ಶಿರಾಳಕೊಪ್ಪ

ಕರ್ನಾಟಕ, ಭಾರತದಲ್ಲಿನ ನಗರ

ಶಿರಾಳಕೋಪ್ಪ ಪಟ್ಟಣ ಶಿಕಾರಿಪುರ ತಾಲ್ಲೂಕಿನ ಪ್ರಮುಖ ಪಟ್ಟಣ. ಇತಿಹಾಸದಲ್ಲಿ ಬರುವ ಭಕ್ತ ಸಿರಿಯಾಳನಿಂದ ಇದಕ್ಕೆ ಈ ಹೆಸರು ಬಂತೆಂದು ಪ್ರತೀತಿ. ಆದರೆ ಇಲ್ಲಿ ಆಗಿನ ಕಾಲದ ಯಾವುದೆ ದಾಖಲೆಗಳಿಲ್ಲ.

ಇದು ಶಿಕಾರಿಪುರದಿಂದ ಸುಮಾರು 19.9 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಸೊರಬ ಸುಮಾರು 18 ಕಿ.ಮೀ, ಸಾಗರ ಸುಮಾರು 40 ಕಿ.ಮೀ ಹಾಗೂ ಹಿರೆಕೆರೂರು ಸುಮಾರು 20 ಕಿ.ಮೀ ದೂರದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಶಿರಾಳಕೊಪ್ಪ ವಾಣಿಜ್ಯ ನಗರಿಯಾಗಿ ಬದಲಾಗುತ್ತಿದೆ.