ಶಶಧರ್ ಆಚಾರ್ಯ (ಜನನ ೧೯೬೧) ಭಾರತದ ಝಾರ್ಖಂಡ್‌ನ ಸರೈಕೆಲಾದಿಂದ ಚೌ ನೃತ್ಯ ಕಲಾವಿದರಾಗಿದ್ದಾರೆ. ಅವರು ೨೦೨೦ರಲ್ಲಿ ನೃತ್ಯಕಲಾ ಕ್ಷೇತ್ರದಲ್ಲಿ ಅವರ ಕೊಡುಗೆಗಾಗಿ ಭಾರತ ಸರ್ಕಾರದಿಂದ ಪದ್ಮಶ್ರೀ ಗೌರವವನ್ನು ಪಡೆದರು. []

ದೆಹಲಿಯಲ್ಲಿ ನೃತ್ಯ ಪ್ರದರ್ಶನ

ಆಚಾರ್ಯ ಅವರು ಕುಟುಂಬದ ಐದನೇ ತಲೆಮಾರಿನ ಕಲಾವಿದರಾಗಿದ್ದು ಅವರ ತಂದೆಯವರಾದ ಲಿಂಗರಾಜ್ ಆಚಾರ್ಯ ಅವರಿಂದ ಛೌವನ್ನು ಕಲಿತಿದ್ದರು ಮತ್ತು ನಂತರ ನಟಶೇಖರ್ ಬನಾ ಬಿಹಾರಿ ಪಟ್ನಾಯಕ್, ವಿಕ್ರಮ್ ಕರ್ಮಾಕರ್, ಕೇದಾರನಾಥ್ ಸಾಹು ಮತ್ತು ಸುಧೇಂದ್ರನಾಥ್ ಸಿಂಗ್ಡಿಯೊ ಅವರಿಂದ ತಮ್ಮ ಕಲಿಕೆಯನ್ನು ಮುಂದುವರೆಸಿದ್ದರು. ೧೯೯೦ರ ದಶಕದ ಆರಂಭದಲ್ಲಿ ಅವರು ಗುರುಕುಲ ನೃತ್ಯ ಅಕಾಡೆಮಿಯಲ್ಲಿ ಮತ್ತು ನಂತರ ಮುಂಬೈನ ಪೃಥ್ವಿ ಥಿಯೇಟರ್‌ನಲ್ಲಿ ಕೆಲಸ ಮಾಡಲು ಸರೈಕೆಲಾವನ್ನು ತೊರೆದರು. ಅವರು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್‌ಟಿಐಐ) ಮತ್ತು ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಅಧ್ಯಾಪಕ ಸದಸ್ಯರಾಗಿದ್ದಾರೆ. ಅವರು ನವದೆಹಲಿ ಮೂಲದ ತ್ರಿವೇಣಿ ಕಲಾ ಸಂಗಮದಲ್ಲಿ ಶಿಕ್ಷಕರಾಗಿದ್ದಾರೆ. ೨೦೨೦ರಲ್ಲಿ ಅವರು ನೃತ್ಯಕಲಾ ಕ್ಷೇತ್ರದಲ್ಲಿನ ಅವರ ಕೊಡುಗೆಗಾಗಿ ಪದ್ಮಶ್ರೀ ಗೌರವವನ್ನು ಪಡೆದರು. [] [] []

ಉಲ್ಲೇಖಗಳು

ಬದಲಾಯಿಸಿ
  1. Bose, Antara (27 January 2020). "Dance as a legacy". The Telegraph (in ಇಂಗ್ಲಿಷ್). India. Retrieved 2023-05-06.
  2. ANI (2020-01-26). "Artists become more successful if they get encouragement at right time, says Shashadhar Acharya". Business Standard India. Retrieved 2020-02-17.
  3. Pathak, Abhinav (2020-01-26). "Guru Shashadhar Acharya and Madhu Mansuri Hasmukh from Jharkhand to be awarded Padma Shri 2020". The Ranchi Review (in ಅಮೆರಿಕನ್ ಇಂಗ್ಲಿಷ್). Archived from the original on 2020-02-17. Retrieved 2020-02-17.
  4. Bose, Antara (27 January 2020). "Dance as a legacy". The Telegraph (in ಇಂಗ್ಲಿಷ್). India. Retrieved 2023-05-06.Bose, Antara (27 January 2020). "Dance as a legacy". The Telegraph. India. Retrieved 6 May 2023.