ಶುಭಮನ್ ಸಿಂಗ್ ಗಿಲ್ (ಜನನ ೮ ಸೆಪ್ಟೆಂಬರ್ ೧೯೯೯) ಒಬ್ಬ ಭಾರತೀಯ ಕ್ರಿಕೆಟಿಗ.[೧] ಇವರು ಬಲಗೈ ಉನ್ನತ ಕ್ರಮಾಂಕದ ಬ್ಯಾಟ್ಸ್‌ಮನ್. ಇವರು ೨೦೧೭–೧೮ ರ ರಣಜಿ ಟ್ರೋಫಿಯಲ್ಲಿ ಬಂಗಾಳದ ವಿರುದ್ಧ ಪಂಜಾಬ್‌ನಿಂದ ಪ್ರಥಮ ದರ್ಜೆ ಪಾದಾರ್ಪಣೆ ಮಾಡಿದರು.[೨] ೨೦೧೭ ರ ಕೊನೆಯಲ್ಲಿ ಅರ್ಧಶತಕ ಮತ್ತು ಮುಂದಿನ ಪಂದ್ಯದಲ್ಲಿ ೧೨೯ ರನ್ ಗಳಿಸಿದರು.[೩] ಇವರು ೨೦೧೯ ರ ಜನವರಿಯಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ, ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.

ಶುಭಮನ್ ಗಿಲ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಶುಭಮನ್ ಸಿಂಗ್ ಗಿಲ್
ಹುಟ್ಟು (1999-09-08) ೮ ಸೆಪ್ಟೆಂಬರ್ ೧೯೯೯ (ವಯಸ್ಸು ೨೪)
ಫಾಜಿಲ್ಕಾ, ಪಂಜಾಬ್, ಭಾರತ,
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ಆಫ್ ಬ್ರೇಕ್
ಪಾತ್ರಆರಂಭಿಕ ಬ್ಯಾಟ್ಸ್‌ಮನ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೨೨೭)೩೧ ಜನವರಿ ೨೦೧೯ v ನ್ಯೂಜಿಲ್ಯಾಂಡ್
ಕೊನೆಯ ಅಂ. ಏಕದಿನ​೨೪ ಜನವರಿ ೨೦೨೩ v ನ್ಯೂಜಿಲ್ಯಾಂಡ್
ಟಿ೨೦ಐ ಚೊಚ್ಚಲ (ಕ್ಯಾಪ್ ೧೦೧)೩ ಜನವರಿ ೨೦೨೩ v ಶ್ರೀಲಂಕಾ
ಕೊನೆಯ ಟಿ೨೦ಐ೨೯ ಜನವರಿ ೨೦೨೩ v ನ್ಯೂಜಿಲ್ಯಾಂಡ್
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2017–presentPunjab
2018–2021Kolkata Knight Riders
2022–presentGujarat Titans
2022Glamorgan
ವೃತ್ತಿ ಅಂಕಿಅಂಶಗಳು
ಸ್ಪರ್ಧೆ Test ODI T20I FC
ಪಂದ್ಯಗಳು ೧೩ ೨೧ ೪೦
ಗಳಿಸಿದ ರನ್ಗಳು ೭೩೬ ೧೨೫೪ ೫೮ ೩,೨೭೮
ಬ್ಯಾಟಿಂಗ್ ಸರಾಸರಿ ೩೨.೦೦ ೭೩.೭೬ ೧೯.೩೩ ೫೨.೮೭
೧೦೦/೫೦ ೧/೪ ೪/೫ ೦/೦ ೯/೧೬
ಉನ್ನತ ಸ್ಕೋರ್ ೧೧೦ ೨೦೮ ೪೬ ೨೬೮
ಹಿಡಿತಗಳು/ ಸ್ಟಂಪಿಂಗ್‌ ೯/– ೯/– ೨/– ೨೬/–
ಮೂಲ: Cricinfo, 29 January 2023

