ಶಕ್ತಿಕಾಂತ ದಾಸ್ (ಜನನ ೨೬ ಫೆಬ್ರವರಿ ೧೯೫೭ ) ನಿವೃತ್ತ 1980   ಬ್ಯಾಚ್ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ (ಐಎಎಸ್) ತಮಿಳುನಾಡು ಕೇಡರ್ ಅಧಿಕಾರಿ. ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ನ (ಆರ್‌ಬಿಐ) 25 ನೇ ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿರುವ ಅವರು ಈ ಹಿಂದೆ ಹದಿನೈದನೇ ಹಣಕಾಸು ಆಯೋಗ ಮತ್ತು ಭಾರತದ ಶೆರ್ಪಾ ಜಿ 20 ಯ ಸದಸ್ಯರಾಗಿದ್ದರು.

ಶಕ್ತಿಕಾಂತ ದಾಸ್
[[Image:Shaktikanta Das, IAS|160px|ಶಕ್ತಿಕಾಂತ ದಾಸ್]]

ರಾಷ್ಟ್ರಪತಿ ರಾಮನಾಥ ಕೋವಿಂದ
ಪೂರ್ವಾಧಿಕಾರಿ ಊರ್ಜಿತ್ ಪಟೇಲ್

ಜನನ (1957-02-26) ೨೬ ಫೆಬ್ರವರಿ ೧೯೫೭ (ವಯಸ್ಸು ೬೭)
ಭುವನೇಶ್ವರ, ಒಡಿಶಾ, ಭಾರತ
ವೃತ್ತಿ ಭಾರತೀಯ ಸರ್ಕಾರ ನೌಕರ
ಪ್ರಸ್ತುತ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್

ಐಎಎಸ್ ಅಧಿಕಾರಿಯಾಗಿ ವೃತ್ತಿಜೀವನದ ಅವಧಿಯಲ್ಲಿ, ದಾಸ್ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ, ಕಂದಾಯ ಕಾರ್ಯದರ್ಶಿ, ರಸಗೊಬ್ಬರಗಳ ಕಾರ್ಯದರ್ಶಿ ಸೇರಿದಂತೆ ಭಾರತೀಯ ಮತ್ತು ತಮಿಳುನಾಡು ಸರ್ಕಾರಗಳಿಗೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.

ಆರಂಭಿಕ ಜೀವನ ಮತ್ತು ಶಿಕ್ಷಣ ಬದಲಾಯಿಸಿ

ಭುವನೇಶ್ವರದಲ್ಲಿ ಜನಿಸಿದ ಅವರು,[೧] ಅಲ್ಲಿನ ಡೆಮಾಂಸ್ಟ್ರೇಶನ್ ಮಲ್ಟಿಪರ್ಪಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದ ನಂತರ ಇತಿಹಾಸ ವಿಷಯದಲ್ಲಿ ಸ್ನಾತಕ ( ಬಿಎ ) ಮತ್ತು ಸ್ನಾತಕೋತ್ತರ ಪದವಿಗಳನ್ನು ( ಎಮ್ಎ) ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಪಡೆದರು .[೨]

ಐಎಎಸ್ ಅಧಿಕಾರಿಯಾಗಿ ಬದಲಾಯಿಸಿ

ಪ್ರಧಾನ ಕಾರ್ಯದರ್ಶಿ ( ಕೈಗಾರಿಕೆಗಳು ), ವಿಶೇಷ ಆಯುಕ್ತರು ( ಕಂದಾಯ ), ಕಾರ್ಯದರ್ಶಿ (ಕಂದಾಯ), ಕಾರ್ಯದರ್ಶಿ ( ವಾಣಿಜ್ಯ ತೆರಿಗೆಗಳು ), ತಮಿಳುನಾಡು ರಾಜ್ಯದ ಯೋಜನಾ ನಿರ್ದೇಶಕರಂತೆ ದಾಸ್ ಭಾರತ ಸರ್ಕಾರ ಮತ್ತು ತಮಿಳುನಾಡು ಸರ್ಕಾರಕ್ಕೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಏಡ್ಸ್ ಕಂಟ್ರೋಲ್ ಸೊಸೈಟಿ ಮತ್ತು ತಮಿಳುನಾಡು ಸರ್ಕಾರದಲ್ಲಿ ದಿಂಡಿಗಲ್ ಮತ್ತು ಕಾಂಚೀಪುರಂ ಜಿಲ್ಲೆಗಳ ಜಿಲ್ಲಾಧಿಕಾರಿ ಮತ್ತು ಸಂಗ್ರಾಹಕರಾಗಿ ;[೧][೨] ಮತ್ತು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ, ಕೇಂದ್ರ ಕಂದಾಯ ಕಾರ್ಯದರ್ಶಿಯಾಗಿ, ಕೇಂದ್ರ ರಸಗೊಬ್ಬರಗಳ ಕಾರ್ಯದರ್ಶಿಯಾಗಿ, ಭಾರತೀಯ ಸರ್ಕಾರದ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ವಿಶೇಷ ಕಾರ್ಯದರ್ಶಿಯಾಗಿ ಮತ್ತು ಹಣಕಾಸು ಸಚಿವಾಲಯದ ಖರ್ಚು ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ .

 
೯ ಜುಲೈ ೨೦೧೫ ನವದೆಹಲಿಯಲ್ಲಿ FATCA ಗೆ ಸಹಿ ಹಾಕಿದ ಬಗ್ಗೆ ಭಾರತದ ಯುನೈಟೆಡ್ ಸ್ಟೇಟ್ಸ್ ರಾಯಭಾರಿ ರಿಚರ್ಡ್ ವರ್ಮಾ (ಬಲ) ಅವರೊಂದಿಗೆ ದಾಸ್ (ಎಡ)

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಬದಲಾಯಿಸಿ

ಹಿಂದಿನ ಗವರ್ನರ್ ಆಗಿದ್ದ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ ಬಳಿಕ ಈ ಮೂರು ಅವಧಿಗೆ ದಾಸ್ ಅವರನ್ನು ೧೧ ಡಿಸೆಂಬರ್ ೨೦೧೮ ಎಸಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನೇಮಿಸಿತು.[೩][೪][೫]

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ Siddharta; Gupta, Surojit (12 December 2018). "Shaktikanta Das: A budget veteran comes to Mint Street". ದಿ ಟೈಮ್ಸ್ ಆಫ್‌ ಇಂಡಿಯಾ. ನವ ದೆಹಲಿ: Bennett, Coleman & Co. Ltd. OCLC 23379369. Retrieved 12 December 2018.
  2. ೨.೦ ೨.೧ "Shaktikanta Das – Executive Record Sheet". Department of Personnel and Training, Ministry of Personnel, Public Grievances and Pensions, ಭಾರತ ಸರ್ಕಾರ. Retrieved 16 December 2018.
  3. Prasad, Gireesh Chandra; Ghosh, Shayan; Gopakumar, Gopika (11 December 2018). "Shaktikanta Das, who oversaw demonetization, is new RBI governor". Livemint. ನವ ದೆಹಲಿ/ಮುಂಬೈ: Vivek Khanna. Retrieved 12 December 2018.
  4. "Shaktikanta Das Is New RBI Governor". BloombergQuint. BQ Desk. 11 December 2018. Retrieved 11 December 2018.{{cite web}}: CS1 maint: others (link)
  5. "Shaktikanta Das: The man behind GST, note ban now heads RBI". The Economic Times. ET Online. The Times Group. 11 December 2018. OCLC 61311680. Retrieved 11 December 2018.{{cite news}}: CS1 maint: others (link)