ಶಬ್ದ (ವ್ಯಾಕರಣ)
ಶಬ್ದ "ಮಾತಿನ ಧ್ವನಿ"ಗೆ ಬಳಸಲಾಗುವ ಸಂಸ್ಕೃತ ಪದ. ಸಂಸ್ಕೃತ ವ್ಯಾಕರಣದಲ್ಲಿ ಈ ಪದವು ಭಾಷಾ ಸಾಧನೆಯ ಅರ್ಥದಲ್ಲಿ ಉಕ್ತಿಯನ್ನು ಸೂಚಿಸುತ್ತದೆ. ಶಾಸ್ತ್ರೀಯ ಭಾರತೀಯ ಭಾಷಾ ತತ್ವಶಾಸ್ತ್ರದಲ್ಲಿ, ಶಬ್ದವು ನಿತ್ಯ, ಅರ್ಥವೂ ನಿತ್ಯ, ಮತ್ತು ಇವೆರಡೂ ಪರಸ್ಪರ ಸಹ-ಸಂಬಂಧ ಹಂಚಿಕೊಳ್ಳುತ್ತವೆ ಎಂದು ವ್ಯಾಕರಣಜ್ಞ ಕಾತ್ಯಾಯನನು ಹೇಳಿದನು.