೨೦೧೮ ರ ಅಂಡರ್ -೧೯ ಕ್ರಿಕೆಟ್ ವಿಶ್ವಕಪ್‌ಗೆ ಉಪನಾಯಕನಾಗಿ, ಭಾರತದ ಅಂಡರ್ -೧೯ ತಂಡಕ್ಕೆ ಅವರನ್ನು ರಚಿಸಲಾಯಿತು. ೨೦೧೮ ರ ಐಸಿಸಿ ಅಂಡರ್ -೧೯ ವಿಶ್ವಕಪ್‌ನಲ್ಲಿ ಶುಭಮನ್ ಸರಾಸರಿ ೧೨೪.00 ರಲ್ಲಿ ೩೭೨ ರನ್ ಗಳಿಸಿದರು. ಅಲ್ಲಿ ಇವರು ಭಾರತದ ದಾಖಲೆಯ ನಾಲ್ಕನೇ ವಿಶ್ವ ಪ್ರಶಸ್ತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲು ಮೂರನೆಯ ಸ್ಥಾನದಲ್ಲಿ ಆಡಿದರು ಮತ್ತು ಆವೃತ್ತಿಯ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆಗಿ ಆಯ್ಕೆಯಾದರು. ಪಾಕಿಸ್ತಾನದ ವಿರುದ್ದದ ಅಂಡರ್ -೧೯ ಸೆಮಿಫೈನಲ್ ಪಂದ್ಯದಲ್ಲಿ ಇವರು ಅಜೇಯ ೧೦೨ ರನ್ ಗಳಿಸಿದ್ದರು ಮತ್ತು ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಮತ್ತು ಸೌರವ್ ಗಂಗೂಲಿ ಅವರಂತಹ ಬ್ಯಾಟಿಂಗ್ ಶ್ರೇಷ್ಠರಿಂದ ಪ್ರಶಂಸೆಗೆ ಪಾತ್ರರಾದರು.[೪][೫][೬]

ಆರಂಭಿಕ ಜೀವನ ಬದಲಾಯಿಸಿ

ಶುಭಮನ್ ಜನಿಸಿದ್ದು ಪಂಜಾಬ್‌ನ ಫಾಜಿಲ್ಕಾದಲ್ಲಿ. ಅಲ್ಲಿ ಇವರ ಕುಟುಂಬವು ಕೃಷಿ ಭೂಮಿಯನ್ನು ಹೊಂದಿತ್ತು. ಇವರ ತಂದೆ, ಕೃಷಿಕರಾದ ಲಖ್ವಿಂದರ್ ಸಿಂಗ್ ಅವರು ಕ್ರಿಕೆಟಿಗರಾಗಲು ಬಯಸಿದ್ದರು ಆದರೆ ಅವರ ಕನಸನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ನಂತರ ಅವರು ತಮ್ಮ ಮಗ ಶುಭಮನ್ ಗಿಲ್ ಅವರನ್ನು ಕ್ರಿಕೆಟಿಗನನ್ನಾಗಿ ಮಾಡಲು ನಿರ್ಧರಿಸಿದರು. ಗಿಲ್ ಅವರ ತಂದೆಗೆ ಅವರ ಪ್ರತಿಭೆಯ ಬಗ್ಗೆ ಮನವರಿಕೆಯಾಯಿತು ಮತ್ತು ಕುಟುಂಬವನ್ನು ಮೊಹಾಲಿಗೆ ಸ್ಥಳಾಂತರಿಸಿ ಪಿಸಿಎ ಕ್ರೀಡಾಂಗಣದ ಬಳಿ ಒಂದು ಮನೆಯನ್ನು ಬಾಡಿಗೆಗೆ ಪಡೆದರು.[೭]

