣ ಸಾಧಾರಣ ಮೈಕಟ್ಟು ಡಾ. ಸಹನಾ ಹೇಮಂತ್ ರಾವ್ ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿ - ಕನ್ನಡ

ನಾಮನಿರ್ದೇಶಿತ- ಅತ್ಯುತ್ತಮ ನಟಿ-ಕನ್ನದಾಸ್ಗಾಗಿ ಸಿಮಾ ಪ್ರಶಸ್ತಿ

10 ಸಿಪಾಯಿ ದಿವ್ಯ ರಜತ್ ಮಾಯಿ
11 ಮಾದ ಮತ್ತು ಮಾನಸಿ ಮಾನಸಿ ಸತೀಶ್ ಪ್ರಧಾನ್
12 2017 ಬ್ಯೂಟಿಫುಲ್ ಮನಸುಗಳು ನಂದಿನಿ ಜಯತೀರ್ಥ ಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ

ನಾಮನಿರ್ದೇಶಿತ- ಲವ್ ಲಾವಿಕ್ ರೀಡರ್ಸ್ ಅತ್ಯುತ್ತಮ ನಟಿ ಮಹಿಳಾ ಪ್ರಶಸ್ತಿ

Fಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ - ಕನ್ನಡ

ಗೆದ್ದಿದೆ - ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟನಿಗಾಗಿ ಸಿಮಾ ಪ್ರಶಸ್ತಿ - (ಸ್ತ್ರೀ) - (ವಿಮರ್ಶಕರು) - ಕನ್ನಡ
13 ನಿಲ ನಿಲ ಸೆಲ್ವಮಣಿ ಸೆಲ್ವರಾಜ್ ತಮಿಳು ನೆಟ್ಫ್ಲಿಕ್ಸ್ ಫಿಲ್ಮ್
14 ಉರ್ವಿ ಆಶಾ  ಪ್ರದೀಪ್ ವರ್ಮ ಕನ್ನಡ
15 ಹ್ಯಾಪಿ ನ್ಯೂ ಇಯರ್ ಚಾರ್ವಿ ಪನ್ನಗಾಭರಣ
16 ವಿಸ್ಮಯ ಶಿಲ್ಪಾ ಅರುಣ್ ವೈದ್ಯನಾಥನ್ ದ್ವಿಭಾಷಾ ಚಿತ್ರ
ನಿಬುಣನ್ ತಮಿಳು
17 ಸೋಲೋ ರುಕ್ಕು ಬಿಜಾಯ್ ನಂಬಿಯರ್ ತಮಿಳು, ಮಲಯಾಳಂ ದ್ವಿಭಾಷಾ ಚಿತ್ರ
18 ತಾರಕ್ ಸ್ನೇಹಾ ಪ್ರಕಾಶ್ ಕನ್ನಡ Nominated - TSR TV9 National Award for Best Actress - Kannada
19 ಉಪೇಂದ್ರ ಮತ್ತೆ ಬಾ ಸೀತಾ ಅರುಣ್ ಲೋಕನತ್
20 ರಾ ರಾ ರಾಜಶೇಖರ್ ಬಾಲಾಜಿ ಶಕ್ತಿವೇಲು ತಮಿಳು
21 2018 ಹಂಬಲ್ ಪೊಲಿಟಿಷಿಯನ್ ನಾಗರಾಜ್ ರಮಾ ಸಾದ್ ಖಾನ್ ಕನ್ನಡ
22 ಬೂತಯ್ಯನ ಮೊಮ್ಮಗ ಅಯ್ಯು ನಾಗರಾಜ್ ಪೀಣ್ಯ
23 ರಾಂಬೊ 2 Herself ಅನಿಲ್ ಕುಮಾರ್ Special Appearance in a song
24 ಅಂಬಿ ನಿಂಗ್ ವಯಸ್ಸಾಯ್ತೋ ಬಾಲ್ಯದ ನಂದಿನಿ ಗುರುದತ್ತ ಗಾಣಿಗ Nominated - TSR TV9 National Award for Best Actress - Kannada
25 ನಾತಿಚರಾಮಿ ಗೌರಿ ಮನ್ಸೊರೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟಿಗಾಗಿ ವಿಶೇಷ ಉಲ್ಲೇಖ

ನಾಮನಿರ್ದೇಶಿತ- ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟನಿಗಾಗಿ ಸಿಮಾ ಪ್ರಶಸ್ತಿ- (ಸ್ತ್ರೀ) -ಕನ್ನಡ
26 2019   ಆದ್ಯ ಚಿತ್ರೀಕರಣ
27  ಟೆಸ್ಲಾ(movie) ವಿನೋದ್ ರಾಜ್ ಚಿತ್ರೀಕರಣ
28  ಮನೆ ಮಾರಾಟಕ್ಕಿದೆ ಮಂಜು ಸ್ವರಾಜ್ ಚಿತ್ರೀಕರಣ

ಉಲ್ಲೇಖಗಳುಸಂಪಾದಿಸಿ

 1. "'I Don't Want To Be a Glam Doll'". Newindianexpress.com.
 2. "Being an actress has been a fulfilling rebellion for me: Sruthi Hariharan - Times of India". The Times of India. Retrieved 2018-10-26.
 3. "Dancing with the cine stars | Deccan Chronicle". Archives.deccanchronicle.com. 2013-05-25. Retrieved 2014-06-17.
 4. "'I had to lose weight and look glamorous for Lucia'". Rediff.com. 2013-08-27. Retrieved 2014-06-17.
 5. "Shruthi Hariharan was a background dancer ". The Times of India. 2013-05-10. Retrieved 2014-06-17.
 6. ೬.೦ ೬.೧ "My passion for acting grew with time". Deccanherald.com. Retrieved 2014-06-17.
 7. "Sruthi gets busy ". The Times of India. 2012-11-12. Retrieved 2014-06-17.
 8. "'I had to lose weight and look glamorous for Lucia'". Rediff.com. 2013-08-27. Retrieved 2014-06-17.
 9. ೯.೦ ೯.೧ A Sharadhaa. "Shruti Hariharan finds place in Arjun's film Raate". The New Indian Express. Retrieved 2014-06-17.
 10. "Fox Star India to make Kannada film Lucia in Hindi — Indian Express". Archive.indianexpress.com. 2013-12-06. Retrieved 2014-06-17.
 11. "The Most Impressive Kannada Movie Debuts, 2013". Rediff.com. 2014-01-06. Retrieved 2014-06-17.
 12. "Shruti Hariharan joins Raate ". The Times of India. 2013-04-05. Retrieved 2014-06-17.
 13. "Lucia girl makes Kollywood debut ". The Times of India. 2014-02-07. Retrieved 2014-06-17.
 14. "Lakshmi Ramakrishnan starts her second film!". Sify.com. 2014-03-20. Retrieved 2014-06-17.
 15. A Sharadhaa. "'Savari 2 has Good Humour'". The New Indian Express. Retrieved 2014-06-17.
 16. "Missing Man Subject of Sruthi's Film". Newindianexpress.com.
 17. "'I would like to do more meaningful cinema'". Rediff.com.