ಕ್ರಿಕೆಟ್ ಆಟದಲ್ಲಿ ದಾಂಡಿಗ (ಬ್ಯಾಟ್ಸ್ಮನ್)ಇನಿಂಗ್ಸೊಂದರಲ್ಲಿ ನೂರು(೧೦೦) ರನ್ನುಗಳ ವೈಯಕ್ತಿಕ ಮೊತ್ತ ತಲುಪಿದರೆ ಅಥವಾ ದಾಟಿಸಿದರೆ ಶತಕ(ಸೆಂಚುರಿ) ಗಳಿಸಿದನೆಂಬ ಕೀರ್ತಿಗೆ ಪಾತ್ರನಾಗುತ್ತಾನೆ. ಕ್ರಿಕೆಟ್ ಆಟದಲ್ಲಿ ಶತಕಕ್ಕೆ ವಿಶೇಷ ಮಹತ್ವವಿದ್ದು ಸಾಧನೆಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಹೀಗೆಯೆ ಇನ್ನೂರು(೨೦೦)ರನ್ನುಗಳು ಗಳಿಸಿದರೆ ದ್ವಿಶತಕ ಹಾಗು ಮುನ್ನೂರು ರನ್ನುಗಳು ಗಳಿಸಿದರೆ ತ್ರಿಶತಕ ಎಂದು ಕರೆಯಲಾಗುತ್ತದೆ.ಅದೇ ರೀತಿ ಒಂದು ಇನ್ನಿಂಗ್ಸ್ನಲ್ಲಿ ಒಬ್ಬ ಕ್ರಿಕೆಟ್ ಬ್ಯಾಟ್ಸ್ಮನ್ ೫೦ರನ್ ದಾಟಿದರೆ ಅರ್ಧ-ಶತಕವನ್ನು ಗಳಿಸಿದ್ದಾನೆಂದು ಪರಿಗಣಿಸಲಾಗುತ್ತದೆ.

Sachin Tendulkar of India holds the record of highest number of runs and centuries scored in both Test and ODI forms of cricket.

ಭಾರತದ ಸಚಿನ್ ತೆಂಡುಲ್ಕರ್ ಎಕ ದಿನದ ಅಂತರಾಷ್ಟ್ರೀಯ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ ಎರಡರಲ್ಲೂ ಅತಿ ಹೆಚ್ಚು ಶತಕಗಳ ಮಾಡಿದ್ದಾರೆ. ಈವರೆಗೆ ಎಕ ದಿನದ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ೩೮ ಶತಕಗಳು ಮತ್ತು ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ೩೫ ಶತಕಗಳನ್ನು ಮಾಡಿದ್ದಾರೆ.