ಗಿಲ್ ಅವರ ತಂದೆ, ಮೂರು ವರ್ಷದಿಂದ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದರು ಎಂದು ಶುಭಮನ್ ಗೆ ಹೇಳಿದರು. "ಅವರು ಮೂರು ವರ್ಷದವರೆಗೆ ಮಾತ್ರ ಕ್ರಿಕೆಟ್ ಆಡಿದ್ದರು. ಆ ವಯಸ್ಸಿನ ಮಕ್ಕಳು ಆಟಿಕೆಗಳೊಂದಿಗೆ ಆಟವಾಡುತ್ತಿದ್ದರು. ಅವರು ಎಂದಿಗೂ ಅಂತಹ ಆಟಿಕೆಗಳನ್ನು ಕೇಳಲಿಲ್ಲ. ಅವರು ಬ್ಯಾಟ್ ಮತ್ತು ಚೆಂಡಿನೊಂದಿಗೆ ಮಲಗುತ್ತಿದ್ದರು” ಎಂದು ಗಿಲ್ ಅವರ ತಂದೆ ಲಖ್ವಿಂದರ್ ಸಿಂಗ್ ಹೇಳಿದ್ದಾರೆ.[೮]

ಪಂಜಾಬ್‌ಗಾಗಿ ಅಂಡರ್ -೧೬ ರಾಜ್ಯಕ್ಕೆ ಪಾದಾರ್ಪಣೆ ಮಾಡಿದ ಅವರು ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಅಜೇಯ ಡಬಲ್ ಸೆಂಚುರಿ ಹೊಡೆದರು. ೨೦೧೪ ರಲ್ಲಿ ಅವರು ಪಂಜಾಬ್‌ನ ಅಂತರ್-ಜಿಲ್ಲಾ ಅಂಡರ್ -೧೬ ಸ್ಪರ್ಧೆಯಲ್ಲಿ ೩೫೧ ರನ್ ಗಳಿಸಿದರು ಮತ್ತು ನಿರ್ಮಲ್ ಸಿಂಗ್ ಅವರೊಂದಿಗೆ ೫೮೭ ರನ್‌ಗಳ ದಾಖಲೆಯ ಆರಂಭಿಕ ನಿಲುವನ್ನು ಹಂಚಿಕೊಂಡರು.[೯]

ದೇಶೀಯ ವೃತ್ತಿ ಬದಲಾಯಿಸಿ

ಇವರು ಫೆಬ್ರವರಿ ೨೫, ೨೦೧೭ ರಂದು ೨೦೧೬–೧೭ ವಿಜಯ್ ಹಜಾರೆ ಟ್ರೋಫಿಯಲ್ಲಿ ಪಂಜಾಬ್‌ಗಾಗಿ ತಮ್ಮ ಚೊಚ್ಚಲ ಪ್ರವೇಶವನ್ನು ಮಾಡಿದರು.[೧೦] ಇವರು ೧೭ ನವೆಂಬರ್ ೨೦೧೭ ರಂದು ೨೦೧೭–೧೮ ರಣಜಿ ಟ್ರೋಫಿಯಲ್ಲಿ ಪಂಜಾಬ್‌ಗಾಗಿ ಪ್ರಥಮ ದರ್ಜೆ ಪಾದಾರ್ಪಣೆ ಮಾಡಿದರು.[೧೧] ಅದೇ ತಿಂಗಳ ನಂತರ ಎರಡನೇಯ ಪಂದ್ಯದಲ್ಲಿ ಪಂಜಾಬ್ ಪರ ಬ್ಯಾಟಿಂಗ್ ಮಾಡಿ ಇವರು ತಮ್ಮ ಮೊದಲ ಶತಕವನ್ನು ಗಳಿಸಿದರು.

೨೦೧೮ ರ ಜನವರಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅವರು ೨೦೧೮ ರ ಐಪಿಎಲ್ ಹರಾಜಿನಲ್ಲಿ ೧.೮ ಕೋಟಿಗೆ ಖರೀದಿಸಿದರು.[೧೨] ೧೪ ಏಪ್ರಿಲ್ ೨೦೧೮ ರಂದು ನಡೆದ ೨೦೧೮ ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಟ್ವೆಂಟಿ -೨೦ ಗೆ ಪಾದಾರ್ಪಣೆ ಮಾಡಿದರು.[೧೩]

ಅಕ್ಟೋಬರ್ ೨೦೧೮ ರಲ್ಲಿ, ಇವರು ೨೦೧೮–೧೯ ದಿಯೋಧರ್ ಟ್ರೋಫಿಯ ಇಂಡಿಯಾ ಸಿ ತಂಡದಲ್ಲಿ ಸ್ಥಾನ ಪಡೆದರು. ಅಂತಿಮ ರೌಂಡ್ ನ ರಾಬಿನ್ ಪಂದ್ಯದಲ್ಲಿ, ಇಂಡಿಯಾ ಎ ವಿರುದ್ಧ ಇವರು ಅಜೇಯ ಶತಕವನ್ನು ಗಳಿಸಿದರು.[೧೪] ಇವರು ಮುಂದಿನ ತಿಂಗಳು, ೨೦೧೮–೧೯ ರಣಜಿ ಟ್ರೋಫಿಗೆ ಮುಂಚಿತವಾಗಿ ವೀಕ್ಷಿಸಿದ ಎಂಟು ಆಟಗಾರರಲ್ಲಿ ಒಬ್ಬರಾಗಿ ಹೆಸರಿಸಲ್ಪಟ್ಟರು. ಡಿಸೆಂಬರ್ ೨೦೧೮ ರಲ್ಲಿ, ರಣಜಿ ಟ್ರೋಫಿಯಲ್ಲಿ ಪಂಜಾಬ್ ತಮಿಳುನಾಡು ವಿರುದ್ಧದ ಪಂದ್ಯದ ಸಮಯದಲ್ಲಿ, ಗಿಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತನ್ನ ಮೊದಲ ಡಬಲ್ ಸೆಂಚುರಿ ೨೬೮ ರನ್ ಗಳಿಸಿದರು. ೨೫ ಡಿಸೆಂಬರ್ ೨೦೧೮ ರಂದು ನಡೆದ ರಣಜಿ ಟ್ರೋಫಿಯಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯದ ನಾಲ್ಕನೇ ದಿನದಂದು, ಪಂಜಾಬ್‌ಗೆ ೫೭ ಓವರ್‌ಗಳಿಂದ ೩೩೮ ರನ್ಗಳ ಅವಶ್ಯಕತೆಯಿತ್ತು. ಗಿಲ್ ೧೫೪ ಎಸೆತಗಳಲ್ಲಿ ೧೪೮ ರನ್ ಗಳಿಸಿದರು. ಪಂದ್ಯವು ಡ್ರಾ ಆಗಿ ಮುಗಿಯಿತು.[೧೫]

೧ ಜನವರಿ ೨೦೧೯ ರ ಹೊತ್ತಿಗೆ ಗಿಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, ಎಂಟು ಪಂದ್ಯಗಳಲ್ಲಿ, ಹದಿನಾಲ್ಕು ಇನ್ನಿಂಗ್ಸ್‌ಗಳಿಂದ ೯೯೦ ರನ್ ಗಳಿಸಿದ್ದರು. ಒಂದು ವಾರದ ನಂತರ, ಇವರು ತಮ್ಮ ಹದಿನೈದನೇ ಇನ್ನಿಂಗ್ಸ್‌ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ೧,೦೦೦ ರನ್ ಗಳಿಸಿದರು. ಅವರು ೨೦೧೮–೧೯ ರಣಜಿ ಟ್ರೋಫಿಯಲ್ಲಿ ಪಂಜಾಬ್ ಪರ ರನ್-ಸ್ಕೋರರ್ ಆಗಿದ್ದರು. ಐದು ಪಂದ್ಯಗಳಲ್ಲಿ ೭೨೮ ರನ್ ಗಳಿಸಿದ್ದಾರೆ.[೧೬][೧೭]ಆಗಸ್ಟ್ 2019 ರಲ್ಲಿ, ಅವರು 2019–20 ದುಲೀಪ್ ಟ್ರೋಫಿಗೆ ಇಂಡಿಯಾ ಬ್ಲೂ ತಂಡದ ನಾಯಕರಾಗಿ ಆಯ್ಕೆಯಾದರು.[೧೮]

ಅಂತರರಾಷ್ಟ್ರೀಯ ವೃತ್ತಿಜೀವನ ಬದಲಾಯಿಸಿ

ಇವರು, ಫೆಬ್ರವರಿ ೨೦೧೭ ರಲ್ಲಿ ನಡೆದ ಇಂಗ್ಲೆಂಡ್ ಅಂಡರ್ -೧೯ ವಿರುದ್ಧದ ಭಾರತೀಯ ಅಂಡರ್ -೧೯ ಸರಣಿಯ ಗೆಲುವಿನ ಭಾಗವಾಗಿದ್ದರು.[೧೯][೨೦] ಡಿಸೆಂಬರ್ ೨೦೧೭ ರಲ್ಲಿ, ೨೦೧೮ ರ ಅಂಡರ್ -೧೯ ಕ್ರಿಕೆಟ್ ವಿಶ್ವಕಪ್ಗಾಗಿ ಭಾರತ ತಂಡದ ಉಪನಾಯಕನಾಗಿ ಇವರನ್ನು ಆಯ್ಕೆ ಮಾಡಲಾಯಿತು. ಪಂದ್ಯಾವಳಿಯಲ್ಲಿ ಇವರು ಭಾರತಕ್ಕೆ ೩೭೨ ರನ್ ಗಳಿಸಿ, ಅಗ್ರ ರನ್ ಗಳಿಸಿದ ಆಟಗಾರರಾದರು. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗಿಲ್ ಅವರನ್ನು ತಂಡದ ರೈಸಿಂಗ್ ಸ್ಟಾರ್ ಎಂದು ಹೆಸರಿಸಿತು.[೨೧][೨೨]

೨೦೧೯ ರ ಜನವರಿಯಲ್ಲಿ, ನ್ಯೂಜಿಲೆಂಡ್ ವಿರುದ್ಧದ ಸರಣಿಗಾಗಿ ಗಿಲ್ ಅವರನ್ನು ಸೀಮಿತ ಓವರ್‌ಗಳ ಕಾಲಕ್ಕೆ ಭಾರತ ತಂಡಕ್ಕೆ ಸೇರಿಸಲಾಯಿತು.[೨೩] ೩೧ ಜನವರಿ ೨೦೧೯ ರಂದು ಸರಣಿಯ ನಾಲ್ಕನೇ ಏಕದಿನ ಪಂದ್ಯದಲ್ಲಿ, ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.[೨೪]

ಆಗಸ್ಟ್ ೨೦೧೯ ರಲ್ಲಿ, ಪ್ರಥಮ ದರ್ಜೆ ಪಂದ್ಯವೊಂದರಲ್ಲಿ, ಭಾರತೀಯ ತಂಡಕ್ಕೆ ದ್ವಿಶತಕ ಬಾರಿಸಿದ ಗಿಲ್ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಟ್ರಿನಿಡಾಡ್ ಮತ್ತು ಟೊಬಾಗೊದ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ವೆಸ್ಟ್ ಇಂಡೀಸ್ ಎ ವಿರುದ್ಧ ಇಂಡಿಯಾ ಎ ಪರ ೨೦೪ ರನ್ ಗಳಿಸಿದಾಗ ಇವರಿಗೆ ೧೯ ವರ್ಷವಾಗಿತ್ತು.[೨೫] ನಂತರ ಇವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಾಗಿ ಭಾರತದ ಟೆಸ್ಟ್ ತಂಡದಲ್ಲಿ ಹೆಸರಿಸಲಾಯಿತು.[೨೬]

ಉಲ್ಲೇಖಗಳು ಬದಲಾಯಿಸಿ

  1. http://www.espncricinfo.com/india/content/player/1070173.html
  2. https://indianexpress.com/article/sports/cricket/ranji-trophy-2017-bengal-inch-closer-to-quarterfinal-berth-with-innings-victory-over-punjab-4945137/
  3. https://indianexpress.com/article/sports/cricket/ranji-trophy-2017-punjab-in-command-with-shubman-gill-anmolpreet-singh-tons-4954353/
  4. https://www.hindustantimes.com/cricket/how-shubman-gill-player-of-icc-u-19-world-cup-polished-his-virat-kohli-shot/story-a9AuYnkNLFeTIXDZk5RysK.html
  5. https://sports.ndtv.com/icc-under-19-world-cup-2018/icc-under-19-world-cup-shubman-gill-impresses-with-high-quality-hundred-against-pakistan-1806215
  6. https://www.indiatoday.in/sports/cricket/story/shubman-gill-a-better-player-than-prithvi-shaw-sourav-ganguly-to-india-today-1157220-2018-01-30
  7. https://www.espncricinfo.com/story/_/id/22238946/i-sat-washroom-my-bidding-was-kamlesh-nagarkoti
  8. http://www.newindianexpress.com/sport/cricket/2018/feb/13/shubman-gill-the-boy-who-silences-men-post-under-19-world-cup-win-1772496.html
  9. "ಆರ್ಕೈವ್ ನಕಲು". Archived from the original on 2018-01-06. Retrieved 2019-09-21.
  10. https://www.espncricinfo.com/series/8890/scorecard/1053707/punjab-vs-vidarbha-group-a-vijay-hazare-trophy-2016-17
  11. https://www.espncricinfo.com/series/8050/scorecard/1118682/punjab-vs-bengal-group-d-ranji-trophy-2017-18
  12. https://www.espncricinfo.com/story/_/id/22218394/ipl-2018-player-auction-list-sold-unsold-players
  13. https://www.espncricinfo.com/series/8048/scorecard/1136570/kolkata-knight-riders-vs-sunrisers-hyderabad-10th-match-indian-premier-league-2018
  14. https://www.espncricinfo.com/story/_/id/25014757/ajinkya-rahane,-r-ashwin-dinesh-karthik-play-deodhar-trophy
  15. https://cricketaddictor.com/cricket/fans-want-shubman-gill-in-the-indian-team-after-his-excellent-knock/
  16. https://www.espncricinfo.com/story/_/id/25660705/mumbai-knocked-gill-dream-run-continues
  17. https://www.espncricinfo.com/story/_/id/25705543/tripura-slump-35-all-abhinav-rises-chennai-turner
  18. https://www.espncricinfo.com/story/_/id/27331972/shubman-gill-priyank-panchal-faiz-fazal-lead-duleep-trophy-sides
  19. https://www.hindustantimes.com/cricket/shubman-gill-stars-as-india-u-19-beat-england-by-7-wickets-take-2-1-series-lead/story-8skWEp6qIRDM2tRmIQ0cpN.html
  20. https://www.firstpost.com/sports/shubman-gill-prithvi-shaw-slam-tons-to-help-india-hammer-england-clinch-u-19-odi-series-3269408.html
  21. https://www.espncricinfo.com/story/_/id/21650381/prithvi-shaw-lead-india-19-world-cup
  22. https://www.icc-cricket.com/news/616979
  23. https://timesofindia.indiatimes.com/sports/cricket/india-in-australia/india-vs-australia-vijay-shankar-shubman-gill-to-replace-kl-rahul-and-hardik-pandya/articleshow/67508258.cms
  24. https://indianexpress.com/article/sports/cricket/india-vs-new-zealand-4th-odi-playing-xi-5562141/lite/
  25. https://www.icc-cricket.com/news/1304031
  26. https://www.espncricinfo.com/story/_/id/27598493/shubman-gill-gets-maiden-call-india-test-squad-rohit-sharma-picked-opener